ಶೀರ್ಷಿಕೆ : ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ
ಲಿಂಕ್ : ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ
ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ
ಕೊಪ್ಪಳ ಮೇ. 10 (ಕರ್ನಾಟಕ ವಾರ್ತೆ): ಹೆಣ್ಣೆಂದರೆ ಸುಡುವ ಬೆಂಕಿಯಲ್ಲ ಬದಲಿಗೆ ಕತ್ತಲೆಯನ್ನು ನೀಗಿಸುವ ಬೆಳಕು ಎಂಬುದನ್ನು ತಮ್ಮ ಕಾಯಕದಿಂದ ತೋರಿಸಿಕೊಟ್ಟವರು ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರು ಎಂದು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಹೇಮರಡ್ಡಿ ಮಲ್ಲಮ್ಮ ದೇವಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮನವರು ಬೋಧನೆ ಮಾಡಿ, ಶಿವಶರಣೆಯಾದವರಲ್ಲ, ಅವರ ಕಾಯಕದಿಂದಲೇ ಶಿವಶರಣೆಯಾದವರು. ಅವರ ಬದುಕಿನ ಸವಾಲುಗಳೇ ಜೀವನದರ್ಶನ. ದೇಶದ ಹಲವಾರು ದಾರ್ಶನಿಕ ವಚನಕಾರ್ತಿಯರು, ಜೀವನವೆಂದರೆ ಏನು ಎಂಬುದನ್ನು ವಚನಗಳಲ್ಲಿ ಹೇಳಿದರೆ, ಹೇಮರಡ್ಡಿ ಮಲ್ಲಮ್ಮನವರು ಯಾವುದೇ ವಚನಗಳನ್ನು ರಚಿಸದಿದ್ದರೂ, ದಾರ್ಶನಿಕರ ವಚನಗಳಂತೆ ಬದುಕಿದ ಆದರ್ಶ ನಾರಿ. ಅವರ ಬದುಕೇ ಉಕ್ತಿಗಳಾಗಿವೆ.
ಇತಿಹಾಸದ ಪುಟಗಳನ್ನು ಗಮನಿಸಿದಾಗ ಹೇಮರಡ್ಡಿ ಮಲ್ಲಮ್ಮನವರ ಬದುಕು ಯಾವುದೇ ಸಾಹಿತ್ಯ ಅಥವಾ ಗ್ರಂಥಗಳಿಂದ ಜಗತ್ತನ್ನು ವ್ಯಾಪಿಸಲಿಲ್ಲ. ಬದಲಿಗೆ ಜನಪದರ ಲಾವಣಿ, ಹಂತಿ ಪದಗಳು, ಜಾನಪದ ಹಾಡುಗಳ ಮೂಲಕ ಜನಪದರ ನುಡಿಗಳಲ್ಲಿ ಅವರು ಜೀವಂತವಾಗುಳಿದಿದ್ದಾರೆ. ದೇಶದ ಸಂಸ್ಕøತಿಯನ್ನು ಎತ್ತಿಹಿಡಿದು, ಬದುಕನ್ನು ದಾರ್ಶನಿಕವಾಗಿಸಿಕೊಂಡ ಸಾಧ್ವಿಯರು ಅನೇಕ ಸಂಖ್ಯೆಯಲ್ಲಿದ್ದಾರೆ. ಹೇಮರಡ್ಡಿ ಮಲ್ಲಮ್ಮನವರು ತಾವು ಪಟ್ಟ ಪಾಡುಗಳನ್ನು ಹಾಡಾಗಿಸಿಕೊಂಡವರು. ಭಕ್ತಿ ಮತ್ತು ಆಧ್ಯಾತ್ಮಿಕ ಸಾಹಿತ್ಯ ಪರಂಪರೆಯನ್ನು ಗಮನಿಸಿದಾಗ ಮೀರಾಬಾಯಿ, ಅಕ್ಕಮಹಾದೇವಿ, ಸಜ್ಜಲಗುಡ್ಡದ ಶರಣಮ್ಮ, ಇಟಗಿ ಭೀಮವ್ವ, ಇಂತಹ ಅನೇಕರ ಸಾಲುಗಳಲ್ಲಿ ಇಡೀ ಬದುಕನ್ನೇ ಮಹಾ ತಪಸ್ಸೆಂದು ತೋರಿಸಿಕೊಟ್ಟು, ಕಷ್ಟ ಕೋಟಲೆಗಳ ನಡುವಿನ ಜೀವನವನ್ನು ಸವಾಲಾಗಿ ಸ್ವೀಕರಿಸಿ, ಕಾಯಕವನ್ನೇ ಪೂಜೆಯಾಗಿಸಿಕೊಂಡವ ಹೇಮರಡ್ಡಿ ಮಲ್ಲಮ್ಮನವರು ಪ್ರಮುಖ ಸ್ಥಾನ ಪಡೆಯುತ್ತಾರೆ. ಹೆಣ್ಣು ಕೌಟುಂಬಿಕ ದೌರ್ಜನ್ಯಕ್ಕೆ ಸಿಲುಕಿದಾಗ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯಿತೆ ಎಂದು ನೊಂದುಕೊಳ್ಳುವವರೇ ಹೆಚ್ಚು, ಆದರೆ ಅಂತಹ ಹೆಣ್ಣು ಮಕ್ಕಳಿಗೆ ಅಂತಃಶಕ್ತಿಯನ್ನು ತುಂಬಿ, ಸ್ವಯಂ ಸಬಲೀಕರಣ ಸಾಧ್ಯ ಎಂಬುದನ್ನು ಮಹಾಸಾಧ್ವಿ ಮಲ್ಲಮ್ಮ ಮಾರ್ಗದರ್ಶಕರಂತೆ ಕಾಣುತ್ತಾರೆ. ಭೋಗಿಯಾಗಿದ್ದ ಮೈದುನ ವೇಮನರನ್ನು ಮಗನಂತೆ ಕಂಡು, ತಿದ್ದಿ, ಬದುಕಿನ ಅರಿವನ್ನು ಮೂಡಿಸಿಸುವ ಮೂಲಕ ಮಹಾ ಯೋಗಿಯನ್ನಾಗಿ ಪರಿವರ್ತಿಸಿದವರು ಹೇಮರಡ್ಡಿ ಮಲ್ಲಮ್ಮ. ಇಡೀ ಕುಟುಂಬದ ಕಣ್ತೆರೆಸಿ, ಅವಿಭಕ್ತ ಕುಟುಂಬದ ಪರಿಕಲ್ಪನೆ ಹಾಗೂ ಕೌಟುಂಬಿಕ ವ್ಯವಸ್ಥೆಯ ಮೌಲ್ಯವನ್ನು ಎತ್ತಿಹಿಡಿದರು. ಇಂದಿನ ಮುಂದುವರೆದ ರಾಷ್ಟ್ರಗಳು ನೆಮ್ಮದಿಯಿಂದ ಬದುಕು ಸಾಗಿಸಲಾಗುತ್ತಿಲ್ಲ. ಭಾರತ ದೇಶದಲ್ಲಿ ಆಧ್ಯಾತ್ಮ, ಯೋಗ, ಕೌಟುಂಬಿಕ ವ್ಯವಸ್ಥೆಯ ನೆಲೆಗಟ್ಟು ಈಗಲೂ ಭದ್ರವಾಗುಳಿದಿದ್ದು, ಹೀಗಾಗಿ ಮುಂದುವರೆದ ರಾಷ್ಟ್ರಗಳು ಭಾರತದ ವ್ಯವಸ್ಥೆಯತ್ತ ಮುಖಮಾಡುತ್ತಿವೆ. ದಾಂಪತ್ಯ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನವರ ಜೀವನ ಆದರ್ಶವಾಗಿದೆ ಎಂದು ಡಾ. ಮೈತ್ರೇಯಿಣಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಹೇಮರಡ್ಡಿ ಮಲ್ಲಮ್ಮನವರು ಕುಟುಂಬವನ್ನು ಸಾತ್ವಿಕವನ್ನಾಗಿಸಿದರು. ಭಾರತ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವಸ್ಥಾನವನ್ನು ನೀಡಲಾಗುತ್ತಿದೆ. ಸರ್ಕಾರವು ಈಗಾಗಲೆ ಧಾರವಾಡದ ಕರ್ನಾಟಕ ವಿವಿಯಲ್ಲಿ ವೇಮನ ಅವರ ಅಧ್ಯಯನ ಪೀಠ ಹಾಗೂ ಕಲಬುರಗಿ ವಿವಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಕುರಿತ ಅಧ್ಯಯನ ಪೀಠ ಸ್ಥಾಪನೆಗೆ ತಲಾ 03 ಕೋಟಿ ರೂ. ಅನುದಾನ ಒದಗಿಸಿದೆ. ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಚರಿತ್ರೆ ಇತರರಿಗೆ ಮಾದರಿಯಾಗಲಿ. ಕೊಪ್ಪಳ ನಗರದಲ್ಲಿನ ಪ್ರಮುಖ ವೃತ್ತಕ್ಕೆ ಹೇಮರಡ್ಡಿ ಮಲ್ಲಮ್ಮ ನವರ ಹೆಸರಿಡಲು ಯೋಜಿಸಲಾಗಿದೆ. ನಗರದಲ್ಲಿನ ಹೇಮರಡ್ಡಿ ಮಲ್ಲಮ್ಮನವರ ದೇವಾಲಯ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆಯನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿದರು. ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಹಸಿಲ್ದಾರ್ ಗುರುಬಸವರಾಜ, ಸಮಾಜದ ಮುಖಂಡರಾದ ಸಿ.ವಿ. ಚಂದ್ರಶೇಖರ್, ಹೆಚ್.ಎಲ್. ಹಿರೇಗೌಡರ್, ಅಮರೇಶ್ ಕರಡಿ, ಸುರೇಶ್ ಭೂಮರೆಡ್ಡಿ, ಮಂಜುಳಾ ಮ್ಯಾಗಳಮನಿ, ಜಗದೀಶಪ್ಪ ಸಿಂಗನಾಳ, ಪ್ರಭು ಹೆಬ್ಬಾಳ, ಬಸವರಾಜ ಪುರದ, ಪ್ರದೀಪಗೌಡ ಮಾಲಿಪಾಟೀಲ್, ವಿ.ಬಿ. ರಡ್ಡೇರ್, ಸಂಧ್ಯಾ ಮಾದಿನೂರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೃಷ್ಣರೆಡ್ಡಿ ಗಲಿಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು. ಸಿ.ವಿ. ಜಡಿಯವರ್ ನಿರೂಪಿಸಿ ವಂದಿಸಿದರು. ಭಾಷಾ ಹಿರೇಮನಿ ನಾಡಗೀತೆ, ರೈತಗೀತೆ ಪ್ರಸ್ತುತಪಡಿಸಿದರು.
ಸಮಾರಂಭಕ್ಕೂ ಪೂರ್ವದಲ್ಲಿ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ಗವಿಮಠ ಆವರಣದಿಂದ ಪ್ರಾರಂಭಗೊಂಡು, ಗವಿಮಠ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕವೃತ್ತ, ಕಿನ್ನಾಳ ರಸ್ತೆ ಮೂಲಕ ಹೇಮರಡ್ಡಿ ಮಲ್ಲಮ್ಮ ದೇವಾಲಯದವರೆಗೂ ವಿಜೃಂಭಣೆಯಿಂದ ನೆರವೇರಿತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನಸೆಳೆದವು.
ಹೀಗಾಗಿ ಲೇಖನಗಳು ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ
ಎಲ್ಲಾ ಲೇಖನಗಳು ಆಗಿದೆ ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ ಲಿಂಕ್ ವಿಳಾಸ https://dekalungi.blogspot.com/2017/05/blog-post_33.html
0 Response to "ಹೆಣ್ಣೆಂದರೆ ಬೆಂಕಿಯಲ್ಲ, ಬೆಳಕು ಎಂದು ತೋರಿಸಿಕೊಟ್ಟವರು ಹೇಮರಡ್ಡಿ ಮಲ್ಲಮ್ಮ- ಡಾ. ಮೈತ್ರೇಯಿಣಿ"
ಕಾಮೆಂಟ್ ಪೋಸ್ಟ್ ಮಾಡಿ