ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ
ಲಿಂಕ್ : ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಓದಿ


ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಮೇ. 08 (ಕರ್ನಾಟಕ ವಾರ್ತೆ): ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. 
     ಹಿಂದುಳಿದ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಲಾಗಿರುವ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.  ಚೈತನ್ಯ ಸಬ್ಸಿಡಿ ಕಂ ಸಾಫ್ಟ್‍ಲೋನ್ ಯೋಜನೆಯಡಿ ಕೃಷಿ, ವ್ಯಾಪಾರ ಇತ್ಯಾದಿ ಆರ್ಥಿಕ ಚಟುವಟಿಕೆಗಳಿಗೆ 5 ಲಕ್ಷ ರೂ. ವರೆಗೆ ಸಾಲ, ಇದರಲ್ಲಿ ಗರಿಷ್ಠ 10 ಸಾವಿರ ರೂ. ಸಹಾಯಧನ ಇರುತ್ತದೆ.  ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆಯಡಿ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಸಾಲ ಯೋಜನೆ.  ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಗರಿಷ್ಠ 10 ಲಕ್ಷ ರೂ. ಗಳವರೆಗೆ ಬಡ್ಡಿ ರಹಿತ ಸಾಲ.  ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 2 ಲಕ್ಷ ರೂ. ವರೆಗೆ ಸಾಲ.  ಕಿರು ಸಾಲ ಯೋಜನೆಯಡಿ ಸ್ವ-ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ-ಪುಟ್ಟ ವ್ಯಾಪಾರ ಕೈಗೊಳ್ಳಬಯಸುವವರಿಗೆ ಗರಿಷ್ಠ 10 ಸಾವಿರ ರೂ. ಸಾಲ ಹಾಗೂ 5 ಸಾವಿರ ರೂ. ಸಹಾಯಧನ ಇರುತ್ತದೆ.  ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು ಅಥವಾ ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು ಗರಿಷ್ಠ 02 ಲಕ್ಷ ರೂ. ವರೆಗೆ ಸಾಲ.  ಗಂಗಾ-ಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್ ಮತ್ತು ವಿದ್ಯುದೀಕರಣ ಮಾಡಿಕೊಡಲಾಗುವುದು.  ಸಾಮೂಹಿಕ ನೀರಾವರಿ ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಕನಿಷ್ಠ 3 ಜನರ 8 ರಿಂದ 15 ಎಕರೆ ಜಮೀನಿಗೆ ಎರಡು ಅಥವಾ ಮೂರು ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್ ಹಾಗೂ ವಿದ್ಯುದೀಕರಣ ಸೌಲಭ್ಯ ಕಲ್ಪಿಸಲಾಗುವುದು.
      ಮಡಿವಾಳ ಸಮಾಜದವರಿಗೆ ದೋಬಿ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2 ಲಕ್ಷಗಳ ವರೆಗೆ ಸಾಲ,  ಮಡಿವಾಳ ಸಮಾಜದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ರೂ.3 ಲಕ್ಷಗಳ ವರೆಗೆ ಆರ್ಥಿಕ ನೆರವು.  ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.  ಅರಿವು-ಶೈಕ್ಷಣಿಕ ಸಾಲ.  ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಡಿ.ಟಿ.ಪಿ. ತರಬೇತಿ ವಾಹನ ಚಾಲನ ತರಬೇತಿ, ಬ್ಯೂಟಿಷಿಯನ್, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ ಒದಗಿಸಲಾಗುವುದು.  ಮಡಿವಾಳ ಸಮಾಜದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‍ಗಳ ಮೂಲಕ ಟ್ಯಾಕ್ಸಿಕೊಳ್ಳಲು ರೂ.5 ಲಕ್ಷಗಳ ವರೆಗೆ ಸಾಲ.  ಬಿ.ಬಿ.ಎಂ.ಪಿ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಒದಗಿಸುವ ಸ್ಥಳಗಳಲ್ಲಿ ಲಾಂಡ್ರಿ ಘಟಕ ತೆರೆಯಲು ರೂ.1 ಲಕ್ಷಗಳ ವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಆರ್ಥಿಕ ನೆರವು, ಶೇ.20 ರಷ್ಟು ಸಹಾಯಧನ.
     ಸವಿತ ಸಮಾಜದವರ ಅಭಿವೃದ್ಧಿಗೆ ಗರಿಷ್ಠ ರೂ.2 ಲಕ್ಷಗಳ ವರೆಗೆ ಸಾಲ ಹಾಗೂ ಸಹಾಯಧನ..     ನಾಧಸ್ವರ ಮತ್ತು ಡೋಲು ಉಪಕರಣ ಕೊಳ್ಳಲು ವೈಯಕ್ತಿಕ ರೂ. 10,000/-ಗಳಿಂದ ರೂ. 25,000/-ಗಳ ವರೆಗೆ ಆರ್ಥಿಕ ನೆರವು ಹಾಗೂ ಸಹಾಯಧನ.  ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.  ಅರಿವು-ಶೈಕ್ಷಣಿಕ ಸಾಲ.  ಬೇಸಿಕ್ ಸೌಂದರ್ಯವರ್ಧಕ ತರಬೇತಿಯಲ್ಲಿ ಬ್ಯೂಟಿಷಿಯನ್ ತರಬೇತಿ ಸಂಸ್ಥೆಗಳ ಮೂಲಕ ಒಂದು ವಾರದ ಅವಧಿಯ ಉಚಿತ ತರಬೇತಿ.  ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಡಿ.ಟಿ.ಪಿ. ತರಬೇತಿ ವಾಹನ ಚಾಲನ ತರಬೇತಿ, ಬ್ಯೂಟಿಷಿಯನ್, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.
     ತಿಗಳ ಸಮಾಜದ ಅಭಿವೃದ್ಧಿಗಾಗಿ ಹೂವು, ತರಕಾರಿ, ಮಾರಾಟಗಾರರಿಗೆ ಹಾಗೂ ತರಕಾರಿ ಮತ್ತು ಹೂ ಬೆಳೆ ಬೆಳೆಯಲು ಗರಿಷ್ಠ ರೂ.2 ಲಕ್ಷಗಳ ಸಾಲ ಹಾಗೂ ಸಹಾಯಧನ.  ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.  ಅರಿವು-ಶೈಕ್ಷಣಿಕ ಸಾಲ.  ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಯಾನಿಮೆಷನ್, ಆಟೋಕ್ಯಾಡ್, ಸೌಂಡ್‍ಇಂಜಿನಿಯರಿಂಗ್, ಡಿ.ಟಿ.ಪಿ. ತರಬೇತಿ ವಾಹನ ಚಾಲನ ತರಬೇತಿ, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.
     ಕುಂಬಾರ ಸಮಾಜದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕುಂಬಾರಿಕೆ ವೃತ್ತಿ ನಿರ್ವಹಣೆಗೆ ಗರಿಷ್ಠ ರೂ.2 ಲಕ್ಷಗಳ ವರೆಗೆ, ಸಹಾಯಧನ.  ಸ್ವಯಂ ಉದ್ಯೋಗ ಕೈಗೊಳ್ಳಲು ರೂ.2 ಲಕ್ಷಗಳ ವರೆಗೆ ಸಾಲ,  ಸಹಾಯಧನ.  ವೈಯಕ್ತಿಕ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ.  ಅರಿವು-ಶೈಕ್ಷಣಿಕ ಸಾಲ.  ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ, ಕುಂಬಾರಿಕೆ ಉತ್ಪನ್ನಗಳ ತಯಾರಿಕೆ, ಡಿ.ಟಿ.ಪಿ. ತರಬೇತಿ ವಾಹನ ಚಾಲನ ತರಬೇತಿ, ರೆಡಿಮೇಡ್ ಗಾರ್ಮೆಂಟ್ಸ್ ತರಬೇತಿ ಇತ್ಯಾದಿ.
     ಸಾರಾಯಿ ಮಾರಾಟ ನಿಷೇದದಿಂದ ಉದ್ಯೋಗ ಕಳೆದುಕೊಂಡಿರುವವರಿಗೆ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು- ಸಾರಾಯಿ ಮಾರಾಟ ನಿಷೇದದಿಂದ ಉದ್ಯೋಗ ಕಳೆದುಕೊಂಡಿರುವ ಸಾರಾಯಿ ವೆಂಡರ್/ ಮೂರ್ತೆದಾರರು/ ಈಡಿಗ ಇತ್ಯಾದಿ ಸಮುದಾಯದಗಳ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆ ಅನುಸಾರ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ಗರಿಷ್ಠ ರೂ.2 ಲಕ್ಷಗಳ ವರೆಗೆ, ಶೇ.4ರ ಬಡ್ಡಿದರದಲ್ಲಿ ಸಾಲ, ಶೇ.15 ರಷ್ಟು ಸಹಾಯಧನ. 
     ಅತ್ಯಂತ/ ಅತಿ ಹಿಂದುಳಿದ ತಾಲೂಕಗಳಲ್ಲಿ ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಡಾ. ಎಂ. ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಅತ್ಯಂತ ಹಿಂದುಳಿದ 39 ತಾಲೂಕುಗಳು ಹಾಗೂ ಅತಿ ಹಿಂದುಳಿದ 40 ತಾಲೂಕುಗಳು ಹೀಗೆ ಒಟ್ಟು 79 ತಾಲೂಕುಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾವಂತ ನಿರುದ್ಯೋಗಿಗಳ (ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ) 10 ಸದಸ್ಯರನ್ನು ಒಳಗೊಂಡ ಸ್ವ-ಸಹಾಯ ಗುಂಪುಗಳಿಗೆ ರೂ.3.50 ಲಕ್ಷ ಆರ್ಥಿಕ ನೆರವು.  ಶೇ.30 ರಷ್ಟು ಸಹಾಯಧನ, ಉಳಿಕೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು.    
     ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಾಲ ಯೋಜನೆಗಳು :
     ಅವಧಿಸಾಲ ಯೋಜನೆ- ಕೃಷಿವಲಯ, ಸಣ್ಣ ವ್ಯಾಪಾರ, ಸೇವಾ ವಲಯ, ಸಾರಿಗೆ ವಲಯದಲ್ಲಿ ಆಟೋರಿಕ್ಷ/ ಗೂಡ್ಸ್ ಆಟೋರಿಕ್ಷ, ನ್ಯೂ ಸ್ವರ್ಣಿಮಾ, ಮೈಕ್ರೋ ಫೈನಾನ್ಸ್ ವಲಯಗಳಲ್ಲಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೋದಿತ ಘಟಕ ವೆಚ್ಚದ ಮಿತಿಗೊಳಪಟ್ಟ ಗರಿಷ್ಠ ರೂ.10 ಲಕ್ಷಗಳ ವರೆಗೆ ವಾರ್ಷಿಕ ಶೇ.6 ರಿಂದ 7ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. 
    ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ- ಇಂಜಿನಿಯರಿಂಗ್, ಮೆಡಿಕಲ್, ವೆಟರ್ನರಿ, ಕಾನೂನು, ಐ.ಸಿ.ಡಬ್ಲ್ಯೂ.ಎ. ಸಿ.ಎ., ಹೋಟೆಲ್ ಮ್ಯಾನೇಜ್‍ಮೆಂಟ್ ಇತ್ಯಾದಿ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಾಂಗ್ ಮಾಡುತ್ತಿದ್ದಲ್ಲಿ, ವಾರ್ಷಿಕ ರೂ.2.50 ಲಕ್ಷಗಳ ಅಥವಾ ಕೋರ್ಸ್‍ನ ಅವಧಿಗೆ ಒಟ್ಟು ರೂ.10 ಲಕ್ಷ ಸಾಲ ಮಂಜೂರು, ಶೇ.4ರ ಬಡ್ಡಿದರದಲ್ಲಿ.  ವಿದೇಶಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ರೂ.20 ಲಕ್ಷಗಳ ಸಾಲ, ಶೇ.4ರ ಬಡ್ಡಿದರ ಹಾಗೂ ವಿದ್ಯಾರ್ಥಿನಿಯರಿಗೆ ಶೇ.3.5ರ ಬಡ್ಡಿದರದಲ್ಲಿ.  ಸ್ವಯಂ ಸಕ್ಷಮ ಯೋಜನೆಯಲ್ಲಿ ಹಿಂದುಳಿ ವರ್ಗಗಳ ಅಭ್ಯರ್ಥಿಗಳು ಕ್ಲಿನಿಕ್ ಸ್ಥಾಪಿಸಲು, ವಕೀಲ ವೃತ್ತಿ ಆರಂಭಿಸಲು, ಮೆಡಿಕಲ್ ಸ್ಟೋರ್ ಪ್ರಾರಂಭಿಸಲು ಇತ್ಯಾದಿ ಸ್ವಯಂ ಉದ್ಯೋಗ ಕೈಗೊಳ್ಳಲು ರೂ.10 ಲಕ್ಷಗಳವರೆಗೆ ಸಾಲ, ಗರಿಷ್ಠ ಬಡ್ಡಿದರ ಶೇ.6 ರಿಂದ 7ರ ವರೆಗೆ.
    ಮಹಿಳಾ ಸಮೃದ್ಧಿ ಯೋಜನೆ- ಹಿಂದುಳಿದ ವರ್ಗಗಳ ಮಹಿಳಾ ಸ್ವ-ಸಹಾಯ ಗುಂಪುಗಳು/ ಸ್ತೀ ಶಕ್ತಿ ಗುಂಪುಗಳು, ಸ್ವಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ, ಶೇ.4ರ ಬಡ್ಡಿದರದಲ್ಲಿ.  ಮೈಕ್ರೋ ಫೈನಾನ್ಸ್ ಸಾಲ ಯೋಜನೆ- ಹಿಂದುಳಿ ವರ್ಗಗಳ ಸ್ವ-ಸಹಾಯ ಗುಂಪುಗಳು/ ಸ್ತೀ ಶಕ್ತಿ / ಪುರುಷ ಗುಂಪುಗಳು, ಸ್ವಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ, ಶೇ.5ರ ಬಡ್ಡಿದರದಲ್ಲಿ.
ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳನ್ನು ಮತ್ತು ಮತಿಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ).  ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು, ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.  ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು, ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಾಗಿಬೇಕು.  18 ರಿಂದ 55 ವರ್ಷಗಳ ವಯೋಮಿತಿಯಲ್ಲಿರಬೇಕು.  ಆಧಾರ್ ಸಂಖ್ಯೆ ಹೊಂದಿರಬೇಕು.  ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.  ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹ ಹಾಗೂ ಅವರ ಕುಂಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 
ಅರ್ಜಿಯನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ತಾಲೂಕಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಅಥವಾ ನಿಗಮದ ವೆಬ್ ಸೈಟ್   http://ift.tt/2qIlCGs; ನಲ್ಲಿ ಮೇ. 31 ರೊಳಗಾಗಿ ಪಡೆಯಬಹುದು.  ಭರ್ತಿಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್. 09 ರೊಳಗಾಗಿ ಸಲ್ಲಿಸಬೇಕು.  ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್‍ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/05/blog-post_24.html

Subscribe to receive free email updates:

0 Response to "ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ