ಶೀರ್ಷಿಕೆ : ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ
ಲಿಂಕ್ : ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ
ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ
ಕೊಪ್ಪಳ, ಮೇ. 08 (ಕರ್ನಾಟಕ ವಾರ್ತೆ): ಧಾರವಾಡ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಬೆಂಗಳೂರು ಮಹಿಳಾ ಅಭಿವೃದ್ಧಿ ನಿಗಮ, ಹಾಗೂ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಹಿಳೆಯರಿಗಾಗಿ ಸ್ವಯಂ-ಉದ್ಯೋಗ ಅಥವಾ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವು ಪೂರ್ಣಾವಧಿಯಾಗಿದ್ದು, ಸ್ವಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬ್ಯೂಟಿಷಿಯನ್, ಗೃಹ ಉಪಯೋಗಿ ಅಲಂಕಾರಿಕ ವಸ್ತುಗಳ ತಯಾರಿಕೆ, ಆಹಾರ ವಸ್ತುಗಳ ತಯಾರಿಕೆ, ಹೇರ್ ಪ್ರೋಸೆಸ್ಸಿಂಗ್, ಕೌಶಲ್ಯಗಳಲ್ಲಿ 250 ಗಂಟೆಗಳ ಪ್ರಾಯೋಗಿಕ ತಯಾರಿಕೆಯನ್ನು ನೀಡಿ, ಉದ್ಯಮಶೀಲತಾ ತರಬೇತಿ ಕೂಡ ನೀಡಲಾಗುವುದು. ತರಬೇತಿ ನಂತರ ಅಭ್ಯರ್ಥಿಗಳಿಗೆ ಸೂಕ್ತ ಬ್ಯಾಂಕ್ ಸೌಲಭ್ಯಕ್ಕೆ ಶಿಫಾರಸ್ಸು ಮಾಡಲಾಗುವುದು. ಸ್ಥಾಪಿಸಿದ ಘಟಕಗಳಿಗೆ ಸ್ಥಿರಾಸ್ಥಿ ಮೇಲೆ 35% ಸಹಾಯಧನ ಸಹ ಜಿ.ಕೈ. ಕೇಂದ್ರ ದಿಂದ ನೀಡಲಾಗುವುದು. ತರಬೇತಿಗೆ ಮೌಖಿಕ ಪರೀಕ್ಷೆ ಮುಖಾಂತರ ಪ್ರತಿ ತಾಲೂಕಿಗೆ ಹಾಗೂ ಕೌಶಲ್ಯಗಳಲ್ಲಿ ಕನಿಷ್ಠ 30 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹಾಗೂ ತರಬೇತಿಯನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು. ಕನಿಷ್ಠ 8ನೇ ತರಗತಿ ಪಾಸ್/ಫೇಲ್ ಆದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಕುಟುಂಬದ ಆದಾಯ ವಾರ್ಷಿಕ ರೂ. 40,000 ಮೀರಿರಬಾರದು. ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆ ಅರ್ಜಿ, ಜಾತಿ ಪ್ರಮಾಣ ಪತ್ರ, ಹುಟ್ಟಿದ ದಿನಾಂಕ, ಬ್ಯಾಂಕ್ ಪಾಸ್‍ಬುಕ್ ಝೆರಾಕ್ಸ್, ಆಧಾರ ಕಾರ್ಡ, ಆದಾಯ (ರೂ. 40,000 ಮೀರದ) ವಿವರದೊಂದಿಗೆ ತರಬೇತಿಗೆ ಕಡ್ಡಾಯವಾಗಿ ಹಾಜರಾಗುವ ಅಫಿಡೆವೆಟ್ (20 ರೂ. ಛಾಪಾ ಕಾಗದ ಮೇಲೆ) ವಿವರ, ತಪ್ಪಿದ್ದಲ್ಲಿ ತರಬೇತಿ ಖರ್ಚು ವಾಪಸ್ಸು ನೀಡುವ ವಿವರದೊಂದಿಗೆ ಮೇ. 20 ರ ಸಾಯಂಕಾಲ 5-00 ಗಂಟೆ ಒಳಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಿರಣ್ - 9886277122, ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಕೊಪ್ಪಳ ಸಿಡಾಕ್ ಕೇಂದ್ರ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/05/blog-post_17.html
0 Response to "ಕೌಶಲ್ಯಾಭಿವೃದ್ಧಿ : ಸ್ಯಯಂ ಉದ್ಯೋಗ ಸ್ಥಾಪಿಸಲು ಮಹಿಳೆಯರಿಂದ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ