ಶೀರ್ಷಿಕೆ :
ಲಿಂಕ್ :
"ಶಿವಾ" ನಂದನ ಗೋವಿನ ಹಾಡು : ಗಿರ್ ಫಾರಂ
ನೈಸರ್ಗಿಕ ಕೃಷಿಯೊಂದಿಗೆ ದೇಸಿಪರಂಪರೆ ಉಳಿಸಲು ಮುಂದಾದ ಯುವಕರು
ಮೈಸೂರು : ಸಹಜ ಕೃಷಿ ಅನಿವಾರ್ಯವಾಗುತ್ತಿದಂತೆ ದೇಸಿ ಹಸುಗಳಿಗೂ ಮಹತ್ವ ಬಂದಿದೆ. 80 ರ ದಶಕದಲ್ಲಿ ಪ್ರತಿ ರೈತನ ಮನೆಯಲ್ಲೂ ದೇಸಿ ಹಸು, ಎಮ್ಮೆಗಳು ಬೇಸಾಯಕ್ಕೆ ಬೇಕಾದ ಗುಣಮಟ್ಟದ ಗೊಬ್ಬರ, ಮನೆಗೆ ಬೇಕಾದ ಹಾಲು, ಬೆಣ್ಣೆ, ತುಪ್ಪ ಕೊಡುತ್ತಿದ್ದವು. ಹಳ್ಳಿಗಳಲ್ಲಿ ಹಾಲಿನ ಡೈರಿಗಳು ಆರಂಭವಾಗುತ್ತಿದ್ದಂತೆ ದೇಸಿ ಹಸುಗಳು ಕಣ್ಮರೆಯಾದವು.
ಹೆಚ್ಚು ಹಾಲು ಹಿಂಡುವ ಎಚ್ಎಫ್, ಜರ್ಸಿ ಹಸುಗಳು ಕೊಟ್ಟಿಗೆಯಲ್ಲಿ ಜಾಗ ಪಡೆದವು. ಅದೇ ಕಾಲದಲ್ಲಿ ಹಸಿರು ಕ್ರಾಂತಿಯ ಪರಿಣಾಮ ರಾಸಾಯನಿಕ ಗೊಬ್ಬರದ ಅಬ್ಬರವೂ ಹೆಚ್ಚಾಗಿತ್ತು. ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕದ ಬಳಕೆಯಿಂದ ನೆಲ ಜಲ ಎಲ್ಲ ವಿಷಯುಕ್ತವಾಯಿತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬರಾಡದ ಮಣ್ಣಿಗೆ ಜೀವ ನೀಡುವ ಸಂಜೀವಿನಿ ದೇಸಿ ಹಸುವಿನ ಗಂಜಲ ಮತ್ತು ಸಗಣಿ ಎನ್ನುವುದು ಗೊತ್ತಾಗುತ್ತಿದ್ದಂತೆ ದೇಸಿಹಸುಗಳಿಗೂ ಬೇಡಿಕೆ ಬಂದಿದೆ.
ಕೆಲವರಂತೂ ದೇಸಿಹಸುಗಳನ್ನು ಅಮೂಲ್ಯ ಆಸ್ತಿಯಂತೆ ಸಂರಕ್ಷಣೆ ಮಾಡುತ್ತಿದ್ದಾರೆ. ದೇಸಿತಳಿಯನ್ನು ಉಳಿಸಿ ಬೆಳೆಸುವ ಪುಣ್ಯ ಕೆಲಸಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಈಚೆಗೆ ದೇಸಿತಳಿ ಹಸುಗಳ ಡೈರಿಫಾರಂ ಹುಡುಕಿಕೊಂಡು ಅಲೆಯುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ನಾಟಿ ಹಸುವಿನ ಹಾಲು ಮತ್ತು ತುಪ್ಪದ ರುಚಿ ನೋಡಿದವರು ಬೇರೆ ರುಚಿ ನೋಡಲು ಬಯಸುವುದಿಲ್ಲ. ದೇಸಿಬೀಜ,ದೇಸಿಹಸು,ದೇಸಿ ಜೀವನ ಆಧುನಿಕ ಯುಗದ ಮಂತ್ರವಾಗುತ್ತಿದೆ. ದೇಸಿಹಸುಗಳಲ್ಲಿ "ಗಿರ್ತಳಿ" ಹಸು ಸಾಕುವುದಂತು ಈಗ ಪ್ರತಿಷ್ಠೆಯ ವಿಷಯವಾಗಿದೆ.
ಇದನ್ನೆಲ್ಲ ಗಮನಿಸುತ್ತಿದ್ದ ಯುವಕನೊಬ್ಬ ನಗರದಲ್ಲಿ ಕೈತುಂಬಾ ಹಣತರುತ್ತಿದ್ದ ವ್ಯಾಪಾರ ಬಿಟ್ಟು ಗಿರ್ತಳಿ ಹಸು ಸಾಕಲು ಮುಂದಾದ ಸ್ಪೂರ್ತಿದಾಯಕ ಕಥಾನಕ ಇದು. ಈತನ ಹೆಸರು ಶಿವಾನಂದ್. ಮೂಲತಃ ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮದ ದಿ.ನಾಗರಾಜಮೂತರ್ಿ ಮತ್ತು ಗೀತಾ ದಂಪತಿಯ ಪುತ್ರ. ಮೈಸೂರು ಸೋಮಾನಿ ಕಾಲೇಜಿನಲ್ಲಿ ಪದವಿ ಪಡೆದಿರುವ ಶಿವಾನಂದ್ ನಾಲ್ಕಾರು ವರ್ಷಗಳಕಾಲ ಚಿಲ್ಲರೆಅಂಗಡಿ, ಎಲ್ಐಸಿ ಏಜೆಂಟ್ ಕೆಲಸಮಾಡಿದರು. ನಂತರ ಜನರೊಡನೆ ಮಾತಾಡುತ್ತಿದ್ದಾಗ ಬದಲಾದ ಜೀವನಶೈಲಿ, ಆಹಾರ ಕ್ರಮದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಗಮನಕ್ಕೆ ಬಂತು. ಆಗ ಶಿವಾನಂದ್ಗೆ ಹೊಳೆದದ್ದು ದೇಸಿ ಹಸು ಸಾಕಾಣಿಕೆ ಮತ್ತು ನೈಸಗರ್ಿಕ ಕೃಷಿ.
ಇದಕ್ಕಾಗಿ ತಮ್ಮ ಗೆಳೆಯ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ತೇಜಸ್ವಿ ಅವರೊಂದಿಗೆ ಸೇರಿಕೊಂಡು ಗಿರ್ ಹಸು ಡೈರಿಫಾರಂ ಶುರುಮಾಡಿದ್ದಾರೆ. ಇವರಿಗೆ ನಂಜನಗೂಡಿನ ಸುರೇಶ್ ಎನ್ನುವವರು ಸಧ್ಯಕ್ಕೆ ಇವರ ಯೋಜನೆಗೆ ಪ್ರೋತ್ಸಾಹ ನೀಡಲು ತಮ್ಮ ನಾಲ್ಕುವರೆ ಎಕರೆ ಜಮೀನನ್ನು ಉಚಿತವಾಗಿ ನೀಡಿದ್ದಾರೆ.
ನಂಜನಗೂಡು ಗುಂಡ್ಲುಪೇಟೆ ರಸ್ತೆಯಲ್ಲಿ ಬರುವ ಸಿಂಧುವಳ್ಳಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿ ಈ ಗಿರ್ತಳಿಯ ಡೈರಿ ಫಾರಂ ಇದೆ. ಇದಲ್ಲದೆ ಶಿವಾನಂದ್ ಎಚ್.ಡಿ.ಕೋಟೆಯ ಸರಗೂರು ಸಮೀಪ ಬರುವ ಬಿಡಗಲು ಗ್ರಾಮದ ಹೊಳೆತೀರದ ಎರಡೂವರೆ ಎಕರೆ ಪ್ರದೇಶದಲ್ಲಿ ದೇಸಿ ಹಸುಗಳ ಬ್ರೀಡ್ ಸೆಂಟರ್ ಮಾಡಿದ್ದಾರೆ.ಇಲ್ಲಿ ಗಿರ್ ಸೇರಿದಂತೆ ಹಳ್ಳಿಕಾರ್ ತಳಿಯ ಹಸುಗಳು ಇವೆ. ಈಗ ಇವರ ಬಳಿ ಹಸು ಕರು ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಸಂಖ್ಯೆಯ ದೇಸಿದನಗಳು ಇವೆ.
ಕುಡಿಯು ಹಾಲೆ ಹಾಲಹಲವಾದರೆ ಇನ್ನಾರಿಗೆ ದೂರುಬೇಕು. ಕಡೆಯ ಪಕ್ಷ ನಮ್ಮ ಮನೆಯವರು, ಸ್ನೇಹಿತರಿಗಾದರೂ ಪೌಷ್ಠಿಕವಾದ ಹಾಲು, ಬೆಣ್ಣೆ, ತುಪ್ಪ ಕೊಡಬೇಕು. ಬರಡಾಗಿರುವ ಭೂಮಿಯನ್ನು ದೇಸಿ ಹಸುಗಳ ಸಗಣಿ ಮತ್ತು ಗಂಜಲದಿಂದ ಮತ್ತೆ ಫಲವತ್ತತೆ ಮಾಡಬೇಕು. ನೈಸರ್ಗಿಕ ಕೃಷಿಯ ಜೊತೆ ಉತ್ತಮ ತಳಿಯ ದೇಸಿ ಹಸುಗಳನ್ನು ಜೋಡಿಸಲು ರೈತರಿಗೆ ನೆರವಾಗಬೇಕು ಎಂದು ನಿರ್ಧಾರ ಮಾಡಿ ಗುಜರಾತ್ ರಾಜ್ಯದಿಂದ ಹತ್ತು "ಗಿರ್" ತಳಿಯ ಹಸುಗಳನ್ನು ತಂದು ಡೈರಿ ಫಾರಂ ಆರಂಭಿಸಿದ್ದಾಗಿ ಶಿವಾನಂದ್ ಹೇಳುತ್ತಾರೆ.
ಉತ್ತಮ ತಳಿ ಗಿರ್ : ಇದು ಗುಜರಾತ್ ಮೂಲದ ನಾಟಿ ಹಸು.ಪ್ರಪಂಚದ ಹಳೆಯ ತಳಿ ಹಸುಗಳಲ್ಲಿ ಇದು ಒಂದು. ಗಿರ್ ಸಾಕಾಣಿಕೆಗೆ ಮುಖ್ಯವಾಗಿ ಸುಲಭ ನಿರ್ವಹಣೆ, ಕನಿಷ್ಠ ಸೌಲಭ್ಯ ಸಾಕು. ಮಿಶ್ರತಳಿ ಹಸುವಿಗೆಬೇಕಾದ ವಾತಾವರಣಬೇಕಿಲ್ಲ. ಕನಿಷ್ಠ 10 ಡಿಗ್ರಿ ಉಷ್ಣಾಂಶದಿಂದ ಗರಿಷ್ಠ 50 ಡಿಗ್ರಿ ಉಷ್ಣಾಂಶವನ್ನು ಈ ಹಸು ತಾಳಿಕೊಳ್ಳಬಲ್ಲದು. ಇತರ ದೇಶಿಯ ತಳಿಗಳ ಹಸುಗಳ ಹಾಲಿನಲ್ಲಿ ಇರದ ಆಯರ್ುವೇದ ಔಷದೀಯ ಗುಣ ಗಿರ್ ಹಸುವಿನ ಹಾಲಿಗೆ ಇದೆ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ.
ಹೃದಯ ಸಂಬಂಧಿ ಖಾಯಿಲೆಗೆ ಗಿರ್ ಹಸುವಿನ ಹಾಲು ರಾಮಬಾಣ ಎನ್ನುತ್ತಾರೆ.
ಗುಜರಾತ್ ಹೈನುಗಾರಿಕೆಯಲ್ಲಿ ಪ್ರಥಮ ಸ್ಥಾನ ಇದೆ. ಸರಿಯಾದ ಮೇವು ಮತ್ತು ಆಹಾರ ನೀಡಿದರೆ ಗಿರ್ ಹಸು ಒಂದು ಸಲಕ್ಕೆ ಎಂಟರಿಂದ ಹತ್ತು ಲೀಟರ್ ಹಾಲು ನೀಡುತ್ತದೆ. ದಿನಕ್ಕೆ ಮೂರು ಗಂಟೆಗಳ ಕಾಲ ಹಸುಗಳನ್ನು ಹೊರಗೆ ಬಿಟ್ಟು ಬಯಲಿನಲ್ಲಿ ಮೇಯಿಸಿದರೆ ಹಸುಗಳು ಆರೋಗ್ಯವಾಗಿರುತ್ತವೆ ಎನ್ನುತ್ತಾರೆ ಶಿವಾನಂದ್.
ಗುಜರಾತ್ನಿಂದ ಬಂದ ಗಿರ್ : "ಆರಂಭದಲ್ಲಿ ನಮ್ಮ ಸುತ್ತಮುತ್ತ ಹತ್ತಾರು ಡೈರಿ ಫಾರಂಗೆ ಹೋಗಿ ನೋಡಿದೆ. ಯಾರು ದೇಸಿ ಹಸು ಸಾಕುತ್ತಿರಲಿಲ್ಲ.ಎಲ್ಲರು ಹೆಚ್ಚು ಹಾಲು ಕೊಡುವ ವಿದೇಶಿ ಹಸುಗಳನ್ನೆ ಸಾಕಿದ್ದರು. ಅದರ ನಿರ್ವಹಣೆ ಮತ್ತು ವೆಚ್ಚ ಹೆಚ್ಚು. ಜೊತೆಗೆ ಗುಣಮಟ್ಟದ ಹಾಲು, ಸಗಣಿ,ಗಂಜಲ ಏನೂ ಅದರಿಂದ ಸಿಗುವುದಿಲ್ಲ. ಅದಕ್ಕಾಗಿ ನಾನು ದೇಸಿ ಹಸು ಸಾಕುವ ಆಲೋಚನೆ ಮಾಡಿದೆ. ಅದರಲ್ಲೂ ಗಿರ್ ಹಸುವಿನ ಗಂಜಲದಲ್ಲಿ ಚಿನ್ನದ ಅಂಶ ಇದೆ ಎನ್ನುವುದು ಸುದ್ದಿಯಾಗಿತ್ತು.ಮಾರುಕಟ್ಟೆಯಲ್ಲಿ ಹಾಲು ತುಪ್ಪಕ್ಕೆ ಬೇಡಿಕೆ ಇತ್ತು.ಇದನ್ನೆಲ್ಲ ನೋಡಿ ಗಿರ್ ತಳಿಯನ್ನೆ ಸಾಕಲು ಮುಂದಾದೆ". ಎನ್ನುತ್ತಾರೆ ಶಿವಾನಂದ್.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮತ್ತೊಬ್ಬ ದೇಸಿಚಿಂತಕ ಸುಭಾಷ್ ಅವರ ಮಾರ್ಗದರ್ಶನದಲ್ಲಿ ಗುಜರಾತ್ನಿಂದ ಹತ್ತು ಗಿರ್ ಹಸುಗಳನ್ನು ಖರೀದಿಮಾಡಿ ತಂದೆವು. ಆಗ ಅವು ಗರ್ಭಧರಿಸಿದ್ದವು,ಈಗ ಎಲ್ಲವೂ ಕರು ಹಾಕಿವೆ. ಹೋಗುವಾಗ ರೈಲಿನಲ್ಲಿ ಹೋಗಿ ಬರುವಾಗ 1900 ಕಿ.ಮೀ.ದೂರದಿಂದ ಹಸುಗಳನ್ನು ದೊಡ್ಡ ಲಾರಿಗಳಲ್ಲಿ ತಂದೆವು.ಗುಜರಾತ್ ಹಾಡಿಗಳಲ್ಲಿ ಒಬ್ಬೊಬ್ಬರು ಸಾವಿರ ಗಿರ್ ಹಸುಗಳನ್ನು ಸಾಕಿದ್ದಾರೆ. ನಾವು ಅಲ್ಲಿಗೆ ಹೋಗಿ ಹಸು ತರುವುದು ಸುಲಭವಲ್ಲ. ನಾವು ಹಸು ಸಾಕುವುದು ಮನವರಿಕೆ ಆದರೆ ಮಾತ್ರ ಅವರು ನಮಗೆ ಹಸುಗಳನ್ನು ಮಾರಾಟ ಮಾಡಲು ಮುಂದೆಬರುತ್ತಾರೆ.ಇಲ್ಲದಿದ್ದರೆ ಅವರು ನಮ್ಮನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಎಲ್ಲಾ ನಿಯಮಗಳನ್ನು ಪಾಲಿಸಿ ಒಪ್ಪಂದ ಆದ ನಂತರ ಅಲ್ಲಿಂದ ಇಲ್ಲಿಗೆ ಹಸು ಕೊಂಡುತರಲು ತಲಾ ಅರವತ್ತು ಸಾವಿರ ರೂಪಾಯಿ ವೆಚ್ಚವಾಯಿತು. ಒಟ್ಟು ಹತ್ತು ಹಸುಗಳಿಗೆ ಆರು ಲಕ್ಷ ರೂಪಾಯಿ ನೀಡಿ ತಂದೆವು ಎಂದು ವಿವರಿಸಿದರು ಶಿವಾನಂದ್.
ಹಾಲು ತುಪ್ಪಕ್ಕೆ ಬೇಡಿಕೆ : ಗಿರ್ ತಳಿಯ ಹಸುವಿನ ಉತ್ಪನ್ನಗಳಿಗೆ ಬೇಡಿಕೆ ಇದೆ. ನಮ್ಮಲ್ಲಿ ಪ್ರತಿ ಲೀಟರ್ ಹಾಲನ್ನು 80 ರೂಪಾಯಿಗೆ, ಒಂದು ಕೆಜಿ ಬೆಣ್ಣೆಯನ್ನು ಸಾವಿರ ರೂಪಾಯಿಗೆ, ಒಂದು ಕೆಜಿ ತುಪ್ಪವನ್ನು ಒಂದೂವರೆ ಸಾವಿರ ರೂಪಾಯಿ ಕೊಟ್ಟು ಖರೀದಿಸುತ್ತಾರೆ.
ನಾವು ಡೈರಿಗೆ ಹಾಲು ಹಾಕುವುದಿಲ್ಲ. ನಂಜನಗೂಡು,ಮೈಸೂರಿನ ಗ್ರಾಹಕರು ಜೊತೆಗೆ ಕೇರಳದ ಮಂದಿ ನಮ್ಮಲ್ಲಿ ಫಾರಂಗೆ ಬಂದು ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದಲ್ಲದೆ ಗಂಜಲ, ಸಗಣಿಗೂ ಬೇಡಿಕೆ ಇದೆ. ನಾವು ನಮಗೆ ಬೇಕಾದಷ್ಟು ಬಳಸಿಕೊಂಡು ಉಳಿದದ್ದನ್ನು ಮಾರಾಟಮಾಡುತ್ತೇವೆ ಎನ್ನುತ್ತಾರೆ.
ಈ ಹಾಲಿನ ಮಹತ್ವ ಗೊತ್ತಿರುವವರು ಮೊದಲೆ ದೂರವಾಣಿ ಕರೆಮಾಡಿ ಹಾಲನ್ನು ಕಾಯ್ದಿರಿಸುವಂತೆ ಹೇಳಿ ಬಂದು ತೆಗೆದುಕೊಂಡು ಹೋಗುತ್ತಾರೆ.ನಾವು ಇಲ್ಲಿ ಯಾವುದೆ ರೀತಿಯ ಪ್ರಚಾರ ಕೊಟ್ಟಿಲ್ಲ.ಬಾಯಿಂದ ಬಾಯಿಗೆ ಗಿರ್ ಫಾರಂ ಬಗ್ಗೆ ವಿಷಯ ಮುಟ್ಟಿ ಇಷ್ಟೆಲ್ಲಾ ಆಗಿದೆ. ಪ್ರತಿದಿನ ಒಂದು ಸಮಯಕ್ಕೆ ಹತ್ತರಿಂದ ಹದಿನೈದು ಲೀಟರ್ ಹಾಲು ಮಾರಾಟವಾಗುತ್ತದೆ.ಉಳಿದದ್ದು ಬೆಣ್ಣೆ ತುಪ್ಪಕ್ಕೆ ಬಳಕೆಯಾಗುತ್ತದೆ.
ಮುಂದೆ ದೇಸಿ ಹಸು ತಳಿಗಳ ಉತ್ಪಾದನಾ ಕೇಂದ್ರಮಾಡಿ ರೈತರಿಗರ ಕೈ ಗೆಟುಕುವ ದರದಲ್ಲಿ ಹಸುಗಳನ್ನು ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ದೇಸಿ ಹಸುವಿನೊಂದಿಗೆ ನೈಸಗರ್ಿಕ ಕೃಷಿಯನ್ನು ಹೆಚ್ಚು ಪ್ರಚಾರಕ್ಕೆತರಬೇಕು. ಆ ಮೂಲಕ ಗ್ರಾಮೀಣ ಜನರ ಆಥರ್ಿಕ ಪರಿಸ್ಥಿಯನ್ನು ಸುಧಾರಿಸಬೇಕು. ನಗರ ಜನತೆಯ ಆರೋಗ್ಯವನ್ನು ಕಾಪಾಡಲು ವಿಚಮುಕ್ತ ಕೃಷಿ ಎಲ್ಲೆಡೆ ನಡೆಯಬೇಕು ಎನ್ನುವುದು ನಮ್ಮ ಆಶಯ. ಅದಕ್ಕಾಗಿ ನಮ್ಮ ತಂಡ ದುಡಿಯುತ್ತಿದೆ ಎನ್ನುತ್ತಾರೆ ಶಿವಾನಂದ್. ಹೆಚ್ಚಿನ ಮಾಹಿತಿಗೆ 9886960185 ಸಂಪರ್ಕಿಸಿ.
==========================================================
ಮಣ್ಣಿಗೆ ಜೀವ ನೀಡುವ "ಸಂಜೀವಿನಿ" ದೇಸಿಹಸು
ಮೈಸೂರು : ನೈಸರ್ಗಿಕ ಕೃಷಿಗೆ ದೇಸಿ ಹಸು ಅನಿವಾರ್ಯ. ಸಮರ್ಪಕವಾಗಿ ಬಳಸಿಕೊಂಡರೆ ಒಂದು ದೇಸಿ ಹಸುವಿನಲ್ಲಿ 30 ಎಕರೆ ಕೃಷಿ ಮಾಡಬಹುದು ಎನ್ನುತ್ತಾರೆ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪ್ರವರ್ತಕ ಸುಭಾಷ್ ಪಾಳೇಕರ್.
ಪರಿಸರ ಸಂರಕ್ಷಣೆ,ಆರೋಗ್ಯ,ಆಥರ್ಿಕ ಬೆಳವಣಿಗೆಗೆ ಗೋ ಆಧಾರಿತ ಕೃಷಿ ಪೂರಕ.ತಾಯಿಯ ಎದೆ ಹಾಲಿನ ನಂತರ "ಸುರ್ವಣಕ್ಷಾರ" ಪೂರಿತ ಉತ್ಪನ್ನ ಹೊಂದಿರುವ ಜೀವಿ ದೇಸಿ ಹಸು. 18 ಬಗೆಯ ಖನಿಜಗಳನ್ನು ಹೊಂದಿರುವ ಗೋವಿನ ಸಗಣಿ ಭೂಮಿಗೆ ಜೀವ ಚೈತನ್ಯ ನೀಡುವ ಶಕ್ತಿಪಡೆದಿದೆ.
ಯಾವುದೇ ಬೆಳೆಗೆ ಗೊಬ್ಬರದಂತೆ ಸಗಣಿಕೂಡ ಬೆಳೆಗೆ ಆಹಾರವಲ್ಲ.ಸಗಣಿ ಜೀವಾಣುಗಳ ಸಮುಚ್ಚಯ. ಒಂದು ಎಕರೆಗೆ ಎಷ್ಟು ಲಾರಿ ಸಗಣಿ ಕೊಡುತ್ತೇವೆ ಎನ್ನುವುದು ಮುಖ್ಯ ಅಲ್ಲ. ಎಷ್ಟುಕೋಟಿ ಜೀವಾಣುಗಳನ್ನು ಪೂರೈಸಬೇಕೆನ್ನುವುದು ಮುಖ್ಯ. ಒಂದು ಗ್ರಾಂ ದೇಸಿ ಹಸುವಿನ ಸಗಣಿಯಲ್ಲಿ ಮೂನ್ನೂರು ಕೋಟಿ ಜೀವಾಣುಗಳು ಇರುತ್ತವೆ. ಒಂದು ಎಕರೆಗೆ 10 ಕೆಜಿ ಸಗಣಿಯಲ್ಲಿ ಜೀವಾಮೃತ ತಯಾರುಮಾಡಿಕೊಂಡು ನೀಡಿದರೆ ಭೂಮಿಯಲ್ಲಿ ಚಮತ್ಕಾರಿ ಪರಿಣಾಮ ಕಾಣಬಹುದು.
ನೈಸಗರ್ಿಕ ಕೃಷಿಯಲ್ಲಿ ವರದಾನವಾಗಿರುವ ದೇಸಿಹಸು ಉತ್ತಮ ಪೋಷಣೆ ಮಾಡಿದರೆ ಹತ್ತರಿಂದ ಇಪ್ಪತ್ತು ಲೀಟರ್ ಹಾಲು ನೀಡುತ್ತದೆ.ಗಿರ್,ಸಾಹಿವಾಲ್,ರೆಡ್ಸಿಂಧಿ, ಥಾರ್ ಪಾರ್ಕರ್ ತಳಿಯ ಹಸುಗಳು ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ದೇಸಿ ತಳಿಗಳಾಗಿವೆ.
ಯುವಕರು ನೈಸಗರ್ಿಕ ಕೃಷಿಯ ಜೊತೆಗ ದೇಸಿ ಹಸುಸಾಕಾಣಿಕೆಯನ್ನು ಜೋಡಿಸಿಕೊಳ್ಳುವ ಮೂಲಕ ನೆಲ,ಜಲ ಉಳಿಸುವ ಜೊತೆಗೆ ವಿಷಮುಕ್ತ ಆಹಾರ ಉತ್ಪನ್ನಗಳನ್ನು ಬಳಸಲು ಮುಂದಾಗಬೇಕು ಎನ್ನುವುದು ನಮ್ಮ ಆಶಯ ಕೂಡ ಆಗಿದೆ.
ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/05/blog-post_210.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ