ಶೀರ್ಷಿಕೆ : ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ
ಲಿಂಕ್ : ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ
ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ
ಕೊಪ್ಪಳ ಮೇ. 06 (ಕರ್ನಾಟಕ ವಾರ್ತೆ): ಕೊಪ್ಪಳದ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿ ಮತ್ತು ವೃತ್ತ ಕಚೇರಿ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಕಚೇರಿಗಳ ಸಮುಚ್ಛಯ ನಿರ್ಮಾಣಕ್ಕೆ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕನಿಷ್ಟ 02 ಎಕರೆ ಭೂಮಿ ಮಂಜೂರು ಮಾಡುವಂತೆ ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ ಅವರು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಶನಿವಾರದಂದು ಮನವಿ ಪತ್ರ ಸಲ್ಲಿಸಿದರು.
ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿ ಮತ್ತು ಇನ್ನಿತರ ಕಚೇರಿಗಳು ಕೊಪ್ಪಳದಲ್ಲಿ ಈಗಿರುವ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಚೇರಿ ನಿರ್ವಹಣೆಗಾಗಿ ಸ್ಥಳದ ಅಭಾವ ಉಂಟಾಗಿದೆ. ಈಗಿರುವ ಕಟ್ಟಡ ತುಂಬ ಹಳೆಯದಾಗಿದ್ದು, ಮೂಲಸೌಲಭ್ಯಗಳ ಕೊರತೆ ಇದೆ. ಈಗಿರುವ ಕಚೇರಿಗಳು ಜೆಸ್ಕಾಂ ವಸತಿ ಗೃಹಗಳಲ್ಲಿ ತಾತ್ಕಾಲಿಕವಾಗಿ ನಿರ್ವಹಿಸುತ್ತಿದ್ದು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಕೊಪ್ಪಳ ಜಿಲ್ಲಾ ಕೇಂದ್ರ ಅಭಿವೃದ್ಧಿ ಪಥದತ್ತ ಸಾಗಿದ್ದು, ಜೆಸ್ಕಾಂ ಕಚೇರಿಗಳನ್ನು ಸಹ ಉನ್ನತೀಕರಿಸಿವುದು ಅವಶ್ಯವಾಗಿದೆ. ಇತ್ತೀಚೆಗೆ ಗಂಗಾವತಿ ಮತ್ತು ಕೊಪ್ಪಳ ವಿಭಾಗ ವ್ಯಾಪ್ತಿಗೆ ಒಳಗೊಂಡಂತೆ ವೃತ್ತ ಕಚೇರಿಗಳೂ ಸಹ 2015 ರಿಂದಲೂ ಮುನಿರಾಬಾದ್ ಕವಿಪ್ರನಿನಿ ಕಟ್ಟಡದ ಕಚೇರಿಯಲ್ಲಿ ಕಾರ್ವನಿರ್ವಹಿಸುತ್ತಿದೆ. ಇದಕ್ಕೂ ಸಹ ಸ್ಥಳದ ಅವಶ್ಯಕತೆ ಇದೆ. ಇತರೆ ಉಪವಿಭಾಗಗಳಾದ ಆರ್.ಟಿ. ಮತ್ತು ಎಂ.ಟಿ. ಉಪವಿಭಾಗ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಂಡಲ್ಲಿ, ಅಗತ್ಯ ಅನುದಾನ ಒದಗಿಸುವ ಭರವಸೆಯನ್ನು ನೀಡಿದ್ದು, ಈಗಾಗಲೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಕೊಪ್ಪಳದ ಹಳೆ ಕಟ್ಟಡ ಹಾಗೂ ಇತರೆ ವ್ಯವಸ್ಥೆ ಕುರಿತು ಸ್ಥಳ ಪರಿಶೀಲನೆ ಕೈಗೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿನ ಜೆಸ್ಕಾಂ ಗೆ ಸಂಬಂಧಿಸಿದ ಕಚೇರಿಗಳ ಸಮುಚ್ಛಯಕ್ಕಾಗಿ ಕನಿಷ್ಟ 02 ಎಕರೆ ಭೂಮಿಯನ್ನು ಒದಗಿಸುವಂತೆ ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಿ ಮನವಿ ಮಾಡಿದ್ದಾರೆ. ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಶೀಘ್ರವೇ ಕ್ರಮ ಕೈಗೊಂಡು, ಭೂಮಿ ಒದಗಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೊಪ್ಪಳ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಂ.ಎಸ್. ಪತ್ತಾರ, ಅಕೌಂಟ್ ಆಫೀಸರ್ ಸಾದಿಕ್ ಹುಸೇನ್, ಜೆಸ್ಕಾಂ ನೌಕರರ ಸಂಘದ ಅಧ್ಯಕ್ಷ ನಾಗರಾಜ್
ಹೀಗಾಗಿ ಲೇಖನಗಳು ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ ಲಿಂಕ್ ವಿಳಾಸ https://dekalungi.blogspot.com/2017/05/blog-post_21.html
0 Response to "ಕೊಪ್ಪಳ ಜೆಸ್ಕಾಂ ಕಚೇರಿಗಳ ಸಮುಚ್ಛಯಕ್ಕೆ ಭೂಮಿ ಒದಗಿಸಲು ಜೆಸ್ಕಾಂ ನಿರ್ದೇಶಕರ ಮನವಿ"
ಕಾಮೆಂಟ್ ಪೋಸ್ಟ್ ಮಾಡಿ