ಶೀರ್ಷಿಕೆ : ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ
ಲಿಂಕ್ : ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ
ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ
ಕೊಪ್ಪಳ ಮೇ. 06 (ಕರ್ನಾಟಕ ವಾರ್ತೆ): ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ಹಣ್ಣು ಸಾಮಾನ್ಯವಾಗಿ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಚ್ಚುಮೆಚ್ಚಿನ ಹಣ್ಣು. ವಿವಿಧ ತಳಿಯ ಮಾವಿನ ಹಣ್ಣನು ತಿಂದು, ರುಚಿಯನ್ನು ಆಸ್ವಾದಿಸಲು ಎಲ್ಲರೂ ಮುಂದಾಗುವುದು ಸಾಮಾನ್ಯ. ವೈವಿಧ್ಯಮಯ ತಳಿಯ ಮಾವಿನ ಹಣ್ಣಿನ ರುಚಿಯನ್ನು ಸವಿಯುವಂತಾಗಲು ಕೊಪ್ಪಳದ ತೋಟಗಾರಿಕೆ ಇಲಾಖೆ ಕೊಪ್ಪಳಿಗರಿಗೆ ಇದೇ ಮೊದಲ ಬಾರಿಗೆ ಭಾರಿ ಸದಾವಕಾಶವನ್ನು ಕಲ್ಪಿಸಿದ್ದು, ಮೇ. 09 ರಿಂದ 18 ರವರೆಗೆ ಹತ್ತು ದಿನಗಳ ಕಾಲ ಕೊಪ್ಪಳದಲ್ಲಿ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.
ತೋಟಗಾರಿಕೆ ಇಲಾಖೆಯು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಸಹಯೋಗದಲ್ಲಿ ಕೊಪ್ಪಳದಲ್ಲಿ ಮೊಟ್ಟಮೊದಲ ಬಾರಿಗೆ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು, ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯೋಗ್ಯ ಬೆಲೆಗೆ ತಲುಪಿಸುವ ಉದ್ದೇಶದಿಂದ ಈ ಮೇಳವನ್ನು ಮೇ. 09 ರಿಂದ 18 ರವರೆಗೆ ಕೊಪ್ಪಳ ನಗರದ ಎಲ್‍ಐಸಿ ಕಚೇರಿ ಎದುರುಗಡೆ ಇರುವ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದೆ.
ಮಾವು ಮೇಳದ ಮೂಲ ಉದ್ದೇಶಗಳು:
ರೈತರಿಂದ ಗ್ರಾಹಕರಿಗೆ ನೇರವಾಗಿ ಉತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ತಲುಪಿಸುವುದು.
ಕ್ಯಾಲ್ಸಿಯಂ ಕಾರ್ಬೈಡ್‍ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನೇ ಮಾರಾಟಕ್ಕೆ ಇಡಲಾಗುವುದು.
ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮತ್ತು ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ಬಗ್ಗೆ ಮಾಹಿತಿ ನೀಡಲಾಗುವುದು.
ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಮಾವಿನ ಹಣ್ಣುಗಳು ಲಭ್ಯ.
ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ.
ಕೊಪ್ಪಳ ಜಿಲ್ಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳ ಪ್ರದರ್ಶನ .
ಹೆಚ್ಚಿನ ರೈತರು ಮಾವಿನ ಬೆಳೆ ಬೆಳೆಯಲು ಉತ್ತೇಜನ.
ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಗಿಸುವಿಕೆಯಿಂದಾಗುವ ದುಷ್ಫರಿಣಾಮ ಹಾಗೂ ನೈಸರ್ಗಿಕವಾಗಿ ಹಣ್ಣು ಮಾಗಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ರೈತರಿಗೂ, ಗ್ರಾಹಕರಿಗೂ ಹಾಗೂ ಸಾರ್ವಜನಿಕÀರಿಗೂ ಅರಿವು ಮೂಡಿಸುವುದು.
ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವುದು.
ಮಾವಿನ ಹಣ್ಣನ್ನು ಸೇವಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ರವಾನೆ.
ಮಾವಿನ ಹಣ್ಣಿನ ಸಂಸ್ಕರಿಸಿದ ಉತ್ಪನ್ನಗಳಾದ ಚಟ್ನಿ, ಉಪ್ಪಿನಕಾಯಿ, ಮಾವಿನ ರಸ ಹಾಗೂ ಇತರೆ ಉತ್ಪನ್ನಗಳ ಬಗ್ಗೆ ರೈತರಿಗೂ ಹಾಗೂ ಸಾರ್ವಜನಿಕರಿಗೂ ಮಾಹಿತಿ ನೀಡುವುದು.
ರೈತರಿಗೆ ವಿದೇಶಿ ವಿನಿಮಯದ ಬಗ್ಗೆ ಅರಿವು ಮೂಡಿಸುವುದು.
ಮಾವು ಮಂಡಳಿಯಿಂದ ರೈತರಿಗೆ ದೊರೆಯುವ ಸೌಲಭ್ಯಗಳು/ಪ್ರಯೋಜನಗಳ ಬಗ್ಗೆ ತಿಳುವಳಿಕೆ ನೀಡುವುದು.
ರಾಸಾಯನಿಕಯುಕ್ತ ಹಣ್ಣು ಹೇಗೆ ಅಪಾಯಕಾರಿ ? :
********* ಮಾವಿನ ಹಣ್ಣಿನ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ಸಾಮಾನ್ಯವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಎನ್ನುವ ಹಾನಿಕಾರಕ ರಾಸಾಯನಿಕ ಬಳಸಿ ಹಣ್ಣನ್ನು ಮಾಗಿಸುವುದು ಕಂಡು ಬಂದಿದೆ. ಇದರಿಂದಾಗಿ ಹಣ್ಣುಗಳು ಒಂದೇ ಸಮನಾಗಿ ಪಕ್ವವಾಗದೇ ನಷ್ಟ ಉಂಟಾಗುತ್ತದೆ. ಇದಲ್ಲದೇ ಕ್ಯಾಲ್ಸಿಯಂ ಕಾರ್ಬೈಡ್ ಒಂದು ಅಪಾಯಕಾರಿ ರಾಸಾಯನಿಕವಾಗಿದ್ದು, ಅರ್ಸೆನಿಕ್, ರಂಜಕದ ಹೈಡ್ರೈಡ್ ಎನ್ನುವ ವಿಷಕಾರಿ ಅಂಶಗಳನ್ನು ಹೊಂದಿರುತ್ತದೆ. ಇದರಿಂದಾಗಿ ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಮಾಗಿಸಿದ ಹಣ್ಣುಗಳ ಸೇವನೆ ಅಶಕ್ತತೆ, ಬಾಯಾರಿಕೆ, ವಾಂತಿ ಆಗುವಿಕೆ, ಯಾವುದೇ ಪದಾರ್ಥ ನುಂಗಲು ಕಷ್ಟವಾಗುವುದು, ಬೇಧಿ ಮತ್ತು ಇನ್ನಿತರ ಉದರ ಸಂಬಂಧಿ ರೋಗಗಳು ಮತ್ತು ಕಣ್ಣುರಿಯಂತಹ ದುಷ್ಪರಿಣಾಮವನ್ನು ಉಂಟು ಮಾಡುತ್ತದಲ್ಲದೆ ಕ್ಯಾನ್ಸರ್ ರೋಗಕ್ಕೂ ಕಾರಣವಾಗಿದೆ. ಆದ್ದರಿಂದ ಕ್ಯಾಲ್ಸಿಯಂ ಕಾರ್ಬೈಡ್‍ನ ಉಪಯೋಗ ಒಂದು ಶಿಕ್ಷಾರ್ಹ ಅಪರಾಧವಾಗಿದೆ.
ಮೇಳದಲ್ಲಿ ದೊರೆಯಬಹುದಾದ ಹಣ್ಣುಗಳು :
************ ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಮಾವು ಮೇಳದಲ್ಲಿ ಹೆಚ್ಚಾಗಿ ಬೇನಿಶಾ, ತೋತಾಪುರಿ, ರಸಪೂರಿ, ಕೇಸರ್, ಮಲ್ಲಿಕಾ, ಮಲ್ಗೋವಾ, ಆಪೂಸು, ಖಾದರ, ಪುನಾಸ್, ಆಮ್ಲೆಟ್, ಸುವರ್ಣರೇಖಾ, ಚಿನ್ನರಸ, ಪೆದ್ದರಸ, ಲಡ್ಡು ಮುಂತಾದ ತಳಿಯ ಹಣ್ಣುಗಳು ಲಭ್ಯವಾಗುವ ನಿರೀಕ್ಷೆ ಇದೆ.
ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಮಾವು ಮೇಳದಲ್ಲಿ ಭಾಗವಹಿಸುವ ರೈತರು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ. ಇದನ್ನು ಸೇವಿಸುವುದರಿಂದ ಮೇಲೆ ತಿಳಿಸಿದ ಯಾವುದೇ ದುಷ್ಫರಿಣಾಮಗಳು ಆರೋಗ್ಯದ ಮೇಲೆ ಉಂಟಾಗುವುದಿಲ್ಲ. ಇದಲ್ಲದೇ ಹಣ್ಣುಗಳು ಒಂದೇ ಸಮನಾಗಿ ಪಕ್ವವಾಗುವುದರಿಂದ ರೈತರಿಗೆ ಯೋಗ್ಯ ಬೆಲೆ ದೊರೆಯುತ್ತದೆ. ಇಂತಹ ಹಣ್ಣುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವಲ್ಲದೇ ತಿನ್ನಲೂ ಕೂಡ ರುಚಿಕರವಾಗಿರುತ್ತವೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ತಲುಪಿಸುವ ಉದ್ದೇಶ ಹೊಂದಿದ ಈ ಮಾವು ಮೇಳ ಸರ್ವರಿಗೂ ಪ್ರಯೋಜನಕಾರಿಯಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು. ಹಾಗಿದ್ದರೆ, ಕೊಪ್ಪಳದಲ್ಲಿ ಮೇ. 09 ರಿಂದ ನಡೆಯುವ ಮಾವು ಮೇಳದಲ್ಲಿ ಪಾಲ್ಗೊಂಡು, ವಿವಿಧ ಬಗೆಯ ರಸಪೂರಿತ ಮಾವು ಹಣ್ಣುಗಳ ಸವಿಯನ್ನು ಸವಿಯಲು ನೀವೂ ಸಿದ್ಧರಾಗಿ.
ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ ಲಿಂಕ್ ವಿಳಾಸ https://dekalungi.blogspot.com/2017/05/09.html
0 Response to "ಕೊಪ್ಪಳದಲ್ಲಿ ಮೇ. 09 ರಿಂದ ಪ್ರಪ್ರಥಮ ಬಾರಿಗೆ ಮಾವು ಮೇಳ"
ಕಾಮೆಂಟ್ ಪೋಸ್ಟ್ ಮಾಡಿ