ಶೀರ್ಷಿಕೆ : ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ
ಲಿಂಕ್ : ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ
ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ
ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ಕೃಷಿ ಮತ್ತು ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಎನ್ನುವ ಘೋಷವಾಕ್ಯದಡಿ ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ಅಭಿಯಾನ ಪ್ರಾರಂಭಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಮತ್ತು ಬೇಸಾಯ ಸಂಬಂಧಿತ ಇಲಾಖೆಗಳಾದ ಕೃಷಿ ಇಲಾಖೆ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು, ಕೃಷಿ ಅಭಿಯಾನ ಮೂಲಕ ರೈತರಿಗೆ ಮಾಹಿತಿ ಒದಗಿಸುವುದು, ತಾಂತ್ರಿಕತೆಯನ್ನು ರೈತರಿಗೆ ವರ್ಗಾವಣೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಈ ಬಾರಿ ಕೃಷಿ ಅಭಿಯಾನವನ್ನು ಜೂ. 01 ರಿಂದ ಪ್ರಾರಂಭಿಸಲಾಗುವುದು. ಪ್ರತಿ ಹೋಬಳಿಗೆ ಒಂದು ಮಾಹಿತಿ ರಥ ವಾಹನ ಸಂಚರಿಸಲಿದ್ದು, ವಾಹನದಲ್ಲಿ ಧ್ವನಿವರ್ಧಕ, ಮಾಹಿತಿ ಫಲಕಗಳ ಮೂಲಕ ರೈತರಿಗೆ ಮಾಹಿತಿ ಒದಗಿಸಲಾಗುವುದು. ಕೃಷಿ ಮತ್ತು ಬೇಸಾಯ ಸಂಬಂಧಿತ ಇಲಾಖೆಗಳು ಸಮನ್ವಯದೊಂದಿಗೆ ಹಾಗೂ ಸಂಬಂಧಪಟ್ಟ ಕ್ಷೇತ್ರಗಳ ಎಲ್ಲ ಜನಪ್ರತಿನಿಧಿಗಳನ್ನು ಜೊತೆಗೂಡಿಸಿಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ :
************* ಬೆಳೆ ಪರಿಹಾರ, ಬೆಳೆ ವಿಮೆ ಸೇರಿದಂತೆ ರೈತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ವಿಳಂಬವಾಗದಂತೆ ತಲುಪಲು, ರೈತರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸುವುದು ಅತ್ಯಂತ ಪ್ರಮುಖ ಕಾರ್ಯವಾಗಿದೆ. ಸರ್ಕಾರದ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುತ್ತಿರುವುದರಿಂದ, ರೈತರು, ತಮ್ಮ ಬ್ಯಾಂಕ್ ಖಾತೆಯನ್ನು ಅವರದೇ ಆಧಾರ್ ಸಂಖ್ಯೆಗೆ ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು. ಇದುವರೆಗೂ ಆಧಾರ್ ಮಾಡಿಸದಿರುವವರು, ಕೂಡಲೆ ಆಧಾರ್ ನೊಂದಣಿ ಮಾಡಿಸಬೇಕು ಈ ಕುರಿತಂತೆ ಕೃಷಿ ಅಭಿಯಾನದಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಬೆಳೆ ವಿಮೆ ಜಾಗೃತಿ :
******** ಪ್ರಕೃತಿಯ ಅಸಮತೋಲನದಿಂದಾಗಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಕೈ ಸೇರುತ್ತಿಲ್ಲ. ಹೀಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ಸೂಕ್ತ. ಶೀಘ್ರದಲ್ಲಿಯೇ ಮುಂಗಾರು ಹಂಗಾಮು ಪ್ರಾರಂಭವಾಗಲಿದ್ದು, ರೈತರಿಗೆ ಬೆಳೆ ವಿಮೆ ಕುರಿತಂತೆಯೂ ಜಾಗೃತಿ ಮೂಡಿಸಬೇಕು. ರೈತರು ಯಾವ ಬೆಳೆ, ಬೆಳೆಯುತ್ತಾರೆಯೋ ಅದೇ ಬೆಳೆಗೆ ವಿಮೆ ಮಾಡಿಸಬೇಕು. ವಿಮೆ ಮಾಡಿಸುವಾಗ ಬಿತ್ತನೆ ಪ್ರಮಾಣಪತ್ರದ ದಾಖಲೆ ಸಲ್ಲಿಸಿ ವಿಮೆ ಮಾಡಿಸಬೇಕು. ವಿಮೆ ಮಾಡಿಸಲು ಕೊನೆಯ ದಿನಾಂಕದವರೆಗೂ ಕಾಯದೆ, ಸಕಾಲದಲ್ಲಿ ಬೆಳೆ ವಿಮೆ ಮಾಡಿಸಬೇಕು. ರೈತರು ಬೆಳೆ ಕಟಾವು ಮಾಡುವ ಮುನ್ನ ಮಾಹಿತಿ ನೀಡಿ ಮಾಡಿದಲ್ಲಿ ಸೂಕ್ತ. ಬೆಳೆ ಕಟಾವು ಸಮೀಕ್ಷೆಯ ಆಧಾರದಲ್ಲಿಯೇ ಬೆಳೆ ವಿಮೆಯನ್ನು ನಿರ್ಧಾರ ಮಾಡುವುದರಿಂದ, ರೈತರು ಈ ಕುರಿತು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಈ ಕುರಿತಂತೆಯೂ ರೈತರಿಗೆ ಕೃಷಿ ಅಭಿಯಾನ ಸಂದರ್ಭದಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಅಭಿಯಾನ ಕುರಿತು ಮಾಹಿತಿ ನೀಡಿದ ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು, ಈ ಬಾರಿಯ ಕೃಷಿ ಅಭಿಯಾನದಲ್ಲಿ ಸಿರಿಧಾನ್ಯದ ಮಹತ್ವ, ನೀರಿನ ಸದ್ಬಳಕೆ ಹಾಗೂ ವಿಫಲ ಕೊಳವೆ ಬಾವಿಯನ್ನು ಮುಚ್ಚುವ ಕುರಿತು, ಕೃಷಿ ಯಾಂತ್ರೀಕರಣ, ಕಳೆ ನಾಶಕಗಳು, ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ, ಮಣ್ಣು ಆರೋಗ್ಯ, ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ, ರೈತರ ಮನೋಸ್ಥೈರ್ಯ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗುವುದು. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ ಮತ್ತು ಕಂದಾಯ ಇಲಾಖೆಗಳು ಅಭಿಯಾನಕ್ಕೆ ಕೈಜೋಡಿಸಲಿವೆ. ಅದರ ಜೊತೆಗೆ ಕೃಷಿ ವಿವಿ ಮತ್ತು ಕೆವಿಕೆ ವಿಜ್ಞಾನಿಗಳು, ರೈತರು, ಆತ್ಮ ಗುಂಪುಗಳು, ಸಾವಯವ ಕೃಷಿ, ಸ್ವಸಹಾಯ, ಸರ್ಕಾರೇತರ ಗುಂಪುಗಳು ಭಾಗವಹಿಸಲಿವೆ. ಕೃಷಿ ಅಭಿಯಾನದಡಿ ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಹೋಬಳಿಯಲ್ಲಿ ಗ್ರಾ.ಪಂ. ವಾರು ಕಾರ್ಯ ತಂಡಗಳನ್ನು ರಚಿಸಿಕೊಂಡು, ಆಯಾ ಪಂಚಾಯಿತಿಗೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಸಂಚಾರಿ ಕೃಷಿ ಮಾಹಿತಿ ಘಟಕಗಳ ಮೂಲಕ ತೀವ್ರ ಪ್ರಚಾರ ಕೈಗೊಳ್ಳಲಾಗುವುದು. ಹೋಬಳಿ ಕೇಂದ್ರಸ್ಥಾನದಲ್ಲಿ ಕೃಷಿ ವಸ್ತುಪ್ರದರ್ಶನ, ರೈತರ ಸಂವಾದದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಮಾಡಲಾಗುವುದು ಎಂದರು.
ಕೃಷಿ ಅಭಿಯಾನ ವೇಳಾಪಟ್ಟಿ :
************ ಗಂಗಾವತಿ ತಾಲೂಕಿನ ಗಂಗಾವತಿ, ಕಾರಟಗಿ, ಕನಕಗಿರಿ ಹೋಬಳಿಯಲ್ಲಿ ಜೂ. 01 ರಿಂದ 03 ರವರೆಗೆ. ವೆಂಕಟಗಿರಿ- ಜೂ. 04 ರಿಂದ 06. ಮರಳಿ, ಸಿದ್ದಾಪುರ, ಹುಲಿಹೈದರ ನಲ್ಲಿ- ಜೂ. 05 ರಿಂದ 07 ರವರೆಗೆ ನಡೆಯಲಿದೆ. ಕೊಪ್ಪಳ ತಾಲೂಕಿನ ಕೊಪ್ಪಳ, ಹುಲಿಗಿ ಹೋಬಳಿಯಲ್ಲಿ ಜೂ. 02 ರಿಂದ 04. ಇರಕಲ್ಲಗಡ ಮತ್ತು ಅಳವಂಡಿ ಹೋಬಳಿಯಲ್ಲಿ ಜೂ. 06 ರಿಂದ 08 ರವರೆಗೆ. ಯಲಬುರ್ಗಾ ತಾಲೂಕಿನ ಯಲಬುರ್ಗಾ ಮತ್ತು ಮಂಗಳೂರು ಹೋಬಳಿಗಳಲ್ಲಿ ಜೂ. 01 ರಿಂದ 03 ರವರೆಗೆ. ಕುಕನೂರು, ಹಿರೇವಂಕಲಕುಂಟಾ ಹೋಬಳಿಗಳಲ್ಲಿ ಜೂ. 02 ರಿಂದ 04 ರವರೆಗೆ. ಕುಷ್ಟಗಿ ತಾಲೂಕಿನ ತಾವರಗೇರಾ, ಕುಷ್ಟಗಿ ಹೋಬಳಿಗಳಲ್ಲಿ ಜೂ. 02 ರಿಂದ 03 ರವರೆಗೆ ಹಾಗೂ ಹನಮಸಾಗರ ಮತ್ತು ಹನಮನಾಳ ಹೋಬಳಿಗಳಲ್ಲಿ ಜೂ. 05 ರಿಂದ 07 ರವರೆಗೆ ಅಭಿಯಾನ ನಡೆಯಲಿದೆ ಎಂದು ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು ಹೇಳಿದರು.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಮಂಜುನಾಥ್, ಸೇರಿದಂತೆ ಎಲ್ಲ ಸಹಾಯಕ ಕೃಷಿ ನಿರ್ದೇಶಕರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2017/05/01_29.html
0 Response to "ಜೂ. 01 ರಿಂದ ಜಿಲ್ಲೆಯಲ್ಲಿ ಕೃಷಿ ಜಾಗೃತಿ ಅಭಿಯಾನ- ಎಂ. ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ