ಶೀರ್ಷಿಕೆ : news and photo Date: 27-04-2017
ಲಿಂಕ್ : news and photo Date: 27-04-2017
news and photo Date: 27-04-2017
“ಜನ-ಮನ” ಸಂವಾದ ಕಾರ್ಯಕ್ರಮ ಯಶಸ್ಸಿಗೆ ಸಚಿವರ ಸೂಚನೆ
ಅವರು ಗುರುವಾರ ಕಲಬುರಗಿಯಲ್ಲಿ “ಜನಮನ” ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಲ್ಕು ವರ್ಷಗಳ ಅವಧಿಯಲ್ಲಿ ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಆಯೋಜಿಸಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ನಿಗದಿತ ಅವಧಿಯಲ್ಲಿ ಒದಗಿಸಬೇಕು. ಅಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರು ಇಲಾಖಾವಾರು ಹಾಗೂ ಯೋಜನೆವಾರು ಫಲಾನುಭವಿಗಳ ಸಂಖ್ಯೆ ನಿರ್ಧರಿಸಿ ಪಟ್ಟಿಯನ್ನು ಮೇ 5ರೊಳಗೆ ಒದಗಿಸುವಂತೆ ಸೂಚಿಸಿದರು. ಮೇ 12 ಮತ್ತು 13ಂದು ಡಾ. ಎಸ್.ಎಂ. ಪಂಡಿತ ರಂಗಮಂದಿರ ಕಾಯ್ದಿರಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ನಡೆಯುವ ದಿನದಂದು ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ, ರಂಗಮಂದಿರದ ಸುತ್ತಮುತ್ತ ಸ್ವಚ್ಛತೆ ಮಾಡಿಸಲಾಗುವುದು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ. ಚಂದ್ರಕಾಂತ “ಜನಮನ” ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಮೇ 2ರಂದು ಶ್ರೀ ಭಗೀರಥ ಮಹರ್ಷಿ ಜಯಂತ್ಯೋತ್ಸವ
ಕಲಬುರಗಿ,ಏ.27.(ಕ.ವಾ.)-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶ್ರೀ ಭಗೀರಥ ಮಹರ್ಷಿ ಜಯಂತಿ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಗೀರಥ ಮಹರ್ಷಿಯ ಜಯಂತ್ಯೋತ್ಸವÀನ್ನು ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮೇ 2ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಶ್ರೀ ಭಗೀರಥ ಮಹರ್ಷಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ್ ಅಧÀ್ಯಕ್ಷತೆಯಲ್ಲಿ ಜರುಗುವ ಈ ಸಮಾರಂಭಕ್ಕೆ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವ್ಹಿ.ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ.ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಜಗರ ಚುಲಬುಲ್ ಹಾಗೂ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಶ್ರೀನಿವಾಸ ಸಗರ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಕಲಬುರಗಿ ಜೇವರ್ಗಿ ಕಾಲೋನಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಗೀತಾಂಜಲಿ ಜಿ. ಉಪ್ಪಾರ ವಿಶೇಷ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ.
ಜಯಂತ್ಯೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಯಿಂದ ಕಲಬುರಗಿ ಮಕ್ತಂಪುರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಸರಾಫ್‍ಬಜಾರ್, ಚೌಕ್ ಪೊಲೀಸ್ ಸ್ಟೇಶನ್, ಸೂಪರ್ ಮಾರ್ಕೆಟ್, ಜಗತ್ ವೃತ್ತದ ಮೂಲಕ ಡಾ. ಎಂ.ಎಸ್. ಪಂಡಿತ ರಂಗಮಂದಿರದವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಭಗೀರಥ ಮಹರ್ಷಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ.
ರಾಜೀವ ಆವಾಸ್ ಯೋಜನೆ: ವಂತಿಕೆ ಹಣ ಭರಿಸಲು ಅವಕಾಶ
ಕಲಬುರಗಿ,ಏ.27.(ಕ.ವಾ)-ರಾಜೀವ ಆವಾಸ್ (ಪೈಲೇಟ್ ಪ್ರೊಜೆಕ್ಟ್) ಯೋಜನೆಯಡಿಯಲ್ಲಿ ಆಯ್ಕೆಯಾದ 920 ಫಲಾನುಭವಿಗಳ ಪೈಕಿ ವಂತಿಕೆ ಹಣ 100750 ರೂ.ಗಳ ಡಿ.ಡಿ. ಭರಿಸದೇ ಇರುವ ಫಲಾನುಭವಿಗಳು ತಮ್ಮ ವಂತಿಕೆ ಹಣವನ್ನು 2 ಕಂತುಗಳಲ್ಲಿ ಭರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಮೊದಲನೇ ಕಂತಿನಲ್ಲಿ 60000ರೂ. ಗಳ ಡಿ.ಡಿ.ಯನ್ನು 2017ರ ಮೇ 15 ರೊಳಗಾಗಿ ಭರಿಸಿದ್ದಲ್ಲಿ ಮನೆಯನ್ನು ತಮ್ಮ ಹೆಸರಿಗೆ ಕಾಯ್ದಿರಿಸಲಾಗುವುದು ಹಾಗೂ ಉಳಿದ ಹಣ 40750 ರೂ.ಗಳ ಡಿ.ಡಿ.ಯನ್ನು ಮನೆ ಸ್ವಾಧೀನ ಪತ್ರ ಮತ್ತು ಹಕ್ಕು ಪತ್ರ ನೀಡುವ ಸಮಯದಲ್ಲಿ ಭರಿಸಬೇಕೆಂದು ಅವರು ತಿಳಿಸಿದ್ದಾರೆ.
ಮೇ 5ರಂದು ಮಾಜಿ ಸೈನಿಕರ ಕುಂದುಕೊರತೆ ಆಲಿಕೆ
ಕಲಬುರಗಿ,ಏ.27.(ಕ.ವಾ.)-ಜಿಓಸಿ ತೆಲಂಗಾಣ ಮತ್ತು ಆಂಧ್ರ ಸಬ್ ಏರಿಯಾದವರು 2017ರ ಮೇ 5ರಂದು ಬೆಳಗಿನ 8 ಗಂಟೆಗೆ ಕಲಬುರಗಿ ಎಂ.ಎಸ್.ಕೆ. ಮಿಲ್ ಕಣ್ಣಿ ಮಾರ್ಕೆಟ್ ಬಳಿ ಇರುವ ಇ.ಸಿ.ಎಸ್.ಹೆಚ್. ಪಾಲಿಕ್ಲಿನಿಕ್‍ಗೆ ಭೇಟಿ ನೀಡಿ ಮಾಜಿ ಸೈನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.
ಕಲಬುರಗಿ, ಬೀದರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಮಾಜಿ ಸೈನಿಕರು/ ಮಾಜಿ ಸೈನಿಕರ ಅವಲಂಬಿತರು ಕುಂದುಕೊರತೆಗಳೇನಾದರೂ ಇದ್ದಲ್ಲಿ ಇ.ಎಸ್.ಎಸ್.ಹೆಚ್. ಪಾಲಿಕ್ಲಿನಿಕ್ಕಿಗೆ ಖುದ್ದಾಗಿ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಇ.ಎಸ್.ಎಸ್.ಹೆಚ್. ಪಾಲಿಕ್ಲಿನಿಕ್ ದೂರವಾಣಿ ಸಂಖ್ಯೆ 08472-266677ನ್ನು ಸಂಪರ್ಕಿಸಬೇಕೆಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ
ಕಲಬುರಗಿ,ಏ.27.(ಕ.ವಾ.)-ತೋಟಗಾರಿಕೆ ಇಲಾಖೆಯ 2017-18ನೇ ಸಾಲಿನ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಕಲಬುರಗಿ ತಾಲೂಕಿನ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಕೃಷಿ ಭಾಗ್ಯ ಯೋಜನೆಯಡಿ ನೆರಳು ಪರದೆ ಮತ್ತು ಹಸಿರು ಮನೆ, ರಾಷ್ಟ್ರೀಯ ಸೂಕ್ಷ್ಮ ಹನಿ ನೀರಾವರಿ, ರಾಷ್ಟ್ರೀಯ ಕೃಷಿ ವಿಕಾಸ, ತೋಟಗಾರಿಕೆ ಯಾಂತ್ರಿಕರಣ, ಸಮಗ್ರ ತೋಟಗಾರಿಕೆ ಅಭಿವೃದ್ಧಿ, ರಾಷ್ಟ್ರೀಯ ಕೃಷಿ ವಿಕಾಸ. ಬಾಳೆ ನಿಖರ ಬೇಸಾಯ ಮತ್ತು ಸರ್ವತೋಮುಖ ಅಭಿವೃದ್ಧಿ, ಮಧುವನ ಮತ್ತು ಜೇನು ಸಾಕಾಣಿಕೆ, ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸರ್ಕಾರದಿಂದ ರೂಪಿಸಿದ ನಿಯಮಗಳನ್ವಯ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಇದರಂತೆ ಫಲಾನುಭವಿಗಳಿಂದ ಆಯಾ ಯೋಜನೆಗಳಡಿ ಕಾರ್ಯಕ್ರಮವಾರು ಮತ್ತು ಹೋಬಳಿವಾರು ಗುರಿಯಂತೆ ರೈತರಿಂದ ಅರ್ಜಿ ಆಹ್ವಾನಿಸಿ, ಲಾಟರಿ ಮುಖಾಂತರ ಅರ್ಹ ಫಲಾನುಭವಿಗಳನ್ನು ನಿಗದಿತ ಅವಧಿಯೊಳಗೆ ಆಯ್ಕೆ ಮಾಡಲಾಗುವುದು. ರೈತರು ತಮ್ಮ ಹೋಬಳಿ ಮತ್ತು ತಾಲೂಕು ತೋಟಗಾರಿಕೆ ಕಚೇರಿಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ರೈತರು ಅರ್ಜಿಯೊಂದಿಗೆ ಪಹಣಿ, ಹೋಲ್ಡಿಂಗ್, ಜಾತಿ ಪ್ರಮಾಣಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ), ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್, ನೀರುಬಳಕೆ/ಪತ್ರ ದಾಖಲಾತಿಗಳೊಂದಿಗೆ ಜೂನ್ 10ರೊಳಗಾಗಿ ಹೋಬಳಿ ಮತ್ತು ತಾಲೂಕು ತೋಟಗಾರಿಕೆ ಕಚೇರಿಗೆ ಸಲ್ಲಿಸಬೇಕು. ಜೂನ್ 11 ರಿಂದ 15 ರವರೆಗೆ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುವುದು. ಪರಿಶೀಲನೆ ಸಮಯದಲ್ಲಿ ಅರ್ಜಿಗಳು ಏನಾದರೂ ಬದಲಾವಣೆ ಇದ್ದಲ್ಲಿ ರೈತರು ಈ ಕಚೇರಿಗೆ ಭೇಟಿ ನೀಡಿ ಸರಿಪಡಿಸತಕ್ಕದ್ದು. ಜೂನ್ 16ರಂದು ಲಾಟರಿ ಪ್ರಕ್ರಿಯೆಯಲ್ಲಿ ಕಲಬುರಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಾಸಕರು, ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಅರ್ಜಿದಾರರ ಸಮ್ಮುಖದಲ್ಲಿ ಇಲಾಖಾ ಯೋಜನೆಗಳವಾರು ಲಾಟರಿ ಮೂಲಕ ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಬೆಳಗಿನ 11 ಗಂಟೆಗೆ ಆಯ್ಕೆ ಮಾಡಲಾಗುವುದು.
ರೈತರು ಸಂಪರ್ಕಿಸಬೇಕಾದ ಹೋಬಳಿ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಕಲಬುರಗಿ ಹೋಬಳಿ ಗುರುಲಿಂಗಪ್ಪ ಬಗಲಿ-9611646548, ಅವರಾದ(ಬಿ) ಹೋಬಳಿ ಬಸವರಾಜ ಗೊಬ್ಬೂರಕರ್-9008101303, ಮಹಾಗಾಂವ ಹೋಬಳಿ ಪ್ರಸನ್ನ ಜಿ.ಸಜ್ಜನ್-9900970770, ಪಟ್ಟಣ ಹೋಬಳಿ ಅವಿನಾಶ ರ್ಯಾಗಿ-7760393107, ಫರಹತಾಬಾದ ಹೋಬಳಿ-ಶಿವಕುಮಾರ 8277944278, ಕಮಲಾಪುರ ಹೋಬಳಿ-ಕುಮಾರಿ ಸುಲಭಾ 8277944276ನ್ನು ಸಂಪರ್ಕಿಸಲು ಕೋರಲಾಗಿದೆ.
ಅರಿವು ಯೋಜನೆಯಡಿ ಅರ್ಜಿ ಆಹ್ವಾನ
ಕಲಬುರಗಿ,ಏ.27.(ಕ.ವಾ.)-ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಪಾರ್ಶಿ, ಬೌದ್ಧ ಮತ್ತು ಸಿಖ ಜನಾಂಗದ ವಿದ್ಯಾರ್ಥಿಗಳಿಂದ 2017-18ನೇ ಸಾಲಿನ ಸಿ.ಇ.ಟಿ. ಮುಖಾಂತರ ಬಿ.ಇ., ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ಬಿ.ಸಿ.ಎ., ಎಂ.ಸಿ.ಎ., ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಎಂ.ಬಿ.ಎ., ಎಂ.ಟೆಕ್, ಡಿ.ಇ.ಡಿ., ಬಿ.ಇಡಿ., ಡಿ.ಫಾರ್ಮ್, ಬಿ. ಫಾರ್ಮ್, ಎಂ.ಎ., ಎಂ.ಎಸ್.ಸಿ., ಡಿಪ್ಲೋಮಾ ಮತ್ತು ಐ.ಟಿ.ಐ.. ವೃತ್ತಿಪರ ಶಿಕ್ಷಣದ ವ್ಯಾಸಂಗ ಮಾಡಲು ಅರಿವು ಸಾಲ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆಸಕ್ತರು ನಿಗಮದ ವೆಬ್‍ಸೈಟ್ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ/ಚಿಡಿivu-2 ಮುಖಾಂತರ ಆನ್‍ಲೈನ್ ಮೂಲಕ ಭರ್ತಿ ಮಾಡಿ ಅದರ ಸಾಫ್ಟ್ ಕಾಪಿಯನ್ನು ಪ್ರಿಂಟ್ ತೆಗೆದು ಇತರ ದಾಖಲಾತಿಗಳೊಂದಿಗೆ ಮೇ 30ರಂದು ಮದ್ಯಾಹ್ನ 1.30 ಗಂಟೆರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಎಸ್.ಆರ್. ರೆಸಿಡೆನ್ಸಿ, ಪ್ಲಾಟ್ ನಂ: 1881, ಮೊದಲನೆ ಮಹಡಿ, ಡಾ|| ಎಲ್.ಎಸ್. ರಾಠಿ ಆಸ್ಪತ್ರೆ ಎದುರುಗಡೆ, ಹಳೆ ಜೇವರ್ಗಿ ರಸ್ತೆ, ಕಲಬುರಗಿ-585102 ವಿಳಾಸಕ್ಕೆ ಸಲ್ಲಿಸಬೇಕು. ಕೊನೆಯ ದಿನಾಂಕ ಮುಗಿದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ,(ನಿ) ಕಲಬುರಗಿ ಜಿಲ್ಲಾ ಕಚೇರಿಯನ್ನು (ರಜಾ ದಿನವನ್ನು ಹೊರತುಪಡಿಸಿ) ಹಾಗೂ ದೂರವಾಣಿ ಸಂಖ್ಯೆ 08472-232425ನ್ನು ಸಂಪರ್ಕಿಸಲು ಕೋರಲಾಗಿದೆ.
ಏಪ್ರಿಲ್ 28ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.27.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಮಹಾವೀರ ನಗರ ಫೀಡರ್ ವ್ಯಾಪ್ತಿಯ ಮೋಹನ್ ಲಾಡ್ಜ್‍ದಿಂದ ಅಂಡರ್ ಬ್ರಿಡ್ಜ್‍ವರೆಗಿನ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಏಪ್ರಿಲ್ 28ರಂದು ಬೆಳಗಿನ 8 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ. ಮಹಾವೀರ ಫೀಡರ್: ಮಹಾವೀರನಗರ, ಶಾಸ್ತ್ರಿನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶನಗರ. ಕೆ.ಇ.ಬಿ.ಸ್ಟೋರ್, ಕೆ.ಇ.ಬಿ. ಕ್ವಾರ್ಟರ್ಸ್, ಪಿ.ಡಬ್ಲ್ಯೂ.ಡಿ. ಕಚೇರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪರ್ ಲೆನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಮಕ್ಕಳ ಜೀವನ ಮತ್ತು ಶಿಕ್ಷಣದತ್ತ ತಂದೆ-ತಾಯಿಗಳು ಹೆಚ್ಚು ಗಮನ ನೀಡಿ
ಕಲಬುರಗಿ,ಏ.27.(ಕ.ವಾ.)-ಇಂದಿನ ಸಮಾಜ ಉತ್ತಮ ಮಾರ್ಗದಲ್ಲಿ ನಡೆಯಲು ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಮತ್ತು ಅವರಿಗೆ ಒಳ್ಳೆಯ ಮಾರ್ಗ ಸದ್ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಮಕ್ಕಳ ಜೀವನ ಹಾಗೂ ವಿದ್ಯಾಭ್ಯಾಸದ ಬಗ್ಗೆ ತಂದೆ-ತಾಯಿಗಳು ಹೆಚ್ಚು ಗಮನ ಕೊಡುವ ಮೂಲಕ ಅವರ ಭವಿಷ್ಯಕ್ಕೆ ನಾಂದಿಯಾಗಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ತಿಳಿಸಿದರು.
ಕಲಬುರಗಿ ಮಕ್ಕಾ ಕಾಲೋನಿ ಹೊಸ ರೆಹಮತ ನಗರ ಐ.ಪಿ.ಪಿ. ಅರ್ಬನ್ ಹೆಲ್ತ್ ಸೆಂಟರ್‍ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹರಾ ಕಾನೂನು ಸಲಹಾ ಕೇಂದ್ರ, ರಹೆನುಮಾ ಕಾನೂನು ಕೇಂದ್ರ ಹಾಗೂ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತೊಂದರೆಗೊಳಗಾದ ಸಂದರ್ಭದಲ್ಲಿ ಪರಿಹಾರ ಪಡೆಯಲು ದಂಡ ಪ್ರಕ್ರಿಯಾ ಸಂಹಿತೆ ಕಲಂ 125 ಅವಕಾಶ ಇರುತ್ತದೆ. ಇತ್ತೀಚಿಗೆ 2005 ರಲ್ಲಿ ಜಾರಿಗೆ ಬಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಮಹಿಳೆಯರು ಒಂದೇ ಕಾಯ್ದೆಯಡಿ ಬೇರೆ ಬೇರೆ ಪರಿಹಾರವನ್ನು ಅಂದರೆ ಜೀವನಾಂಶ, ಸ್ವತಂತ್ರವಾಗಿ ಜೀವಿಸುವ ವ್ಯವಸ್ಥೆ ಮತ್ತು ಔಷಧೋಪಚಾರಕ್ಕಾಗಿ ಹಣ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಇವುಗಳನ್ನು ಪಡೆಯಲು ಅವಕಾಶವಿರುತ್ತದೆ. ಹೆಣ್ಣು ಮಕ್ಕಳಿಗಾಗಿ ಶಿಶು ಸಂರಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ತೆರೆಯಲಾಗಿದೆ. ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಅದೇ ರೀತಿ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆ ಪ್ರದೇಶದಲ್ಲಿರುವ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡಲು ಸದವಕಾಶವನ್ನು ಈ ಕಾಯ್ದೆಯಡಿಯಲ್ಲಿ ನೀಡಲಾಗಿದೆ. ಈ ಪ್ರಕ್ರಿಯೆಯು ಆನ್‍ಲೈನ್ ಮೂಲಕ ನಡೆಸುವುದರಿಂದ ಅರ್ಹರಿರುವ ವಿದ್ಯಾರ್ಥಿಗಳ ಎಲ್ಲ ಪೋಷಕರು ಈ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಪೋಸ್ಕೋ ಕಾಯ್ದೆ ಅಡಿ ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯವಾದ ಪ್ರಕರಣಗಳು ನಡೆದಲ್ಲಿ ಕ್ರಿಮಿನಲ್ ಪ್ರಕರಣ ನೋಂದಾಯಿಸಬಹುದು ಹಾಗೂ ಸಂತ್ರಸ್ತ ಪರಿಹಾರ ಕಾಯ್ದೆ ಅಡಿಯಲ್ಲಿ ಪರಿಹಾರ ಪಡೆಯಲು ಅವಕಾಶವಿರುತ್ತದೆ. ದಿನನಿತ್ಯಕ್ಕೆ ಬೇಕಾಗುವ ಜನನ ಮತ್ತು ಮರಣ ನೋಂದಣಿ ಕಾಯ್ದೆ, ವಾರಸಾ ಕಾಯ್ದೆ ಮತ್ತು ಸ್ವತ್ತು ಹಸ್ತಾಂತರ ಕಾಯ್ದೆಗಳ ಬಗ್ಗೆಯೂ ವಿಶೇಷವಾಗಿ ಮಾಹಿತಿ ನೀಡಿದರು.
ಸಹಾರಾ ಸೇವಾ ಸಂಸ್ಥೆಯ ನಿರ್ದೇಶಕ ಮಸ್ತಾನ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ರಹೆನುಮಾ ಕಾನೂನು ಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ತೆರೆದಿರುವುದಾಗಿ ಹೇಳಿದರು. ಜನನ ಮತ್ತು ಮರಣ ಪ್ರಮಾಣ ಪಡೆಯಲು ಅರ್ಜಿ ಸಲ್ಲಿಸಿದ ನಂತರವೂ ಹಿಂಬರಹ/ಸ್ವೀಕೃತಿ ಪಡೆಯುವುದು ಅವಶ್ಯಕ ಎಂದು ವಿವರಿಸಿದರು. ಮಹಾನಗರ ಪಾಲಿಕೆ ಸದಸ್ಯ ತನ್ವೀರ್ ಅಹ್ಮದ್ ಸರಡಗಿ ಹಾಜರಿದ್ದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಏಪ್ರಿಲ್ 28ರಂದು ಕಾನೂನು ಅರಿವು-ನೆರವು ಕಾರ್ಯಕ್ರಮ
ಕಲಬುರಗಿ,ಏ.27.(ಕ.ವಾ)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹಾರಾ ಸೇವಾ ಸಂಸ್ಥೆ ಹಾಗೂ ರಹೆನುಮಾ ಕಾನೂನು ಕೇಂದ್ರ, ಶಿಕ್ಷಣ ಇಲಾಖೆ ಹಾಗೂ ಕೃಷಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಏಪ್ರಿಲ್ 28ರಂದು ಕಲಬುರಗಿ ತಾಲೂಕಿನ ಹೆಚ್. ಚಿಂಚೋಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಹೆಚ್. ಚಿಂಚೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಸಾಯಬಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ಪಾಟೀಲ, ಹೆಚ್. ಚಿಂಚೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲಾಸ ಕುಲಕರ್ಣಿ, ಸಹರಾ ಸೇವಾ ಸಂಸ್ಥೆ ನಿರ್ದೇಶಕ ಮಸ್ತಾನ್ ಬಿರಾದಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಚಿಂಚೋಳಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುಂಡಪ್ಪ ಜಾಲಿಂದರ್ ರೈತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು, ಶಿಕ್ಷಣಾಧಿಕಾರಿ ಸಾದತ್ ಹುಸೇನ್ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು.
ಕಾನೂನು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗ
ಕಲಬುರಗಿಯ ಬಿಲಾಲಾಬಾದ್ ಕಾಲೋನಿಯ ಬಾಂಬೇ ಹೊಟೇಲ್ ಹತ್ತಿರದ ವಿಶಾಲ ಕರ್ನಾಟಕ ಜಾಗೃತಿ ಸಮಿತಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಿಶಾಲ ಜಾಗೃತಿ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅಸಂಘಟಿತ ಕಾರ್ಮಿಕರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿನನಿತ್ಯ ಜೀವನಕ್ಕೆ ಬೇಕಾಗುವ ಕಾನೂನುಗಳಾದ ಮೋಟಾರ ವಾಹನ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಸ್ವತ್ತು ಹಸ್ತಾಂತರ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರೂ ಸಾಮಾನ್ಯ ಅರಿವು ಹೊಂದಿರುವುದು ಅವಶ್ಯಕವಾಗಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ವಿವಾಹ ಮಾಡುವುದಕ್ಕೆ ಮುಂಚೆ ಹೆಣ್ಣು ಮಕ್ಕಳಿಗೆ 18 ವರ್ಷ ಮತ್ತು ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರವೇ ವಿವಾಹ ಮಾಡಬೇಕು. ಇಲ್ಲದಿದ್ದಲ್ಲಿ 2 ವರ್ಷ ಸೆರೆವಾಸ 1 ಲಕ್ಷ ರೂ.ಗಳ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಸಂವಿಧಾನದಲ್ಲಿ ತಿದ್ದುಪಡಿಯಾಗಿ ಕ್ರಮಾದೇಶ 51(ಎ)ಯನ್ನು ಅಳವಡಿಸಿದ್ದರಿಂದ ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ 6 ರಿಂದ 15 ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕೆಂದು ಮೂಲಭೂತ ಕರ್ತವ್ಯಗಳಲ್ಲಿ ನಮೂದಿಸಲಾಗಿದೆ. ಅದರಂತೆ ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವುದು ಕಡ್ಡಾಯವಾಗಿದೆ. ಮೋಟಾರು ಕಾಯ್ದೆಯಡಿ ಪ್ರತಿಯೊಬ್ಬರೂ ವಾಹನ ಚಲಾವಣೆ ಮಾಡುವುದಕ್ಕೆ ಮೊದಲು ಅದನ್ನು ನೋಂದಣಿ ಮಾಡಿಸಿ ಸೂಕ್ತ ಲೈಸೆನ್ಸ್ ಪಡೆದು, ವಿಮೆ ಮಾಡಿಸಿದ ನಂತರವಷ್ಟೇ ವಾಹನವನ್ನು ಚಾಲನೆ ಮಾಡಬೇಕು. ಇಲ್ಲದಿದ್ದಲ್ಲಿ ವಾಹನ ಅಪಘಾತವಾದಲ್ಲಿ ವಿಮಾ ಸಂಸ್ಥೆಯವರು ಯಾವುದೇ ಪರಿಹಾರವನ್ನು ನೀಡಲು ಬರುವುದಿಲ್ಲ. ಕಟ್ಟಡ ಕಾರ್ಮಿಕರಿಗಾಗಿ ಕಟ್ಟಡ ಕಲ್ಯಾಣ ನಿಧಿ ಯೋಜನೆ ಆರಂಭಿಸಿದ್ದು, ಕಟ್ಟಡ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕೆಂದರು. ನಂತರ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಸಹ ವಿತರಿಸಿದರು. ಅದೇ ರೀತಿ ಉತ್ತರ ವಲಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಸಿರಗಾಪುರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಕಾರ್ಮಿಕ ನಿರೀಕ್ಷಕ ರಮೇಶ ಸುಂಬಡ ಮಾತನಾಡಿ, ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗಾಗಿ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಎಂಬ ಯೋಜನೆಯನ್ನು ಜಾರಿ ತಂದಿದ್ದು, ಕಟ್ಟಡ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆಯಬೇಕು. ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುವಾಗ ಮರಣ ಸಂಭವಿಸಿದ್ದಲ್ಲಿ ಮತ್ತು ಕೆಲಸಕ್ಕೆ ಹೋಗಿ ಬರುವಾಗ ಅಪಘಾತವಾಗಿ ಮರಣ ಹೊಂದಿದ್ದಲ್ಲಿ ಪರಿಹಾರ ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ, 60 ವರ್ಷ ಮೀರಿದ ಕಟ್ಟಡ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಆಗದೇ ಇರುವವರಿಗೆ ಮಾಸಿಕ ಪಿಂಚಣಿ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗಾಗಿ ಹಣ ಪಡೆಯಲು ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಕೊಂಡು ಸಂಬಂಧಿಸಿದ ಅರ್ಜಿಯನ್ನು ದಾಖಲಾತಿಗಳೊಂದಿಗೆ ಹಾಜರುಪಡಿಸಿದ್ದಲ್ಲಿ ಪರಿಹಾರ ನೀಡಲಾಗುವುದು ಎಂದರು.
ನ್ಯಾಯವಾದಿ ಎನ್.ಎನ್. ಜಹಾಗಿರದಾರ ಕೌಟುಂಬಿಕ ನ್ಯಾಯಾಲಯದಲ್ಲಿ ಮಹಿಳೆಯರಿಗೆ ಇರುವ ಪರಿಹಾರಗಳ ಬಗ್ಗೆ ವಿವರಿಸಿದರು. ವಿಶಾಲ ಕರ್ನಾಟಕ ಜಾಗೃತಿ ಸಮಿತಿಯ ಅಧ್ಯಕ್ಷ ಹಾಗೂ ಸಂಸ್ಥಾಪಕ ಹಾಜಿಸಾಬ ಬಾಗವಾನ, ರೋಜಾ ಪೊಲೀಸ್ ಸ್ಟೇಶನ್ ಸರ್ಕಲ್ ಇನ್ಸ್‍ಪೆಕ್ಟರ್ ಘಾಳಪ್ಪಾ ಪೇನಾಜಿ, ಸರ್ವೋದಯ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಶಾಲದೇವ ಸಿ. ಧನೇಕರ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ಎನ್. ನಯಿಮ್ ಸೇರಿಕರ್ ಪಾಲ್ಗೊಂಡಿದ್ದರು.
ಸರ್ವೋದಯ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿಶಾಲದೇವ ಸಿ. ಧನೇಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200 ಜನರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎರಡು ಸಂಸ್ಥೆಗಳ ಗುರುತಿನ ಚೀಟಿ ವಿತರಣೆ ಅನುಮತಿ ರದ್ದು
ಕಲಬುರಗಿ,ಏ.27.(ಕ.ವಾ)-ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಜೋಳದಾಪಕಾ ಮುಧೋಳ ಶ್ರೀ ಶಿವಯೋಗಿ ಶಿವಲಿಂಗೇಶ್ವರ ವಿದ್ಯಾ ಸಂಸ್ಥೆ ಹಾಗೂ ಗುಲಬರ್ಗಾ ಭೈರವಿ ಸ್ಫೂರ್ತಿ ಮಹಿಳಾ ಸ್ವಸಹಾಯ ಸಂಸ್ಥೆಗಳು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನೀಡಲಾಗುವ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಿಸುವ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬನ್ಸಿ ಪವಾರ ತಿಳಿಸಿದ್ದಾರೆ.
ಈ ಎರಡು ಸಂಸ್ಥೆಗಳು ಇಲಾಖೆಗೆ ಯಾವುದೇ ಮಾಹಿತಿ ಸಲ್ಲಿಸದಿರುವ ಪ್ರಯುಕ್ತ ಈ ಸಂಸ್ಥೆಗಳಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಿಸುವ ಅನುಮತಿಯನ್ನು ರದ್ದುಪಡಿಸಲಾಗಿದೆ. ಎರಡೂ ಸಂಸ್ಥೆಗಳು ಇಲಾಖೆಯ ಗಮನಕ್ಕೆ ಬಾರದೆ ಗುರುತಿನ ಚೀಟಿ ವಿತರಿಸುತ್ತಿರುವುದು ಗಮನಕ್ಕೆ ಬಂದಲ್ಲಿ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಕಲಬುರಗಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸದರಿ ಮೇಲ್ಕಂಡ ಎರಡು ಸಂಸ್ಥೆಗಳಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯಬಾರದೆಂದು ಅವರು ತಿಳಿಸಿದ್ದಾರೆ.
ಬಾಡಿಗೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಏ.27.(ಕ.ವಾ)-ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ಜಗತ್ ಮೊರಾರ್ಜಿ ದೇಸಾಯಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಗೆ ಬಾಡಿಗೆ ಕಟ್ಟಡ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ವಸತಿ ನಿಲಯದ ಬಾಡಿಗೆ ಕಟ್ಟಡಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮೊರಾರ್ಜಿ ದೇಸಾಯಿ ಪ.ಜಾ./ಪ.ಪಂ.ಗಳ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಯ ಪ್ರಾಂಶುಪಾಲ ಜ್ಯೋತಿ ಕೆ. ತಿಳಿಸಿದ್ದಾರೆ.
ಸದರಿ ವಸತಿ ಪ್ರೌಢಶಾಲೆಯಲ್ಲಿ 150 ವಿದ್ಯಾರ್ಥಿನಿಯರು ವಾಸಿಸಲು ಸುಮಾರು 15 ರಿಂದ 20 ಕೊಠಡಿಗಳು ಹಾಗೂ ತರಗತಿಗಾಗಿ ಸುಮಾರು 5 ರಿಂದ 8 ಕೊಠಡಿಗಳು, ಶೌಚಾಲಯ, ನೀರಿನ ವ್ಯವಸ್ಥೆ ಮತ್ತು ಕಂಪೌಂಡ್ ಇರುವ ಸುಸಜ್ಜಿತ ಕಟ್ಟಡದ ಅವಶ್ಯಕತೆಯಿದೆ. ಸದರಿ ಸೌಲಭ್ಯಗಳನ್ನು ಹೊಂದಿರುವ ಬಾಡಿಗೆ ಕೊಡಲು ಇಚ್ಛಿಸುವ ಕಟ್ಟಡಗಳ ಮಾಲೀಕರು 2017ರ ಮೇ 5 ರೊಳಗಾಗಿ ಮೊಬೈಲ್ ಸಂಖ್ಯೆ 9986969088, 9480337073, 9901360670ಗಳನ್ನು ಸಂಪರ್ಕಿಸಲು ಕೋರಿದೆ.
ಹೀಗಾಗಿ ಲೇಖನಗಳು news and photo Date: 27-04-2017
ಎಲ್ಲಾ ಲೇಖನಗಳು ಆಗಿದೆ news and photo Date: 27-04-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 27-04-2017 ಲಿಂಕ್ ವಿಳಾಸ https://dekalungi.blogspot.com/2017/04/news-and-photo-date-27-04-2017.html
0 Response to "news and photo Date: 27-04-2017"
ಕಾಮೆಂಟ್ ಪೋಸ್ಟ್ ಮಾಡಿ