ಶೀರ್ಷಿಕೆ : ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ
ಲಿಂಕ್ : ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ
ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ
ಕೊಪ್ಪಳ, ಏ. 27 (ಕರ್ನಾಟಕ ವಾರ್ತೆ): ಕೊಳವೆ ಬಾವಿಗಳಲ್ಲಿ ದುರ್ಘಟನೆಗಳು ಸಂಭವಿಸುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ 2005ರಲ್ಲಿ ಸೂಚನೆ ನೀಡಿದ್ದು ಸಹ ಇಂತಹ ಘಟನೆಗಳು ಮರುಕಳುಹಿಸುತ್ತಿವೆ. ಕುಡಿಯುವ ನೀರಿಗಾಗಿ ಹಾಗೂ ಇತರೆ ಕೆಲಸಗಳಿಗಾಗಿ ಕೊರೆಯಿಸಲಾಗಿರುವ ಕೊಳವೆ ಬಾವಿಗಳು ವಿಫಲವಾಗಿದ್ದಲ್ಲಿ ಕೂಡಲೇ ಅವುಗಳನ್ನು ಮುಚ್ಚಿಸುವಂತೆ ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸೂಚಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಗೂ ಇತರೆ ಕೆಲಸಗಳಿಗಾಗಿ ಕೊರೆಯಿಸಲಾಗಿರುವ ಕೊಳವೆಬಾವಿಗಳು ವಿಫಲವಾಗಿದ್ದಲ್ಲಿ ಕೂಡಲೇ ಅವುಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕರು ಸೂಚನೆಯನ್ನು ನೀಡಿದ್ದು, ಭಾಗ್ಯನಗರ ಪ.ಪಂ. ದಿಂದ ಇಂತಹ ವಿಫಲ ಕೊಳವೆ ಬಾವಿಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುತ್ತಿದೆ. ಖಾಸಗಿ ಮಾಲೀಕರು ಕೊಳವೆ ಬಾವಿಗಳನ್ನು ಕೊರೆಯಿಸಿ ಅವುಗಳು ವಿಫಲವಾದಲ್ಲಿ, ಅವುಗಳನ್ನು ಮುಚ್ಚಿಸುವ ಜವಾಬ್ದಾರಿ ಅವರದ್ದಾಗಿದೆ. ಆರ್‍ಟಿಓ ಲೇಔಟ್‍ನಲ್ಲಿ ಇಂತಹ ವಿಫಲ ಮೂರು ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ. ಇನ್ನೂ ಯಾರಾದರೂ ಕೊಳವೆ ಬಾವಿಗಳನ್ನು ಕೊರೆಯಿಸಿ ಮುಚ್ಚಿಸದೇ ಇದ್ದರೆ ಕೋಡಲೇ ಅವುಗಳನ್ನು ಮುಚ್ಚಿಸಿ, ದುರ್ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಿ. ಪಂಚಾಯತಿಯ ಅಥವಾ ಯಾವುದೇ ಖಾಸಗಿ ವಿಫಲ ಕೊಳವೆ ಬಾವಿ ಕಂಡುಬಂದಲ್ಲಿ ಕೂಡಲೇ ಭಾಗ್ಯನಗರ ಪ.ಪಂ.ಗೆ ಮಾಹಿತಿ ನೀಡಿ, ಸುರಕ್ಷತಾ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸಿ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ
ಎಲ್ಲಾ ಲೇಖನಗಳು ಆಗಿದೆ ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/04/blog-post_2.html
0 Response to "ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ