ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ.

ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ. - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ., ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ.
ಲಿಂಕ್ : ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ.

ಓದಿ


ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ.






ವೈದಿಕಧರ್ಮದ ವರ್ಣ ವ್ಯವಸ್ಥೆಯಲ್ಲಿ ಸಂಚಲನವನ್ನುಂಟುಮಾಡಿದವರು ಶ್ರೀರಾಮಾನುಜರು. ಕಾಲದ ಒತ್ತಡದವಿವೇಕಕ್ಕೆ ಸ್ಪಂದಿಸಿದ ರಾಮಾನುಜರು ಕಟ್ಟರ್ ವೈದಿಕ ಪರಂಪರೆಗೆಬದಲಾವಣೆ ತರಲೇಬೇಕಾದ ಸಂದಿಗ್ದ ಪರಿಸ್ಥಿತಿಯಲ್ಲಿದ್ದರು.

ಅದು 11 ನೇ ಶತಮಾನ. ವೈದಿಕಶಾಹಿಯಅತಿರೇಕಗಳನ್ನು ದಿಕ್ಕರಿಸಿ ಸಮಾನತೆ ಸಾರಿದ ಬೌದ್ಧಧರ್ಮ ಜನರಿಗೆ ಅಪ್ಯಾಯಮಾನವಾಗಿತ್ತು. ಇನ್ನೊಂದುಕಡೆ ಅಹಿಂಸೆಯನ್ನು ಪ್ರತಿಪಾದಿಸಿದ ಜೈನ ಧರ್ಮ ಸಶಕ್ತವಾಗತೊಡಗಿತ್ತು. ಮಗದೊಂದು ಕಡೆಗೆ ಹೊರದೇಶದಿಂದಾಗುವ ಮುಸ್ಲಿಂದಾಳಿಗಳು ಆತಂಕವನ್ನು ಸೃಷ್ಟಿಸಿದ್ದವು. ಆದರೆ ವೈದಿಕರು ಸೃಷ್ಟಿಸಿದಅಮಾನವೀಯ ಅಸಮಾನತೆಗಳು ಹಿಂದೂಧರ್ಮವನ್ನು ಒಳಗಿಂದೊಳಗೆ ವಿಘಟನೆಗೊಳಿಸ ತೊಡಗಿದ್ದವು. ಹೀಗೆಯೇ ಆದರೆ ಬ್ರಾಹ್ಮಣ್ಯದವರ್ಣವ್ಯವಸ್ಥೆ ಛಿದ್ರಗೊಂಡು ಅನ್ಯ ಧರ್ಮಗಳು ಪ್ರಭಾವಶಾಲಿಯಾಗುವಸುಳಿವು ರಾಮಾನುಜರಿಗೆ ಗೋಚರವಾಯಿತು. ಅಲ್ಪಸಂಖ್ಯಾತ ಬ್ರಾಹ್ಮಣರನ್ನು ಹೊರತುಪಡಿಸಿ ವೈಶ್ಯರು ಜೈನ ಧರ್ಮದತ್ತವಾಲಿದರೆ, ಬಹುಸಂಖ್ಯಾತ ಶೂದ್ರ ದಲಿತರು ಬೌದ್ದಧರ್ಮಕ್ಕೆ ಒಲಿಯ ತೊಡಗಿದ್ದರು. ಜೊತೆಗೆಕೆಲವು ಕ್ಷತ್ರೀಯ ರಾಜರುಗಳು ಬೌದ್ದ ಮತಾನುಯಾಯಿಗಳಾಗಿದ್ದರಿಂದ ವೈದಿಕ ಧರ್ಮದಬದಲು ಬೌದ್ದ ಧರ್ಮ ರಾಜಾಶ್ರಯಪಡೆಯಿತು. ಇದೆಲ್ಲದರಿಂದ ಆತಂಕಿತರಾದ ರಾಮಾನುಜರಿಗೆ ಹೇಗಾದರೂ ಮಾಡಿ ವರ್ಣವ್ಯವಸ್ಥೆಯಒಗ್ಗಟ್ಟನ್ನು ಉಳಿಸಿಕೊಳ್ಳಬೇಕಾಗಿತ್ತು. ಬಹುಸಂಖ್ಯಾತ ದಲಿತ ಶೂದ್ರರನ್ನು ಬೇರೆಧರ್ಮಕ್ಕೆ ಹೋಗದಂತೆ ತಡೆಯಬೇಕಾಗಿತ್ತು. ವೈದಿಕವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ತರಲೇಬೇಕಾದ ಅನಿವಾರ್ಯತೆ ಆಚಾರ್ಯ ರಾಮಾನುಜರ ಮುಂದಿತ್ತು.

ಆಗತಾವು ಉತ್ತರಾಧಿಕಾರಿಯಾಗಿದ್ದ ಶ್ರೀರಂಗಂ ಮಠದ ದೇವಸ್ಥಾನದಲ್ಲಿ ಎಲ್ಲಜನರಿಗೂ ಪ್ರವೇಶವನ್ನು ರಾಮಾನುಜರು ಮುಕ್ತಗೊಳಿಸಿದರು. ನಂತರ ಅವರ ಆಡಳಿತವಿದ್ದತಿರುಪತಿ ಹಾಗೂ ಮೇಲುಕೋಟೆ ದೇವಸ್ಥಾನಗಳಲ್ಲಿಜನರ ಮುಕ್ತ ಪ್ರವೇಶವನ್ನು ವಿಸ್ತರಿಸಿದರು. ದೇವಸ್ಥಾನದ ಆಡಳಿತದ ನಿಯಮಗಳಲ್ಲಿ ಸುಧಾರಣೆತಂದರು. ಎಲ್ಲ ಜಾತಿಗಳ ಜನರಿಗೆದೇವಾಲಯಕ್ಕೆ ಮುಕ್ತ ಪ್ರವೇಶ ಕೊಟ್ಟುಅಸ್ಪೃಶ್ಯರಿಗೂ ದೇವರ ವಿಗ್ರಹದ ದರ್ಶನಭಾಗ್ಯವನ್ನು ಒದಗಿಸಿಕೊಟ್ಟರು. ಮೋಕ್ಷ ಎನ್ನುವುದು ಉತ್ತಮಕುಲದವರಿಗೆ ಮಾತ್ರ ಎನ್ನುವ ವೈದಿಕಶಾಹಿಮೌಢ್ಯವನ್ನು ಒಡೆದು ಹಾಕಿದ ರಾಮಾನುಜರುಭಕ್ತಿ, ಪ್ರಪತ್ತಿ ಹಾಗೂ ಶರಣಾಗತಿಯ ಮೂಲಕಯಾವುದೇ ಜಾತಿ, ಲಿಂಗ ಬೇಧಗಳಿಲ್ಲದೇಎಲ್ಲರೂ ಮೋಕ್ಷ ಪಡೆಯಬಹುದೆಂದು ಸಿದ್ದಾಂತವನ್ನುಪ್ರತಿಪಾದಿಸಿದರು

ಅವರ್ಣೀಯರಾದ ದಲಿತ ಸಮುದಾಯವನ್ನು ಮುಟ್ಟಿಸಿಕೊಳ್ಳುವುದೇಮಹಾಪಾಪ ಎಂದುಕೊಳ್ಳುತ್ತಿದ್ದ ವೈದಿಕರಿಗೆ ಅಸ್ಪೃಷ್ಯರಿಗೆ ದೇವಸ್ಥಾನದಲ್ಲಿ ಪ್ರವೇಶ ಕೊಟ್ಟಾಗ ಅಸಹನೆಸ್ಪೋಟಗೊಂಡಿದ್ದಂತೂ ಸತ್ಯ. ಜಾತಿಭ್ರಷ್ಟ ಗೊಳಿಸಿದೇವಸ್ಥಾನದ ಮಡಿ ಹಾಳು ಮಾಡಿಬ್ರಾಹ್ಮಣ್ಯದ ಹಿತಕ್ಕೆ ಭಂಗತಂದ ಆರೋಪದಮೇಲೆ ರಾಮಾನುಜರಿಗೆ ಎರಡು ಸಲ ವಿಷಹಾಕಿ ಕೊಲ್ಲುವ ಪ್ರಯತ್ನವನ್ನು ಅರ್ಚಕರುಗಳೇಮಾಡಿದ್ದರು. ಆದರೆ ಹಂತಕವೈದಿಕರಿಗೆ ಬ್ರಾಹ್ಮಣ್ಯಕ್ಕೆ ಅವಸಾನ ಬಂದಿದೆ ಎಂಬುದರಅರಿವೇ ಇರಲಿಲ್ಲ. ಅದರ ಅರಿವಿದ್ದ ರಾಮಾನುಜರುದೇವಸ್ಥಾನದ ಆವರಣದಿಂದ ಭಹಿಷ್ಕೃತಗೊಂಡ ಸಮುದಾಯವನ್ನು ದೇವಸ್ಥಾನದೊಳಗೆ ಕರೆತಂದು ದೇವರ ವಿಗ್ರಹದರ್ಶನ ಮಾಡಿಸಿ ಅನ್ಯ ಧರ್ಮದಕಡೆಗೆ ಜನರು ಆಕರ್ಷಿತರಾಗದಂತೆ ತಡೆದರು

ಜೊತೆಗೆಆಯಾ ಜಾತಿಗಳಲ್ಲೇ ಪುರೋಹಿತರನ್ನು ಸೃಷ್ಟಿಸಿ ಯಾರೂ ಬೇರೆ ಧರ್ಮಕ್ಕೆಮತಾಂತರವಾಗದಂತೆ ನೋಡಿಕೊಂಡರು. ಈಗಿನ ಕರ್ನಾಟಕ ಪ್ರಾಂತ್ಯದಲ್ಲಿಯೇಆಗ 58 ಜಾತಿಯಿಂದಾಯ್ದ ಜನರಿಗೆ ಮಂತ್ರದೀಕ್ಷೆ ಕೊಟ್ಟುದೇವರ ದಾಸರನ್ನಾಗಿಸಿ ವೈದಿಕರ ದೇವರಕುರಿತು ಜನರಲ್ಲಿ ಪ್ರಚಾರ ಮಾಡುವಕಾಯಕಕ್ಕೆ ಪ್ರೇರೇಪಿಸಿ ದಾಸ ಪರಂಪರೆಯನ್ನೇ ಆರಂಭಿಸಿದರು. ವೈಕುಂಟದಾಸರು, ಕನಕದಾಸರು, ಯತಿರಾಜದಾಸರಾದಿಯಾಗಿ ಹಲವಾರು ದಾಸರು ದೇವರಮಹಿಮೆಯನ್ನು ಕೊಂಡಾಡಿ ಜನರಲ್ಲಿ ವೈದಿಕರದೇವರ ಕುರಿತು ಭಕ್ತಿಯನ್ನು ಹುಟ್ಟಿಸಲುಪ್ರಯತ್ನಿಸಿದರು. ಈಗಿನ ಕರ್ನಾಟಕ ತಮಿಳುನಾಡುಹಾಗೂ ಆಂದ್ರದಲ್ಲೂ ದಾಸ ಪರಂಪರೆಯನ್ನುರಾಮಾನುಜರು ಆಗಲೇ ಹುಟ್ಟುಹಾಕಿ ಜನಸಮುದಾಯದಲ್ಲಿಅಸ್ತಿರಗೊಳ್ಳುತ್ತಿದ್ದ ತಮ್ಮ ದೇವರು ಹಾಗೂಧರ್ಮದ ಅಸ್ಮಿತೆಯನ್ನು ಉಳಿಸಿಕೊಂಡರು

ರಾಮಾನುಜರ ಎಲ್ಲಾ ನಮೂನಿಯಸುಧಾರಣೆಗಳಿಂದ ಜಾತಿವ್ಯವಸ್ಥೆ ನಾಶವಾಗಿ ಸಾಮಾಜಿಕ ಸಮಾನತೆಸಾಧ್ಯವಾಯಿತೆ..? ಇಲ್ಲಾ... ಇದು ರಾಮಾನುಜರ ಉದ್ದೇಶವೂಆಗಿರಲಿಲ್ಲ. ವೈದಿಕಶಾಹಿಯೂ ಉಳಿಯಬೇಕು, ಬಹುಸಂಖ್ಯಾತ ದಲಿತ ಶೂದ್ರರು ಬೇರೆಧರ್ಮಕ್ಕೆ ಮತಾಂತರವೂ ಆಗಬಾರದು ಎನ್ನುವ ಉದ್ದೇಶದಅನುಷ್ಟಾನಕ್ಕಾಗಿ ಕೆಲವು ಮೇಲ್ಪದರ ಸುಧಾರಣೆಗಳನ್ನುರಾಮಾನುಜರು ಜಾರಿಗೊಳಿಸಿದರು. ಅಸ್ಪೃಶ್ಯರನದನು ಗರ್ಭಗುಡಿಯಿಂದ ಹೊರಗೆ ನಿಲ್ಲಿಸಿ ದೇವರದರ್ಶನ ಮಾಡಿಸುವ ವ್ಯವಸ್ಥೆ ಆಯಿತೇಹೊರತು ಗರ್ಭಗುಡಿಯಲ್ಲಿ ಅಬ್ರಾಹ್ಮಣರ ಪ್ರವೇಶ ಅಸಾಧ್ಯವಾಯಿತು. ಶೂದ್ರಕುಲದ ದಾಸರು ವೈದಿಕ ದೇವರಪ್ರಚಾರಕರಾದರೇ ಹೊರತು ಕನಕದಾಸರ ಹಾಗೆಮೂಲ ವಿಗ್ರಹ ಪೂಜೆಯಿಂದ ವಂಚಿತರಾದರು. ದಾಸರ ಹೆಸರಲ್ಲಿ ರಾಮಾನುಜರ ಶಿಷ್ಯರಾದ ಬ್ರಾಹ್ಮಣರೇ ದೇವರ ಪೂಜೆಯ ಹಕ್ಕುಗಿಟ್ಟಿಸಿಕೊಂಡರೇ ಹೊರತು ಬೇರೆ ಯಾವಅವರ್ಣನೀಯನೂ ಗರ್ಭಗುಡಿಯ ಅರ್ಚಕನಾಗಲಿಲ್ಲ. ಆಗುವಂತೆಯೂ ಇರಲಿಲ್ಲ. ಹೊರಗೆ ಜಾತ್ರೆ ಹಬ್ಬಗಳಲ್ಲಿಶೂದ್ರ ಕುಲದವರು ಉತ್ಸವ ಮೂರ್ತಿಯತೇರು ಪಲ್ಲಕ್ಕಿ ಹೊರುವ ಬೋವಿಯಾದರೆ ಹೊರತುಮುಟ್ಟಿ ಪೂಜೆ ಮಾಡುವ ಭಾಗ್ಯಪಡೆಯಲಿಲ್ಲ. ಹೀಗಾಗಿ ರಾಮಾನುಜರ ಆಶಯವರ್ಣಧರ್ಮವನ್ನು ಅನ್ಯ ಧರ್ಮೀಯರಿಂದ ಕಾಪಾಡುವುದಾಗಿತ್ತೇಹೊರತು ಸಂಪೂರ್ಣವಾಗಿ ಅಮಾನವೀಯ ವರ್ಣವ್ಯವಸ್ಥೆಯನ್ನು ನಾಶಮಾಡುವುದಾಗಿರಲಿಲ್ಲ. ದಲಿತ ಶೂದ್ರರಿಗೆ ದೇವರ ದರ್ಶನ ಮಾಡಿಸಿ... ಶೂದ್ರ ದಾಸರ ಮೂಲಕ ದೇವರಮಹಿಮೆ ಪ್ರಚಾರ ಮಾಡಿಸಿ ಅಲ್ಪಸ್ವಲ್ಪ ತೋರಿಕೆಯ ಬದಲಾವಣೆಗಳೊಂದಿಗೆ ವರ್ಣವ್ಯವಸ್ಥೆಯಅಂತಸ್ಸತ್ವವನ್ನು ಉಳಿಸಿಕೊಳ್ಳಲು ರಾಮಾನುಜರು ಬಲು ಚಾಣಾಕ್ಷತನದಿಂದಾ ಪ್ರಯತ್ನಿಸಿಯಶಸ್ವಿಯಾದರು. ಧಾರ್ಮಿಕ ಸಮಾಜ ಸುಧಾರಕಎಂದು ಹೆಸರಾದರು. ಭಕ್ತಿಯ ಅಫೀಮಿನ ಅಮಲನ್ನುಜನಸಾಮಾನ್ಯರಿಗೆ ಏರಿಸಿ ಸಾಮಾಜಿಕ ಅಸಮಾನತೆಯನ್ನುಉಳಿಸಿಕೊಂಡರು. ವೈದಿಕಶಾಹಿ ಚರಿತ್ರೆ ತನ್ನ ಅಸ್ತಿತ್ವಉಳಿಸಿಕೊಳ್ಳಲು ಕಾಲದ ಒತ್ತಡದ ಮೂಸೆಯಲ್ಲಿರಾಮಾನುಜರನ್ನು ಸೃಷ್ಟಿಸಿದ್ದರಲ್ಲಿ ಸುಳ್ಳಿಲ್ಲ.

ಏನೇಇರಲಿ... ರಾಮಾನುಜರ ಬಗ್ಗೆ ಇರುವ ದಂತಕಥೆಯಂತೂತುಂಬಾನೇ ವಿಶಿಷ್ಟವಾಗಿದೆ. 24 ನೇ ವಯಸ್ಸಿಗೆ ಸನ್ಯಾಸಸ್ವೀಕರಿಸಿದ ರಾಮಾನುಜರು ತಮ್ಮ ಗುರುಗಳಾದ ಮಹಾಪೂರ್ಣರಆದೇಶದಂತೆ ಮಂತ್ರೋಪದೇಶ ಪಡೆಯಲು ತಿರುಕ್ಕೋಟ್ಟಿಯೂರಿನ ಗೋಷ್ಠೀಪೂರ್ಣರಹತ್ತಿರ 18 ಸಲ ಪ್ರಯತ್ನಿಸುತ್ತಾರಂತೆ. 19 ನೇ ಸಲಕರೆದು " ಯಾರಿಗೂ ಮಂತ್ರೋಪದೇಶಹೇಳಬಾರದು... ಹಾಗೇನಾದರೂ ಹೇಳಿದರೆ ನೇರ ನರಕಕ್ಕೆಹೋಗುತ್ತೀ" ಎಂದು ಎಚ್ಚರಿಸಿಯೇ ಗೋಷ್ಟಿಪೂರ್ಣರುರಾಮಾನುಜರ ಕಿವಿಯಲ್ಲಿ ಮತ್ರೋಪದೇಶ ಮಾಡುತ್ತಾರೆ. ತದನಂತರ ದೇವಾಲಯದ ಗೋಪುರವೇರಿದರಾಮಾನುಜರು ಎಲ್ಲಾ ಜಾತಿಯ ಜನರನ್ನೆಲ್ಲಾಸೇರಿಸಿ ಮಂತ್ರೋಪದೇಶವನ್ನು ಅರ್ಥ ಸಮೇತ ಸಾರ್ವಜನಿಕವಾಗಿಹೇಳಿದರಂತೆ. ಇದರಿಂದ ಸಿಟ್ಟಿಗೆದ್ದ ಗುರುಗಳು" ನೀನು ನರಕಕ್ಕೆ ಹೋಗುತ್ತೀಯಾ" ಎಂದುಕಿರುಚಿದಾಗ..." ಗುರುಗಳೆ ಮಂತ್ರವನ್ನುಕೇಳಿದ ಜನರಿಗೆಲ್ಲಾ ಮೋಕ್ಷಸಿಕ್ಕುವುದಾದರೆ ನಾನು ನರಕಕ್ಕೆ ಹೋಗಲೂಸಿದ್ದ" ಎಂದ ರಾಮಾನುಜರ ಮಾತುಕೇಳಿ ಗುರುಗಳೇ ಬದಲಾಗಿ ಶಿಷ್ಯನನ್ನುಮೆಚ್ಚಿ "ಮನ್ನಾಥ" ಎಂದು ಬಿರುದಿತ್ತು ಅಭಿನಂದಿಸಿದರಂತೆ. ದಂತ ಕತೆಎಷ್ಟು ಸತ್ಯವೋ ಸುಳ್ಳೊ ಗೊತ್ತಿಲ್ಲಾ. ಆದರೆ ಗೌಪ್ಯ ಮಂತ್ರಗಳ ಹೆಸರಲ್ಲಿಶ್ರೇಷ್ಟತೆಯ ವ್ಯಸನ ಪೀಡಿತರಾದ ವೈದಿಕರಿಗೆಪಾಠವಂತೂ ಇದು ಆಗಿದೆ

ಒಂದುಸಾವಿರ ವರ್ಷಗಳ ಹಿಂದೆ ಕ್ರಿ. 1017 ಎಪ್ರಿಲ್ 10 ರಂದುಜನಿಸಿದ ರಾಮಾನುಜರು ನಿಂತ ನೀರಾಗಿ ಮಲಿನವಾಗಿದ್ದವೈದಿಕಶಾಹಿ ವ್ಯವಸ್ಥೆಯಲ್ಲಿ ಸಣ್ಣ ಸಂಚಲನವನ್ನು ಸೃಷ್ಟಿಸಿದ್ದರಿಂದಈಗಲೂ ಶೂದ್ರ ವರ್ಗದವರ ಗೌರವಕ್ಕೆಪಾತ್ರರಾಗಿದ್ದಾರೆ. ಅವರ ಸುಧಾರಣೆಯ ಹಿಂದಿನಅನಿವಾರ್ಯತೆ ಹಾಗೂ ಉದ್ದೇಶಗಳನ್ನು ಮರೆಮಾಚುವವೈಷ್ಣವ ಪಂಥದ ಅಯ್ಯಂಗಾರಿ ವೈದಿಕಶಾಹಿಕುಲ ರಾಮಾನುಜರನ್ನು ಸಮಾಜದಲ್ಲಿ ಸಮಾನತೆ ಸಾರಿದ ಹರಿಕಾರಎಂದು ನಂಬಿಸಲು ಕಳೆದ ಹತ್ತುಶತಮಾನಗಳಿಂದ ಪ್ರಯತ್ನಿಸುತ್ತಲೇ ಇದೆ. ಹಲವಾರು ಜನಅದನ್ನು ನಂಬಿಯೂ ಇದ್ದಾರೆ.. ಚರಿತ್ರೆತನ್ನೊಡಲಲ್ಲಿ ಅನೇಕಾನೇಕ ಸತ್ಯಗಳನ್ನು ಮುಚ್ಚಿಟ್ಟುಕೊಂಡು ಚಲಿಸುತ್ತಲೇ ಇದೆ.. ಜಾತಿ ಬೇರುಗಳುಗಟ್ಟಿಗೊಳ್ಳುತ್ತಲೇ ಅಸಮಾನತೆ ವಿವಿಧ ಆಯಾಮಗಳಲ್ಲಿವಿಸ್ತರಗೊಳ್ಳುತ್ತಲೇ ಇದೆ. ಇದನ್ನು ತೊಳೆಯಲುರಾಮಾನುಜರಿಗಿಂತಾ ಅಂಬೇಡ್ಕರರವರಂತವರ ಜರೂರತ್ತು ಪ್ರಸ್ತುತ ದೇಶಕ್ಕಿದೆ.

- ಶಶಿಕಾಂತಯಡಹಳ್ಳಿ




ಹೀಗಾಗಿ ಲೇಖನಗಳು ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ.

ಎಲ್ಲಾ ಲೇಖನಗಳು ಆಗಿದೆ ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ. ಲಿಂಕ್ ವಿಳಾಸ https://dekalungi.blogspot.com/2017/04/88.html

Subscribe to receive free email updates:

0 Response to "ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ."

ಕಾಮೆಂಟ್‌‌ ಪೋಸ್ಟ್‌ ಮಾಡಿ