ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...

ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು... - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು..., ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...
ಲಿಂಕ್ : ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...

ಓದಿ


ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...






ನೆರೆಹೊರೆಯರಾಜ್ಯಗಳಲ್ಲಿ ಒಮ್ಮೆ ಹೋಗಿ ಕೇಳಿ" ಕನ್ನಡಿಗರು ಜಗಳಗಂಟರು" ಎಂದೇ ಹೇಳುತ್ತಾರೆ. ಆದರೆಕನ್ನಡಿಗರನ್ನು ಕೇಳಿದರೆ " ನಾವು ಕನ್ನಡಿಗರು ಸಹಿಷ್ಣುತತೆಹೊಂದಿದವರು" ಎಂದು ಹೇಳುತ್ತಾ 'ನೋಡಿಎಲ್ಲಾ ಭಾಷಿಕರಿಗೂ ಬೆಂಗಳೂರನ್ನೇ ಬಿಟ್ಟುಕೊಟ್ಟಿದ್ದೇವೆ' ಎಂದು ಸಮರ್ಥನೆಗಳನ್ನು ಕೊಡುತ್ತಾರೆ. ಎರಡೂ ರೀತಿಯಅನಿಸಿಕೆಗಳಲ್ಲಿ ಅರ್ಧ ಸತ್ಯವಿದೆ. ಕನ್ನಡಿಗರೆಲ್ಲರೂಜಗಳಗಂಟರಲ್ಲದಿದ್ದರೂ ಕನ್ನಡಿಗರ ಸ್ವಾಭಿಮಾನದ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿರುವ ಕೆಲವು ಕನ್ನಡ ಪರಸಂಘಟನೆಗಳು ಕೆಲವು ಸಲ ಅನಗತ್ಯಸಂಗತಿಗಳನ್ನು ದೊಡ್ಡದು ಮಾಡಿ ಅಸಹಿಷ್ಣುತತೆಯವಾತಾವರಣ ಸೃಷ್ಟಿಸಿ ಕನ್ನಡಿಗರೆಲ್ಲರ ಮೇಲೆ ಜಗಳಗಂಟತನದ ಆರೋಪವನ್ನುಹೊರೆಸಿದ್ದಂತೂ ಸತ್ಯ


ಉದಾಹರಣೆಗೆ ಬಾಹುಬಲಿ ಚಿತ್ರದ ಬ್ಯಾನ್ಹಾಗೂ ಬೆಂಗಳೂರು ಬಂಧ್ ವಿಚಾರ. ಸತ್ಯರಾಜ್ಎನ್ನುವ ತಮಿಳು ಚಿತ್ರರಂಗದ ನಟ9 ವರ್ಷದ ಹಿಂದೆ ಕಾವೇರಿ ವಿಚಾರದಲ್ಲಿಕನ್ನಡ, ಕನ್ನಡಿಗರ ಕುರಿತು ಅವಮಾನಕಾರಿಯಾಗಿ ಮಾತಾಡಿದ್ದನ್ನೇಈಗ ಕನ್ನಡಿಗರ ಸ್ವಾಭಿಮಾನದ ಹೋರಾಟವಾಗಿಸುವ ಪ್ರಯತ್ನ ಮಾಡಲಾಗುತ್ತಿದ್ದು ಬಾಹುಬಲಿಬಿಡುಗಡೆಯಾಗುತ್ತಿರುವ ಎಪ್ರಿಲ್ 28 ರಂದು ಬೆಂಗಳೂರು ಬಂಧ್ಗೆ ಕರೆಕೊಡಲಾಗಿದೆ. 9 ವರ್ಷದಲ್ಲಿ ಸತ್ಯರಾಜ್ ನಟಿಸಿದ ಕೆಲವಾರು ತಮಿಳುಸಿನೆಮಾಗಳು ಕರ್ನಾಟಕದಲ್ಲೂ ಪ್ರದರ್ಶನ ಕಂಡಿವೆ. ಬಾಹುಬಲಿ 1 ನೇಅವತರಣಿಕೆಯಲ್ಲಿ ಸತ್ಯರಾಜ್ ಮಾಡಿದ ಕಟ್ಟಪ್ಪನ ಪಾತ್ರವನ್ನೂಕನ್ನಡಿಗರು ತಮ್ಮ ನೆಲದಲ್ಲೇ ತಮಿಳುಹಿಂದಿ ಭಾಷೆಯಲ್ಲೂ ನೋಡಿದ್ದಾರೆ. ಆಗ ಇಲ್ಲದ ವಿರೋಧ ಬಾಹುಬಲಿಯ 2 ನೇ ಅವತರಣಿಕೆಯ ಬಿಡುಗಡೆಸಂದರ್ಭದಲ್ಲಿ ಯಾಕೆ ದೊಡ್ಡದಾಯಿತು? ಇದರಹಿಂದೆ ಕೆಲವು ಕನ್ನಡಪರ ಸಂಘಟನೆಗಳನಾಯಕರ ಹಿತಾಸಕ್ತಿಯಾದರೂ ಏನು

 ಸತ್ಯರಾಜ್ಕನ್ನಡಿಗರನ್ನು ಅವಮಾನಿಸಿದ್ದೇ ನಿಜವಾದರೆ ಅವರನ್ನು ವಿರೋಧಿಸಲಿ. ಆದರೆಬಾಹುಬಲಿಯಲ್ಲಿ ಸಂಭಾವನೆ ಪಡೆದು ಅಭಿನಯಿಸಿದ್ದನ್ನುಬಿಟ್ಟು ಸತ್ಯರಾಜಗೂ ಬಾಹುಬಲಿ ನಿರ್ಮಾಣಕ್ಕೂ ಬೇರೆಯಾವ ಸಂಬಂಧವೂ ಇಲ್ಲಾ. "ಬಾಹುಬಲಿಗೆತೊಂದರೆ ಆಗುವುದರಿಂದ ಸತ್ಯರಾಜ್ ಗೆ ಆಗುವ ನಷ್ಟವೇನೂಇಲ್ಲಾ. ಆದರೆ ಐದು ವರ್ಷತಪಸ್ಸಿನಂತೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಮತ್ತು ಕರ್ನಾಟಕದ ಹಂಚಿಕೆದಾರರಿಗೆತೊಂದರೆಯಾಗುತ್ತದೆ. ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿಯಮೇಲೆ ತೋರಿಸಬಾರದು" ಎಂದು ಬಾಹುಬಲಿ ನಿರ್ದೇಶಕಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಯಾವುದೋಒಬ್ಬ ನಟ ತನ್ನ ವ್ಯಕ್ತಿಗತಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಒಂದು ಸಿನೆಮಾವನ್ನೇ ನಿಷೇಧಿಸುವುದುಅಪೇಕ್ಷಣೀಯವಲ್ಲ. ಅನಗತ್ಯವಾಗಿ ಕನ್ನಡಿಗರ ಭಾವನೆಗಳನ್ನು ಬಡಿದೆಬ್ಬಿಸಿ ಭಾಷಾ ದ್ವೇಷ ಹೆಚ್ಚಿಸುವುದುಅಕ್ಷಮ್ಯ. ಹಾಗೆ ನೋಡಿದರೆ ಕಾವೇರಿನೀರು ಹಂಚಿಕೆಯ ವಿವಾದದ ಹೋರಾಟತೀವ್ರಗೊಂಡಾಗ ಟೌನ್ ಹಾಲ್ ಮುಂದೆಇದೇ ವಾಟಾಳ್ ನಾಗರಾಜ್ ಸೇರಿದಂತೆಕೆಲವು ಕನ್ನಡದ ಕಟ್ಟಾಳುಗಳು ಎಂದೆನಿಸಿಕೊಂಡವರುಜಯಲಲಿತಾ ಬಗ್ಗೆ ಅತೀ ಕೆಟ್ಟದಾಗಿಮಾತಾಡಿದರು. ತಮಿಳರ ಬಗ್ಗೆ ತುಚ್ಚವಾಗಿಗೇಲಿಮಾಡಿದರು. ಜಯಲಲಿತಾರ ಅಣಕು ಶ್ರಾದ್ಧವನ್ನೂ ಮಾಡಿದರು. ಇದೆಲ್ಲವೂ ಮಾಧ್ಯಮಗಳಲ್ಲಿ ಪ್ರಚಾರಗೊಂಡಿತು. ಇದನ್ನೇ ಮುಂದಿಟ್ಟುಕೊಂಡು ತಮಿಳಿಗರುಕನ್ನಡ ಸಿನೆಮಾಗಳನ್ನು ತಮಿಳುನಾಡಿನಲ್ಲಿ ನಿಷೇಧಿಸಬೇಕಾಗಿತ್ತು.. ಕನ್ನಡ ಸಿನೆಮಾಗಳ ನಿರ್ಮಾಣದಲ್ಲಿಯಾವ ತಮಿಳಿಗನೂ ಭಾಗ ವಹಿಸದಂತೆ ನಿರ್ಬಂಧಿಸಬಹುದಿತ್ತು. ಆದರೆ ಹಾಗೇನೂ ಆಗಲಿಲ್ಲ. ಎಂದೋಒಬ್ಬ ತಮಿಳು ಭಾಷಾ ನಟಭಾಷಾಂಧತೆಯಿಂದಾ ಕನ್ನಡಿಗರ ವಿರುದ್ಧ ಮಾತಾಡಿದನೆಂಬ ನೆಪದಲ್ಲಿಪ್ರತಿಭಟನೆ, ಬಂದ್ ಗಳನ್ನು ಮಾಡಿಸಾರ್ವಜನಿಕರಿಗೆ ತೊಂದರೆ ಕೊಡುವುದು ಭಾಷಾಭಿಮಾನದಹೆಸರಲ್ಲಿ ಕನ್ನಡಿಗರಿಗೆ ಕೊಡುವ ಅನಗತ್ಯ ಕಿರುಕುಳವಾಗಿದೆ. ಇಂತಹ ಅಕಾರಣಗಳಿಂದಲೇ ಕನ್ನಡಿಗರು ಜಗಳಗಂಟರು ಎನ್ನುವ ಆರೋಪಕ್ಕೆ ಈಡಾಗಬೇಕಿದೆ

ನಮ್ಮ ಕನ್ನಡ ಸಂಘಟನೆಗಳ ಉಟ್ಟುಓರಾಟಗಾರರಿಗೆ ನಿಜಕ್ಕೂ ಕನ್ನಡಪರ ಕಾಳಜಿಇದ್ದರೆ ಬರದಿಂದ ಕಂಗೆಟ್ಟ ಕನ್ನಡಿಗರಸಹಾಯಕ್ಕೆ ಧಾವಿಸಲಿ. ಜನರಿಗೆ ನೀರು , ಜಾನುವಾರುಗಳಿಗೆಮೇವು ಕೇಂದ್ರಗಳನ್ನು ಸ್ಥಾಪಿಸಲಿ. ಕೇಂದ್ರ ಸರಕಾರ ಹಿಂಬಾಗಿಲಿನಿಂದಹಿಂದಿ ಭಾಷೆ ಹೇರಲು ಪ್ರಯತ್ನಿಸುತ್ತಿದೆಯಲ್ಲಾಅದನ್ನು ವಿರೋಧಿಸಲಿ. ಕೇಂದ್ರ ಸರಕಾರದ ಇಲಾಖೆಗಳಲ್ಲಿಯನೌಕರಿಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಲಾಗುತ್ತಿದೆಯಲ್ಲಾ ಅದರ ಬಗ್ಗೆ ಇವರಸ್ವಾಭಿಮಾನದ ಕಿಚ್ಚು ಹೆಚ್ಚಲಿ. ಸಮಾನಶಿಕ್ಷಣ ನೀತಿಗಾಗಿ ಒತ್ತಾಯಿಸಲಿ, ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆಕನಿಷ್ಟ ಶೇಕಡಾ 50 ರಷ್ಟು ಖಡ್ಡಾಯ ನೌಕರಿಕೊಡಬೇಕೆಂದು ಪಟ್ಟು ಹಿಡಿಯಲಿ... ಕನಿಷ್ಟಸವಲತ್ತು ಹಾಗೂ ಬೆಳೆದ ಬೆಳೆಗೆಬೆಲೆ ಇಲ್ಲದೇ ದಲ್ಲಾಳಿಗಳ ಹಾವಳಿಯಿಂದತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅನ್ನದಾತನ ಸಮಸ್ಯೆಗೆ ಖಾಯಂ ಪರಿಹಾರ ದೊರಕಿಸಲುರಾಜ್ಯ ಹಾಗೂ ಕೇಂದ್ರ ಸರಕಾರಗಳವಿರುದ್ದ ಸ್ವಾಭಿಮಾನದ ಸಿಟ್ಟು ಸ್ಪೋಟಗೊಳ್ಳಲಿ. ಇವೆಲ್ಲಾಮೂಲಭೂತ ಆತಂಕಗಳನ್ನು ನಿರ್ಲಕ್ಷಿಸಿ ಯಾವುದೊ ಭಾಷೆಯ ನಟತರಲೆ ಮಾತಾಡಿದ್ದಕ್ಕೆ ಬೆಂಗಳೂರನ್ನೇ ಬಂದ್ ಮಾಡುವುದರಲ್ಲಿ ಯಾವುದೇತಾತ್ವಿಕತೆ ಇಲ್ಲಾ. ಅಗತ್ಯತೆ ಇರುವುದನ್ನುಬಿಟ್ಟು ಇಲ್ಲದಿರುವುದನ್ನೇ ದೊಡ್ಡದು ಮಾಡುವ ಅಗತ್ಯವೂಇಲ್ಲಾ. ಹೀಗೆ ಮಾಡಿದಾಗಲೆಲ್ಲಾ ಕನ್ನಡಿಗರಿಗೆಇಂತಹ ಕನ್ನಡ ಸಂಘಟನೆಗಳ ಮೇಲೆಸಂದೇಹಗಳು ಕಾಡುತ್ತವೆ. ಬಾಹುಬಲಿ ನಿರ್ಮಾಪಕರು ಹಾಗೂಹಂಚಿಕೆದಾರರ ಜೊತೆಗೆ ಡೀಲ್ ಕುದುರಿಸಲು ರೀತಿ ಒತ್ತಡಸೃಷ್ಟಿಸಲಾಗುತ್ತದೆ ಎನ್ನುವ ಆರೋಪಕ್ಕೆ ರೆಕ್ಕೆಪುಕ್ಕಗಳು ಬೆಳೆಯುತ್ತವೆ. ಕನ್ನಡಿಗರು ಜಗಳಗಂಟರು ಎನ್ನುವ ಅನ್ಯಭಾಷೀಯರ ದೂಷಣೆಗೆನಾವೇ ಸಾಕ್ಷಗಳನ್ನು ಒದಗಿಸಿದಂತಾಗುತ್ತದೆ.
ಹೀಗೆಬಂದ್ ಮಾಡುವುದರಿಂದ ಸತ್ಯರಾಜ್ ಹಾಗೂ ತಮಿಳರಿಗೆ ಏನೇನೂನಷ್ಟವೆಂಬುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸತ್ಯರಾಜನಂತಹಅಪ್ರಭುದ್ದ ಭಾಷಾಂಧ ವ್ಯಕ್ತಿ ತಮಿಳುನಾಡಿನಸ್ವಾಭಿಮಾನದ ಸಂಕೇತವಾಗಿಬಿಡುತ್ತಾನೆ. ಜಗತ್ತಿನಾದ್ಯಂತ ಸಾವಿರ ಕೋಟಿ ವ್ಯವಹಾರಮಾಡುವ ಬಾಹುಬಲಿ ನಿರ್ಮಾಪಕರಿಗೂ ಕರ್ನಾಟಕದಿಂದಬರಬಹುದಾದ ಮೂವತ್ತು ಕೋಟಿ ಲಾಭಬರದೇ ಹೋದರೂ ಅಂತಹ ನಷ್ಟವೇನಿಲ್ಲಾ. ಆದರೆ ಹರತಾಳ ಬಂಧ್ ಗಳಿಂದಾಗಿಕನ್ನಡಿಗರ ಒಂದು ದಿನದ ಬದುಕುಅಸ್ತವ್ಯಸ್ತವಾಗುತ್ತದೆ. ಜಗತ್ತೇ ನೋಡಬಹುದಾದ ಬಾಹುಬಲಿನೋಡಬಯಸುವ ಕರ್ನಾಟಕದ ಜನರಿಗೆ ಸಿನೆಮಾನೋಡಲು ಸಾಧ್ಯವಾಗದೇ ಹೋಗುತ್ತದೆ. ಇಂತಹ ಸಣ್ಣ ಸಣ್ಣವಿಚಾರಗಳು ಗೊತ್ತಿದ್ದರೂ ಅನಗತ್ಯ ಬಂದ್ ಗೆಕರೆಕೊಡುವ ವಾಟಾಳ್ ನಾಗರಾಜರಂತಹ ವೃತ್ತಿಪರಹೋರಾಟಗಾರರು ತಮ್ಮ ಗಮನವನ್ನು ಕನ್ನಡಿಗರಬೇರೆ ಅಗತ್ಯ ಸಮಸ್ಯೆಗಳತ್ತ ತಿರುಗಿಸಿದರೆಕನ್ನಡಿಗರ ಹಿತರಕ್ಷಣೆಗೆ ಸಹಾಯವಾಗುತ್ತದೆ

ಅಂತೂ ಇಂತೂ ಸತ್ಯರಾಜ್ ಬಾಹುಬಲಿ ನಿರ್ಮಾಪಕರು ಹಾಗೂ ನಿರ್ದೇಶಕರ ಮನವಿಯನ್ನು ಪರಿಗಣಿಸಿ ಕ್ಷಮಾಪಣೆಯನ್ನು ಕೇಳಿದ್ದಾರೆ. ಕನ್ನಡ ಪರ ಹೋರಾಟದ ಗುತ್ತಿಗೆದಾರರಾದ  ವಾಟಾಳ್ ನಾಗರಾಜ್ ಮತ್ತು ಇತರರು ತಮ್ಮ ಒಂದಂಶದ ಬ್ಲಾಕ್ಮೇಲ್ ಅಜೆಂಡಾ ಯಶಸ್ವಿಯಾಗಿದ್ದಕ್ಕೆ ಬಂದ್ ಪ್ರಹಸನವನ್ನು ನಿಲ್ಲಿಸಿ ಬಾಹುಬಲಿ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ಜೊತೆಗೆ ತಮ್ಮ 9 ವರ್ಷದ ಹಿಂದಿನ ವ್ಯಯಕ್ತಿಕ ದ್ವೇಷಕ್ಕೆ  ವಾಟಾಳ್ ಈಗ ಸೇಡು ತೀರಿಸಿಕೊಂಡು ಸಂತೃಪ್ತರಾಗಿದ್ದಾರೆ. ಈ ನಡುವೆ ಯಾವ್ಯಾವ ಹಿಡನ್ ಡೀಲ್ ಗಳು ನಡೆದವೋ ಗೊತ್ತಿಲ್ಲಾ. ಆದರೆ.. ಈ ಕನ್ನಡಪರ ಸ್ವಘೋಷಿತ ನಾಯಕರಿಂದಾಗಿ ಕನ್ನಡಿಗರು ಜಗಳಗಂಟರು ಎನ್ನುವ ಆರೋಪವಂತೂ ಮತ್ತೊಮ್ಮೆ ಸಾಬೀತಾಯಿತು ಹಾಗೂ ಕೆಲವು ಕನ್ನಡಪರ ಸಂಘಟನೆಗಳು ರೋಲ್ ಕಾಲ್ ಗಾಗಿಯೇ ಹೋರಾಟ ಮಾಡುತ್ತವೆ ಎನ್ನುವ ಸಂದೇಹ ಮತ್ತೊಮ್ಮೆ ಬಲಯುತವಾಯಿತು.     

ಇಷ್ಟಕ್ಕೂ ಕನ್ನಡದ ಸ್ವಾಭಿಮಾನ ಕೇವಲಭಾಷೆಯಲ್ಲಿರದೇ ಕನ್ನಡಿಗ ಸ್ವಾವಲಂಬಿಯಾಗಿ ಬದುಕುವುದರಲ್ಲಿದೆಎಂಬ ಸತ್ಯ ಅರಿವಾದ ದಿನಕನ್ನಡಪರ ಸಂಘಟನೆಗಳ ಅಸ್ತಿತ್ವ ಸಾರ್ಥಕವಾಗುತ್ತದೆ..  ಜೈಕರ್ನಾಟಕ...

- ಶಶಿಕಾಂತಯಡಹಳ್ಳಿ




ಹೀಗಾಗಿ ಲೇಖನಗಳು ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...

ಎಲ್ಲಾ ಲೇಖನಗಳು ಆಗಿದೆ ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು... ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು... ಲಿಂಕ್ ವಿಳಾಸ https://dekalungi.blogspot.com/2017/04/87.html

Subscribe to receive free email updates:

0 Response to "ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು..."

ಕಾಮೆಂಟ್‌‌ ಪೋಸ್ಟ್‌ ಮಾಡಿ