ಶೀರ್ಷಿಕೆ : news date:2-4-2019
ಲಿಂಕ್ : news date:2-4-2019
news date:2-4-2019
ಲೋಕಸಭಾ ಚುನಾವಣೆ:
ಐದನೇ ದಿನದಂದು ಮೂವರು ಅಭ್ಯರ್ಥಿಗಳಿಂದ 04 ನಾಮಪತ್ರಗಳು ಸಲ್ಲಿಕೆ
****************************************************************
ಕಲಬುರಗಿ,ಏ.02.(ಕ.ವಾ.)-ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರಕ್ಕೆ 2019ರ ಏಪ್ರಿಲ್ 23ರಂದು ನಡೆಯುವ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಐದನೇ ದಿನವಾದ ಮಂಗಳವಾರದಂದು ಮೂವರು ಅಭ್ಯರ್ಥಿಗಳಿಂದ 04 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ರಮೇಶ ಭೀಮಾಸಿಂಗ್ ಪಕ್ಷೇತರದಿಂದ 01 ನಾಮಪತ್ರ ಹಾಗೂ ರಾಜಕುಮಾರ ಗೋಪಿನಾಥ ಭಾರತೀಯ ಬಹುಜನ ಕ್ರಾಂತಿ ದಳ ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಶರಣಬಸಪ್ಪ ಮಲ್ಲಿಕಾರ್ಜುನ ಅವರು ಎಸ್‍ಯುಸಿಐ(ಸಿ) ಪಕ್ಷದಿಂದ ಇಂದು ಮತ್ತೊಮ್ಮೆ 02 ನಾಮಪತ್ರಗಳು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ 04 ರಂದು ಕೊನೆಯ ದಿನವಾಗಿದೆ. ಏಪ್ರಿಲ್ 05 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನ ಏಪ್ರಿಲ್ 08 ಇರುತ್ತದೆ. ಇಲ್ಲಿಯವರೆಗೆ ಒಟ್ಟು 8 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಸಿದಂತಾಗಿದೆ.

ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅವಶ್ಯಕ
*************************************
ಕಲಬುರಗಿ,ಏ.02.(ಕ.ವಾ.)-ಸದಾ ಒತ್ತಡದಲ್ಲಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿದಿನ ಬೆಳಗಿನ ಹೊತ್ತು ನಿಯಮಿತವಾಗಿ ಕನಿಷ್ಠ ಪಕ್ಷ 30 ನಿಮಿಷಗಳ ಕಾಲ ವಾಕಿಂಗ್ ಅಥವಾ ಕಸರತ್ತು ಮಾಡುವ ರೂಢಿ ಬೆಳೆಸಿಕೊಂಡಲ್ಲಿ ಜೀವನ ಪರ್ಯಂತ ಆರೋಗ್ಯವಾಗಿರಬಹುದಾಗಿದೆ ಎಂದು ನಿವೃತ್ತ ಡಿ.ಎ.ಆರ್. ಎ.ಆರ್.ಎಸ್.ಐ. ಅಪ್ಸರ್ ಅಲಿ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪರೇಡ್ ವಂದನೆ ಸ್ವೀಕರಿಸಿದ ನಂತರ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿ, ಇಂದು ಪೊಲೀಸ್ ಇಲಾಖೆಯ ಸುಮಾರು 10 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಲಾಗಿದೆ. ಕವಾಯತು ಪ್ರದರ್ಶನ ತುಂಬಾ ಆಕರ್ಷಕವಾಗಿದ್ದು, ಶಿಸ್ತಿನಿಂದ ಕೂಡಿತ್ತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟೀನ್ ಮಾರ್ಬನ್ಯಾಂಗ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಧ್ಯ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಲ್ಲಿ ಒಟ್ಟು 6 ಲಕ್ಷ ರೂ.ಗಳು ಜಮೆಯಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ 20 ಸಾವಿರ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. 2016-17 ಮತ್ತು 2017-18ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಡಿಯಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ವೆಚ್ಚಕ್ಕಾಗಿ 30 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಕಚೇರಿಯೊಂದಿಗೆ ವ್ಯವಹರಿಸಲಾಗಿದೆ ಎಂದರು.
ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಲ್ಯಾಣ ಚಟುವಟಿಕೆಗಳಿಗಾಗಿ ಈಗಾಗಲೇ ನಿವೇಶನ ಮಂಜೂರಾತಿ ಮಾಡಲಾಗಿದೆ. ಜಿಲ್ಲೆಯ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ಕೂಡಾ ಕ್ಯಾಂಟೀನ್ ಸೌಲಭ್ಯ ನೀಡಲಾಗಿದ್ದು, ಈಗಾಗಲೇ 263 ಪೊಲೀಸ್ ಕ್ಯಾಂಟೀನ್ ಕಾರ್ಡುಗಳನ್ನು ಒದಗಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿಯವರ ಕ್ಷೇಮಾಭಿವೃದ್ಧಿ ದೃಷ್ಟಿಕೋನದಿಂದ ಪೊಲೀಸ್ ಕ್ಯಾಂಟೀನ್, ಹಿಟ್ಟಿನ ಗಿರಣಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸ್ಥಾನದಲ್ಲಿ ನೂತನವಾಗಿ 120 ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಸಿಬ್ಬಂದಿಗಳಿಗೆ ಹಂಚಿಕೆ ಮಾಡಲಾಗಿದೆ. ಬೃಹತ್ ಪ್ರಮಾಣದ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಮಕ್ಕಳ ಪಾರ್ಕ್, ವಾಕಿಂಗ್ ಟ್ರ್ಯಾಕ್, ಅಕ್ಯೂಫ್ರೇಶರ್ ಪಾಥವೇ, ಅತ್ಯಾಧುನಿಕ ವ್ಯಾಯಾಮ ಶಾಲೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗಳಾದ ಪಿ.ಐ. ನಾರಾಯಣಪ್ಪ, ಎಸ್.ಆರ್.ಎಸ್.ಐ. ಚಂದಪ್ಪ, ಹೆಚ್.ಸಿ. ಗಳಾದ ಪರುತಪ್ಪಾ, ವೀರಭದ್ರಪ್ಪ, ಮಹ್ಮದ್ ಅಬ್ದುಲ್ ಸತ್ತಾರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಮನೀಷ ಖರ್ಬಿಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್, ಐಎಎಸ್ ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ನಿವೃತ್ತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಖಾಯಂ ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಿ
********************************************************
ಕಲಬುರಗಿ,ಏ.02.(ಕ.ವಾ.)-ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗದ ವಿವಾದಗಳನ್ನು ತ್ವರಿತ ವಿಚಾರಣೆ ಮೂಲಕ ನ್ಯಾಯ ಒದಗಿಸಲು ರಾಜ್ಯದ 6 ಕಡೆ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಹೇಳಿದರು.
ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಖಾಯಂ ಜನತಾ ಅದಾಲತ್ ಅಧ್ಯಕ್ಷರು ಹಾಗೂ ಜಿಲ್ಲಾ ಮಟ್ಟದ ಪತ್ರಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಖಾಯಂ ಜನತಾ ನ್ಯಾಯಾಲಯದ ಸ್ಥಾಪನೆ ಹಾಗೂ ಅದರ ಉದ್ದೇಶದ ಬಗ್ಗೆ ವಿವರಿಸಿದ ಅವರು 2004ರಲ್ಲಿಯೆ ಖಾಯಂ ಜನತಾ ನ್ಯಾಯಾಲಯಗಳು ಸ್ಥಾಪನೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಇದರ ಸದ್ಬಳಕೆಯಾಗುತ್ತಿಲ್ಲ. ಇದಕ್ಕೆ ಪ್ರಚಾರದ ಕೊರತೆಯೂ ಒಂದು ಕಾರಣವಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಈ ನಿಟ್ಟಿನಲ್ಲಿ ನ್ಯಾಯವಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಖಾಯಂ ಜನತಾ ನ್ಯಾಯಾಲಯದ ಸ್ಥಾಪನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಕಲಬುರಗಿ ಸೇರಿದಂತೆ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಬೆಳಗಾವಿಯಲ್ಲಿ ಖಾಯಂ ಜನತಾ ನ್ಯಾಯಾಲಯಗಳು ಸ್ಥಾಪಿಸಲಾಗಿದೆ. ಇಲ್ಲಿ ಸಾರ್ವಜನಿಕ ಸೇವೆಗಳಾದ ಪ್ರಯಾಣಿಕ ಹಾಗೂ ಸರಕು ಸಾಗಾಣಿಕೆ ಸೇವೆ (ರೈಲ್ವೆ ಸಾಗಣೆ ಹೊರತುಪಡಿಸಿ), ಅಂಚೆ, ತಂತಿ, ದೂರವಾಣಿ, ವಿದ್ಯುತ್, ನೀರು ಸರಬರಾಜು, ನೈರ್ಮಲ್ಯ, ವಿಮಾ ಸೇವೆ, ಆಸ್ಪತ್ರೆ, ಔಷಧಾಲಯ, ಬ್ಯಾಂಕು, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ಹಣಕಾಸು ಸಂಸ್ಥೆಗಳ ಸೇವೆಗಳಲ್ಲಿ ತೊಂದರೆಗಳಾದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದಾಗಿದೆ. ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಾಗೂ ಹಣಕಾಸು ಸಂಸ್ಥೆಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ಕೋಟಿ ರೂ. ವರೆಗೂ ಈ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲು ಅವಕಾಶವಿದೆ. 1 ಕೋಟಿ ರೂ ಮೇಲ್ಪಟ್ಟಿದಲ್ಲಿ ಅದನ್ನು ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿಯೆ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಸಂಜೀವಕುಮಾರ ಹಂಚಾಟೆ ತಿಳಿಸಿದರು.
ಇಲ್ಲಿ ಎರಡು ಪಕ್ಷಗಾರರಿಗೆ ಮೊದಲು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಲು ಪ್ರಥಮಾದ್ಯತೆ ನೀಡಲಾಗುತ್ತದೆ. ಸಹಜ ನ್ಯಾಯ, ಸಮನ್ಯಾಯ ತತ್ವವನ್ನು ಇಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ರಾಜಿ ಸಂಧಾನ ವಿಫಲವಾದಲ್ಲಿ ಜನತಾ ನ್ಯಾಯಾಲಯವು ಸಾಕ್ಷಿಗಳನ್ನು ಪಡೆದು ವಿಚಾರಣೆ ನಡೆಸಿ 2-3 ತಿಂಗಳಲ್ಲಿಯೆ ಐತೀರ್ಪು ನೀಡುತ್ತದೆ. ಇಲ್ಲಿ ನೀಡಲಾಗುವ ಐತೀರ್ಪನ್ನು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಮೂಲಕ ಮಾತ್ರ ಅಪೀಲು ಮಾಡಲು ಅವಕಾಶವಿದ್ದು, ಇನ್ನೀತರ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುವುದಿಲ್ಲ ಎಂದರು.
ಕೋರ್ಟ ಪರಿಸರವಿಲ್ಲವಾದರೂ, ಕೋಟ್‍ನಂತೆ ಕಾರ್ಯನಿರ್ವಹಣೆ:- ಖಾಯಂ ಜನತಾ ನ್ಯಾಯಾಲಯವು ಕೋರ್ಟ್ ಪರಿಸರವಿಲ್ಲವಾದರು ಕೋರ್ಟ್‍ನಂತೆ ಕಾರ್ಯನಿರ್ವಹಿಸುತ್ತದೆ. ರಾಜಿ ಸಂಧಾನ ಒಪ್ಪದಿದ್ದಾದ ಸಾಕ್ಷಿಗಳನ್ನು ವಿಚಾರಣೆ ನಡೆಸಿ ತನ್ನ ಐತೀರ್ಪು ನೀಡುತ್ತದೆ. ಬಿಳಿ ಹಾಳೆ ಮೇಲೆ ಖಾಯಂ ಜನತಾ ನ್ಯಾಯಾಲಯಕ್ಕೆ ಮುಕ್ತವಾಗಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ. ಯಾವುದೇ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ನ್ಯಾಯಾಲಯದಲ್ಲಿರುವ್ಪನೇಕ ಕಟ್ಟಪ್ಪಣೆಗಳು ಇಲ್ಲಿರುವುದಿಲ್ಲ. ಜಿಲ್ಲಾ ನ್ಯಾಯಾಧೀಶರು ಅಥವಾ ನಿವೃತ್ತ ಜಿಲ್ಲಾ ನ್ಯಯಾಧೀಶರನ್ನು ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ಸಾಕಷ್ಟು ಅನುಭವ ಇರುವ ಇಬ್ಬರು ವ್ಯಕ್ತಿಗಳನ್ನು ನ್ಯಾಯಾಲಯದ ಇತರೆ ಸದಸ್ಯರಾಗಿರುತ್ತಾರೆ.
ಆನ್‍ಲೈನ್ ಮೂಲಕ ಅರ್ಜಿ ಪಡೆಯಲು ಕ್ರಮ:- ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿದ ಬಹುತೇಕ ಪತ್ರಕರ್ತರು 4-5 ಜಿಲ್ಲೆಗಳ ವ್ಯಾಪ್ತಿಗೆ ಒಂದರಂತೆ ರಾಜ್ಯದ 6 ಕಡೆ ಮಾತ್ರ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. ನ್ಯಾಯಾಲಯ ಕೇಂದ್ರಸ್ಥಾನ ಇಲ್ಲದ ಜಿಲ್ಲೆಯ ಸಾರ್ವಜನಿಕರು ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನೂರಾರು ಕಿ.ಮಿ.ದಿಂದ ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಅವರು ಮುಂದಿನ ದಿನಗಳಲಿ ಆನ್‍ಲೈನ್ ಮೂಲಕವು ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ಜಯಪ್ರಕಾಶ ಇದ್ದರು. ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕಲಬುರಗಿ ಜಿಲ್ಲೆಯ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಎಸ್.ಎಂ.ಪಾಟೀಲ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಸದಸ್ಯ ಕಾರ್ಯದರ್ಶಿ ಜಗದೀಶ ಶೆಟ್ಟರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು, ಪತ್ರಕರ್ತರು ಭಾಗವಹಿಸಿದ್ದರು.

ಏಪ್ರಿಲ್ 3ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ,ಏ.02.(ಕ.ವಾ.)-ಜೆಸ್ಕಾಂ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ 11.ಕೆ.ವಿ. ಜಯನಗರ, ಜೆ.ಜಿ.ಹೆಚ್., ಗೋದುತಾಯಿ ನಗರ ಹಾಗೂ ಆಳಂದ ಕಾಲೋನಿ ಫೀಡರಗಳ ವ್ಯಾಪ್ತಿಯಲ್ಲಿ ಬುಧವಾರ ಏಪ್ರಿಲ್ 3ರಂದು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ಜಯನಗರ ಫೀಡರ್: ಜಯನಗರ, ಓಕಳಿ ಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಅರಿಯಂತ ನಗರ, ಎನ್.ಜಿ.ಓ. ಕಾಲೋನಿ, ಸೂರ್ಯ ನಗರ, ಡಾಕ್ಟರ್ ಕಾಲೋನಿ, ತೇಲಕರ ಲೇಔಟ್, ಪೂಜಾ ಕಾಲೋನಿ, ತೇಲಕರ ಲೇಔಟ್, ಕುಸುನೂರ ಜಿ.ಡಿ.ಎ.ಲೇಔಟ್, ವಿಶ್ವೇಶ್ವರಾಥ್ಯ ಕಾಲೋನಿ, ಆಂಜನೇಯ ನಗರ, ಸಂತೋಷ ಹೋಟೆಲ್, ಅಣ್ಣಮ್ಮಾ ನಗರ, ಭಾಗ್ಯ ನಗರ, ಡೆಂಟಲ್ ಕಾಲೇಜು ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಜಿ.ಜಿ.ಹೆಚ್. ಫೀಡರ್: ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಜಯದೇವ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಎಂ.ಆರ್.ಎಂ.ಸಿ. ಕಾಲೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಗೋದುತಾಯಿ ನಗರ ಫೀಡರ್: ಸಿ.ಐ.ಬಿ. ಕಾಲೋನಿ, ಶಕ್ತಿ ನಗರ, ಗೋದುತಾಯಿ ನಗರ, ಭಾಗ್ಯವಂತಿ ನಗರ, ಜಿ.ಡಿ.ಎ. ಲೇಔಟ್, ಘಾಟಗೆ ಲೇಔಟ್, ಧರಿಯಾಪುರ, ರಹೆಮತ್ ನಗರ, ಪಿ.ಡಬ್ಲೂ.ಡಿ. ಕ್ವಾರ್ಟರ್ಸ್, ಎನ್.ಜಿ.ಓ. ಕಾಲೋನಿ (ರೈಲ್ವೆ ಟ್ರ್ಯಾಕ್), ದತ್ತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಆಳಂದ ಕಾಲೋನಿ ಫೀಡರ್: ಚಿಂಚೋಳಿ ಲೇಔಟ್, ಚೊರ ಬಜಾರ, ಫೀಲ್ಟರ್ ಬೆಡ್ , ಚೆಕ್ ಪೋಸ್À್ಟ, ಶಿವಾ ದಾಲ್‍ಮಿಲ್ , ರಾಮತೀರ್ಥ, ರಾಣೇಶ ಪೀರ್ ದರ್ಗಾ, ವಿಶ್ವರಾಧ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯ್ಯೋಧ್ಯಾ ನಗರ, ಲಕ್ಷ್ಮೀ ನಗರ, ಎಂ.ಜಿ. ಟಿ.ಟಿ, ಆಶ್ರಯ ಕಾಲೋನಿ, ದುಬೈ ಕಾಲೋನಿ, ಅಹ್ಮದ ನಗರ, ಫಿ.ಎಫ್ ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕಸ್ತೂರಿ ನಗರ, ಖಾದ್ರಿ ಚೌಕ್, ಸ್ವರ್ಗೆಶ ನಗರ, ಕಡಗಂಚಿ ಮಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಹೀಗಾಗಿ ಲೇಖನಗಳು news date:2-4-2019
ಎಲ್ಲಾ ಲೇಖನಗಳು ಆಗಿದೆ news date:2-4-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news date:2-4-2019 ಲಿಂಕ್ ವಿಳಾಸ https://dekalungi.blogspot.com/2019/04/news-date2-4-2019.html
0 Response to "news date:2-4-2019"
ಕಾಮೆಂಟ್ ಪೋಸ್ಟ್ ಮಾಡಿ