news and photo Date: 29--04--2019

news and photo Date: 29--04--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo Date: 29--04--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo Date: 29--04--2019
ಲಿಂಕ್ : news and photo Date: 29--04--2019

ಓದಿ


news and photo Date: 29--04--2019

ಭಾರತೀಯ ಸೇನೆ: ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ್ಯಾಲಿ
**************************************************************
ಕಲಬುರಗಿ,ಏ.29.(ಕ.ವಾ.)-ಭಾರತೀಯ ಸೇನೆಯಲ್ಲಿ 100 ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೊಲೀಸ್) ಹುದ್ದೆಗಳ ಭರ್ತಿಗಾಗಿ (ಂmbಚಿಟಚಿ, ಐuಛಿಞಟಿoತಿ, ಎಚಿbಚಿಟಠಿuಡಿ, ಃಚಿಟಿgಚಿಟoಡಿe ಚಿಟಿಜ Shiಟಟoಟಿg) ಅಂಬಾಲಾ, ಲಕ್ನೋ, ಜಬಲಪೂರ್, ಬೆಂಗಳೂರು ಹಾಗೂ ಶಿಲ್ಲಾಂಗ್‍ಗಳಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈಗಾಗಲೇ 2019ರ ಏಪ್ರಿಲ್ 25 ರಿಂದ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ನೋಂದಣಿ ಪ್ರಾರಂಭವಾಗಿದೆ. ನೋಂದಣಿ ಮಾಡಿಕೊಳ್ಳಲು 2019ರ ಜೂನ್ 8 ಕೊನೆಯ ದಿನವಾಗಿದೆ. ಅಭ್ಯರ್ಥಿಗಳಿಗೆ ರ್ಯಾಲಿ ನಡೆಯುವ ದಿನಾಂಕ, ಸ್ಥಳ, ಸಮಯದ ವಿವರವನ್ನು ನೋಂದಾಯಿತ ಇ-ಮೇಲ್ ಮೂಲಕ ಹಾಗೂ ಅಡ್ಮಿಟ್ ಕಾರ್ಡ್‍ನಲ್ಲಿ ತಿಳಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್‍ನಲ್ಲಿ ತಿಳಿಸಿದಂತೆ ದಿನಾಂಕ, ಸಮಯ ಹಾಗೂ ಸ್ಥಳದಲ್ಲಿ ಹಾಜರಿರಬೇಕು.
ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 45 ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 33 ರಷ್ಟು ಅಂಕಗಳನ್ನು ಗಳಿಸಿರಬೇಕು. ವಯೋಮಿತಿ 17ಳಿ ವರ್ಷದಿಂದ 21 ವರ್ಷದೊಳಗಿರಬೇಕು. ಅಂದರೆ 1998ರ ಅಕ್ಟೋಬರ್ 1 ರಿಂದ 2002ರ ಏಪ್ರಿಲ್ 1ರ ನಡುವೆ ಜನಿಸಿರಬೇಕು. ಕನಿಷ್ಠ 142 ಸೆಂ.ಮೀ. ಎತ್ತರ ಹೊಂದಿರಬೇಕು. ನೇಮಕಾತಿ ರ್ಯಾಲಿಯ ಷರತ್ತು, ನಿರ್ಬಂಧನೆ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಸೇನಾ ಕಚೇರಿಯ ದೂರವಾಣಿ ಸಂಖ್ಯೆ 011-26173840 ನ್ನು ಅಥವಾ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ವೆಬ್‍ಸೈಟ್‍ನ್ನು ಸÀಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇ 3 ರಿಂದ ಆಹಾರ ಅದಾಲತ್
*****************************
ಕಲಬುರಗಿ,ಏ.29.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಆಯ್ದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ, ಪಡಿತರ ವಿತರಣೆ, ಅಡುಗೆ ಅನಿಲ ಸಮಸ್ಯೆಗಳು ಸೇರಿದಂತೆ ಗ್ರಾಹಕರ ಕುಂದುಕೊರತೆ ಆಲಿಸಲು 2019ರ ಮೇ ಮಾಹೆಯಲ್ಲಿ ಆಹಾರ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಲಬುರಗಿ ಜಿಲ್ಲೆಯ ಹಿರಿಯ ಉಪನಿರ್ದೇಶಕ ಡಾ.ರಾಮೇಶ್ವರಪ್ಪ ತಿಳಿಸಿದ್ದಾರೆ.
ಆಹಾರ ಅದಾಲತ್ ನಡೆಯುವ ದಿನಾಂಕ, ತಾಲೂಕು ಮತ್ತು ಪಡಿತರ ಅಂಗಡಿಗಳ ವಿವರ ಇಂತಿದೆ. ಮೇ 03: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಅಫಜಲಪುರ ತಾಲೂಕಿನ ಕರಜಗಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 67,68ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಮಾಶಾಳ ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ರಲ್ಲಿ. ಮೇ 08: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿಂಚೋಳಿ ತಾಲೂಕಿನ ಹೊಡೆಬೀರನಹಳ್ಳಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 02 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಸೈದಾಪುರ ನ್ಯಾಯ ಬೆಲೆ ಅಂಗಡಿ ಸಂಖ್ಯೆ 84 ರಲ್ಲಿ ಆಹಾರ ಅದಾಲತ್‍ನ್ನು ಏರ್ಪಡಿಸಲಾಗಿದೆ.
ಮೇ 10: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸೇಡಂ ತಾಲೂಕಿನ ಕೋಲಕುಂದಾ ನ್ಯಾಯ ಬೆಲೆ ಅಂಗಡಿ ಸಂಖ್ಯೆ 27 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಮದನಾ ನ್ಯಾಯ ಬೆಲೆ ಅಂಗಡಿ ಸಂಖ್ಯೆ 28 ರಲ್ಲಿ. ಮೇ 13 ರಂದು: ಕಲಬುರಗಿ ಗ್ರಾಮಾಂತರ ತಾಲೂಕಿಗೆ ಸಂಬಂಧಿಸಿದಂತೆ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಮಲಾಪುರ ನ್ಯಾಯ ಬೆಲೆ ಅಂಗಡಿ ಸಂಖ್ಯೆ 1 ಹಾಗೂ ಗ್ರಾಮದಲ್ಲಿ ಉಳಿದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 2,3 ಮತ್ತು 4ರಲ್ಲಿ ಏರ್ಪಡಿಸಲಾಗಿದೆ.
ಮೇ 14: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರ ತಾಲೂಕಿಗೆ ಸಂಬಂಧಿಸಿದ ಖಾಜಾ ಮೈನೋದ್ದೀನ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ 202 ಹಾಗೂ ಗಂಜ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ 188ರಲ್ಲಿ ಹಾಗೂ ಮೇ 15: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆಳಂದ ತಾಲೂಕಿನ ಲಾಡ ಚಿಂಚೋಳಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 63 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಡಗಂಚಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 34, 93 ರಲ್ಲಿ ಆಹಾರ ಅದಾಲತ್‍ನ್ನು ಏರ್ಪಡಿಸಲಾಗಿದೆ.
ಮೇ 17: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಜೇವರ್ಗಿ ತಾಲೂಕಿನ ಸೊನ್ನ ನ್ಯಾಯ ಬೆಲೆ ಅಂಗಡಿ ಸಂಖ್ಯೆ 56 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಮುತ್ತಕೋಡ ನ್ಯಾಯ ಬೆಲೆ ಅಂಗಡಿ ಸಂಖ್ಯೆ 55 ರಲ್ಲಿ. ಮೇ 20: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರ ತಾಲೂಕಿಗೆ ಸಂಬಂಧಿಸಿದಂತೆ ಬಿ.ಎಸ್.ಕಣಮಸ್ ತಾರಫೈಲ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ 127ರಲ್ಲಿ ಏರ್ಪಡಿಸಲಾಗಿದೆ.
ಮೇ 21: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಶಹಾಬಾದ-ವಾಡಿ ಪಡಿತರ ತಾಲೂಕಿಗೆ ಸಂಬಂಧಿಸಿದ ವಾಡಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 170 ಮತ್ತು 179ರಲ್ಲಿ ಹಾಗೂ ಮೇ 22: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿತ್ತಾಪುರ ತಾಲೂಕಿನ ಮಾಡಬೂಳ ತಾಂಡಾ ನ್ಯಾಯ ಬೆಲೆ ಅಂಗಡಿ ಸಂಖ್ಯೆ 104 ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಾಳಗಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 113, 114 ಹಾಗೂ 115 ರಲ್ಲಿ ಏರ್ಪಡಿಸಲಾಗಿದೆ.
ಮೇ 24: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ 55, 88ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಲಿಂಗದಳ್ಳಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 67 ರಲ್ಲಿ ಹಾಗೂ ಮೇ 27: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಗ್ರಾಮಾಂತರ ತಾಲೂಕಿಗೆ ಸಂಬಂಧಿಸಿದ ಸಾವಳಗಿ (ಬಿ) ನ್ಯಾಯ ಬೆಲೆ ಅಂಗಡಿ ಸಂಖ್ಯೆ 86, 87ರಲ್ಲಿ ಏರ್ಪಡಿಸಲಾಗಿದೆ.
ಪದವಿಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು
***********************************************
ಪ್ರಾರಂಭಿಸಲು ಅರ್ಜಿ ಆಹ್ವಾನ
*************************
ಕಲಬುರಗಿ,ಏ.29.(ಕ.ವಾ)-ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದ ಜಿಲ್ಲೆಯ ಖಾಸಗಿ ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ/ ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಜಿಲ್ಲೆಯ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮುಳೇಗಾಂವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತ ಮಂಡಳಿ ಕಾಲೇಜಿನ ಪ್ರಾಂಶುಪಾಲರು ತಮ್ಮ ಕೋರಿಕೆಯನ್ನು ನಿಗದಿತ ಶುಲ್ಕ ಹಾಗೂ ನಿಗದಿತ ಚೆಕ್‍ಲಿಸ್ಟ್‍ನಲ್ಲಿ ಪೂರಕ ದಾಖಲೆ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ 2019ರ ಮೇ 8ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಮೇ 13ರಂದು ಹರಾಜಿನ ಮೂಲಕ ಮಹೇಂದ್ರ ಜೀಪ್ ಮಾರಾಟ
******************************************************
ಕಲಬುರಗಿ,ಏ.29.(ಕ.ವಾ)-ನಿರುಪಯುಕ್ತಗೊಳಿಸಿದ ಪೊಲೀಸ್ ವಾಹನ (ಮಹೇಂದ್ರ ಜೀಪ್)ವನ್ನು 2019ರ ಮೇ 13 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಾಗನಹಳ್ಳಿಯ ಪಿ.ಟಿ.ಸಿ. ಅವರಣದಲ್ಲಿ ಟೆಂಡರ್-ಕಂ-ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲಾಗುವುದೆಂದು ಕಲಬುರಗಿ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.
ಮಹೀಂದ್ರ ಜೀಪ್ ವಾಹನ ಸಂಖ್ಯೆ ಕೆಎ-01 ಜಿ-352ಇದ್ದು, ವಾಹನದ ಮಾದರಿ 1991 ಇರುತ್ತದೆ. ಠೇವಣಿ ಹಣ 5,000 ರೂ.ಗಳನ್ನು ನಿಗದಿಪಡಿಸಲಾಗಿದೆ. ಹರಾಜು ನಡೆಯುವ ದಿನಾಂಕಕ್ಕಿಂತ ಮುಂಚಿತವಾಗಿ ನಗದು ಅಥವಾ ಡಿ.ಡಿ. ರೂಪದಲ್ಲಿ ಠೇವಣಿ ಹಣವನ್ನು ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08472-298321ಗೆ ಸಂಪರ್ಕಿಸಲು ಕೋರಲಾಗಿದೆ.
ಏಪ್ರಿಲ್ 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಏ.29.(ಕ.ವಾ.)-ಜೆಸ್ಕಾಂ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ಟಿ.ವಿ. ಸ್ಟೇಶನ್ ಹಾಗೂ ಶಾಂತಿನಗರ ಫೀಡರಗಳ ವ್ಯಾಪ್ತಿಯಲ್ಲಿ 33ಕೆ.ವಿ. ಜಿಐಎಸ್ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಏಪ್ರಿಲ್ 30ರಂದು ಟಿ.ವಿ. ಸ್ಟೇಶನ್ ಫೀಡರ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಶಾಂತಿನಗರ ಫೀಡರ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ಟಿ.ವಿ.ಸ್ಟೇಶನ್ ಫೀಡರ್: ಮುನಿಂ ಸಂಘ, ಕಾಕಡೆ ಚೌಕ್, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ ಮತ್ತು ಭವಾನಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಶಾಂತಿನಗರ ಫೀಡರ್: ಎಂ.ಎಸ್.ಕೆ. ಮಿಲ್. ಎಂ.ಎಸ್.ಕೆ ಮಿಲ್ ಗೇಟ್, ಖಾದ್ರಿ ಚೌಕ್, ಮಹ್ಮದಿ ಚೌಕ್, ಗಲಿಬ್ ಕಾಲೋನಿ, ವೆಂಕಟೇಶ್ವರ ಗುಡಿ (ಎನ್.ಆರ್ ಕಾಲೋನಿ), ಅಫಜಲಪುರ ಕ್ರಾಸ್ ಪ್ರದೇಶ, ಶಾಂತಿನಗರ, ವಿದ್ಯಾನಗರ, ವಡ್ಡರ ಗಲ್ಲಿ, ಬೋರಾಬಾಯಿ ನಗರ, ಬಸವ ನಗರ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಕುರಿ-ಕೋಳಿ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ
***********************************************
ಕಲಬುರಗಿ,ಏ.29.(ಕ.ವಾ)-ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ (ಕಿಟಸರ್ಡ) ಸಂಸ್ಥೆಯಲ್ಲಿ 2019ರ ಮೇ 9 ರಿಂದ 18ರವರೆಗೆ ಹತ್ತು ದಿನಗಳ ಉಚಿತ ಕುರಿ, ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಬಿ.ಐ. ಆರ್.ಸೆಟ್ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಈ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುತ್ತದೆ. ವಯೋಮಿತಿ 18 ರಿಂದ 45 ವರ್ಷದೊಳಿಗರಬೇಕು. ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9243602888, 9886781239ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಕಿರಿಯ ಮಾರ್ಗದಾಳುಗಳಿಗೆ ತರಬೇತಿ ಕಾರ್ಯಾಗಾರ
**********************************************
ಕಲಬುರಗಿ,ಏ.29.(ಕ.ವಾ)-ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಡಿಯಲ್ಲಿ ಹೊಸದಾಗಿ ನೇಮಗೊಂಡ ಕಿರಿಯ ಮಾರ್ಗದಾಳುಗಳಿಗೆ ವಿದ್ಯುತ್ ಸುರಕ್ಷತಾ ಜಾಗೃತಿ ಅರಿವು ಮೂಡಿಸಲು ಇದೇ ಏಪ್ರಿಲ್ 25 ರಿಂದ 30 ರವರೆಗೆ ಕಲಬುರಗಿ ಹಳೆಯ ಆರ್.ಟಿ.ಓ. ಕಚೇರಿಯ ಹಿಂದುಗಡೆಯಿರುವ ಜೇಸ್ಕಾಂ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕಲಬುರಗಿ, ಸೇಡಂ, ಯಾದಗಿರ ವಿಭಾಗಗಳಿಂದ ಪಾಲ್ಗೊಂಡಿದ ಕಿರಿಯ ಮಾರ್ಗದಾಳುಗಳಿಗೆ ಜೆಸ್ಕಾಂನ ಹೆಚ್.ಆರ್.ಡಿ. ವಿಭಾಗದ ತರಬೇತಿ ಮುಖ್ಯಸ್ಥ ಅನೀಲ ಮುಗಳಿ ಅವರು ತರಬೇತಿ ನೀಡುತ್ತಿದ್ದು, ಈ ತರಬೇತಿ ಅವಧಿಯಲ್ಲಿ ಜೆಸ್ಕಾಂ ವಿದ್ಯುತ್ ಸಂಬಂಧಿಸಿದ ಕೆಲಸ ಕಾರ್ಯಗಳು ಮತ್ತು ಸಂಭವಿಸುವ ವಿದ್ಯುತ್ ಅಪಘಾತಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ವಿದ್ಯುತ್ ವಿತರಣಾ ನಿರ್ಬಂಧನೆಗಳು ಸುರಕ್ಷಾ ಸಾಮಾಗ್ರಿಗಳ ಬಳಕೆಯಿಂದ ಅಪಘಾತಗಳನ್ನು ತಡೆಯುವ ಬಗ್ಗೆ ತಿಳಿಸಲಾಗುತ್ತಿದೆ.
ಇದಲ್ಲದೇ ಮಾರ್ಗ ಮುಕ್ತಿ (ಐಅ) ಪಡೆದು ಎರಡು ಲೈನ್ ಕ್ರಾಸಿಂಗ್ ಹಾಗೂ ಬ್ಯಾಕ್ ಫಿಡಿಂಗ್ ಬಗ್ಗೆ ಮತ್ತು ಜಿ.ಓ.ಎಸ್ (ಉಔS) ತೇರದ ಬಗ್ಗೆ ಪೂರ್ಣ ಮಾಹಿತಿ ಪಡೆದು ಕೇಬಲ್ (ತಂತಿ) ಜೋಡಣೆ ಮಾಡುವುದು. ಪರಿಪೂರ್ಣ ಸುರಕ್ಷತೆಯಿಂದ ಪರಿವರ್ತಕ ಕೇಂದ್ರಗಳಲ್ಲಿ /ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಜಾಗೃತೆಯಿಂದ ಕೆಲಸ ನಿರ್ವಹಿಸುವುದು. ಸಾಮಾನ್ಯ ವಿದ್ಯುತ್ ಅಪಘಾತಗಳ ವಿಧಾನಗಳು ಮತ್ತು ಅವುಗಳನ್ನು ತಡೆಯುವಿಕೆ ಹಾಗೂ ಹಳ್ಳಿಗಳ ಜನ ಸಾಮಾನ್ಯರಲ್ಲಿ ವಿದ್ಯುತ್ ಸುರಕ್ಷತೆಯಾಗಿ ಬಳಕೆಯ ಬಗ್ಗೆ ತಿಳುವಳಿಕೆ ನೀಡಿ ಜಾನುವಾರುಗಳನ್ನು ವಿದ್ಯುತ್ ಕಂಬ ಅಥವಾ ತಂತಿಗೆ ಕಟ್ಟಬಾರದು ಜನ ಸಾಮಾನ್ಯರು ವಿದ್ಯುತ್ ಕಂಬ ಎರುವುದಾಗಲ್ಲಿ ತಂತಿ ಜೋಡಣೆಯಾಗಲ್ಲಿ ತಮ್ಮ ಸ್ವಇಚ್ಛೆಯಿಂದ ನಿರ್ವಹಿಸದಂತೆ ಜಾಗೃತಿ ವಹಿಸಿ ಮರಣಾಂತಿಕ ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವಿಕೆ ಎಂಬ ವಿಷಯಗಳ ಕುರಿತು ಇವುಗಳನ್ನು ಬೋಧಿಸಲಾಗುವುದು.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ:
********************************************
ಸಾಮಾನ್ಯ ಚುನಾವಣಾ ವೀಕ್ಷಕರ ನೇಮಕ
************************************
ಕಲಬುರಗಿ, ಏ.29.(ಕ.ವಾ) 42-ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು 42-ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ ಐ.ಎ.ಎಸ್. ಅಧಿಕಾರಿಗಳಾದ ಬಿ. ರಾಮರಾವ ಅವರನ್ನು ಸಾಮಾನ್ಯ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿದೆ ಎಂದು ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಅವರು ತಿಳಿಸಿದ್ದಾರೆ.
ಸಾಮಾನ್ಯ ಚುನಾವಣಾ ವೀಕ್ಷಕರ ಮೊಬೈಲ್ ಸಂಖ್ಯೆ 9686419305 ಇರುತ್ತದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಚುನಾವಣಾ ಪ್ರತಿದಿನ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ಸಾಮಾನ್ಯ ವೀಕ್ಷಕರನ್ನು ಭೇಟಿ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ:
********************************************
ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು
************************************
25 ಅಭ್ಯರ್ಥಿಯಿಂದ 27 ನಾಮಪತ್ರಗಳು ಸಲ್ಲಿಕೆ
*****************************************
ಕಲಬುರಗಿ,ಏ.29.(ಕ.ವಾ.). 42-ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ 2019ರ ಮೇ 19ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರÀದಂದು 25 ಅಭ್ಯರ್ಥಿಯಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಅವರು ತಿಳಿಸಿದ್ದಾರೆ.
ಇಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಗುರುಶಾಂತ ಮಲ್ಲಪ್ಪ ಪಟ್ಟೇದಾರ್ ಆಲ್ ಇಂಡಿಯಾ ಮಜ್ಲಿಸ್ ಇತಿಹಾದುಲ್ ಮುಸ್ಲೀಮೀನ್ (ಎ.ಐ.ಎಮ್.ಐ.ಎಮ್.)-01 ನಾಮಪತ್ರ, ಬಸವರಾಜ ಮಲ್ಲಯ್ಯ ಜಾತ್ಯಾತೀತ ಜನತಾ (ಎಸ್) ಪಕ್ಷದಿಂದ-01 ನಾಮಪತ್ರ, ರಮೇಶ ಭೀಮಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ-01 ನಾಮಪತ್ರ, ಅವಿನಾಶ ಉಮೇಶ ಭಾರತೀಯ ಜನತಾ ಪಕ್ಷದಿಂದ-03 ನಾಮಪತ್ರಗಳು, ಹರಿಸಿಂಗ್ ರಾಮಜಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ವಿಜಯ ಗೋವಿಂದ ಜಾಧವ ಸರ್ವ ಜನತಾ ಪಕ್ಷದಿಂದ 01 ನಾಮಪತ್ರ, ಶಿವಕುಮಾರ ಶಂಕರ ಜನತಾದಳ (ಜಾತ್ಯಾತೀತ) ಪಕ್ಷದಿಂದ 01 ನಾಮಪತ್ರ, ಸುಭಾಷ ವಿಠ್ಠಲಸಿಂಗ್ ರಾಠೋಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ-01 ನಾಮಪತ್ರ, ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ವಿಶ್ವೇಶ್ವರಯ್ಯ ತುಳಜಾರಾಮ ಭೋವಿ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ರಾಜೇಂದ್ರ ಪ್ರಸಾದ ಸಾಯಬಣ್ಣ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ತಿಪ್ಪಣ್ಣ ಒಡೆಯರಾಜ್ ಭೀಮಶಾ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಶಾಮರಾವ್ ಗಂಗಾರಾಮ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಹನುಮಂತ ರಾಮನಾಯ್ಕ ಭೀಮನಾಯ್ಕ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಗೌತಮ ಬಕ್ಕಪ್ಪ ಬಹುಜನ ಸಮಾಜವಾದಿ ಪಕ್ಷದಿಂದ 01 ನಾಮಪತ್ರ, ಮಲ್ಲಿಕಾರ್ಜುನ ನರಸಿಂಗ್‍ರಾವ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಭಾಗ್ಯ ಸಂತೋಷ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಸಂತೋಷ ಧನಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ನಾಗೇಂದ್ರಪ್ಪ ಬಸಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಮಾರುತಿ ಭೀಮಶಪ್ಪ ಬಹುಜನ ಮುಕ್ತಿ ಪಕ್ಷದಿಂದ 01 ನಾಮಪತ್ರ, ಶಾಮರಾವ ಚಂದ್ರಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಶಾಮರಾವ ಮಲ್ಲೇಶಪ್ಪ ಹೇರೂರ (ಕೆ) ಭಾರತೀಯ ರಿಪಬ್ಲಿಕ್ ಪಕ್ಷದಿಂದ 01 ನಾಮಪತ್ರ, ಪ್ರದೀಪಕುಮಾರ ಶಂಕ್ರಪ್ಪ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ, ಕೆ. ದೀಪಾ ಗಣಪತರಾವ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ ಸಲ್ಲಿಸಿದ್ದಾರೆ.
ಅದೇ ರೀತಿ ಶಿವಕುಮಾರ ಖತಲಪ್ಪ ಕೊಳ್ಳೂರು ಅವರು ಏಪ್ರಿಲ್ 22ರಂದು ಕಾಂಗ್ರೆಸ್ ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ 01 ನಾಮಪತ್ರ ಸಲ್ಲಿಸಿದ್ದಾರೆ.
ಈವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿದೆ. ಏಪ್ರಿಲ್ 30ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮೇ 2 ರಂದು ಕೊನೆಯ ದಿನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.



ಹೀಗಾಗಿ ಲೇಖನಗಳು news and photo Date: 29--04--2019

ಎಲ್ಲಾ ಲೇಖನಗಳು ಆಗಿದೆ news and photo Date: 29--04--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 29--04--2019 ಲಿಂಕ್ ವಿಳಾಸ https://dekalungi.blogspot.com/2019/04/news-and-photo-date-29-04-2019.html

Subscribe to receive free email updates:

0 Response to "news and photo Date: 29--04--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ