News and Photo Date: 26--04--2019

News and Photo Date: 26--04--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 26--04--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 26--04--2019
ಲಿಂಕ್ : News and Photo Date: 26--04--2019

ಓದಿ


News and Photo Date: 26--04--2019

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ:
********************************************
ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆ
******************************************
ಕಲಬುರಗಿ,ಏ.26.(ಕ.ವಾ.). 42-ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ 2019ರ ಮೇ 19ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ನಾಲ್ಕನೇ ದಿನವಾದ ಶುಕ್ರವಾರದಂದು ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವಿವರ ಇಂತಿದೆ. ಅಖಿಲ ಭಾರತೀಯ ಮುಸ್ಲಿಂ ಲೀಗ್ ಜಾತ್ಯಾತೀತ ಪಕ್ಷದಿಂದ ಸಂಜಯಕುಮಾರ ರೇವಣಸಿದ್ದಪ್ಪ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29ರಂದು ಕೊನೆಯ ದಿನವಾಗಿದೆ. ಏಪ್ರಿಲ್ 30ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮೇ 2 ರಂದು ಕೊನೆಯ ದಿನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಇಲ್ಲಿಯವರೆಗೆ ಒಟ್ಟು 03 ಅಭ್ಯರ್ಥಿಗಳಿಂದ 04 ನಾಮಪತ್ರಗಳು ಸಲ್ಲಿಸಿದಂತಾಗಿದೆ.
ಏಪ್ರಿಲ್ 29ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಕಲಬುರಗಿ,ಏ.26.(ಕ.ವಾ.).-ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಏಪ್ರಿಲ್ 29ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೆಳಕಂಡ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸಲಿದ್ದು, ಕಲಬುರಗಿಯ ಸಮಸ್ತ ಮೈಕ್ರೋ ಫೈನಾನ್ಸ್‍ನಲ್ಲಿ ಕಸ್ಟಮರ್ ರಿಲೇಷನ್‍ಶಿಪ್ ಆಫೀಸರ್, ಬ್ರ್ಯಾಂಚ್ ಮ್ಯಾನೇಜರ್, ಬ್ರ್ಯಾಂಚ್ ಕ್ರೆಡಿಟ್ ಮ್ಯಾನೇಜರ್ ಆಂಡ್ ಏರಿಯಾ ಮ್ಯಾನೇಜರ್ ಹುದ್ದೆಗಳಿಗೆ ಪಿ.ಯು.ಸಿ., ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 28 ವರ್ಷದೊಳಗಿರಬೇಕು.
ಕಲಬುರಗಿ ಎ.ಬಿ. ಪವರ್ಸ್ ಸಿಸ್ಟಮ್‍ನಲ್ಲಿ ಫೀಲ್ಡ್ ಸರ್ವೀಸ್ ಇಂಜಿನೀಯರ್ ಹುದ್ದೆಗೆ ಡಿಪ್ಲೋಮಾ ಆ್ಯಂಡ್ ಐಟಿಐ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಎಲೆಕ್ಟ್ರೀಕಲ್) ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಕಂಪ್ಯೂಟರ್ ಜ್ಞಾನ ಮತ್ತು ಟ್ಯಾಲಿಯಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಹೆಲ್ಪರ್, ಆಫೀಸ್ ಬಾಯ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಕಲಬುರಗಿ ಪ್ರಕೃತಿ ಚೇತನಾ ಜನ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮ ಸಂಯೋಜಕ ಹುದ್ದೆಗೆ ಪಿ.ಯು.ಸಿ., ಎ.ಎನ್.ಎಂ., ಮತ್ತು ಡಿ.ಹೆಚ್.ಐ. (ಡಿಪ್ಲೋಮಾ ಹೆಲ್ತ್ ಇನ್ಸ್‍ಪೆಕ್ಟರ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 40 ವರ್ಷದೊಳಗಿರಬೇಕು.
ಸಂದರ್ಶನದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ಭಾಗವಹಿಸಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದೋಗ ವಿನಿಮಯ ಕಚೇರಿಯನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ 08742-274846ಗೆ ಸಂಪರ್ಕಿಸಲು ಕೋರಲಾಗಿದೆ.
6ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ
*********************************************
ಕಲಬುರಗಿ,ಏ26.(ಕ.ವಾ)-ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಅಡಿಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ವಸತಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ ವಸತಿ ಶಾಲೆಗಳಲ್ಲಿ 2019-20ನೇ ಸಾಲಿಗೆ 6ನೇ ತರಗತಿಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಞಡಿeis.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಿ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
*****************************
ಕಲಬುರಗಿ,ಏ26.(ಕ.ವಾ)-ಬೆಂಗಳೂರಿನ ಡಿಸ್ಟ್ರಿಕ್ಟ್ 317ಎ ಲಯನ್ಸ್ ಸರ್ವೀಸ್ ಫೌಂಡೇಶನರವರು ಮೃತ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ ನೀಡುತ್ತಿದ್ದು, ಇದಕ್ಕಾಗಿ ಅರ್ಹ ಮೃತ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಮೃತ ಮಾಜಿ ಸೈನಿಕರ ಪತ್ನಿಯು ಮಾಹೆಯಾನ 25,000 ರೂ.ಕ್ಕಿಂತ ಕಡಿಮೆ ಕುಟುಂಬ ಪಿಂಚಣಿಯನ್ನು ಪಡೆಯುತ್ತಿರಬೇಕು. ಅರ್ಹ ಮೃತ ಮಾಜಿ ಸೈನಿಕರ ಪತ್ನಿ/ಮಕ್ಕಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ 2019ರ ಜೂನ್ 1ರ ರೊಳಗಾಗಿ ಬೆಂಗಳೂರಿನ ಡಿಸ್ಟ್ರಿಕ್ಟ್ 317ಎ ಲಯನ್ಸ್ ಸರ್ವೀಸ್ ಫೌಂಡೇಶನ್ ಇವರಿಗೆ ಸಲ್ಲಿಸಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನಸೌಧದಲ್ಲಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-225003ಗೆ ಸಂಪರ್ಕಿಸಲು ಕೋರಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು
ಬೆಣ್ಣೆತೊರಾ ಜಲಾಶಯದಿಂದ ಕಾಗಿಣಾ ನದಿಗೆ ನೀರು ಬಿಡುಗಡೆ
******************************************************
ಕಲಬುರಗಿ,ಏ26.(ಕ.ವಾ)-ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಿತ್ತಾಪುರ, ವಾಡಿ ಮತ್ತು ಶಹಾಬಾದ ಪುರಸಭೆಗಳ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಕುಡಿಯುವ ನೀರಿನ ಅಭಾವ ಪರಿಹರಿಸಲು ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಬೆಣ್ಣೆತೋರಾ ಜಲಾಶಯದಿಂದ ಕಾಗಿಣಾ ನದಿಗೆ 0.075 ಟಿ.ಎಂ.ಸಿ. ನೀರನ್ನು ಮಿತಿಗೊಳಿಸಿ ಇದೇ ಏಪ್ರಿಲ್ 27 ರಿಂದ ಮೇ 12 ರವರೆಗೆ ಪ್ರತಿದಿನ 300 ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಹೆಬ್ಬಾಳ ಹೆಣ್ಣೆತೊರಾ ಯೋಜನೆ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಬಿ.ಎಸ್.ಎನ್.ಎಲ್. 4ಜಿ ಸೇವೆ ಪ್ರಾರಂಭ:
*************************************
ಗ್ರಾಹಕರು ಸಿಮ್ ಕಾರ್ಡ್ ಬದಲಾಯಿಸಿಕೊಳ್ಳಲು ಸೂಚನೆ
**************************************************
ಕಲಬುರಗಿ,ಏ26.(ಕ.ವಾ)-ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್.) ಗುಲಬರ್ಗಾ ದೂರಸಂಪರ್ಕ ತನ್ನ ಗ್ರಾಹಕರಿಗಾಗಿ ಕಲಬುರಗಿ ನಗರದ 48 ಸ್ಥಳಗಳಲ್ಲಿ 4ಜಿ ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಸಂಬಂಧಪಟ್ಟ ಗ್ರಾಹಕರು ತಮ್ಮ ಹತ್ತಿರದ ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರಕ್ಕೆ ಹೋಗಿ 2ಜಿ, 3ಜಿ ಸಿಮ್ ಕಾರ್ಡನ್ನು ಬದಲಾಯಿಸಿ 4ಜಿ ಸಿಮ್ ಕಾರ್ಡ್‍ನ್ನು ಪಡೆದುಕೊಳ್ಳಬೇಕೆಂದು ಗುಲಬರ್ಗಾ (ಬಿ.ಎಸ್.ಎನ್.ಎಲ್.) ಜಿಲ್ಲಾ ದೂರಸಂಪರ್ಕ ಇಲಾಖೆಯ ಜಿಲ್ಲಾ ಮಹಾಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಸ್.ಎನ್.ಎಲ್. 3ಜಿ ಸೇವೆಯನ್ನು 4ಜಿಗೆ ಅಪ್‍ಗ್ರೇಡ್ ಮಾಡಲಾಗಿದೆ. 3ಜಿ ಸೀಮ್ ಕಾರ್ಡ್ ಹೊಂದಿರುವ ಗ್ರಾಹಕರು 4ಜಿ ಸೀಮ್‍ಗೆ ಅಪ್‍ಗ್ರೇಡ್ ಮಾಡಿಕೊಳ್ಳಬೇಕು. ಸೀಮ್ ಅಪ್‍ಗ್ರೇಡ್ ಮಾಡಿಕೊಳ್ಳದ ಗ್ರಾಹಕರು 2ಜಿ ಸೇವೆ ಮಾತ್ರ ಪಡೆಯಬಹುದಾಗಿದೆ. ಗ್ರಾಹಕರು ನೆಟ್‍ವರ್ಕ್‍ನ್ ಹೆಚ್ಚಿನ ವೇಗವನ್ನು ಪಡೆಯಲು ತಮ್ಮ ಹತ್ತಿರದ ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ 2019ರ ಏಪ್ರಿಲ್ 30 ರವರೆಗೆ ಉಚಿತವಾಗಿ 4ಜಿ ಸಿಮ್ ಕಾರ್ಡ್‍ನ್ನು ಪಡೆಯಬಹುದಾಗಿದೆ. ಗ್ರಾಹಕರು ಸೀಮ್ ಕಳೆದುಕೊಂಡಲ್ಲಿ ಹಾಗೂ ಹಾನಿಗೊಳಗಾದ್ದಲ್ಲಿ ಸೀಮ್ ಬದಲಿಸಲು ಹಣವನ್ನು ಪಾವತಿಸಬೇಕು.
ಗುಲಬರ್ಗಾ ನಗರ ಸೇರಿದಂತೆ ಅಫಜಲಪುರ, ಆಳಂದ, ಚಿಂಚೋಳಿ, ಸೇಡಂ, ಶಹಾಪುರ, ಶೋರಾಪುರ, ಯಾದಗಿರಿ ಪಟ್ಟಣಗಳಲ್ಲಿ ಬಿ.ಎಸ್.ಎನ್.ಎಲ್. 4ಜಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಚಿತ್ತಾಪುರ, ವಾಡಿ, ಶಹಾಬಾದ, ಜೇವರ್ಗಿ ಹಾಗೂ ಹುಣಸಗಿ ಪಟ್ಟಣಗಳಲ್ಲಿ ಶೀಘ್ರದಲ್ಲಿಯೇ 4ಜಿ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಚಿಂಚೋಳಿ ಉಪ ಚುನಾವಣೆ ಹಿನ್ನೆಲೆ:
******************************
ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ
*************************************************
- ಆರ್.ವೆಂಕಟೇಶ್ ಕುಮಾರ
ಕಲಬುರಗಿ,ಏ.26.(ಕ.ವಾ.)- ಮೇ 19ಕ್ಕೆ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಅನ್ವಯವಾಗಲಿದೆ. ಹೀಗಾಗಿ ವಿವಿಧ ಕಾರ್ಯಗಳಿಗೆ ಲೋಕಸಭಾ ಚುನಾವಣೆಗೆ ನೇಮಿಸಲಾದ ನೋಡಲ್ ಅಧಿಕಾರಿಗಳೆ ಇಲ್ಲಿಯೂ ನೋಡಲ್ ಅಧಿಕಾರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ರಾಜಕೀಯವಾಗಿ ಮಹತ್ವ ಪಡೆದುಕೊಂಡಿರುವ ಈ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಯನ್ವಯ ಎಲ್ಲಾ ನೋಡಲ್ ಅಧಿಕಾರಿಗಳು ತುಂಬಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪಕ್ಕೆ ಅವಕಾಶ ಮಾಡಕೂಡದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೇ 23ಕ್ಕೆ ಗುಲಬರ್ಗಾ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯವು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಅಂದೆ ಇಲ್ಲಿಯೆ ಚಿಂಚೋಳಿ ಉಪ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದಾದ್ಯಂತ ಕಟ್ಟಿನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಗೆ ತರಲು 12 ಫ್ಲೈಯಿಂಗ್ ಸ್ಕ್ವಾಡ್ ರಚನೆ, 10 ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಅಕ್ರಮ ತಡೆಯಲು ಎಸ್.ಎಸ್.ಟಿ. ತಂಡಗಳು, ಉಡುಗೊರೆ ಹಾಗೂ ಇನ್ನೀರ ವಸ್ತುಗಳ ಅಕ್ರಮ ಸಾಗಾಣಿಕೆ ಪತ್ತೆಗೆ ವಾಣಿಜ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ, ಅಕ್ರಮ ಹಣದ ನಿಗಾ ಇಡಲು ಆದಾಯ ತೆರಿಗೆ ಅಧಿಕಾರಿಗಳ ತಂಡ, ವಿ.ಎಸ್.ಟಿ., ವಿವಿಟಿ ತಂಡಗಳು ಕಾರ್ಯನಿರ್ವಹಿಸಲಿವೆ. ಚಿಂಚೋಳಿಗೆ ಇತರೆ ತಾಲೂಕುಗಳಿಂದ ಸಂಪರ್ಕ ಸಾಧಿಸುವ ಗಡಿ ಹಾಗೂ ಪಕ್ಕದ ಆಂಧ್ರ ಗಡಿಯಲ್ಲಿಯೂ ಚೆಕ್ ಪೋಸ್ಟ್, ಅಬಕಾರಿ ಚೆಕ್ ಪೋಸ್ಟ್ ಸ್ಥಾಪಿಸುವಂತೆ ಆ ರಾಜ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು ಎಂದರು.
ದೂರಿಗೆ ಶುಲ್ಕರಹಿತ ಸಹಾಯವಾಣಿ:- ಚುನಾವಣೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು 24ಘಿ7 ತಾಸು ಶುಲ್ಕರಹಿತ 1950 ಸಹಾಯವಾಣಿ ಆರಂಭಿಸಬೇಕು. ಇದರ ಜೊತೆಯಲ್ಲಿ ಸಿ-ವಿಜಿಲ್ ಮತ್ತು ದೂರು ಮೇಲ್ವಿಚಾರಣಾ ಸೆಲ್ ಸಹ ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು.
ಚಿಂಚೋಳಿಯಲ್ಲಿ ಪರವಾನಿಗೆ ಪಡೆಯಿರಿ:- ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಂಘ ಸಂಸ್ಥೆಗಳು ಚುನಾವಣಾ ಪ್ರಚಾರಕ್ಕೆಂದು ನಡೆಸುವ ಸಭೆ, ಸಮಾರಂಭ ಹಾಗೂ ವಾಹನಗಳ ಓಡಾಟಗಳಿಗೆ ಪರವಾನಿಗೆಯನ್ನು ಚಿಂಚೊಳಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸಿಂಗಲ್ ವಿಂಡೋ ಸಿಸ್ಟಂ ಮೂಲಕ ಪಡೆಯಬೇಕು. ವಿಮಾನ ಮತ್ತು ಹೆಲಿಕಾಫ್ಟರ್ ಇಳಿಯಲು ಹಾಗೂ ನಿಲ್ಲಲು ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಲ್ಲದೆ ವಿವಿಧ ಪರವಾನಿಗೆಗಳಿಗೆ “ಸುವಿಧಾ” ಮೂಲಕ ಆನ್‍ಲೈನ್‍ನಲ್ಲಿಯೆ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಸುಲ್ತಾನ ಗ್ರಾಮದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮತದಾನ ಮಾಡುವಂತೆ ಅವರ ಮನವೊಲಿಸಬೇಕು. ಯಾರಾದರು ಒತ್ತಾಯಪೂರ್ವಕ ಗ್ರಾಮಸ್ಥರಿಗೆ ಮತದಾನ ಮಾಡದಂತೆ ತಡೆ ಒಡ್ಡಿದರೆ ಅಂತಹವರ ಮೇಲೆ ಕಠಿನ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ:- ಅನಧಿಕೃತವಾಗಿ ಲೋಗೋ ಹಿಡಿದುಕೊಂಡು ಪತ್ರಕರ್ತರಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಸುದ್ದಿ, ಆನ್‍ಲೈನ್ ಸರ್ವೆ ಪ್ರಸಾರ ಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಅಂತಹವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಇನ್ನು ಕಾಸಿಗಾಗಿ ಸುದ್ದಿ ಸೇರಿದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಎಂ.ಸಿ.ಎಂ.ಸಿ ತಂಡ ನೇಮಿಸಲಾಗಿದೆ. ಇದಲ್ಲದೆ ಟಿ.ವಿ., ಸ್ಥಳೀಯ ಕೇಬಲ್, ರೇಡಿಯೋಗಳಲ್ಲಿ, ಎಲ್.ಇ.ಡಿ. ಸ್ಕ್ರೀನ್ ವಾಹನಗಳ ಮೇಲೆ ದೃಶ್ಯ ಮತ್ತು ಆಡಿಯೋ ಜಾಹೀರಾತು ಪ್ರಸಾರಕ್ಕೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಘ-ಸಂಸ್ಥೆಗಳು ಜಾಹೀರಾತು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ ಫ್ಲೈಯಿಂಗ್ ಸ್ಕ್ವಾಡ್, ಎಸ್.ಎಸ್.ಟಿ. ತಂಡಗಳು ತುಂಬಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಚೆಕ್ ಪೋಸ್ಟ್‍ಗಳಲ್ಲಿ ಜನಪ್ರತಿನಿಧಿಗಳು ಸೇರಿದಂತೆ, ಯಾವುದೇ ರಾಜಕೀಯ ಗಣ್ಯರು ಮಾರ್ಗದಲ್ಲಿ ಸಂಚರಿಸಿದಾಗ ಪ್ರತಿ ಬಾರಿ ವಾಹನವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಚಿಂಚೋಳಿ ಚುನಾವಣಾಧಿಕಾರಿ ಸೋಮಶೇಖರ್ ಎಸ್.ಜಿ., ಚಿಂಚೋಳಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಕ್ಷಯ ಸೇರಿದಂತೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಮಾನ್ಯ ಪ್ರವೇಶ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
****************************************************************
ಕಲಬುರಗಿ,ಏ.26.(ಕ.ವಾ.)-ಪ್ರಸಕ್ತ 2019ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯು ಇದೇ ಏಪ್ರಿಲ್ 29 ಹಾಗೂ 30ರಂದು ಕಲಬುರಗಿ ನಗರದ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶÀದಲ್ಲಿ ಸಿಆರ್.ಪಿ.ಸಿ. ಕಾಯ್ದೆಯ 1973ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು/ ಅಧಿಕಾರಿಗಳು ಹಾಗೂ ಪರೀಕ್ಷಾರ್ಥಿಗಳು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ನಿಷೇಧಿತ ಪ್ರವೇಶವೆಂದು ಘೋಷಿಸಲಾಗಿದೆ. ಈ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿನ ಎಲ್ಲ ಜಿರಾಕ್ಸ್ ಅಂಗಡಿ, ಪುಸ್ತಕ ಅಂಗಡಿಗಳನ್ನು ಮುಚ್ಚಬೇಕು.
ಈ ಪರೀಕ್ಷಾ ಸಂದರ್ಭದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಬೇರೆ ಪರೀಕ್ಷಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಬ್ಲ್ಯೂಟೂತ್, ವೈರಲೇಸ್ ಸೆಟ್‍ಗಳು ಸೇರಿದಂತೆ ಮತ್ತಿತರ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉಪಯೋಗಿಸುವುದನ್ನು ಕರ್ನಾಟಕ ಪೊಲೀಸ್ ಕಾಯ್ದೆ ನಿಯಮ, 1963ರ ಕಲಂ-35(ಸಿ) ರಡಿಯಲ್ಲಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.




ಹೀಗಾಗಿ ಲೇಖನಗಳು News and Photo Date: 26--04--2019

ಎಲ್ಲಾ ಲೇಖನಗಳು ಆಗಿದೆ News and Photo Date: 26--04--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 26--04--2019 ಲಿಂಕ್ ವಿಳಾಸ https://dekalungi.blogspot.com/2019/04/news-and-photo-date-26-04-2019.html

Subscribe to receive free email updates:

0 Response to "News and Photo Date: 26--04--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ