NEWS AND PHOTO DATE: 15--04--2019

NEWS AND PHOTO DATE: 15--04--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 15--04--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 15--04--2019
ಲಿಂಕ್ : NEWS AND PHOTO DATE: 15--04--2019

ಓದಿ


NEWS AND PHOTO DATE: 15--04--2019

ಮತಗಟ್ಟೆಗಳಲ್ಲಿ ಸಂಶಯಾಸ್ಪದ ಗತಿವಿಧಿಗಳ ವಿವರ ನೀಡಲು ಸೂಚನೆ
ಕಲಬುರಗಿ,ಏ.15.(ಕ.ವಾ.)-ಲೋಕಸಭಾ ಚುನಾವಣೆಯ ಮತದಾನದಂದು ಮೈಕ್ರೋ ಅಬ್ಸರ್ವರ್‍ಗಳು ಮತಗಟ್ಟೆಗಳಲ್ಲಿ ನಡೆಯುವ ಚಲನವಲನಗಳ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸಿ ಯಾವುದೇ ತರಹದ ಸಂಶಯಾಸ್ಪದ ಗತಿವಿಧಿಗಳು ನಡೆದಲ್ಲಿ ತಕ್ಷಣ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿ ಅಥವಾ ಸಾಮಾನ್ಯ ವೀಕ್ಷಕರಿಗೆ ವರದಿ ನೀಡಬೇಕೆಂದು ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ ಬರ್ಮನ್ ತಿಳಿಸಿದರು.  
ಅವರು ಸೋಮವಾರ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮೈಕ್ರೋ ಅಬ್ಸರ್ವರ್‍ಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ವಲ್ನರೇಬಲ್ ಹಾಗೂ ಕ್ರಿಟಿಕಲ್ ಎಂದು ಗುರುತಿಸಿರುವ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗುತ್ತಿದ್ದು, ಅಬ್ಸರ್ವರ್ ಪರವಾಗಿ ಕೆಲಸ ನಿರ್ವಹಿಸಬೇಕು ಎಂದರು.
 ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ಕೇಂದ್ರ ಸರ್ಕಾರದ ಇಲಾಖೆಗಳ ಅಧಿಕಾರಿಗಳನ್ನು ಮೈಕ್ರೋ ಅಬ್ಸರ್ವರ್‍ಗಳೆಂದು ನೇಮಿಸಲಾಗಿದೆ. ಏಪ್ರಿಲ್ 23ರಂದು ಮತದಾನ ಪ್ರಕ್ರಿಯೇ ಬೆಳಗಿನ 6 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಮೈಕ್ರೋ ಅಬ್ಸರ್ವರ್‍ಗಳೆಂದು ನೇಮಕವಾಗಿರುವವರು ಏಪ್ರಿಲ್ 22ರಂದು ಆಯಾ ಮತಕ್ಷೇತ್ರಗಳ ಕೇಂದ್ರಸ್ಥಾನದಲ್ಲಿ ಹಾಜರಾಗಿ ಸಹಾಯಕ ಚುನಾವಣಾಧಿಕಾರಿಗಳಿಗೆ ವರದಿ ಮಾಡಿಕೊಳ್ಳಬೇಕು. ಏಪ್ರಿಲ್ 22ರಂದು ನಡೆಸಲಾಗುವ ಮೈಕ್ರೋ ಅಬ್ಸರ್ವರ್‍ಗಳ ರ್ಯಾಂಡಮೈಜೇಶನ್ ಪ್ರಕ್ರಿಯೇ ಮುಗಿದ ನಂತರ ಯಾರು ಯಾವ ಮತಗಟ್ಟೆಗೆ ನೇಮಕವಾಗಿದೆ ಎಂಬುದನ್ನು ತಿಳಿದು ಪೊಲಿಂಗ್ ಪಾರ್ಟಿಯೊಂದಿಗೆ ಆಯಾ ಮತಗಟ್ಟೆಗಳಿಗೆ ತೆರಳಬೇಕು ಎಂದರು. 
ಮತದಾನದಂದು ಮೈಕ್ರೋ ಅಬ್ಸರ್ವರ್‍ಗಳು ಕಡ್ಡಾಯವಾಗಿ ಬೆಳಿಗ್ಗೆ 6 ಗಂಟೆಗೆ ಯಾವುದೇ ಪಕ್ಷದ ಏಜೆಂಟ್‍ಗಳು ಮತಗಟ್ಟೆಗೆ ಆಗಮಿಸದಿದ್ದರೂ ತಮ್ಮ ಸಮಕ್ಷಮದಲ್ಲಿ ಅಣುಕು ಮತದಾನ ಪ್ರಕ್ರಿಯೇ ಕೈಗೊಳ್ಳಬೇಕು. ಮತದಾನದ ಸಮಯದಲ್ಲಿ ಯಾವುದೇ ಸಂಶಯಾಸ್ಪದ ಪ್ರಕರಣಗಳು ಸಂಭವಿಸಿದ್ದಲ್ಲಿ ವಿವರ ವರದಿ ಸಲ್ಲಿಸಬೇಕು. ಎಲ್ಲ ಮತಗಟ್ಟೆಗಳಿಗೆ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದ್ದು, ಬುರ್ಖಾ ಧರಿಸಿ ಆಗಮಿಸುವ ಮಹಿಳೆಯರಿಗೆ ಮಹಿಳಾ ಸಿಬ್ಬಂದಿಗಳು ಗುರುತು ಪತ್ರದ ಜೊತೆಗೆ ಕಡ್ಡಾಯವಾಗಿ ಗುರುತಿಸಿದ ನಂತರ ಮತದಾನಕ್ಕೆ ಅವಕಾಶ ನೀಡಬೇಕು. ಈ ಬಾರಿ ವೋಟರ್ ಸ್ಲಿಪ್‍ನ್ನು ಗುರುತಿನ ಚೀಟಿ ಎಂದು ಪರಿಗಣಿಸುತ್ತಿಲ್ಲ ಕಾರಣ ಎಲ್ಲರೂ ಕಡ್ಡಾಯವಾಗಿ ಭಾವಚಿತ್ರವುಳ್ಳ ಮೂಲ ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗವು ನಿಗದಿಪಡಿಸಿರುವ ಇತರೆ 11 ದಾಖಲೆಗಳ ಪೈಕಿ ಯಾವುದಾದರೊಂದನ್ನು ಕಡ್ಡಾಯವಾಗಿ ಪರಿಶೀಲಿಸಿ ಮತದಾನಕ್ಕೆ ಅವಕಾಶ ನೀಡಬೇಕೆಂದರು. 
ರಾಜ್ಯ ತರಬೇತುದಾರ ಶಶಿಶೇಖರ ರೆಡ್ಡಿ ಮಾತನಾಡಿ, ಈ ಬಾರಿ ಮತದಾನದಂದು ಎಡಗೈ ತೊರು ಬೆರಳಿಗೆ ಅಳಿಸಲಾದ ಶಾಯಿಯನ್ನು ಹಚ್ಚಲಾಗುವುದು. ಮತಗಟ್ಟೆ ಅಧಿಕಾರಿಗಳು ಅಳಿಸಲಾಗದ ಶಾಯಿಯನ್ನು ಕಡ್ಡಾಯವಾಗಿ ಮತಗಟ್ಟೆಯಲ್ಲಿ ಇಟ್ಟುಕೊಂಡಿರುವುದನ್ನು ಮೈಕ್ರೋ ಅಬ್ಸರ್ವರ್‍ಗಳು ಪರಿಶೀಲಿಸಬೇಕು. ಮತದಾನದ ಗೌಪ್ಯತೆಯನ್ನು ಕಾಪಾಡಲು ಮತದಾರರು ಮತ ಚಲಾಯಿಸುವ ಆವರಣವನ್ನು ಸೂಕ್ತ ರೀತಿಯಲ್ಲಿ ಯಾರಿಗೂ ಕಾಣದಂತೆ ವ್ಯವಸ್ಥೆ ಮಾಡಬೇಕು. ವಲ್ನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡುವ ವ್ಯವಸ್ಥೆಯಿದ್ದು, ವೆಬ್ ಕ್ಯಾಮರಾ ಮೂಲಕ ಮತದಾನ ಪ್ರಕ್ರಿಯೇ ಮಾತ್ರ ಚಿತ್ರೀಕರಣವಾಗುವ ಹಾಗೆ ಎಚ್ಚರಿಕೆ ವಹಿಸಬೇಕು. ಮೈಕ್ರೋ ಅಬ್ಸರ್ವರ್‍ಗಳು ಮತದಾನದಂದು ಎರಡು ಗಂಟೆಗೊಂದು ಬಾರಿ ಚಲಾವಣೆಯಾದ ಮತಗಳನ್ನು ಪರಿಶೀಲಿಸಬೇಕು. ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಉಮೇದುವಾರರ ಕಚೇರಿ ಅಥವಾ ಭಾವಚಿತ್ರ ಇರದಂತೆ ನೋಡಿಕೊಳ್ಳಬೇಕು ಎಂದು ವಿವರ ತರಬೇತಿ ನೀಡಿದರು. 
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಉಪಸ್ಥಿತರಿದ್ದರು.  
ಬರ ಪರಿಸ್ಥಿತಿ ಹಿನ್ನೆಲೆ: ಜಿಲ್ಲೆಯಲ್ಲಿ 14 ಮೇವು ಬ್ಯಾಂಕ್‍ಗಳ ಸ್ಥಾಪನೆ
ಕಲಬುರಗಿ,ಏ.15.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಬರಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟು 14 ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದೆ. ಈ ಮೇವು ಬ್ಯಾಂಕ್‍ಗಳಲ್ಲಿ ಒಣಮೇವನ್ನು ಸಂಗ್ರಹಿಸಿಡಲಾಗಿದೆ. ಅವಶ್ಯಕವಿರುವ ಜಾನುವಾರುಗಳ ಮಾಲೀಕರು ಸಂಬಂಧಪಟ್ಟ ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಕಲಬುರಗಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ತಾಲೂಕಿನ ಹೆಸರು ಹಾಗೂ ಮೇವು ಬ್ಯಾಂಕ್ ಸ್ಥಾಪಿಸಿದ ಸ್ಥಳದ ವಿವರ ಇಂತಿದೆ. ಅಫಜಲಪುರ ತಾಲೂಕಿನ ರೇವೂರ ಹಾಗೂ ಅತನೂರ. ಆಳಂದ ತಾಲೂಕಿನ ಆಳಂದ ಹಾಗೂ ಖಜೂರಿ. ಚಿಂಚೋಳಿ ತಾಲೂಕಿನ ಐನಾಪುರ ಹಾಗೂ ಕೊಡ್ಲಿ. ಚಿತ್ತಾಪೂರ ತಾಲೂಕಿನ ಚಿತ್ತಾಪುರ ಹಾಗೂ ನಾಲವಾರ. ಜೇವರ್ಗಿ ತಾಲೂಕಿನ ಆಂದೋಲಾ ಹಾಗೂ ಹುಲ್ಲೂರ. ಕಲಬುರಗಿ ತಾಲೂಕಿನ ಅವರಾದ ಹಾಗೂ ಪಟ್ಟಣ. ಸೇಡಂ ತಾಲೂಕಿನ ಮುಧೋಳ ಹಾಗೂ ಮಳಖೇಡ.
ಸರ್ಕಾರ ನಿಗದಿಪಡಿಸಿದ ದರದಂತೆ ಪ್ರತಿ ಕೆ.ಜಿ 2ರೂ. ಗಳ ದರವನ್ನು ಪಾವತಿಸಿ ಮೇವನ್ನು ಖರೀದಿಸಬಹುದಾಗಿದೆ. ರೈತರು ಆಧಾರ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿಯ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಸಂಬಂಧಪಟ್ಟ ರೈತರು ಆಯಾ ಭಾಗದ ಪಶು ಚಿಕಿತ್ಸಾಲಯ ವ್ಯಾಪ್ತಿಯಲ್ಲಿ ಬರುವ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕೆಂದು ಅವರು ತಿಳಿಸಿದ್ದಾರೆ.  
ಏಪ್ರಿಲ್ 16ರಂದು ಆಳಂದದಲ್ಲಿ ಎ.ಸಿ.ಬಿ. ಅಧಿಕಾರಿಗಳಿಂದ ಜನಸಂಪರ್ಕ ಸಭೆ 
ಕಲಬುರಗಿ,ಏ.15.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಆರಕ್ಷಕ ಉಪಾಧೀಕ್ಷಕರಾದ ಸುಧಾ ಆದಿ (ಮೊಬೈಲ್ ಸಂಖ್ಯೆ 9480806310) ಅವರು ಇದೇ ಏಪ್ರಿಲ್ 16 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಆಳಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ ಎಂದು ಅರಕ್ಷಕ ಉಪಾಧೀಕ್ಷಕರು ತಿಳಿಸಿದ್ದಾರೆ. ಕಳೆದ ಏಪ್ರಿಲ್ 9ರಂದು ಆಳಂದ ತಾಲೂಕಿಗೆ ಸಂಬಂಧಿಸಿದಂತೆ  ನಿಗದಿಪಡಿಸಿದ ಜನಸಂಪರ್ಕ ಸಭೆಯನ್ನು ಅನಿವಾರ್ಯ ಕಾರಣದಿಂದ ನಡೆಸಿರುವುದಿಲ್ಲ ಎಂದು ತಿಳಿಸಿದ್ದಾರೆ.

ಮಂಗಳವಾರದಂದು ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಲು ಸೂಚನೆ
ಕಲಬುರಗಿ,ಏ.15.(ಕ.ವಾ.)-ಕಲಬುರಗಿ ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ಅನುಕೂಲವಾಗುವಂತೆ ಇದೇ ಏಪ್ರಿಲ್ 16 ರಂದು ಮಂಗಳವಾರದಂದು ಸಹ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ನ್ಯಾಯ ಬೆಲೆ ಅಂಗಡಿ ತೆರೆದು ಪಡಿತರವನ್ನು ವಿತರಿಸಬೇಕು. ಮಂಗಳವಾರದಂದು ಯಾವುದೇ ನ್ಯಾಯಬೆಲೆ ಅಂಗಡಿಗೆ ರಜೆ ಇರುವುದಿಲ್ಲ ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕರು ತಿಳಿಸಿದ್ದಾರೆ. 
    ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆವರೆಗೆ (ಮಧ್ಯಾಹ್ನ ಬಿಡುವು ಹೊರತುಪಡಿಸಿ) ಪಡಿತರವನ್ನು ವಿತರಿಸಬೇಕು. ಪಡಿತರ ಚೀಟಿದಾರರಿಗೆ ಯಾವುದೇ ಅನಾನುಕೂಲಗಳಾಗಿದ್ದಲ್ಲಿ ರಾಜ್ಯದ ಶುಲ್ಕ ರಹಿತ ನಿಯಂತ್ರಣ ಕೇಂದ್ರದ ಸಂಖ್ಯೆ 1967 ಅಥವಾ 1800-425-9339ಗೆ ಸಂಪರ್ಕಿಸಿ ದೂರು ಸಲ್ಲಿಸಬೇಕು ಅಥವಾ ತಾಲೂಕಿನ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರನ್ನು ಸಂಪರ್ಕಿಸಬೇಕು. ಇದಲ್ಲದೇ ಸಾರ್ವಜನಿಕರು ಯಾವುದೇ ದೂರುಗಳಿದ್ದಲ್ಲಿ ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪನಿರ್ದೇಶಕ ಡಾ|| ಕೆ.ರಾಮೇಶ್ವರಪ್ಪ ಅವರ ಮೊಬೈಲ್ ಸಂಖ್ಯೆ 9611165367ಗೆ ಸಂಪರ್ಕಿಸಲು ಕೋರಲಾಗಿದೆ.    
     2019 ಎಪ್ರಿಲ್ ಮಾಹೆಯ ಪಡಿತರ ಹಂಚಿಕೆ, ಎತ್ತುವಳಿ ಮತ್ತು ವಿತರಣೆಯನ್ನು ಪರಾಮರ್ಶಿಸಲಾಗಿದ್ದು, ಏಪ್ರಿಲ್ 14 ರವರೆಗೆ ಜಿಲ್ಲೆಯ 983 ನ್ಯಾಯಬೆಲೆ ಅಂಗಡಿಗಳಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಪಡಿತರ ಚೀಟಿದಾರರು ಪಡಿತರ ಪಡೆದಿರುತ್ತಾರೆ. ಇದನ್ನು ಗಮನಿಸಿ ಮಂಗಳವಾರದಂದು ನ್ಯಾಯ ಬೆಲೆ ಅಂಗಡಿಯನ್ನು ತೆರೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 
14 ದಿನದೊಳಗೆ ಆಸ್ತಿ ತೆರಿಗೆ ಪಾವತಿಸಿದ್ದಲ್ಲಿ ಶೇ.5ರಷ್ಟು ರಿಯಾಯಿತಿ 
ಕಲಬುರಗಿ,ಏ.15.(ಕ.ವಾ.)-ಕಲಬುರಗಿ ನಗರ ವ್ಯಾಪ್ತಿಯಲ್ಲಿ ಬರುವ ವಿವಿಧ ಆಸ್ತಿಗಳ ಮಾಲೀಕರು 2019-20ನೇ ಸಾಲಿನ ಆಸ್ತಿ ತೆರಿಗೆ ಮೇಲೆ 5ರಷ್ಟು ರಿಯಾಯಿತಿ ಸೌಲಭ್ಯ ಪಡೆಯಲು ಇದೇ ಏಪ್ರಿಲ್ 30 ಕೊನೆಯ ದಿನವಾಗಿದೆ. ಕೇವಲ 14 ದಿನಗಳ ಕಾಲ ಮಾತ್ರ ಬಾಕಿ ಉಳಿದಿದ್ದು, ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಮಾಲೀಕರು ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಕಾಶ ಸಿ. ಹರಕುಡೆ ಅವರು ಕೋರಿದ್ದಾರೆ.   
    ಆಸ್ತಿ ತೆರಿಗೆ ಪಾವತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಮಹಾನಗರ ಪಾಲಿಕೆಯ ವಲಯ ಕಚೇರಿ-3ರ ಆವರಣ ಹಾಗೂ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರದ ಹೌಸಿಂಗ್ ಬೋರ್ಡ್ ಕಾಂಪ್ಲೆಕ್ಸ್‍ನಲ್ಲಿರುವ ಗುಲಬರ್ಗಾ ಒನ್ ಶಾಖೆಗಳಲ್ಲಿ ಹಾಗೂ ಮಹಾನಗರ ಪಾಲಿಕೆಯ ಹೊಸ ಕಟ್ಟಡದ ಆವರಣದಲ್ಲಿರುವ ಇಂಡಿಯನ್ ಬ್ಯಾಂಕ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಸ್ತಿಗಳ ಮಾಲೀಕರು 2019ರ ಏಪ್ರಿಲ್ 30ರೊಳಗಾಗಿ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.  
ಏಪ್ರಿಲ್ 16ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ 
ಕಲಬುರಗಿ,ಏ.15.(ಕ.ವಾ.)-ಜೆಸ್ಕಾಂ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ಇಂಡಸ್ಟ್ರೀಯಲ್ (ನಾರ್ಥ್) ಹಾಗೂ ಬ್ರಹ್ಮಪುರ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ 2019ರ ಏಪ್ರಿಲ್ 16ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     
     11 ಕೆ.ವಿ ಇಂಡಸ್ಟ್ರಿಯಲ್ (ನಾರ್ಥ್) ಫೀಡರ್: ದತ್ತನಗರ, ಸುವರ್ಣ ನಗರ, ಮಹಾಲಕ್ಷ್ಮಿ ಲೇಔಟ್, ಕೈಲಾಸ ನಗರ, ಮಾಣಿಕೇಶ್ವರಿ ಕಾಲೋನಿ, ಚೌಡೇಶ್ವರಿ ಕಾಲೋನಿ, ಗಂಗಾ ನಗರ, ಲಾಲಗೇರಿ, ಮಾಣಿಕೇಶ್ವರಿ ಜಿ.ಡಿ.ಎ., ಜೆ.ಆರ್. ನಗರ, ಈದ್ಗಾ, ಸರಸ್ವತಿ ವಿದ್ಯಾಮಂದಿರ, ಕೃಷಿ ಇಲಾಖೆ ಲೇಔಟ್, ಬಾಳೆ ಲೇಔಟ್, ಜೋಡ-ಯಲ್ಲಮ್ಮಾ ಮತ್ತು ಎನ್.ಆರ್. ಕಾಲೋನಿ, ಬೋರಾಬಾಯಿ ನಗರ, ಬ್ರಹ್ಮಪುರ, ಬಸವನಗರ, ಅಶೋಕ ನಗರ, ತ್ರಿಮೂರ್ತಿ ಚೌಕ್, ಸಮತಾ ಕಾಲೋನಿ, ದನಗರಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 
11 ಕೆ.ವಿ ಬ್ರಹ್ಮಪುರ ಫೀಡರ್: ಶಹಾ ಬಜಾರ್, ಶೆಟ್ಟಿ ಕಾಂಪ್ಲೆಕ್ಸ್, ಸುಭಾಷ ನಗರ, ಗದ್ಲೆಗಾಂವ, ಶಹಾಬಜಾರ ನಾಕಾ, ಶಹಾಬಜಾರ ಗೋಕುಲ ನಗರ, ಫಿಲ್ಟರ್ ಬೇಡ್ ಜಿ.ಡಿ.ಏ. ಕಾಲೋನಿ, ಲಾಲಗೇರಿ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಲೇಔಟ್, ಕಬಾಡ ಗಲ್ಲಿ, ಚನ್ನಮಲ್ಲೇಶ್ವರ ನಗರ, ಮಹಾದೇವ ನಗರ, ಗಂದಿಗುಡಿ ಲೇಔಟ್, ಹರಿಜನ ವಾಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು.






ಹೀಗಾಗಿ ಲೇಖನಗಳು NEWS AND PHOTO DATE: 15--04--2019

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 15--04--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 15--04--2019 ಲಿಂಕ್ ವಿಳಾಸ https://dekalungi.blogspot.com/2019/04/news-and-photo-date-15-04-2019.html

Subscribe to receive free email updates:

0 Response to "NEWS AND PHOTO DATE: 15--04--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ