ಶೀರ್ಷಿಕೆ : ಒಂದು ಬೊಗಸೆ ಪ್ರೀತಿ - 14
ಲಿಂಕ್ : ಒಂದು ಬೊಗಸೆ ಪ್ರೀತಿ - 14
ಒಂದು ಬೊಗಸೆ ಪ್ರೀತಿ - 14
‘ಮೊದಲ ಭೇಟಿ ಅಂತೆಲ್ಲ ಏನೂ ಇಲ್ಲ ಕಣೋ. ಅವನು ನಾನು ಒಂದೇ ಶಾಲೇಲಿ ಓದಿದ್ದು. ಬೇರೆ ಬೇರೆ ಸೆಕ್ಷನ್ ಇದ್ದೋ. ಮುಖ ಪರಿಚಯ ಇದ್ದೇ ಇತ್ತು’
“ಓ! ಲವ್ ಅಟ್ ಫಸ್ಟ್ ಸೈಟ್ ಅಲ್ಲ ಅನ್ನಪ್ಪ”
‘ಮೊದಲ ನೋಟಕ್ಕೇ ಪ್ರೇಮ ಹುಟ್ಟಿಸುವಷ್ಟೇನು ಚೆನ್ನಾಗಿಲ್ಲಪ್ಪ ನಾನು’
“ನೀನೆಷ್ಟು ಚೆನ್ನಾಗಿದ್ದೀಯ ಅಂತ ನನಗೂ ಗೊತ್ತು. ಕತೆ ಮುಂದುವರಿಸು. ನಾನು ಆ ಹ್ಞೂ ಅಂತ ಏನೂ ಹೇಳಲ್ಲ. ಸುಮ್ನೆ ಕೇಳ್ತಿರ್ತೀನಿ. ಹೇಳುವಂತವಳಾಗು ಧರಣಿ”
‘ಸರಿ ಗುರುಗಳೇ’ ಎಂದ್ಹೇಳಿ ಎಲ್ಲಿಂದ ಪ್ರಾರಂಭಿಸಿವುದೆಂದು ಯೋಚಿಸಿದೆ. ಪಿಯುಸಿಯ ದಿನಗಳಿಂದಲೇ ಪ್ರಾರಂಭಿಸಬೇಕಲ್ಲ ಎಂದುಕೊಂಡು ಹೇಳಲಾರಂಭಸಿದೆ.
‘ಪುರುಷೋತ್ತಮ್ ನಾನು ಒಂದೇ ಶಾಲೇಲಿ ಇದ್ದಿದ್ದು. ಆಗ್ಲೇ ಹೇಳಿದ್ನಲ್ಲ ಬೇರೆ ಬೇರೆ ಸೆಕ್ಷನ್ ಅಂತ. ಅವನ ಗೆಳೆಯನೊಬ್ಬನಿದ್ದ ಅಶೋಕ್ ಅಂತ. ಅವನು ನಮ್ಮ ತಂದೆ ಸ್ನೇಹಿತನ ಮಗ. ಅವಾಗಿವಾಗ ಅಪ್ಪ ಅಮ್ಮನ ಜೊತೆ ಮನೆಗೆ ಬರ್ತಿದ್ದರಿಂದ ಹಾಯ್ ಹೇಗಿದ್ದೀಯ ಅನ್ನುವಷ್ಟು ಪರಿಚಯ. ಶಾಲೆ ಮುಗೀತು. ಕಾಲೇಜು ಸೇರಿದೊ. ಕಾಲೇಜಿನಲ್ಲೂ ಪುರುಷೋತ್ತಮನದು ಬೇರೆ ಸೆಕ್ಷನ್. ಅಶೋಕ್ ಕೂಡ ಅವನದೇ ಸೆಕ್ಷನ್. ಮೊದಲ ವರುಷದ ಪಿಯುಸಿ ಇನ್ನೇನು ಮುಗಿಯುತ್ತಿದ್ದ ಸಮಯ. ನಿನಗೇ ಗೊತ್ತಲ್ಲ, ಮೊದಲ ವರ್ಷ ಓದೋದೆಲ್ಲ ಕಡಿಮೆ ಇರುತ್ತೆ. ಯೂನಿಫಾರ್ಮಿನ ಶಾಲೆಯಿಂದ ಕಲರ್ ಕಲರ್ ಬಟ್ಟೆ ಹಾಕಿಕೊಂಡು ಖುಷಿ ಪಡೋ ಪಿಯುಸಿಗೆ ಸೇರಿದಾಗ ಓದುವ ಮನಸ್ಸೇ ಇರಲ್ಲ. ಈಗ ಬಿಡು ಪಿಯುಸಿಗೂ ಯೂನಿಫಾರ್ಮ್ ಮಾಡಿಬಿಟ್ಟಿದ್ದಾರೆ ಸುಮಾರು ಕಡೆ. ಪರೀಕ್ಷೆ ಹತ್ತಿರವಾದಾಗ ಭಯವಾಗಲು ಶುರುವಾಯಿತು. ಓದಿರೋದು ಇಷ್ಟೇ ಇಷ್ಟು. ಸಿಲಬಸ್ ನೋಡಿದ್ರೆ ಅಷ್ಟೊಂದಿದೆ. ಹತ್ತನೇ ಕ್ಲಾಸಲ್ಲಿ ತೊಂಭತ್ತು ಪರ್ಸೆಂಟ್ ತಗಂಡು ಈಗ ಡುಮ್ಕಿ ಹೊಡ್ದುಬಿಡ್ತೀನೇನೋ ಅಂತ ಭಯ ಆಗೋಯ್ತು. ಇನ್ನು ದೊಡ್ಡ ದೊಡ್ಡ ಪುಸ್ತಕ ಓದುವಷ್ಟಂತೂ ಸಮಯವಿಲ್ಲ. ಗೈಡುಗಳನ್ನು ತೆರೆದು ನೋಡಿದರೂ ಭಯವಾಗುತ್ತಿತ್ತು. ಸೀನಿಯರ್ಸ್ ಹತ್ತಿರ ಸಹಪಾಠಿಗಳತ್ರ ಒಂದಷ್ಟು ನೋಟ್ಸುಗಳಿತ್ತು. ಅದನ್ನೇ ಝೆರಾಕ್ಸ್ ಮಾಡಿಸಿಕೊಳ್ಳೋಣ ಅಂತ ಕಾಲೇಜಿನ ಎದುರುಗಡೆ ಬ್ಯಾಕ್ ಟು ಬ್ಯಾಕ್ ಮೂವತ್ತು ಪೈಸೆಗೆ ಸೀಮೆಎಣ್ಣೆ ಝೆರಾಕ್ಸ್ ಮಾಡಿಕೊಡುತ್ತಿದ್ದ ಅಂಗಡಿಗೆ ಹೋಗಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಒಂದೂ ಮೂವತ್ತಾಗಿತ್ತು. ಕಾಲೇಜಿನವರೆಲ್ಲ ಹೊರಟುಹೋಗಿದ್ದರು. ಅಂಗಡಿಯ ಬಳಿ ಕೂಡ ಹೆಚ್ಚು ಜನರಿರಲಿಲ್ಲ. ಝೆರಾಕ್ಸ್ ಮಾಡಲು ಕೊಟ್ಟು ಅಲ್ಲೇ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದೆ. ಮಧ್ಯೆ ಮಧ್ಯೆ ಹ್ಞೂ ಅನ್ನೋ’
“ಯಾಕೆ”
‘ಇಲ್ಲಾಂದ್ರೆ ನೀನು ಕೇಳಿಸ್ಕೋತಿದ್ದೀಯೋ ನಿದ್ದೆ ಹೋಗಿಬಿಟ್ಟೋ ನನಗೇಗೆ ಗೊತ್ತಾಗೋದು’
“ಹ್ಹ ಹ್ಹ. ಸರಿ ಸರಿ. ನಾನು ಕೇಳಿಸ್ಕೋತಿರ್ತೀನಿ. ಏನಾದ್ರೂ ಪ್ರಶ್ನೆ ಕೇಳ್ಬೇಕು ಅನ್ನಿಸಿದ್ರೆ ನಾನೇ ಕೇಳ್ತೀನಿ. ನಿನ್ನ ಪಾಡಿಗೆ ನೀನು ಹೇಳವ್ವ”
‘ಮ್. ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದೆ. ಆಗ ಅಶೋಕ್ ಮತ್ತು ಪುರುಷೋತ್ತಮ್ ಝೆರಾಕ್ಸ್ ಮಾಡಿಸಿಕೊಳ್ಳಲು ಅಂಗಡಿಯ ಬಳಿಗೆ ಬಂದರು. ಅಶೋಕ್ ನನಗೆ ಮುಂಚಿನಿಂದಾನೂ ಪರಿಚಯ ಇದ್ದನಲ್ಲ. ಹೇಗಿದ್ದೀಯ. ಮನೆಯಲ್ಲಿ ಅಂಕಲ್ ಆಂಟಿ ಚೆನ್ನಾಗಿದ್ದಾರ ಅಂತೆಲ್ಲ ಕೇಳಿದೆ. ಅವನದಕ್ಕೆಲ್ಲ ಉತ್ತರಿಸಿ ಮತ್ತದೇ ಪ್ರಶ್ನೆಗಳನ್ನು ನನಗೆ ಕೇಳಿದ. ನಾನು ಅವನು ಕೊಟ್ಟ ಉತ್ತರಗಳನ್ನೇ ಕೊಟ್ಟು ಪರೀಕ್ಷೆಗೆ ಹೇಗೆ ಓದ್ತಿದ್ದೀಯ ಎಂದೆ. “ನೋಡು ನೋಟ್ಸ್ ಝೆರಾಕ್ಸ್ ಮಾಡಿಸಿಕೊಳ್ಳಲು ಈಗ ಬಂದಿದ್ದೀವಿ, ಇಷ್ಟರ ಮಟ್ಟಿಗೆ ತಯಾರಾಗಿದ್ದೀವಿ” ಎಂದು ನಕ್ಕ. ನಾನೂ ನಗುತ್ತಾ ‘ನನ್ನದೂ ಅದೇ ಕಥೆ. ಝೆರಾಕ್ಸಿಗೆ ಕೊಟ್ಟು ಕಾಯ್ತಿದ್ದೀನಿ’ ನಮ್ಮಿಬ್ಬರ ಮಾತುಕತೆಯನ್ನು ಗಮನಿಸುತ್ತ ಎರಡು ಹೆಜ್ಜೆ ದೂರ ನಿಂತಿದ್ದ ಪುರುಷೋತ್ತಮ ಮುಂದೆ ಬಂದು “ಬರೀ ಅವನನ್ನೇ ಮಾತನಾಡಿಸ್ತಿದ್ದಿ. ನಾವೆಲ್ಲ ನೆನಪೇ ಇಲ್ಲವೇನೋ” ಎಂದ.
ಅವನ ಕಡೆಗೆ ನೋಡಿದೆ. ಕಪ್ಪು ಬಣ್ಣದ ಟೀಶರ್ಟು ಮಾಸಲು ನೀಲಿ ಬಣ್ಣದ ಜೀನ್ಸು ಹಾಕಿಕೊಂಡು ಸ್ಪೋರ್ಟ್ಸ್ ಶೂ ಧರಿಸಿದ್ದ. ‘ನೆನಪಿದ್ದೀಯ. ಪುರುಷೋತ್ತಮ್ ತಾನೇ? ನಿನಗೆ ನನ್ನ ನೆನಪಿದೆಯೋ ಇಲ್ವೋ ಅಂತ ಮಾತನಾಡಿಸಲಿಲ್ಲ ಅಷ್ಟೇ’ ಎಂದು ಹೇಳಿದೆ ನಗುತ್ತ.
ಖುಷಿಯಾಗಿದ್ದು ಅವನ ನಗುವಿನಲ್ಲೆ ಗೊತ್ತಾಗಿತ್ತು. “ಬ್ರಿಲಿಯಂಟ್ ಧರಣಿ ಅನ್ನೋದು ಇನ್ನೂ ನೆನಪಿದೆ”
‘ಅಯ್ಯೋ ಅಷ್ಟೊಂದೆಲ್ಲ ಬ್ರಿಲಿಯಂಟ್ ಏನಲ್ಲಪ್ಪ. ಏನೋ ನನ್ನ ಕೈಲಾದಷ್ಟು ಓದ್ತೀನಿ. ಫಸ್ಟ್ ಪಿಯುಸಿಯಲ್ಲಿ ಏನೂ ಓದಲೇ ಇಲ್ಲ. ಅದಿಕ್ಕೆ ಈಗ ನೋಟ್ಸು ಝೆರಾಕ್ಸು ಮಾಡಿಸೋ ಕರ್ಮ’ ನಮ್ಮಿಬ್ಬರನ್ನು ಮಾತಿಗೆ ಬಿಟ್ಟು ಅಶೋಕ್ ಝೆರಾಕ್ಸ್ ಅಂಗಡಿಯ ಒಳಗೆ ಹೋದ.
“ನೀನೇ ಹಿಂಗಂದುಬಿಟ್ರೆ ನನ್ನಂತ ದಡ್ಡರ ಕತೆಯೇನು”
‘ನೀನೂ ಟೆನ್ತ್ ಪಾಸಾಗಿ ತಾನೇ ಪಿಯುಸಿಗೆ ಬಂದಿರೋದು? ಮತ್ತೆ ದಡ್ಡ ಹೇಗಾಗ್ತಿ’
“ಏನೋ ಒಂದು ಎಪ್ಪತ್ತೈದು ಪರ್ಸೆಂಟ್ ತಗಂಡಿದ್ನಪ್ಪ ಅಷ್ಟೆ”
‘ಅದೂ ಫಸ್ಟ್ ಕ್ಲಾಸೇ ಅಲ್ವ ಮತ್ತೆ’
“ಹಂಗಾಂದ್ರೆ ನಾನು ದಡ್ಡ ಅಲ್ಲ ಅಂತೀಯ?”
‘ಖಂಡಿತವಾಗಿಯೂ ಅಲ್ಲ’
“ಮತ್ತೆ ನಮ್ಮ ಮನೇಲಿ ಯಾವಾಗ್ಲೂ ನನ್ನನ್ನು ನಮ್ಮಕ್ಕನಿಗೆ ಹೋಲಿಸಿ ದಡ್ಡ ದಡ್ಡ ಅಂತಾರೆ”
‘ನಮ್ಮ ಮನೇಲೂ ನನ್ನ ತಮ್ಮನಿಗೆ ಹೋಲಿಸಿ ದಡ್ಡಿ ದಡ್ಡಿ ಅಂತಾರಪ್ಪ. ಮನೆಯವರೆಲ್ಲ ಹಂಗೆ ಬಿಡು’
“ಹ್ಹ ಹ್ಹ. ಚೆನ್ನಾಗ್ ಮಾತಾಡ್ತಿ”
‘ಮಾತೇ ನನ್ನ ಆಸ್ತಿ’ ನಾನು ಕೊಟ್ಟಿದ್ದ ನೋಟ್ಸಿನ ಝೆರಾಕ್ಸ್ ಮುಗಿದಿತ್ತು. ತೆಗೆದುಕೊಂಡು ಅಶೋಕ್ ಮತ್ತು ಪುರುಷೋತ್ತಮನಿಗೆ ಬಾಯ್ ಹೇಳಿ ಸೈಕಲ್ ತುಳಿಯುತ್ತ ಮನೆ ಕಡೆಗೆ ಹೊರಟೆ’
“ನೀನು ಚೆನ್ನಾಗಿ ಮಾತಾಡ್ತೀಯ ಅನ್ನೋದು ನನಗೂ ಗೊತ್ತಾಗಿದೆ ಬಿಡು” ಎಂದ ಸಾಗರ್.
‘ಅಯ್ಯೋ. ಮುಂಚೆ ಇನ್ನೂ ಚೆನ್ನಾಗಿ ಮಾತಾಡ್ತಿದ್ದೆ. ಮಧ್ಯೆ ಅಂದರೆ ಎಂಬಿಬಿಎಸ್ ಮಾಡೋ ಸಮಯದಲ್ಲಿ ನನ್ನ ಸಹಜ ಮಾತುಗಳೆಲ್ಲ ಸತ್ತು ಹೋಗಿದ್ದೋ ಕಣೋ. ಈಗ ಅಂದರೆ ರಾಜೀವನನ್ನು ಮದುವೆಯಾದ ನಂತರ ಮತ್ತೆ ಒಂದಷ್ಟು ಮಾತುಗಳನ್ನಾಡಲಾರಂಭಿಸಿದ್ದು’
“ಮ್. ಯಾಕೆ ಅಂತ ಅಂದಾಜು ಮಾಡಬಹುದು. ಇರಲಿ. ನಿನ್ನ ಬಾಯಲ್ಲೇ ಕೇಳೋಣ. ಮೊದಲ ಪರಿಚಯವೇನೋ ಮುಗಿಯಿತು. ಲವ್ ಮಾಡಲಾರಂಭಿಸಿದ್ದು”
‘ಮೊದಲ ಸಲ ಮಾತನಾಡಿದ ಮೇಲೆ ಕಾಲೇಜ್ ಕ್ಯಾಂಪಸ್ಸಲ್ಲಿ ಎದುರು ಬದುರು ಸಿಕ್ಕಾಗ ಒಂದೆರಡು ನಿಮಿಷ ಮಾತನಾಡುತ್ತಿದ್ದೊ. ಅಷ್ಟರಲ್ಲಿ ಫಸ್ಟ್ ಪಿಯುಸಿ ಪರೀಕ್ಷೆ ಶುರುವಾಯಿತು. ಪರೀಕ್ಷೆ ಮುಗಿಯುತ್ತಿದ್ದಂತೆ ಎರಡನೆಯ ಪಿಯುಸಿಯ ಟ್ಯೂಷನ್ನುಗಳು ಶುರುವಾಗಿಬಿಟ್ಟವು. ಕಾಲೇಜಿಗೆ ರಜವಿದ್ದರೂ ಟ್ಯೂಷನ್ನಿಗೆ ಅಲೆಯೋ ಕರ್ಮ ನಿನಗೂ ಗೊತ್ತಲ್ಲ. ಮನೆಯ ಹತ್ತಿರವಿದ್ದ ಟ್ಯೂಷನ್ನುಗಳಿಗೇ ಸೇರಿದ್ದೆ. ಸೈಕಲ್ಲಿನಲ್ಲಿ ಹೋಗುತ್ತಿದ್ದೆ. ಹತ್ತಿರವಿದೆ ಅಂದರೂ ಬೆಳಿಗ್ಗೆ ಎರಡು ಟ್ಯೂಷನ್ನಿಗೆ ಎಂಟು ಕಿಲೋಮೀಟರ್ ಸಂಜೆ ಎರಡು ಟ್ಯೂಷನ್ನಿಗೆ ಏಳು ಕಿಲೋಮೀಟರ್ ತುಳೀಬೇಕಿತ್ತು. ಬೆಳಿಗ್ಗೆ ಐದಕ್ಕೆ ಫಿಸಿಕ್ಸ್ ಟ್ಯೂಷನ್ನಿಗೆ ಮನೆಯಿಂದ ಒಂದೇ ಕಿಲೋಮೀಟರ್. ಆರೂವರೆಗೆ ಫಿಸಿಕ್ಸ್ ಮುಗಿಯುತ್ತಿತ್ತು. ಏಳಕ್ಕೆ ಕೆಮಿಸ್ಟ್ರಿ ಟ್ಯೂಷನ್ನಿಗೆ ಮತ್ತೆ ಮೂರು ಕಿಲೋಮೀಟರ್. ಆ ರೋಡೋ ಬರೀ ಉಬ್ಬು ತಗ್ಗು. ಮೂರು ಕಿಲೋಮೀಟರನ್ನು ಅರ್ಧಘಂಟೆಯೊಳಗೆ ತುಳಿಯುವಷ್ಟರಲ್ಲಿ ಸುಸ್ತಾಗಿಬಿಡುತ್ತಿತ್ತು. ಕಾಲು ಘಂಟೆ ಟ್ಯೂಷನ್ನಿನೊಳಗೆ ಉಸಿರು ಬಿಡೋದೇ ಆಗುತ್ತಿತ್ತು. ಪುರುಷೋತ್ತಮ್ ಕೂಡ ಬೆಳಿಗ್ಗೆ ಅದೇ ಟ್ಯೂಷನ್ನಿಗೆ ಬರುತ್ತಿದ್ದ. ಸಂಜೆ ಬೇರೆ ಕಡೆಗೆ ಹೋಗುತ್ತಿದ್ದ. ಮುಖಪರಿಚಯ ಸ್ನೇಹಕ್ಕೆ ತಿರುಗಲು ತುಂಬ ದಿನಗಳೇನು ಬೇಕಾಗಲಿಲ್ಲ. ಟ್ಯೂಷನ್ ಮಾಸ್ಟ್ರು ಬರೋಕೆ ಮುಂಚೆ ಹರಟುತ್ತಿದ್ದೆವು. ಹರಟುತ್ತಿದ್ದೆವು ಅನ್ನೋದಕ್ಕಿಂತ ನಾನು ಮಾತನಾಡುತ್ತಿದ್ದೆ, ಅವನು ಮುಖದ ಮೇಲೊಂದು ನಗು ಮೂಡಿಸಿಕೊಂಡು ತಲೆಯಾಡಿಸುತ್ತ ಕೇಳುತ್ತಿದ್ದ. ಈಗ ನೀನು ಕೇಳುತ್ತಿದ್ದೀಯಲ್ಲ ಹಂಗೆ’ ಎಂದ್ಹೇಳಿ ಕಿಸಕ್ಕನೆ ನಕ್ಕೆ.
“ತಪ್ಪು ಧರಣಿ. ತಪ್ಪು. ಹಂಗೆಲ್ಲ ಹೋಲಿಕೆ ಮಾಡಬೇಡ. ನನಗಿಷ್ಟವಾಗಲ್ಲ” ಸಾಗರ್ ಕೂಡ ಇಷ್ಟು ಕಠಿಣವಾಗಿ ಮಾತನಾಡಬಲ್ಲ ಎಂದು ಅರಿವಾಗಿದ್ದೇ ಆಗ.
‘ಸಾರಿ’
“ಪರವಾಗಿಲ್ಲ ಮುಂದಕ್ಕೆ ಹೇಳು”
‘ಬೆಳಿಗ್ಗೆ ಅಷ್ಟೆಲ್ಲ ಸೈಕಲ್ ತುಳಿದು ಮತ್ತೆ ಮನೆಗೆ ಬರುವಷ್ಟರಲ್ಲಿ ಎಷ್ಟು ಸುಸ್ತಾಗುತ್ತಿತ್ತೆಂದರೆ ಮನೆಗೆ ಬಂದು ಸ್ನಾನ ಮಾಡಿ ತಿಂಡಿ ತಿಂದು ಮಲಗಿಬಿಟ್ಟರೆ ಏಳುತ್ತಿದ್ದದ್ದೇ ಮಧ್ಯಾಹ್ನ ಊಟಕ್ಕೆ. ಊಟ ಮುಗಿಸಿ ಮೂರು ಘಂಟೆ ಓದಿ ಬಯಾಲಜಿ ಮತ್ತು ಮ್ಯಾತ್ಸ್ ಟ್ಯೂಷನ್ನಿಗೆ ಓಡುತ್ತಿದ್ದೆ. ತಿರ್ಗಾ ಏಳು ಕಿಲೋಮೀಟರು ಸೈಕಲ್ಲು ತುಳಿದು ಸುಸ್ತಾಗಿ ಮನೆಗೆ ಬಂದು ಊಟ ಮಾಡಿ ತಾಚಿ ಮಾಡಿದರೆ ಗಡದ್ದು ನಿದ್ದೆ. ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಮತ್ತದೇ ತಿರುಗಾಟ. ಇದರ ನಡುವೆ ಮನೇಲಿ ಅಪ್ಪ ಬೇರೆ “ಸೆಕೆಂಡ್ ಪಿಯುಸಿಲಿದ್ದೀಯ. ಮೂರೊತ್ತೂ ನಿದ್ರೆ ಮಾಡ್ತಾನೇ ಇರ್ತೀಯಲ್ಲ. ಓದ್ಕೋ ಓದ್ಕೋ” ಅಂತ ತಲೆ ತಿಂತಿದ್ದರು. ಫಸ್ಟ್ ಪಿಯುಸಿಲಿ ಎಪ್ಪತ್ತೆಂಟು ಪರ್ಸೆಂಟ್ ಅಷ್ಟೇ ಬಂದಿದ್ದು. ಅದನ್ನು ನೋಡಿದ ಮೇಲಂತೂ “ಟೆನ್ತಲ್ಲಿ ಹಂಗೆಲ್ಲ ಓದ್ತಿದ್ದೆ ಪಿಯುಸಿಗೆ ಬಂದು ಏನಾಗೋಯ್ತು ನಿನಗೆ” ಅಂತ ಒಂದೇ ಸಮ ರಾಗ ಹಾಡ್ತಿದ್ದರು. ‘ಸೆಕೆಂಡ್ ಪಿಯುಸೀಲಿ ಚೆನ್ನಾಗಿ ಓದ್ತೀನಿ ಸುಮ್ನಿರಪ್ಪ’ ಅಂತ ಎಷ್ಟು ಹೇಳಿದರೂ “ಏನ್ ಓದ್ತೀಯೋ ಏನು ಕತೆಯೋ. ಮೂರೊತ್ತೂ ಮಲಗೋದೇ ಆಯ್ತು” ಗೊಣಗಾಟ ನಿರಂತರವಾಗಿತ್ತು. ಕೊನೆಗೆ ನನಗೇ ಒಂದು ದಿನ ಸಿಟ್ಟು ಬಂದು ‘ಅಷ್ಟೆಲ್ಲ ಸೈಕಲ್ಲು ತುಳಿದು ಸುಸ್ತಾದ ಮೇಲೆ ಓದು ಓದು ಅಂದರೆ ಹೇಗೆ. ಒಂದು ಕೈನೆಟಿಕ್ ಹೋಂಡಾ ಕೊಡಿಸಿ’ ಎಂದೆ. “ನೋಡ್ದಾ ಇವಳ ದೌಲತ್ತಾ? ಇನ್ನೂ ಸೆಕೆಂಡ್ ಪಿಯುಸಿ. ಆಗ್ಲೇ ಇವಳಿಗೆ ಕೈನೆಟಿಕ್ ಹೋಂಡಾ ಬೇಕಂತೆ. ನೋಡ್ದೇನೆ ಇವಳ ದೌಲತ್ತಾ” ಎಂದು ಅಮ್ಮನನ್ನೂ ಮಾತಿಗೆ ಎಳೆದರು.
ಓದು ಬರಹದ ಬಗ್ಗೆ ಅಮ್ಮ ಅಷ್ಟು ತಲೆಕೆಡಿಸಿಕೊಂಡವರಲ್ಲ. ಓದಬೇಕು, ಇಷ್ಟಪಟ್ಟ ಡಿಗ್ರಿ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯವರಾಗಿ ಉಳಿಯಬೇಕು ಎಂದು ಯಾವಾಗಲೂ ಹೇಳುತ್ತಿದ್ದರು. ನಾನಾ ಒಳ್ಳೆತನ ಬೆಳೆಸಿಕೊಳ್ಳಲಿಲ್ಲ ಬಿಡು’
“ನೀನ್ಯಾಕೆ ಕೆಟ್ಟೋಳು ಅಂದ್ಕೋತೀಯ? ಒಳ್ಳೆಯವಳೇ ಇದ್ದಿ ನೀನು”
‘ನನ್ನ ಕತೆಯೆಲ್ಲ ಕೇಳಿದ ಮೇಲೆ ನೀನು ಇದೇ ಮಾತು ಹೇಳ್ತೀಯ? ನೋಡೋಣ ಸುಮ್ಕಿರು. ಅಮ್ಮ ನನ್ನ ಪರವಾಗೇ ನಿಂತರು. “ಅಷ್ಟಷ್ಟು ದೂರ ಸೈಕಲ್ಲು ತುಳಿದು ಒಂದೇ ತಿಂಗಳಲ್ಲಿ ಮಗು ಸೊರಗಿಹೋಗಿದೆ. ತಕ್ಕೊಡ್ರಿ” ಎಂದರು. “ದುಡ್ಡು ಕೀಳೋದ್ರಲ್ಲಿ ಒಬ್ಬರಿಗಿಂತ ಒಬ್ಬರು ಹೆಚ್ಚು” ಅಪ್ಪನ ಉವಾಚ.
“ಅಯ್ಯೋ ಬಿಡಮ್ಮ. ನಿಮ್ಮಪ್ಪ ತಕ್ಕೊಡದಿದ್ರೆ ಅಷ್ಟೇ ಹೋಯ್ತು. ನಾನೇ ತಕ್ಕೊಡ್ತೀನಿ” ಅಮ್ಮ ಬಲವಾಗಿಯೇ ವಾದಿಸಿದರು.
“ದುಡೀತೀನಿ ಅನ್ನೋ ಕೊಬ್ಬು ನಿನಗೆ”
“ನಿಮಗೆ ದುಡೀತೀನಿ ಅನ್ನೋ ಕೊಬ್ಬಿದೆ. ನಾನು ನಿಮ್ಮ ಹೆಂಡ್ತಿ ನನಗಿರಬಾರದಾ?” ಎಂದು ಹೇಳಿ ಅಮ್ಮ ಜೋರಾಗಿ ನಕ್ಕುಬಿಟ್ಟಿದ್ದು ಅಪ್ಪನ ಕೋಪವನ್ನೆಲ್ಲ ಕರಗಿಸಿಬಿಟ್ಟಿತು.
“ಸರಿ ಸರಿ. ಇವಾಗ ಹೇಗಿದ್ರೂ ಕಾಲೇಜಿಲ್ಲವಲ್ಲ. ಕಾಲೇಜು ಶುರುವಾಗೋ ಟೈಮಿಗೆ ತಗೊಂಡರಾಯಿತು ಬಿಡು”
ಕಾಲೇಜು ಶುರುವಾಗಲು ಇನ್ನೂ ಒಂದು ತಿಂಗಳು ಸಮಯವಿತ್ತು. ಅಲ್ಲಿಯವರೆಗಂತೂ ಸೈಕಲ್ಲೇ ಗತಿ. ನನಗೆ ಕೈನೆಟಿಕ್ ಹೋಂಡಾ ತೆಗೆದುಕೊಳ್ಳಲೇಬೇಕು ಅಂತೇನೂ ಇರಲಿಲ್ಲ. ನನ್ನ ಗೆಳತಿಯರೆಲ್ಲ ಸೈಕಲ್ಲೇ ತರುತ್ತಿದ್ದರು. ಜೊತೆಯಲ್ಲೇ ನಡೆದು ತುಳಿದು ಹೋಗುತ್ತಿದ್ದೆವು. ಅಷ್ಟೊತ್ತಿಗಾಗಲೇ ನನ್ನ ಫ್ರೆಂಡ್ ಆಗಿದ್ದನಲ್ಲ ಪುರುಷೋತ್ತಮ್ ಅವನು ಅವರ ಅಕ್ಕ ಉಪಯೋಗಿಸುತ್ತಿದ್ದ ಹೀರೋ ಪುಕ್ ತರಲು ಪ್ರಾರಂಭಿಸಿದ್ದ. ಕಣ್ಣಿಗೊಂದು ನೂರು ರುಪಾಯಿಯ ಕಪ್ಪು ಕನ್ನಡಕವನ್ನು ಏರಿಸಿಕೊಂಡು ಅವನು ಹೀರೋ ಪುಕ್‍ನಲ್ಲಿ ಹೋಗುತ್ತಿದ್ದರೆ ನನಗೆ ಅಸೂಯೆಯಾಗುತ್ತಿತ್ತು. ನಾನೂ ಒಂದು ಗಾಡಿ ತೆಗೆಸಿಕೊಳ್ಳಬೇಕು ಅನ್ನಿಸುತ್ತಿತ್ತು. ಮನೆಯಲ್ಲಿ ಕಾಲೇಜು ಶುರುವಾದಾಗ ಹೋಂಡಾ ತೆಗೆದುಕೊಡ್ತೀನಿ ಅಂದ ಮಾರನೇ ದಿನ ಪೂರ್ತಿ ಖುಷಿಯಲ್ಲಿದ್ದೆ. ಪುರುಷೋತ್ತಮನಿಗೆ ‘ನೋಡ್ದಾ ನಿನ್ದು ಹಳೇ ಗಾಡಿ. ನಾನು ಹೊಸ ಗಾಡಿ ತೆಗೆದುಕೊಳ್ತಿದ್ದೀನಿ’ ಎಂದೆಲ್ಲ ಹೇಳಿ ಹೊಟ್ಟೆ ಉರಿಸಬೇಕೆಂದು ನಿರ್ಧರಿಸಿದ್ದೆ. ನೋಡಿದ್ರೆ ಬೆಳಿಗ್ಗೆ ಫಿಸಿಕ್ಸ್ ಟ್ಯೂಷನ್ನಿಗೆ ಆಸಾಮಿ ನಾಪತ್ತೆ. ಕೆಮಿಷ್ಟ್ರಿ ಟ್ಯೂಷನ್ನಿನ ಹತ್ತಿರ ಸಿಕ್ಕಿದ. ಟ್ಯೂಷನ್ ಶುರುವಾಗಿಬಿಟ್ಟಿದ್ದರಿಂದ ಮಾತನಾಡಲಾಗಲಿಲ್ಲ. ಟ್ಯೂಷನ್ ಮುಗಿದ ಮೇಲೆ ‘ಯಾಕೋ ಬರಲಿಲ್ಲ ಬೆಳಿಗ್ಗೆ’ ಅಂತ ಕೇಳಿದ್ದಕ್ಕೆ “ಅಪ್ಪನಿಗ್ಯಾಕೋ ಸ್ವಲ್ಪ ಹುಷಾರಿರಲಿಲ್ಲ. ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ದೋ. ಅದಿಕ್ಕೆ ಬರಲಿಲ್ಲ”
‘ಹೌದಾ. ಈಗ ಹೇಗಿದ್ದಾರೆ? ಏನಾಗಿತ್ತು?’
“ಯಾಕೋ ಸ್ವಲ್ಪ ಎದೆ ನೋವು ಅಂತಿದ್ರು. ಹಾರ್ಟ್ ಅಟ್ಯಾಕ್ ಏನಾದ್ರೂ ಆಗೋಯ್ತ ಅಂತ ಗಾಬರಿಯಾಗಿತ್ತು. ಎಲ್ಲಾ ನಾರ್ಮಲ್ ಇತ್ತು. ಗ್ಯಾಸ್ಟ್ರೈಟಿಸ್ ಆಗಿದೆ ಅಷ್ಟೇ ಎಂದು ಮಾತ್ರೆ ಕೊಟ್ಟು ಕಳುಹಿಸಿದರು”
‘ಅಪ್ಪನ ಜೊತೆ ಇದ್ದು ನೋಡಿಕೊಳ್ಳೋದು ಬಿಟ್ಟು ಬಂದೇಬಿಟ್ಟಿದ್ದೀಯ’
“ಇಲ್ಲ ಹುಷಾರಾಗಿ ಮಲಗಿದ್ರು. ಅಮ್ಮ ಹೋಗಿ ಬಾ ಅಂದ್ರು. ಬಂದೆ”
‘ಸರಿ ಹಾಗಿದ್ರೆ ಹೊರಡು ನೀನು ಮನೆಗೆ’
“ಏನು ಆತುರ ಇಲ್ಲ ಕಣೇ. ಅಪ್ಪ ಸ್ವಲ್ಪ ಕುಡೀತಾರೆ. ನಿನ್ನೆ ಅಮ್ಮನ ಜೊತೆಗೇನೋ ಜಗಳವಾಗಿತ್ತು. ಸ್ವಲ್ಪ ಜಾಸ್ತಿ ಕುಡಿದಿದ್ದರು. ಅದಕ್ಕೇ ಹೀಗಾಗಿದೆ. ಗಾಬರಿಯಾಗುವಂತದ್ದೇನು ಇಲ್ಲ”
‘ಹಂಗಾಂದ್ರೆ ಸರಿ. ನಿನಗೊಂದು ವಿಷಯ ಹೇಳೋಣ ಅಂತ ಬೆಳಿಗ್ಗೆಯಿಂದ ನಿನ್ನೇ ಹುಡುಕ್ತಿದ್ದೆ. ಇವತ್ತು ಬೇಡ ಬಿಡು ನಾಳೆ ಹೇಳ್ತೀನಿ’
“ಅದೇನ್ ಹೇಳು”
‘ನಿದ್ದೆಗೆಟ್ಟು ಬಂದಿದೀಯ. ಹೋಗಿ ರೆಸ್ಟ್ ತಗೋ. ತುಂಬಾ ಮುಖ್ಯವಾದ ವಿಷಯವೇನಲ್ಲ. ನಾಳೆ ಹೇಳ್ತೀನಿ’
“ನೀನೀಗ ಹೇಳದೇ ಇದ್ದರೆ ನಾನು ಹೋಗೋದೇ ಇಲ್ಲ ನಿನ್ನನ್ನು ಹೋಗೋದಕ್ಕೆ ಬಿಡಲ್ಲ” ಎಂದವನು ಸೈಕಲ್ ಹ್ಯಾಂಡಲ್ ಹಿಡಿದುಕೊಂಡು ಬಿಟ್ಟ. ಇದೇನಿದು ರಸ್ತೆಯಲ್ಲಿ ಹಿಂಗೆ ಹ್ಯಾಂಡಲ್ ಹಿಡಿದುಕೊಂಡುಬಿಟ್ಟನಲ್ಲ ನೋಡಿದವರು ಏನಂತಾರೆ ಅಂತ ಗಾಬರಿ ಆಯಿತು.
‘ಅದಕ್ಯಾಕೆ ಸೈಕಲ್ ಹಿಡ್ಕೋತೀಯೋ. ಬಿಡು ಹೇಳ್ತೀನಿ. ನನಗೊಂದು ಕೈನೆಟಿಕ್ ಹೋಂಡಾ ತಕ್ಕೊಡಿ, ಇಷ್ಟೊಂದು ಸೈಕಲ್ ತುಳಿದು ಬಂದು ಓದೋದಕ್ಕೆಲ್ಲ ಆಗಲ್ಲ ಅಂತ ಹಟ ಮಾಡಿದೆ. ಅಪ್ಪ ಮೊದಲು ಬೇಡ ಅಂದರು; ಅಮ್ಮ ಕೂಡ ನನಗೇ ಸಪೋರ್ಟ್ ಮಾಡಿದ ಮೇಲೆ ಸರಿ ಕಾಲೇಜು ಶುರುವಾಗುವಷ್ಟರಲ್ಲಿ ತೆಗೆದುಕೊಡ್ತೀನಿ ಎಂದರು ಗೊತ್ತ. ನಿನ್ನದು ಹಳೇ ಗಾಡಿ, ನನ್ನದು ಹೊಸ ಗಾಡಿ’
“ಇನ್ನೂ ಬಂದಿಲ್ಲವಲ್ಲ ಬಿಡು”
‘ಬರುತ್ತಲ್ಲ’
“ಮತ್ತೆ ಪಾರ್ಟಿ ಕೊಡಿಸ್ಬೇಕು ನೀನು”
‘ಇನ್ನೂ ಬಂದಿಲ್ಲವಲ್ಲ ಬಿಡು’
“ಬರುತ್ತಲ್ಲ” ಇಬ್ಬರೂ ಮನಸಾರೆ ನಕ್ಕೆವು.
“ಇನ್ನು ಒಂದು ತಿಂಗಳು ಸೈಕಲ್ ತುಳಿಯುವ ಕಷ್ಟ ತಪ್ಪಿಸೋಕೆ ನನ್ನತ್ರ ಒಂದು ಐಡಿಯಾ ಇದೆ”
‘ಏನಪ್ಪಾ ಅದು’
“ಬೆಳಿಗ್ಗೆ ಫಿಸಿಕ್ಸ್ ಟ್ಯೂಷನ್ನಿಗೆ ಸೈಕಲ್ಲಲ್ಲಿ ಬಾ. ಸೈಕಲ್ ಅಲ್ಲೇ ನಿಲ್ಲಿಸಿಬಿಟ್ಟು ಕೆಮಿಷ್ಟ್ರಿ ಟ್ಯೂಷನ್ನಿಗೆ ನನ್ನ ಜೊತೆ ಹೀರೋ ಪುಕ್ಕಲ್ಲಿ ಬಂದುಬಿಡು. ತಿರ್ಗಾ ನಿನ್ನನ್ನು ಫಿಸಿಕ್ಸ್ ಟ್ಯೂಷನ್ನತ್ರ ಬಿಡ್ತೀನಿ. ಅಲ್ಲಿಂದ ನಿಮ್ಮ ಮನೆ ಹತ್ತಿರ ಅಲ್ವಾ ಒಂದು ನಿಮಿಷಕ್ಕೆ ಹೋಗಿಬಿಡಬಹುದು”
‘ಐಡಿಯಾ ಏನೋ ಚೆನ್ನಾಗಿದೆ. ಯಾರಾದ್ರೂ ನೋಡ್ಬಿಟ್ರೆ?’
“ನೋಡ್ಬಿಟ್ರೆ ಏನಾಯ್ತು?”
ಇವನಿಗದನ್ನೆಲ್ಲ ವಿವರಿಸಿ ಹೇಳೋದಕ್ಕಾಗುತ್ತ. ‘ಏನಿಲ್ಲ ಬಿಡೋ. ಇನ್ನೊಂದು ತಿಂಗಳು ಸೈಕಲ್ಲಲ್ಲೇ ಬರ್ತೀನಿ. ನಿನ್ನ ಡಬ್ಬಾ ಗಾಡಿಯಲ್ಲಿ ಯಾರು ಬರ್ತಾರೆ’ ಎಂದು ರೇಗಿಸಿ ಹೊರಟುಬಿಟ್ಟೆ.
“ನನ್ನ ಗಾಡಿ ಡಬ್ಬ ಅಂತೀಯ. ನಿನ್ನ ಹೊಸ ಗಾಡಿ ಬರ್ಲಿ. ಅದನ್ನೂ ಡಬ್ಬಾ ಮಾಡಿಬಿಡ್ತೀನಿ” ಎಂದವನು ಜೋರಾಗಿ ಹೇಳುತ್ತಿದ್ದರೆ ನಗುತ್ತಾ ಅವನೆಡೆಗೆ ನೋಡಿ ಬಾಯ್ ಮಾಡಿದೆ. ಸಾಗರ್ ನಿನ್ನನ್ನೊಂದು ಮಾತು ಕೇಳಲಾ?’
“ಕೇಳು”
‘ಹುಡುಗೀರ್ಗೇನೋ ಮುಟ್ಟಾದ ದಿನ ದೊಡ್ಡೋಳಾದ್ಲು ಅಂತ ಗೊತ್ತಾಗುತ್ತೆ. ನಿಮಗೆಂಗೆ ಗೊತ್ತಾಗುತ್ತೆ?’
“ಹ್ಹ ಹ್ಹ. ಬೆಳಿಗ್ಗೆ ಎದ್ದಾಗ ಚೆಡ್ಡಿ ಒದ್ದೆಯಾಗಿರುತ್ತಲ್ಲ ಅದರಿಂದ ಗೊತ್ತಾಗುತ್ತೆ!”
‘ಓ! ಹಂಗೆ! ಅದಾದ ಮೇಲೆ ಏನನ್ನಿಸುತ್ತೆ?’
“ಏನನ್ನಿಸುತ್ತೆ? ಇದೇನಿದು ರೀಸಸ್ ಮಾಡ್ಕೊಂಡುಬಿಟ್ಟಿದ್ದೀನಲ್ಲ ಅಂತ ಮೊದಲೆರಡು ಸಲ ಗಾಬರಿಯಾಗಿ ನಾಚಿಕೆಯಾಗುತ್ತೆ. ಅಂಟಟಾಗಿರೋದನ್ನು ಗಮನಿಸಿದಾಗ ಇದೇನೋ ಬೇರೆ ಅಂತ ಗುಮಾನಿ ಬರುತ್ತೆ. ಅಷ್ಟೊತ್ತಿಗೆ ಅದರ ಬಗ್ಗೆಯೆಲ್ಲ ಜ್ಞಾನವಿದ್ದಿದ್ದರಿಂದ ಮುಂದೆ ಮಲಗಿದಾಗ ಚಡ್ಡಿ ಒದ್ದೆ ಆಗದಂತೆ ಏನು ಮಾಡಬೇಕೋ ಅದನ್ನು ಮಾಡಲು ಶುರುಮಾಡಿದ್ದೆ”
‘ಅಂದ್ರೆ’ ದನಿಯಲ್ಲಿ ಗಾಬರಿ ಇದ್ದಿದ್ದು ನನ್ನ ಅರಿವಿಗೇ ಬಂದಿತ್ತು.
“ಅಯ್ಯಯ್ಯೋ ಮೈಥುನ ಅಲ್ಲ ಹಸ್ತ ಮೈಥುನ ಅಷ್ಟೇ!”
‘ಹ್ಹ ಹ್ಹ ಹ್ಹ’
“ಅದು ಸರಿ. ಕಬಾಬ್ ಮೇ ಹಡ್ಡಿ ಅನ್ನೋ ಥರಾ ನಿನ್ನ ಕತೆ ಹೇಳ್ಬೇಕಾದ್ರೆ ಇದೆಲ್ಲ ಯಾಕೆ ನೆನಪಾಯಿತು”
‘ನಾನು ಮುಟ್ಟಾಗಿದ್ದ ದಿನಗಳ ನೆನಪಾಯಿತು. ನಾನು ಮುಟ್ಟಾಗಿದ್ದೇ ಹತ್ತನೇ ತರಗತಿಯಲ್ಲಿ. ಮನೆಯವರೆಲ್ಲ ಅದರಲ್ಲೂ ಅಮ್ಮ ಇದೇನಿದು ಇಷ್ಟು ದಿನವಾದರೂ ಇವಳು ದೊಡ್ಡವಳೇ ಆಗಲಿಲ್ಲವಲ್ಲ ಅಂತ ಗಾಬರಿಯಾಗಿದ್ದರು. ಶಾಲೆಯಲ್ಲಿ ಗೆಳತಿಯರು ಡಯಾಪರ್ ಉಪಯೋಗಿಸುವ ಬಗ್ಗೆಯೆಲ್ಲ ಚರ್ಚೆ ಮಾಡುತ್ತಿರುವಾಗ ನನಗೂ ಗಾಬರಿ ಇರುತ್ತಿತ್ತು. ಯಾರಾದರೂ ನನ್ನನ್ನು ಕೇಳಿಬಿಟ್ಟರೆ ಹೇಗೆ ಅಂತ. ಗೆಳತಿಯರಿಗೂ ನಾನಿನ್ನೂ ಮುಟ್ಟಾಗಿಲ್ಲದ ಬಗ್ಗೆ ಗೊತ್ತಿತ್ತು. ಅದವರಿಗೆ ಅಸೂಯೆ ಉಂಟುಮಾಡುತ್ತಿತ್ತು. ತಿಂಗಳು ತಿಂಗಳು ರಕ್ತ ಚೆಲ್ಲುವ ಶ್ರಮದ ಜೊತೆಗೆ ಮನೆಯಲ್ಲಿ ತರಾವರಿ ಮಾತುಗಳನ್ನು ಕೇಳುವ ಕರ್ಮ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಒಬ್ಬರ ಮನೆಯಲ್ಲಿ ಅದು ಮುಟ್ಟಬೇಡ ಇದು ಮುಟ್ಟಬೇಡ ಅಲ್ಲಿ ಕೂರಬೇಡ ಇಲ್ಲಿ ಕೂರಬೇಡ ಎಂದರೆ ಕೆಲವರ ಮನೆಯಲ್ಲಿ ಆ ಎರಡು ನಾಲ್ಕು ದಿನಗಳು ಶಾಲೆಗೇ ಕಳುಹಿಸುತ್ತಿರಲಿಲ್ಲ! ಅಷ್ಟು ದಿನ ಇಲ್ಲದ ಬುದ್ಧಿವಾದಗಳೆಲ್ಲ ಮನೆಯಲ್ಲಿ ಶುರುವಾಗಿಬಿಟ್ಟಿದ್ದವು ಅವರಿಗೆ. ಅಲ್ಲಿ ಹೋಗ್ಬೇಡ, ಅವನ ಜೊತೆ ಏನದು ಅಷ್ಟು ಮಾತು, ಉತ್ತರಿಸಿ ಉತ್ತರಿಸಿ ಇವರಿಗೆಲ್ಲ ಬೇಸರವಾಗಿ ಇವಳು ಇನ್ನೂ ದೊಡ್ಡೋಳಾಗದೆ ನೆಮ್ಮದಿಯಾಗಿದ್ದಾಳಲ್ಲ ಎಂದು ಹೊಟ್ಟೆಉರಿದುಕೊಳ್ಳುತ್ತಿದ್ದರು. ನನಗೂ ಅವರನ್ನು ಕಂಡರೆ ಅಸೂಯೆಯಾಗುತ್ತಿತ್ತು’
“ಯಾಕೆ?”
‘ಯಾಕಂದ್ರೆ..... ಅಲ್ಲ ಕಣೋ ಇದನ್ನೆಲ್ಲ ನಿನ್ನತ್ರ ಹೇಳ್ಕೋಬೋದ’
“ಕೇಳೋಕೆ ನನಗೇನು ಕಷ್ಟವಿಲ್ಲ. ನಮ್ಮಿಬ್ಬರ ನಡುವಿನ ಚರ್ಚೆಯಲ್ಲಿ ಮುಚ್ಚಿಡುವಂತದ್ದೇನೋ ಇದೆ ಎಂದು ನನಗೆ ಅನ್ನಿಸುತ್ತಿಲ್ಲ. ಹೇಳೋ ಇಷ್ಟವಿದ್ದರೆ ಹೇಳಬಹುದು”
‘ಒರಟು ಒರಟಾಗಿ ಉತ್ತರ ಹೇಳೋದು ಹೆಂಗೆ ಅಂತ ನಿನ್ನಿಂದ ಕಲ್ತುಕೋಬೇಕು ನೋಡು’
“ಕಲಿಸಿ ಕೊಡ್ತೀನಿ. ಈಗ ನಿನಗ್ಯಾಕೆ ಅಸೂಯೆಯಾಯ್ತು ಹೇಳು”
‘ಕ್ಲಾಸಿನಲ್ಲಿ ಹುಡುಗರೆಲ್ಲ ಗೆಳತಿಯರ ಕಡೆಗೆ ಅವರ ಮುಖದಲ್ಲಿ ಮೂಡಿದ ಮೊಡವೆಯ ಕಡೆಗೆ ಪುಟಿಪುಟಿದು ಬೆಳೆಯುತ್ತಿದ್ದ ಎದೆಯ ಕಡೆಗೆ ನೋಡುವಷ್ಟು ದೊಡ್ಡವರಾಗಿಬಿಟ್ಟಿದ್ದರು. ಹುಡುಗರ ವರ್ತನೆ ಸಿಟ್ಟಿಗೆ, ಖುಷಿಗೆ, ದುಃಖಕ್ಕೆ ನಮ್ಮ ನಡುವೆ ಚರ್ಚೆಯಾಗುತ್ತಿತ್ತು. ಆ ಚರ್ಚೆಯ ಅರ್ಥವೇ ನನಗಾಗುತ್ತಿರಲಿಲ್ಲ. ಅಸೂಯೆ ಆಗದೇ ಇರುತ್ತ. ಅಂತೂ ಇಂತೂ ಹತ್ತನೇ ತರಗತಿಯ ಮಧ್ಯಭಾಗದಲ್ಲಿ ನಾನು ದೊಡ್ಡವಳಾದೆ! ಹೊಟ್ಟೆನೋವು ಬಾಧಿಸುತ್ತಿದ್ದರೂ ನನಗದರ ಪರಿವೆ ಇರಲಿಲ್ಲ. ಸದ್ಯ ಇನ್ನು ಮುಂದಾದರೂ ಗೆಳತಿಯರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದಲ್ಲ ಎಂದು ಖುಷಿಯೇ ಆಗಿತ್ತು. ಅಯ್ಯೋ ದೊಡ್ಡವಳಾಗಲಿಲ್ಲ ಅಂತ ಗೋಳಿಡುತ್ತಿದ್ದ ಅಮ್ಮ ಇವತ್ತು ಅಯ್ಯೋ ದೊಡ್ಡವಳಾಗಿಬಿಟ್ಟಳಲ್ಲ ಅಂತ ಗೋಳಿಡುತ್ತಿದ್ದಳು. ತಿಂಗಳೊಪ್ಪತ್ತಿನಲ್ಲಿ ನನ್ನ ಎದೆಯೂ….’
“ಅದೇನ್ ಎದೆ ಎದೆ…. ಎದೆ ನನಗೂ ಇದೆ. ಮೊಲೆ ಅಂದ್ರೆ ಆಗೋದಿಲ್ವೇ”
‘ಹಂಗನ್ನಕ್ಕೆ ಕಷ್ಟ ಕಣೋ’
“ಕರ್ಮ. ಸರಿ ಮುಂದಕ್ಕೇಳವ್ವ”
‘ಸರಿ ಬಿಡಪ್ಪ. ತಿಂಗಳೊಪ್ಪತ್ತಿನಲ್ಲಿ ನನ್ನ ಮೊಲೆಯೂ ದೊಡ್ಡದಾಯಿತು. ಕನ್ನಡಿ ಮುಂದೆ ನಿಂತರೆ ನನ್ನ ದೇಹ ರಚನೆಯ ಬಗ್ಗೆ ನನಗೇ ಹೆಮ್ಮೆಯಾಗುತ್ತಿತ್ತು ಗೊತ್ತ. ನನ್ನ ಪ್ರಕಾರ ಒಂದು ಹುಡುಗಿ ತುಂಬ ಖುಷಿಯಾಗಿರುವ ದಿನಗಳವು. ಈಗ ಆ ಮಾತು ಹೇಳೋದಿಕ್ಕಾಗಲ್ಲ. ಹುಡುಗೀರು ಪಾಪ ಪ್ರೈಮರಿ ಸ್ಕೂಲಲ್ಲೇ ದೊಡ್ಡೋರಾಗಿಬಿಡ್ತಾರೆ. ಅದೇನು ಅನ್ನೋದೇ ಇನ್ನೂ ಅವರಿಗೆ ತಿಳಿದಿರಲ್ಲ. ಮೊದಲ ಸಲ ಮುಟ್ಟಾಗಿದ್ದಲ್ಲವಾ ಮೂರು ದಿನ ಶಾಲೆಗೆ ಚಕ್ಕರ್ ಹೊಡೆದಿದ್ದೆ. ರಜೆ ಮುಗಿಸಿ ಶಾಲೆಗೆ ಹೋದರೆ ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದಾರೇನೋ ಅನ್ನೋ ಭ್ರಮೆ ಮೂಡುತ್ತಿತ್ತು. ಗೆಳತಿಯರಂತೂ “ವೆಲ್‍ಕಂ ಟು ದ ಕ್ಲಬ್" ಎಂದು ಸ್ವಾಗತ ಕೋರಿದ್ದರು. ಹುಡುಗರಿಗೂ ವಿಷಯ ಗೊತ್ತಾಗಿ ನನ್ನತ್ತಲೇ ಕದ್ದು ಕದ್ದು ನೋಡುತ್ತಿದ್ದಾರೆ ಎನ್ನಿಸುತ್ತಿತ್ತು. ಅವರು ನೋಡಿದರೋ ಇಲ್ಲವೋ ನಾನಂತೂ ಕದ್ದು ಕದ್ದು ನೋಡ್ತಿದ್ದೆ ನನ್ನನ್ಯಾರು ಕದ್ದು ನೋಡ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು. ಅದೇ ದಿನ ಕನ್ನಡ ಟೆಸ್ಟಿನ ಪೇಪರ್ ಕೊಟ್ರು. ನನ್ನದೇ ಜಾಸ್ತಿ ಮಾರ್ಕ್ಸು ಬಂದಿತ್ತು. ಕನ್ನಡ ತೆಗೆದುಕೊಳ್ತಿದ್ದ ಕಾಂತರಾಜ್ ಸರ್ರು ತುಂಬ ಯಂಗ್ ಆಗಿದ್ದರು. “ಕಂಗ್ರಾಟ್ಸ್ ಧರಣಿ” ಎಂದವರು ಕೈಕುಲುಕಿದ್ದು ಹುಟ್ಟಿಸಿದ ಪುಳಕ ಇನ್ನೂ ನೆನಪಿದೆ ನನಗೆ. ಹತ್ತದಿನೈದು ದಿನ ಅವರು ಪಾಠ ಮಾಡುತ್ತಿದ್ದರೆ ತಲೆಗೇ ಹೋಗುತ್ತಿರಲಿಲ್ಲ. ಅವರನ್ನು ನೋಡಿ ಕಳೆದುಹೋದಂತಾಗುತ್ತಿತ್ತು. ಈಗ ಮೆಡಿಕಲ್ ಎಲ್ಲಾ ಓದಿದ ಮೇಲೆ ಮೂರೇ ದಿನಕ್ಕೆ ಹಾರ್ಮೋನುಗಳು ಆ ಪರಿ ಕೆಲಸ ಮಾಡಲ್ಲ. ಬಹುಶಃ ಮುಟ್ಟಾಗುವುದನ್ನೇ ನಿರೀಕ್ಷಿಸುತ್ತಿದ್ದ ನನ್ನ ಮನಸ್ಸು ಅದನ್ನೆಲ್ಲ ಕಲ್ಪಿಸಿಕೊಂಡಿತೇನೋ ಎಂದನ್ನಿಸುತ್ತೆ. ಆದರೆ ಆಗ ಮಾತ್ರ ಮದುವೆಯಾದ್ರೆ ಇವರನ್ನೇ ಎಂದುಕೊಂಡಿದ್ದೂ ಇದೆ! ನನ್ನ ಫಸ್ಟ್ ಲವ್ ಅಥವಾ ಈಗಿನ ಹೊಸಭಾಷೆಯಲ್ಲಿ ಹೇಳಬೇಕಂದ್ರೆ ಇನ್‍ಫ್ಯಾಚುಯೇಷನ್ ಅವರೇ'
“ಮ್”
‘ಯಾಕೋ ಬೋರ್ ಹೊಡೀತಿದ್ಯಾ?’
“ಬೋರ್ ಅಲ್ಲ ಕಣೇ ನಿದ್ರೆ ಬರ್ತಿದೆ”
‘ಬೋರ್ ಹೊಡೆಯೋದಿಕ್ಕೆ ಅಲ್ವ ನಿದ್ರೆ ಬರೋದು’
“ಅಯ್ಯೋ ನಿನ್ನ. ಟೈಮೆಷ್ಟಾಯಿತು ನೋಡ್ದಾ? ಹನ್ನೆರಡೂವರೆ!”
‘ಅಯ್ಯಪ್ಪ ಅಷ್ಟೊಂದು ಟೈಮಾಗೋಯ್ತು. ಹಂಗಾದ್ರೆ ಮಲಕ್ಕೋ. ನಾಳೆ ರಾತ್ರಿ ರಾಜೀವ್ ಬಂದುಬಿಡ್ತಾರೆ. ನಾಡಿದ್ದು ನೈಟ್ ಡ್ಯೂಟಿ ಇದೆ. ನಾಡಿದ್ದೇ ಫೋನ್ ಮಾಡ್ತೀನಿ’
“ಸರಿ ಕಣೇ. ಬೇಜಾರ್ ಆಯ್ತ”
‘ಹೇ ಹಂಗೆಲ್ಲ ಏನಿಲ್ಲಪ್ಪ. ಟೈಮ್ ನೋಡ್ಲಿಲ್ಲ ಅಷ್ಟೇ’
ಫೋನ್ ಇಟ್ಟೆ.

ಹೀಗಾಗಿ ಲೇಖನಗಳು ಒಂದು ಬೊಗಸೆ ಪ್ರೀತಿ - 14
ಎಲ್ಲಾ ಲೇಖನಗಳು ಆಗಿದೆ ಒಂದು ಬೊಗಸೆ ಪ್ರೀತಿ - 14 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಒಂದು ಬೊಗಸೆ ಪ್ರೀತಿ - 14 ಲಿಂಕ್ ವಿಳಾಸ https://dekalungi.blogspot.com/2019/04/14.html
0 Response to "ಒಂದು ಬೊಗಸೆ ಪ್ರೀತಿ - 14"
ಕಾಮೆಂಟ್ ಪೋಸ್ಟ್ ಮಾಡಿ