ಶೀರ್ಷಿಕೆ : News and Photo Date: 5-3-2019
ಲಿಂಕ್ : News and Photo Date: 5-3-2019
News and Photo Date: 5-3-2019
ಆರೋಗ್ಯ ಕರ್ನಾಟಕ ಯೋಜನೆಗೆ 1960 ಕೋಟಿ ರೂ.
************************************************
ಕಲಬುರಗಿ,ಮಾ.05(ಕ.ವಾ)- ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಎಲ್ಲೆಡೆಯೂ ಆರೋಗ್ಯ ಸೇವೆಗಳು ಲಭಿಸಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರವು “ಆರೋಗ್ಯ ಕರ್ನಾಟಕ” ಯೋಜನೆ ಜಾರಿಗೆ ತಂದಿದ್ದು, ಇದಕ್ಕಾಗಿ 1960 ಕೋಟಿ ರೂ. ಅನುದಾನ ಒದಗಿಸಿದೆ. ಇದೂ ದೇಶದಲ್ಲಿಯೆ ಮಾದರಿಯಾದ ಯೋಜನೆಯಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಹಾಗೂ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಮಂಗಳವಾರ ಚಿತ್ತಾಪುರ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಾರ್ವಜನಿಕ ಆಸ್ಪತ್ರೆ, ಜಯದೇವ ಹಾಗೂ ಕಿದ್ವಾಯಿ ಆಸ್ಪತ್ರೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ರೀಯ ಆರೋಗ್ಯ ಅಭಿಯಾನದಡಿ ಆಯುಷ್ಮಾನ ಭಾರತ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ದೇಶದ 50 ಕೋಟಿ ಜನರು ಸವಲತ್ತು ಪಡೆಯುವ ಈ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು 2 ಲಕ್ಷ ಕೋಟಿ ರೂ. ಅನುದಾನ ಒದಗಿಸಬೇಕಾಗಿತ್ತಾದರು ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ ಕ್ರಮವಾಗಿ ಕೇವಲ 3200 ಹಾಗೂ 6600 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಸರಿಯಲ್ಲ. ಆಯುಷ್ಮಾನ ಭಾರತ ಯೋಜನೆಯಡಿ ಕೇಂದ್ರ ಸರ್ಕಾರವು ಶೇ.60 ಹಾಗೂ ರಾಜ್ಯ ಸರ್ಕಾರವು ಶೇ.40ರಷ್ಟು ಅನುದಾನ ಪಾವತಿಸುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ಬಡ ಜನರಿಗೆಂದೆ ಆಯೋಜಿಸಲಾಗಿರುವ ಇಂತಹ ಬೃಹತ್ ಆರೋಗ್ಯ ಮೇಳದಲ್ಲಿ ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸುವುದಲ್ಲದೆ ಅಗತ್ಯಬಿದ್ದಲ್ಲಿ ಮುಂದಿನ ಚಿಕಿತ್ಸೆಗೆ ರೆಫರ್ ಸಹ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆಯಬೇಕು ಎಂದರು.
ಕೇಂದ್ರ ಸರ್ಕಾರವು 2 ಲಕ್ಷ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿತ್ತಾದರು ನ್ಯಾಷನಲ್ ಸ್ಯಾಂಪಲ್ ಸರ್ವೇ ಸಂಸ್ಥೆ ಹಾಗೂ ಲೇಬರ್ ಆರ್ಗೈನೇಷನ್ ಸಂಸ್ಥೆ ಪ್ರಕಾರ ಕೇವಲ 27 ಲಕ್ಷ ಹುದ್ದೆಗಳನ್ನು ಮಾತ್ರ ತುಂಬಲು ಸಾಧ್ಯವಾಗಿದೆ ಎಂದ ಅವರು ಉದ್ಯೋಗ ಸೃಜಿಸುವ ಕೆಲಸ ಕೇಂದ್ರ ಸರ್ಕಾರದಿಮದ ತ್ವರಿತವಾಗಿ ನಡೆಯಲಿ ಎಂದರು.
ಯು.ಪಿ.ಎ.-2ರ ಸರ್ಕಾರದಲ್ಲಿ ದೀರ್ಘವಾಧಿ ಬೆಳೆ ತೊಗರಿಗೆ ಕಡಿಮೆ ಮತ್ತು ಅಲ್ಪಾವಧಿ ಬೆಳೆಗಳಾದ ಉದ್ದು, ಹೆಸರಿಗೆ ಹೆಚ್ಚಿನ ಬೆಂಬಲ ಬೆಲೆ ಇದ್ದಂತಹ ತಾರತಮ್ಯವನ್ನು ಹೋಗಲಾಡಿಸಿ ತೊಗರಿಗೆ ಸೂಕ್ತ ಎಂ.ಎಸ್.ಪಿ. ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ ಕೆ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ 2005ರಿಂದಲೆ ದೇಶದಲ್ಲಿ ರಾಷ್ಟೀಯ ಆರೋಗ್ಯ ಅಭಿಯಾನ ಜಾರಿಯಲ್ಲಿದ್ದು, ಈ ಯೋಜನೆಯಿಂದ ಶಿಶು ಮತ್ತು ತಾಯಿ ಮರಣ, ಅಪೌಷ್ಠಿಕ ತಡೆಗಟ್ಟಲು ಮತ್ತು ನಿಯಂತ್ರಣ, ಉಚಿತ ಅಂಬುಲೆನ್ಸ್ ಸೇವೆ ಸೇರಿದಂತೆ ಇನ್ನೀತ್ತರ ಆರೋಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನೆರವಾಗಿದೆ ಎಂದರು.
ಜಯದೇವ ಮತ್ತು ಕಿದ್ವಾಯಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಯೂನೈಟೆಡ್, ವಾತ್ಸಲ್ಯ, ಸನ್‍ರೈಸ್, ಪಾಟೀಲ ಕಿಡ್ನಿ, ಗುಲಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆಗಳು ಸಹ ಈ ಮೇಳಕ್ಕೆ ಕೈಜೋಡಿಸಿದ್ದರು. ಹೃದ್ರೋಗ, ಕ್ಯಾನ್ಸರ್, ಚರ್ಮ, ಕೀಲು ಮತ್ತು ಎಲುಬು, ಮೂತ್ರಪಿಂಡ, ನರರೋಗ, ಗ್ಯಾಸ್ಟ್ರೋ ಎಂಟ್ರೋಲಾಜಿ, ಅಂಧತ್ವ, ಮಧುಮೇಹ, ಮಾನಸಿಕ, ದಂತ, ಕುಷ್ಠರೋಗ, ಕ್ಷಯರೋಗ, ಕಿವಿ, ಮೂಗು ಮತು ಗಂಟಲು, ಮಕ್ಕಳ ಸಂಬಂಧಿತ ಕಾಯಿಲೆಗಳಿಗೆ 45ಕ್ಕೂ ಹೆಚ್ಚು ತಜ್ಞ ವೈದ್ಯರುಗಳು ಮೇಳದಲ್ಲಿ ಭಾಗವಹಿಸಿ ರೋಗಿಗಳನ್ನು ಪರೀಕ್ಷಿಸಿದರು. ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಮೇಳದಲ್ಲಿ ಪ್ರತ್ಯೇಗ ಮಳಿಗೆ ಹಾಕಿ ಸಾರ್ವಜನಿಕರಿಗೆ ಅಟರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್, ಚಿತ್ತಾಪುರ ತಾಲೂಕ ಪಂಚಾಯತ್ ಅಧ್ಯಕ್ಷ ಜಗನಗೌಡ ಪೊಲೀಸ್ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ಪಾಟೀಲ, ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಪಾಟೀಲ, ಶಿವರುದ್ರಪ್ಪ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ. ಓಂಪ್ರಕಾಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಂಬಾರಾಯ ರುದ್ರವಾಡಿ, ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ಡಾ.ರಶೀದ, ಮೆಹಮೂದ ಪಟೇಲ, ಆಲಂ ಖಾನ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೇಳಕ್ಕೆ ಸಾಕ್ಷಿಯಾದರು. ಚಿತ್ತಾಪುರ ತಾಲೂಕಾ ಆರೋಗ್ಯಾಧಿಕಾರಿ ಸುರೇಶ ಮೇಕಿನ ಸ್ವಾಗತಿಸಿದರು.
1500 ರೋಗಿಗಳ ತಪಾಸಣೆ, 200 ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಶಿಪಾರಸ್ಸು:- ಇಂದಿಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಚಿತ್ತಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಿಂದ ಸುಮಾರು 1500 ರೋಗಿಗಳು ತಪಾಸಣೆಗೆ ಒಳಗಾಗಿದ್ದು, 200 ರೋಗಿಗಳನ್ನು ಮುಂದಿನ ಹಂತದ ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್ ಮಾಹಿತಿ ನೀಡಿದರು.ಮಾರ್ಚ್ 7ರಂದು ಕಾಯಕ ಶರಣರ ಜಯಂತ್ಯೋತ್ಸವ ಕಾರ್ಯಕ್ರಮ
**********************************************************
ಕಲಬುರಗಿ,ಮಾರ್ಚ್.05.(ಕ.ವಾ.)-ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರುಗಳಾದ ಮಾದರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತಿ ಆಚರಣೆಯನ್ನು ಕಲಬುರಗಿ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಾರ್ಚ್ 7ರಂದು ಗುರುವಾರ ಬೆಳಿಗ್ಗೆ 11.30 ಗಂಟೆಗೆ ಆಯೋಜಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ ಹಾಗೂ ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಮ್.ವಾಯ್. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ ಹಾಗೂ ಸುಭಾಷ ಗುತ್ತೇದಾರ್ ವಿಶೇಷ ಆಹ್ವಾನಿತರಾಗಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಕೋಡ್ಲಾ ಉರಿಲಿಂಗಪೆದ್ದಿ ಮಠದ ಅಧ್ಯಕ್ಷ ಶಂಕರ ಕೋಡ್ಲಾ, ಶರಣ ಡೋಹರ ಕಕ್ಕಯ್ಯಾ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಸಾಯಬಣ್ಣ ಹೋಳ್ಕರ್, ಅಖಿಲ ಭಾರತ ಬಸವ ಮಾದಾರ ಚನ್ನಯ್ಯ ಸಮಾಜದ ಅಧ್ಯಕ್ಷ ಸಂಬಣ್ಣ ವಾಲೀಕರ, ಮಾದರ ಧೂಳಯ್ಯ ಸಮಾಜದ ಅಧ್ಯಕ್ಷ ರಮೇಶ ಹೊಸಮನಿ ಹಾಗೂ ಜಿಲ್ಲಾ ಸಮಗಾರ ಹರಳಯ್ಯಾ ಸಮಾಜದ ಅಧ್ಯಕ್ಷ ಕಾಶಿರಾಯ ನಂದೂರಕರ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಚೇರಿಯ ಲೆಕ್ಕಪತ್ರ ಅಧೀಕ್ಷಕ ವೆಂಕಟೇಶ ಜನಾದ್ರಿ ಅವರು ವಿಶೇಷ ಉಪನ್ಯಾಸ ನೀಡುವರು.
ಜಯಂತ್ಯೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಯಿಂದ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಕಾಯಕ ಶರಣರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ.

ವಿಶಾಲ ಅವರಿಗೆ ಪಿಹೆಚ್.ಡಿ.
************************
ಕಲಬುರಗಿ,ಮಾ.05.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ದೈಹಿಕ ಶಿಕ್ಷಣ ವಿಷಯದಲ್ಲಿ ವಿಶಾಲ ಭೀಮಶಾ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಹೆಚ್.ಎಸ್. ಜಂಗೆ ಅವರ ಮಾರ್ಗದರ್ಶನದಲ್ಲಿ “ಎ ಕ್ರಿಟಿಕಲ್ ಸ್ಟಡಿ ಆನ್ ದಿ ಎಫೆಕ್ಟ್ ಆಫ್ ಫಿಜಿಕಲ್ ಫಿಟನೆಸ್ ಪ್ಯಾರಾಮಿಟರ್ಸ್ ಆಂಡ್ ಸೈಕಾಲೋಜಿಕಲ್ ಫ್ಯಾಕ್ಟರ್ಸ್ ಆನ್ ಸರ್ವಿಸ್ ಆಂಡ್ ರಿಪಿಟೆಡ್ ವಾಲಿಬಾಲ್ ಫರಫಾರಮೆನ್ಸ್ ಆಫ್ ಕಾಲಿಜಿಯೆಟ್ ಮೆನ್ ವಾಲಿಬಾಲ್ ಪ್ಲೇಯರ್ಸ್ ಆ್ಯಂಡ್ ಹೈದ್ರಾಬಾದ ಕರ್ನಾಟಕ ರಿಜನ್ ” ಕುರಿತು ವಿಶಾಲ ಭೀಮಶಾ ಅವರು ಪ್ರಬಂಧವನ್ನು ಮಂಡಿಸಿದ್ದರು.

ರಾಠೋಡ ವಿನೋದಕುಮಾರ ಅವರಿಗೆ ಪಿಹೆಚ್.ಡಿ.
*******************************************
ಕಲಬುರಗಿ,ಮಾ.05.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಭೌತಶಾಸ್ತ್ರ ವಿಷಯದಲ್ಲಿ ರಾಠೋಡ ವಿನೋದಕುಮಾರ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ವಿ.ಎಂ. ಜಾಲಿ ಅವರ ಮಾರ್ಗದರ್ಶನದಲ್ಲಿ “ಸಿಂಥೆಸಿಸ್ ಆ್ಯಂಡ್ ಸ್ಟಡೀಸ್ ಆಫ್ ಲೀಥಿಯಂ-ಝಿಂಕ್ ಫೈರೈಟ್ಸ್” ಕುರಿತು ರಾಠೋಡ ವಿನೋಧಕುಮಾರ ಅವರು ಪ್ರಬಂಧವನ್ನು ಮಂಡಿಸಿದ್ದರು.

ಫರಹಾನಾ ಪರ್ವೀನ್ ಅವರಿಗೆ ಪಿಹೆಚ್.ಡಿ.
************************************
ಕಲಬುರಗಿ,ಮಾ.05.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಭೌತಶಾಸ್ತ್ರ ವಿಷಯದಲ್ಲಿ ಫರಹಾನಾ ಪರ್ವೀನ್ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಬಸವರಾಜ ಸಣ್ಣಕ್ಕಿ ಅವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ಸರಫೇಸ್ ಪ್ಲಾಸ್ಮಾ ಮೀಡಿಯೆಟೆಡ್ ಹಾಟ್ ಎಲೆಕ್ಟ್ರಾನ್ ಜನರೇಶನ್ ಆಂಡ್ ದೇರ್ ಅಪ್ಲಿಕೇಶನ್ ಇನ್ ಎನರ್ಜಿ ಹಾರ್ವೇಸ್ಟಿಂಗ್” ಕುರಿತು ಫರಹಾನಾ ಪರ್ವಿನ್ ಅವರು ಪ್ರಬಂಧವನ್ನು ಮಂಡಿಸಿದ್ದರು.

ಶೇಖರರಾಜ್ ಅವರಿಗೆ ಪಿಹೆಚ್.ಡಿ.
*****************************
ಕಲಬುರಗಿ,ಮಾ.05.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಮಹಿಳಾ ಅಧ್ಯಯನ ವಿಷಯದಲ್ಲಿ ಶೇಖರರಾಜ್ ತಿಪ್ಪಣ್ಣ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಪಿ.ಬಿ. ರಾಠೋಡ ಅವರ ಮಾರ್ಗದರ್ಶನದಲ್ಲಿ “ಸೋಷಿಯೋ-ಎಕನಾಮಿಕ್ಸ್ ಸ್ಟೇಟಸ್ ಆಫ್ ವುಮೆನ್: ಎ ಸ್ಟಡಿ ಆಫ್ ಹೈದ್ರಾಬಾದ ಕರ್ನಾಟಕ” ಕುರಿತು ಶೇಖರರಾಜ್ ತಿಪ್ಪಣ್ಣ ಅವರು ಪ್ರಬಂಧವನ್ನು ಮಂಡಿಸಿದ್ದರು.

ಬಾಡಿಗೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ
********************************
ಕಲಬುರಗಿ,ಮಾ.05.(ಕ.ವಾ.)-ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಹೊಸ ಬಾಡಿಗೆ ಕಟ್ಟಡ ಬೇಕಾಗಿದೆ. ಆಸಕ್ತಿಯುಳ್ಳ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಈ ಬಾಡಿಗೆ ಕಟ್ಟಡವು ಕಲಬುರಗಿ ನಗರದ ಸುಪರ ಮಾರ್ಕೇಟ್‍ದಿಂದ ರೈಲ್ವೆ ನಿಲ್ದಾಣ ವ್ಯಾಪ್ತಿರೊಳಗಡೆ ಸುಸಜ್ಜಿತ ಹಾಗೂ ಸೂಕ್ತವಾರ ಕಚೇರಿ ಸ್ವರೂಪದ್ದಾಗಿರಬೇಕು. ಆಸಕ್ತಿಯುಳ್ಳ ಕಟ್ಟಡ ಮಾಲೀಕರು ಕೂಡಲೇ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಶ್ರೀದತ್ತ ನಗರ ಉದನೂರ ರೋಡ, ಜಯತೀರ್ಥ ಕಲ್ಯಾಣ ಮಂಟಪ ಹಿಂಡುಗಡೆ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 9900882932, 9148548523 ಗಳಿಗೆ ಸಂಪರ್ಕಿಸಬೇಕು. ಸಾರ್ವಜನಿಕರ ಆಕ್ಷೇಪಣೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಆದೇಶ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಈಗ ಸಧ್ಯ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಾಣೆಯಾದ ಯುವಕನ ಪತ್ತೆಗೆ ಮನವಿ
**********************************
ಕಲಬುರಗಿ,ಮಾ.05.(ಕ.ವಾ.)-ಆಳಂದ ತಾಲೂಕಿನ ಕೇರಿ ಅಂಬಲಗಾ ಗ್ರಾಮದ 28 ವರ್ಷದ ಅನೀಲಕುಮಾರ ಅಂಬಾರಾಯ ಪೂಜಾರಿ ಈತನು 2018ರ ನವೆಂಬರ್ 6 ರಂದು ಬೆಳಿಗ್ಗೆ 10 ಗಂಟೆಗೆ ಎಂದಿನಂತೆ ಮನೆಯಿಂದ ತಂಬಿಗೆ ಹಿಡಿದುಕೊಂಡು ಶೌಚಕ್ಕೆ ಹೋಗಿ ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.
ಐದು ಅಡಿ ಐದು ಇಂಚು ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಸಾದಾಕಪ್ಪು ಮೈಬಣ್ಣ, ಕಪ್ಪುಬಣ್ಣದ ತಲೆ ಕೂದಲು ಹೊಂದಿದ್ದು, ಕೆಂಪು ಬಣ್ಣದ ತುಂಬಾ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಈ ವ್ಯಕ್ತಿಯ ಕಾಣೆಯಾದ ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನ ಸುಳಿವು ಸಿಕ್ಕಲ್ಲಿ ಕೂಡಲೇ ನರೋಣಾ ಪೊಲೀಸ್ ಠಾಣೆಗೆ ತಿಳಿಸುವಂತೆ ನರೋಣಾ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಕೋರಿದ್ದಾರೆ.

ಹೀಗಾಗಿ ಲೇಖನಗಳು News and Photo Date: 5-3-2019
ಎಲ್ಲಾ ಲೇಖನಗಳು ಆಗಿದೆ News and Photo Date: 5-3-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 5-3-2019 ಲಿಂಕ್ ವಿಳಾಸ https://dekalungi.blogspot.com/2019/03/news-and-photo-date-5-3-2019.html
0 Response to "News and Photo Date: 5-3-2019"
ಕಾಮೆಂಟ್ ಪೋಸ್ಟ್ ಮಾಡಿ