News and Photo Date: 29--03--2019

News and Photo Date: 29--03--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 29--03--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 29--03--2019
ಲಿಂಕ್ : News and Photo Date: 29--03--2019

ಓದಿ


News and Photo Date: 29--03--2019



ಲೋಕಸಭಾ ಚುನಾವಣೆ: ಮೂವರು ಅಭ್ಯರ್ಥಿಗಳಿಂದ 03 ನಾಮಪತ್ರಗಳು ಸಲ್ಲಿಕೆ 
*********************************************************************
ಕಲಬುರಗಿ,ಮಾ.28.(ಕ.ವಾ.)-05-ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರಕ್ಕೆ 2019ರ ಏಪ್ರಿಲ್ 23ರಂದು ನಡೆಯುವ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಶುಕ್ರವಾರÀದಂದು ಮೂವರು ಅಭ್ಯರ್ಥಿಗಳಿಂದ 03 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ. 
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಮಹೇಶ ಈಶ್ವರ ನಾಯಕ ಒಂದು ನಾಮಪತ್ರ, ಭಾರತೀಯ ಪಿಪಲ್ಸ್ ಪಕ್ಷದಿಂದ ಶಂಕರ ಲಿಂಬಾಜಿ ಜಾಧವ ಒಂದು ನಾಮಪತ್ರ ಹಾಗೂ ಶಶಿಧರ ಬಸವರಾಜ ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 4 ರಂದು ಕೊನೆಯ ದಿನವಾಗಿದೆ. ಏಪ್ರಿಲ್ 05 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನ ಏಪ್ರಿಲ್ 8 ಇರುತ್ತದೆ. ಇಲ್ಲಿಯವರೆಗೆ ಮೂವರು ಅಭ್ಯರ್ಥಿಗಳು 03 ನಾಮಪತ್ರಗಳು ಸಲ್ಲಿಸಿದಂತಾಗಿದೆ.
ಲೋಕಸಭಾ ಚುನಾವಣೆ: ಸಾಮಾನ್ಯ ಹಾಗೂ ಪೊಲೀಸ್ ವೀಕ್ಷಕರ ನೇಮಕ
****************************************************************
ಕಲಬುರಗಿ,ಮಾರ್ಚ್.29.(ಕ.ವಾ.)-ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು 05-ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರಕ್ಕೆ ತಲಾ ಓರ್ವ ಸಾಮಾನ್ಯ ವೀಕ್ಷಕ ಹಾಗೂ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಹಾಗೂ ಅಹವಾಲುಗಳಿದ್ದರೆ ನೇರವಾಗಿ ಸಾಮಾನ್ಯ ಹಾಗೂ ಪೊಲೀಸ್ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
ಸಾಮಾನ್ಯ ವೀಕ್ಷಕ: ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ವೆಸ್ಟಬೆಂಗಾಲ ರಾಜ್ಯದ ಐ.ಎ.ಎಸ್. ಅಧಿಕಾರಿ ಪರ್ವೇಜ್ ಅಹ್ಮದ್ ಸಿದ್ದಿಕ್ಕಿ ಅವರನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಿದೆ. ಅವರ ಮೊಬೈಲ್ ಸಂಖ್ಯೆ 9933770000ಗೆ ಇರುತ್ತದೆ. 
ಪೊಲೀಸ್ ವೀಕ್ಷಕ:- ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಹರಿಯಾಣ ರಾಜ್ಯದ ಐ.ಪಿ.ಎಸ್. ಅಧಿಕಾರಿ ಡಾ. ರಾಜಶ್ರೀ ಸಿಂಗ್ ಅವರನ್ನು ಪೊಲೀಸ್ ವೀಕ್ಷಕರನ್ನಾಗಿ ನೇಮಿಸಿದೆ. ಅವರ ಮೊಬೈಲ್ ಸಂಖ್ಯೆ 9582200101 ಇರುತ್ತದೆ.
ಚುನಾವಣಾ ಮಾಹಿತಿ ಮತ್ತು ದೂರಿಗಾಗಿ 1950ಗೆ ಕರೆ ಮಾಡಿ
*****************************************************
ಕಲಬುರಗಿ,ಮಾ.29.(ಕ.ವಾ)-ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಮಾಹಿತಿಯನ್ನು ಹಾಗೂ ದೂರುಗಳನ್ನು ದಾಖಲಿಸಲು ಶುಲ್ಕರಹಿತ ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
1950 ಸಹಾಯವಾಣಿಗೆ ಕರೆ ಮಾಡುವುದರಿಂದ ಚುನಾವಣೆಯ ಸಮಗ್ರ ಮಾಹಿತಿ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸದರಿ ಸಹಾಯವಾಣಿ ಸಂಖ್ಯೆಗೆ ಕರೆ ದೂರು ಸಹಿತ ದಾಖಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 
ಲೋಕಸಭಾ ಚುನಾವಣೆ:
ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ 19.20 ಲಕ್ಷ ಮತದಾರರರು 
********************************************************
ಕಲಬುರಗಿ,ಮಾ.29.(ಕ.ವಾ.).5-ಗುಲಬರ್ಗಾ ಲೋಕಸಭಾ (ಮೀಸಲು) ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ 2019ರ ಏಪ್ರಿಲ್ 23ರಂದು ಮತದಾನ ನಡೆಯಲಿದೆ. 05-ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದಲ್ಲಿ ಒಟ್ಟು 19,20,977 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ 9,68,242 ಪುರುಷ ಮತ್ತು 9,52,735 ಮಹಿಳಾ ಮತದಾರರು ಸೇರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
34-ಅಫಜಲಪುರ ವಿಧಾನಸಭಾ ಕ್ಷೇತ್ರ: 1,12,986 ಪುರುಷ, 1,07,141 ಮಹಿಳೆ ಸೇರಿದಂತೆ ಒಟ್ಟು 2,20,127 ಮತದಾರರಿದ್ದಾರೆ. 35-ಜೇವರ್ಗಿ ವಿಧಾನಸಭಾ ಕ್ಷೇತ್ರ: 1,17,164 ಪುರುಷ, 1,15,903 ಮಹಿಳೆ ಸೇರಿದಂತೆ ಒಟ್ಟು 2,33,067 ಮತದಾರರಿದ್ದಾರೆ. 39-ಗುರುಮಿಠಕಲ್ ವಿಧಾನಸಭಾ ಕ್ಷೇತ್ರ: 1,20,879 ಪುರುಷ, 1,21,761 ಮಹಿಳೆ ಸೇರಿದಂತೆ ಒಟ್ಟು 2,42,640 ಮತದಾರರಿದ್ದಾರೆ. 40-ಚಿತ್ತಾಪುರ ವಿಧಾನಸಭಾ ಕ್ಷೇತ್ರ: 1,14,018 ಪುರುಷ, 1,13,269 ಮಹಿಳೆ ಸೇರಿದಂತೆ ಒಟ್ಟು 2,27,287 ಮತದಾರರಿದ್ದಾರೆ. 41-ಸೇಡಂ ವಿಧಾನಸಭಾ ಕ್ಷೇತ್ರ: 1,06,277 ಪುರುಷ, 1,08,268 ಮಹಿಳೆ ಸೇರಿದಂತೆ ಒಟ್ಟು 214545 ಮತದಾರರಿದ್ದಾರೆ. 
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ: 1,28,730 ಪುರುಷ, 121358 ಮಹಿಳೆ ಸೇರಿದಂತೆ ಒಟ್ಟು 250088 ಮತದಾರರಿದ್ದಾರೆ. 44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ: 1,29,760 ಪುರುಷ, 1,29,914 ಮಹಿಳೆ ಸೇರಿದಂತೆ ಒಟ್ಟು 259674 ಮತದಾರರಿದ್ದಾರೆ. 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ: 1,38,428 ಪುರುಷ 1,35,121 ಮಹಿಳೆ ಸೇರಿದಂತೆ ಒಟ್ಟು 2,73,549 ಮತದಾರರಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ
****************************
ಏಪ್ರಿಲ್ 24ರವರೆಗೆ ಸರ್ಕಾರಿ ಕಚೇರಿಗಳ ವೇಳೆಯಲ್ಲಿ ಬದಲಾವಣೆ ಇಲ್ಲ
************************************************************
ಕಲಬುರಗಿ,ಮಾ.29.(ಕ.ವಾ.)-ಗುಲಬರ್ಗಾ ಲೋಕಸಭಾ (ಮೀಸಲು) ಮತಕ್ಷೇತ್ರದ ಚುನಾವಣೆ ಕಾರ್ಯದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಾಲೂಕು ಕಚೇರಿಗಳು, ನಾಡ ಕಚೇರಿಗಳ ಸಿಬ್ಬಂದಿಗಳು ಹಾಗೂ ಇತರೆ ಎಲ್ಲ ಕಲಬುರಗಿ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ/ಸಿಬ್ಬಂದಿಯವರು ಮೊದಲಿನಂತೆ 2019ರ ಏಪ್ರಿಲ್ 1 ರಿಂದ ಏಪ್ರಿಲ್ 24ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ. 
ಇದಲ್ಲದೇ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ/ ನೌಕರರು ಚುನಾವಣಾ ಅಧಿಕಾರಿಗಳ ಆದೇಶದಂತೆ ಚುನಾವಣಾ ಕರ್ತವ್ಯಗಳನ್ನು ಚಾಚೂ ತಪ್ಪದೇ ಕರ್ತವ್ಯ ನಿರ್ವಹಿಸಬೇಕು. ಅದೇ ರೀತಿ ಲೋಕಸಭಾ ಚುನಾವಣೆ ಚುನಾವಣೆ ನಂತರ ಅಂದರೆ 2019ರ ಏಪ್ರಿಲ್ 25 ರಿಂದ ಮೇ 31 ರವರೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕೆಂದು ಅವರು ತಿಳಿಸಿದ್ದಾರೆ. 
ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಸಮಯವನ್ನು 2019ರ ಏಪ್ರಿಲ್ 1 ರಿಂದ ಮೇ 31 ರವರೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಿಗದಿಪಡಿಸಿ ಈಗಾಗಲೇ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. ಲೋಕಸಭಾ ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೇಮಕಾತಿ ಹೊಂದಿದ ಶಿಕ್ಷಕರ ಮೂಲ ಅಂಕಪಟ್ಟಿಗಳ ನೈಜತೆ ಪರಿಶೀಲನೆ 
***************************************************************
ಕಲಬುರಗಿ,ಮಾ.29.(ಕ.ವಾ.). ಕಲಬುರಗಿ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ( 6ರಿಂದ 8 ತರಗತಿಗಳ) ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಶಿಕ್ಷಕರು ತಮ್ಮ ಎಲ್ಲ ಮೂಲ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಗಾಗಿ ಮಂಡಳಿ, ವಿಶ್ವವಿದ್ಯಾಲಯಗಳಿಂದ ನಿಗದಿಪಡಿಸಿದ ಶುಲ್ಕವನ್ನು ಚಾಲನ್/ಡಿ.ಡಿ. ಮೂಲಕ ಪಾವತಿಸಿ, ನಂತರ ಚಲನ್ ಮತ್ತು ಡಿ.ಡಿ.ಯನ್ನು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 
ಶಿಕ್ಷಕರ ಪ್ರಮಾಣಪತ್ರಗಳ ನೈಜತೆಯನ್ನು ಆಯಾ ಮಂಡಳಿ ಹಾಗೂ ವಿಶ್ವವಿದ್ಯಾಲಯಗಳಿಂದ ಪರಿಶೀಲಿಸಿಕೊಂಡ ನಂತರ ಅರ್ಹತಾ ಪ್ರಮಾಣಪತ್ರಗಳನ್ನು ಜಾರಿಗೊಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಎ.ಸಿ.ಬಿ. ಅಧಿಕಾರಿಗಳಿಂದ ಜನಸಂಪರ್ಕ ಸಭೆ
***************************************
ಕಲಬುರಗಿ,ಮಾ.29.(ಕ.ವಾ)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿಗಳು 2019ರ ಏಪ್ರಿಲ್ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಕಲಬುರಗಿ ಎಸಿಬಿ ಪೊಲೀಸ್ ಠಾಣಾ ಮಟ್ಟದ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ ಎಸಿಬಿ ಪೊಲೀಸ್ ಠಾಣೆಯ ಅರಕ್ಷಕ ಉಪಾಧೀಕ್ಷಕರಾದ ಸುಧಾ ಆದಿ ಅವರು ತಿಳಿಸಿದ್ದಾರೆ. 
ಪೊಲೀಸ್ ಇನ್ಸ್‍ಪೆಕ್ಟರ್ ಮಹ್ಮದ ಇಸ್ಮಾಯಿಲ್ (ಮೊಬೈಲ್ ಸಂಖ್ಯೆ 9480806309) ಅವರು ಏಪ್ರಿಲ್ 1ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಕಾಳಗಿ ಪ್ರವಾಸಿ ಮಂದಿರದಲ್ಲಿ, ಏಪ್ರಿಲ್ 3ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಚಿಂಚೋಳಿ ಪ್ರವಾಸಿ ಮಂದಿರದಲ್ಲಿ ಹಾಗೂ ಏಪ್ರಿಲ್ 9ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಚಿತ್ತಾಪುರ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸುವರು. 
ಪೊಲೀಸ್ ಇನ್ಸ್‍ಪೆಕ್ಟರ್ ಕಷ್ಣಪ್ಪ ಕಲ್ಲದೇವರು (ಮೊಬೈಲ್ ಸಂಖ್ಯೆ 9480806310) ಅವರು ಏಪ್ರಿಲ್ 2 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಡ್ರಾಮಿ ಪ್ರವಾಸಿ ಮಂದಿರದಲ್ಲಿ ಹಾಗೂ ಅಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಜೇವರ್ಗಿ ಪ್ರವಾಸಿ ಮಂದಿರದಲ್ಲಿ, ಏಪ್ರಿಲ್ 5ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಕಮಲಾಪುರ ತಾಲೂಕು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಾಗೂ ಏಪ್ರಿಲ್ 10 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಗೆ ಶಹಾಬಾದ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸುವರು. 
ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಆರಕ್ಷಕ ಉಪಾಧೀಕ್ಷಕರಾದ ಸುಧಾ ಆದಿ (ಮೊಬೈಲ್ ಸಂಖ್ಯೆ 9480806240) ಅವರು ಏಪ್ರಿಲ್ 4 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಅಫಜಲಪುರ ಪ್ರವಾಸಿ ಮಂದಿರದಲ್ಲಿ, ಏಪ್ರಿಲ್ 9ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಆಳಂದ ಪ್ರವಾಸಿ ಮಂದಿರದಲ್ಲಿ ಹಾಗೂ ಏಪ್ರಿಲ್ 10ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಸೇಡಂ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸುವರು.
ಎರಡು ಸಹಕಾರ ಸಂಘಗಳ ಸಮಾಪನೆ: ಆಕ್ಷೇಪಣೆ ಆಹ್ವಾನ
***************************************************
ಕಲಬುರಗಿ,ಮಾ.29.(ಕ.ವಾ)-ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ನಿಯಮಗಳು 1960ರ ರಡಿಯಲ್ಲಿ ನೋಂದಣಿಯಾದ ಕೆಳಕಂಡ ಎರಡು ಸಹಕಾರ ಸಂಘಗಳು ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸದೇ ಸ್ಥಗಿತಗೊಂಡಿರುತ್ತವೆ. ಈ ಸ್ಥಗಿತಗೊಂಡಿರುವ ಸಹಕಾರ ಸಂಘಗಳು ಪಕಟಣೆ ಪ್ರಕಟವಾದ 7 ದಿನದೊಳಗಾಗಿ ದಾಖಲಾತಿಗಳೊಂದಿಗೆ ಕಲಬುರಗಿ ತಾಲೂಕು ಸಹಕಾರ ವಿಸ್ತರಣಾಧಿಕಾರಿಗಳ ಕಚೇರಿಗೆ ಸಂಪರ್ಕಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಈ ಸಂಘಗಳ ನೋಂದಣಿ ಸಂಖ್ಯೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಕಲಬುರಗಿ ತಾಲೂಕು ಸಹಕಾರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ. 
ಸ್ಥಗಿತಗೊಂಡಿರುವ ಕಲಬುರಗಿ ವಿನಾಯಕ ಗೃಹ ನಿರ್ಮಾಣ ಸಹಕಾರ ಸಂಘ ನಿ ಹಾಗೂ ಕಲಬುರಗಿ ಉದನೂರ ರಸ್ತೆಯಲ್ಲಿರುವ ಶ್ರೀ ಗಣೇಶ ಗೃಹ ನಿರ್ಮಾಣ ಸಹಕಾರ ಸಹಕಾರಿ ಸಂಘಗಳ ಸಮಾಪನಾಧಿಕಾರಿಗಳೆಂದು ಕಲಬುರಗಿ ಸಹಕಾರ ವಿಸ್ತರಣಾಧಿಕಾರಿಗಳನ್ನು ನೇಮಿಸಲಾಗಿದೆ. ಪುನಶ್ಚೇತನಗೊಳಿಸುವ, ರದ್ದುಗೊಳಿಸುವ ಹಾಗೂ ಲೆಕ್ಕಪರಿಶೋಧನೆ, ಪದಾಧಿಕಾರಿಗಳ ಚುನಾವಣೆ ಜರುಗಿದ ಕುರಿತು ಯಾವುದೇ ಮಾಹಿತಿಯು ಕಲಬುರಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಕಲಬುರಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಹಾಯಕ ವಿಸ್ತರಣಾಧಿಕಾರಿಗಳನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-221896 ಹಾಗೂ ಮೊಬೈಲ್ ಸಂಖ್ಯೆ 9743224892ಗೆ ಸಂಪರ್ಕಿಸಲು ಕೋರಲಾಗಿದೆ.
ಚೆಕ್‍ಪೋಸ್ಟ್‍ಗಳಿಗೆ ಸಹಾಯಕ ಖರ್ಚು ವೆಚ್ಚ ವೀಕ್ಷಕರು ಕಡ್ಡಾಯವಾಗಿ ಭೇಟಿ ಕೊಡಿ
**********************************************************************
ಕಲಬುರಗಿ,ಮಾ.29.(ಕ.ವಾ.)- ಅಕ್ರಮ ಹಣ ಸಾಗಾಣಿಕೆಗೆ ಕಡಿವಾಣ ಹಾಕಿ ಮತದಾರರಿಗೆ ಉಚಿತವಾಗಿ ಹಂಚಲು ಬರುವ ಉಡುಗರೆಗಳನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಎಲ್ಲಾ ಚೆಕ್‍ಪೋಸ್ಟ್‍ಗಳಿಗೆ ಸಹಾಯಕ ಖರ್ಚು ವೆಚ್ಚ ವೀಕ್ಷಕರು ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಖರ್ಚು ವೆಚ್ಚ ವೀಕ್ಷಕ ರೋಹಿತ ಆನಂದ ಹೇಳಿದರು. 
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಸಹಾಯಕ ಖರ್ಚು ವೆಚ್ಚ ವೀಕ್ಷಕರ ಹಾಗೂ ಇತರೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಲಬುರಗಿ ಜಿಲ್ಲೆಯೂ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ಅಂತರ ರಾಜ್ಯ ಚೆಕ್‍ಪೋಸ್ಟ್ ಸಹ ಇಲ್ಲಿ ಸ್ಥಾಪಿಸಲಾಗಿದೆ. ಅಕ್ರಮ ಸಾಗಾಣಿಕೆಯನ್ನು ತಡೆಯಲು ದಿನದ 24 ಗಂಟೆಗಳ ಕಾಲ ಎಸ್.ಎಸ್.ಟಿ. ತಂಡಗಳು ಕಾರ್ಯನಿರ್ವಹಿಸುತ್ತಿವೆ. ಎಸ್.ಎಸ್.ಟಿ ತಂಡಕ್ಕೆ ಪ್ಯರಾ ಮಿಲಿಟರಿ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯ ಸೇವೆ ಸಹ ನೀಡಿರುವುದರಿಂದ ಯಾವುದೇ ಅಕ್ರಮಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ದೂ.ಸಂ.08472-1950ಗೆ ಕರೆ ಮಾಡಿ ಸಲ್ಲಿಸಬಹುದಾಗಿದೆ ಎಂದರು.
70 ಲಕ್ಷ ಮಿತಿ:- ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಗೆ 70 ಲಕ್ಷ ರೂ. ವರೆಗೆ ಚುನಾವಣಾ ಖರ್ಚು ಮಾಡಲು ಅವಕಾಶವಿದೆ. ಹೀಗಾಗಿ ಅಭ್ಯರ್ಥಿಯ ದೈನಂದಿನ ಖರ್ಚು ವೆಚ್ಚಗಳ ಬಗ್ಗೆ ಖರ್ಚು ವೆಚ್ಚ ತಂಡ ನಿಗಾ ಇಡಬೇಕು. ಇದಲ್ಲದೆ ಒಂದು ಲಕ್ಷ ಮೇಲ್ಪಟ್ಟ ನಗದು ವ್ಯವಹಾರ ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಎಲ್ಲಾ ರೀತಿಯ ವ್ಯವಹಾರಗಳ ಮೇಲೆ ಬ್ಯಾಂಕುಗಳು ನಿಗಾ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಖರ್ಚು-ವೆಚ್ಚಗಳ ನೋಡಲ್ ಅಧಿಕಾರಿ ರಾಮಣ್ಣ ಅಥಣಿ, ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿ ವಾಸುದೇವನ್, ಪೊಲೀಸ್ ನೋಡಲ್ ಅಧಿಕಾರಿ ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಕಲಬುರಗಿ ಲೋಕಸಭಾ ಮತಕ್ಷೇತ್ರದ ಖರ್ಚು-ವೆಚ್ಚಗಳ ಸಹಾಯಕ ವೀಕ್ಷಕ ವಿಕಾಸ ಸಜ್ಜನ, ಸಹಾಯಕ ಖರ್ಚು-ವೆಚ್ಚ ವೀಕ್ಷಕರಾದ ಶಿವರಾಜ ಪಾಟೀಲ, ಬಸವರಾಜ ಚಟನಳ್ಳಿ, ಸಿದ್ದಮ್ಮ, ಭಾರತಿ ಜ್ಯೋತಿ, ಬಾಬು, ರಾಜಕುಮಾರ, ಪಾಪಣ್ಣ ಇಟಗಿಕರ್, ಪ್ರಕಾಶ ಜಾಧವ, ಅಬಕಾರಿ ನೋಡಲ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಏಪ್ರಿಲ್ 2ರಂದು
ಕಾಳಗಿ ಉಪವಿಭಾಗದ ವಿದ್ಯುತ್ ಗ್ರಾಹಕರ ಸಂವಾದ ಸಭೆ
*************************************************
ಕಲಬುರಗಿ,ಮಾ.29.(ಕ.ವಾ.)-ಕಲಬುರಗಿ ವೃತ್ತದ ವ್ಯಾಪ್ತಿಯಲ್ಲಿ ಬರುವ ಕಾಳಗಿ ಉಪವಿಭಾಗದ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಕಲಬುರಗಿ ಜೆಸ್ಕಾಂ ಅಧೀಕ್ಷಕ ಅಭಿಯಂತರವರ ಅಧ್ಯಕ್ಷತೆಯಲ್ಲಿ 2019ರ ಏಪ್ರಿಲ್ 2ರಂದು ಬೆಳಿಗ್ಗೆ 10 ರಿಂದ ಮಧಾಹ್ನ 12 ಗಂಟೆಯವರೆಗೆ ಕಾಳಗಿ ಉಪವಿಭಾಗದ ಜೆಸ್ಕಾಂ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಳಗಿ ಉಪವಿಭಾಗಕ್ಕೆ ಸಂಬಂಧಿಸಿದ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಬೇಕೆಂದು ಗುಲಬರ್ಗಾ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು News and Photo Date: 29--03--2019

ಎಲ್ಲಾ ಲೇಖನಗಳು ಆಗಿದೆ News and Photo Date: 29--03--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 29--03--2019 ಲಿಂಕ್ ವಿಳಾಸ https://dekalungi.blogspot.com/2019/03/news-and-photo-date-29-03-2019.html

Subscribe to receive free email updates:

0 Response to "News and Photo Date: 29--03--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ