ಶೀರ್ಷಿಕೆ : News and Photo Date: 13--03-2019
ಲಿಂಕ್ : News and Photo Date: 13--03-2019
News and Photo Date: 13--03-2019
ಕಡ್ಡಾಯವಾಗಿ ಮತ ಚಲಾಯಿಸಲು ಮನವಿ
**************************************
ಕಲಬುರಗಿ,ಮಾ.13.(ಕ.ವಾ.)-ಮತದಾನವು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಇದನ್ನು ಚಲಾಯಿಸುವ ಕರ್ತವ್ಯವೂ ಮೂಲಭೂತವಾಗಿದೆ. ಎಲ್ಲರೂ ತಪ್ಪದೇ ಏಪ್ರಿಲ್ 23ರಂದು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಮನವಿ ಮಾಡಿದರು.
ಅವರು ಬುಧವಾರ ಹರಸೂರ ಗ್ರಾಮ ಪಂಚಾಯಿತಿಯಿಂದ ಹರಸೂರ ಕೆರೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಮ್ಮಿಕೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಯ ಕೂಲಿಕಾರರಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿಯಿಂದ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಯಾವುದೇ ಆಮಿಷಕ್ಕೆ ಒಳಗಾಗದೇ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ನಿಮ್ಮ ಕೂಗು ದೆಹಲಿಯವರೆಗೆ ತಲುಪಬೇಕಾದರೆ ನಿಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು. ಪ್ರತಿಯೊಂದು ಮತ ಮಹತ್ವದ್ದಾಗಿದ್ದು, ಕೆಲವು ಮತಕ್ಷೇತ್ರಗಳಲ್ಲಿ ಈ ಹಿಂದೆ ಒಂದೆ ಮತದಿಂದ ಗೆಲುವು ಸಾಧಿಸಿರುವ ನಿರ್ದಶನಗಳಿವೆ. ನಾನು ಮತ ಚಲಾಯಿಸದಿದ್ದರೆ ಯಾವ ಬದಲಾವಣೆಯಾಗಲಿದೆ ಎಂಬ ಮನೋಭಾವನೆಯನ್ನು ತೊರೆದು ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದರು.
18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾರರ ಯಾದಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈಗಾಗಲೇ ನೋಂದಾಯಿಸಿಕೊಂಡವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮತದಾರರ ಚೀಟಿಯಲ್ಲಿ ಆಯಾ ಗ್ರಾಮ ಪಂಚಾಯಿತಿ ಕಚೇರಿಗೆ ತೆಗೆದುಕೊಂಡು ಹೋದಲ್ಲಿ ಹೆಸರು ಪಟ್ಟಿಯಲ್ಲಿ ಇರುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ 1950 ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ದಾಖಲಿಸಬೇಕು. ಮೊಬೈಲ್ ಬಳಕೆದಾರರು ಸಿವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಅದರ ಮೂಲಕ ದೂರು ದಾಖಲಿಸಬಹುದಾಗಿದೆ ಎಂದರು.

ತಾವು ಚಲಾಯಿಸಿರುವ ಮತ ಅದೇ ಅಭ್ಯರ್ಥಿಗೆ ಚಲಾವಣೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತದಾನದ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ಉಪಕರಣವನ್ನು ಅಳವಡಿಸಲಾಗುತ್ತಿದೆ. ತಾವು ಮತ ಚಲಾಯಿಸಿದ ನಂತರ ವಿವಿ ಪ್ಯಾಟ್‍ನಲ್ಲಿ 7 ಸೆಕೆಂಡಗಳ ಕಾಲ ಪ್ರದರ್ಶಿಲ್ಪಡುವ ಮಾಹಿತಿಯನ್ನು ನೋಡುವ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ. ಈ ಬಾರಿಯೂ ನೋಟಾ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಗಿದ್ದು, ತಮಗೆ ಯಾವುದೇ ಅಭ್ಯರ್ಥಿಗಳು ಸೂಕ್ತ ವೆನಿಸದಿದ್ದಲ್ಲಿ ನೋಟಾ ಮತ ಚಲಾಯಿಸಬಹುದಾಗಿದೆ. ಈ ಬಾರಿ ವಿಕಲಚೇತನರಿಗೆ ಮನೆಯಿಂದ ಮತಗಟ್ಟೆಯವರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುತ್ತಿದ್ದು, ವಿಕಲಚೇತನರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಎಲ್ಲ ಮತಗಟ್ಟೆಗಳಲ್ಲಿ ನೀರು, ನೆರಳು, ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಮಾನಪ್ಪ ಕಟ್ಟಿಮನಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಹರಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿರಾಜ್ ಪಟೇಲ್, ಪಿಡಿಓ ಆನಂದ ದೊಡ್ಡಮನಿ ಮತ್ತಿತರರು ಪಾಲ್ಗೊಂಡಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲು ಸ್ಥಳ ಪರಿಶೀಲನೆ
***********************************************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ಲೋಕಸಭಾ ಚುನಾವಣೆಯು ಮೂರನೇ ಹಂತದಲ್ಲಿ ನಡೆಯುತ್ತಿರುವ ಪ್ರಯುಕ್ತ ಮತದಾನವು ಏಪ್ರಿಲ್ 23ರಂದು ನಡೆಯಲಿದೆ. ಮೇ 23 ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೇಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಸಲು ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶಕುಮಾರ ಅವರು ಬುಧವಾರ ಸ್ಥಳ ಪರಿಶೀಲನೆ ಮಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗ, ಒಳಾಂಗಣ ಕ್ರೀಡಾಂಗಣ, ಕನ್ನಡ, ಸಸ್ಯಶಾಸ್ತ್ರ ಹಾಗೂ ಗಣಿತ ವಿಭಾಗಗಳನ್ನು ಪರಿಶೀಲಿಸಿದರು. ಪರೀಕ್ಷಾ ವಿಭಾಗದಲ್ಲಿ ಚಿತ್ತಾಪುರ, ಜೇವರ್ಗಿ ಹಾಗೂ ಗುಲಬರ್ಗಾ ಗ್ರಾಮೀಣ ಮತಕ್ಷೇತ್ರಗಳ ಮತ ಎಣಿಕೆ, ಒಳಾಂಗಣ ಕ್ರೀಡಾಂಗಣದಲ್ಲಿ ಗುಲಬರ್ಗಾ ಉತ್ತರ ಹಾಗೂ ಗುರುಮಿಠಕಲ್, ಕನ್ನಡ ವಿಭಾಗದಲ್ಲಿ ಸೇಡಂ, ಸಸ್ಯಶಾಸ್ತ್ರ ವಿಭಾಗದಲ್ಲಿ ಗುಲಬರ್ಗಾ ದಕ್ಷಿಣ ಮತ್ತು ಗಣಿತ ವಿಭಾಗದಲ್ಲಿ ಅಫಜಲಪುರ ಮತಕ್ಷೇತ್ರದ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಬೇಕು. ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮೀಡಿಯಾ ಸೆಂಟರ್ ಸ್ಥಾಪಿಸಬೇಕೆಂದು ಆದೇಶ ನೀಡಿದರು.
ಮತದಾನದ ನಂತರ ಎಲೆಕ್ಟ್ರಾನಿಕ್ ಮತಯಂತ್ರ, ವಿವಿಪ್ಯಾಟ್ ಯಂತ್ರಗಳನ್ನು ಸಂಗ್ರಹಿಸಲು ಪ್ರತಿ ಮತಕ್ಷೇತ್ರಕ್ಕೆ ಮೂರು ಭದ್ರ ಕೋಣೆಗಳನ್ನು ಹಾಗೂ ಒಂದು ಹೆಚ್ಚುವರಿ ಕೋಣೆಗಳನ್ನು ಗುರುತಿಸಬೇಕು. ಪ್ರತಿ ಮತಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ವೀಕ್ಷಕರ ಕೋಣೆಗಳನ್ನು ಸ್ಥಾಪಿಸಬೇಕು. ಮತ ಎಣಿಕೆ ಕೇಂದ್ರಗಳಲ್ಲಿ ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡುವ ಮೂಲಕ ಪೊಲಿಂಗ್ ಏಜೆಂಟ್‍ರು ಬರುವುದಕ್ಕೆ ಹಾಗೂ ಮತಯಂತ್ರಗಳನ್ನು ಎಣಿಕೆ ಕೇಂದ್ರಕ್ಕೆ ಸರಾಗವಾಗಿ ತಲುಪಿಸುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎಂ.ಮದರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಮೀನ್ ಮುಖ್ತಾರ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಮತ್ತಿತರರು ಪಾಲ್ಗೊಂಡಿದ್ದರು.

ಚಿಣ್ಣರ ಮೇಳ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
********************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ರಂಗಾಯಣದಿಂದ ನಡೆಸಲಾಗುವ 2019ರ ಚಿಣ್ಣರ ಮೇಳ-3ಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 2019ರ ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಅವರು ತಿಳಿಸಿದ್ದಾರೆ.
ಆಸಕ್ತರು ಅರ್ಜಿಯನ್ನು ಕಲಬುರಗಿ ರಂಗಾಯಣ ಕಚೇರಿಯಿಂದ ಏಪ್ರಿಲ್ 10ರೊಳಗಾಗಿ ಪಡೆದು ಭರ್ತಿ ಮಾಡಿ ಏಪ್ರಿಲ್ 15ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-227735ಗೆ ಸಂಪರ್ಕಿಸಲು ಕೋರಲಾಗಿದೆ.

ಮಾರ್ಚ್ 15ರಂದು ಕ್ಯಾಂಪಸ್ ಸಂದರ್ಶನ
ಕಲಬುರಗಿ,ಮಾ.13.(ಕ.ವಾ.)-ಹೈದ್ರಾಬಾದಿನ ಎಂ/ಎಸ್ ಜಾನಸನ್ ಲಿಫ್ಟ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕಂಪನಿ ಟ್ರೇನಿ ಹುದ್ದೆಗಾಗಿ ಇದೇ ಮಾರ್ಚ್ 15 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಎನ್.ಎಸ್. ಪಾಂಚಾಳ ತಿಳಿಸಿದ್ದಾರೆ.
18 ರಿಂದ 25 ವರ್ಷದೊಳಗಿನ ಐಟಿಐ ವೃತ್ತಿಯ ಎಲೆಕ್ಟ್ರೀಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಮಶಿನಿಸ್ಟ್ ಎಂಎಂವಿ ಆಂಡ್ ಎಂಡಿ ವೃತ್ತಿಯಲ್ಲಿ ಪಾಸಾದ ಅರ್ಹ ಪುರುಷ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳು, ಭಾವಚಿತ್ರ, ಆಧಾರ ಕಾರ್ಡ, ಪ್ಯಾನ್ ಕಾರ್ಡ ಹಾಗೂ ಇತರೆ ದಾಖಲಾತಿಗಳೊಂದಿಗೆ ಮೇಲ್ಕಂಡ ದಿನದಂದು ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಪುರುಷ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಹಾಗೂ ಸಂಸ್ಥೆಯ ಸೂಚನಾ ಫಲಕವನ್ನು ಗಮನಿಸಬೇಕೆಂದು ಅವರು ತಿಳಿಸಿದ್ದಾರೆ.

ಏಪ್ರಿಲ್ 20ರಿಂದ ಮೇ 21ರವರೆಗೆ ರಂಗಾಯಣದಲ್ಲಿ ಚಿಣ್ಣರ ಮೇಳ
********************************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ರಂಗಾಯಣದಿಂದ 2019ರ ಏಪ್ರಿಲ್ 20 ರಿಂದ ಮೇ 21ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ರಂಗಾಯಣದಲ್ಲಿನ ನಟರಂಗ, ನವರಂಗ, ಏಕರಂಗ ಹಾಗೂ ಭರತರಂಗ ಸ್ಥಳಗಳಲ್ಲಿ 2019 ಚಿಣ್ಣರ ಮೇಳ-3ನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಅವರು ತಿಳಿಸಿದ್ದಾರೆ.
ಶಿಬಿರಾರ್ಥಿಗಳ ವಯೋಮಿತಿ 6 ರಿಂದ 16 ವರ್ಷದೊಳಗಿರಬೇಕು. ಶಿಬಿರದಲ್ಲಿ ಬೇಸಿಗೆ ಚಿಣ್ಣರ ಮೇಳ ಶಿಬಿರದಲ್ಲಿ ಮಕ್ಕಳಿಗೆ ವಿಶೇಷವಾಗಿ 75 ಎಕ್ಸಸೈಜ್, ಕ್ರಿಯಾತ್ಮಕ, ರಚನಾತ್ಮಕ, ಸೃಜನಾತ್ಮಕ, ಸ್ಪರ್ಧಾತ್ಮಕ, ಬುದ್ಧಿ ಬೆಳವಣಿಗೆ, ಆಂಗಿಕ ಅಭಿನಯ, ವಾಚಿಕ ಅಭಿನಯ, ಮೂಕಾಭಿನಯ, ಜನಪದ ಗೀತೆ, ರಂಗಗೀತೆ, ಪ್ರಾರ್ಥನೆ ಗೀತೆ, ರಂಗ ಸಂಗೀತ, ಕೋಲಾಟ, ಜಾನಪದ ನೃತ್ಯ, ವಿವಿಧ ನೃತ್ಯ, ಸಂತೆ, ರೆನ್‍ಡ್ಯಾನ್ಸ್, ಪಿಕ್‍ನಿಕ್, ಗಡುಗೆಯಲ್ಲಿ ಅಡುಗೆ, ಬಣ್ಣದ ಆಟ, ತಾಯಿಯಿಂದ ಮಕ್ಕಳಿಗೆ ಕೈ ತುತ್ತು, ಮುಖ ವಿನ್ಯಾಸ(ಮೇಕಪ್), ವಸ್ತ್ರಾಲಂಕಾರ (ವೇಷಭೂಷಣ), ರಂಗ ಸಜ್ಜಿಕೆ, ರಂಗ ಪರಿಕರ, ಸ್ಟೇಜ್ ಕ್ರಾಫ್ಟ್, ಆ್ಯಂಕ್ಟಿಂಗ್ ಸ್ಕಿಲ್ಸ್, ಸ್ಕಿಟ್ ಇಂಪ್ರೂವೈಜೆಶನ್, ಕೇಶ ವಿನ್ಯಾಸ, ಆಭರಣ ಅಲಂಕಾರ, ವ್ಯಕ್ತಿತ್ವ ವಿಕಾಸನ, ಮುಖವಾಡಗಳು ಮತ್ತಿತರ ಸೇರಿದಂತೆ ಒಂದು ಸಂಪೂರ್ಣ ಚಿಕ್ಕ ಮಕ್ಕಳ ನಾಟಕವನ್ನು ಏರ್ಪಡಿಸಲಾಗುವುದು.
ಈ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ, ಕ್ರಿಯಾಶೀಲತೆಯಿಂದ ಭಾಗವಹಿಸಿದ ಶಿಬಿರಾರ್ಥಿಗೆ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಹಾಗೂ ಇತರೆ ಬಹುಮಾನಗಳನ್ನು ನೀಡಲಾಗುವುದು. ಈ ಶಿಬಿರದಲ್ಲಿ ಪಾಲ್ಗೊಳಲು ಶಿಬಿರಾರ್ಥಿಗಳು 1500 ರೂ.ಗಳ ಶುಲ್ಕ ಪಾವತಿಸಬೇಕು. ಶಿಬಿರಾರ್ಥಿಗಳಿಗೆ ಸ್ಟಡಿ ಕಿಟ್ ನೀಡಲಾಗುತ್ತದೆ. ಶಿಬಿರಕ್ಕೆ ಆಗಮಿಸುವ ಶಿಬಿರಾರ್ಥಿಗಳು ಮಧ್ಯಾಹ್ನದ ಊಟ ಸ್ವತಃ ತಾವೇ ತರಬೇಕು. ಈಗಾಗಲೇ ಚಿಣ್ಣರ ಮೇಳ-1 ಮತ್ತು2 ರಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಕೂಡಾ ಈ ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-227735ಗೆ ಸಂಪರ್ಕಿಸಲು ಕೋರಲಾಗಿದೆ.

ಮಾರ್ಚ್ 15 ರಿಂದ ಆಹಾರ ಅದಾಲತ್
*******************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಆಯ್ದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ, ಪಡಿತರ ವಿತರಣೆ, ಅಡುಗೆ ಅನಿಲ ಸಮಸ್ಯೆಗಳು ಸೇರಿದಂತೆ ಗ್ರಾಹಕರ ಕುಂದುಕೊರತೆ ಆಲಿಸಲು ಮಾರ್ಚ್ ಮಾಹೆಯಲ್ಲಿ ಆಹಾರ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಲಬುರಗಿ ಜಿಲ್ಲೆಯ ಹಿರಿಯ ಉಪನಿರ್ದೇಶಕ ಡಾ.ರಾಮೇಶ್ವರಪ್ಪ ತಿಳಿಸಿದ್ದಾರೆ.
ಆಹಾರ ಅದಾಲತ್ ನಡೆಯುವ ದಿನಾಂಕ, ತಾಲೂಕು ಮತ್ತು ಪಡಿತರ ಅಂಗಡಿಗಳ ವಿವರ ಇಂತಿದೆ.
ಮಾರ್ಚ್ 15: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಜೇವರ್ಗಿ ತಾಲೂಕಿನ ಗಂವ್ಹಾರ ನ್ಯಾಯ ಬೆಲೆ ಅಂಗಡಿ ಸಂಖ್ಯೆ 46 ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಆಂದೋಲಾ ನ್ಯಾಯ ಬೆಲೆ ಅಂಗಡಿ ಸಂಖ್ಯೆ 23 ರಲ್ಲಿ, ಮಾರ್ಚ್ 18: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಶಹಾಬಾದ-ವಾಡಿ ಪಡಿತರಕ್ಕೆ ಸಂಬಂಧಿಸಿದಂತೆ ವಾಡಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 170 ಮತ್ತು 179 ರಲ್ಲಿ ಹಾಗೂ ಮಾರ್ಚ್ 19: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಪಡಿತರಕ್ಕೆ ಸಂಬಂಧಿಸಿದಂತೆ ತಾರಫೈಲ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ 126 ರಲ್ಲಿ ಏರ್ಪಡಿಸಲಾಗಿದೆ.
ಮಾರ್ಚ್ 20: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆಳಂದ ತಾಲೂಕಿನ ಹೆಬಳಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 02 ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಬೆಳಮಗಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 131 ರಲ್ಲಿ ಹಾಗೂ ಮಾರ್ಚ್ 22: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿಂಚೋಳಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 71 ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಹಲ್ಸಗೂಡು ನ್ಯಾಯ ಬೆಲೆ ಅಂಗಡಿ ಸಂಖ್ಯೆ 34 ರಲ್ಲಿ ಆಹಾರ ಅದಾಲತ್‍ನ್ನು ಏರ್ಪಡಿಸಲಾಗಿದೆ.
ಮಾರ್ಚ್ 25: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಅಫಜಲಪುರ ತಾಲೂಕಿನ ಗೌರ(ಬಿ) ನ್ಯಾಯ ಬೆಲೆ ಅಂಗಡಿ ಸಂಖ್ಯೆ 14 ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಅಳ್ಳಗಿ (ಬಿ) ನ್ಯಾಯ ಬೆಲೆ ಅಂಗಡಿ ಸಂಖ್ಯೆ 70 ರಲ್ಲಿ ಹಾಗೂ ಮಾರ್ಚ್ 26: ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ಗ್ರಾಮಾಂತರಕ್ಕೆ ಸಂಬಂಧಿಸಿದಂತೆ ಕಿಣ್ಣಿ ಸರ್ಪೋಸ್ ನ್ಯಾಯ ಬೆಲೆ ಅಂಗಡಿ ಸಂಖ್ಯೆ 17 ರಲ್ಲಿ ಏರ್ಪಡಿಸಲಾಗಿದೆ.
ಮಾರ್ಚ್ 27: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸೇಡಂ ತಾಲೂಕಿಗೆ ಸಂಬಂಧಿಸಿದಂತೆ ಸೇಡಂ ಪಟ್ಟಣದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 75 ಮತ್ತು 78 ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ರಿಬ್ಬನಪಲ್ಲಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 12 ರಲ್ಲಿ ಹಾಗೂ ಮಾರ್ಚ್ 29: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿತ್ತಾಪುರ ತಾಲೂಕಿನ ಕಿಂಡಿತಾಂಡಾ ನ್ಯಾಯ ಬೆಲೆ ಅಂಗಡಿ ಸಂಖ್ಯೆ 117 ರಲ್ಲಿ ಹಾಗೂ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಮರಡಗಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 50 ರಲ್ಲಿ ಆಹಾರ ಅದಾಲತ್ ಏರ್ಪಡಿಸಲಾಗಿದೆ.
ಹುಮೇರಾ ನುಜಹತ್ ಅವರಿಗೆ ಪಿಹೆಚ್.ಡಿ.
ಕಲಬುರಗಿ,ಮಾ.13.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಸಮಾಜಶಾಸ್ತ್ರ ವಿಷಯದಲ್ಲಿ ಹುಮೇರಾ ನುಜಹತ್ ಅಬ್ದುಲ್ ಸತ್ತಾರ ಸಾಬ್ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ನುಸರತ್ ಫಾತೀಮಾ ಅವರ ಮಾರ್ಗದರ್ಶನದಲ್ಲಿ “ಮಹಿಳೆಯರಲ್ಲಿ ಹಾಗೂ ಹೆಣ್ಣು ಮಕ್ಕಳಲ್ಲಿ ಅಂಗವೈಕಲ್ಯತೆ ಒಂದು ಸಾಮಾಜಿಕ ಅಧ್ಯಯನ” ಕುರಿತು ಹುಮೇರಾ ನುಜಹತ್ ಅಬ್ದುಲ್ ಸತ್ತಾರ ಸಾಬ್ ಅವರು ಪ್ರಬಂಧವನ್ನು ಮಂಡಿಸಿದ್ದರು.

ಹೀಗಾಗಿ ಲೇಖನಗಳು News and Photo Date: 13--03-2019
ಎಲ್ಲಾ ಲೇಖನಗಳು ಆಗಿದೆ News and Photo Date: 13--03-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 13--03-2019 ಲಿಂಕ್ ವಿಳಾಸ https://dekalungi.blogspot.com/2019/03/news-and-photo-date-13-03-2019.html
0 Response to "News and Photo Date: 13--03-2019"
ಕಾಮೆಂಟ್ ಪೋಸ್ಟ್ ಮಾಡಿ