ಅಳಲು ಅಳುಕುತ್ತಾಳೆ

ಅಳಲು ಅಳುಕುತ್ತಾಳೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅಳಲು ಅಳುಕುತ್ತಾಳೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅಳಲು ಅಳುಕುತ್ತಾಳೆ
ಲಿಂಕ್ : ಅಳಲು ಅಳುಕುತ್ತಾಳೆ

ಓದಿ


ಅಳಲು ಅಳುಕುತ್ತಾಳೆ

ಕು.ಸ.ಮಧುಸೂದನ್
ಜನಜಂಗುಳಿಯ ದಟ್ಟಾರಣ್ಯದಲ್ಲಿ
ಒತ್ತೊತ್ತಾಗಿ ಕಟ್ಟಿದ ಮನೆಗಳ ಓಣಿಯೊಳಗೀಗ
ನಾಚುತ್ತಾನೆ ಚಂದ್ರ ಹಣಕಲು
ಅಳುಕುತ್ತಾಳವಳು ಬಿಕ್ಕಲು.

ಬಡಿದ ಬಾಗಿಲುಗಳಿಂದಲೂ ತಲೆ ಒಳಹಾಕುತ್ತವೆ
ಮುಚ್ಚಿದ ಕಿಟಕಿಗಳಿಂದೆಯೂ ಕಿವಿಗಳಿರುತ್ತವೆ ಕದ್ದು ಕೇಳಲು
ಆತ್ಮಸಂಗಾತದ ಮಾತು ಉಸುರಿ
ಮೃದು ಮಾಂಸಖಂಡಗಳ ಗೆಬರಿ
ಉರಿಯುವ ಗಾಯಕ್ಕೆ ಸವರಿದಂತೆ ಉಪ್ಪು

ವಿದಾಯದ ಕೊನೆಯ ಮಾತನ್ನೂ ಆಡದೆ ಹೊರಟು ಹೋದವನ
ನೆರಳೀಗಲೂ ಹೆದರಿಸುತ್ತದೆ.
ಈ ರಾತ್ರಿ ಮುಗಿಯುವ ಮಾತಿಲ್ಲ:
ಅಳುತ್ತಿರುವ ಆಕಾಶ
ಕೊಸರುತ್ತಿರುವ ಭೂಮಿ
ಚುಕ್ಕಿಗಳು ಬಿಕ್ಕಿ
ಗೂಡೊಳಗಿನ ಹಕ್ಕಿ ನೋವ ಮುಕ್ಕಿ
ಬಿಚ್ಚಿಟ್ಟ ಹಾಸಿಗೆಯೊಳಗೆಲ್ಲಿದೆ ನಿದ್ದೆ.

ಬಚ್ಚಿಟ್ಟ ನೆನಪುಗಳೆಲ್ಲ
ಬಿಚ್ಚಿದಂತೆ ಬಟ್ಟೆಬೆತ್ತಲಾದವು
ಕಣ್ಣು ತುಂಬಿದ ಹನಿ ನಾಚವು ನಟ್ಟಿರುಳಲ್ಲಿ ಕೆನ್ನೆ ಮೇಲೆ ಜಾರಲು
ಈ ರಾತ್ರಿ ಮುಗಿಯುವ ಮಾತಿಲ್ಲ
ಹೊಸ ಹಗಲಿಗೆಂದು ಹೊಲೆದಿಟ್ಟ
ಮುಖವಾಡಗಳಿಗಿನ್ನುಕೆಲಸವಿಲ್ಲ!

ಮತ್ತೆ ಬರಬಹುದಾದ ಹೊಸ ಸೂರ್ಯನ
ಬೆಳಕಿಗೊಡ್ಡಿದರೆ ಹಳೆಯ ಗಾಯವ ಮಾಗಬಹುದೇನೊ
ಕಾಯುತ್ತಿದ್ದಾರೆ
ಗರತಿಯರು
ಸರತಿಯಲಿ!


ಹೀಗಾಗಿ ಲೇಖನಗಳು ಅಳಲು ಅಳುಕುತ್ತಾಳೆ

ಎಲ್ಲಾ ಲೇಖನಗಳು ಆಗಿದೆ ಅಳಲು ಅಳುಕುತ್ತಾಳೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಳಲು ಅಳುಕುತ್ತಾಳೆ ಲಿಂಕ್ ವಿಳಾಸ https://dekalungi.blogspot.com/2019/03/blog-post_31.html

Subscribe to receive free email updates:

0 Response to "ಅಳಲು ಅಳುಕುತ್ತಾಳೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ