ಒಂದು ಬೊಗಸೆ ಪ್ರೀತಿ - 10

ಒಂದು ಬೊಗಸೆ ಪ್ರೀತಿ - 10 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಒಂದು ಬೊಗಸೆ ಪ್ರೀತಿ - 10, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಒಂದು ಬೊಗಸೆ ಪ್ರೀತಿ - 10
ಲಿಂಕ್ : ಒಂದು ಬೊಗಸೆ ಪ್ರೀತಿ - 10

ಓದಿ


ಒಂದು ಬೊಗಸೆ ಪ್ರೀತಿ - 10

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

“ನಮ್ ಫಾರ್ಮಸಿ ಫ್ರೆಂಡ್ಸೆಲ್ಲ ಮೂರು ದಿನ ಚಿಕ್ಕಮಗಳೂರು ಕಡೆಗೆ ಟ್ರಿಪ್ಪು ಹೊರಟಿದ್ದೀವಿ. ನಾಳೆ ರಾತ್ರಿ ಹೊರಡ್ತೀವಿ” ಮನೆಗೆ ಬರುತ್ತಿದ್ದಂತೆ ಘೋಷಿಸಿದರು ರಾಜಿ.

‘ರೀ ನನಗೂ ಈಗ ರಜೆ ಸಿಕ್ತಿತ್ತು. ನಾನೂ ಬರ್ತಿದ್ದೆನಲ್ಲ’

“ಹೇ ಹೋಗೆ. ನಾವು ಹುಡುಗರುಡುಗರು ಹೋಗ್ತಿದ್ದೀವಿ. ಅಲ್ಲಿ ನಿನ್ನ ಕರ್ಕೊಂಡು ಹೋಗೋದಿಕ್ಕಾಗುತ್ತ?”

‘ನಾನು ನೀವೇ ಎಲ್ಲದ್ರೂ ಹೋಗಿ ಬರೋಣ ನಡೀರಿ. ನನಗೂ ಅದೇ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ’

“ಅಯ್ಯೋ ನೀನು ಮುಂಚೆ ಹೇಳ್ಬಾರ್ದ. ನಮ್ ಹುಡುಗರಿಗೆ ಗ್ಯಾರಂಟಿ ಬರ್ತೀನ್ರಮ್ಮ ಅಂತ ಹೇಳ್ಬಿಟ್ಟಿದ್ದೀನಿ”

‘ಹೇಳೋಕ್ಮುಂಚೆ ನನಗೊಂದು ಮಾತು ಕೇಳಬಾರದಾ?’

“ಅಯ್ಯೋ ಹೋಗ್ಲಿ ಬಿಡು. ಮೂರು ದಿನ ಹೋಗಿ ಬಂದುಬಿಡ್ತೀನಿ. ಮುಂದಿನ ವಾರ ನಾವಿಬ್ರೂ ಝುಮ್ಮಂತ ಕಾರಿನಲ್ಲಿ ಎಲ್ಲಿಗಾದರೂ ಹೋಗಿ ಬರೋಣ. ಮತ್ತೆ ವಯನಾಡಿಗೆ ಹೋಗೋಣ್ವಾ?” ಕಣ್ಣು ಮಿಟುಕಿಸುತ್ತ ಕೇಳಿದ.

‘ಮುಂದಿನ ವಾರ ನನಗೆ ರಜೆ ಸಿಗಬೇಕಲ್ಲ. ಏನಾದ್ರೂ ಮಾಡ್ಕೊಳ್ಳಿ. ಫ್ರೆಂಡ್ಸ್ ಜೊತೆ ಹೋಗೋದು ಅಂದ್ರೆ ಎಲ್ಲಿಲ್ಲದ ಖುಷಿ ಬಂದುಬಿಡುತ್ತೆ. ಹೆಂಡತಿ ಜೊತೆ ಹೋಗ್ಬೇಕಂದ್ರೆ ಮುಖ ಸಿಂಡರಿಸಿಕೊಂಡಂಗೆ ಇರುತ್ತೆ. ಅವರ ಜೊತೆ ಇದ್ರೆ ತೂರಾಡಿ ಬೀಳುವಷ್ಟು ಕುಡೀಬೋದಲ್ಲ’

“ಹಂಗೆಲ್ಲ ಏನೂ ಇಲ್ಲ ಡಾರ್ಲಿಂಗ್” ಹಂಗೇ ಅದು ಅನ್ನೋದು ನನಗೂ ಗೊತ್ತು ರಾಜೀವನಿಗೂ ಗೊತ್ತು. ಅವರಿಂಗೆ ಒಬ್ಬೊಬ್ರೆ ಹೋದಾಗ ನನಗೆ ಎಲ್ಲಿಲ್ಲದ ಸಿಟ್ಟು ಬರುತ್ತೆ. ಮದುವೆಯಾದ ಮೇಲೆ ರಾತ್ರಿ ಹೊತ್ತು ಒಬ್ಬಳೇ ಮಲಗುವುದೆಂದರೆ ಬೇಜಾರು. ಏನೂ ಮಾಡದಿದ್ದರೂ ಕಾಲು ಹಾಕಿಕೊಳ್ಳಲಾದರೂ ಪಕ್ಕದಲ್ಲಿ ಗಂಡನಿರಬೇಕು. ಬೆಳಿಗ್ಗೆ ಎದ್ದು ಸಿಡಿಮಿಡಿ ಅನ್ನಲು ಜಗಳವಾಡಲು ಜೊತೆಯಲ್ಲಿ ಗಂಡನಿರಬೇಕು. ಜೊತೆಯಲ್ಲಿದ್ದೂ ಇದ್ದೂ ಕೆಲವೊಮ್ಮೆ ಬೋರು ಹೊಡೆದಂತಾಗುತ್ತಿತ್ತು. ಅಪ್ಪನ ಮನೆಗೆ ಹೋಗಿಬಿಡುತ್ತಿದ್ದೆ ಒಬ್ಬಳೇ. ಅಪ್ಪನ ಜೊತೆಗೂ ಈಗ ಮುನಿಸಿದೆ. ಹೋಗಲು ನನಗೂ ಮನಸ್ಸಿಲ್ಲ. ಈ ಗೂಡಿನಂತಹ ಮನೆಯಲ್ಲಿ ಒಬ್ಬಳೇ ಇರಬೇಕೆಂದರೆ ಬೇಸರವೇ. ಹಂಗಂತ ಗಂಡನ ಖುಷಿಯನ್ನು ತೀರ ಬಲವಂತದಿಂದ ತಡೆಯುವ ಮನಸ್ಸೂ ಇಲ್ಲ. ಹೆಂಡತಿಯಿಂದ ದೂರವಿರುವುದಕ್ಕೆ ಖುಷಿಪಡುವುದು ಇವರೊಬ್ಬರೇ ಏನಲ್ಲವಲ್ಲ. ನಮ್ಮ ಆಸ್ಪತ್ರೆಯಲ್ಲೇ ನೋಡ್ತಿದ್ದೆನಲ್ಲ. ಫ್ರೆಂಡ್ಸ್ ಜೊತೆ ಸುತ್ತಾಡೋಕೆ, ಹೆಂಡತಿ ಇಲ್ಲದಾಗ ಪಾರ್ಟಿ ಮಾಡೋಕೆ ಎಲ್ಲಿಲ್ಲದ ಉತ್ಸಾಹ ಈ ಗಂಡು ಮುಂಡೇವಕ್ಕೆ. ಇರೋದ್ರಲ್ಲಿ ರಾಜೀವ್ ವಾಸಿ. ನನ್ನನ್ನೂ ಕರೆದುಕೊಂಡು ತಿರುಗುತ್ತಾರೆ. ನಾನು ಜೊತೆಯಲ್ಲಿದ್ದರೆ ಕುಡಿಯುವುದನ್ನೂ ಮಾಡುತ್ತಾರೆ. ಒಮ್ಮೆ ನನಗೂ ವೈನ್ ರುಚಿ ನೋಡೇ ಎಂದು ಕೊಟ್ಟಿದ್ದರು. ಒಂದು ಗುಟುಕು ಕುಡಿದು ತಿಂದಿದ್ದ ಎರಡು ನೀರು ದೋಸೆಯನ್ನು ಕಕ್ಕಿಕೊಂಡಿದ್ದೆ. ಐದ್ ಎಂಎಲ್ಲಿಗೆ ಔಟ್ ಆಗಿಬಿಟ್ಯಲ್ಲೇ ಎಂದು ರೇಗಿಸಿದ್ದರು. ಅದರ ನೆನಪಾಗಿ ನಕ್ಕೆ.

“ಏನ್ ಡಾರ್ಲಿಂಗ್ ನಗ್ತಿದ್ದಿ” ಬಂದು ಪಕ್ಕದಲ್ಲಿ ಕುಳಿತರು.

‘ಏನಿಲ್ಲ. ಕೆಲಸವಾಗ್ಬೇಕಾದ್ರೆ ಎಷ್ಟೊಂದು ಮುದ್ದುಮುದ್ದಾಗಿ ಡಾರ್ಲಿಂಗ್ ಅನ್ತೀಯಲ್ಲ ನಗು ಬಂತು’

“ಹಂಗಾದ್ರೆ ಹೋಗೋದಿಕ್ಕೆ ಹೋಮ್ ಮಿನಿಷ್ಟರ್ ಪರ್ಮಿಶನ್ ಸಿಕ್ಕಾಯ್ತು ನನಗೆ”

‘ಹುಷಾರಾಗಿ ಹೋಗಿ. ಹುಚ್ಚರ ತರ ಕುಡೀಬೇಡಿ’

“ಸರಿ ಡಾರ್ಲಿಂಗ್” ಎಂದ್ಹೇಳಿ ಕೆನ್ನೆಗೊಂದು ಮುತ್ತು ಕೊಟ್ಟು ರೂಮಿಗೆ ಹೋದರು.

‘ರೀ. ಹೋಗೋಕ್ ಮುಂಚೆ ನನ್ ಎಟಿಎಂನಿಂದ ಸಾವಿರ ರುಪಾಯಿ ಬಿಡಿಸಿಕೊಟ್ಟು ಹೋಗಿ’ ಹೇಳುತ್ತಲೇ ನಾಲಿಗೆ ಕಚ್ಚಿಕೊಂಡೆ. ಎಟಿಎಂ ಎಂದರೆ ಸಾಕಿತ್ತು. ನನ್ನ ಎಟಿಎಂ ಎನ್ನುವುದು ಬೇಕಿರಲಿಲ್ಲ. ನನ್ನ ಎಟಿಎಂ ಯಾವಾಗಲೂ ಅವರ ಬಳಿಯೇ ಇರುತ್ತದೆ. ನನಗೆ ಬೇಕಾದಾಗ ದುಡ್ಡು ಕೇಳಿದರೆ ಅವರೇ ಬಿಡಿಸಿ ಕೊಡುತ್ತಾರೆ. ನನ್ನ ಎಟಿಎಂ ಎಂದರೆ ‘ಹೌದು ನೀನೇ ಜಾಸ್ತಿ ದುಡಿತಿರೋಳು ಅಂತ ಗೊತ್ತು. ನನ್ದೂ ನನ್ದೂ ಅಂತ ಬಾಯಿ ಬಡ್ಕೊಳ್ಳೋ ಅವಶ್ಯಕತೆಯಿಲ್ಲ’ ಎಂದು ಕೂಗಾಡುತ್ತಿದ್ದರು. ನಾಳೆಯ ಟ್ರಿಪ್ಪಿನ ಗುಂಗಿನಲ್ಲೇ ಇದ್ದವರಿಗೆ ನನ್ ಎಟಿಎಂ ಅನ್ನೋ ಪದ ಮೆದುಳಿಗೆ ತಲುಪಲಿಲ್ಲವೇನೋ. “ಒಕೆ ಡಾರ್ಲಿಂಗ್. ರಾತ್ರಿ ಹೊರಗೆ ಊಟಕ್ಕೋಗ್ತೀವಲ್ಲ ಆವಾಗ ಬಿಡಿಸಿಕೊಂಡರಾಯಿತು”. ರಾತ್ರಿ ಹೊರಗೆ ಊಟಕ್ಕಾ? ಟ್ರಿಪ್ಪಿಗೆ ಒಪ್ಪಿದಕ್ಕೆ ಊಟದ ಬೋನಸ್ಸು!

ಡ್ಯುಟಿ ಮುಗಿಸಿ ಮನೆಗೆ ಬಂದವಳಿಗೆ ಬೇಸರ. ಇವರು ಟ್ರಿಪ್ಪಿಗೆ ಹೋಗಿಬಿಟ್ಟಿದ್ದಾರೆ. ಮನೆಗೆ ಬಂದರೆ ಅದೇ ಟಿವಿ ನೋಡಬೇಕು. ಮೆಚ್ಚುವಂತಹ ಕಾರ್ಯಕ್ರಮಗಳೇನೂ ಬರಲ್ಲ ಅದರಲ್ಲಿ. ಧಾರವಾಹಿಗಳನ್ನು ನೋಡೋ ಅಭ್ಯಾಸ ಮುಂಚಿನಿಂದಾನೂ ಇಲ್ಲ. ಒಬ್ಬಳೇ ಇರೋದು ಅಸಹನೀಯ. ಒಬ್ಬಳಿಗೇ ಅಡುಗೆ ಮಾಡಿಕೊಳ್ಳಲೂ ಮನಸ್ಸಿಲ್ಲ. ಕಾಲು ಲೋಟ ಅಕ್ಕಿ ಹಾಕಿದರೆ ಕಡಿಮೆ ಅರ್ಧ ಹಾಕಿದರೆ ಹೆಚ್ಚು. ಇವರಿಲ್ಲದೇ ಹೋದರೆ ಅಡುಗೆ ಮನೆಗೆ ಕಾಲಿಡೋದಿಲ್ಲ. ಪಟ್ಟಂತ ಅಪ್ಪನ ಮನೆ ಕಡೆ ಹೊರಟುಬಿಡುತ್ತಿದ್ದೆ. ಹಾಲಿನಲ್ಲಿದ್ದ ದಿವಾನ್ ಕಾಟಿನ ಮೇಲೆ ಮಲಗಿ ರಿಮೋಟಲ್ಲಿ ರಪ್ಪಂತ ಚಾನೆಲುಗಳನ್ನು ಬದಲಿಸಿಕೊಂಡು ಅಮ್ಮ ಅಪ್ಪ ಹೇಳಿದಕ್ಕೆಲ್ಲ ಹೂಂಗುಡುತ್ತಾ ಇದ್ದರಾಯಿತು. ಸಂಜೆ ಏನಾದ್ರೂ ತಿಂಡಿ ಮಾಡದೇ ಇರುತ್ತಿರಲಿಲ್ಲ ಅಮ್ಮ. ಕೋಡುಬಳೆ, ನಿಪ್ಪಿಟ್ಟು, ಚಕ್ಕುಲಿ ಇವೆಲ್ಲ ಮನೆಯಲ್ಲಿ ಮಾಡೋದು ಅಮ್ಮನ ಕಾಲಕ್ಕೇ ಮುಗಿದುಹೋಗುತ್ತೇನೋ. ಅಮ್ಮನಿಗೆ ಫೋನ್ ಮಾಡಿದೆ. ಪಾತ್ರೆ ತೊಳೀತಿದ್ರು. ಅಪ್ಪ ಮನೇಲೇ ಇದ್ದಿದ್ದರಿಂದ ಹೆಚ್ಚೇನು ಮಾತನಾಡಲಿಲ್ಲ. ರಾಜೀವ್ ಇಲ್ಲ, ಟ್ರಿಪ್ಪಿಗೆ ಹೋಗಿದ್ದಾರೆ ಎಂದು ಹೇಳಿದ್ದಕ್ಕೆ ಹೌದಾ ಎಂದು ಸುಮ್ಮನಾಗಿದ್ದರು. ಅಪ್ಪನ ಕೋಪ ಇನ್ನೂ ತಣ್ಣಗಾಗಿಲ್ಲ ಎಂದು ಅವರ ಹೌದಾ ತಿಳಿಸಿ ಹೇಳಿತ್ತು. ಇನ್ನು ಅಲ್ಲಿಗೆ ಹೋಗುವ ಹಾಗೂ ಇಲ್ಲ. ಹೋದರೆ ಸುಮ್ಮನೆ ಬೇಡದ ಮಾತುಗಳನ್ನು ಕೇಳಬೇಕು. ತಿಕ್ಕಲತ್ತಿದರೆ ನಾನೂ ಬಾಯಿಗೆ ಬಂದಂತೆ ಮಾತನಾಡಿಬಿಡ್ತೀನಿ. ಮನೆಯಲ್ಲಿ ಕಳೆದ ವರ್ಷದ ದೀಪಾವಳಿ ವಿಶೇಷಾಂಕ ಸಿಕ್ಕಿತು. ಅದನ್ನೇ ತಿರುವುತ್ತಿದ್ದೆ. ಓದುತ್ತ ಹಂಗೇ ನಿದ್ರೆ ಮಾಡಿಬಿಟ್ಟೆ. ಸಂಜೆ ಐದಕ್ಕೆ ಎಚ್ಚರವಾಯಿತು. ಫ್ರಿಜ್ಜಿನಲ್ಲಿ ಹಾಲಿತ್ತು. ಕಾಫಿ ಮಾಡಿಕೊಳ್ಳೋಣ ಎಂದು ಅಡುಗೆ ಮನೆಗೆ ಹೋಗಿ ಹಾಲು ತೆಗೆದೆ. ಒಡೆದುಹೋಗಿತ್ತು. ರಾಜೀವನಿಗೆ ಫೋನ್ ಮಾಡಿದೆ. ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದರು. ಟಿವಿ ಹಾಕಿದೆ. ಕರೆಂಟು ಹೋಯಿತು. ಥೂ ಇದೇನ್ ಇದು ಎಂದು ಬಯ್ದುಕೊಳ್ಳುತ್ತಿರಬೇಕಾದರೆ ಮೊಬೈಲ್ ಗುರುಗುಟ್ಟಿತು.

“ಸಾರಿ. ನಿನ್ನ ಮೆಸೇಜ್ ಈಗ ನೋಡಿದೆ. ಮೊಬೈಲ್ ಸ್ವಿಚ್ ಆಫ್ ಆಗಿಬಿಟ್ಟಿತ್ತು” ‘ಏನ್ ಮಾಡ್ತಿದ್ದೀಯ?’ ಎಂದು ಬೆಳಿಗ್ಗೆ ಕಳುಹಿಸಿದ ಮೆಸೇಜಿಗೆ ಈಗ ಉತ್ತರ ಕಳುಹಿಸಿದ್ದಾನೆ. ಅಲಲಾ… ಫಾರ್ಮಾಲಿಟೀಸ್ ಎಲ್ಲ ಬೇಡ ಅನ್ನೋನು ಇದೇನು ಸಾರಿ ಅಂತ ಕಳುಹಿಸಿಬಿಟ್ಟಿದ್ದಾನಲ್ಲ ಎಂದು ನಗು ಬಂತು. ಅದನ್ನೇ ಮೆಸೇಜ್ ಮಾಡಲು ಎರಡು ಸಾಲು ಟೈಪಿಸಿದೆ. ಕಳುಹಿಸುವುದಕ್ಕೆ ಮನಸ್ಸಾಗಲಿಲ್ಲ. ಟೈಪಿಸಿದ್ದನ್ನೆಲ್ಲ ಅಳಿಸಿ ಹಾಕಿ ಸಾಗರನಿಗೆ ಫೋನ್ ಮಾಡಿದೆ. ಯಾಕೋ ಗೊತ್ತಿಲ್ಲ ಬಾಯಿ ಒಣಗಿ ಎದೆಬಡಿತ ಹೆಚ್ಚಾಗಿತ್ತು.

‘ಹಲೋ’

“ಹಲೋ. ಏನೇ ಇಷ್ಟು ದಿನ ಬೇಕಾಯ್ತ ನನಗೆ ಫೋನ್ ಮಾಡೋಕೆ” ಅವನ ದನಿ ಕೇಳಿ ನನ್ನರ್ಧ ತಳಮಳ ಕಡಿಮೆಯಾಗಿಹೋಯಿತು. ಮೆಸೇಜುಗಳಲ್ಲಿ ಸಂವಹನ ನಡೆಸೋದು ಸುಲಭದ ಕೆಲಸ. ಮುಖಭಾವನೆ, ಧ್ವನಿಗಳ ಏರಿಳಿತವೇನೂ ಅಲ್ಲಿ ಗೊತ್ತಾಗುವುದಿಲ್ಲ. ಪೂರ್ತಿ ದುಃಖದಲ್ಲಿದ್ದಾಗಲೂ ನಗುವ ಸ್ಮೈಲಿಯನ್ನು ಸಾಲಿಡೀ ಕಳಿಸಿ ಸುಳ್ಳು ಸುಳ್ಳೇ ಖುಷಿ ತೋರಿಸಿಬಿಡಬಹುದು. ಫೋನಿನಲ್ಲಿ ಮಾತನಾಡುವಾಗ ಕೊನೇಪಕ್ಷ ಧ್ವನಿಗಳ ಏರಿಳಿತ ಗೊತ್ತಾಗಿಬಿಡುತ್ತದೆ.

‘ನೀನು ಫೋನ್ ಮಾಡ್ತೀಯ ಅಂತ ಕಾದೆ. ನಿನ್ನ ಬ್ಯುಸಿ ಷೆಡ್ಯೂಲ್ ಮಧ್ಯೆ ನಮ್ಮನ್ನೆಲ್ಲ ನೆನಸಿಕೊಳ್ಳೋಕೆ ಟೈಮೇ ಸಿಗಲ್ವೇನೋ?’

“ಹಂಗೆಲ್ಲ ಏನೂ ಇಲ್ಲ. ಎಲ್ಲಾದಕ್ಕೂ ಕಾಲ ಕೂಡಿ ಬರಬೇಕಲ್ಲ. ಮೆಸೇಜುಗಳ ಮೂಲಕ ಗೆಳೆತನ ಚೆನ್ನಾಗೇ ಬೆಳೀತಿತ್ತಲ್ಲ. ಫೋನ್ ಮಾಡೋ ಅವಶ್ಯಕತೆ ಏನೂ ಕಾಣಿಸಿರಲಿಲ್ಲ”

‘Atleast ಧ್ವನಿ ಕೇಳ್ಬೇಕು ಅನ್ನಿಸಲಿಲ್ವಾ’
“ಏನ್ ಎಸ್.ಜಾನಕಿ ರೇಂಜಿಗೆ ಹೇಳ್ತಿದ್ದೀಯ!”

‘ಸರಿ ಬಿಡಪ್ಪ. ಬಾಯ್’

“ಹಲೋ ಹಲೋ. ಸುಮ್ನೆ ಹೇಳ್ದೆ ಕಣೇ. ನನಗೂ ಮಾತನಾಡಬೇಕು. ನಿನ್ನ ಧ್ವನಿ ಕೇಳಬೇಕು ಅಂತ ಅನ್ನಿಸೋದು. ಧೈರ್ಯ ಸಾಲ್ತಿರಲಿಲ್ಲವೋ ಮತ್ತೊಂದೋ ಫೋನ್ ಮಾಡಲಿಕ್ಕೆ ಆಗಲಿಲ್ಲ ಅಷ್ಟೇ”

‘ನಿನಗೆ ಧೈರ್ಯ ಇಲ್ಲ ಅಂದರೆ ನಂಬೋ ಮಾತ’

“ಧೈರ್ಯ ಇದೆ. ಆದ್ರೆ ಹುಡುಗೀರ ವಿಷಯದಲ್ಲಿ ಸ್ವಲ್ಪ ವೀಕು!”

‘ಹ್ಹ ಹ್ಹ ಹ್ಹ. ಹಂಗೆಲ್ಲ ಹೇಳ್ಬೇಡ. ಡಬಲ್ ಮೀನಿಂಗ್ ಆಗಿಬಿಟ್ಟು ಆಮೇಲೆ ಯಾರೂ ಮದುವೆಯಾಗಲ್ಲ’

“ಥೂ ಪೋಲಿ”

‘ಮತ್ತೆ ಇನ್ನೇನ್ ಸಮಾಚಾರ’

“ನೀನೇ ಹೇಳ್ಬೇಕು. ಸಮಾಚಾರ ಎಲ್ಲಾ ಮೆಸೇಜಲ್ಲೇ ಮುಗಿಸಿಬಿಡ್ತೀವಲ್ಲ!”

‘ಅದೂ ನಿಜ ಅನ್ನು’

“ಎಲ್ಲಿ ಡ್ಯೂಟೀಲಿದ್ದಾ”

‘ಇಲ್ಲ. ಇವತ್ತು ಮಾರ್ನಿಂಗ್ ಶಿಫ್ಟಿತ್ತು. ಮುಗಿಸಿ ಮೂರು ಘಂಟೆಗೇ ಬಂದೆ’

“ಮ್. ಯಜಮಾನ್ರು”

‘ಅವರಿಲ್ಲ. ಫ್ರೆಂಡ್ಸ್ ಜೊತೆ ಅಲೆಯೋಕೆ ಹೋಗಿದ್ದಾರೆ ಮೂರು ದಿನ’

“ಹೋ. ಒಬ್ಳೇ ಇದ್ದೀಯ ಹಾಗಾದ್ರೆ”

‘ಹೌದು’

“ಪರವಾಗಿಲ್ಲ ಧೈರ್ಯವಂತೆ. ಒಬ್ಬೊಬ್ಳೇ ಇರ್ತೀಯಲ್ಲ”

‘ಧೈರ್ಯಕ್ಕೇನು ಕಡಿಮೆ ಇಲ್ಲಪ್ಪ ನನ್ನತ್ರ’

“ಮತ್ತೆ”

‘ಹೇಳ್ಬೇಕು’

“ಇನ್ನೇನು ಇಲ್ಲ ಕಣೇ”

‘ಸರಿ ಹಾಗಿದ್ರೆ. ಮೆಸೇಜು ಮಾಡೋದ್ರಲ್ಲಿರೋ ಕಂಫರ್ಟ್ ಇನ್ನೂ ಮಾತನಾಡೋದರಲ್ಲಿ ಬಂದಿಲ್ಲ. ಇಡ್ಲಾ ಹಾಗಿದ್ರೆ’

“ನಿಧಾನಕ್ಕೆ ಬರ್ಲಿ ಬಿಡು. ಏನ್ ಅರ್ಜೆಂಟು. ಸರಿ ಹಾಗಿದ್ರೆ ಬಾಯ್”

‘ಬಾಯ್ ಕಣೋ. ಪ್ರತೀ ಸಲ ನಾನೇ ಮೆಸೇಜ್ ಹಾಕೋದಾಗುತ್ತೆ. ಫ್ರೀ ಆದಾಗ ನೀನೇ ಮೆಸೇಜ್ ಮಾಡು’

“ನಾನೀಗ ಪರೀಕ್ಷೆಗೆ ಓದ್ತಾ ಇದ್ದೀನಲ್ವ. ಫ್ರೀಯಾಗೇ ಇರ್ತೀನಿ. ನೀನೆಲ್ಲಿರ್ತೀಯೋ ಏನೋ ಮೆಸೇಜು ಮಾಡಬಹುದೋ ಬೇಡ್ವೋ ನನಗೆ ಗೊತ್ತಾಗಲ್ಲ ಕಣೇ”

‘ಅಯ್ಯೋ ಯಾವ ಟೈಮಲ್ಲಾದ್ರೂ ಮೆಸೇಜ್ ಹಾಕೋ ಅದರಲ್ಲೇನಿದೆ. ಹೋ ಇವಳಿಗೆ ಮದುವೆಯಾಗಿಬಿಟ್ಟಿದೆ ಅಂತಾನ!’

“ಮ್”

‘ಪಕ್ಕದಲ್ಲೇ ಇದ್ರೂ ನನ್ನ ಮೊಬೈಲ್ ಅವರು ಅವರ ಮೊಬೈಲ್ ನಾನು ಚೆಕ್ ಮಾಡಲ್ಲ ಕಣೋ. ಯಾವಾಗ ಬೇಕಾದ್ರೂ ಮೆಸೇಜ್ ಮಾಡು. ಫ್ರೀ ಇದ್ದಾಗ ರಿಪ್ಲೈ ಮಾಡ್ತೀನಿ. ಆಯ್ತಾ’

“ಆಯ್ತು ಧರಣಿ”

‘ಸರಿ ಕಣೋ ಸಾಗರ್ ಬಾಯ್’

ಫೋನಿಟ್ಟವಳ ಮನಸ್ಸಲ್ಲಿ ಅರ್ಥವಾಗದ ಖುಷಿ.

ಮುಂದುವರೆಯುವುದು....


ಹೀಗಾಗಿ ಲೇಖನಗಳು ಒಂದು ಬೊಗಸೆ ಪ್ರೀತಿ - 10

ಎಲ್ಲಾ ಲೇಖನಗಳು ಆಗಿದೆ ಒಂದು ಬೊಗಸೆ ಪ್ರೀತಿ - 10 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಒಂದು ಬೊಗಸೆ ಪ್ರೀತಿ - 10 ಲಿಂಕ್ ವಿಳಾಸ https://dekalungi.blogspot.com/2019/03/10.html

Subscribe to receive free email updates:

0 Response to "ಒಂದು ಬೊಗಸೆ ಪ್ರೀತಿ - 10"

ಕಾಮೆಂಟ್‌‌ ಪೋಸ್ಟ್‌ ಮಾಡಿ