News and Photos Date: 15--02--2019

News and Photos Date: 15--02--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photos Date: 15--02--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photos Date: 15--02--2019
ಲಿಂಕ್ : News and Photos Date: 15--02--2019

ಓದಿ


News and Photos Date: 15--02--2019

ಸಮಾಜ ಕಲ್ಯಾಣ ಸಚಿವರ ಪ್ರವಾಸ
********************************
ಕಲಬುರಗಿ,ಫೆ.15.(ಕ.ವಾ.)-ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಶನಿವಾರ ಫೆಬ್ರವರಿ 16 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಗೆ ಆಗಮಿಸಿ, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಅಂದು ರಾತ್ರಿ 9 ಗಂಟೆಗೆ ಸೋಲಾಪುರ-ಹಾಸನ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಬಂಜಾರಾ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕಾಗಿದೆ
*****************************************************
ಕಲಬುರಗಿ,ಫೆ.15.(ಕ.ವಾ)-ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಸದ್ಗುರು ಸೇವಾಲಾಲ ಸಿದ್ಧಾಂತಗಳು ಒಂದೇ ಆಗಿವೆ. ಅತೀ ಮುಗ್ಧ ಹಾಗೂ ಹಿಂದುಳಿದಿರುವ ಬಂಜರಾ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದು ಶಾಸಕ ಡಾ.ಉಮೇಶ ಜಾಧವ ಹೇಳಿದರು.
ಅವರು ಶುಕ್ರವಾರ ಕಲಬುರಗಿಯ ಡಾ.ಎಸ್.ಎಂ ಪಂಡಿತ ರಂಗಮಂದಿದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜ ರವರ 280ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಖಂಡನೆ ವ್ಯಕ್ತಪಡಿಸಿದ ಅವರು ಬಂಜಾರ ಸಮಾಜವು ಸೈನಿಕರಿಗೆ, ಶಿಕ್ಷಕರಿಗೆ ಹಾಗೂ ರೈತರಿಗೆ ಬಹಳಷ್ಟು ಗೌರವ ಕೊಡುತ್ತದೆ ಹಾಗೆ ಉಗ್ರರನ್ನು, ದರೋಡೆಕೊರರ್ನು ತೀವ್ರವಾಗಿ ವಿರೋದಿಸುತ್ತದೆ. ನೀವು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡಿ ಎಂಬ ಸಿದ್ದಾಂತದ ಮೇಲೆ ನಡೆಯುವ ಬಂಜಾರಾ ಸಮಾಜದ ಸಂತ ಶ್ರೀ ಸೇವಾಲಾಲ ಮಹಾರಾಜರು ಸಮಾಜದ ಉನ್ನತ್ತಿಗಾಗಿ ಅನೇಕ ಕೊಡುಗೆ ನೀಡಿದ್ದಾರೆ ಎಂದರು.
ಲಂಬಾಣಿ ಸಮಾಜದ ಮುಖಂಡ ಸುಭಾಷ್ ರಾಠೋಡ್ ಉಪನ್ಯಾಸ ನೀಡಿ, ಸೇವಾಲಾಲ ಮಹಾರಾಜರು 1739 ರಲ್ಲಿ ಜನಿಸಿ ಹಿಂದಿನ ಕಾಲದಲ್ಲಿಯೇ ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಚಿಂತನೆಮಾಡಿ ಭಾರತವಲ್ಲದೇ ಇಡೀ ಜಗತ್ತಿನ ಕಲ್ಯಾಣಕ್ಕಾಗಿ, ಮನುಕುಲದ ಉದ್ಧಾರಕ್ಕಾಗಿ, ನಿಸರ್ಗದ ಉನ್ನತಿಗಾಗಿ ಭೂಮಿಯನ್ನು ಕಾಪಾಡಿ ಎಂದು ನುಡಿದ ಮಹಾನ ವ್ಯಕ್ತಿಯಾಗಿದ್ದಾರೆ. ನಿಮ್ಮ ಜೀವನದಲ್ಲಿ ನೀವೆ ಬೆಳಕು ತರಬಹುದು ಇನ್ನೊಬ್ಬರ ಬಾಳಿಗೆ ನೀವು ಬೆಳಕ್ಕನ್ನು ಚೆಲ್ಲುವ ಮಹಾನ ವ್ಯಕ್ತಿಗಳಾಗಿ ಎಂಬ ಸಂದೇಶ ನೀಡಿದ ಸೇವಾಲಾಲರು ಇಡೀ ವಿಶ್ವವೇ ಒಂದು ಮನೆ ಎಂಬ ಕಲ್ಪನೆಯನ್ನು ಕಂಡಿದ್ದರು ಎಂದು ಹೇಳಿದರು.
ಕಲಬುರಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಮಾತನಾಡಿ, ಮಹಾನ ವ್ಯಕ್ತಿಗಳ ಜೀವನವನ್ನು ಸಂಪೂರ್ಣವಾಗಿ ನಾವು ಅನುಕರಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರ ಒಂದು ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜಕ್ಕೆ ಕೊಡುಗೆಗಳನ್ನು ನೀಡಬಹುದು. ಮಹಾನ ವ್ಯಕ್ತಿ ಸಂತ ಶ್ರೀ ಸೇವಾಲಾಲ ಅವರ ಜೀವನ ಚರಿತ್ರೆಯ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಬೆಡಸೂರ ಪೂಜ್ಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಮುಗಳನಾಗಾಂವ ಪೂಜ್ಯ ಜೇಮಸಿಂಗ ಮಹಾರಾಜರು, ಗೊಬ್ಬರವಾಡಿ ಪೂಜ್ಯ ಬಳಿರಾಮ ಮಹಾರಾಜರು, ಸುಕ್ಷೇತ್ರ ಕೆಸರಟಗಿ ಶ್ರೀ ಭಾಗವಂತಿದೇವಿ ವರಪುತ್ರಿ ಮಾತಾ ಲತಾದೇವಿ, ಶ್ರೀ ಸೇವಾಲಾಲ ಜಯಂತ್ಯೋತ್ಸವ ಸಮಿತಿ ಜಿಲ್ಲಾ ಅಧ್ಯಕ್ಷ ರೇವುನಾಯಕ ಬೇಳಮಗಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಸಹಾಯಕ ಆಯುಕ್ತ ರಾಹುಲ ತುಕಾರಾಮ ಪಾಂಡ್ವೆ, ಮಹಾನಗರ ಮಾಲಿಕೆ ಸದಸ್ಯೆ ಲತಾ ರವಿ ರಾಠೋಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿವಾನಂದ ಅಣಜಿಗಿ ಕಾರ್ಯಕ್ರಮ ನಿರೂಪಿಸಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೂ ಮುಂಚೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.
ಇದಕ್ಕೂ ಮುನ್ನ ಸಂತ ಶ್ರೀ ಸೇವಾಲಾಲ ಮಹಾರಾಜ ಅವರ ಭಾವಚಿತ್ರದ ಭವ್ಯ ಮೆರವಣಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದ ನೆಹರು ಗಂಜನಲ್ಲಿರುವ ನಗರೇಶ್ವರ ಬಾಲವಿಕಾಸ ಮಂದಿರದಿಂದ ಸೂಪರ್ ಮಾರ್ಕೇಟ್ ಮಾರ್ಗವಾಗಿ ಜಗತ್ ವೃತ್ತ ಮೂಲಕ ಎಸ್.ಎಂ ಪಂಡಿತ ರಂಗಮಂದಿರಕ್ಕೆ ತಲುಪಿತು.
ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ
******************************************************
ಕಲಬುರಗಿ,ಫೆ.15.(ಕ.ವಾ.)-ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ಉದ್ಘಾಟನಾ ಸಮಾರಂಭವನ್ನು ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಫೆಬ್ರವರಿ 19ರಂದು ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಮ್.ವಾಯ್. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ ಹಾಗೂ ಸುಭಾಷ ಗುತ್ತೇದಾರ್, ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಮ್, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಕಲಬುರಗಿ ಜಿಲ್ಲಾಧ್ಯಕ್ಷ ಆರ್.ಬಿ. ಜಗದಾಳೆ ಹಾಗೂ ಜಿಲ್ಲಾ ಗೌರವಾಧ್ಯಕ್ಷ ಡಾ. ದಿನಕರ ಮೋರೆ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಕಲಬುರಗಿ ಸಾಹಿತಿಗಳು ಹಾಗೂ ಸಂತ ಜೋಸೆಫ್ ಪಿ.ಯು. ಕಾಲೇಜಿನ ಉಪನ್ಯಾಸಕ ಡಾ. ಚಿ.ಸಿ. ನಿಂಗಣ್ಣ ಅವರು ವಿಶೇಷ ಉಪನ್ಯಾಸ ನೀಡುವರು.
ಇದಕ್ಕೂ ಮುನ್ನ ಬೆಳಿಗ್ಗೆ 10.30 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರನ್ನೊಳಗೊಂಡ ವಿವಿಧ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆಯು ಕಲಬುರಗಿ ನಗರದ ಐರವಾಡಿ ಹನುಮಾನ ದೇವಸ್ಥಾನದಿಂದ ಪ್ರಾರಂಭವಾಗಿ ಸುಪರ ಮಾರ್ಕೆಟ್, ಜಗತ್ ಸರ್ಕಲ್ ವೃತ್ತದ ಮಾರ್ಗವಾಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕೊನೆಗೊಳ್ಳಲಿದೆ.
ಫೆಬ್ರವರಿ 16ರಂದು ವಿದ್ಯುತ್ ಗ್ರಾಹಕರ ಸಂಪರ್ಕ ಸಭೆ
***********************************************
ಕಲಬುರಗಿ,ಫೆ.15.(ಕ.ವಾ.)-ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ಕಲಬುರಗಿ ನಗರ ವಿಭಾಗದ ವ್ಯಾಪ್ತಿಗೆ ಬರುವ ಉಪ ವಿಭಾಗಗಳ ವಿದ್ಯುತ್ ಗ್ರಾಹಕರ ಸಂಪರ್ಕ ಸಭೆಯನ್ನು ಶನಿವಾರ ಫೆಬ್ರವರಿ 16ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ನಗರದ ಸುಪರ ಮಾರ್ಕೇಟ್‍ನಲ್ಲಿರುವ ಮುಖ್ಯ ಅಂಚೆ ಕಚೇರಿಯ ಹಿಂದುಗಡೆಯಿರುವ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಗ್ರಾಹಕರು ತಮ್ಮ ಯಾವುದೇ ತರಹದ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಈ ಸಂಪರ್ಕ ಸಭೆಯಲ್ಲಿ ಸಲ್ಲಿಸಬಹುದಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 20ರಿಂದ ರಸ್ತೆ ಸಂಚಾರ ಮಾದರಿ ಸಮೀಕ್ಷೆ ಕಾರ್ಯ
*******************************************************
ಕಲಬುರಗಿ,ಫೆ.15.(ಕ.ವಾ.)-ಲೋಕೋಪಯೋಗಿ ಇಲಾಖೆಯಿಂದ 2019ರ ಫೆಬ್ರವರಿ 20ರ ಬೆಳಗಿನ 6 ಗಂಟೆಯಿಂದ ಫೆಬ್ರವರಿ 22ರ ಬೆಳಗಿನ 6 ಗಂಟೆಯವರೆಗೆ ಎರಡು ದಿನಗಳ ಕಾಲ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಮಾದರಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಲಬುರಗಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ಈ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆ ಸಂಚಾರದ ಸಾಂದ್ರತೆ, ತೀವ್ರತೆ ಕಂಡು ಹಿಡಿಯಲು ಹಾಗೂ ರಸ್ತೆಗಳ ಅಗಲಳತೆ ನಿರ್ಧರಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗಲಿದೆ. ಇದಕ್ಕಾಗಿ ರಸ್ತೆಗಳ ಮೇಲೆ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಗಣತಿ ಕೇಂದ್ರಗಳಿದ್ದಲ್ಲಿ “ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ. ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ” ಎಂದು ಸೂಚನಾ ಫಲಕಗಳನ್ನು ತೂಗು ಬಿಟ್ಟಿರುತ್ತಾರೆ. ಇಂತಹ ಸ್ಥಳಗಳಲ್ಲಿ ಎಲ್ಲ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಬೇಕೆಂದು ಅವರು ಕೋರಿದ್ದಾರೆ.
ಫೆಬ್ರವರಿ 18ರಂದು ವಿದ್ಯುನ್ಮಾನ ಮತಯಂತ್ರಗಳ ತರಬೇತಿ
****************************************************
ಕಲಬುರಗಿ,ಫೆ.15.(ಕ.ವಾ.)-2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಚುನಾವಣಾ ಪೂರ್ವ ಸಿದ್ಧತೆಗಾಗಿ ಲೋಕಸಭಾ ಕ್ಷೇತ್ರದ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಸೆಕ್ಟರ್ ಅಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೇನರ್‍ಗಳಿಗೆ ಹಾಗೂ ಇ.ವಿ.ಎಂ. ನೋಡಲ್ ಅಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರಗಳ ತರಬೇತಿಯನ್ನು ಇದೇ ಫೆಬ್ರವರಿ 18ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
ಫೆಬ್ರವರಿ 18 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 43-ಗುಲಬರ್ಗಾ ಗ್ರಾಮೀಣ, 44-ಗುಲಬರ್ಗಾ ದಕ್ಷಿಣ, 45-ಗುಲಬರ್ಗಾ ಉತ್ತರ ಹಾಗೂ 46-ಆಳಂದ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೂ ಅಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ 34-ಅಫಜಲಪುರ, 35-ಜೇವರ್ಗಿ, 40-ಚಿತ್ತಾಪುರ, 41-ಸೇಡಂ ಹಾಗೂ 42-ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಗೆ, ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಮಾಸ್ಟರ್ ಟ್ರೇನರ್‍ಗಳಿಗೆ ವಿದ್ಯುನ್ಮಾನ ಮತಯಂತ್ರಗಳ ತರಬೇತಿಯನ್ನು ಏರ್ಪಡಿಸಲಾಗಿದೆ. ಚುನಾವಣಾ ಶಾಖೆಯ ಸಿಬ್ಬಂದಿಯೊಂದಿಗೆ ಈ ತರಬೇತಿಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 20ರಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ
***************************************************
ಕಲಬುರಗಿ,ಫೆ.15.(ಕ.ವಾ.)-ಕಲಬುರಗಿ ತಾಲೂಕು ಪಂಚಾಯಿತಿಯ ಹನ್ನೊಂದನೇ ಸಾಮಾನ್ಯ ಸಭೆಯು ಇದೇ ಫೆಬ್ರವರಿ 20ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಕಲ್ಲಪ್ಪ ಸಜ್ಜನ್ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************
ಕಲಬುರಗಿ,ಫೆ.15.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರಿಂದ 33/11 ಕೆ.ವಿ. ಹಡಗಿಲ್ ಹಾರೂತಿ ವಿದ್ಯುತ್ ವಿತರಣಾ ಕೇಂದ್ರದ ಹೈಕೋರ್ಟ್ 33/11 ಕೆ.ವಿ. ಜಿಆಯ್ ಸಬ್ ಸ್ಟೇಶನ್ ಲೈನ್ ಕಾರ್ಯಕೈಗೊಂಡಿರುವ ಪ್ರಯುಕ್ತ 2019ರ ಫೆಬ್ರವರಿ 16ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಹಡಗಿಲ್ ಹಾರೂತಿ ವಿತರಣಾ ಕೇಂದ್ರ: ಎಫ್-5 ಶರಣ ಶಿರಸಗಿ ಎನ್‍ಜೆವಾಯ್ ಹಾಗೂ ಎಫ್-6 ಬಬಲಾದ ಐಪಿ.
ವಿದ್ಯುತ ಮಾರ್ಗದ ಸಮೀಪ ಹೋಗದಂತೆ ಸೂಚನೆ
*******************************************
ಕಲಬುರಗಿ,ಫೆ.15.(ಕ.ವಾ)-ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಕಲಬುರಗಿ ನಿರ್ಮಾಣ ಮತ್ತು ನಿರ್ವಹಣಾ ವಿಭಾಗದ ವ್ಯಾಪ್ತಿಯಲ್ಲಿ ಬರುವ 110/33/11 ಕೆ.ವ್ಹಿ. ಪಶ್ಚಿಮ (ವೇಸ್ಟ್) ವಿದ್ಯುತ್ ಉಪಕೇಂದ್ರ (ಡಬರಾಬಾದ) ಕಲಬುರಗಿಯಿಂದ 33/11ಕೆ.ವಿ. ಜಿ.ಐ.ಎಸ್. ಕೆ.ಹೆಚ್.ಬಿ. ಕಾಂಪ್ಲೆಕ್ಸ್ (ಉಚ್ಚ ನ್ಯಾಯಾಲಯ) ವಿದ್ಯುತ್ ಉಪಕೇಂದ್ರದವರೆಗಿನ 3.8 ಕಿ.ಮೀ. 33ಕೆ.ವ್ಹಿ. ವಿದ್ಯುತ್ ಮಾರ್ಗವು ಈ ಕೆಳಕಂಡ ಗ್ರಾಮ/ ಬಡಾವಣೆಗಳಲ್ಲಿ ಹಾದು ಹೋಗುತ್ತದೆ. ಈ ಮಾರ್ಗವು 2019ರ ಫೆಬ್ರವರಿ 18 ರಂದು ಅಥವಾ ತಂದನಂತರ ಯಾವುದೇ ದಿನದಂದು ಚಾಲನೆಯಾಗಲಿದೆ ಎಂದು ಕಲಬುರಗಿಯ ಜೆಸ್ಕಾಂ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿದ್ಯುತ್ ಮಾರ್ಗವು ಶರಣಸಿರಸಗಿ ಗ್ರಾಮ, ಶರಣಸಿರಸಗಿ ಮಡ್ಡಿ, ಶರಣಸಿರಸಗಿ ಆಶ್ರಯ ಕಾಲೋನಿ ಹಾಗೂ ಡಾ. ಅಂಬೇಡ್ಕರ ನಗರ ಸುತ್ತಮುತ್ತಲಿನ ಗ್ರಾಮ ಹಾಗೂ ಬಡಾವಣೆಗಳಲ್ಲಿ ಹಾದು ಹೋಗುತ್ತದೆ. ಆದ್ದರಿಂದ ಈ ಸುತ್ತಮುತ್ತಲಿನ ಗ್ರಾಮ ಹಾಗೂ ಬಡಾವಣೆ ವ್ಯಾಪ್ತಿಯಲ್ಲಿರುವ ಜನರು ಈ ಮಾರ್ಗದ ಸಮೀಪ ಹೋಗಬಾರದು, ಬಡಾವಣೆಗಳಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳಿಗೆ ದನಕರುಗಳು ಕಟ್ಟುವುದಾಗಲಿ, ಗೈ ತಂತಿ/ಕಂಬಕ್ಕೆ ಹತ್ತುವುದಾಗಲಿ ಮತ್ತು ವಿದ್ಯುತ್ ಮಾರ್ಗವನ್ನು ಮುಟ್ಟುವುದಾಗಲಿ ಮಾಡಬಾರದೆಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 16ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ಫೆ.15.(ಕ.ವಾ)-ಜೆಸ್ಕಾಂ ಕಲಬುರಗಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ 11.ಕೆ.ವಿ. ಗಣೇಶ ನಗರ ಹಾಗೂ ಉಮರ್ ಕಾಲೋನಿ ಫೀಡರಗಳ ಮೇಲೆ ಜಿ.ಐ. ನಿರ್ವಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಫೆಬ್ರವರಿ 16 ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ಗಣೇಶ ನಗರ ಫೀಡರ್: ಎಂ.ಬಿ. ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ, ಬಂದೇ ನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನ್ಸೂಬ್‍ದಾರ ಲೇಔಟ್, ಆದರ್ಶ ನಗರ ನ್ಯೂ ಜಿ.ಡಿ.ಎ. ಮೇಹತಾ ಲೇಔಟ್ ಮತ್ತು ವೀರೆಂದ್ರ ಪಾಟೀಲ್ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ಉಮರ್ ಕಾಲೋನಿ ಫೀಡರ್: ಉಮರ ಕಾಲೋನಿ, ಅಬುಬಕ್ಕರ್ ಕಾಲೋನಿ, ಆಜಾದಪುರ ರಸ್ತೆ, ಅಹ್ಮದ್ ನಗರ, ಮಕ್ಕಾ ಕಾಲೋನಿ, ಮಹಾರಾಜಾ ಹೋಟೆಲ್, ವಾಟರ್ ಟ್ಯಾಂಕ್À, ಯಾದುಲ್ಲಾ ಕಾಲೋನಿ, ಕಮಾಲ-ಎ-ಮುಜರತ್, ಮೆಹಬೂಬ ನಗರ, ವೀರಭದ್ರೇಶ್ವರ ದೇವಾಲಯ, ಖಾನ್ ಕಂಪೌಂಡ್, ಟಿಪ್ಪು ಸುಲ್ತಾನ ಚೌಕ್, ಸನಾ ಹೋಟೆಲ್, ಅಕ್ಬರ್‍ಬಾಗ್, ರಾಮಜಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಫೆಬ್ರವರಿ 17ರಂದು
*****************
ಅಬಕಾರಿ ಸಬ್-ಇನ್ಸ್‍ಪೆಕ್ಟರ್ ಹುದ್ದೆಯ ನೇಮಕಾತಿಗೆ ಪರೀಕ್ಷೆ: ಸೂಸೂತ್ರವಾಗಿ
******************************************************************* ಜರುಗಿಸಲು ಸೂಚನೆ
******************
ಕಲಬುರಗಿ,ಫೆ.15.(ಕ.ವಾ.)-ಕರ್ನಾಟಕ ಲೋಕಸೇವಾ ಆಯೋಗದಿಂದ ಅಬಕಾರಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯು ಇದೇ ಫೆಬ್ರವರಿ 17ರಂದು ಕಲಬುರಗಿ ನಗರದ ಒಟ್ಟು 17 ಉಪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗೆ ಅಸ್ಪದ ನೀಡದೆ ಸುಸೂತ್ರವಾಗಿ ನಡೆಸುವಂತೆ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರು ಹಾಗೂ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಅಬಕಾರಿ ಸಬ್-ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಜಿಲ್ಲೆಯಿಂದ ಸುಮಾರು 5,857 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಫೆಬ್ರವರಿ 17 ರಂದು ಬೆಳಿಗ್ಗೆ 10 ರಿಂದ 11.30 ಗಂಟೆಯವರೆಗೆ ವಿವರಣಾತ್ಮಕ ಪತ್ರಿಕೆ ಹಾಗೂ ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ಜಿಲ್ಲಾಡಳಿತದಿಂದ ತಲಾ 6 ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷಾ ದಿನದಂದು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವುದನ್ನು, ಪತ್ರಿಕೆಯ ಬಂಡಲ್ ತೆರೆಯುವಾಗ ಮತ್ತು ಪರೀಕ್ಷೆಯ ನಂತರ ಪತ್ರಿಕೆಗಳ ಬಂಡಲ್ ಪ್ಯಾಕ್ ಮಾಡುವಾಗ ಕಡ್ಡಾಯವಾಗಿ ವಿಡೀಯೋಗ್ರಾಫಿ ಮಾಡುವುದು ಹಾಗೂ ಇದರ ಸಿ.ಡಿ.ಗಳನ್ನು ಆಯೋಗಕ್ಕೆ ಸಲ್ಲಿಸುವುದು. ಪರೀಕ್ಷೆ ಆರಂಭವಾದ 15 ನಿಮಿಷಗಳ ನಂತರವೂ ಪರೀಕ್ಷೆಗೆ ಗೈರು ಹಾಜರಾದಂತಹ ಅಭ್ಯರ್ಥಿಗಳಿಗೆ ಮೀಸಲಿರಿಸದ ಪ್ರಶ್ನೆ ಪತ್ರಿಕೆಗಳನ್ನು ಪುನ: ಪ್ಯಾಕ್ ಮಾಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೇಜು, ಕುಡಿಯುವ ನೀರು, ಬೆಳಕು ವಿದ್ಯುತ್‍ದಂತಹ ಕನಿಷ್ಠ ಮೂಲಸೌಲಭ್ಯಗಳಿರುವ ಬಗ್ಗೆ ಪರೀಕ್ಷೆಯ ಮುನ್ನವೆ ವೀಕ್ಷಕರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳತಕ್ಕದು. ಇದಲ್ಲದೆ ಪರೀಕ್ಷಾ ದಿನದಂದು ಸಿ.ಆರ್.ಪಿ.ಸಿ. ಕಲಂ 144 ಸಹ ಜಾರಿಗೊಳಿಸಲಾಗುವುದು ಎಂದರು.
ಪರೀಕ್ಷೆಗೆ ಬರುವ ಅಭ್ಯರ್ಥಿಗಳನ್ನು ಪುರುಷ ಹಾಗೂ ಮಹಿಳಾ ಪೊಲೀಸ್ ಪೇದೆಯಿಂದ ಪ್ರತ್ಯೇಕವಾಗಿ ಸರಿಯಾಗಿ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಗುರುತಿನ ಚೀಟಿ ಕಡ್ಡಾಯ: ಸ್ಪರ್ಧಾತ್ಮಕ ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಕಡ್ಡಾಯವಾಗಿ ಭಾವಚಿತ್ರವಿರುವ ಚುನಾವಣಾ ಐ.ಡಿ., ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸಪೋರ್ಟ್, ಸರ್ಕಾರಿ ನೌಕರರ ಐ.ಡಿ. ಮೂಲ ಗುರುತಿನ ಚೀಟಿ ಅಥವಾ ಅದರ ಛಾಯಾಪ್ರತಿ ತರುವುದು ಕಡ್ಡಾಯವಾಗಿದೆ. ಗುರುತಿನ ಚೀಟಿ ತರದಿದ್ದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.
ಮೊಬೈಲ್ ಸಂಪೂರ್ಣ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯಪುಸ್ತಕ ಸೇರಿದಂತೆ ಇನ್ನಿತರ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ವಿವರ: ಕಲಬುರಗಿ ನಗರದ ಸರ್ಕಾರಿ ಕಾಲೇಜು, ಆರಾಧನಾ ಪಿಯು ಕಾಲೇಜು, ಸೆಂಟ್ ಮೇರಿ ಸ್ಕೂಲ್, ಹ್ಯೂಮೆನ್ ಏಜ್ ಉರ್ದು ಹೈಸ್ಕೂಲ್, ಎಂ.ಎಸ್. ಇರಾನಿ ಪಿಯು ಕಾಲೇಜು, ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಕಾಲೇಜು, ಆಂಗ್ಲ ಮಾಧ್ಯಮ ಪ್ರಜ್ಞಾ ಪ್ರಾಥಮಿಕ ಶಾಲೆ, ಸರ್ಕಾರಿ ಸ್ವತಂತ್ರ ಪಿ.ಯು. ಕಾಲೇಜು, ಆದರ್ಶ ನಗರ ಸರ್ಕಾರಿ ಹೈಸ್ಕೂಲ್, ಜೇವರ್ಗಿ ಕಾಲೋನಿಯ ಸರ್ಕಾರಿ ಹೈಸ್ಕೂಲ್, ಚಂದ್ರಶೇಖರ ಪಾಟೀಲ ಮೆಮೋರಿಯಲ್ ಪಿಯು ಕಾಲೇಜು, ಗಲ್ರ್ಸ್ ಸರ್ಕಾರಿ ಪಿಯು ಕಾಲೇಜು, ಪುರುಷ ಸರ್ಕಾರಿ ಐಟಿಐ ಕಾಲೇಜು, ಮಿಲಿಂದ್ ಹೈಸ್ಕೂಲ್, ಲೂಕಮಾನ್ ಡಿಗ್ರಿ ಕಾಲೇಜು ಕ್ಯಾಂಪಸ್ (ವೆಕೆಶನಲ್ ಎಜ್ಯುಕೇಶನ್ ಸೊಸೈಟಿ ಐಟಿಐ), ಪ್ರಿಯದರ್ಶನಿ ಮಹಿಳಾ ಹೈಸ್ಕೂಲ್ ಹಾಗೂ ಸರ್ಕಾರಿ ಮಹಿಳಾ ಶಿಕ್ಷಕರ ತರಬೇತಿ ಕೇಂದ್ರ.
ಸಭೆಯಲ್ಲಿ ಕಲಬುರಗಿ ಅಬಕಾರಿ ಇಲಾಖೆಯ ಉಪ ಆಯುಕ್ತ ಎಫ್.ಹೆಚ್. ಚಲವಾದಿ, ಕಲಬುರಗಿ ಕೆ.ಪಿ.ಎಸ್.ಸಿ ಕಚೇರಿಯ ಹಿರಿಯ ಸಹಾಯಕಿ ಅನ್ನಪೂರ್ಣ ಸೇರಿದಂತೆ ಮಾರ್ಗಾಧಿಕಾರಿಗಳು, ವೀಕ್ಷಕರು, ಉಪ ಮುಖ್ಯ ಮೇಲ್ವಿಚಾರಕರು ಮತ್ತಿತರರು ಹಾಜರಿದ್ದರು.






ಹೀಗಾಗಿ ಲೇಖನಗಳು News and Photos Date: 15--02--2019

ಎಲ್ಲಾ ಲೇಖನಗಳು ಆಗಿದೆ News and Photos Date: 15--02--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photos Date: 15--02--2019 ಲಿಂಕ್ ವಿಳಾಸ https://dekalungi.blogspot.com/2019/02/news-and-photos-date-15-02-2019.html

Subscribe to receive free email updates:

0 Response to "News and Photos Date: 15--02--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ