ಶೀರ್ಷಿಕೆ : News and Photo Date: 13-02-2019
ಲಿಂಕ್ : News and Photo Date: 13-02-2019
News and Photo Date: 13-02-2019
ಆರೋಗ್ಯ ಯೋಜನೆಗಳ ಪ್ರಯೋಜನ ಪಡೆಯಲು ಸಲಹೆ
*************************************************
ಕಲಬುರಗಿ,ಫೆ.13.(ಕ.ವಾ.)-ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಈ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಾಧವರಾವ ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಕಲಬುರಗಿ ನಗರದ ಜಿಲ್ಲಾ ಸಮೀಕ್ಷಣಾ ಘಟಕದ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಇರುವ ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಲು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ನೂತನ ಸರ್ಕಾರ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದ್ದು, ಜಿಲ್ಲೆಯ ಸಾರ್ವಜನಿಕರು ಆಯುಷ್ಮಾನ್ ಭಾರತ ಚೀಟಿಗಳನ್ನು ಪಡೆಯಬೇಕೆಂದು ಹೇಳಿದರು.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ: ರಾಜ್ಯದ ಎಲ್ಲ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ವಿಶಿಷ್ಠ ಯೋಜನೆ ಇದಾಗಿದ್ದು, ಒಂದೇ ಸೂರಿನಡಿ ಎಲ್ಲ ಹಂತಗಳ ಆರೋಗ್ಯ ಸೇವೆಗಳು ನೀಡಲಾಗುತ್ತಿದೆ. ಬಿ.ಪಿ.ಎಲ್. ಕುಟುಂಬದವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಗಳನ್ನು ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೆ 5 ಲಕ್ಷ ರೂ.ಗಳವರೆಗೆ ರೋಗಿಗಳಿಂದ ಶೇ. 70 ರಷ್ಟು ಹಣವನ್ನು ಭರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೇ. 30 ರಷ್ಟು ಹಣವನ್ನು ಸರ್ಕಾರ ಭರಿಸುತ್ತದೆ. ಈ ಯೋಜನೆಗಾಗಿ ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ಫಲಾನುಭವಿಗಳು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ ಜೊತೆಗೆ ಎಲ್ಲ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 10 ರೂ. ಶುಲ್ಕ ನೀಡುವ ಮೂಲಕ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡನ್ನು ಪಡೆಯಬಹುದಾಗಿದೆ. ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿಸಿದ ಫಲಾನುಭವಿಗಳಿಗೆ 1650 ಬಗೆಯ ಚಿಕಿತ್ಸೆ ಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಉನ್ನತ ದರ್ಜೆಯ ಖಾಸಗಿ ಆಸ್ಪತ್ರೆಗಳನ್ನು ಸಹ ನೋಂದಾಯಿಸಿಕೊಳ್ಳಲಾಗಿದೆ.
ತಾಯಿ ಮತ್ತು ಮಗುವಿನ ಸಂರಕ್ಷಣೆ ಕ್ರಮಗಳು: ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 83 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳ ಜೊತೆಗೆ ಹೆರಿಗೆ ಸೇವೆಯನ್ನು ಸಹ ನಿರ್ವಹಿಸಲಾಗುವುದು. ಗರ್ಭಿಣಿಯರಿಗೆ ಹೆರಿಗೆಯ 12 ವಾರಗಳ ಮೊದಲು ತಾಯಿ ಕಾರ್ಡ ನೀಡುವ ಮೂಲಕ ಗರ್ಭಿಣಿಯರಿಗೆ ಅವಶ್ಯವಿರುವ ಎಲ್ಲ ಚುಚ್ಚುಮದ್ದುಗಳನ್ನು ಹಾಗೂ ಪೌಷ್ಠಿಕ ಆಹಾರವನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಶೇ. 99ರಷ್ಟು ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಲಾಗುತ್ತಿದ್ದು, ಹೆರಿಗೆ ನಂತರ 48 ಗಂಟೆಗಳ ಕಾಲ ತಾಯಿ ಮತ್ತು ಮಗುವಿನ ಶುಶ್ರೂಷೆಯನ್ನು ಮಾಡಲಾಗುವುದು. ಕಡಿಮೆ ತೂಕದ ಅಥವಾ ಜನನ ಸಮಯದಲ್ಲಿ ಮಗುವಿಗೆ ತೊಂದರೆಗಳು ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಾ ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಹೆರಿಗೆ ನಂತರ ಸದೃಢರಾದ ತಾಯಿ ಮತ್ತು ಮಗುವನ್ನು ನಗು-ಮೊಗ ವಾಹನದಲ್ಲಿ ಉಚಿತವಾಗಿ ಮನೆಗೆ ಕಳುಹಿಸಲಾಗುವುದು. ಶಾಲೆಗಳಲ್ಲಿರುವ 10 ರಿಂದ 19 ವರ್ಷದ ಮಕ್ಕಳಿಗೆ ಆರೋಗ್ಯ ತಪಾಸಣೆ ಕೈಗೊಂಡು ನೂನ್ಯತೆಗಳನ್ನು ಸರಿಪಡಿಸಲಾಗುವುದು. ಹದಿ ಹರೆಯದ ಕಿಶೋರ ಮತ್ತು ಕಿಶೋರಿಯರಿಗೆ ಸಮಾಲೋಚನೆ ನಡೆಸುವ ಮೂಲಕ ತೊಂದರೆಗಳಿದ್ದಲ್ಲಿ ಸ್ನೇಹಾ ಕ್ಲಿನಿಕ್ ಮೂಲಕ ಚಿಕಿತ್ಸೆ ನೀಡಲಾಗುವುದು. ಅಪೌಷ್ಠಿಕ ಮಕ್ಕಳನ್ನು ಪೌಷ್ಠಿಕರನ್ನಾಗಿಸಲು ಜಿಲ್ಲೆಯ ಚಿತ್ತಾಪುರ, ಚಿಂಚೋಳಿ, ಸೇಡಂಗಳಲ್ಲಿ ಹೆಚ್ಚುವರಿ ಪೌಷ್ಠಿಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಈ ಕೇಂದ್ರವು ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿದೆ.
ಕುಷ್ಠರೋಗ: ಸ್ಪರ್ಶ ಜ್ಞಾನವಿಲ್ಲದ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಯು ಕುಷ್ಠರೋಗವಾಗಿರಬಹುದು. ಕಾರಣ ಮಚ್ಚೆಗಳನ್ನು ಮರೆಮಾಚದೇ ತಕ್ಷಣ ಸಮೀಪದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಕುಷ್ಠರೋಗಿಗಳನ್ನು ಪತ್ತೆ ಹಚ್ಚಲು ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾಯಿಲೆಯಿಂದ ನೋವಿಲ್ಲ ಹಾಗೂ ಸಾವಿಲ್ಲ. ಕುಷ್ಠರೋಗ ಪ್ರಾರಂಭಿಕ ಹಂತದಲ್ಲಿ ಪರೀಕ್ಷಿಸದೇ ತಡೆಯದಿದ್ದಲ್ಲಿ ಅಂಗವಿಕಲತೆ ಉಂಟಾಗುತ್ತದೆ. ಪ್ರಥಮ ಹಂತದಲ್ಲಿ ದೇಹದ ಮೇಲೆ ಒಂದರಿಂದ 5 ಮಚ್ಚೆಗಳು ದ್ವಿತೀಯ ಹಂತದಲ್ಲಿ ದೇಹದ ಮೇಲೆ 5ಕ್ಕಿಂತ ಹೆಚ್ಚು ಮಚ್ಚೆಗಳು ಹರಡಿ ನರಮಂಡಲವನ್ನು ವ್ಯಾಪಿಸುತ್ತದೆ. ಈ ಹಂತದ ಕುಷ್ಠರೋಗವನ್ನು ಎಂ.ಡಿ.ಟಿ. ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಕುಷ್ಠರೋಗದಿಂದ ಕೈಕಾಲುಗಳಲ್ಲಿ ಸ್ಪರ್ಶಜ್ಞಾನ ಇಲ್ಲದಿರುವುದರಿಂದ ಕೈ ಮತ್ತು ಕಾಲುಗಳಿಗೆ ಗಾಯಗಳಾಗುತ್ತವೆ. ಈ ಗಾಯಗಳು ಸಾಮಾನ್ಯವಾಗಿ ಗುಣಮುಖವಾಗುವುದಿಲ್ಲ. ಕಾರಣ ರೋಗಿಗಳಿಗೆ ಎಂ.ಸಿ.ಆರ್. ಚಪ್ಪಲ್‍ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ: ರೋಗವಾಹಕ ಆಶ್ರಿತ ರೋಗಗಳು ಅಥವಾ ಕೀಟಜನ್ಯ ರೋಗಗಳು ಕೀಟಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮವು 2003 ರಲ್ಲಿ ಜಾರಿಗೆ ಬಂದಿದ್ದು, ಮಲೇರಿಯ, ಡೆಂಗೀ, ಚಿಕುಂಗುನ್ಯಾ, ಮೆದುಳುಜ್ವರ, ಆನೇಕಾಲು ರೋಗಗಳಂತಹ ಕೀಟಜನ್ಯ ರೋಗಗಳನ್ನು ನಿಯಂತ್ರಣ ಮಾಡುವಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲಾ ರೋಗಗಳು ವಿವಿಧ ಜಾತಿಯ ರೋಗವಾಹಕ ಸೊಳ್ಳೆಗಳ ಕಡಿತದಿಂದ ಹರಡುತ್ತವೆ. ಮಲೇರಿಯ ಮತ್ತು ಆನೇಕಾಲು ರೋಗಗಳು ಪರೋಪಜೀವಿಯಿಂದ ಉಂಟಾಗುವುದು. ಮೆದುಳು ಜ್ವರ ಮತ್ತು ಚಿಕುಂಗುನ್ಯಾ ರೋಗಗಳು ವೈರಾಣುಗಳಿಂದ ಉಂಟಾಗುತ್ತವೆ. ಕಾರಣ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು.
ಮಾನಸಿಕ ಆರೋಗ್ಯ ಕಾರ್ಯಕ್ರಮ: ಮಾನಸಿಕ ಕಾಯಿಲೆಗಳಿಂದ ಬಳಲುವವರು ವಿಚಿತ್ರ ವರ್ತನೆ, ಮಂಕಾಗಿರುವುದು, ಬೇರೆಯವರಿಗೆ ಕಾಣಿಸದ- ಕೇಳಿಸದ- ದೃಶ್ಯ-ಧ್ವನಿಗಳು ಕಾಣಿಸುವುದು ಹಾಗೂ ಕೇಳಿಸುವುದು. ಅತೀ ಸಂಶಯ ಪಡುವುದು, ಅತೀ ಸಂತೋಷ ಮತ್ತು ಜಂಬಕೊಚ್ಚುವುದು, ಅತೀ ದು:ಖ ಪಡುವುದು, ಆತ್ಮಹತ್ಯೆಯ ಆಲೋಚನೆ ಮಾಡುವುದು, ದೇವರು-ದೆವ್ವ ಬಂದಂತೆ ಆಡುವುದು, ಮೂರ್ಛೆ ಬೀಳುವುದು ಹಾಗೂ ಬುದ್ಧಿಮಾಂದ್ಯತೆಯ ಲಕ್ಷಣಗಳನ್ನು ಹೊಂದಿರುತ್ತಾರೆ. ಮಾನಸಿಕ ಆರೋಗ್ಯಕ್ಕಾಗಿ ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ಮಂಗಳವಾರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಕಲಬುರಗಿಯಲ್ಲಿ ಒಳ ಮತ್ತು ಹೋರ ರೋಗಿಗಳ ಚಿಕಿತ್ಸ ಸೌಲಭ್ಯ ಲಭ್ಯವಿರುತ್ತದೆ. ಮಾನಸಧಾರ ಡೇ-ಕೇರ್ ಸೆಂಟರ್‍ನಲ್ಲಿ ತೀವ್ರ ತರಹದ ಮಾನಸಿಕ ಕಾಯಿಲೆಯಿಂದ ಗುಣಮುಖ ಹೊಂದಿದ ರೋಗಿಗಳಿಗೆ ವೃತ್ತಿ ಪರ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಆರ್.ಸಿ.ಹೆಚ್. ಅಧಿಕಾರಿ ಡಾ. ಅಂಬಾರಾಯ ರುದ್ರವಾಡಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರಕುಮಾರ ನಾಗಲೇಕರ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತ್ನಾಳ, ಕೀಟಶಾಸ್ತ್ರಜ್ಞ ಚಾಮರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ದಿವಟಗಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ ಮತ್ತಿತರರು ಪಾಲ್ಗೊಂಡಿದ್ದರು.

ಆನ್‍ಲೈನ್ ಮೂಲಕ ಪರೀಕ್ಷೆ: ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
********************************************************
ಕಲಬುರಗಿ,ಫೆ.13.(ಕ.ವಾ.)-ಭಾರತ ಸರ್ಕಾರದ (ಕರ್ನಾಟಕ-ಕೇರಳ ವಿಭಾಗ) ಸಿಬ್ಬಂದಿ ನೇಮಕಾತಿ ಸಮಿತಿಯಿಂದ ನಡೆಸಲಾಗುತ್ತಿರುವ ರಿಕ್ರೂಟ್‍ಮೆಂಟ್ ಆಫ್ ಕಾನ್ಸ್‍ಸ್ಟೇಬಲ್ಸ್ (ಜಿಡಿ) ಇನ್ ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸೆಸ್ (ಸಿಎಪಿಎಫ್‍ಎಸ್), ಎನ್‍ಐಎ ಆಂಡ್ ಎಸ್‍ಎಸ್‍ಎಫ್ ಆಂಡ್ ರೈಫಲ್‍ಮ್ಯಾನ್ (ಜಿಡಿ) ಇನ್ ಆಸ್ಸಾಂ ರೈಫಲ್ಸ್ (ಎಆರ್) ಹುದ್ದೆಗಳ ನೇಮಕಾತಿಗೆ ಆನ್‍ಲೈನ್ ಪರೀಕ್ಷೆಗಳು ಇದೇ ಫೆಬ್ರವರಿ 14 ರಿಂದ 22 ರವರೆಗೆ ಕಲಬುರಗಿ ನಗರದ ಶಹಾಬಾದ ರಸ್ತೆಯಲ್ಲಿರುವ ಶೆಟ್ಟಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಡೆಯಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲು ಇರುವ ಜಿರಾಕ್ಸ್, ಪುಸ್ತಕ ಮಳಿಗೆಗಳು ಹಾಗೂ ಮೊಬೈಲ್ ಅಂಗಡಿಗಳನ್ನು ಮುಚ್ಚಬೇಕೆಂದು ಕಲಬುರಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದೊಳಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿ ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಖಾಸಗಿ ವ್ಯಕ್ತಿಗಳು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಫೋನ್, ಇತರೆ ಚಿಕ್ಕಗಾತ್ರದ ಬ್ಲ್ಯೂಟೂತ್ ಉಪಕರಣಗಳನ್ನು ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.

ವಿದ್ಯಾರ್ಥಿ ವೇತನ: ಪ್ರಾಂಶುಪಾಲರು ಸಂಸ್ಥೆಯ
*****************************************
ಲಾಗಿನ್‍ನಲ್ಲಿ ಪರಿಶೀಲನೆ ಮಾಡುವುದು ಕಡ್ಡಾಯ
****************************************
ಕಲಬುರಗಿ,ಫೆ.13.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು 2018-19ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಎನ್.ಪಿ.ಎಸ್. ಅಡಿಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿ ವೇತನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ತಮ್ಮ ಸಂಸ್ಥೆಯ ಲಾಗಿನ್‍ನಲ್ಲಿ ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಇದುವರೆಗೂ ಪರಿಶೀಲನೆ ಮಾಡದೇ ಇರುವ ಸಂಸ್ಥೆಗಳು ವಿದ್ಯಾರ್ಥಿ ವೇತನ ಅರ್ಜಿಗಳನ್ನು ತಕ್ಷಣ ಪರಿಶೀಲನೆ ಮಾಡಿ ಜಿಲ್ಲಾ ಮಟ್ಟದ ಲಾಗಿನ್‍ಗೆ ವರ್ಗಾಯಿಸಲು ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರಿಗೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಲಕ್ಷ್ಮೀ ಅವರಿಗೆ ಪಿಹೆಚ್.ಡಿ.
*******************************
ಕಲಬುರಗಿ,ಫೆ.13.(ಕ.ವಾ.)-ಕಲಬುರಗಿ ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ವಿಜಯಲಕ್ಷ್ಮೀ ಬಾಬುರಾವ ಕಟಕೆ ಅವರು “ಹಿಂದಿ ಕೆ ಪ್ರಚಾರ ಪ್ರಸಾರ್ ಮೇ ಸಂಚಾರ್ ಮಾಧ್ಯಮೋಕಾ ಯೋಗಧಾನ್” ಎಂಬ ಪ್ರಬಂಧ ಮಂಡನೆ ಮಾಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ತಮಿಳುನಾಡಿನ ಚೆನ್ಮೈನಲ್ಲಿ ನಡೆದ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾದಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಜಯಲಕ್ಷ್ಮೀ ಅವರಿಗೆ ಪಿಹೆಚ್.ಡಿ. ಪದವಿ ಪ್ರಧಾನ ಮಾಡಿದ್ದಾರೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
******************************
ಕಲಬುರಗಿ,ಫೆ.13.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರಿಂದ 33/11 ಕೆ.ವಿ. ಹಡಗಿಲ್ ಹಾರೂತಿ ವಿದ್ಯುತ್ ವಿತರಣಾ ಕೇಂದ್ರದ ಹೈಕೋರ್ಟ್ 33/11 ಕೆ.ವಿ. ಜಿಆಯ್ ಸಬ್ ಸ್ಟೇಶನ್ ಲೈನ್ ಕಾರ್ಯಕೈಗೊಂಡಿರುವ ಪ್ರಯುಕ್ತ 2019ರ ಫೆಬ್ರವರಿ 14ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸದರಿ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಹಡಗಿಲ್ ಹಾರೂತಿ ವಿತರಣಾ ಕೇಂದ್ರ: ಎಫ್-5 ಶರಣ ಶಿರಸಗಿ ಎನ್‍ಜೆವಾಯ್ ಹಾಗೂ ಎಫ್-6 ಬಬಲಾದ ಐಪಿ.
ಅದೇ ರೀತಿ 110/33/11 ಕೆ.ವಿ. ಕಪನೂರ ಉಪ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಸುಧಾರಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ ಫೆಬ್ರವರಿ 14 ಹಾಗೂ 15ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರಗಳ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಇದಕ್ಕೆ ಸಹಕರಿಸಲು ಕೋರಲಾಗಿದೆ.
110 ಕೆ.ವಿ. ಕಪನೂರ ಉಪ ವಿತರಣಾ ಕೇಂದ್ರದ ಎಫ್-2 ಅವರಾದ ಎಕ್ಸ್‍ಪ್ರೆಸ್ ಫೀಡರ್ ವ್ಯಾಪ್ತಿಯಲ್ಲಿ ಬರುವ ಅವರಾದ, ಯಳವಂತಗಿ, ಕಗ್ಗನಮಡ್ಡಿ, ಬಬಲಾದ, ಕಣ್ಣೂರ, ಭೂಷಣಗಿ, ಸಿರಗಾಪುರ ಮತ್ತು ಅಂಕಲಗಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಆಹಾರ ನಿರೀಕ್ಷಕ ಮನೋಹರ ಹಾದಿಮನಿ ಅಮಾನತ್ತು
***********************************************
ಕಲಬುರಗಿ,ಫೆ.13.(ಕ.ವಾ.)-ಆಳಂದ ತಹಶೀಲ್ದಾರ ಕಾರ್ಯಾಲಯದ ಆಹಾರ ನಿರೀಕ್ಷಕ ಮನೋಹರ ಹಾದಿಮನಿ ಅವರು 2019ರ ಜನವರಿ ಮಾಹೆಗೆ ನ್ಯಾಯಬೆಲೆ ಅಂಗಡಿ ಸಂಖ್ಯೆ 145ಕ್ಕೆ ಪಡಿತರ ವಸ್ತುಗಳ ಹಂಚಿಕೆ ಮಾಡಿ ಸಾಗಾಣಿಕೆ ಮಾಡುವ ವಿಷಯದಲ್ಲಿ ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಕ್ರಮಕೈಗೊಳ್ಳದೇ ಕರ್ತವ್ಯ ಲೋಪವೆಸಗಿದ್ದು ಹಾಗೂ ಅಧಿಕಾರ ದುರುಪಯೋಗಪಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1) ರನ್ವಯ ಶಿಸ್ತು ಪ್ರಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿದ್ದು, ಅಮಾನತ್ತಿನ ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ. ಆಹಾರ ನಿರೀಕ್ಷಕರಾಗಿ ನಿರ್ವಹಿಸುತ್ತಿದ್ದ ಮನೋಹರ ಹಾದಿಮನಿ ಅವರ ಜವಾಬ್ದಾರಿಯನ್ನು ಆಳಂದ ತಹಶೀಲ್ದಾರ ಕಾರ್ಯಾಲಯದ ಆಹಾರ ನಿರೀಕ್ಷಕ ಪ್ರವೀಣಕುಮಾರ ಅವರನ್ನು ಮುಂದಿನ ಆದೇಶದವರೆಗೆ ಹೆಚ್ಚಿನ ಪ್ರಭಾರದಲ್ಲಿರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ 14ರಂದು ತರಬೇತಿ ಕಾರ್ಯಾಗಾರ ಉದ್ಘಾಟನೆ
***************************************************
ಕಲಬುರಗಿ,ಫೆ.13.(ಕ.ವಾ.)-ಕಲಬುರಗಿ ಗÀಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ “ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾಯ್ದೆ ಮತ್ತು ನಿಯಮಗಳು, ಗಣಿ ಸುರಕ್ಷತೆ ವಿಧಾನಗಳು, ಸ್ಪೋಟಕ ವಿಧಾನಗಳು ಮತ್ತು ಪರಿಸರ ಸಂರಕ್ಷಣೆ ಕುರಿತು ತರಬೇತಿ ಕಾರ್ಯಾಗಾರವನ್ನು ಇದೇ ಫೆಬ್ರವರಿ 14 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಮಿನಿ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಈ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸುವರು. ಬಳ್ಳಾರಿ ವಲಯದ ಮೈನ್ಸ್ ಸೆಫ್ಟಿ ನಿರ್ದೇಶಕ ಮನೀಶ ಮುರುಕುಟೆ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡ ಹಾಗೂ ಬಳ್ಳಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ.ಪಾಂಡುರಂಗ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪರಸÀ್ಪರ ಸಹಭಾಳ್ವೆ ಜೀವನ ನಮ್ಮದಾಗಲಿ, ಬೇರೆಯವರ ಹಕ್ಕು ಚ್ಯುತಿಯಾಗದಿರಲಿ
*************************************************************************
ಕಲಬುರಗಿ,ಫೆ,13(ಕ.ವಾ)- ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಸಹಬಾಳ್ವೆಯ ಜೀವನ ನಮ್ಮದಾಗಿರಬೇಕಾದರೆ ನೆಲದ ಕಾನೂನನ್ನು ಗೌರವಿಸುವುದು ಮತ್ತು ಹಕ್ಕು ಹಾಗೂ ಕರ್ತವ್ಯಗಳನ್ನು ಪಾಲಿಸುವುದು ಅವಶ್ಯಕ. ಇದಲ್ಲದೆ ಬೇರೆಯವರ ಹಕ್ಕಿಗೂ ಚ್ಯುತಿಯಾಗದಂತೆ ನಡೆದುಕೊಳ್ಳುವುದು ಉತ್ತಮ ಪ್ರಜೆಯ ಲಕ್ಷಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಹೇಳಿದರು.
ಬುಧವಾರ ಕಲಬುರಗಿ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ) ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಮೂಲಭೂತ ಕಾನೂನುಗಳು ಹಾಗೂ ಖಾಯಂ ಜನತಾ ನ್ಯಾಯಾಲಯ” ನ್ಯಾಯ ಸಂಯೋಗ ಮತ್ತು ಫೋಕ್ಸೊ ಕಾಯ್ದೆ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಹೇಗೆ ಕಾಲೇಜಿನ ನಿಯಮ ಚಾಚು ತಪ್ಪದೆ ಪಾಲಿಸುತ್ತಾರೋ ಅದೇ ರೀತಿ ಸಮಾಜದಲ್ಲಿ ಕಾನೂನಿನ ಪರಿಪಾಲನೆ ಅತಿ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಜನನ-ಮರಣ ನೋಂದಣಿ ಬಗ್ಗೆ ತಿಳಿಹೇಳಿದ ಅವರು ಯಾವುದೇ ವ್ಯಕ್ತಿ ಮರಣ ಹೊಂದಿದದಲ್ಲಿ ಆತನ ಆಸ್ತಿ ಕುಟುಂಬ ವರ್ಗಕ್ಕೆ ವರ್ಗಾವಣೆಯಾಗಬೇಕಾದರೆ 1952ರ ಜನನ-ಮರಣ ಕಾಯ್ದೆ ಪ್ರಕಾರ ಮರಣ ಪ್ರಮಾಣ ಪತ್ರ ಪಡೆಯುವುದು ಅವಶ್ಯಕ. ಇನ್ನು ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ವಾಹನ ಮಾಲೀಕರಿಂದ ಸುಮಾರು 3 ರಿಂದ 4 ಲಕ್ಷ ರೂ.ಗಳ ವರೆಗೆ ಪರಿಹಾರವನ್ನು ಕಾನೂನಿನ ಮೂಲಕ ಪಡೆಯಲು ಅವಕಾಶವಿದೆ ಎಂದರು.
ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ನ್ಯಾಯವಾದಿ ಗೀತಾ ಸಜ್ಜನಶೆಟ್ಟಿ ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ 18 ವರ್ಷದೊಳಗಿನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಅಧಿಕವಾಗುತ್ತಿದೆ. ಸಂತ್ರಸ್ತರು ಯಾವುದೇ ಕಾರಣಕ್ಕು ಎದೆಗುಂದದೆ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಹಾಗೂ ಲೈಂಗಿಕ ಕಿರುಕುಳ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ಫೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ನೀಡುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ ಎಂದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್, ವಾಟ್ಸ್ ಆ್ಯಪ್, ಟೆಲಿಗ್ರಾಂ, ಟ್ವಿಟರ್ ಮೂಲಕ ಆಶ್ಲೀಲ ಚಿತ್ರಗಳ ಬಳಕೆಯೂ ಹೆಚ್ಚುತಲಿದ್ದು, ಇದು ಸಹ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರು ಕಿರುಕುಳಕ್ಕೆ ಒಳಗಾದಲ್ಲಿ ಕೂಡಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದರು.
ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮಾತನಾಡಿ ಮೂಲಭೂತ ಹಕ್ಕುಗಳ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ. ಅದರ ಜೊತೆಗೆ ದೇಶ, ಅರಣ್ಯ, ಸಂಸ್ಕ್ರತಿ, ರಕ್ಷಣೆ ವಿಷಯದಲ್ಲಿ ಕತ್ರ್ಯವಗಳಿಗೆ ಹೆಚ್ಚಿನ ಗಮನ ಕೂಡುವುದಿಲ್ಲ. ಹಕ್ಕುಗಳು ಬಯಸಿದಂತೆ ಕರ್ತವ್ಯದ ಪರಿಪಾಲನೆಯನ್ನು ಯಾರು ಮರೆಯಬಾರದು ಎಂದರು. ನ್ಯಾಯವಾದಿ ವೈಜನಾಥ ಎಸ್. ಝಳಕಿ ಅವರು ಅಪಘಾತ ವಿಮೆ ಮತ್ತು ಜನತಾ ನ್ಯಾಯಾಲಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ರೂಬಿನಾ ಪರ್ವಿನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಸಿಬ್ಬಂದಿಗಳಾದ ರೇಷ್ಮಾ, ಮಂಜುಳಾ, ಗಜೇಂದ್ರ, ಶರಣಬಸಪ್ಪ ಕುಂಬಾರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು. ಸಹ ಶಿಕ್ಷಕಿ ಲಲಿತಾ ಪಾಟೀಲ್ ಸ್ವಾಗತಿಸಿ ವಂದಿಸಿದರು. ರಾಜಶ್ರೀ ಸಿ. ಬಾವಿ ನಿರೂಪಿಸಿದರು.

ರಾಜಾಸಮರಸೇನ್ ಕೆ. ಮೋದಿ ಅವರಿಗೆ ಪಿಹೆಚ್.ಡಿ.
********************************************
ಕಲಬುರಗಿ,ಫೆ,13(ಕ.ವಾ)- ಗುಲಬರ್ಗಾ ವಿಶ್ವವಿದ್ಯಾಲಯವು ಸಸ್ಯಶಾಸ್ತ್ರ ವಿಷಯದಲ್ಲಿ ರಾಜಾಸಮರಸೇನ್ ಕೆ.ಮೋದಿ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಪ್ರತಿಮಾ ಮಠದ ಅವರ ಮಾರ್ಗದರ್ಶನದಲ್ಲಿ “ಫೈತೋ ಸೋಶಿಯಾಲಾಜಿಕಲ್ ಸ್ಟಡಿಸ್ ಆನ್ ಫಾರೆಸ್ಟ್ ಆಫ್ ಯಾದಗಿರಿ ಡಿಸ್ಟಿಕ್ ಇನ್ ಕರ್ನಾಟಕ: ಇಂಡಿಯಾ ಕುರಿತು ರಾಜಾಸಮರಸೇನ್ ಕೆ.ಮೋದಿ ಪ್ರಬಂಧವನ್ನು ಮಂಡಿಸಿದ್ದರು.

ಹೀಗಾಗಿ ಲೇಖನಗಳು News and Photo Date: 13-02-2019
ಎಲ್ಲಾ ಲೇಖನಗಳು ಆಗಿದೆ News and Photo Date: 13-02-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 13-02-2019 ಲಿಂಕ್ ವಿಳಾಸ https://dekalungi.blogspot.com/2019/02/news-and-photo-date-13-02-2019.html

0 Response to "News and Photo Date: 13-02-2019"
ಕಾಮೆಂಟ್ ಪೋಸ್ಟ್ ಮಾಡಿ