News and photo Date: 08--02--2019

News and photo Date: 08--02--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 08--02--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 08--02--2019
ಲಿಂಕ್ : News and photo Date: 08--02--2019

ಓದಿ


News and photo Date: 08--02--2019

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
********************************
ಕಲಬುರಗಿ,ಫೆ.08.(ಕ.ವಾ)-ಸಮಾಜ ಕಲ್ಯಾಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಹೈದ್ರಾಬಾದಿನಿಂದ ರಸ್ತೆ ಮಾರ್ಗವಾಗಿ ಕಲಬುರಗಿ ನಗರಕ್ಕೆ ಶನಿವಾರ ಫೆಬ್ರವರಿ 9ರಂದು ಬೆಳಿಗ್ಗೆ 10.30 ಗಂಟೆಗೆ ಆಗಮಿಸುವರು. ಅಂದು ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿಯೆ ವಾಸ್ತವ್ಯ ಮಾಡುವರು.
ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಿದ ಜಾಥಾ
*************************************
ಕಲಬುರಗಿ,ಫೆ.08.(ಕ.ವಾ)-ಕಲಬುರಗಿಯ ಎಸ್.ಬಿ.ಆರ್. ಕಾಲೇಜಿನಿಂದ ವಿದ್ಯಾರ್ಥಿಗಳಿಂದ ಶುಕ್ರವಾರ ಎಸ್.ಬಿ.ಆರ್. ಕಾಲೇಜಿನಿಂದ ಜಗತ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಜಾಥಾ ನಗರದ ನಾಗರಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್ ಹಾಗೂ ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ಅವರು ಜಂಟಿಯಾಗಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿದರು.
ರ್ಯಾಲಿಯಲ್ಲಿ ಭಾಗವಹಿಸಿದ್ದ ಎಸ್.ಬಿ.ಆರ್. ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಸುಮಾರು 500 ವಿದ್ಯಾರ್ಥಿಗಳು, “ಸಂಚಾರ ನಿಯಮಗಳನ್ನು ಪಾಲಿಸಿ”, “ಸಂಚಾರ ಸೂಚನಾ ದೀಪಗಳನ್ನು ಉಲ್ಲಂಘಿಸಬೇಡಿ”, “ಎಡಭಾಗದಿಂದ ಓವರ್‍ಟೇಕ್ ಮಾಡಬೇಡಿ”, “ಮದ್ಯಪಾನ ಮಾಡಿ ಚಾಲನೆ ಮಾಡಬೇಡಿ”, “ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ ಶಿಕ್ಷಾರ್ಹ ಅಪರಾಧ”, “ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ”, “ಸೀಟ್ ಬೆಲ್ಟ್ ಧರಿಸಿ”, “ವಾಹನದ ವೇಗ ನಿಯಂತ್ರಣದಲ್ಲಿರಲಿ”, “ದ್ವಿಚಕ್ರ ವಾಹನ ಸವಾರಿ ಇಬ್ಬರಿಗೆ ಮಾತ್ರ”, “ಪಾದಚಾರಿ ಮಾರ್ಗಗಳನ್ನು ಬಳಸಿ”, “ಶೋಕಿ ಬಿಡಿ ಹೆಲ್ಮೆಟ್ ಧರಿಸಿ”, “ಸಡಕ್ ಸುರಕ್ಷಾ ಜೀವನ್ ರಕ್ಷಾ” ಸೇರಿದಂತೆ ಮುಂತಾದ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗೂತ್ತಾ ಜಾಗೃತಿ ಮೂಡಿಸಿದರು.
ಎಸ್.ಬಿ.ಆರ್. ಕಾಲೇಜಿನಿಂದ ಪ್ರಾರಂಭಗೊಂಡ ರ್ಯಾಲಿಯು ಗೋವಾ ಹೊಟೇಲ್, ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಗತ್ ವೃತ್ತಕ್ಕೆ ಆಗಮಿಸಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಉಪ ಸಾರಿಗೆ ಆಯುಕ್ತ ಕೆ. ದಾಮೋದರ, ಎಸ್.ಬಿ.ಆರ್. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ದೊಳ್ಳೆಗೌಡರ ಉಪಸ್ಥಿತರಿದ್ದರು.
ಜಂತುಹುಳುಗಳಿಂದ ಮಕ್ಕಳಲ್ಲಿ ಅಪËಷ್ಠಿಕತೆ
**************************************
ಕಲಬುರಗಿ,ಫೆ.08.(ಕ.ವಾ)-ಮಕ್ಕಳಲ್ಲಿನ ಅಪೌಷ್ಟಿಕತೆಗೆ ಜಂತುಹುಳುಗಳು ಪ್ರಮುಖ ಕಾರಣವಾಗಿದ್ದು, ಎಲ್ಲ ಅರ್ಹ ಮಕ್ಕಳಿಗೆ ಕಡ್ಡಾಯವಾಗಿ ತಮ್ಮ ಸಮ್ಮುಖದಲ್ಲೇ ಅಲ್ಬೆಂಡಾಝೋಲ್ ಮಾತ್ರೆಗಳನ್ನು ನುಂಗಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಶಿಕ್ಷಕರಿಗೆ ಸೂಚಿಸಿದರು.
ಅವರು ಶುಕ್ರವಾರ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಂತು ಹುಳು ನಿವಾರಕ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ವರ್ಷ ಶೇ. 93 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಈ ಬಾರಿ ಎಲ್ಲ ಮಕ್ಕಳಿಗೆ ಮಾತ್ರ ನುಂಗಿಸುವ ಮೂಲಕ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು. ಅಲ್ಬೆಂಡಾಝೋಲ್ ಮಾತ್ರೆ ಚೀಪುವುದರಿಂದ ಅಥವಾ ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದರು.
ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿ ಅಲ್ಬೆಂಡಾಝೋಲ್ ಮಾತ್ರೆ ನುಂಗುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸುವ ಮೂಲಕ ಜಂತು ಹುಳು ಬಾಧೆ ತಗಲದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ. ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ವೈಯಕ್ತಿಕ ಶುಚಿತ್ವ ಇಲ್ಲದಿರುವುದರಿಂದ ಜಂತುಹುಳು ಕರುಳಿನಲ್ಲಿ ಬೆಳವಣಿಗೆಯಾಗುತ್ತವೆ. ಮಕ್ಕಳಲ್ಲಿ ಜಂತುಹುಳು ಬಾಧೆಯಿಂದ ರಕ್ತಹೀನತೆ, ದೇಹ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಇದನ್ನು ತಡೆಗಟ್ಟಲು ಎಲ್ಲರೂ ಬಯಲು ಬಹಿರ್ದೆಸೆ ತ್ಯಜಿಸಬೇಕು. ಊಟಕ್ಕೂ ಮುನ್ನ ಸ್ವಚ್ಚವಾಗಿ ಕೈತೊಳೆಯಬೇಕು ಎಂದರು.
ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ 8.69 ಲಕ್ಷ ಮಕ್ಕಳಿಗೆ ಅಲ್ಬೆಂಡಾಝೋಲ್ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ. 1-2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ವರ್ಷ ಹಾಗೂ ಮೇಲ್ಪಟ್ಟವರಿಗೆ 400 ಎಂ.ಜಿ. ಅಲ್ಬೆಂಡಾಝೋಲ್ ಮಾತ್ರೆ ನೀರಿನೊಂದಿಗೆ ಸೇವಿಸಲು ನೀಡಲಾಗುತ್ತಿದೆ. ಜಿಲ್ಲೆಯ 3098 ಅಂಗನವಾಡಿ, 4012 ಶಾಲೆಗಳು, 225 ಕಾಲೇಜು ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ಮಾತ್ರೆ ನುಂಗಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ ಅಲ್ಬೆಂಡಾಝೋಲ್ ಮಾತ್ರೆ ಸೇವಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಅಂಬಾರಾಯ ರುದ್ರವಾಡಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಬಸವರಾಜ ಗುಳಗಿ, ಕೇಂದ್ರೀಯ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ. ಕೃಷ್ಣಾ ಕಾಕಲವಾರ, ಮುಖ್ಯ ಗುರುಗಳಾದ ಕೆ. ಕಲಕೇರಿ, ದೈಹಿಕ ಶಿಕ್ಷಕ ವಿಜಯಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕೈ ತೊಳೆಯುವ ವಿಧಾನಗಳನ್ನು ಹೇಳಿಕೊಡಲಾಯಿತು.
ಜೆಸ್ಕಾಂ ವಿದ್ಯುತ್ ದರ ಪರಿಷ್ಕರಣೆ:
*****************************
ಫೆಬ್ರವರಿ 11ರಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆ
********************************************************
ಕಲಬುರಗಿ,ಫೆ.08.(ಕ.ವಾ)-ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು (ಜೆಸ್ಕಾಂ) ಆರ್ಥಿಕ ವರ್ಷ 2019-20ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಿಸಬೇಕೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‍ಸಿ)ಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆಯನ್ನು 2019ರ ಫೆಬ್ರವರಿ 11 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಸಾರ್ವಜನಿಕರ ಅಹವಾಲು ವಿಚಾರಣೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಆಸಕ್ತ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮತ್ತು ಇತರೆ ಸಾರ್ವಜನಿಕರು ಆಗಮಿಸಿ ತಮ್ಮ ಅಭಿಪ್ರಾಯಗಳನ್ನು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ಆಯೋಗದ ಮುಂದೆ ಮಂಡಿಸಬಹುದಾಗಿದೆ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಕಾರ್ಯಚರಣೆ) ನಿಗಮ ಕಚೇರಿಯ ಮುಖ್ಯ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ
****************************************
ಕಲಬುರಗಿ,ಫೆ.08.(ಕ.ವಾ)-ತೋಟಗಾರಿಕೆ ಇಲಾಖೆಯಿಂದ ಕಲಬುರಗಿ ಜಿಲ್ಲೆಯ ರೈತರ ಮಕ್ಕಳಿಗಾಗಿ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ತರಬೇತಿ ಕೇಂದ್ರದಲ್ಲಿ 2019-20ನೇ ಸಾಲಿಗೆ 10 ತಿಂಗಳ ಅವಧಿಗೆ ತೋಟಗಾರಿಕೆ ತರಬೇತಿಯನ್ನು 2019ರ ಮೇ 02ರಿಂದ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ರಾಜ್ಯ ವಲಯ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಸದರಿ ತರಬೇತಿಗಾಗಿ ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು ಹಾಗೂ ದೃಢಕಾಯವಾಗಿರಬೇಕು. ಅಭ್ಯರ್ಥಿಗಳ ತಂದೆ, ತಾಯಿ, ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಕುರಿತು ಪಹಣಿಯನ್ನು ಕಡ್ಡಾಯವಾಗಿ ನೀಡಬೇಕು. ಕಲಬುರಗಿ ಜಿಲ್ಲೆಯ ರೈತರ ಮಕ್ಕಳನ್ನು ಆಯ್ಕೆ ಮಾಡಲಾಗುವುದು.
ನಿಗದಿತ ಅರ್ಜಿ ನಮೂನೆಗಳನ್ನು ಕಲಬುರಗಿ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ)/ ರಾಜ್ಯ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಅಥವಾ ಇಲಾಖೆ ತಿತಿತಿ.hoಡಿಣiಛಿuಟಣuಡಿe.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ದಿಂದ 2019ರ ಫೆಬ್ರವರಿ 18 ರಿಂದ 28 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 15 ರೂ. ಅರ್ಜಿ ಶುಲ್ಕವಿದ್ದು, ಈ ಅರ್ಜಿ ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್/ಡಿಮ್ಯಾಂಡ್ ಡ್ರಾಪ್ಟ್‍ನ್ನು ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಕಲಬುರಗಿ ಅವರ ಹೆಸರಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿ ಜೊತೆಗೆ ಲಗತ್ತಿಸಿ ಸಲ್ಲಿಸಬೇಕು.
ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದೃಢೀಕೃತ ದಾಖಲಾತಿ ಹಾಗೂ ಎರಡು ಕಲರ್ ಪಾಸ್‍ಪೋರ್ಟ್ ಸೈಜಿನ ಫೋಟೋಗಳೊಂದಿಗೆ ಲಗತ್ತಿಸಿ ಅರ್ಜಿಯನ್ನು 2019ರ ಫೆಬ್ರವರಿ 28ರೊಳಗಾಗಿ ಸಲ್ಲಿಸಬೇಕು. 2019ರ ಮಾರ್ಚ್ 2ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಮೂಲ ದಾಖಲಾತಿಗಳೊಂದಿಗೆ ಕಲಬುರಗಿಯ ಐವಾನ್-ಎ-ಶಾಹಿ ರಸ್ತೆಯ ತೊಟಗಾರಿಕೆ ಉಪ ನಿರ್ದೇಶಕರು (ಜಿಪಂ) ಕಚೆÉೀರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-229479ಗೆ ಸಂಪರ್ಕಿಸಲು ಕೋರಲಾಗಿದೆ.
ಫೆಬ್ರವರಿ 9ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ,ಫೆ.08.(ಕ.ವಾ)-ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 110/33/11 ಕೆ.ವಿ. ಕಪನೂರ ಉಪ ವಿತರಣಾ ಕೇಂದ್ರದಲ್ಲಿ ಸುಧಾರಣಾ ಕಾರ್ಯ ಕೈಗೊಂಡಿರುವ ಪ್ರಯುಕ್ತ ಶನಿವಾರ ಫೆಬ್ರವರಿ 9ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
110ಕೆ.ವಿ. ಕಪನೂರ ಉಪವಿತರಣಾ ಕೇಂದ್ರ: ಎಫ್-2 ಅವರಾದ ಎಕ್ಸ್‍ಪ್ರೆಸ್ ಫೀಡರ್ ವ್ಯಾಪ್ತಿಗೆ ಬರುವ ಅವರಾದ, ಯಳವಂತಗಿ, ಕಗ್ಗನಮಡ್ಡಿ, ಬಬಲಾದ, ಕಣ್ಣೂರ, ಭೂಷಣಗಿ, ಸಿರಗಾಪೂರ ಮತ್ತು ಅಂಕಲಗಾ ಗ್ರಾಮಗಳು.
ಕರ್ನಾಟಕ ಸರ್ಕಾರದ ನವದೆಹಲಿ ಪ್ರತಿನಿಧಿ ಡಾ. ಅಜಯಸಿಂಗ್ ಪ್ರವಾಸ
**************************************************************
ಕಲಬುರಗಿ,ಫೆ.08.(ಕ.ವಾ)-ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಯಾದ ಡಾ. ಅಜಯ ಧರ್ಮಸಿಂಗ್ ಅವರು ಇದೇ ಫೆಬ್ರವರಿ 9ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿಯಲ್ಲಿ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡುವರು.
ನಂತರ ಅಂದು ಸಂಜೆ 6.15 ಗಂಟೆಗೆ ಯಡ್ರಾಮಿಯ ವಿರಕ್ತಮಠದಲ್ಲಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಅವರೊಂದಿಗೆ ಶ್ರೀ ಸಿದ್ದಲಿಂಗದೇವರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಫೆಬ್ರವರಿ 10 ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿಯಿಂದ ಹುಮನಾಬಾದಿಗೆ ಪ್ರಯಾಣಿಸುವರು. ನಂತರ ಅಂದು ಮಧ್ಯಾಹ್ನ 12.30 ಗಂಟೆಗೆ ಮರಳಿ ಕಲಬುರಗಿಗೆ ಆಗಮಿಸಿ ಖಾಸಗಿ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1.30 ಗಂಟೆಗೆ ಜೇವರ್ಗಿಯಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಜೇವರ್ಗಿಯಲ್ಲಿ ಬರಗಾಲ ಕುರಿತು ತಾಲೂಕಿನ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ಕರ್ನಾಟಕ ಸರ್ಕಾರದ ನವದೆಹಲಿ
****************************
ವಿಶೇಷ ಪ್ರತಿನಿಧಿ ಸೈಯದ್ ಮೊಹಿದ್ ಅಲ್ತಾಫ್ ಪ್ರವಾಸ
************************************************
ಕಲಬುರಗಿ,ಫೆ.08.(ಕ.ವಾ)-ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಯಾದ ಸೈಯದ್ ಮೊಹಿದ್ ಅಲ್ತಾಫ್ ಅವರು ವಿಜಯಪುರದಿಂದ ರಸ್ತೆ ಮೂಲಕ ಫೆಬ್ರವರಿ 10ರಂದು ಸಂಜೆ 7 ಗಂಟೆಗೆ ಕಲಬುರಗಿಗೆ ಆಗಮಿಸಿ, ಖಾಸಗಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಫೆಬ್ರವರಿ 11 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿಯಿಂದ ಹೈದ್ರಾಬಾದಿಗೆ ಪ್ರಯಾಣಿಸುವರು.
ತಾಲೂಕು ಆಸ್ಪತ್ರೆ:
*********************
ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ
*****************************************************************
ಕಲಬುರಗಿ,ಫೆ.08.(ಕ.ವಾ)-ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ತಾಲೂಕಾ ಆಸ್ಪತ್ರೆ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಷರತ್ತು ಮತ್ತು ನಿಬಂಧನೆಗೊಳಪಟ್ಟು ಕೆಳಕಂಡ ವಿವಿಧ ಹುದ್ದೆಗಳನ್ನು ಮೆರಿಟ್-ಕಂ-ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ತಿಳಿಸಿದಾರೆ.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು-11 ಹುದ್ದೆಗಳು, ಮಕ್ಕಳ ತಜ್ಞರು-05 ಹುದ್ದೆಗಳು, ಜನರಲ್ ಫಿಜಿಶಿಯನ್-02 ಹುದ್ದೆಗಳು, ಶಸ್ತ್ರಜ್ಞರು-02 ಹುದ್ದೆಗಳು, ಅರವಳಿಕೆ ತಜ್ಞರು-05 ಹುದ್ದೆಗಳು, ನೇತ್ರ ಸಹಾಯಕರು (ಆರ್‍ಬಿಎಸ್‍ಕೆ)-06 ಹುದ್ದೆಗಳು, ಪಂಚಕರ್ಮ ತಜ್ಞ ವೈದ್ಯರು (ಮಹಿಳೆ-1 ಮತ್ತು ಪುರುಷ-01)-02 ಹುದ್ದೆಗಳು, ಪಂಚಕರ್ಮ ಚಿಕಿತ್ಸಕರು (ಮಹಿಳೆ-01 ಹಾಗೂ ಪುರುಷ-1)-02 ಹುದ್ದೆಗಳು, ಲಸಿಕಾ ಕ್ಷೇತ್ರದ ಮೇಲ್ವಿಚಾರಕÀರು-01 ಹುದ್ದೆ, ವೈದ್ಯಾಧಿಕಾರಿಗಳು-05 ಹುದ್ದೆ ಹಾಗೂ ಜಿಲ್ಲಾ ಮೇಲ್ವಿಚಾರಣಾ ಮತ್ತು ಮೌಲ್ಯಮಾಪನ ವ್ಯವಸ್ಥಾಪಕರು-01 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಜನರಲ್ ಫಿಜಿಶಿಯನ್, ಶಸ್ತ್ರಜ್ಞರು ಹಾಗೂ ಅರವಳಿಕೆ ತಜ್ಞವೈದ್ಯರ ಅವರ ತಜ್ಞತೆಯನ್ನು ಕರ್ನಾಟಕ ಮೆಡಿಕಲ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಂಡಿರಬೇಕು. ಅಭ್ಯರ್ಥಿಗಳು ಸಂಬಂಧಪಟ್ಟ ಅವಶ್ಯಕ ದಾಖಲೆಗಳಾದ (ಬಯೋಡೆಟಾ) ವಿದ್ಯಾರ್ಹತೆ ಅಂಕಪಟ್ಟಿ ದೃಢೀಕೃತ ಪ್ರತಿ, ಗ್ರಾಮೀಣ, ಕನ್ನಡ ಮಾಧ್ಯಮ, ಜಾತಿ ಪ್ರಮಾಣ ಪತ್ರ, 371(ಜೆ) ಪ್ರಮಾಣಪತ್ರ, ಯೋಜನಾ ನಿರಾಶ್ರಿತರು, ಅಂಗವಿಕಲ ಮೂಲ ಪ್ರಮಾಣ ಪತ್ರ ಮತ್ತು ಒಂದು ಸಟ್ ನಕಲು ಪ್ರತಿ, ಭಾವಚಿತ್ರಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಹಿಂದುಗಡೆಯಿರುವ ಹೆಚ್.ಐ.ಟಿ.ಹಾಲ್‍ನಲ್ಲಿ ಹಾಜರಾಗಿ 2019ರ ಫೆಬ್ರವರಿ 18ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಅರ್ಜಿ ನಮೂನೆ
ಪಡೆದು ಭರ್ತಿ ಅದೇ ದಿನದಂದು ಕಚೇರಿ ಸಮಯದಲ್ಲಿ ಸಲ್ಲಿಸಬೇಕು. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ, ವೇತನ, ವಯೋಮಿತಿ, ಅನುಭವ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08472-278620ಗೆ ಸಂಪರ್ಕಿಸಲು ಕೋರಲಾಗಿದೆ.
ಆಯ್ಕೆ ಪ್ರಕ್ರಿಯೆ ಕೊನೆಯ ದಿನಾಂಕದವರೆಗೆ ಹುದ್ದೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾದರೂ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಥಳೀಯ ಜಿಲ್ಲೆಯಲ್ಲಿ ಈಗಾಗಲೇ ಸೇವೆ ಸಲ್ಲಿಸಿರುವÀ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮುಕ್ತ ವಿಶ್ವವಿದ್ಯಾಲಯದ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ, ಮೇಲ್ಕಂಡ ಹುದ್ದೆಗಳು ಭರ್ತಿಯಾಗದೇ ಇದ್ದಲ್ಲಿ ಪ್ರತಿ ಸೋಮವಾರ ವಾಕ್ ಇನ್ ಇಂಟರ್‍ವ್ರ್ಯೂ (Wಚಿಟಞ-iಟಿ-Iಟಿಣeಡಿvieತಿ) ಮೂಲಕ ಮುಖಾಂತರ ಹುದ್ದೆಗಳನ್ನು 2019ರ ಮಾರ್ಚ್ 31 ರವರೆಗೆ ಭರ್ತಿ ಮಾಡಿಕೊಳ್ಳಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಡಿ ಪಟ್ಟಣ: ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಫೆ.08.(ಕ.ವಾ)-ವಾಡಿ ಪಟ್ಟಣದ ವಸತಿ ರಹಿತ ಸಾರ್ವಜನಿಕರಿಗೆ (ಉ+1) ಮಾದರಿಯಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಾಡಿ (ಜಂ) ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ವಸತಿ ರಹಿತ ವಾಡಿ ಪಟ್ಟಣ ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಯನ್ನು 2019ರ ಫೆಬ್ರವರಿ 18 ರೊಳಗಾಗಿ ವಾಡಿ (ಜಂ) ಪುರಸಭೆ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ವಾಡಿ ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.
ಸುಖಕರ ಪ್ರಯಾಣವೆ ನಮ್ಮ ಗುರಿಯಾಗಬೇಕು
****************************************
ಕಲಬುರಗಿ,ಫೆ,8(ಕ.ವಾ)-ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುವುದಾಗಲಿ ಅಥವಾ ಚಾಲನೆ ಮಾಡುವುದನ್ನು ಬಿಟ್ಟು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸುಖಕರ ಪ್ರಯಾಣವೆ ನಮ್ಮ ಗುರಿಯಾಗಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಶಶಿಕುಮಾರ ಆಟೋ ಚಾಲಕರಿಗೆ ಕರೆ ನೀಡಿದರು.
ಅವರು ಶುಕ್ರವಾರ 30ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2019ರ ಅಂಗವಾಗಿ ಸಂಚಾರಿ ಪೊಲೀಸ್ ಠಾಣೆಯಿಂದ ಇಲ್ಲಿನ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲಿ ಆಟೋ ಚಾಲಕರಿಗಾಗಿ ಹಮ್ಮಿಕೊಂಡಿದ್ದ “ರಸ್ತೆ ಸುರಕ್ಷತೆ-ಜೀವನ ರಕ್ಷೆ” ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಟೋನಲ್ಲಿ ಪ್ರಯಣ ಮಾಡುವರು ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ದಿನನಿತ್ಯ ದುಡಿದು ಜೀವನ ಸಾಗಿಸುವರೆ ಹೆಚ್ಚಾಗಿರುತ್ತಾರೆ. ಒಂದು ವೇಳೆ ಆಟೋ ಚಾಲಕರ ನಿರ್ಲಕ್ಯತನ ವಹಿಸಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ತುತ್ತಾದಲ್ಲಿ ಪ್ರಯಾಣಿಕರ ಕುಟಂಬ ಹಾಗೂ ಚಾಲಕನ ಕುಟುಂಬ ಬೀದಿ ಪಾಲಾಗಬೇಕಾಗುತ್ತದೆ. ಇದನ್ನು ಚಾಲಕರು ಅರಿಯಬೇಕು. ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ತಮ್ಮ ಅಮೂಲ್ಯ ಜೀವನ ರಕ್ಷಿಸುವುದಲ್ಲದೆ ಪ್ರಯಾಣಿಕರ ಜೀವನದ ರಕ್ಷಣೆಯ ಜವಾಬ್ದಾರಿ ಸಹ ನಿಮ್ಮ ಮೇಲಿದೆ ಎಂದರು.
ಕಲಬುರಗಿ ನಗರದ ಪ್ರಮುಖ ವೃತ್ತಗಳಲ್ಲಿ ಆಟೋ ಚಾಲಕರು ಕಡ್ಡಾಯವಾಗಿ ನಿಗದಿಪಡಿಸಿರುವ ನಿಲ್ದಾಣದಲ್ಲಿಯೆ ವಾಹನ ಪಾರ್ಕಿಂಗ್ ಮಾಡಬೇಕು. ಇದರಿಂದ ಅನಗತ್ಯ ಸಂಚಾರ ದಟ್ಟಣೆ ತಪ್ಪಿಸಲು ಸಾಧ್ಯ. ರಾತ್ರಿ ಹೊತ್ತಿನಲ್ಲಿ ಪ್ರಯಾಣಿಕರಿಂದ ಕೆಲ ಆಟೋ ಚಾಲಕರು ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬ ದೂರು ಬರುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು. ಹಗಲು ರಾತ್ರಿ ದುಡಿಯುವ ಆಟೋ ಚಾಲಕರ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಪ್ರಶಂಸಿದರು.
ಪರ್ಮಿಟ್ ಇಲ್ಲದ ಆಟೋಗಳಿಗೆ ನಿಯಂತ್ರಣ ಹಾಕಿ:- ಕಲಬುರಗಿ ನಗರದಲ್ಲಿ ಪರ್ಮಿಟ್ ಇಲ್ಲದ ಆಟೋಗಳು ಓಡಾದಂತೆ ನಿಯಂತ್ರಣ ಹಾಕಿ ಎಂದು ಸಂಚಾರಿ ಪೊಲೀಸ್ ನಿರೀಕ್ಷಕರಿಗೆ ಎಸ್.ಪಿ.ಶಶಿಕುಮಾರ ನಿರ್ದೇಶನ ನೀಡಿದರು.
ಸಂಚಾರಿ ಪಿಐ ಮಹಾದೇವ ಪಂಚಮುಖಿ, ಸಂಚಾರಿ ಪಿಎಸ್‍ಐ ಹುಸೇನ ಭಾಷಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖ್ ಸಾಬ್ ಅವರುಗಳು ಮಾತನಾಡಿ ಎಲ್ಲರು ಸಂಚಾರಿ ನಿಯಮ ಪಾಲಿಸಏಕು. ಸಾರ್ವಜನಿಕರ ರಕ್ಷಣೆಗಾಗಿ ದುಡಿಯುವ ಪೊಲೀಸ್ ಇಲಾಖೆ ಹಾಗೂ ಸಂಚಾರಿ ಪೊಲೀಸರೊಂದಿಗೆ ರಸ್ತೆ ನಿಯಮ ಪಾಲನೆಯಲ್ಲಿ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊಬೇಷನರ್ ಐ.ಪಿ.ಎಸ್. ರಾಮರಾಜೇಂದ್ರ, ಕಲಬುರಗಿ “ಎ” ಉಪ ವಿಭಾಗದ ಉಪಾಧೀಕ್ಷಕ ವಿಜಯಕುಮಾರ ಹೊಸಮನಿ, ಗೃಹ ರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಸಂತೋಷ ಪಾಟೀಲ ಸೇರಿದಂತೆ ಸಂಚಾರಿ ಪೊಲೀಸ್ ಸಿಬ್ಬಂದಿಗಳಾದ ಪ್ರಭು ತಿಗಡಿ, ರಾಮಚಂದ್ರ, ಬಾಬು ಮಿಯಾ, ರಾಜಕುಮಾರ ಕೋಬಾಳ ಹಾಗೂ ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.









ಹೀಗಾಗಿ ಲೇಖನಗಳು News and photo Date: 08--02--2019

ಎಲ್ಲಾ ಲೇಖನಗಳು ಆಗಿದೆ News and photo Date: 08--02--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 08--02--2019 ಲಿಂಕ್ ವಿಳಾಸ https://dekalungi.blogspot.com/2019/02/news-and-photo-date-08-02-2019.html

Subscribe to receive free email updates:

0 Response to "News and photo Date: 08--02--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ