ಶೀರ್ಷಿಕೆ : News and Pgotos Date: 01-02-2019
ಲಿಂಕ್ : News and Pgotos Date: 01-02-2019
News and Pgotos Date: 01-02-2019
ಎ.ಸಿ.ಬಿ. ಅಧಿಕಾರಿಗಳಿಂದ ಜನಸಂಪರ್ಕ ಸಭೆ
****************************************
ಕಲಬುರಗಿ,ಫೆ.01.(ಕ.ವಾ)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ 2019ರ ಫೆಬ್ರವರಿ ಮಾಹೆಯಲ್ಲಿ ಕೆಳಕಂಡ ದಿನಾಂಕಗಳಂದು ಭೇಟಿ ನೀಡಿ ಕಲಬುರಗಿ ಎಸಿಬಿ ಪೊಲೀಸ್ ಠಾಣಾ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅರಕ್ಷಕ ಉಪಾಧೀಕ್ಷಕರು ತಿಳಿಸಿದ್ದಾರೆ.
ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಹ್ಮದ ಇಸ್ಮಾಯಿಲ್ (ಮೊಬೈಲ್ ಸಂಖ್ಯೆ 9480806309) ಅವರು ಇದೇ ಫೆಬ್ರವರಿ 4 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿಂಚೋಳಿ ತಹಶೀಲ್ದಾರ ಕಚೇರಿಯಲ್ಲಿ ಹಾಗೂ ಅಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಕಾಳಗಿ ಬಸ್ ನಿಲ್ದಾಣದ ಚಾವಡಿ ಕಟ್ಟಿ ಹತ್ತಿರದಲ್ಲಿ, ಫೆಬ್ರವರಿ 7 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಸೇಡಂ ಪುರಸಭೆ ಕಾರ್ಯಾಲಯದಲ್ಲಿ, ಫೆಬ್ರವರಿ 11 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿತ್ತಾಪುರ ಪ್ರವಾಸಿ ಮಂದಿರದಲ್ಲಿ ಹಾಗೂ ಅಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಶಹಾಬಾದ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು.
ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಕಲ್ಲದೇವರ (ಮೊಬೈಲ್ ಸಂಖ್ಯೆ 9480806310) ಅವರು ಇದೇ ಫೆಬ್ರವರಿ 6 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಆಳಂದ ಪ್ರವಾಸಿ ಮಂದಿರದಲ್ಲಿ, ಫೆಬ್ರವರಿ 8 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಅಫಜಲಪುರ ಪ್ರವಾಸಿ ಮಂದಿರದಲ್ಲಿ, ಫೆಬ್ರವರಿ 12ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಡ್ರಾಮಿ ಪ್ರವಾಸಿ ಮಂದಿರದಲ್ಲಿ, ಅಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಜೇವರ್ಗಿ ಪ್ರವಾಸಿ ಮಂದಿರದಲ್ಲಿ ಹಾಗೂ ಫೆಬ್ರವರಿ 14ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಕಮಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.

ವರ್ಷಾಂತ್ಯದ ಬಿಲ್ಲುಗಳನ್ನು ಅವಧಿಯೊಳಗೆ ಖಜಾನೆಗೆ ಸಲ್ಲಿಸಿ
****************************************************
ಕಲಬುರಗಿ,ಫೆ.01.(ಕ.ವಾ)-ಸರ್ಕಾರದ ಆದೇಶದಂತೆ ಪ್ರಸಕ್ತ 2018-19ನೇ ಆರ್ಥಿಕ ವರ್ಷದ ಬಿಲ್ಲುಗಳನ್ನು ಕಲಬುರಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಡ್ರಾಯಿಂಗ್ ಮತ್ತು ಬಟವಡೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಖಜಾನೆಗೆ ಸಲ್ಲಿಸಬೇಕೆಂದು ಕಲಬುರಗಿ ಜಿಲ್ಲಾ ಖಜಾನೆಯ ಇಲಾಖೆಯ ಉಪನಿರ್ದೇಶಕ ದತ್ತಪ್ಪಾ ಗೊಬ್ಬುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2019ರ ಜನವರಿ 31ರ ಒಳಗಡೆ ಅನುದಾನ ಬಿಡುಗಡೆ ಸಂಬಂಧಿಸಿದ ವೇತನ/ವೇತನ ಬಾಕಿ/ಹಬ್ಬದ ಮುಂಗಡ, ಅನುದಾನಿತ ವೇತನ ಬಿಲ್ಲುಗಳನ್ನು ಸಲ್ಲಿಸಲು 2019ರ ಫೆಬ್ರವರಿ 16 ಕೊನೆಯ ದಿನ ಹಾಗೂ 2019ರ ಜನವರಿ 31ರ ನಂತರ ಬಿಡುಗಡೆ ಮಾಡುವ ಅನುದಾನ/ ವೆಚ್ಚಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಸಲ್ಲಿಸಲು 2019ರ ಮಾರ್ಚ್ 8 ಕೊನೆಯ ದಿನವಾಗಿದೆ.
2019ರ ಜನವರಿ 31ರ ಒಳಗಡೆ ಬಿಡುಗಡೆ ಮಾಡಿರುವ ಅನುದಾನಕ್ಕೆ ಸಂಬಂಧಿಸಿದ ಕಚೇರಿ ವೆಚ್ಚಗಳಿಗೆ ಸಂಬಂಧಿಸಿದಂತೆ ಸಾದಿಲ್ವಾರು / ಪ್ರಯಾಣ ಭತ್ಯೆ ಬಿಲ್ಲುಗಳನ್ನು ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನ ಹಾಗೂ ಜನವರಿ 31ರ ನಂತರ ಬಿಡುಗಡೆ ಮಾಡುವ ಅನುದಾನಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಸಲ್ಲಿಸಲು ಮಾರ್ಚ್ 12ಕೊನೆಯ ದಿನವಾಗಿದೆ.
2019ರ ಜನವರಿ 31ರೊಳಗಡೆ ಬಿಡುಗಡೆ ಮಾಡಿರುವ ಅನುದಾನಕ್ಕೆ ಸಂಬಂಧಿಸಿದ ಇಎಪಿ (ಇಂP) ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆ ಹೊರತುಪಡಿಸಿ ಇತರೆ ಯೋಜನೆಗಳಿಗೆ ಸಾದಿಲ್ವಾರು / ಹಾಗೂ ಕೇಂದ್ರ ಸಾದಿಲ್ವಾರು ಬಿಲ್ಲುಗಳು / ವೇತನೇತರ ಸಹಾಯಾನುದಾನ ಬಿಲ್ಲುಗಳನ್ನು ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನ ಹಾಗೂ ಜನವರಿ 31ರ ನಂತರ ಬಿಡುಗಡೆ ಮಾಡುವ ಅನುದಾನಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಸಲ್ಲಿಸಲು ಮಾರ್ಚ್ 20 ಕೊನೆಯ ದಿನವಾಗಿದೆ.
2019ರ ಜನವರಿ 31ರೊಳಗಡೆ ಬಿಡುಗಡೆ ಮಾಡಿರುವ ಅನುದಾನಕ್ಕೆ ಸಂಬಂಧಿಸಿದ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಹಾಗೂ ಇಎಪಿ (ಇಂP) ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆ ಬಿಲ್ಲುಗಳನ್ನು ಸಲ್ಲಿಸಲು ಮಾರ್ಚ್ 12 ಕೊನೆಯ ದಿನ ಹಾಗೂ ಜನವರಿ 31ರ ನಂತರ ಬಿಡುಗಡೆ ಮಾಡುವ ಅನುದಾನಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.
ವಿದ್ಯುಚ್ಛಕ್ತಿ, ದೂರವಾಣಿ ಹಾಗೂ ಕಟ್ಟಡ ಬಾಡಿಗೆ ಸಂಬಂಧಿಸಿದ ಬಿಲ್ಲುಗಳನ್ನು ಸಲ್ಲಿಸಲು ಮಾರ್ಚ್ 16 ಕೊನೆಯ ದಿನ ಇರುತ್ತದೆ. ಪೂರಕ ಅಂದಾಜು-2 ರಲ್ಲಿ ಸಕ್ರಮಗೊಳಿಸುವ ಹೆಚ್ಚುವರಿ ಆದೇಶದ ಬಿಲ್ಲುಗಳನ್ನು ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ. ಜಿ.ಪಂ./ತಾ.ಪಂ. ಸಂಬಂಧಿಸಿದ ಎಲ್ಲ ಅಪ್‍ಲೋಡ್‍ಗಳನ್ನು ಸಲ್ಲಿಸಲು ಮಾರ್ಚ್ 12 ಕೊನೆಯ ದಿನವಾಗಿದೆ.
ಎಲ್ಲಾ ಡ್ರಾಯಿಂಗ್ ಮತ್ತು ಬಟವಾಡೆ ಮಾಡುವ ಕಲಬುರಗಿ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು 2018-19ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ವಿವಿಧ ಕ್ಲೇಮುವಾರು ಬಿಲ್ಲುಗಳು ಮತ್ತು ಅನುದಾನ ಬಿಡುಗಡೆ ಹಾಗೂ ಮರುಹಂಚಿಕೆ ಕುರಿತು ಉಪ ಖಜಾನೆಗಳಲ್ಲಿ ಬಿಲ್ಲುಗಳನ್ನು ಸಲ್ಲಿಸಲು ಖಜಾನೆ ವ್ಯವಹಾರದ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಮಾತ್ರ ಸಮಯವನ್ನು ನಿಗದಿಪಡಿಸಲಾಗಿದೆ.
2019ರ ಮಾರ್ಚ್ 31 ರಂದು ಭಾನುವಾರ ಇರುವುದರಿಂದ ಮಾರ್ಚ್ 30ರ ಮಧ್ಯಾಹ್ನ 2.30 ಗಂಟೆಯ ನಂತರ ಯಾವುದೇ ಬಿಲ್ಲುಗಳು ಖಜಾನೆಗೆ ಸಲ್ಲಿಸುವುದನ್ನು ನಿರ್ಭಂಧಿಸಲಾಗಿದೆ. ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ ಪದವಿಪೂರ್ವ ಶಿಕ್ಷಣ, ಅಂಗವಿಕಲರ ಕಲ್ಯಾಣ ಇಲಾಖೆ ಸಂಬಂಧಿಸಿದ ವಿದ್ಯಾರ್ಥಿ ವೇತನದ ಫಲಾನುಭವಿಗಳ ಪಟ್ಟಿ ಸಾಕಷ್ಟು ಮುಂಚಿತವಾಗಿ ಡಿ.ಡಿ.ಓ. ಗಳು ತಯಾರಿಸತಕ್ಕದ್ದು. ಆದ್ದರಿಂದ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಬಿಲ್ಲುಗಳು ನಿಗದಿಪಡಿಸಿದ ದಿನಾಂಕದೊಳಗಾಗಿ ಖಜಾನೆಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಕಲಬುರಗಿಗೆ ಕಾರವಾರದ ನೇವಿ ಅಧಿಕಾರಿಗಳ ಭೇಟಿ
*********************************************
ಕಲಬುರಗಿ,ಫೆ.01.(ಕ.ವಾ)-ಇಂಡಿಯನ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಲಬುರಗಿ, ಬೀದರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಕುಂದುಕೊರತೆಗಳನ್ನು ಕಾರವಾರದ ನೇವಿ ಅಧಿಕಾರಿಗಳು ಇದೇ ಫೆಬ್ರವರಿ 3ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಲಬುರಗಿಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಕಚೇರಿಗೆ ಭೇಟಿ ಆಲಿಸಲಿದ್ದಾರೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ, ಬೀದರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ನೇವಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಕುಂದುಕೊರತೆಗಳೇನಾದರೂ ಇದ್ದಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ 08472-225003ಗೆ ಸಂಪರ್ಕಿಸಲು ಕೋರಲಾಗಿದೆ.

ಫೆಬ್ರವರಿ 2ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ಫೆ.01.(ಕ.ವಾ)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಉಪ ವಿತರಣಾ ಕೇಂದ್ರದಿಂದ ಹೊರಹೋಗುವ 110ಕೆ.ವಿ. ಚೌಡಾಪುರ ಮತ್ತು 110ಕೆ.ವಿ. ಮಡಿಯಾಳ ಪ್ರಸರಣ ಮಾರ್ಗದಲ್ಲಿ ಸುಧಾರಣಾ ಕಾರ್ಯಕೈಗೊಂಡಿರುವ ಪ್ರಯುಕ್ತ 2019ರ ಫೆಬ್ರವರಿ 2 ರಂದು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಯಾಳ ವಿತರಣಾ ಕೇಂದ್ರ-33/11ಕೆ.ವಿ. ನಿಂಬರ್ಗಾ (ಮಾಡಿಯಾಳ, ದೇವಂತಗಿ, ಮಾದನ ಹಿಪ್ಪರಗಾ) ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಚೌಡಾಪುರ ವಿತರಣಾ ಕೇಂದ್ರ-110/33/11ಕೆ.ವಿ. ಗಾಣಗಾಪುರ ಟೆಂಪಲ್, ಚೌಡಾಪುರ, ಬೆಟಗೇರಾ, ಚಿಣಮಗೇರಾ, ಇಂಗಳಗಿ, ಅವರಾದ, ಹಸರಗುಂಡಗಿ. 33/1ಕೆ.ವಿ. ಗುಡೂರ, ಗೌಡಗಾಂವ, ಕೊಗನೂರ, ನೀಲೂರ, ಸ್ಪೇಷನ್ ಗಾಣಗಾಪುರ ಹಾಗೂ 33/1ಕೆ.ವಿ. ಅಂಕಲಗಿ, ಭಾಸಗಿ, ಸೊನ್ನ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪುಸ್ತಕಗಳು ಆಯ್ಕೆಗಾಗಿ ಸಲ್ಲಿಸಲು ಅವಧಿ ವಿಸ್ತರಣೆ
*******************************************
ಕಲಬುರಗಿ,ಫೆ.01.(ಕ.ವಾ.)-ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2018ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ/ ಆಂಗ್ಲ/ ಇತರೆ ಭಾರತೀಯ ಭಾಷೆಯ ಗ್ರಂಥಗಳ ರಾಜ್ಯಮಟ್ಟದ ಪುಸ್ತಕ ಸಮಿತಿಯಿಂದ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಾಶನ ಸಂಸ್ಥೆಗಳಿಂದ ಪುಸ್ತಕಗಳನ್ನು ಸಲ್ಲಿಸುವ ಅವಧಿಯನ್ನು 2019ರ ಫೆಬ್ರವರಿ 12ರ ಸಂಜೆ 5.30 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.
ಉಳಿದಂತೆ ನಿಗದಿತ ಅರ್ಜಿ ನಮೂನೆ ಹಾಗೂ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಅಂತರ್ಜಾಲ ತಿತಿತಿ.ಞಚಿಡಿಟಿಚಿಣಚಿಞಚಿಠಿubಟiಛಿಟibಡಿಚಿಡಿಥಿ.gov.iಟಿ ಹಾಗೂ ಕÀಲಬುರಗಿ ವಿಕಾಸ ಭವನದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 26ರಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಿದೆ.

ಮಾನಸಿಕ ರೋಗಿಗಳ ತಪಾಸಣಾ ಶಿಬಿರ
***********************************
ಕಲಬುರಗಿ,ಫೆ.01.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ 2019ರ ಫೆಬ್ರವರಿ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ತಾಲೂಕುಗಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ದಿನಾಂಕಗಳಂದು ನಡೆಸಲಾಗುವುದು ಎಂದು ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದ ದಿನಾಂಕ, ಸ್ಥಳ ಮತ್ತು ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಫೆಬ್ರವರಿ 5 ರಂದು:ಆಳಂದ ತಾಲೂಕು ಆಸ್ಪತ್ರೆ-ಜಿಮ್ಸ್ ಮನೋವೈದ್ಯ ಡಾ|| ಚಂದ್ರಶೇಖರ ಹುಡೇದ ಹಾಗೂ ತಾರಫೈಲ್ ನಗರ ಆರೋಗ್ಯ ಕೇಂದ್ರ್ರ-ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ. ಮುನಾವರ ಹುಸೇನ್. ಫೆಬ್ರವರಿ 8 ರಂದು: ಅಫಜಲಪುರ ತಾಲೂಕು ಆಸ್ಪತ್ರೆ-ಡಿ.ಎಂ.ಹೆಚ್.ಪಿ. ತಂಡ.
ಫೆಬ್ರವರಿ 12 ರಂದು: ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ|| ವಿಜಯೇಂದ್ರ ಹಾಗೂ ಮುಕ್ತಂಪುರ ನಗರ ಆರೋಗ್ಯ ಕೇಂದ್ರ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ. ಅಲೋಕ ಘನಾತೆ. ಫೆಬ್ರವರಿ 13 ರಂದು: ದೇವಲಗಾಣಗಾಪುರ ಸಮುದಾಯ ಆರೋಗ್ಯ ಕೇಂದ್ರ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ. ರಾಹುಲ ಮಂದಕನಳ್ಳಿ. ಫೆಬ್ರವರಿ 15 ರಂದು: ಜೇವರ್ಗಿ ತಾಲೂಕು ಆಸ್ಪತ್ರೆ-ಕಲಬುರಗಿ ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ. ಅಮೋಲ ಪತಂಗೆ. ಫೆಬ್ರವರಿ 19 ರಂದು: ಚಿತ್ತಾಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಮ್ಸ್‍ನ ಮನೋವಿಭಾಗದ ವಿಭಾಗದ ಮುಖ್ಯಸ್ಥ ಡಾ. ಪ್ರಭುಕಿರಣ. ಫೆಬ್ರವರಿ 20 ರಂದು: ಹೀರೇಸಾವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರ್ರ-ಡಿ.ಎಂ.ಹೆಚ್.ಪಿ. ತಂಡ.
ಫೆಬ್ರವರಿ 22 ರಂದು: ಹೀರಾಪುರ ನಗರ ಆರೋಗ್ಯ ಕೇಂದ್ರ್ರ-ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ. ಮುನಾವರ ಹುಸೇನ್. ಫೆಬ್ರವರಿ 26 ರಂದು: ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ. ಅಜಯ ಢಗೆ. ಫೆಬ್ರವರಿ 27 ರಂದು: ಆಳಂದ ತಾಲೂಕಿನ ವಿ.ಕೆ. ಸಲಗರ ಪ್ರಾಥಮಿಕ ಆರೋಗ್ಯ ಕೇಂದ್ರ್ರ-ಡಿ.ಎಂ.ಹೆಚ್.ಪಿ. ತಂಡ.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಣೆಯಾದ ಬಾಲಕನ ಪತ್ತೆಗೆ ಮನವಿ
********************************
ಕಲಬುರಗಿ,ಫೆ.01.(ಕ.ವಾ)-ಕಲಬುರಗಿ ಆಳಂದ ರಸ್ತೆಯ (ಸಂತೋಷ ಕಾಲೋನಿ) ಜೆ.ಆರ್.ನಗರದ ಪಿ.ಯು.ಸಿ. ಪ್ರಥಮ ವರ್ಷದ ವಿಜ್ಞಾನ ವಿಷಯದಲ್ಲಿ ಓದುತ್ತಿರುವ 16 ವರ್ಷದ ಸಿದ್ರಾಮ ಹಣಮಂತರಾಯ ಗೌಡಪ್ಪಗೋಳ ಇತನು 2018ರ ಜುಲೈ 4 ರಂದು ಬೆಳಿಗ್ಗೆ 11.30 ಗಂಟೆಗೆ ಸ್ಟಡಿ ಮಟೇರಿಯಲ್ ಝೆರಾಕ್ಸ್ ಮಾಡಲು ಮನೆಯಿಂದ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.
ಕಾಣೆಯಾದ ಬಾಲಕ ಐದು ಅಡಿ ಆರು ಇಂಚು ಎತ್ತರ, ಗೋಧಿ ಮೈಬಣ್ಣ, ಸದೃಢ ಮೈಕಟ್ಟು, ತಲೆಯ ಮೇಲೆ ಕಪ್ಪು ಕೂದಲು, ಚಿಗುರು ಮೀಸೆ ಹೊಂದಿದ್ದು, ಇತನು ಮೈಮೇಲೆ ಉದ್ದ ತೋಳಿನ ಕೆಂಪು ಬಣ್ಣದ ಟಿ-ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಾಟಾ ಕಂಪನಿಯ ಚಾಕಲೇಟ್ ಬಣ್ಣದ ಚಪ್ಪಲ್ ಧರಿಸಿರುತ್ತಾನೆ. ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈತನು ಕಾಣೆಯಾದ ಕುರಿತು ಸಂಬಂಧಿಕರಲ್ಲಿ ಹಾಗೂ ಮಿತ್ರರನ್ನು ಸಂಪರ್ಕಿಸಿ ಹುಡುಕಿದರೂ ಸಹ ಸಿಕ್ಕಿರುವುದಿಲ್ಲ. ಕಾಣೆಯಾದ ಬಾಲಕನ ಶೋಧನಾ ಕಾರ್ಯ ನಡೆದಿದೆ.
ಈ ಬಾಲಕ ಕಾಣೆಯಾದ ಈ ಕುರಿತು ಕಲಬುರಗಿ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 122/18 ಕಲಂ 363 ಐಪಿಸಿ ರನ್ವಯ ದಿನಾಂಕ: 06-07-2018 ರಂದು ಪ್ರಕರಣ ದಾಖಲಿಸಲಾಗಿದೆ. ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಕಲಬುರಗಿ ಎಸ್.ಪಿ. ಆಫೀಸ್ ದೂರವಾಣಿ ಸಂಖ್ಯೆ 08472-263602, ರಾಘವೇಂದ್ರ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08472-263619 ಮತ್ತು ಪಿಎಸ್‍ಐ ಅವರ ಮೊಬೈಲ್ ಸಂಖ್ಯೆ 9480830548 ಹಾಗೂ ಕಲಬುರಗಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08472-100, 263608ಗಳಿಗೆ ತಿಳಿಸುವಂತೆ ಕೋರಲಾಗಿದೆ.

***********************************************
ಕಲಬುರಗಿ,ಫೆ.01.(ಕ.ವಾ.)-ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದಡಿ ಬರುವ 11ಕೆ.ವಿ. ಗಣೇಶ ನಗರ ಫೀಡರ್‍ನಲ್ಲಿ ಶನಿವಾರ ಫೆಬ್ರವರಿ 2 ರಂದು ಐ.ಪಿ. ನಿರ್ವಹಣಾ ಕೆಲಸ ಕೈಗೊಂಡಿರುವ ಪ್ರಯುಕ್ತ ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕೋರಿದ್ದಾರೆ.
11ಕೆ.ವಿ. ಗಣೇಶ ನಗರ ಫೀಡರ್: ಎಂ.ಬಿ. ನಗರ, ಬಾಕರ ಫಂಶನ್ ಹಾಲ್, ಆದರ್ಶ ನಗರ, ಬಂದೇನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನ್ಸೂಬದಾರ್ ಲೇಔಟ್, ಆದರ್ಶ ನಗರ, ನ್ಯೂ ಜೆ.ಡಿ.ಎ., ಮೇಹತಾ ಲೇಔಟ್, ವೀರೇಂದ್ರ ಪಾಟೀಲ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಹೆಚ್.ಕೆ.ಆರ್.ಡಿ.ಬಿ.ಕಾಮಗಾರಿಗಳು:
**********************************
ಹೆಚ್ಚುವರಿ ಹಾಗೂ ವಿಸ್ತರಣೆ ಕಾಮಗಾರಿಗೆ ಅನುಮೋದನೆ ಕಡ್ಡಾಯ
*********************************************************
ಕಲಬುರಗಿ,ಫೆ.1(ಕ.ವಾ)-ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳ ಸಂದರ್ಭದಲ್ಲಿ ಅವಶ್ಯಕತೆವಿದ್ದೆಡೆ ಹೆಚ್ಚುವರಿ ಅಥವಾ ವಿಸ್ತರಣೆ ಕಾಮಗಾರಿ ಕೈಗೊಳ್ಳಬೇಕಾದಲ್ಲಿ ಮಂಡಳಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಮಂಡಳೀಯ ಕಾರ್ಯದರ್ಶಿ ಸುಬೋಧ ಯಾದವ ಅನುಷ್ಠಾನ ಏಜೆನ್ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಹೆಚ್.ಕೆ.ಆರ್.ಡಿ.ಬಿ. ಕಚೇರಿಯ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಹಾಗೂ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರ ಸಭೆ ನಡೆಸಿದ ಅವರು, ಕಾಮಗಾರಿ ಸಂದರ್ಭದಲ್ಲಿ ಸ್ಥಳೀಯಕ್ಕನುಗುಣವಾಗಿ ಇನ್ನೀತರ ವಿಸ್ತರಣೆ ಅಥವಾ ಪೂರಕ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯವಾದಲ್ಲಿ ಆಗ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದು ಮಂಡಳಿಗೆ ಕಾರ್ಯಸೂಚಿಯನ್ನು ಅನುಮೋದನೆಗೆ ಸಲ್ಲಿಸಬೇಕು. ಮಂಡಳಿ ಅನುಮೋದನೆ ಪಡೆಯದೆ ಕಾಮಗಾರಿ ಮುಗಿಸಿ ಬಿಲ್ಲು ಸಲ್ಲಿಸಿದಲ್ಲಿ ಹಣ ಪಾವತಿ ಮಾಡುವುದಿಲ್ಲ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಾರ್ಯದರ್ಶಿಗಳು ಸ್ಪಷ್ಠವಾಗಿ ಹೇಳಿದರು.
ಮಂಡಳಿ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿ ಪೂರ್ಣಗೊಂಡ ನಂತರ ಅನುಷ್ಠಾನ ಏಜೆನ್ಸಿಗಳು ವೆಬ್‍ಸೈಟ್ ಮೂಲಕವೆ ಗುತ್ತಿಗೆದಾರರಿಗೆ ಹಣ ಪಾವತಿಸಲು ಬಿಲ್ಲು ಸಲ್ಲಿಸುತ್ತಾರೆ. ಅದರಂತೆ ತ್ವರಿತವಾಗಿ ಅನುದಾನ ಪಾವತಿಸಲು ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ವಿಳಂಬಕ್ಕೆ ಯಾವುದೇ ಅವಕಾಶವಿಲ್ಲ. ಕಾಮಗಾರಿಯ ಹಂಚಿಕೆ ಮೊತ್ತದ ಪೈಕಿ ಶೇ.80ರಷ್ಟು ಮೊತ್ತ ಹಂತ ಹಂತವಾಗಿ ನೀಡಲಾಗುತ್ತೆ, ಉಳಿದ ಶೇ.20ರಷ್ಟು ಹಣ ಭೌತಿಕವಾಗಿ ಸಂಬಂಧಿಸಿದ ಇಲಾಖೆಯಿಂದ ಪ್ರಮಾಣ ಪತ್ರ ಹಾಗೂ ಅಂತಿಮ ಬಿಲ್ಲು ಸಲ್ಲಿಸಿದ ಮೇಲೆ ಪಾವತಿಸಲಾಗುತ್ತದೆ ಎಂದ ಕಾರ್ಯದರ್ಶಿಗಳು ಗುಣಾತ್ಮಕ ಕಾಮಗಾರಿ ಸಕಾಲದಲ್ಲಿ ಪಾವತಿ ನಮ್ಮ ಗುರಿಯಾಗಿದೆ ಎಂದರು.
ಮಂಡಳಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ತಡೆಯಾಜ್ಞೆ ನೀಡಿರುವ ಪ್ರಕರಣಗಳಿದ್ದಲಿ ಅಂತಹ ಯೋಜನೆಗಳನ್ನು ಮಂಡಳಿಯು ಹಿಂದಕ್ಕೆ ಪಡೆಯುತ್ತದೆ. ಯಾವುದೆ ಕಾರಣಕ್ಕು ವಿಳಂಬ ಸಹಿಸಲಾಗದು ಎಂದರು.
ಮೂರನೆ ವ್ಯಕ್ತಿ ತಪಾಸಣೆಗೆ ವಿಳಂಬ ಮಾಡಿದಲ್ಲಿ ದಂಡ:- ಕಾಮಗಾರಿ ಮುಗಿದ ಕೂಡಲೆ ಅನುಷ್ಠಾನ ಏಜೆನ್ಸಿಗಳು ಇಮೇಲ್ ಮೂಲಕ ಕಾಮಗಾರಿ ತಪಾಸಣೆಗೆ ಮೂರನೇ ವ್ಯಕ್ತಿಗೆ ಮಾಹಿತಿ ನೀಡಬೇಕು. ಮೂರನೇ ವ್ಯಕ್ತಿ 10 ದಿನದೊಳಗೆ ತಪಾಸಣೆ ನಡೆಸಿ ವರದಿ ನೀಡಬೇಕೆಂದು ಈಗಾಗಲೆ ನಿರ್ದೇಶನ ನೀಡಲಾಗಿದ್ದು, ಇದನ್ನು ತಪ್ಪಿದಲ್ಲಿ ಅಂತಹ 3ನೇ ವ್ಯಕ್ತಿ ಸಂಸ್ಥೆಗಳಿಗೆ ಹೆಚ್ಚಿನ ಪ್ರಮಾಣದ ದಂಡ ಹಾಕಲು ಸಹ ಸೂಚನೆ ನೀಡಲಾಗಿದೆ ಎಂದರು.
ಮರಳು ಸಮಸ್ಯೆಗೆ ಪ್ರತ್ಯೇಕ ಸಭೆ:- ಮಂಡಳೀಯ ಕಾಮಗಾರಿಗೆ ಜಿಲ್ಲೆಯ ಎಲ್ಲೆಡೆ ಮರಳು ಸಮಸ್ಯೆ ಕಂಡುಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗುತ್ತಿಗೆದಾರರಿಗೆ ಸುಬೋಧ ಯಾದವ ಅಭಯ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಬಹುತೇಕ ಗುತ್ತಿಗೆದಾರರು ಮರಳು ಸಮಸ್ಯೆ, ಕೋರ್ಟ್ ತಡೆಯಾಜ್ಞೆಯಿಂದ ಕಾಮಗಾರಿ ವಿಳಂಬ ವಾಗಿದಕ್ಕೆ ತಡೆಯಾಜ್ಞೆ ತೆರವುಗೊಳಿಸಲು, ಸಕಲಾದಲ್ಲಿ ಹಣ ಪಾವತಿ ಆಗುವ ಬಗ್ಗೆ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ರಾಜಾ ಪಿ. ಮಾತನಾಡಿ ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಅನುಷ್ಠಾನ ಏಜೆನ್ಸಿಗಳಿಂದ ಆಯಾ ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದರಿ ಕಾಮಗಾರಿಯನ್ನು ತಮ್ಮ ಸ್ವಾಧೀನಕ್ಕೆ ಪಡೆಯಬೇಕೆಂದು ನಿರ್ದೇಶನ ನೀಡಲಾಗಿದೆ. ಕೆಲವು ಸಂದರ್ಭದಲ್ಲಿ ಪಿ.ಡಿ.ಓ.ಗಳು ಇದಕ್ಕೆ ಸ್ಪಂದಿಸದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನೀಯರಿಂಗ್ ಅಧಿಕಾರಿಗಳು ಸ್ವಾಧೀನಕ್ಕೆ ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಮಂಡಳಿಯ ಉಪ ಕಾರ್ಯದರ್ಶಿ ಡಾ.ಬಿ.ಸುಶೀಲಾ, ಜಂಟಿ ಕಾರ್ಯದರ್ಶಿ ಬಸವರಾಜ ಸೇರಿದಂತೆ ಜಿಲ್ಲೆಯ ವಿವಿಧ ಅನುಷ್ಠಾನ ಏಜೆನ್ಸಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದ್ದರು.

ಫೆಬ್ರವರಿ 3 ರಂದು ಶಿಕ್ಷಕರ ಅರ್ಹತಾ(ಟಿ.ಇ.ಟಿ.) ಪರೀಕ್ಷೆ
************************************************
ಕಲಬುರಗಿ,ಫೆ.1(ಕ.ವಾ)-ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕವು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಹತೆಯ ಮಾನದಂಡವಾಗಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2018(ಟಿ.ಇ.ಟಿ) ಇದೇ ಫೆಬ್ರವರಿ 3 ರಂದು ಕಲಬುರಗಿ ನಗರದ 48 ಕೇವ್ಮದ್ರಗಳಲ್ಲಿ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗೆ ಅಸ್ಪದ ನೀಡದೆ ಸುಸೂತ್ರವಾಗಿ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಚಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರು ಹಾಗೂ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯ 14501 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಂದುÀ ಬೆಳಿಗ್ಗೆ 9 ರಿಂದ 12 ಗಂಟೆ ವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 1.30 ರಿಂದ 4.30 ಗಂಟೆ ವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ ಎಂದರು.
ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ಜಿಲ್ಲಾಡಳಿತದಿಂದ ತಲಾ 14 ಮಾರ್ಗಾಧಿಕಾರಿಗಳು ಮತ್ತು ಪ್ರತಿ ಕೇಂದ್ರಕ್ಕೆ ಒಬ್ಬರಂತೆ 4 ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷಾ ದಿನದಂದು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವುದನ್ನು, ಪತ್ರಿಕೆಯ ಬಂಡಲ್ ತೆರೆಯುವಾಗ ಮತ್ತು ಪರೀಕ್ಷೆಯ ನಂತರ ಪತ್ರಿಕೆಗಳ ಬಂಡಲ್ ಪ್ಯಾಕ್ ಮಾಡುವಾಗ ಕಡ್ಡಾಯವಾಗಿ ವಿಡೀಯೋಗ್ರಾಫಿ ಮಾಡುವುದು.
ಪರೀಕ್ಷೆ ಮುನ್ನ ದಿನ ಕುಡಿಯುವ ನೀರು, ಬೆಳಕು, ವಿದ್ಯುತ್‍ದಂತಹ ಕನಿಷ್ಠ ಮೂಲಸೌಲಭ್ಯಗಳಿರುವ ಬಗ್ಗೆ ವೀಕ್ಷಕರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳತಕ್ಕದು. ಕೊಠಡಿ ಮೇಲ್ವಿಚಾರಕರನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕು. ಇದಲ್ಲದೆ ಪರೀಕ್ಷಾ ದಿನದಂದು ಸಿ.ಆರ್.ಪಿ.ಸಿ. ಕಲಂ 144 ಸಹ ಜಾರಿಗೊಳಿಸಲಾಗುವುದು ಎಂದರು.
ಪರೀಕ್ಷೆಗೆ ಬರುವ ಅಭ್ಯರ್ಥಿಗಳನ್ನು ಪುರುಷ ಹಾಗೂ ಮಹಿಳಾ ಪೊಲೀಸ್ ಪೇದೆಯಿಂದ ಪ್ರತ್ಯೇಕವಾಗಿ ಸರಿಯಾಗಿ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಪ್ರವೇಶಾತಿ ಚೀಟಿ ಕಡ್ಡಾಯ: ಟಿ.ಇ.ಟಿ ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪ್ರವೇಶ ಪತ್ರ ತರುವುದು ಕಡ್ಡಾಯ. ಪ್ರವೇಶ ಪತ್ರದಲಿ ತಾಂತ್ರಿಕ ತೊಂದರೆಯಿಂದ ಅಭ್ಯರ್ಥಿಯ ಭಾವಚಿತ್ರ ಸರಿಯಾಗಿ ಮುದ್ರಣವಾಗಿರದಿದ್ದಲ್ಲಿ ಯಾವುದಾದರು ಇತರೆ ಮೂಲ ಗುರುತಿನ ಚೀಟಿ ತರುವುದು ಅವಶ್ಯಕ.
ಮೊಬೈಲ್ ಸಂಪೂರ್ಣ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯಪುಸ್ತಕ ಸೇರಿದಂತೆ ಇನ್ನಿತರ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅವ್ಯವಹಾರ ಕಂಡುಬಂದಲ್ಲಿ ಪರೀಕ್ಷಾ ಕೇಂದ್ರ ಕಪ್ಪು ಪಟ್ಟಿಗೆ:- ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಲ್ಲಿ ಅಂತಹ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಲ್ಲದೆ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ರಆಚಪ್ಪ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಸ್ಭೆರಿದಂತೆ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಮತ್ತಿತರರು ಹಾಜರಿದ್ದರು.

ಫೆ. 4ರಂದು ಮುಖ್ಯಮಂತ್ರಿಗಳಿಗೆ ಬರ ಅಧ್ಯಯನ ವರದಿ ಸಲ್ಲಿಕೆ
*****************************************************
ಕಲಬುರಗಿ,ಫೆ.01.(ಕ.ವಾ)-ಬರ ಅಧ್ಯಯನ ಸಚಿವ ಉಪ ಸಂಪುಟ ಸಮಿತಿಯು ಕಳೆದೆರಡು ದಿನಗಳಿಂದ ಕಲಬುರಗಿ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದು, ಈ ಸಂಬಂಧ ಸಮಿತಿಯು ಫೆಬ್ರವರಿ 4 ರಂದು ಬರ ಅಧ್ಯಯನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯದ ಪ್ರವಾಹ ಪೀಡಿತ, ಬರಪೀಡಿತ ಪ್ರದೇಶಗಳ ಅಧ್ಯಯನ, ಪರಿಹಾರ ಹಾಗೂ ನಿರ್ವಹಣೆಗಳ ಬಗ್ಗೆ ಕಲಬುರಗಿ ವಿಭಾಗಕ್ಕೆ ರಚಿಸಿರುವ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷ ಹಾಗೂ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದರು.
ಅವರು ಶುಕ್ರವಾರ ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮ ಪಂಚಾಯಿತಿಯ ಕುಡಚಿ ಗ್ರಾಮದಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿರುವ ಕುಡಚಿ ನಾಲಾ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಲಬುರಗಿ ವಿಭಾಗದ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸಂಪೂರ್ಣ ಬೆಳೆಹಾನಿಯಾಗಿದೆ ಎಂದರು.
ಮಳೆ ಆಧಾರಿತ ಪ್ರದೇಶವಾಗಿರುವ ಹೈ.ಕ. ಭಾಗದಲ್ಲಿ ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ. ಮಳೆಯ ಕೊರತೆಯಿಂದಾಗಿ ಶೇ. 75 ಪ್ರತಿಶತ ಬಿತ್ತನೆ ಆಗಿಲ್ಲ. ಇದರಿಂದಾಗಿ ರೈತರು ಸಂಕಷ್ಟದಲ್ಲಿರುವುದು ಅಧ್ಯಯನದಿಂದ ತಿಳಿದು ಬಂದಿದೆ ಎಂದರು.
ಬರಗಾಲದಲ್ಲಿ ಮಹಾತ್ಮಾ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ 150 ಮಾನವ ದಿನಗಳನ್ನು ಪೂರೈಸಿದವರಿಗೂ ಸಹ ಉದ್ಯೋಗ ಖಾತರಿ ಅಡಿ ಹೆಚ್ಚುವರಿ ಕೂಲಿ ಕೆಲಸ ನೀಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡಿದವರಿಗೆ ಕೂಲಿ ಹಣ ಪಾವತಿಯಾಗಿಲ್ಲ ಎಂಬ ದೂರುಗಳಿವೆ. ಕೇಂದ್ರ ಸರ್ಕಾರದಿಂದ ಸಿಗುವ ಅನುದಾನದ ಕೊರತೆಯಿಂದಾಗಿ ಕೂಲಿ ಹಣ ಪಾವತಿಸಲು ಸಾಧ್ಯವಾಗಿಲ್ಲ. ಆದರೆ ನಾವು ಮುಖ್ಯಮಂತ್ರಿಗಳೊಂದಿಗೆ ಕೂಲಿ ಹಣ ಪಾವತಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿದ್ದು, ರಾಜ್ಯ ಸರ್ಕಾರ ಪ್ರತ್ಯೇಕ ಖಾತೆಯೊಂದನ್ನು ಪ್ರಾರಂಭಿಸಿ ಕೂಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಲು ಚರ್ಚಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮಾರ್ಚ್‍ನಲ್ಲಿ ಕೊನೆಗೊಳ್ಳಲಿದ್ದು, ಈಗಾಗಲೇ ಉದ್ಯೋಗ ಖಾತರಿ ಯೋಜನೆಯಡಿ ಶೇ. 85ರಷ್ಟು ಗುರಿ ತಲುಪಲಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಉದ್ಯೋಗ ಆರಿಸಿ ರಾಜ್ಯದ ಜನರು ಗುಳೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರದಿಂದಲೇ ಕಾಮಗಾರಿಗಳನ್ನು ನೀಡಲಾಗುವುದು. ಈಗಾಗಲೇ ಕುಡಿಯುವ ನೀರಿನ ತೊಂದರೆಯನ್ನು ನಿಗಿಸಲು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಗಳಿಗೆ ತಲಾ 1 ಕೋಟಿ ರೂ.ಗಳಂತೆ ಅನುದಾನ ನೀಡಲಾಗಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಟಾಸ್ಕ್‍ಫೋರ್ಸ್ ಸಮಿತಿಯಿಂದ ಆದ್ಯತೆ ಮೇರೆಗೆ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಲ್ಲಿ ಅವಶ್ಯಕವಿದ್ದ ಕಡೆ ಮೇವು ಬ್ಯಾಂಕ್ ತೆರೆಯಲು ಸರ್ಕಾರ ಸಿದ್ಧವಿದೆ. ರೈತರು ಯಾವುದೇ ಕಾರಣಕ್ಕೂ ಬರಕ್ಕೆ ಎದೆಗುಂದದೇ ತಮ್ಮ ಜಾನುವಾರುಗಳನ್ನು ಮಾರಿಕೊಳ್ಳಬಾರದು ಎಂದು ರೈತರಲ್ಲಿ ಸಚಿವರು ಮನವಿ ಮಾಡಿದರು.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಈಗಾಗಲೇ 77 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕಳೆದ 15 ದಿನಗಳಿಂದ ಕಾಮಗಾರಿಗಳು ಹೆಚ್ಚಾಗಿ ಪ್ರಾರಂಭಿಸಿದ್ದು, ಸುಮಾರು 23 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳಿಗಾಗಿ ಕಳೆದ ವರ್ಷದ 853 ಕೋಟಿ ರೂ. ಸೇರಿದಂತೆ ಒಟ್ಟು ಈವರೆಗೆ 1800 ಕೋಟಿ ರೂ. ರಾಜ್ಯಕ್ಕೆ ನೀಡಬೇಕಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯಲು ದಿಟ್ಟ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ಜಿಲ್ಲೆಯ 958 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಪಡಿತರ ಚೀಟಿ ಹಾಗೂ ಅಕ್ರಮವಾಗಿ ವಸತಿ ನಿಲಯಗಳಲ್ಲಿ ವಾಸಿಸುವವರನ್ನು ಸಹ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಉದ್ಯೋಗ ಖಾತ್ರಿ ಕೂಲಿಕಾರರೊಂದಿಗೆ ಚರ್ಚಿಸಿದ ಸಚಿವದ್ವಯರು 350 ಮಾನವ ದಿನಗಳನ್ನು ಪೂರೈಸುವವರಿಗೂ ಸಹ ಹೆಚ್ಚಿನ ದಿನಗಳಿಗೆ ಕೂಲಿ ನೀಡಲು ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ ಹಾಗೂ ಕೂಲಿ ಹಣವನ್ನು ಸಹ ಆದಷ್ಟು ಬೇಗ ನಿಮ್ಮ ಬ್ಯಾಂಕ್ ಅಕೌಂಟ್‍ಗಳಿಗೆ ಜಮಾ ಮಾಡಿಸಲಾಗುವುದು. ಕಾರಣ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಬಿ. ಪಾಟೀಲ, ಶಾಸಕರಾದ ಡಾ. ಅಜಯಸಿಂಗ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರ ಸುಗೂರ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ನಂತರ ಸಮಿತಿಯು ಜೇವರ್ಗಿ ತಾಲೂಕಿನ ಔರಾದ, ಕಲಬುರಗಿ ತಾಲೂಕಿನ ಫಿರೋಜಾಬಾದ, ಸರಡಗಿ, ಹಾಗರಗುಂಡಗಿ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಅಭಾವದಿಂದ ಹಾನಿಗೊಳಗಾದ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿ ಕ್ಷೇತ್ರಗಳಿಗೆ ಭೇಟಿ ನೀಡಿತು.

ಪೂಜೆಗಿಂತ ಶ್ರೇಷ್ಠ ಕಾಯಕ ಎಂದವರು ಶರಣ ಮಡಿವಾಳರು
***************************************************
ಕಲಬುರಗಿ,ಫೆ.01.(ಕ.ವಾ)-ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ ಗುರುತಿಸಿಕೊಂಡ ಶರಣ ಮಡಿವಾಳರು ಬಸವಣ್ಣನವರು ಹೇಳಿದಂತೆ ಕಾಯಕ ನಿಷ್ಠೆ ಮೆರೆದ ಶ್ರೇಷ್ಠ ಶರಣರಾಗಿದ್ದಾರೆ. ಪೂಜೆಗಿಂತ ಶ್ರೇಷ್ಠ ಕಾಯಕ ಎಂಬುದನ್ನು ನಮ್ಮೆಲ್ಲರಿಗೂ ತೋರಿಸಿ ಕೊಟ್ಟಿದ್ದಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಮಲ್ಲಣ್ಣಾ ಎಸ್. ಮಡಿವಾಳ ಹೇಳಿದರು.
ಅವರು ಶುಕ್ರವಾರ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಾಯಕವೇ ಶ್ರೇಷ್ಠವಾದ ಪೂಜೆ ಎಂದವರು ಮಾಡಿವಾಳರು. ಕಾಯಕವೇ ಕೈಲಾಸ ಎಂದವರು ಬಸವಣ್ಣನವರು. ಹೀಗಾಗಿ ಬಸವಣ್ಣನವರು ಬಿಟ್ಟು ಮಾಡಿವಾಳ ಮಾಚಿದೇವರು ಇಲ್ಲ, ಮಾಚಿದೇವರು ಬಿಟ್ಟು ಬಸವಣ್ಣನವರು ಇಲ್ಲ. ಕಾಯಕವೇ ದೊಡ್ಡದು ಎಂದು ಅವರುಗಳು ಹೇಳಿದ್ದಾರೆ ಎಂದರು.
ಬಟ್ಟೆ ತೊಳೆಯುವುದು ಮಡಿವಂತಿಕೆ ಅಲ್ಲ ಅದು ಅರಸನಿಗಿಂತ ದೊಡ್ಡದ್ದು ಮತ್ತು ಅಷ್ಟೇ ಶ್ರೇಷ್ಠವಾದದ್ದು. ನನ್ನ ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡಿದ ಮಡಿವಾಳ ಮಾಚಿದೇವರು ಸಾಮಾನ್ಯ ಮನುಷ್ಯರಲ್ಲ. ಅವರೊಬ್ಬ ಶ್ರೇಷ್ಠ ಶರಣರು ಎಂದು ಬಸವಣ್ಣವರು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಿದ ಉಪನ್ಯಾಸಕರು ಮಡಿವಾಳ ಮಾಚಿದೇವರ ಕಾಯಕ ನಿಷ್ಠೆಯನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
12ನೇ ಶತಮಾನದಲ್ಲಿ ಮಾನವ ಕಲ್ಯಾಣಕ್ಕಾಗಿ ಹೋರಾಡಿದ ಒಬ್ಬ ಮಹಾನ ತತ್ವಜ್ಞಾನಿ ಅಂದರೆ ಮಡಿವಾಳ ಮಾಚಿದೇವರು. ಅವರ ತತ್ವಗಳು ಜನಸಾಮಾನ್ಯರು ಅಳವಡಿಸಿಕೊಂಡಿದ್ದೆ ಆದ್ದಲ್ಲಿ ಉತ್ತಮ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇಷ್ಟಲಿಂಗ ಪೊಜೆ ಎಷ್ಟು ಶ್ರೇಷ್ಠವೋ ಅಗಸರು ಅಷ್ಟೇ ಶ್ರೇಷ್ಠರು ಎಂದು ಚಿಗರಳ್ಳಿಯ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಪೂಜ್ಯ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು ತಮ್ಮ ಹಿತವಚನದಲ್ಲಿ ನುಡಿದರು.
ಇಂದಿನ ದಿನಮಾನಗಳಲ್ಲಿ ಮಡಿವಾಳ ಸಮಾಜ ಇಷ್ಟೊಂದು ಹಿಂದುಳಿಯಲು ಕಾರಣ ಜನರಲ್ಲಿ ಅರಿವು ಇಲ್ಲದೆ ಇರುವುದು. ಈ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಮಡಿವಾಳ ಮಾಚಿದೇವರು ನೀಡಿದ ಕೊಡುಗೆಗಳನ್ನು ಅವರ ಕಾವ್ಯಗಳು ಅನುಸರಿಸಿ ಅವರ ಹಾದಿಯಲ್ಲಿ ನಡೆಯಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬಿದ್ದಾಪೂರ ಕಾಲೋನಿಯ ಅಕ್ಕಮಹಾದೇವಿ ಆಶ್ರಮದ ಪೂಜ್ಯೆ ಪ್ರಭುಶ್ರೀತಾಯಿ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವರ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಎ.ಮಡಿವಾಳ, ಮಲ್ಲಣ್ಣಾ.ಎಸ್ ಮಡಿವಾಳ ಸೇರಿದಂತೆ ಸಮಾಜದ ಅನೇಕ ಮುಖಂಡರು, ಸಮುದಾಯದ ಬಾಂಧವರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸ್ವಾಗತಿಸಿದರು. ಕಪಿಲದೇವ ಚಕ್ರವರ್ತಿ ನಿರೂಪಿಸಿ ವಂದಿಸಿದರು.
ಇದಕ್ಕೂ ಮುನ್ನ ಮಡಿವಾಳ ಮಾಚಿದೇವರ ಭಾವಚಿತ್ರದ ಭವ್ಯ ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಹುಮನಾಬಾದ ರಿಂಗರೋಡಿನ ಮಡಿವಾಳ ಮಾಚಿದೇವರ ವೃತ್ತದಿಂದ ಆರಂಭಗೊಂಡು ನೆಹರು ಗಂಜ, ಕಿರಾಣಾ ಬಜಾರ್, ಸೂಪರ್ ಮಾರ್ಕೇಟ್, ಜಗತ್ ವೃತ್ತ ಮಾರ್ಗವಾಗಿ ರಂಗಮಂದಿರದವರೆಗೂ ಸಾಗಿತು.

ಹೀಗಾಗಿ ಲೇಖನಗಳು News and Pgotos Date: 01-02-2019
ಎಲ್ಲಾ ಲೇಖನಗಳು ಆಗಿದೆ News and Pgotos Date: 01-02-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Pgotos Date: 01-02-2019 ಲಿಂಕ್ ವಿಳಾಸ https://dekalungi.blogspot.com/2019/02/news-and-pgotos-date-01-02-2019.html

0 Response to "News and Pgotos Date: 01-02-2019"
ಕಾಮೆಂಟ್ ಪೋಸ್ಟ್ ಮಾಡಿ