ಶೀರ್ಷಿಕೆ : News and Photos Date: 11--01--2019
ಲಿಂಕ್ : News and Photos Date: 11--01--2019
News and Photos Date: 11--01--2019
ಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಕ್ರಮ
***************************************************
ಕಲಬುರಗಿ,ಜ.11.(ಕ.ವಾ)-ಕಲಬುರಗಿ ಜಿಲ್ಲೆಯ ತೊಗರಿ ಬೇಳೆಯು ಏಷ್ಯಾ ಖಂಡದಲ್ಲಿ ಪ್ರಸಿದ್ಧಿ ಹೊಂದಿದೆ. ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಕಲಬುರಗಿ ಉತ್ತರ ಶಾಸಕಿ ಕನೀಜ ಫಾತೀಮಾ ತಿಳಿಸಿದರು.
ಅವರು ಶುಕ್ರವಾರ ಕಲಬುರಗಿಯ ಹೆಚ್.ಕೆ.ಸಿ.ಸಿ.ಐ. ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಲಬುರಗಿ ಲೇಡೀಸ್ ಅಸೋಸಿಯೇಶನ್ ಮ್ಯಾನ್ಯುಫ್ಯಾಕ್ಚರರ್ಸ್ ಪಾರ್ಕ್ (ಕೆ-ಲ್ಯಾಂಪ್), ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಹಾಗೂ ಗುಲಬರ್ಗಾ ಕೈಗಾರಿಕಾ ಪ್ರದೇಶ ಉತ್ಪಾದಕರ ಸಂಘ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೈಗಾರಿಕಾ ನೀತಿ 2014-19 ಹಾಗೂ ಉದ್ದೇಶಿತ ಹೊಸ ಕೈಗಾರಿಕಾ ನೀತಿ ಮತ್ತು ಸುಗಮ ವಾಣಿಜ್ಯ-ವ್ಯವಹಾರ ನಡೆಸುವಿಕೆಗಾಗಿ ಸಲಹೆಗಳ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕಲಬುರಗಿಯಲ್ಲಿ ಮಹಿಳೆಯರಿಗಾಗಿ ಮಹಿಳಾ ಔದ್ಯೋಗಿಕ ಪಾರ್ಕ್ ಸ್ಥಾಪನೆಯಾಗಿದ್ದು, ಇದರಿಂದ ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ತೊಡಗುವಂತಾಗಬೇಕು ಎಂದರು.
ಕಾಸಿಯಾ ಉಪಾಧ್ಯಕ್ಷ ಆರ್. ರಾಜು ಮಾತನಾಡಿ, ಕೈಗಾರಿಕ ನೀತಿ ಜಾರಿಗೊಳಿಸಿದ ಪ್ರಥಮ ರಾಜ್ಯ ಕರ್ನಾಟಕವಾಗಿದ್ದು, ಕೈಗಾರಿಕಾ ನೀತಿಯಡಿ ಜವಳಿ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ, ಮೂಲಭೂತ ಸೌಕರ್ಯ, ಖನಿಜ ನೀತಿ, ಭೌಗೋಳಿಕ ನೀತಿಗಳಂತಹ ಹತ್ತು ಹಲವು ನೀತಿಗಳನ್ನು ಜಾರಿಗೆ ತಂದಿದೆ. ಕೈಗಾರಿಕರಣದಲ್ಲಿ ಹಾಗೂ ಔದ್ಯೋಗಿಕವಾಗಿ ರಾಜ್ಯವೂ ಮೊದಲನೇ ಸ್ಥಾನಕ್ಕೆ ಬರಲು ಸರ್ಕಾರ ಹೊರಡಿಸಿರುವ ನೀತಿಗಳ ಉಪಯೋಗ ಪಡೆಯಬೇಕು. ಉದ್ದಿಮೆದಾರರು ಐ.ಎಸ್.ಓ. ಪಡೆಯುವುದರ ಮೂಲಕ ಧನಸಹಾಯ ಪಡೆಯಬಹುದು. ಸರ್ಕಾರದ ನೀತಿಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಉದ್ದಿಮೆ ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಎಲ್ಲ ಜಿಲ್ಲೆಗಳ ಕಾರ್ಯಾಗಾರ ಹಮ್ಮಿಕೊಂಡು ಸರ್ಕಾರದ ನೀತಿಗಳ ಬಗ್ಗೆ ಉದ್ದಿಮೆದಾರರಿಗೆ ತಿಳಿ ಹೇಳಲಾಗುತ್ತಿದೆ. ನೀತಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಸಲಹೆ ಪಡೆಯಲಾಗುತ್ತಿದೆ. ಸಂಕಷ್ಟದಲ್ಲಿರುವ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಅವಶ್ಯತೆಯಿದೆ. ಈ ಕುರಿತು ಸಲಹೆ ನೀಡಬೇಕು. ಮುಂದಿನ 5 ವರ್ಷಕ್ಕೆ ಯಾವ ಮಾದರಿಯ ನೀತಿ ಬೇಕಾಗುತ್ತದೆ ಎಂಬ ಕುರಿತು ಪ್ರತಿಕ್ರಿಯೆ ನೀಡಬೇಕು. ಹೈ.ಕ. ಭಾಗದಲ್ಲಿ ಗುಡಿ ಕೈಗಾರಿಕೆ ಬೆಳವಣಿಗೆಯಾಗಬೇಕಾಗಿದೆ. ಈ ಭಾಗದಲ್ಲಿ ಸಿಗುವ ಕಚ್ಚಾ ವಸ್ತುಗಳಿಗನುಗುಣವಾಗಿ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂದರು.
ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ಹೈ.ಕ. ಭಾಗಕ್ಕೆ ವರದಾನವಾಗಿ ದೊರೆತ್ತಿರುವ 371(ಜೆ) ಕಲಂ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಔದ್ಯೋಗೀಕರಣ ಹೆಚ್ಚಿಸಲು ಮುಂದಿನ ದಿನಗಳಲ್ಲಿ 371(ಜೆ) ಕಲಂ ಯಾವ ರೀತಿ ಸಹಾಯವಾಗಲಿದೆ ಎಂಬ ಬಗ್ಗೆ ಚರ್ಚೆಗಳಾಗಬೇಕು. ಕಲಬುರಗಿ ಜಿಲ್ಲೆಯಲ್ಲಿ ಖನೀಜ ನಿಕ್ಷೇಪಗಳು ಹೇರಳವಾಗಿವೆ. ಇಲ್ಲಿ ಕೇವಲ ಸಿಮೆಂಟ್ ಕಂಪನಿಗಳು ಮಾತ್ರ ಸ್ಥಾಪನೆಯಾಗಿವೆ. ಈ ಭಾಗದಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳು ಬರಬೇಕಾಗಿದೆ. ಕಲಬುರಗಿ ಮತ್ತು ತುಮಕೂರಿನಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು. ಈಗಾಗಲೇ ತುಮಕೂರಿನಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಕಾಮಗಾರಿಯೂ ಶೇ. 80ರಷ್ಟು ಪೂರ್ಣಗೊಂಡಿದೆ. ಕಲಬುರಗಿಯಲ್ಲಿಯೂ ಸಹ ಇಂಡಸ್ಟ್ರೀಯಲ್ ಕಾರಿಡಾರ ಸ್ಥಾಪನೆಗೆ ಮುತುವರ್ಜಿವಹಿಸಬೇಕಾಗಿದೆ.
ಈಗಾಗಲೇ 2000 ಎಕರೆ ಭೂಮಿಯನ್ನು ಇಂಡಸ್ಟ್ರೀಯಲ್ ಕಾರಿಡಾರ್‍ಗಾಗಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಇಂಡಸ್ಟ್ರೀಯಲ್ ಕಾರಿಡಾರ್‍ಗಾಗಿ ಬಂಡವಾಳ ಶಾಹಿಗಳನ್ನು ಗುರುತಿಸುವ ಜವಾಬ್ದಾರಿ ಕೈಗಾರಿಕಾ ಸಂಘದ ಮೇಲಿದೆ ಎಂದರು.
ಕಲಬುರಗಿಯ ಪ್ರಮುಖ ಉದ್ದಿಮೆಯಾದ ದಾಲ್ ಉದ್ದಿಮೆ ಸೊರಗುತ್ತಿದೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜಿಲ್ಲಾಧಿಕಾರಿಗಳು ದಾಲ್ ಉದ್ದಿಮೆ ಪುನಶ್ಷೇತನಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ಜಾರಿಗೊಳಿಸಬೇಕು. ಜೇವರ್ಗಿಯಲ್ಲಿ ಫುಡ್ ಪಾರ್ಕ್ ಪ್ರಾರಂಭಿಸಲು ಭೂಮಿ ಭೂಸ್ವಾಧೀನ ಮಾಡಿಕೊಂಡು ನಿವೇಶನ ಹಂಚಿಕೆ ಸಹಿತ ಮಾಡಲಾಗಿದೆ. ಫುಡ್‍ಪಾರ್ಕ್ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವಂತೆ ಮುತುವರ್ಜಿ ವಹಿಸಬೇಕು. ಮಹಿಳಾ ಉದ್ದಿಮೆದಾರರಿಗಾಗಿ ಪ್ರಾರಂಭಿಸಿರುವ ಮಹಿಳಾ ಉದ್ದಿಮೆದಾರರ ಪಾರ್ಕ್‍ನಲ್ಲಿರುವ ತೊಂದರೆಗಳನ್ನು ನಿವಾರಿಸಬೇಕು. 230 ಮಹಿಳಾ ಉದ್ದಿಮೆದಾರರು ಉದ್ದಿಮೆ ಪ್ರಾರಂಭಿಸಲು ಕ್ರಿಯಾ ಯೋಜನೆ ಹೊಂದಿದ್ದು, ಅವರನ್ನು ಪ್ರೋತ್ಸಾಹಿಸಬೇಕು. ಬೃಹತ್ ಕಾರ್ಖಾನೆಗಳು ತಮ್ಮ ಆದಾಯಕ್ಕನುಗುಣವಾಗಿ ಕಾರ್ಖಾನೆ ಅಕ್ಕಪಕ್ಕದ ಗ್ರಾಮಗಳ ಅಭಿವೃದ್ಧಿ ಮಾಡುತ್ತಿಲ್ಲ. ಇದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ (ಎಂಎಸ್‍ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಹಾಗೂ ಎಂಎಸ್‍ಎಫ್‍ಸಿ ಸದಸ್ಯ ಕಾರ್ಯದರ್ಶಿ ಹೆಚ್.ಎಂ. ಶ್ರೀನಿವಾಸ, ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಜಂಟಿ ನಿರ್ದೇಶಕಿ ಸುರೇಖಾ ಮನೋಲಿ, ಬೆಂಗಳೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಬಿ. ಪೂಜಾರಿ, ಕಲಬುರಗಿ ಕೆಎಸ್‍ಎಫ್‍ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ. ಗಣಪತಿ ರಾಠೋಡ ಹಾಗೂ ಕೆಎಸ್‍ಪಿಸಿಬಿ ಪರಿಸರ ಅಧಿಕಾರಿ ಸಿ.ಎನ್. ಮಂಜಪ್ಪ, ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಚಿದಂಬರರಾವ ಪಾಟೀಲ, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಜನವರಿ 12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಜ.11.(ಕ.ವಾ)-ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದಡಿ ಬರುವ 11ಕೆ.ವಿ. ಜಯನಗರ ಫೀಡರ್ ಆಂಡ್ ಜಿ.ಜಿ.ಹೆಚ್. ಫೀಡರ್‍ನಲ್ಲಿ ಶನಿವಾರ ಜನವರಿ 12 ರಂದು 33ಕೆ.ವಿ. ಜಿ.ಆಯ್. ಎಸ್. ಸ್ಟೇಶನ್ ಕಾರ್ಯಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕೋರಿದ್ದಾರೆ.
11 ಕೆ.ವಿ. ಜಯನಗರ ಫೀಡರ್ ಆ್ಯಂಡ್ ಜಿ.ಜಿ.ಹೆಚ್.: ಜಯನಗರ, ಓಕಳಿ ಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಅರಿಯಂತ ನಗರ, ಎನ್.ಜಿ.ಓ. ಕಾಲೋನಿ, ಸೂರ್ಯನಗರ, ಡಾಕ್ಟರ್ ಕಾಲೋನಿ, ತೇಲ್ಕರ್ ಲೇಔಟ್, ಪೂಜಾ ಕಾಲೋನಿ, ಕುಸುನೂರ ಜಿ.ಡಿ.ಎ.ಲೇಔಟ್. ವಿಶ್ವೇಶ್ವರಾಧ್ಯ ಕಾಲೋನಿ, ಆಂಜನೇಯ ನಗರ, ಸಂತೋಷ ಹೋಟೆಲ್, ಅಣ್ಣಮ್ಮಾ ನಗರ, ಭಾಗ್ಯ ನಗರ, ಡೆಂಟಲ್ ಕಾಲೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಯಿಂದ ಸಮೇಳನ:
********************************************************
ಹೆಸರು ನೋಂದಾಯಿಸಿಕೊಳ್ಳಲು ಸೂಚನೆ
************************************
ಕಲಬುರಗಿ,ಜ.11.(ಕ.ವಾ)-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ “ಸಮಾನ ಒಳಿತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು” ಎಂಬ ವಿಷಯ ಕುರಿತು 2019ರ ಫೆಬ್ರವರಿ 1 ಹಾಗೂ 2ರಂದು ಎರಡು ದಿನಗಳ ಪ್ರಧಾನ ಸಮ್ಮೇಳನವನ್ನು ಬೆಂಗಳೂರಿನ ಜಯನಗರದಲ್ಲಿರುವ ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ. ರಮೇಶ ಅವರು ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಸಮ್ಮೇಳನದ ಪ್ರತಿನಿಧಿಗಳು ಭೌತ ಮತ್ತು ಗಣಿತ ವಿಜ್ಞಾನ; ರಸಾಯನ ಮತ್ತು ಜೀವ ವಿಜ್ಞಾನ, ಇಂಜಿನಿಯರಿಂಗ್ ಹಾಗೂ ಅಂತರ ಶಾಸ್ತ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಾತ್ಯಕ್ಷಿಕೆಗಳನ್ನು ಮಂಡಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ತಜ್ಞ ಸಮಿತಿಯು ಆಯ್ಕೆ ಮಾಡಿದ ಅತ್ಯುತ್ತಮವಾದ ಪ್ರಾತ್ಯಕ್ಷಿಕೆಗಳಿಗೆ ನಗದು ಬಹುಮಾನ ನೀಡಲಾಗುವುದು.
ಪ್ರತಿ ವಿಷಯದ ನಾಲ್ಕು ಅತ್ಯುತ್ತಮವಾದ ಪ್ರಾತ್ಯಕ್ಷಿಕೆಗಳಿಗೆ, ಮಾದರಿಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ 15,000ರೂ., ದ್ವಿತೀಯ ಬಹುಮಾನ 10,000ರೂ. ಹಾಗೂ 5000ರೂ.ಗಳ ತಲಾ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು.
ಸಮ್ಮೇಳನ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಹಾಗೂ ಸಂಶೋಧನಾ ಪ್ರಾತ್ಯಕ್ಷಿಕೆಗಳ ಸಾರಾಂಶವನ್ನು ಸಲ್ಲಿಸಲು ಇದೇ ಜನವರಿ 19 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿಯನ್ನು ಟಿmಞಡಿv.ಞsಣಚಿ19@gmಚಿiಟ.ಛಿom ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ತಿತಿತಿ.ಞsಣಚಿಛಿಚಿಜemಥಿ.iಟಿ, ತಿತಿತಿ.ಞsಣಚಿಛಿoಟಿಜಿeಡಿeಟಿಛಿe.ಛಿom ವೆಬ್‍ಸೈಟ್‍ಗಳಿಗೆ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನ
********************************************************************
ಕಲಬುರಗಿ,ಜ.11.(ಕ.ವಾ)-ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಆರು ಸದಸ್ಯರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈ ಆಯೋಗಕ್ಕೆ ಆರು ಸದಸ್ಯರನ್ನು ನೇಮಿಸಬೇಕಾಗಿದೆ. ಇದರಲ್ಲಿ ಇಬ್ಬರು ಮಹಿಳಾ ಸದಸ್ಯರು ಒಳಗೊಂಡಿರಬೇಕು. ಸದಸ್ಯರ ಅವಧಿಯು 3 ವರ್ಷ ಇರುತ್ತದೆ. ವಯೋಮಿತಿ 57 ವರ್ಷದೊಳಗಿರಬೇಕು. ಶಿಕ್ಷಣ, ಮಕ್ಕಳ ಆರೋಗ್ಯ ರಕ್ಷಣೆ, ಮಕ್ಕಳ ಕಲ್ಯಾಣ ಅಥವಾ ಮಕ್ಕಳ ಅಭಿವೃದ್ಧಿ, ಬಾಲನ್ಯಾಯ ಅಥವಾ ನಿರ್ಲಕ್ಷಿಸಲ್ಪಟ್ಟ ಮಕ್ಕಳ ರಕ್ಷಣೆ ಅಥವಾ ಸೌಲಭ್ಯ ವಂಚಿತ ಕಟ್ಟಕಡೆಯ ಮಕ್ಕಳು ಅಥವಾ ವಿಕಲಚೇತನ ಮಕ್ಕಳು, ಬಾಲ ಕಾರ್ಮಿಕÀ ಪದ್ದತಿ ನಿರ್ಮೂಲನೆ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಮಕ್ಕಳು, ಮಕ್ಕಳ ಮನ:ಶಾಸ್ತ್ರ ಅಥವಾ ಸಮಾಜ ಶಾಸ್ತ್ರ, ಮಕ್ಕಳ ಕಾನೂನುಗಳು ಈ ಕ್ಷೇತ್ರಗಳಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ hಣಣಠಿ://ತಿತಿತಿ.ಜತಿಛಿಜ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಬೇಕು.
ಭಾರತ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಮಕ್ಕಳ ವಿರುದ್ಧ ಅಪಾದನೆಗಳ ತ್ವರಿತ ವಿಲೇವಾರಿಗೆ ಮಕ್ಕಳ ನ್ಯಾಯಾಲಯವನ್ನು ಸ್ಥಾಪಿಸಲು ಮಕ್ಕಳ ಹಕ್ಕುಗಳ ರಕ್ಷಣೆಯ ಅಧಿನಿಯಮ 2005ನ್ನು ಜಾರಿಗೆ ತಂದಿದೆ. ಪ್ರಕರಣ 17(1) ರಂತೆ ದಿನಾಂಕ: 27-09-2007ರ ಸರ್ಕಾರಿ ಆದೇಶದನ್ವಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗವನ್ನು ರಾಜ್ಯ ಸರ್ಕಾರವು ಸ್ಥಾಪಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನ
ಕಲಬುರಗಿ,ಜ.11.(ಕ.ವಾ)-ಕಲಬುರಗಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಂದ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಗುರುತಿನ ಚೀಟಿ ಪಡೆದಿದ್ದರೂ ಸಹ ಅವರು ಮತ್ತೊಮ್ಮೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಅಂಧ ಬಾಲಕರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-235222 ಗೆ ಸಂಪರ್ಕಿಸಲು ಕೋರಲಾಗಿದೆ.

ಕಾಟ್ರೇಜ್ ರಿಫಿಲಿಂಗ್-ಹೊಸ ಕಾಟ್ರೇಜ್ ಖರೀದಿಗಾಗಿ ದರಪಟ್ಟಿ ಆಹ್ವಾನ
************************************************************
ಕಲಬುರಗಿ,ಜ.11.(ಕ.ವಾ)-ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕರ ಕಚೇರಿಯಲ್ಲಿನ ಹೆಚ್.ಪಿ. 1020 ಮಾದರಿಯ ಪ್ರಿಂಟರ್‍ಗೆ ಇಂಕ್ ಕಾಟ್ರೇಜ್ ಸರಬರಾಜು ಮಾಡಲು (140 ಉಖಒ ಇxಣಡಿಚಿ ಆಚಿಡಿಞ Iಓಏ) ಹಾಗೂ ಕೆನಾನ್/ಹೆಚ್.ಪಿ. ಕಂಪನಿಯ ಲೇಸರ್ ಜೆಟ್ 12ಎ ಮಾದರಿಯ ಪ್ರಿಂಟರ್‍ಗೆ ಹೊಸ ಕಾಟ್ರೇಜ್ ಖರೀದಿಗಾಗಿ ಅರ್ಹ ಸ್ಥಳೀಯ ಕಂಪ್ಯೂಟರ್, ಸ್ಟೇಶನರಿ ಸರಬರಾಜುದಾರರು ಮತ್ತು ಮುದ್ರಕರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಆಹಾರ, ನಾಗರಿ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕರು ತಿಳಿಸಿದ್ದಾರೆ.
ಅರ್ಹ ಸ್ಥಳೀಯ ಕಂಪ್ಯೂಟರ್, ಸ್ಟೇಶನರಿ ಸರಬರಾಜುದಾರರು ಮತ್ತು ಮುದ್ರಕರು ದರಪಟ್ಟಿಗಳನ್ನು 2019ರ ಜನವರಿ 13ರ ಸಂಜೆ 5 ಗಂಟೆಯೊಳಗಾಗಿ ಕಲಬುರಗಿಯ ಮಿನಿ ವಿಧಾನ ಸೌಧದಲ್ಲಿರುವ ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಷರತ್ತು, ನಿರ್ಬಂಧನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಹೀಗಾಗಿ ಲೇಖನಗಳು News and Photos Date: 11--01--2019
ಎಲ್ಲಾ ಲೇಖನಗಳು ಆಗಿದೆ News and Photos Date: 11--01--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photos Date: 11--01--2019 ಲಿಂಕ್ ವಿಳಾಸ https://dekalungi.blogspot.com/2019/01/news-and-photos-date-11-01-2019.html

0 Response to "News and Photos Date: 11--01--2019"
ಕಾಮೆಂಟ್ ಪೋಸ್ಟ್ ಮಾಡಿ