ಶೀರ್ಷಿಕೆ : NEWS AND PHOTO DATE; 28-1-2019
ಲಿಂಕ್ : NEWS AND PHOTO DATE; 28-1-2019
NEWS AND PHOTO DATE; 28-1-2019
ಎಸ್.ಎಸ್.ಎಲ್.ಸಿ ಫಲಿತಾಂಶ: ಅಗ್ರ ಹತ್ತು ಜಿಲ್ಲೆಗಳಲ್ಲಿ ಕಲಬುರಗಿ ಸ್ಥಾನ
***************************************************************
ಪಡೆಯಬೇಕು
************
ಕಲಬುರಗಿ,ಜ.28.(ಕ.ವಾ.)- ಕಲಬುರಗಿ ಸೇರಿದಂತೆ ಹೈ.ಕ.ಭಾಗದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ತೀವ್ರ ನಿಗಾ ಕಲಿಕಾ ತರಬೇತಿ ಆರಂಭಿಸಿದ್ದು, ಇದರ ಸದುಪಯೋಗ ಪಡೆದು ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಗ್ರ ಹತ್ತು ಜಿಲ್ಲೆಯಲ್ಲಿ ಕಲಬುರಗಿ ಜಿಲ್ಲೆ ಸ್ಥಾನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಸೋಮವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಲಬುರಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಮತ್ತು ವಿಜ್ಞಾನ ಶಿಕ್ಷಕರಿಗೆ ಆಯೋಜಿಸಲಾದ “ಎಸ್.ಎಸ್.ಎಲ್.ಸಿ. ಗುಣಾತ್ಮಕ ಫಲಿತಾಂಶದತ್ತ ನಮ್ಮ ಚಿತ್ತ” ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಶಿಕ್ಷಕ ವೃಂದ ಹೆಚ್ಚಿನ ಶ್ರಮ ವಹಿಸಿ ಫಲಿತಾಂಶದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು. ಕನಿಷ್ಠ ಶೇ.90ರಷ್ಟು ಫಲಿತಾಂಶ ಪಡೆಯಲೆಬೇಕೆಂದು ಬದ್ಧತೆಯಿಂದ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಂತೆ ಹೆಚ್ಚಿನ ಅಂಕ ಗಳಿಸಬೇಕು ಹಾಗೂ ಫಲಿತಾಂಶ ಸುಧಾರಿಸಬೇಕೆಂಬುದು ಈ ವಿಶೇಷ ತರಗತಿಗಳ ಉದ್ದೇಶ. ಪರೀಕ್ಷೆಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇರುವುದರಿಂದ ಮಕ್ಕಳಿಗೆ ಹಿಂದಿನ 10 ಸಾಲಿನ ಪ್ರಶ್ನೆ ಪತ್ರಿಕೆ ಬಿಡಿಸುವುದರೊಂದಿಗೆ ವಾರಕೊಮ್ಮೆ ಕಿರು ಪರೀಕ್ಷೆ ನಡೆಸಬೇಕು. ಇದಲ್ಲದೆ ಮಕ್ಕಳು ಅರಿಯುವಂತೆ ಸರಳ ಹಾಗೂ ಬಗೆ ಬಗೆಯ ವಿಧಾನದಲ್ಲಿ ಬೋಧನೆ ಮಾಡಬೇಕು. ಈ ಸಂಬಂಧ ಡಿಡಿಪಿಐ ಅವರು ಪ್ರತಿ 15 ದಿನಕೊಮ್ಮೆ ತಾಲೂಕು ಮಟ್ಟದಲ್ಲಿ ಶಿಕ್ಷಕರ ಸಭೆ ಕರೆದು ಬೋಧನಾ ಕ್ರಮ ಪರಿಶೀಲಿಸಬೇಕು ಹಾಗೂ ವಾರಕೊಮ್ಮೆ ಕಲಿಕಾ ತರಬೇತಿಯ ಪ್ರಗತಿ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ನಕಲು ಮುಕ್ತ ಪರೀಕ್ಷೆ ನಡೆಸಿ:- ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಕಲು ಮುಕ್ತವಾಗಿ ಪರೀಕ್ಷೆ ನಡೆಸಬೇಕು, ಫಲಿತಾಂಶ ಶೇಕಡಾವಾರು ಕಡಿಮೆ ಬಂದರು ಚಿಂತೆಯಿಲ್ಲ, ಗುಣಮಟ್ಟದ ಶಿಕ್ಷಣವೆ ನಮ್ಮ ಆದ್ಯತೆಯಾಗಿರಬೇಕು. ಗುಣಮಟ್ಟ ಶಿಕ್ಷಣದಿಂದ ಮಾತ್ರ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಮಾತನಾಡಿ ಕಳೆದ ಡಿಸೆಂಬರ್‍ನಲ್ಲಿ ಚಿತ್ತಾಪೂರ, ಸೇಡಂ ತಾಲ್ಲೂಕಿನ ಕೆಲವೊಂದು ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಶಾಲೆಯ ಶಿಕ್ಷಕರ ಬೋಧನಾ ಕ್ರಮ ಉತ್ತಮವಾಗಿತ್ತು ಎಂದ ಅವರು ಶಿಕ್ಷಕರು ಮಕ್ಕಳಿಗೆ ಸಹಾಯಕವಾಗುವಂತೆ ಬೋಧನಾ ಕ್ರಮ ಅಳವಡಿಸಿಕೊಳ್ಳಬೇಕು. ತೀವ್ರ ನಿಗಾ ಕಲಿಕಾ ತರಬೇತಿ ವಿಶೇಷ ತರಗತಿಯಲ್ಲಿ ಗಣಿತ, ವಿಜ್ಞಾನ, ಇಂಗ್ಲೀಷ್ ಹೊರತುಪಡಿಸಿ ಇತರೆ ವಿಷಯದಲ್ಲಿ ವಿದ್ಯಾರ್ಥಿ ಹಿಂದುಳಿದಿದ್ದರೆ ಆ ವಿಷಯಕ್ಕು ಬೋಧನೆ ಮಾಡಿ. ಪ್ರತಿ ವಿದ್ಯಾರ್ಥಿಗೆ ವ್ಯಕ್ತಿಗತವಾಗಿ ಬೋಧನೆ ಮಾಡಲು ಒತ್ತು ಕೊಡಿ. ವಿದ್ಯಾರ್ಥಿಗಳ ಮನಸ್ಸು ಚಂಚಲ, ಅವರು ಏನಾದರು ತಪ್ಪು ಮಾಡಿದಲ್ಲಿ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಪಾಲಕರಂತೆ ಅವರೊಂದಿಗೆ ವರ್ತಿಸಬೇಕು ಎಂದ ಅವರು ಸದೃಢ ಸಮಾಜ ನಿರ್ಮಾಣ ಮಾಡುವುದಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ ಎಂದು ಶಿಕ್ಷಕ ವೃತ್ತಿಯನ್ನು ಕೊಂಡಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಡಿ.ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂಗ್ಲೀಷ ಎಂದರೆ ಭಯವಾಗಿ ಏರ್ಪಟ್ಟಿದೆ. ಗಣಿತ, ವಿಜ್ಞಾನ ಕಬ್ಬಿಣದ ಕಡಲೆಯಾಗಿದೆ. ಸರಳವಾಗಿ ಕನ್ನಡ ಮಾತಾಡುವಂತೆ ಇಂಗ್ಲೀಷ್ ಮಾತನಾಡಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಈ ಭಯ ಹೋಗಲಾಡಿಸಬಹುದಾಗಿದೆ ಎಂದರು.
ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ಸಹ ನಿರ್ದೇಶಕ ನಾರಾಯಣ ಗೌಡ ಮಾತನಾಡಿ, ಹೈ.ಕ.ಭಾಗದ 6 ಜಿಲ್ಲೆಯ 542 ಪ್ರೌಢ ಶಾಲೆಗಳಲ್ಲಿ ತೀವ್ರ ನಿಗಾ ಕಲಿಕಾ ತರಬೇತಿ ಆರಂಭಿಸಲಾಗಿದೆ. ನಕಲು ಮುಕ್ತ ಪರೀಕ್ಷೆ ನಡೆಸಲು ಮಕ್ಕಳನ್ನು ಈಗಿನಿಂದಲೆ ಮಾನಸಿಕವಾಗಿ ಸದೃಢಗೊಳಿಸಿ ಎಂದರು.

ಪಾಠದೊಂದಿಗೆ ಪವಾಡವು ಆಗಬೇಕಾಗಿದೆ:- ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಹೊರಬಿದ್ದಾಗÀ ಜಿಲ್ಲೆಯ ಸ್ಥಾನ ಕೆಳ ಹಂತದಲ್ಲಿರುತ್ತೆ. ಇದನ್ನು ಹೋಗಲಾಡಿಸಬೇಕಾದರೆ ನಾವು ಪಾಠದೊಂದಿಗೆ ಪವಾಡವು ಮಾಡಬೇಕಾಗಿದೆ. ಮಕ್ಕಳಿಗೆ ಪ್ರತಿ ಪಾಠದಲ್ಲಿ ಅವರಿಗೆ ಏನು ತಿಳಿದಿದೆ ಎನ್ನುವುದನ್ನು ಪರಿಶೀಲಿಸಲು ಮಕ್ಕಳಿಗೆ ಸಾರಾಂಶ ರೂಪದಲ್ಲಿ ಬರೆಸಿ. ಶೇ.100ರಲ್ಲಿ ಶೇ.80ರಷ್ಟು ಬರಿತಾರೆ, ಉಳಿದಿರೋದು ಶೇ.20 ಇದರೆ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಸಾಕು ಫಲಿತಾಂಶ ಸುಧಾರಿಸಬಹುದಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಲಬುರಗಿ ವಿಭಾಗೀಯ ಕಚೇರಿಯ ಸಹ ನಿರ್ದೇಶಕ ಜಿ.ವಿಜಯಕುಮಾರ ಹೇಳಿದರು.
ಇದೇ ಸಂದರ್ಭದಲ್ಲಿ 2017-18ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100% ರಷ್ಟು ಫಲಿತಾಂಶ ಪಡೆದ ಶಾಲೆಗಳ ಪೈಕಿ ಜಿಲ್ಲೆಯ 6 ಸರ್ಕಾರಿ, 1 ಅನುದಾನಿತ ಹಾಗೂ 7 ಅನುದಾನ ರಹಿತ ಫ್ರೌಢ ಶಾಲೆಯ ಮುಖ್ಯ ಗುರುಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ನಂತರ ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕ ಮಹಮ್ಮದ ಗನೀಫ್ ಅವರು ವಿಜ್ಞಾನ ವಿಷಯದ ಕುರಿತು ಕೆಲವೊಂದು ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಒಟ್ಟು 742 ಪ್ರೌಢ ಶಾಲೆಗಳ ಮುಖ್ಯಗುರುಗಳು ಹಾಗೂ ವಿಜ್ಞಾನ ಶಿಕ್ಷಕರು ಭಾಗಿಯಾಗಿದ್ದರು. ಕಲಬುರಗಿ ಉತ್ತರ ಕ್ಚೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಪ್ರಭಾರಿ ಡಿಡಿಪಿಐ ಚಂದ್ರಶೇಖರ ಪಾಟೀಲ ವಂದಿಸಿದರು.

ಜಿಲ್ಲಾ ಸಚಿವರಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ
*********************************************
ಕಲಬುರಗಿ,ಜ.28.(ಕ.ವಾ.)-ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಅಲೆಮಾರಿ, ಅರೆ ಅಲೆಮಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ಸ್ವಯಂ ಉದ್ಯೋಗ (ನೇರಸಾಲ) ಯೋಜನೆಯಡಿ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನವರಿ 26 ರಂದು ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಾಂಕೇತಿಕವಾಗಿ ಒಟ್ಟು 10 ಜನ ಫಲಾನುಭವಿಗಳಿಗೆ ತಲಾ 1 ಲಕ್ಷ ರೂ.ಗಳ ಚೆಕ್‍ನ್ನು ವಿತರಿಸಿದರು.
70,000 ರೂ. ಸಹಾಯಧನ ಹಾಗೂ 30,000 ರೂ. ಬೀಜಧನ ಸೇರಿದಂತೆ ಒಟ್ಟು 1 ಲಕ್ಷ ರೂ.ಗಳ ಚೆಕ್‍ನ್ನು ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕಲಬುರಗಿ ಉತ್ತರ ಶಾಸಕಿ ಖನೀಜ ಫಾತೀಮಾ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನಾವರ್ ದೌಲಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸತೀಶ ಕೆ.ಹೆಚ್. ಸೇರಿದಂತೆ ಮತ್ತಿತರ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಹೀಗಾಗಿ ಲೇಖನಗಳು NEWS AND PHOTO DATE; 28-1-2019
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE; 28-1-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE; 28-1-2019 ಲಿಂಕ್ ವಿಳಾಸ https://dekalungi.blogspot.com/2019/01/news-and-photo-date-28-1-2019.html

0 Response to "NEWS AND PHOTO DATE; 28-1-2019"
ಕಾಮೆಂಟ್ ಪೋಸ್ಟ್ ಮಾಡಿ