News and Photos Date: 05--12--2018

News and Photos Date: 05--12--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photos Date: 05--12--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photos Date: 05--12--2018
ಲಿಂಕ್ : News and Photos Date: 05--12--2018

ಓದಿ


News and Photos Date: 05--12--2018

ಡಿ. 10ರಿಂದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಾಗದ ರಹಿತ ಸೇವೆ ಪ್ರಾರಂಭ
*********************************************************************
ಕಲಬುರಗಿ,ಡಿ.05.(ಕ.ವಾ.)-ಸರ್ಕಾರದ ಮಾರ್ಗಸೂಚಿಯಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಕಾಗದ ರಹಿತ ಕಚೇರಿಯನ್ನಾಗಿ ಉನ್ನತ್ತೀಕರಿಸಲಾಗಿದೆ. ಇದೇ ಡಿಸೆಂಬರ್ 10 ರಿಂದ ಈ ಕಚೇರಿಯಲ್ಲಿ ಕಾಗದ ರಹಿತ ಕಚೇರಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕಲಬುರಗಿ ವಿಭಾಗದ ಅಪರ ಪ್ರಾದೇಶಿಕ ಆಯುಕ್ತರ ಜಹೀರಾ ನಸೀಮ್ ಅವರು ತಿಳಿಸಿದ್ದಾರೆ.
ಕಾಗದ ರಹಿತ ಕಚೇರಿ ಸೇವೆಯನ್ನು ಉನ್ನತ್ತಿಕರಿಸುವಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿ ಪ್ರಥಮವಾಗಿದೆ. ಕಡ್ಡಾಯವಾಗಿ ಕಾಗದ ರಹಿತ ಕಚೇರಿ ಸೇವೆ ಜಾರಿಗೆ ತರಲು ಕಚೇರಿಯ ಅಧಿಕಾರಿ/ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಸೆಂಬರ್ ಮಾಹೆಯಿಂದ ವೇತನ ಬಿಲ್ಲುಗಳು ಆನ್‍ಲೈನ್ ಮೂಲಕ ಸಲ್ಲಿಕೆ
**************************************************************
ಕಲಬುರಗಿ,ಡಿ.05.(ಕ.ವಾ.)-ಖಜಾನೆ-2ರ ಅನುಷ್ಠಾನದ ಅಂಗವಾಗಿ 2018ರ ಡಿಸೆಂಬರ್ ತಿಂಗಳಿನಿಂದ ಖಜಾನೆ ಇಲಾಖೆಯಿಂದ ಪಾವತಿಸಲ್ಪಡುವ ಸರ್ಕಾರಿ ಕಚೇರಿಗಳ ವೇತನ ಬಿಲ್ಲುಗಳು ಆನ್‍ಲೈನ್ ಮೂಲಕವೇ ಖಜಾನೆಗೆ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಡ್ರಾಯಿಂಗ್ ಅಧಿಕಾರಿಗಳು ಕೂಡಲೇ ಸ್ವೀಕೃತನ ಐಡಿ 27 ಸಿಸ್ಟಂನಲ್ಲಿ ನಮೂದು ಮಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ದತ್ತಪ್ಪಾ ಗೊಬ್ಬುರ ಅವರು ತಿಳಿಸಿದ್ದಾರೆ.
ಸ್ವೀಕೃತನ ಐಡಿ 27 ಸಿಸ್ಟಂನಲ್ಲಿ ನಮೂದನೆ ಮಾಡಿಕೊಂಡಿರುವ ಪ್ರತಿಯನ್ನು ಹಾಗೂ ಇದುವರೆಗೆ ಆರ್-1 ಮತ್ತು ಆರ್-2 ನೋಂದಣಿ ಮಾಡಿಕೊಳ್ಳದ ಇಲಾಖೆಯ ಡ್ರಾಯಿಂಗ್ ಅಧಿಕಾರಿಗಳು ಸಂಬಂಧಿಸಿದ ಖಜಾನೆಗಳಿಗೆ ಡಿಸೆಂಬರ್ 15ರೊಳಗೆ ತಪ್ಪದೇ ನೋಂದಣಿ ಪ್ರತಿ ಸಲ್ಲಿಸಬೇಕು.
ಖಜಾನೆಯಲ್ಲಿ ವಿವಿಧ ಇಲಾಖೆಗಳು ಲೆಕ್ಕ ಶೀರ್ಷಿಕೆ 8443, 8448 ರಲ್ಲಿ ಹೊಂದಿರುವ ಠೇವಣಿ ಖಾತೆಗಳು ಖಜಾನೆ-2ಕ್ಕೆ ವರ್ಗಾವಣೆ ಹೊಂದಲಿರುವ ಪ್ರಯುಕ್ತ ದಿನಾಂಕ: 31-03-2018ಕ್ಕೆ ಇರುವಂತೆ ಖಜಾನೆ ಶೆಡ್ಯೂಲ್ ಮೊತ್ತಕ್ಕೆ ತಾಳೆ ಮಾಡಿ ಒಪ್ಪಿಗೆ ಪ್ರಮಾಣ ಪತ್ರವನ್ನು ಸಹ ಸಂಬಂಧಿಸಿದ ಖಜಾನೆಗಳಲ್ಲಿ 2018ರ ಡಿಸೆಂಬರ್ 10ರೊಳಗಾಗಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಮಾನಸಿಕ ರೋಗಿಗಳ ತಪಾಸಣಾ ಶಿಬಿರ
*************************************
ಕಲಬುರಗಿ,ಡಿ.05.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ತಾಲೂಕುಗಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ದಿನಾಂಕಗಳಂದು ನಡೆಸಲಾಗುವುದು ಎಂದು ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದ ದಿನಾಂಕ, ಸ್ಥಳ ಮತ್ತು ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಡಿಸೆಂಬರ್ 7 ರಂದು: ಕಲಬುರಗಿ ತಾಲೂಕಿನ ಮಹಾಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರ್ರ-ಕಲಬುರಗಿ ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ. ಅಮೋಲ ಪತಂಗೆ. ಡಿಸೆಂಬರ್ 11 ರಂದು: ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ|| ವಿಜಯೇಂದ್ರ ಹಾಗೂ ಕಲಬುರಗಿ ನ್ಯೂ ರಹೆಮತ ನಗರದ ನಗರ ಆರೋಗ್ಯ ಕೇಂದ್ರ-ಮನೋವೈದ್ಯ ಡಾ|| ಇರ್ಫಾನ್. ಡಿಸೆಂಬರ್ 12 ರಂದು: ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಸಮುದಾಯ ಆರೋಗ್ಯ ಕೇಂದ್ರ-ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ರಾಹುಲ ಮಂದಕನಳ್ಳಿ. ಡಿಸೆಂಬರ್ 14 ರಂದು: ಅಫಜಲಪುರ ತಾಲೂಕು ಆಸ್ಪತ್ರೆ-ಡಿ.ಎಂ.ಹೆಚ್.ಪಿ. ತಂಡ. ಆಳಂದ ತಾಲೂಕು ಆಸ್ಪತ್ರೆ-ಜಿಮ್ಸ್ ಮನೋವೈದ್ಯ ಡಾ|| ಚಂದ್ರಶೇಖರ ಹುಡೇದ.
ಡಿಸೆಂಬರ್ 18 ರಂದು: ಚಿತ್ತಾಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಮ್ಸ್‍ನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಪ್ರಭುಕಿರಣ. ಡಿಸೆಂಬರ್ 21 ರಂದು: ಜೇವರ್ಗಿ ತಾಲೂಕು ಆಸ್ಪತ್ರೆ-ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ಆಲೋಕ ಘನಾತೆ.ಡಿಸೆಂಬರ್ 26 ರಂದು: ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ. ಅಜಯ ಢಗೆ.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಕಾಲದಲ್ಲಿ ನಳ ಮತ್ತು ಒಳಚರಂಡಿ ಕರ ಪಾವತಿಸಲು ಮನವಿ
******************************************************
ಕಲಬುರಗಿ,ಡಿ.05.(ಕ.ವಾ.)-ಕಲಬುರಗಿ ನಗರದ ಸಾರ್ವಜನಿಕರು ನೀರಿನ/ಒಳ ಚರಂಡಿಯ ಹಾಗೂ 24ಘಿ7 ನಿರಂತರ ನೀರು ಸರಬರಾಜು ಜೋಡಣೆಯ ಕರವನ್ನು ನಿಗದಿತ ಅವಧಿಯೊಳಗೆ ಪಾವತಿಸಬೇಕು. ಒಂದು ವೇಳೆ ಗ್ರಾಹಕರು ನೀರಿನ/ಒಳ ಚರಂಡಿಯ ಚಾಲ್ತಿ ಹಾಗೂ ಬಾಕಿಯಿರುವ ಕರವನ್ನು ಭರಿಸದೇ ಇದ್ದಲ್ಲಿ, ನಳ/ಒಳ ಚರಂಡಿಯ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರಗಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಗ್ರಾಹಕರ ಅನುಕೂಲಕ್ಕಾಗಿ ಮಂಡಳಿಯು ನೀರಿನ/ಒಳ ಚರಂಡಿಯ ಕರವನ್ನು ಪಾವತಿಸಲು ವಿಭಾಗವಾರು (ಮಹಾನಗರ ಪಾಲಿಕೆಯ ಕಂದಾಯ ವಾರ್ಡದಂತೆ) ಕರವಸೂಲಿಗಾರರನ್ನು ನೇಮಿಸಲಾಗಿದೆ. ಮನೆಗೆ ಬರುವ ಕರವಸೂಲಿಗಾರರಿಗೆ ಸಂಪರ್ಕ ಹೊಂದಿರುವ ಗ್ರಾಹಕರು ಸಹಕಾರ ನೀಡಿ ನೀರಿನ/ಒಳ ಚರಂಡಿಯ ಕರವನ್ನು ಭರಿಸಲು ಕೋರಲಾಗಿದೆ.
ಈಗಾಗಲೇ ನಗರದಲ್ಲಿ ಅನಧಿಕೃತವಾಗಿ ತೆಗೆದುಕೊಂಡ ನಳ/ಒಳ ಚರಂಡಿ ಜೋಡಣೆ ಪಡೆದ ಗ್ರಾಹಕರು ಠೇವಣಿ ಹಣ ಹಾಗೂ ಇನ್ನಿತರ ಶುಲ್ಕಗಳನ್ನು ಮಂಡಳಿಗೆ 2018ರ ಡಿಸೆಂಬರ್ 15ರೊಳಗಾಗಿ ಭರಿಸಿ ಸಕ್ರಮಗೊಳಿಸಿಕೊಳ್ಳಬೇಕು. ಒಂದು ವೇಳೆ ಗ್ರಾಹಕರು ನಳ/ಒಳ ಚರಂಡಿಯ ಜೋಡಣೆಗಳನ್ನು ಅಧಿಕೃತಗೊಳಿಸದ್ದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನಳ/ಒಳ ಚರಂಡಿಯ ಜೋಡಣೆಗಳನ್ನು ಕಡಿತಗೊಳಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
*********************************
ಕಲಬುರಗಿ,ಡಿ.05.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಗೆ ಸೇರಿದ ಒಕ್ಕಲಗೇರಾ ಗ್ರಾಮದ ಸರ್ವೇ ನಂ. 15/3 ರಲ್ಲಿನ 1 ಎಕರೆ 10 ಗುಂಟೆ ಜಮೀನನ್ನು ಕಲಬುರಗಿಯ ದೇವಾಜಿ ನಾಯಕ ಶಿಕ್ಷಣ ಸಂಸ್ಥೆಗೆ ಹಂಚಿಕೆ ಮಾಡಲು ಮಹಾನಗರಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯ ಸಂಖ್ಯೆ 92ರಂತೆ ನಿರ್ಣಯ ಕೈಗೊಳ್ಳಲಾಗಿದೆ. ಸದರಿ ಶಿಕ್ಷಣ ಸಂಸ್ಥೆಗೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ವಲಯ ಕಚೇರಿ-2ರ ವಲಯ ಆಯುಕ್ತರು ಅವರು ತಿಳಿಸಿದ್ದಾರೆ.
ಕಲಬುರಗಿಯ ದೇವಾಜಿ ನಾಯಕ ಶಿಕ್ಷಣ ಸಂಸ್ಥೆಗೆ 1 ಎಕರೆ 10 ಗುಂಟೆ ಜಮೀನನ್ನು ಮಂಜೂರು ಮಾಡಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ/ ಭಾದಿತರಾಗಬಹುದಾದ ವ್ಯಕ್ತಿಗಳಿಂದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ ಈ ಪತ್ರಿಕಾ ಪ್ರಕಟಣೆ ಪ್ರಕಟವಾದ 8 ದಿನದೊಳಗಾಗಿ ಲಿಖಿತ ರೂಪದಲ್ಲಿ ಕಲಬುರಗಿ ಮಹಾನಗರಪಾಲಿಕೆಯ ವಲಯ ಕಚೇರಿ-2ರಲ್ಲಿ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಪ್ರೀತಿಯಿಂದ ಕಾಣಬೇಕು
***************************************************************
ಕಲಬುರಗಿ,ಡಿ.05.(ಕ.ವಾ.)-ವಿಕಲಚೇತನ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಇವರನ್ನು ಪ್ರೀತಿಯಿಂದ ಕಾಣಬೇಕು. ಅಭ್ಯಾಸದಲ್ಲಿ ಇವರ ಕಡೆ ವಿಶೇಷ ಗಮನ ಕೊಟ್ಟು ಬೋಧನೆ ಮಾಡಬೇಕೆಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತಾಲಯದ ನಿರ್ದೇಶಕ ಟಿ. ನಾರಾಯಣಗೌಡ ಅವರು ಶಿಕ್ಷಕರಿಗೆ ಕರೆ ನೀಡಿದ್ದಾರೆ.
ಇತ್ತೀಚೆಗೆ ಕಲಬುರಗಿ ಉತ್ತರ ವಲಯದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಈ ಮಕ್ಕಳಿಗೆ ದೊರಕುವಂತೆ ಅಧಿಕಾರಿ/ಶಿಕ್ಷಕರು ಪ್ರಮಾಣಿಕವಾಗಿ ಪ್ರಯತ್ನಿಸಬೇಕು. ವಿಶೇಷಚೇತನರು ಇಂದು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅವರ ಸಾಧನೆಗೆ ವಿಕಲತೆ ತೊಡಕಾಗಬಾರದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದ ಚಂದ್ರಶೇಖರ ಪಾಟೀಲ, ಕಲಬುರಗಿ ಉತ್ತರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸಪ್ಪ ಜೋಗದ, ಕಾರ್ಯದರ್ಶಿ ಅಶೋಕ ಸೊನ್ನದ, ಮುಖ್ಯಗುರು ಬಸವರಾಜ ಜಿದ್ದೆ, ಬಿ.ಆಯ್.ಇ.ಆರ್.ಟಿ.ರಾದ ಶಾಂತವೀರ ವೈದ್ಯಾ, ಯಶೋಧಾ, ಜಗದೇವಿ, ಬಿ.ಆರ್.ಪಿ.ರಾದ ನಾಗರಾಜ, ಪ್ರಶಾಂತ, ರಾಜೇಶ್ವರಿ ಪಾಲ್ಗೊಂಡಿದ್ದರು. ಪರಮೇಶ್ವರ ವಾಗ್ದಾರಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರಾಗಿ ವಿಶೇಷ ಸಾಧನೆ ಮಾಡಿದ ಶಿಕ್ಷಕರಾದ ಕುಪೇಂದ್ರ ಮತ್ತು ಮಲ್ಲಿಕಾರ್ಜುನ ಕೊರಳ್ಳಿ ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿಕಲಚೇತನ ವಿದ್ಯಾರ್ಥಿಗಳಾದ ಸಾಗರ, ರಾಣೋಜಿ, ಮುಸ್ಕಾನ, ಲಾಯಕ ಅಲಿ ವಿದ್ಯಾರ್ಥಿಗಳಿಗೆ ಸನ್ಮಾಯಿಸಲಾಯಿತು. ಶ್ರೀಪಾಲ ಸು. ಭೋಗಾರ ಸ್ವಾಗತಿಸಿದರು. ಸಿ.ಆರ್.ಪಿ. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ಜಾಕೀರ ಹುಸೇನ ವಂದಿಸಿದರು.
ಚಿಂಚೋಳಿ-ಮುಂಡರಗಿ ಮಾರ್ಗದಲ್ಲಿ ನೂತನ ವೇಗದೂತÀ ಬಸ್ ಕಾರ್ಯಾಚರಣೆ
************************************************************************
ಕಲಬುರಗಿ,ಡಿ.05.(ಕ.ವಾ.)-ಸಾರ್ವಜನಿಕರು/ಪ್ರಯಾಣಿಕರ ಬೇಡಿಕೆ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರ ಚಿಂಚೋಳಿ ಘಟಕದಿಂದ ಚಿಂಚೋಳಿ-ಮುಂಡರಗಿ ಮಾರ್ಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ನೂತನ ವೇತದೂತ ಸಾರಿಗೆ ಪ್ರಾರಂಭಿಸಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಚಿಂಚೋಳಿ ಘಟಕದಿಂದ ಚಿಂಚೋಳಿ-ಮುಂಡರಗಿ ವೇಗದೂತ ಬಸ್ (ಶಹಾಪುರ, ಸಿಂಧನೂರು, ಕೊಪ್ಪಳ ವಾಯಾ) ಪ್ರತಿ ದಿನ ಸಂಜೆ 6.15 ಗಂಟೆಗೆ ಚಿಂಚೋಳಿಯಿಂದ ಹೊರಡಲಿದ್ದು, ಅದೇ ರೀತಿ ಮುಂಡರಗಿ-ಚಿಂಚೋಳಿ ಬಸ್ ಪ್ರತಿದಿನ ಸಂಜೆ 7 ಗಂಟೆಗೆ ಹೊರಡಲಿದೆ. ಸಾರ್ವಜನಿಕರು/ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕೆಂದು ಅವರು ಕೋರಿದ್ದಾರೆ.
ಫೆಲೋಶಿಪ್: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
***************************************
ಕಲಬುರಗಿ,ಡಿ.05.(ಕ.ವಾ.)-ಪ್ರಸಕ್ತ 2018-19 ಸಾಲಿನಲ್ಲಿ ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ರೂ.10,000ರಂತೆ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 10ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯಿಂದ ಈ ಹಿಂದೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್‍ಗೆ ಆಯ್ಕೆಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ಮುಂದುವರೆಯುತ್ತಿರುವ ಅರ್ಹ ನವೀಕರಣ ವಿದ್ಯಾರ್ಥಿಗಳು ಹಾಗೂ 2018-19 ಸಾಲಿನಲ್ಲಿ ಪ್ರಥಮ ವರ್ಷದಲ್ಲಿ ಅಭ್ಯಾಸಿಸುತ್ತಿರುವ ಹೊಸ ವಿದ್ಯಾರ್ಥಿಗಳು ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನವೆಂಬರ್ 30 ಎಂದು ನಿಗದಿಪಡಿಸಲಾಗಿತ್ತು. ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನ್ನು ಅಥವಾ ಸಹಾಯವಾಣಿ ಸಂಖ್ಯೆ:8050770004 ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.



ಹೀಗಾಗಿ ಲೇಖನಗಳು News and Photos Date: 05--12--2018

ಎಲ್ಲಾ ಲೇಖನಗಳು ಆಗಿದೆ News and Photos Date: 05--12--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photos Date: 05--12--2018 ಲಿಂಕ್ ವಿಳಾಸ https://dekalungi.blogspot.com/2018/12/news-and-photos-date-05-12-2018.html

Subscribe to receive free email updates:

0 Response to "News and Photos Date: 05--12--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ