ಶೀರ್ಷಿಕೆ : ನೀ ಎನಗೆ !
ಲಿಂಕ್ : ನೀ ಎನಗೆ !
ನೀ ಎನಗೆ !
ಪ್ರವೀಣಕುಮಾರ್ ಗೋಣಿ
ಅಕಾರಣ ಹನಿವ
ಕಣ್ಣ ಹನಿಗಳೊಳಗೆ
ನಿನ್ನ ಸಾಂತ್ವನದ
ಬಿಸಿ ಮತ್ತೆ ಹೃದಯವನ್ನ ಅರಳಿಸುವುದೋ !
ಬೇಡಿಕೆಗಳ ಹೊರೆಯೆಲ್ಲ
ಹೊತ್ತು ನಿನ್ನೆಡೆ ನಡೆದೆ ನಿಜ ,
ನೀ ಎದುರಾಗುತ್ತಲೇ
ಬಯಕೆಗಳ ಹೊರೆಯೇ
ಕರಗಿ ಮತ್ತೆ ಹಗುರಾದೆನೋ ನಾನು !
ಬಾಗಿದಾಗಲೂ ಬೆನ್ನ ಚಪ್ಪರಿಸಿದೆ
ಜರಿದಾಗಲೂ ಬಿಡದೆ ಪೊರೆದೆ
ಸಾಕೆಂದು ಕೈಚೆಲ್ಲಿದಾಗೂ
ಕಂದನ ಹಿಡಿದೆತ್ತಿಕೊಂಡಂತೆ
ಅಕ್ಕರೆಯಿಂದ ಬಿಗಿದೆತ್ತಿಕೊಂಡೆ
ನಿನ್ನ ಮಡಿಲ ಮೆದುವಲ್ಲಿ
ಬದುಕ ಸಹ್ಯವಾಗಿಸಿ ಅನುಕ್ಷಣ
ಸಲಹುವ ಬಣ್ಣನೆಗೆ ಸಿಗದ ಬಂಧುವೋ ನೀ ಎನಗೆ !
ಪ್ರವೀಣ್ ಕುಮಾರ್ ಗೋಣಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಪ್ರವೀಣ್ ಕುಮಾರ್ ಗೋಣಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಹೀಗಾಗಿ ಲೇಖನಗಳು ನೀ ಎನಗೆ !
ಎಲ್ಲಾ ಲೇಖನಗಳು ಆಗಿದೆ ನೀ ಎನಗೆ ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನೀ ಎನಗೆ ! ಲಿಂಕ್ ವಿಳಾಸ https://dekalungi.blogspot.com/2018/12/blog-post_14.html
0 Response to "ನೀ ಎನಗೆ !"
ಕಾಮೆಂಟ್ ಪೋಸ್ಟ್ ಮಾಡಿ