ಶೀರ್ಷಿಕೆ : news and photos date 01-09-208
ಲಿಂಕ್ : news and photos date 01-09-208
news and photos date 01-09-208
ಹೈ.ಕ. ವಿಮೋಚನಾ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ತೀರ್ಮಾನ
**************************************************************
ಕಲಬುರಗಿ,ಸೆ.01.(ಕ.ವಾ.)-ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನವನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 17ದಂದು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಹೈದ್ರಾಬಾದ ಕರ್ನಾಟಕ ಪ್ರದೇಶ ವಿಮೋಚನಾ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯು ತೀರ್ಮಾನಿಸಿತು.
ಹೈದ್ರಾಬಾದ ಕರ್ನಾಟಕ ದಿನಾಚರಣೆಯ ಮುಂಚಿತವಾಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಭಾಷಣ, ಚರ್ಚೆ ಹಾಗೂ ನಿಬಂಧ ಸ್ಪರ್ಧೆಗಳನ್ನು ಏರ್ಪಡಿಸಬೇಕು. ದಿನಾಚರಣೆಯ ಅಂಗವಾಗಿ ಅಂದು ಬೆಳಿಗ್ಗೆ 8.30 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಲಾರ್ಪಣೆ ಮಾಡುವರು. ನಂತರ ಕಲಬುರಗಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿ.ಎ.ಆರ್.) ಮೈದಾನದಲ್ಲಿ ಬೆಳಗಿನ 9 ಗಂಟೆಗೆ ಹೈದ್ರಾಬಾದ ಕರ್ನಾಟಕ ವಿಮೋಚನೆ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಯೋಧರಿಗೆ ಸನ್ಮಾನಿಸಲಾಗುವುದು.
ಈ ಬಾರಿ ಶಾಲಾ-ಕಾಲೇಜು ಮಕ್ಕಳಿಂದ ಸಂಗೊಳ್ಳಿ ರಾಯಣ್ಣನ ಕುರಿತು ರೂಪಕವನ್ನು ಪ್ರದರ್ಶಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದೇ ರೀತಿ ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ಸಂಬಂಧಿಸಿದ ಸ್ವಾರಸ್ಯಕರ ಸಂದರ್ಭಗಳನ್ನು ಹೈದ್ರಾಬಾದ ಕರ್ನಾಟಕ ವಿಮೋಚನಾ ಸಮಿತಿಯಿಂದ ಒದಗಿಸಿದ್ದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲು ಅನುಕೂಲವಾಗುವುದು ಎಂದರು.
ಜಿಲ್ಲಾ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗುವ ವಿಮೋಚನಾ ದಿನಾಚರಣೆಯ ಧ್ವಜಾರೋಹಣ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಯಿತು. ದಿನಾಚರಣೆಯ ಅಂಗವಾಗಿ ಕವಾಯತ್‍ನಲ್ಲಿ ಎನ್.ಸಿ.ಸಿ. ಸ್ಕೌಟ್ಸ್ ಆಂಡ್ ಗೈಡ್ಸ್, ಎನ್.ಎಸ್.ಎಸ್. ಮಕ್ಕಳು ಭಾಗಹಿಸಬೇಕು. ನಗರದಲ್ಲಿನ ಎಲ್ಲ ಸಾರ್ವಜನಿಕ ಅಂಗಡಿ ಮುಂಗಟ್ಟು ಮತ್ತು ಪ್ರಮುಖ ವೃತ್ತಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತವನ್ನು ಸ್ವಚ್ಛಗೊಳಿಸಬೇಕು. ವಾಟರ್ ಬೋರ್ಡ್ ಮತ್ತು ಮಹಾನಗರ ಪಾಲಿಕೆಯಿಂದ ಧ್ವಜಾರೋಹಣ ನಡೆಯುವ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕದಳದ ವ್ಯವಸ್ಥೆ, ಮಕ್ಕಳಿಗೆ ಸಿಹಿ ತಿಂಡಿ ನೀಡುವ ವ್ಯವಸ್ಥೆ ಮಾಡಬೇಕು ಹಾಗೂ ಸಮಾರಂಭದಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಪ್ರಕಾಶ, ಹೈದ್ರಾಬಾದ ಕರ್ನಾಟಕ ವಿಮೋಚನಾ ಸಮಿತಿ ಸದಸ್ಯ ಲಕ್ಷ್ಮಣ ದಸ್ತಿ, ಸಾಹಿತಿ ಪ್ರೊ. ವಸಂತ ಕುಷ್ಠಗಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಇಂಡಿಯಾ ಪೋಸ್ಟ್ ಪೇಮೆಂಟ್ಸ ಬ್ಯಾಂಕ್ ರಾಷ್ಟೀಕೃತ ಬ್ಯಾಂಕಿಗಿಂತ ಕಮ್ಮಿಯಿಲ್ಲ
*******************************************************************
ಕಲಬುರಗಿ,ಸೆ.01.(ಕ.ವಾ.)- ದೇಶದ ಪ್ರತಿಯೊಬ್ಬ ನಾಗರಿಕನ್ನು ಬ್ಯಾಂಕಿಂಗ್ ವ್ಯವಸ್ಥೆಯಡಿ ತರಲು ಮತ್ತು ಬ್ಯಾಂಕಿಂಗ್ ಸೇವೆಯನ್ನು ಮನೆಯ ಬಾಗಿಲಿಗೆ ನೀಡಲು ಅಂಚೆ ಇಲಾಖೆಯು “ಮನೆ ಮನೆಗೂ ತಮ್ಮ ಬ್ಯಾಂಕ್” ಎಂಬ ಘೋಷವಾಕ್ಯದೊಂದಿಗೆ ನೂತನವಾಗಿ ಆರಂಭಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಸೇವೆಗಳು ಗಮನಿಸಿದರೆ ಯಾವುದೇ ರಾಷ್ಠೀಕೃತ ಬ್ಯಾಂಕಿನ ಸೇವೆಗಿಂತ ಕಮ್ಮಿಯಿಲ್ಲ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಭಿಪ್ರಾಯಪಟ್ಟರು.
ಅವರು ಶನಿವಾರ ಕಲಬುರಗಿ ನಗರದ ಸುಪರ್ ಮಾರ್ಕೆಟ್ ಪ್ರದೇಶದ ಹೈದ್ರಾಬಾದ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಅಂಚೆ ಇಲಾಖೆಯ ನೂತನ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಕಲಬುರಗಿ ಸಾಖೆ ಉದ್ಘಾಟಿಸಿ ಮಾತನಾಡಿದರು. ಸರಳ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಕಾಗದ ರಹಿತವಾಗಿ ಕ್ಷಣಾರ್ಧದಲ್ಲಿ ಅಂಚೆ ಅಣ್ಣ ಮನೆ ಬಾಗಿಲಿಗೆ ಬಂದು ಖಾತೆ ತೆರೆಯುತ್ತಾನೆ. ಇಲ್ಲಿ ಇತರೆ ಬ್ಯಾಂಕಿನಲ್ಲಿರುವಂತೆ ಎ.ಟಿ.ಎಂ. ಸೇವೆ, ಮೋಬೈಲ್ ಬ್ಯಾಂಕಿಂಗ್, ಮನಿ ಆರ್ಡರ್, ಹಣ ವರ್ಗಾವಣೆ ಎಲ್ಲವು ಉಚಿತವಾಗಿ ದೊರೆಯಲ್ಲಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬೇಕು. ಇದಲ್ಲದೆ ಪೋಸ್ಟ್‍ಮಾಸ್ಟರ್‍ಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಖಾತೆ ತೆರೆಯಲು ಶ್ರಮಿಸಬೇಕು ಎಂದರು.
ದೇಶದ ಪ್ರತಿ ಪ್ರಜೆ ಬ್ಯಾಂಕಿಂಗ್ ಸೇವೆಯ ಸೌಲಭ್ಯ ದೊರೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಧನ ಯೋಜನೆ ಜಾರಿಗೆ ತಂದರು. ಇದರ ಪರಿಣಾಮ ಸುಮಾರು 20 ಕೋಟಿ ಬಡ ಜನರು ಬ್ಯಾಂಕ್ ಖಾತೆ ತೆರೆಯಲು ಸಹಾಯವಾಗಿತ್ತು. ಇದೀಗ ಜನರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದ್ದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮುಂದಿನ ದಿನದಲ್ಲಿ ಬೃಹತ್ ಬ್ಯಾಂಕಾಗಿ ಹೊರಹೊಮ್ಮಲ್ಲಿ ಎಂದು ಶುಭಹಾರೈಸಿದರು.
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಶರಣಕುಮಾರ ಮೋದಿ ಮಾತನಾಡಿ ಸ್ವಾತಂತ್ರ ಪೂರ್ವ ಮತ್ತು ನಂತದ ಅಂಚೆ ಇಲಾಖೆಯ ಸೇವೆಯನ್ನು ಈ ದೇಶದ ಜನರು ಮರೆತಿಲ್ಲ. ಸಣ್ಣ ಉಳಿತಾಯಕ್ಕಾಗಿ ಈ ಬ್ಯಾಂಕಿನಲ್ಲಿ ಖಾತೆ ಹೊಂದುವುದು ಜನರಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.
ಇದಕ್ಕು ಮುನ್ನ ಕಲಬುರಗಿ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೆ.ದಿನಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಅಧಾರ್ ಕರ್ಡ್/ ಮೋಬೈಲ್ ಇದ್ದರೆ ಸಾಕು ಕ್ಷಣಾರ್ಧದಲ್ಲಿ ಖಾತೆ ತರೆಯಲಾಗುತ್ತದೆ. ಉಳಿತಾಯ ಖಾತೆಯಲ್ಲಿ ಹಣ ಜಮಾ/ ಪಡೆಯುವುದು ಸೇರಿದಂತೆ ನೇರ ನಗದು ಸೇವೆ, ಗ್ಯಾಸ್ ಸಬ್ಸಿಡಿ, ಸಾಮಾಜಿಕ ಪಿಂಚಣಿ ವಿಸ್ಯಾರ್ಥಿ ವೇತನ ಪಡೆಯಬಹುದಾಗಿದೆ. ಇದಲ್ಲದೆ ಮೋಬೈಲ್ ಬಿಲ್, ವಿದ್ಯುತ್ ಬಿಲ್, ವಿಮಾ ಮೊತ್ತ ಪಾವತಿಯನ್ನು ಸಹ ಖಾತೆಯಿಂದ ಅಥವಾ ಕ್ಯೂಆರ್ ಸ್ಮಾರ್ಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿದೆ. ಖಾತೆ ತೆರೆಯಲು ಹಾಗೂ ಯಾವುದೇ ಸೇವೆಗೂ ಬ್ಯಾಂಕಿನಲ್ಲಿ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಠಪಡಿಸಿದರು.
ದೇಶದಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿಯೆ ಶನಿವಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ 650 ಮುಖ್ಯ ಶಾಖೆಗಳು, 3250 ಉಪ ಶಾಖೆಗಳು (ಎಕ್ಸಿಸ್ ಪಾಯಿಂಟ್) ಏಕಕಾಲದಲ್ಲಿ ಉದ್ಘಾನೆಯಾಗಲಿವೆ. ರಾಜ್ಯದಲ್ಲಿ 31 ಬ್ಯಾಂಕ್ ಹಾಗೂ 126 ಎಕ್ಸಿಸ್ ಪಾಯಿಂಟ್ ಇಂದಿನಿಂದ ಸೇವೆ ಲಭ್ಯವಾಗಲಿವೆ. ಅದೇ ರೀತಿ ಕಲಬುರಗಿ ನಗರದ ಜಗತ್ ಪ್ರದೇಶದಲ್ಲಿ ಮುಖ್ಯ ಬ್ಯಾಂಕ್ ಮತ್ತು ಜಿಲ್ಲೆಯ ಐದು ಕಡೆ ಉಪ ಶಾಖೆಗಳು ಜನರ ಸೇವೆಗೆ ಸನ್ನದವಾಗಲಿವೆ.
ಕಾರ್ಯಕ್ರಮದಲ್ಲಿ ಹೈದ್ರಾಬಾದ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಕಲಬುರಗಿ ಶಾಖೆಯ ವ್ಯವಸ್ಥಾಪಕ ನಾಗರ್ಜುನ ಸೇರಿದಂತೆ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು, ಪೋಸ್ಟ್ ಮಾಸ್ಟರ, ಪೋಸ್ಟ್‍ಮ್ಯಾನ್ ಹಾಗೂ ಸಾರ್ವಜನಿಕರು ಭಾಗವಹಹಿಸಿದ್ದರು. ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ನಿರ್ದೇಶಕ ಸಣ್ನನಾಯಕ ಸ್ವಾಗತಿಸಿದರು. ಶಿವಾನಂದನ್ ವಂದಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆದ ನಾಲ್ವರಿಗೆ ಸಾಂಕೇತಿಕವಾಗಿ ಕ್ಯೂ.ಆರ್. ಸ್ಮಾರ್ಟ್ ಕಾರ್ಡಗಳನ್ನು ವಿತರಿಸಲಾಯಿತು.
ಐಐಪಿ ಬ್ಯಾಂಕ್ ಸ್ಥಾಪನೆ, ಅರ್ಥ ವ್ಯವಸ್ಥೆಯಲ್ಲಿ ಹೊಸ ಪರಿವರ್ತನೆ: ಅರಣ್ಯದ ಆದಿವಾಸಿಗಳು, ದ್ವೀಪದ ವಾಸಿಗಳು, ಗ್ರಾಮೀಣ ಭಾರತದ ನಿವಾಸಿಗಳು ಸೇರಿದಂತೆ ದೇಶದ ನಾಗರಿಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡಲು ಹೊರಟಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸ್ಥಾಪನೆ, ದೇಶದ ಅರ್ಥವ್ಯವಸ್ಥೆಯಲ್ಲಿ ಹೊಸ ಪರಿವರ್ತನೆಗೆ ನಾಂದಿ ಹಾಡಲಿದೆ ಎಂದು ಪ್ರದಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ನೂತನ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸ್ತಾಪನೆಯ ಅಂಗವಾಗಿ ನವದೆಹಲಿಯ ತಾಲಕಟೋರಾ ಸಾಕೆ ಉದ್ಘಾಟಿಸಿ ಸಾರ್ವಜನಿಕರು ಹಾಗೂ 650 ಬ್ಯಾಂಕ್ ಸಾಖೆಗಳನ್ನು ಉದ್ದೇಶಿಸಿ ಮಾತನಾಡಿದರು. ಅದರಂತೆ ಪ್ರಧಾನಮಂತ್ರಿಯವರ ಭಾಷಣವನ್ನು ಆಲಿಸಲು ಕಲಬುರಗಿ ಶಾಖೆ ಉದ್ಘಾನೆಯ ಕಾರ್ಯಕ್ರಮದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ಜನ-ಧನ ಯೋಜನೆಯಡಿ ಕೋಟ್ಯಾಂತ ಜನರು ಬ್ಯಾಂಕ್ ಖಾತೆ ಪಡೆಯಲು ಸಹಕಾರಿಯಾದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮುಖಾಂತರ ಮನೆಯ ಬಾಗಿಲಿಗೆ ಬ್ಯಾಂಕ್ ಸೇವೆ ನೀಡಲು ಅಂಚೆ ಇಲಾಖೆ ಮುಂದಾಗಿದ್ದು, 20 ಲಕ್ಷ ಪೋಸ್ಟ್ ಮ್ಯಾನ್‍ಗಳು ಇದರಡಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಮುಮದೆ ಅಂಚೆ ಅಣ್ಣ ಪೋಸ್ಟ್ ಕಾರ್ಡ್ ತಲುಪಿಸುವ ಹೊಣೆಯಲ್ಲದೆ ಮೈಬೈಲ್‍ನಲ್ಲಿಯೆ ಕಾಗದ ರಹಿತ ಬ್ಯಾಂಕಿಂಗ್ ವ್ಯಹಾರವನ್ನು ಮಾಡುವ ಸಂಚಾರಿ ಬ್ಯಾಂಕಾಗಿ ಮಾರ್ಪಡಲಿದ್ದು, ನಿಮ್ಮ ಮನೆಯ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ದೊರೆಯಲಿದೆ ಎಂದರು.

ಎಸ್‍ಸಿಎಸ್‍ಪಿ-ಟಿಎಸ್‍ಪಿ: ಫಲಾನುಭವಿಗಳ ಆಯ್ಕೆ ಮಾಡಿ ಗುರಿ ತಲುಪಲು ಸೂಚನೆ
***********************************************************************
ಕಲಬುರಗಿ,ಸೆ.01.(ಕ.ವಾ.)-ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ನೀಡಿರುವ ಗುರಿಯನ್ನು ತಲುಪಲು ಆದಷ್ಟು ಬೇಗ ಫಲಾನುಭವಿಗಳನ್ನು ಗುರುತಿಸಿ ನಿಗದಿಯಾಗಿರುವ ಅನುದಾನ ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಟಾನದ ಕುರಿತು ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳಿಗಾಗಿ ಸರ್ಕಾರದಿಂದ ನಿಗದಿಪಡಿಸಲಾದ ಅನುದಾನ ಖರ್ಚು ಮಾಡದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು. ಮುಂದಿನ ಸಭೆಯೊಳಗಾಗಿ ಎಲ್ಲ ಇಲಾಖೆಗಳು ಸಮರ್ಪಕ ಪ್ರಗತಿ ಸಾಧಿಸಿರಬೇಕು ಎಂದು ಎಚ್ಚರಿಸಿದರು.
ವಿವಿಧ ಇಲಾಖೆಗಳಲ್ಲಿ ಅನುಷ್ಟಾನಗೊಳ್ಳುತ್ತಿರುವ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಯೋಜನಾವಾರು ವಿವರವನ್ನು ಇಲಾಖಾ ಅಧಿಕಾರಿಗಳು ದೃಢೀಕರಿಸಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಬರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಕರಪತ್ರಗಳನ್ನು ಮುದ್ರಿಸಿ ವಿತರಿಸಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಗ್ರಾಮ ಪಂಚಾಯತ್ ಮತ್ತು ಹೋಬಳಿ ಮಟ್ಟದಲ್ಲಿ ಸಭೆ ಕರೆದು ಮಾಹಿತಿ ನೀಡಬೇಕು ಎಂದರು.
ಪಶುಭಾಗ್ಯ, ಕೃಷಿಭಾಗ್ಯಗಳಂತಹ ವೈಯಕ್ತಿಕ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಬ್ಯಾಂಕಿನವರು ಸಾಲ ನೀಡದೇ ನಿರಾಕರಿಸುತ್ತಿರುವುದು ಕಂಡು ಬಂದಿದೆ. ಕಾರಣ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಆಯಾ ಪ್ರದೇಶದ ಬ್ಯಾಂಕಿನ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ಬರಮಾಡಿಕೊಂಡು ಯಾವುದೇ ಫಲಾನುಭವಿ ಸಾಲದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಬಡ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭಾಗ್ಯ ಲಕ್ಷ್ಮೀ ಯೋಜನೆ ವರದಾನವಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುತುವರ್ಜಿಯಿಂದ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಯೋಜನೆ ಪ್ರಯೋಜನ ದೊರಕಿಸಬೇಕು ಎಂದರು.
ನಗರ ಪ್ರದೇಶದಲ್ಲಿರುವ ದೇವದಾಸಿಯರಿಗೆ ರಾಜೀವ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿ ನೀಡಲು ಅನುಕೂಲವಾಗುವ ಹಾಗೆ ದೇವದಾಸಿಯರನ್ನು ಆಯ್ಕೆ ಮಾಡಬೇಕು. ದೇವದಾಸಿಯರಿಗೆ ತಮ್ಮ ಮನೆ ಕಟ್ಟಿಸಿಕೊಳ್ಳಲು ನೀಡಬೇಕಾದ ವಂತಿಗೆ ಹಣ ನೀಡಲು ಸಾಧ್ಯವಾಗದಿದ್ದಲ್ಲಿ ಅದನ್ನು ನಿಗಮದಿಂದ ಭರಿಸಲು ಪ್ರಸ್ತಾವನೆ ಸಲ್ಲಿಸಬೇಕು. 1 ರಿಂದ 10ನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಅಧ್ಯಯನ ಮಾಡುವ ವಿಕಲಚೇತನ ಮಕ್ಕಳಿಗೆ ಶಿಷ್ಯವೇತನ ಸರ್ಕಾರ ನೀಡುತ್ತಿದೆ. ಎಲ್ಲ ವಿಕಲಚೇತನರಿಗೆ ಶಿಷ್ಯವೇತನ ದೊರಕಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ವಿಕಲಚೇತನರ ಪಟ್ಟಿ ಪಡೆದು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಂದೇನವಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಕ್ಫ್ ಆಸ್ತಿ ಖರೀದಿಸಿದ 31 ಜನರಿಗೆ ಸಮನ್ಸ್ ಜಾರಿ
*********************************************
ಕಲಬುರಗಿ,ಸೆ.01.(ಕ.ವಾ)-ಕಲಬುರಗಿ ಜಿಲ್ಲೆಯ ಶಹಾಬಾದ ಪಟ್ಟಣದ ಹಳೇ ಶಹಾಬಾದಿನಲ್ಲಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯನ್ನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಖರೀದಿಸಿದ 31 ಜನ ಪ್ರತಿವಾದಿಗಳು 2018ರ ಸೆಪ್ಟೆಂಬರ್ 27ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಇಲ್ಲಿ ನಡೆಯುವ ವಿಚಾರಣೆಗೆ ಖುದ್ದಾಗಿ ಅಥವಾ ವಕೀಲರ ಮೂಲಕ ಕಡ್ಡಾಯವಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಹಳೇ ಶಹಾಬಾದಿನ ಸರ್ವೆ ನಂ. 192 ಹಾಗೂ ಸರ್ವೆ ನಂ. 207ರಲ್ಲಿ ಪ್ಲಾಟ್‍ಗಳನ್ನು ಖರೀದಿಸಿದ ಒಟ್ಟು 31 ಜನರ ವಿರುದ್ಧ ಹಳೇ ಶಹಾಬಾದಿನ ನೀಚೆ ಮೊಹಲ್ಲಾದ ಮಸೀದಿ (ಸುನ್ನಿ)ಯವರ ದೂರಿನನ್ವಯ ವಿಚಾರಣಾಧಿಕಾರಿಗಳು ಸಮನ್ಸ್ ನೀಡಿದ್ದಾರೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವೇ ನಂಬರ್ ಹಾಗೂ ಖರೀದಿಸಿದ ಪ್ಲಾಟ್ ನಿವೇಶನಗಳ ವಿವರ ಇಂತಿದೆ. ಸರ್ವೇ ನಂಬರ್ 192 ರಲ್ಲಿ ಬರುವ ಪ್ಲಾಟ್ ಸಂಖ್ಯೆ 104, 83, 93, 96, 97, 91, 103, 106, 87, 89, 92, 34, 21, 20, 98, 64, 67, 29, 60, 15(1200 ಚ.ಅಡಿ), 15 (1040 ಚ.ಅಡಿ), 48, 47, 25, 19, 18, 65, 60, 63, 53, 46 ಹಾಗೂ ಸರ್ವೆ ನಂ. 207 ರಲ್ಲಿ ಬರುವ ಪ್ಲಾಟ್ ನಂಖ್ಯೆ. 03, 16, 10.
ರೈತರಿಗೆ ಕುರಿ, ಮೇಕೆ ಹಾಗೂ ಹೈನುಗಾರಿಕೆ ತರಬೇತಿ
ಕಲಬುರಗಿ,ಸೆ.01.(ಕ.ವಾ)-ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶುವೈದ್ಯಕೀಯ ಪರಿವೀಕ್ಷಕರ ತರಬೇತಿ ಕೇಂದ್ರದಲ್ಲಿ ಇದೇ ಸೆಪ್ಟೆಂಬರ್ 10 ರಿಂದ 12ರವರೆಗೆ ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಸೆಪ್ಟೆಂಬರ್ 18 ರಿಂದ 20ರವರೆಗೆ ಹೈನುಗಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಪಶುವೈದ್ಯಕೀಯ ಪರಿವೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತ ರೈತರು ಸೇಡಂ ರಸ್ತೆಯಲ್ಲರುವ ಪಶುವೈದ್ಯಕೀಯ ಪರಿವೀಕ್ಷಕರ ತರಬೇತಿ ಕೇಂದ್ರವನ್ನು ಖುದ್ದಾಗಿ ಅಥವಾ ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ 08472-220576ಗೆ ಸಂಪರ್ಕಿಸಲು ಕೋರಲಾಗಿದೆ. ತರಬೇತಿಗೆ ಬರುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ಇರುವುದಿಲ್ಲ. ಆಸಕ್ತ ರೈತರು ಇದರ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿ.ಪಂ.-ತಾ.ಪಂ. ವ್ಯಾಪ್ತಿಗೆ ಬರುವ ಎಲ್ಲ ಇಲಾಖೆಗಳು
*********************************************
ಖಜಾನೆ-2ರಲ್ಲಿ ಕಡ್ಡಾಯವಾಗಿ ನೋಂದಣಿಗೆ ಸೂಚನೆ

ಕಲಬುರಗಿ,ಸೆ.01.(ಕ.ವಾ)-ಕಲಬುರಗಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎಲ್ಲ ಇಲಾಖೆಗಳು ಮತ್ತು ಪ್ರೌಢಶಾಲೆಗಳು ಇನ್ನು ಮುಂದೆ ಖಜಾನೆ ಇಲಾಖೆಯ ಖಜಾನೆ-2ರ ಅಡಿಯಲ್ಲಿ ಹಣ ಸೆಳೆಯಲು ಖಜಾನೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಜಿಲ್ಲಾ ಖಜಾನೆಯ ಉಪನಿರ್ದೇಶಕ ದತ್ತಪ್ಪ ಗೊಬ್ಬುರ ಅವರು ತಿಳಿಸಿದ್ದಾರೆ.
ಸರ್ಕಾರದ ದಿನಾಂಕ: 21-06-2018ರ ಆದೇಶ ಹಾಗೂ ಖಜಾನೆ-2ರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ನೋಂದಣಿ ಮಾಡಿಕೊಳ್ಳಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಎಲ್ಲ ಡ್ರಾಯಿಂಗ್ ಅಧಿಕಾರಿಗಳು ಆರ್-1 ಮತ್ತು ಆರ್-2 ನಿಗದಿತ ನಮೂನೆಗಳು ಜಿಲ್ಲಾ ಖಜಾನೆ ಹಾಗೂ ಉಪ ಖಜಾನೆಯಲ್ಲಿ ಲಭ್ಯವಿದ್ದು, ವೇತನ ಪಡೆಯುತ್ತಿರುವ ಮೂಲ ಸ್ಥಳದಲ್ಲಿ (ನಿಯೋಜನೆ ಸ್ಥಳ ಹೊರತುಪಡಿಸಿ) ಪ್ರತಿಯೊಂದು ಕಚೇರಿಯ ತಲಾ ಓರ್ವ ಮುಖ್ಯಸ್ಥರು, ಅಧೀಕ್ಷಕರು, ವಿಷಯ ನಿರ್ವಾಹಕರು ಹಾಗೂ ಸಂದೇಶ ವಾಹಕ (ಸಿಪಾಯಿ) ಇವರ ನೋಂದಣಿ ಮಾಡಿಕೊಳ್ಳಬೇಕು.
ಆರ್-1 ಮತ್ತು ಆರ್.-2 ನಿಗದಿತ ನಮೂನೆಗಳಲ್ಲಿನ ಎಲ್ಲ ಕಾಲಂಗಳನ್ನು ನೀಲಿ ಇಂಕ್ ಪೇನ್‍ನಿಂದ ಭರ್ತಿ ಮಾಡಿ ನೀಲಿ ಇಂಕ್ ಪೆನ್‍ನಿಂದ ಸಹಿ ಮಾಡಬೇಕು. ಆಧಾರ ಕಾರ್ಡ ಹಾಗೂ ಪ್ಯಾನ್ ಕಾರ್ಡಗಳನ್ನು ಜಿರಾಕ್ಸ್ ಮಾಡಿಸಿ ನೀಲಿ ಇಂಕ್ ಪೆನ್‍ನಿಂದ ಸ್ವಯಂ ದೃಢೀಕರಣ ಹಾಗೂ ಮೇಲಾಧಿಕಾರಿಗಳಿಂದ ದೃಢೀಕರಿಸಿ ಸಂಬಂಧಪಟ್ಟ ಜಿಲ್ಲಾ ಖಜಾನೆ ಅಥವಾ ಉಪ ಖಜಾನೆಗಳಲ್ಲಿ ತುರ್ತಾಗಿ ಆರ್.-1 ಮತ್ತು ಆರ್-2 ನಿಗದಿತ ನಮೂನೆಯನ್ನು ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಎಂ.ಸಿ.ಆರ್.ಪಿ.ಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ
**************************************************
ಕಲಬುರಗಿ,ಸೆ.01.(ಕ.ವಾ)-ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯಿಂದ ಎನ್.ಆರ್.ಎಲ್.ಎಂ. ಯೋಜನೆಯಡಿ ಎಂ.ಸಿ.ಆರ್.ಪಿ. ಗಳಿಗೆ ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ರಾಜಯೋಗ ಪೌಂಡೇಶನ್‍ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರದ ಉಪನಿರ್ದೇಶಕ ಅಂಬಾರಾಯ ಸಾಗರ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಈ ತರಬೇತಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ ಮತ್ತು ಸೇಡಂ ತಾಲೂಕಿನ ಒಟ್ಟು 48 ಎಂ.ಸಿ.ಆರ್.ಪಿ.ಗಳು ಪಾಲ್ಗೊಂಡಿದ್ದು, ಈ ಎಂ ಸಿ.ಆರ್.ಪಿ.ಗಳು ಸರ್ಕಾರದ ಯೋಜನೆಗಳ ಪ್ರತಿನಿಧಿಯಾಗಿ ಗ್ರಾಮ ಪಂಚಾಯಿತಿಗಳಡಿ ಸೇವೆ ಸಲ್ಲಿಸುತ್ತಾರೆ. ಸರ್ಕಾರದ ಯೋಜನೆಗಳಾದ ರಾಜೀವಗಾಂಧಿ ಚೈತನ್ಯ ಯೋಜನೆ, ದೀನದಯಾಳ ಉಪಾಧ್ಯಾಯ, ಗ್ರಾಮೀಣ ಕೌಶಲ್ಯ ಯೋಜನೆ, ಪಶುಭಾಗ್ಯ ಯೋಜನೆ, ಎನ್.ಆರ್.ಎಲ್.ಎಂ. ದಡಿ ಬಡ್ಡಿ ಸಹಾಯಧನ ಯೋಜನೆಗಳ ಕುರಿತು ಈ ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಸೆಪ್ಟೆಂಬರ್ 1 ರಿಂದ 5ರವರೆಗೆ ನಡೆಯುವ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಿಣಿತ ಬೋಧಕ ಪವನ ಶರ್ಮಾ, ಆಡಳಿತ ಮತ್ತು ಲೆಕ್ಕಾಧಿಕಾರಿ ಮಂಜುನಾಥ ಬಾರಿ, ಜಿಲ್ಲಾ ಪಂಚಾಯಿತಿ ಎಪಿಓ ಪ್ರಭು ಹಿರೇಮಠ, ರಾಜಯೋಗ ಫೌಂಡೇಶನ್ನಿನ ಕು. ರಾಜೇಶ್ವರಿ ಅಕ್ಕಾ, ಸಂಸ್ಥೆಯ ವಿಕೇಂದ್ರೀಕೃತ ತರಬೇತಿ ಸಂಯೋಜಕ ರಾಜಕುಮಾರ ಮಾನಿಂಗೆ, ಸುಲೋಚನಾ ಅಕ್ಕಿ ಉಪಸ್ಥಿತರಿದ್ದರು
.
ಪಿಪಿಪಿ ಯೋಜನೆಯಡಿ: ವೆಲ್ಡರ್ ವೃತ್ತಿಯ 10 ಸ್ಥಾನಗಳಿಗೆ ಪ್ರವೇಶ
**********************************************************
ಕಲಬುರಗಿ,ಸೆ.01.(ಕ.ವಾ)-ವಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಿಪಿಪಿ ಯೋಜನೆಯಡಿಯಲ್ಲಿ 2018-19ನೇ ಸಾಲಿಗೆ ವೆಲ್ಡರ್ ವೃತ್ತಿಯ 10 ಸ್ಥಾನಗಳು ಲಭ್ಯವಿರುತ್ತದೆ. ಅರ್ಹ ಅಭ್ಯರ್ಥಿಗಳು ಇದೇ ಸೆಪ್ಟೆಂಬರ್ 15 ರೊಳಗಾಗಿ ಪ್ರವೇಶ ಪಡೆಯಬೇಕೆಂದು ವಾಡಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯರು ತಿಳಿಸಿದ್ದಾರೆ.
ಈ ಹಿಂದೆ ಆನ್‍ಲೈನ್ ಅರ್ಜಿ ಹಾಕದೇ ಇರುವ ಮತ್ತು 10ನೇ ತರಗತಿಯ ಪೂರಕ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲಾತಿಗಳೊಂದಿಗೆ ವಾಡಿಯ ಗಾಂಧಿನಗರದ ರಾವೂರ ಆಸ್ಪತ್ರೆಯ ಎದುರಿಗೆಯಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಹಾಜರಾಗಿ ಪ್ರವೇಶ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ (ಡಿಜಿಇಟಿ) ನಿಯಮಾವಳಿಯಂತೆ ಹಾಗೂ ಮೊದಲ ಬಂದವರಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಹಾಗೂ ಸಚೀನ್ ಓಗಿ ಅವರ ಮೊಬೈಲ್ ಸಂಖ್ಯೆ 7892547577ನ್ನು ಸಂಪರ್ಕಿಸಲು ಕೋರಲಾಗಿದೆ.

ಶ್ರೇಷ್ಠ ಪುಸ್ತಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
*************************************
ಕಲಬುರಗಿ,ಸೆ.01.(ಕ.ವಾ)-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸಲು 2009 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೇಷ್ಠ ಪುಸ್ತಕ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡುತ್ತಿದೆ. ಇದಕ್ಕಾಗಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಕಾಡೆಮಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಪುಸ್ತಕಗಳ ಸಂಖ್ಯೆಗನುಗುಣವಾಗಿ ಪ್ರತಿ ವಿಷಯಕ್ಕೆ ಗರಿಷ್ಠ ಎರಡು ಪ್ರಶಸ್ತಿಗಳನ್ನು ನೀಡಲಾಗುವುದು. ಆಯ್ಕೆಯಾದ ಲೇಖಕರಿಗೆ 25,000ರೂ.ಗಳ ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುವುದು. 2017ರ ಜನವರಿಯಿಂದ 2018ರ ಡಿಸೆಂಬರ್‍ರೊಳಗೆ ಮೇಲ್ಕಂಡ ವಿಷಯಗಳಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಈ ಪ್ರಶಸ್ತಿಗೆ ಸಲ್ಲಿಸಬಹುದಾಗಿದೆ. ಲೇಖಕರು ನಿಗದಿತ ನಮೂನೆಯ ಅರ್ಜಿಯೊಂದಿಗೆ ಪುಸ್ತಕದ 4 ಪ್ರತಿಗಳನ್ನು ಲಗತ್ತಿಸಿ 2019ರ ಜನವರಿ 5 ರ ಸಂಜೆ 5.30 ಗಂಟೆಯೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಕನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಭವನ, 24/2, 21ನೇ ಮುಖ್ಯ ರಸ್ತೆ, ಬಿ.ಎಸ್.ಎನ್.ಎಲ್. ಕಚೇರಿ ಹತ್ತಿರ, ಬನಶಂಕರಿ ಎರಡನೇ ಹಂತ ಬೆಂಗಳೂರು-560070 ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ತಿತಿತಿ.ಞsಣಚಿಛಿಚಿಜemಥಿ.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ
ಕಲಬುರಗಿ,ಸೆ.01.(ಕ.ವಾ)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಮೆಟ್ರಿಕ್ ಪೂರ್ವ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕಾಗಿ ಅಭ್ಯರ್ಥಿಗಳು hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು 2018ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಕೇಂದ್ರ ಪುರಸ್ಕøತ ವಿದ್ಯಾರ್ಥಿ ವೇತನಕ್ಕಾಗಿ ಎಲ್ಲ ಪ್ರವರ್ಗಗಳ ಕುಟುಂಬದ ವಾರ್ಷಿಕ ವರಮಾನ ಮಿತಿ 2.50 ಲಕ್ಷ ರೂ. ದೊಳಗಿರಬೇಕು. ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನಕ್ಕಾಗಿ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ಹಾಗೂ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕುಟುಂದ ವಾರ್ಷಿಕ ಆದಾಯ ಮಿತಿ 44,500 ರೂ. ದೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಉದನೂರ ರೋಡ, ಜಯತೀರ್ಥ ಕಲ್ಯಾಣ ಮಂಟಪ ಹತ್ತಿರ, ಶ್ರೀದತ್ತನಗರ ಕಲಬುರಗಿ ಕಚೇರಿಯನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರಿಯಾಂಕಾ ಬಸವರಾಜ ಅವರಿಗೆ ಪಿಹೆಚ್.ಡಿ.
****************************************
ಕಲಬುರಗಿ,ಸೆ.01.(ಕ.ವಾ)-ಗುಲಬರ್ಗಾ ವಿಶ್ವವಿದ್ಯಾಲಯವು ಕನ್ನಡ ವಿಷಯದಲ್ಲಿ ಪ್ರಿಯಾಂಕಾ ಬಸವರಾಜ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.ಡಾ. ನಾಗಾಬಾಯಿ ಬಿ. ಬುಳ್ಳಾ ಅವರ ಮಾರ್ಗದರ್ಶನದಲ್ಲಿ ಡಾ. ಚೆನ್ನಣ್ಣ ವಾಲೀಕಾರರ ಕಥನ ಸಾಹಿತ್ಯ ಒಂದು ಅಧ್ಯಯನ ಕುರಿತು ಪ್ರಿಯಾಂಕಾ ಬಸವರಾಜ ಪ್ರಬಂಧವನ್ನು ಮಂಡಿಸಿದ್ದರು.

ಸೆಪ್ಟೆಂಬರ್ 2 ಹಾಗೂ 3 ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***************************************************
ಕಲಬುರಗಿ,ಸೆ.01.(ಕ.ವಾ.)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ಸಿನಿಮಾ ಫೀಡರ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಹಾಗೂ 11ಕೆ.ವಿ. ಗಾಜಿಪುರ, ಬ್ರಹ್ಮಪುರ ಮತ್ತು ಇಂಡಸ್ಟ್ರೀಯಲ್ (ನಾರ್ಥ್) ಫೀಡರಗಳ ಮೇಲೆ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವವರೆಗೆ 33ಕೆ.ವಿ. ಜಿ.ಆಯ್.ಎಸ್. ಸ್ಟೇಶನ್ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ ಸಿನಿಮಾ ಫೀಡರ್: ಸುಪರ ಮಾರ್ಕೇಟ್, ಶಹಾ ಬeóÁರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬeóÁರ್, ಮಹಾಲಕ್ಷ್ಮೀ ಲೇಔಟ್, ಕಿರಾಣ ಬeóÁರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಷನ್, ಫೋರ್ಟ್ ರಸ್ತೆ, ಬಾಂಡಾ ಬeóÁರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಗಾಜಿಪುರ ಫೀಡರ್: ಜಿ.ಡಿ.ಎ., ಗೋಕುಲ ನಗರ, ಜಿಲ್ಲಾಧಿಕಾರಿಗಳ ಕಚೇರಿ, ಮಾಲಿಪಾಟೀಲ್ ಟಿ.ಸಿ, ಬಸವಣ್ಣ ಟೆಂಪಲ್, ಮಿಲ್‍ನ ಚೌಕ್, ಶಂಕರಲಿಂಗ್ ಟೆಂಪಲ, ಮಟನ ಮಾರ್ಕೇಟ್, ಕಾವೇರಿ ನಗರ, ತಹಸೀಲ್ ಕಚೇರಿ, ಚನ್ನಮಲ್ಲೇಶ್ವರ ನಗರ, ಮಜಗಿ ಲೇಔಟ್, ಸುಪರ ಮಾರ್ಕೇಟ್ ರೇಮಾಂಡ್ ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಬ್ರಹ್ಮಪುರ ಫೀಡರ್: ಶಹಬಜಾರ, ಶೆಟ್ಟಿಕಾಂಪ್ಲೆಕ್ಸ್, ಗದ್ಲೆಗಾಂವ, ಶಹಬಜಾರ ನಾಕಾ, ಶಹಬಜಾರಜಿ. ಡಿ.ಎ, ಕೈಲಾಶ ನಗರ, ಮಾಣೀಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಲೇಔಟ್, ಮಹಾಲಕ್ಷ್ಮೀ ಲೇಔಟ್, ಚೌಡೇಶ್ವರಿ ಕಾಲೋನಿ, ಎನ್.ಆರ್. ಕಾಲೋನಿ, ಬಾಳೆ ಲೇಔಟ್, ಅಗ್ರೀಕಲ್ಚರ ಲೇಔಟ್, ಜಿ.ಡಿ.ಎ ವಕ್ಕಲಗೇರಾ, ಜಿ.ಡಿ.ಏ. ಶಹಬಜಾರ, ಹರಿಜನವಾಡಾ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಇಂಡಸ್ಟ್ರೀಯಲ್ (ನಾರ್ಥ) ಫೀಡರ್: ದತ್ತನಗರ, ಮಹಾಲಕ್ಷ್ಮೀ ಲೇಔಟ್, ಕೈಲಾಸನಗರ, ಮಾಣಿಕೇಶ್ವರಿ ಕಾಲೋನಿ, ಚೌಡೇಶ್ವರಿ ಕಾಲೋನಿ, ಗಂಗಾನಗರ, ಲಾಲಗೇರಿ, ಮಾಣಿಕೇಶ್ವರಿ. ಜಿ.ಡಿ.ಎ, ಜೆ.ಆರ್.ನಗರ, ಇದಗಾ, ಸರಸ್ವತಿವಿದ್ಯಾಮಂದಿರ, ಕೃಷಿ ಇಲಾಖೆ ಲೇಔಟ್, ಬಾಲೆ ಲೇಔಟ್, ಜೋಡ-ಎಲ್ಲಮ್ಮಾ ಮತ್ತು ಎನ್.ಆರ್.ಕಾಲೋನಿ,

ಹೀಗಾಗಿ ಲೇಖನಗಳು news and photos date 01-09-208
ಎಲ್ಲಾ ಲೇಖನಗಳು ಆಗಿದೆ news and photos date 01-09-208 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photos date 01-09-208 ಲಿಂಕ್ ವಿಳಾಸ https://dekalungi.blogspot.com/2018/09/news-and-photos-date-01-09-208.html

0 Response to "news and photos date 01-09-208"
ಕಾಮೆಂಟ್ ಪೋಸ್ಟ್ ಮಾಡಿ