news and photos 11-9-2018

news and photos 11-9-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photos 11-9-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photos 11-9-2018
ಲಿಂಕ್ : news and photos 11-9-2018

ಓದಿ


news and photos 11-9-2018

ಮನೆ ನಿರ್ಮಾಣಕ್ಕಾಗಿ ಫಲಾನುಭವಿ ವಂತಿಗೆ ಹಣ ಸರ್ಕಾರದಿಂದ ಪಾವತಿಸಲು
*****************************

















**************************************
ಮನವಿ
******
ಕಲಬುರಗಿ,ಸೆ.11.(ಕ.ವಾ)-ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣಕ್ಕಾಗಿ ಭರಿಸಬೇಕಾಗಿರುವ ವಂತಿಗೆ ಮತ್ತು ಸಾಲದ ರೂಪದ ಒಟ್ಟು 1.48 ಲಕ್ಷ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕೆಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಿಗೆ ತಿಳಿಸಿದರು.
ಅವರು ಮಂಗಳವಾರ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಲಬುರಗಿ ವಿಭಾಗದಿಂದ ನಗರದ ತಾರಫೈಲ್ ಕೊಳಗೇರಿ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅತ್ಯಂತ ಕಡುಬಡವ, ದೀನ ದಲೀತರಿಗೆ ಮನೆ ನಿರ್ಮಿಸಿಕೊಳ್ಳಲು ವಂತಿಗೆ ಹಣ ಭರಿಸಲು ಸಾಧ್ಯವಾಗುವುದಿಲ್ಲ. ಈ ಹಣವನ್ನು ಸರ್ಕಾರದಿಂದ ಭರಿಸಿದ್ದಲ್ಲಿ ಬಡವರಿಗೆ ಸಹಾಯವಾಗುವುದು ಎಂದರು.
ತಾರಫೈಲ್ ಕೊಳಚೆ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅಂದಾಜು 17.43 ಕೋಟಿ ರೂ.ಗಳ ವೆಚ್ಚದಲ್ಲಿ 350 ಮನೆಗಳನ್ನು ನಿರ್ಮಿಸಲಾಗುತ್ತಿದೆ. 4.98 ಲಕ್ಷ ರೂ. ವೆಚ್ಚದಲ್ಲಿ ಪ್ರತಿಯೊಂದು ಮನೆಯನ್ನು ನಿರ್ಮಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂ., ರಾಜ್ಯ ಸರ್ಕಾರ 2 ಲಕ್ಷ ರೂ.ಗಳ ಅನುದಾನ ನೀಡುತ್ತಿದೆ. ಇತರೆ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂ., ರಾಜ್ಯ ಸರ್ಕಾರ 1.2 ಲಕ್ಷ ರೂ.ಗಳ ಅನುದಾನ ನೀಡುತಿದ್ದು, ಫಲಾನುಭವಿಗಳು ಭರಿಸಬೇಕಾದ ವಂತಿಗೆ 74,700 ರೂ. ಹಾಗೂ ಸಾಲದ ರೂಪದ 1,53,300 ರೂ.ಗಳನ್ನು ಸಹ ಸರ್ಕಾರ ಪಾವತಿಸುವಂತಾಗಬೇಕು ಎಂದರು.
ದೇಶದಲ್ಲಿ ಶ್ರೀಮಂತ ವರ್ಗದ ಉದ್ಯೋಗಪತಿಗಳು ಸುಮಾರು 11 ಲಕ್ಷ ಕೋಟಿ ರೂ. ಗಳನ್ನು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಅವರು ಸಾಲವನ್ನು ಹಿಂತಿರುಗಿಸದ ಸ್ಥಿತಿಯಲ್ಲಿದ್ದಾರೆ. ಸಾಲ ಪಡೆದವರ ಪೈಕಿ ಅರ್ಧದಷ್ಟು ಜನ ಬೇರೆ ಬೇರೆ ದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಂದ ಸಾಲ ವಸೂಲಾತಿಗಾಗಿ ಸರ್ಕಾರ ಅನೇಕ ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ನೇರವಾಗಿ ಎಸ್.ಸಿ.ಪಿ. ಅನುದಾನದಡಿಯಲ್ಲಿ ವಂತಿಗೆ ಹಣ ಪಾವತಿಸಲು ಅನುಕೂಲ ಮಾಡಿಕೊಡಬೇಕು ಎಂದರು.
ತಾರಫೈಲ್ ಪ್ರದೇಶದಲ್ಲಿ ನಿರ್ಮಿಸಲಾಗುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್.ಕೆ.ಆರ್.ಡಿ.ಬಿ.ಯಿಂದ ಅನುದಾನ ನೀಡಬೇಕು. ಬಡ ಜನರಿಗೆ ಉಪಯುಕ್ತವಾಗುವಂತಹ ಒಳ್ಳೆಯ ಕಾರ್ಯಗಳಿಗೆ ಕಾನೂನು ಕಟ್ಟುಪಾಡುಗಳನ್ನು ಸಡಲಿಸಬೇಕೆಂದು ತಿಳಿಸಿದ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಕ್ಕಳಿಗೆ ಸ್ವಾಭಿಮಾನದಿಂದ ಬದುಕಲು ಶಿಕ್ಷಣ ಕೊಡಿಸಬೇಕು ಎಂದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಈ ಹಿಂದೆ ರಾಜೀವ ಆವಾಸ್ ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಗೆ 3000 ಮನೆಗಳನ್ನು ಮಂಜೂರು ಮಾಡಲಾಗಿದೆ. ಆಗ ತಾರಫೈಲ್ ಮತ್ತು ಕಪನೂರ ಕೊಳಚೆ ಪ್ರದೇಶಗಳು ಬಿಟ್ಟು ಹೋಗಿದ್ದವು. ಸಧ್ಯ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಮಂತ್ರಿಗಳು ಹೌಸಿಂಗ್ ಫಾರ್ ಆಲ್ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು, 2022ರ ಹೊತ್ತಿಗೆ ಎಲ್ಲ ಬಡವರಿಗೆ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ರಾಜೀವ ಆವಾಸ್ ಯೋಜನೆಯಡಿಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಫಲಾನುಭವಿಗಳ ವಂತಿಗೆ ಹಣ ಸರ್ಕಾರದಿಂದ ಭರಿಸಲಾಗಿತ್ತು. ಅದೇ ರೀತಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ವಂತಿಗೆ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ, ಗಣ್ಯರಾದ ಸಂಗಾನಂದ ಭಂತೇಜಿ, ಜಗದೇವ ಗುತ್ತೇದಾರ, ಭಾಗಣ್ಣಗೌಡ ಸಂಕನೂರ, ಅಲ್ಲಮ್ಮಪ್ರಭು ಪಾಟೀಲ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ಸೈಯದ್ ಹಮೀದ ನಿಸಾರ, ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಎಂ.ಎ. ಖಯ್ಯೂಮ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಕಪನೂರನಲ್ಲಿ 150 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
******************************************************
ಕಲಬುರಗಿ,ಸೆ.11.(ಕ.ವಾ)-ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕಪನೂರ ಕೊಳಗೇರಿ ಪ್ರದೇಶದಲ್ಲಿ ಅಂದಾಜು 7.47 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ 150 ಮನೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿವೇಶನ ಹೊಂದಿರುವ ಫಲಾನುಭವಿಗಳಿಗೆ 4.98 ಲಕ್ಷ ರೂ.ಗಳ ವೆಚ್ಚದಲ್ಲಿ 1ಬಿಹೆಚ್‍ಕೆ ಮನೆ ನಿರ್ಮಿಸಿಕೊಡಲಾಗುತ್ತಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಮನೆಗಳ ನಿರ್ಮಾಣ ಗುಣಮಟ್ಟದಿಂದ ಕೂಡಿರುವಂತೆ ನಿರ್ಮಿಸಬೇಕು. ಸರ್ಕಾರಗಳು ಯೋಜನೆಗಳನ್ನು ಚೆನ್ನಾಗಿ ರೂಪಿಸುತ್ತದೆ. ಆದರೆ ಮನೆ ನಿರ್ಮಾಣ ಮಾಡುವಾಗ ಕಳಪೆ ಗುಣಮಟ್ಟದ್ದಾಗಿರುತ್ತದೆ. ಅಧಿಕಾರಿಗಳು ಹೆಚ್ಚು ಮುತುವರ್ಜಿವಹಿಸಿ ಉತ್ತಮ ಗುಣಮಟ್ಟದ ಮನೆಗಳನ್ನು 18 ತಿಂಗಳ ಅವಧಿಯೊಳಗಾಗಿ ನಿರ್ಮಿಸಿ ಕೊಡಬೇಕೆಂದು ಸೂಚಿಸಿದರು.
ಎಲ್ಲರಿಗೂ ಸೂರು ದೊರಕಿಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ 1972ರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ನೇತೃತ್ವದಲ್ಲಿ ಪಿಪಲ್ಸ್ ಹೌಸಿಂಗ್ ಸ್ಕೀಮ್ ರೂಪಿಸಲಾಯಿತು. ಮುಂದುವರೆದು ಜನತಾ ಹೌಸಿಂಗ್ ಸ್ಕೀಮ್, ರಾಜೀವಗಾಂಧಿ ಆವಾಸ್ ಯೋಜನಾ, ಇಂದಿರಾ ಆವಾಸ್ ಯೋಜನಾ ಸಧ್ಯ ಪ್ರಧಾನಮಂತ್ರಿ ಆವಾಸ್ ಯೋಜನಾ ಎಂಬ ಯೋಜನೆಗಳನ್ನು ರೂಪಿಸಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ 13 ಲಕ್ಷ ಜನರಿಗೆ ಮನೆಗಳಿಲ್ಲ ಎಂಬ ಸಮೀಕ್ಷೆಯನ್ನಾಧರಿಸಿ 5 ವರ್ಷದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. ಮುಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಪುನ: 13 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಎಂದು ವಿವರಿಸಿದರು.
ಸೂರು ಇಲ್ಲದವರಿಗೆ ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕು. ಮನೆ ನಿರ್ಮಾಣ ಪೂರ್ಣಗೊಳಿಸಲು ಗುರಿ ಹಮ್ಮಿಕೊಂಡು ಕಾರ್ಯಪ್ರವೃತ್ತರಾದಲ್ಲಿ ಎಲ್ಲ ಜನರಿಗೆ ಮನೆ ನಿರ್ಮಿಸಿಕೊಡಲು ಸಹಾಯವಾಗುವುದು. ಬಡವರ ಬಗ್ಗೆ ಕಾಳಜಿ ಮತ್ತು ಚಿಂತೆಯಿರುವ ಸರ್ಕಾರಗಳು ಬಂದಾಗ ಬಡತನ ನಿರ್ಮೂಲನೆಯಂತಹ ಕಾಮಗಾರಿಗಳು ನಡೆಯುತ್ತವೆ. ಆಡಳಿತ ಪಕ್ಷದವರು ಸಂವಿಧಾನ ಮತ್ತು ಕಾನೂನಿನ ವಿರುದ್ಧ ನಡೆಯಬಾರದು ಎಂದರು.
ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದು ಈ ಭಾಗದ ಅಭಿವೃದ್ಧಿಗಾಗಿ 371(ಜೆ) ಜಾರಿಗೊಳಿಸಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗುವುದರ ಜೊತೆಗೆ ನೌಕರಿಯಲ್ಲಿ ಮೀಸಲಾತಿ, ಶಿಕ್ಷಣದಲ್ಲಿ ಮೀಸಲಾತಿ ದೊರೆತು ಬಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟುಗಳು ಲಭ್ಯವಾಗುತ್ತಿವೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು. 371(ಜೆ) ಕಲಂ ಜಾರಿಗೊಳಿಸುವಲ್ಲಿ ಇರುವ ಕೊರತೆಗಳ ಕುರಿತು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ, ಗಣ್ಯರಾದ ಸಂಗಾನಂದ ಭಂತೇಜಿ, ಜಗದೇವ ಗುತ್ತೇದಾರ, ಭಾಗಣ್ಣಗೌಡ ಸಂಕನೂರ, ಅಲ್ಲಮ್ಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಮಹಾನಗರ ಪಾಲಿಕೆ ಸದಸ್ಯ ರಾಜಕುಮಾರ ಕಪನೂರ, ಲಕ್ಷ್ಮೀ ಬಸವರಾಜ ಖಂಡು, ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಎಂ.ಎ. ಖಯ್ಯೂಮ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ರಾಜೀವ ಆವಾಸ್ ಯೋಜನೆ ಮನೆಗಳ ಹಂಚಿಕೆಗೆ ಚಾಲನೆ
**************************************************
ಕಲಬುರಗಿ,ಸೆ.11.(ಕ.ವಾ)-ರಾಜೀವ ಆವಾಸ್ ಯೋಜನೆಯ ಪೈಲೆಟ್ ಪ್ರೊಜೆಕ್ಟ್ ಯೋಜನೆಯಡಿ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕಂಪ್ಯೂಟರ್ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.
ಕಲಬುರಗಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ರಾಜೀವ ಆವಾಸ್ ಪೈಲೆಟ್ ಪ್ರೊಜೆಕ್ಟ್ 2013-14ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿತ್ತು. ಈ ಯೋಜನೆಯು ಕೊಳಚೆ ಪ್ರದೇಶಗಳಲ್ಲಿ ವಸತಿ ಗೃಹಗಳನ್ನು ನಿರ್ಮಿಸಿ ಮಾಲೀಕತ್ವವನ್ನು ನೀಡುವ ಉದ್ದೇಶ ಹೊಂದಿತ್ತು. ಕಲಬುರಗಿ ನಗರಕ್ಕೆ 3 ಯೋಜನೆಗಳು ಅನುಮೋದನೆಗೊಂಡಿದ್ದು,ಅದರಲ್ಲಿ ಪೈಲೆಟ್ ಪ್ರೊಜೆಕ್ಟ್ ಒಂದಾಗಿದೆ ಎಂದರು.
ಪೈಲೆಟ್ ಪ್ರೊಜೆಕ್ಟ್ ಅಡಿ 1024 ಮನೆಗಳನ್ನು ಅಂದಾಜು ವೆಚ್ಚ 41.67 ಕೋಟಿ ರೂ., ಡಿ.ಪಿ.ಆರ್.-2 ಯೋಜನೆಯಡಿ 1196 ಮನೆಗಳನ್ನು ಅಂದಾಜು ವೆಚ್ಚ 45.44 ಕೋಟಿ ರೂ. ಹಾಗೂ ಡಿ.ಪಿ.ಆರ್.-3 ಯೋನೆಯಡಿ 1227 ಮನೆಗಳನ್ನು ಅಂದಾಜು ವೆಚ್ಚ 46.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಪೈಲೆಟ್ ಪ್ರೊಜೆಕ್ಟಿನ 1024 ಫಲಾನುಭವಿಗಳ ಪೈಕಿ 920 ಫಲಾನುಭವಿಗಳು ಅನುಮೋದನೆಗೊಂಡಿದ್ದಾರೆ. ಈ ಪೈಕಿ 704 ಜನ ಮನೆ ನಿರ್ಮಾಣಕ್ಕಾಗಿ ವಂತಿಗೆ ಹಣ ಭರಿಸಿದ್ದಾರೆ. ರಾಜೀವ ಆವಾಸ್ ಯೋಜನೆಯಡಿ 4.03 ಲಕ್ಷ ರೂ.ಗಳಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ.ಕೇಂದ್ರ ಸರ್ಕಾರದಿಂದ 201500 ರೂ. ಹಾಗೂ ರಾಜ್ಯ ಸರ್ಕಾರದಿಂದ 100750 ರೂ., ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಸಾಲ ರೂಪದ ವಂತಿಗೆ 60450ರೂ. ಗಳನ್ನು ಸರ್ಕಾರ ಭರಿಸಿರುತ್ತದೆ. ಫಲಾನುಭವಿಗಳು 40300ರೂ.ಗಳ ವಂತಿಗೆ ನೀಡಬೇಕು. ಇತರೆ ವರ್ಗದವರು 100750 ರೂ.ಗಳ ವಂತಿಗೆ ನೀಡಬೇಕು ಎಂದರು.
ಈಗಾಗಲೇ ಜಫರಾಬಾದಿನಲ್ಲಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದ್ದು, ಇಂದು ಫಲಾನುಭವಿಗಳ ಪೂರ್ಣ ವಂತಿಗೆ ಪಾವತಿಸಿರುವ 270 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಿ ದೃಢೀಕರಣ ಪತ್ರ ನೀಡಲಾಗುತ್ತಿದೆ. 27 ವಿಕಲಚೇತನ ಫಲಾನುಭವಿಗಳಿಗೆ ನೆಲಮಹಡಿಯ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಪೂರ್ತಿ ವಂತಿಗೆ ಹಣ ಸಂದಾಯ ಮಾಡದ ಫಲಾನುಭವಿಗಳು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ವಂತಿಗೆ ಹಣ ಪಾವತಿ ಮಾಡಿ ದೃಢೀಕರಣ ಪತ್ರಗಳನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಕನೀಜ್ ಫಾತೀಮಾ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಎಂ.ಎ. ಖಯ್ಯೂಮ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಸೆಪ್ಟೆಂಬರ್ 15ರಂದು ನಗರದಲ್ಲಿ “ಖಾದಿ ಉತ್ಸವ-2018” ಉದ್ಘಾಟನೆ
***********************************************************
ಕಲಬುರಗಿ,ಸೆ.11.(ಕ.ವಾ.)-ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನಬಾರ್ಡ್, ಜಿಲ್ಲಾಡಳಿತ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಖಾದಿ ಉತ್ಸವ-2018”ರ ಅಂಗವಾಗಿ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ
ಹಾಗೂ ಮಾರಾಟವನ್ನು ಇದೇ ಸೆಪ್ಟೆಂಬರ್ 15 ರಿಂದ 29ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಸೆಪ್ಟೆಂಬರ್ 15ರಂದು ಸಂಜೆ 4 ಗಂಟೆಗೆ ಸಣ್ಣ ಕೈಗಾರಿಕೆ ಸಚಿವರು ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾದ ಎಸ್.ಆರ್. ಶ್ರೀನಿವಾಸ್ (ವಾಸು) ಅವರು ಖಾದಿ ಉತ್ಸವದ ಸಮಾರಂಭವನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಳಿಗೆಯನ್ನು ಉದ್ಘಾಟಿಸುವರು. ಈ ಸಮಾರಂಭದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಪೂಜ್ಯ ಮಹಾತ್ಮಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ಪ್ರಾತ್ಯಕ್ಷಿಕೆಯ ಮಳಿಗೆಗಳನ್ನು ಉದ್ಘಾಟಿಸುವರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಂ.ವೈ. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಕನೀಜ್ ಫಾತೀಮಾ, ಸುಭಾಷ ಆರ್. ಗುತ್ತೇದಾರ್, ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಮನೀಷ ಖರ್ಬಿಕರ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ರಘೋಜಿ, ಎಸ್.ಬಿ.ಐ. ಕ್ಷೇತ್ರ-3ರ ರಿಜನಲ್ ಮ್ಯಾನೇಜರ್ ಪ್ರಕಾಶ, ಎಸ್.ಬಿ.ಐ. ಲೀಡ್ ಬ್ಯಾಂಕ್ ಮ್ಯಾನೇಜರ್ ಸಿ.ಹೆಚ್. ಹವಾಲ್ದಾರ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೆಶ ಭಟ್ಟ ಎಸ್. ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜಿ.ಪಂ. ಕಚೇರಿಯಲ್ಲಿ
*******************
ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ
*******************************************************************
ಕಲಬುರಗಿ,ಸೆ.11.(ಕ.ವಾ.)-ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಇದೇ ಸೆಪ್ಟೆಂಬರ್ 17ರಂದು ಬೆಳಿಗ್ಗೆ 7.50 ಗಂಟೆಗೆ ಕಲಬುರಗಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ತಿಳಿಸಿದ್ದಾರೆ.
ಗಣೇಶ ಚತುರ್ಥಿ–ಮಾಂಸ ಮಾರಾಟ ನಿಷೇಧ
***************************************
ಕಲಬುರಗಿ,ಸೆ.11.(ಕ.ವಾ.)-ಕಲಬುರಗಿ ನಗರದಾದ್ಯಂತ ಇದೇ ಸೆಪ್ಟೆಂಬರ್ 13 ರಂದು ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಗರದಾದ್ಯಂತ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಹಾಗೂ ಕಸಾಯಿ ಖಾನೆ ಮಾಲೀಕರು ಈ ಆದೇಶವÀನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿರಿಯ ನಾಗರಿಕರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
*************************************************
ಕಲಬುರಗಿ,ಸೆ.11.(ಕ.ವಾ.)-ವಿಶ್ವ ಹಿರಿಯ ನಾಗರಿಕರ ದಿನಾಚಾರಣೆ ಅಂಗವಾಗಿ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನಾಗರಿಕರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ನಾಗಣ್ಣಾ ಗಣಜಲಖೇಡ ಅವರು ಮಂಗಳವಾರ ಚಾಲನೆ ನೀಡಿದರು.
ಈ ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿದ್ದರು. ಡಾ. ಪಿ.ಎಸ್. ಶಂಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬನ್ಸಿ ಆರ್. ಪವಾರ, ದೈಹಿಕ ಶಿಕ್ಷಕ ಪ್ರಕಾಶ ಭಜಂತ್ರಿ, ಪ್ರಕಾಶ ಜಾಧವ, ಮಹಾಂತೇಶ್ ಬಿಲ್ಲಾಡ ಹಾಗೂ ಎಂ.ಆರ್. ಡಬ್ಲ್ಯೂ, ಖಾಸಿಂಸಾಬ ಪಾಲ್ಗೊಂಡಿದ್ದರು.
ಕಾಣೆಯಾದ ವಯೋವೃದ್ಧನ ಪತ್ತೆಗೆ ಮನವಿ
*************************************
ಕಲಬುರಗಿ,ಸೆ.11.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸ್ತ್ರೀ ಚೌಕ್‍ನಲ್ಲಿರುವ 78 ವರ್ಷದ ಬಸವಂತರಾವ ಮಲ್ಲಪ್ಪಗೌಡ ಮಾಲಿಪಾಟೀಲ್ ಅವರು 2018ರ ಸೆಪ್ಟೆಂಬರ್ 4ರಂದು ಮಧ್ಯಾಹ್ನ 1.30 ಗಂಟೆಗೆ ತಮ್ಮ ಮನೆಯಿಂದ ಹೊರಗಡೆ ಹೊಟೇಲ್‍ಕ್ಕೆ ಚಹಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಇವರನ್ನು ಎಲ್ಲ ಸಂಬಂಧಿಕರಲ್ಲಿ ಹುಡುಕಿದರೂ ಎಲ್ಲಿಯೂ ಇವರು ಸಿಕ್ಕಿರುವುದಿಲ್ಲ.
ಕಾಣೆಯಾದ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐದು ಅಡಿ ನಾಲ್ಕು ಇಂಚು ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ತಳ್ಳನೆಯ ಮೈಕಟ್ಟು ಹೊಂದಿರುವ ಈತÀನು ಬಿಳಿ ಬಣ್ಣದ ಧೋತರ ಮತ್ತು ಬಿಳಿ ಬಣ್ಣದ ಅಂಗಿ ಧರಿಸಿದ್ದು, ಬಿಳಿ ಬಣ್ಣದ ಟಾವಲು ಜೊತೆ ಇರುತ್ತದೆ. ಎರಡು ಕಾಲಿನ ಪಾದದ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ. ಶೋಧನಾ ಕಾರ್ಯ ನಡೆದಿದೆ. ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಜೇವರ್ಗಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ತಿಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 18ರಂದು ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ
************************************************
ಕಲಬುರಗಿ,ಸೆ.11.(ಕ.ವಾ.)-ಪ್ರಸಕ್ತ 2018-19 ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆ ಅಡಿಯಲ್ಲಿ ತಾಡಪತ್ರಿಗಳ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಇದೇ ಸೆಪ್ಟೆಂಬರ್ 18ರಂದು ಖಜೂರಿ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ನಡೆಯಲಿದೆ ಎಂದು ಖಜೂರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ತಿಳಿಸಿದಾರೆ.
ತಾಡಪತ್ರಿ ಸೌಲಭ್ಯಕ್ಕಾಗಿ ಆಸಕ್ತಿಯುಳ್ಳ ರೈತರಿಂದ ಸೆಪ್ಟೆಂಬರ್ 10ರವರೆಗೆ ಅರ್ಜಿಯನ್ನು ಕರೆಯಲಾಗಿತ್ತು. ಪ್ರಸಕ್ತ 2018-19ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆ ಅಡಿಯಲ್ಲಿ ತಾಡಪತ್ರಿಗಳನ್ನು ಖಜೂರಿ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಖಜೂರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿರಾದಾರ ಬಿ.ಎಂ. ಅವರ ಮೊಬೈಲ್ ಸಂಖ್ಯೆ 8277931530ಗೆ ಸಂಪರ್ಕಿಸಲು ಕೋರಲಾಗಿದೆ.
ಭಾರಿ ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನ
***********************************************
ಕಲಬುರಗಿ,ಸೆ.11.(ಕ.ವಾ.)-ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತರಬೇತಿ ಶಾಲೆಗಳಲ್ಲಿ ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಯುವಕ, ಯುವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಕನಿಷ್ಠ 15 ವರ್ಷಗಳಿಂದ ಕರ್ನಾಟಕದ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರ ವಯೋಮಿತಿ 21 ರಿಂದ 40 ವರ್ಷದೊಳಗಿರಬೇಕು. ಲಘು ವಾಹನ ಚಾಲನಾ ತರಬೇತಿ ಪಡೆದು ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು.
ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ 2018ರ ಅಕ್ಟೋಬರ್ 1 ರ ಸಂಜೆ 5.30 ಗಂಟೆಯೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ, ಬಡೇಪುರ 3ನೇ ಹಂತ, ಕೆ.ಹೆಚ್.ಬಿ. ಕಾಂಪ್ಲೆಕ್ಸ್ ಹತ್ತಿರ, ಶ್ರಿ ಟವರ್, ವಿಜಯ ಬ್ಯಾಂಕ್ ಮೇಲಗಡೆ ಕಲಬುರಗಿ ಇವರ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278660ನ್ನು ಸಂಪರ್ಕಿಸಲು ಕೋರಲಾಗಿದೆ.
ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಸಿಲು ಸೂಚನೆ
**************************************************
ಕಲಬುರಗಿ,ಸೆ.11.(ಕ.ವಾ.)-ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಅನುಷ್ಠಾನದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಂತೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಆರ್ಥಿಕ ಮತ್ತು ಭೌತಿಕ ಗುರಿ ಸಾಧಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಸೂಚನೆ ನೀಡಿದರು.
ಅವರು ಮಂಗಳವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಹೈ.ಕ.ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಆರೋಗ್ಯ ಇಲಾಖೆಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿಶೇಷ ಅನುದಾನ ನೀಡಿದರೂ ಸಹ ಅನುಷ್ಠಾನಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಂದಗತಿಯ ಕಾರ್ಯದಿಂದ ನಿರೀಕ್ಷಿತ ವೇಗದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು ನಿಗದಿತ ಅವಧಿಯೊಳಗೆ ಕೆಲಸ ಮಾಡದೇ ಇದ್ದಲ್ಲಿ ಮುಂದೆ ಅನುಷ್ಠಾನ ಎಜೆನ್ಸಿಗಳಿಗೆ ಅನುದಾನ ಪಾವತಿ ಸಮಸ್ಯೆ ಉಂಟಾಗುತ್ತದೆ. ಮಂಡಳಿ ಕೇವಲ ಅನುದಾನ ನೀಡುತ್ತದೆ ಆದರೆ ಕಾಮಗಾರಿಯ ತಾಂತ್ರಿಕತೆ ಮತ್ತು ವಿಶೇಷತೆಗಳ ಬಗ್ಗೆ ಅನುದಾನ ಪಡೆಯುವ ಆಯಾ ಇಲಾಖೆಗಳೆ ಈ ಬಗ್ಗೆ ಗಮನಹರಿಸಬೇಕು ಹಾಗೂ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ 200 ಅಸನ ಸಾಮಥ್ರ್ಯದ ಸುಸಜ್ಜಿತ ಸಭಾಂಗಣ ನಿರ್ಮಿಸಲು ಮಂಡಳಿ 2016-17ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಡಿದರು ಇದೂವರೆಗೆ ಕಾಮಗಾರಿ ಪೂರ್ಣಗೊಳಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಕುರಿತು ಕಾಮಗಾರಿ ಅನುಷ್ಠಾನ ಎಜೆನ್ಸಿಯಾದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಲಬುರಗಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಮೂರು ದಿನದೊಳಗೆ ಉತ್ತರ ನೀಡಲು ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನಿಡಿದರು.
ಕಲಬುರಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆಸ್ಪತ್ರೆ, ಜಿಮ್ಸ್, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆಗಳಿದ್ದು, ಇಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಪ್ರಸ್ತುತ ಇಲ್ಲಿನ ವೈದ್ಯಕೀಯ ಸಮುಚ್ಛಯಕ್ಕೆ ಸರಬರಾಜಾಗುತ್ತಿರುವ ನೀರಿನ ಪ್ರಮಾಣ ಮತ್ತು ಬೇಡಿಕೆಯ ಪ್ರಮಾಣ ಕುರಿತು ಹಾಗೂ ಹೊಸದಾಗಿ ನೀರಿನ ಸಂಪ್ ನಿರ್ಮಾಣ ಕುರಿತಂತೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ಜಿಮ್ಸ್ ಅಧಿಕಾರಿಗಳು ಕೂಡಲೆ ಜಂಟಿಯಾಗಿ ಸರ್ವೇ ಮಾಡಿ ಈ ಬಗ್ಗೆ ವರದಿ ಸಲ್ಲಿಸಬೇಕು ಮತ್ತು ಪ್ರಥಮಾದ್ಯತೆ ಮೇಲೆ ಕುಡಿಯುವ ನೀರು ಪೂರೈಸಬೇಕೆಂದು ಜಲಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕೂಡಲೆ ಸಿಟಿ ಸ್ಕ್ಯಾನ್ ಅಳವಡಿಸಲು ಸೂಚಿಸಿದ ಅವರು ಮಂಡಳಿಯ ಪ್ರಸಕ್ತ 2018-19ನೇ ಸಾಲಿನ ಮೈಕ್ರೋ ಯೋಜನೆಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಿದ್ದಪಡಿಸುತ್ತಿದ್ದು, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಗಳಿದ್ದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ತಿಳಿಸಿದರು.
ಗುಲಬರ್ಗಾ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯ ಅಧಿಕಾರಿಗಳು ಮಾತನಾಡಿ ಜಿಮ್ಸ್ ಆವರಣದಲ್ಲಿರುವ ವೈದ್ಯಕೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದೆ. ಮುಂದಿನ ದಿನದಲ್ಲಿ ಜಿಮ್ಸ್ 1300 ಹಾಸಿಗೆವುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆ ಹೊಂದಲಿದ್ದು ಹೆಚ್ಚಿನ ನೀರು ಪೂರೈಸಬೇಕಾದ ಅಗತ್ಯತೆ ಇರುತ್ತದೆ. ಪ್ರಸ್ತುತ ಪ್ರತಿ ದಿನ 20 ಲಕ್ಷ ಲೀಟರ್ ಬೇಡಿಕೆಯಿದ್ದು, 5.25 ಲಕ್ಷ ಲೀಟರ್ ನೀರು ಮಾತ್ರ ಅದು ಎರಡು ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಜಿಮ್ಸ್ ಆವರಣದಲ್ಲಿ ಹೈಮಾಸ್ಟ್ ದೀಪ, ರಸ್ತೆ ಸುಧಾರಣೆ, ಎಸ್.ಡಿ.ಪಿ ಅಭಿವೃದ್ಧಿ ಕಾಮಗಾರಿಗಳು ಸಹ ಆಗಬೇಕಾಗಿದೆ ಎಂದರು.
ಸಭೆಯಲ್ಲಿ ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ, ಗುಲಬರ್ಗಾ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಿರ್ದೇಶಕ ಡಾ.ಉಮೇಶ ಎಸ್.ಪಿ., ಕೆ.ಹೆಚ್.ಎಸ್.ಆರ್.ಡಿ.ಪಿ. ಕಾರ್ಯನಿರ್ವಾಹಕ ಅಭಿಯಂತ ಸುಭಾಷ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತ ಸುಬ್ರಮಣ್ಯ, ಕಲಬುರಗಿ ಮಹಾನಗರ ಪಾಲಿಕೆಯ ಕಾರ್ಯನಿವಾಹಕ ಅಭಿಯಂತ ಆರ್.ಪಿ.ಜಾಧವ, ಕೆ.ಆರ್.ಇ.ಡಿ.ಎಲ್ ಅಧಿಕಾರಿಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು news and photos 11-9-2018

ಎಲ್ಲಾ ಲೇಖನಗಳು ಆಗಿದೆ news and photos 11-9-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photos 11-9-2018 ಲಿಂಕ್ ವಿಳಾಸ https://dekalungi.blogspot.com/2018/09/news-and-photos-11-9-2018.html

Subscribe to receive free email updates:

0 Response to "news and photos 11-9-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ