ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು

ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು
ಲಿಂಕ್ : ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು

ಓದಿ


ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು


ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕೆಲವೆಡೆ ಬಾಳೆ ಬೆಳೆಯಲ್ಲಿ ಕೊರೆಯುವ ಹುಳುಗಳ ಬಾಧೆ ಕಂಡು ಬಂದಿದ್ದು, ರೈತರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ತಿಳಿಸಿದ್ದು, ಸಲಹೆಗಳನ್ನು ನೀಡಿದೆ. 
    ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದೆ.  ಬಾಳೆಹಣ್ಣು ಕೆಲ ಖನಿಜಾಂಶಗಳು ಮತ್ತು ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.  ಶೇ.27 ರಷ್ಟು ಶರ್ಕರ ಪಿಷ್ಠವನ್ನು ಹೊಂದಿದ್ದು, ಶಕ್ತಿಯ ಆಗರವಾಗಿದೆ.  ಇಂತಹ ಬಾಳೆ ಬೆಳವಣಿಗೆ ಕಾಲದಲ್ಲಿಯೇ ಕೆಲವು ಮೂತಿ ಹುಳುಗಳು ಬೆಳೆಯಲು ಅವಕಾಶ ಕೊಡದೆ ಕೊರೆದು ಹಾಕುವುದನ್ನು ಹಾಗೂ ಇವುಗಳಲ್ಲಿ 2 ಪ್ರಮುಖ ಕೊರೆಯುವ ಮೂತಿ ಹುಳುಗಳನ್ನು ಸಹ ಕಾಣಬಹುದಾಗಿದೆ. 
ಗಡ್ಡೆ ಕೊರೆಯುವ ಹುಳು, ಈ ಹುಳು ಕಪ್ಪು ಅಥವಾ ಕಂದುಬಣ್ಣದ ಮೂತಿಹುಳುವಿನ ಮರಿಹುಳುಗಳು ಕಂದುಗಳನ್ನು ಕೊರೆದು ತಿನ್ನುತ್ತವೆ.  ಅಂತಹ ಕಂದುಗಳ ಮೇಲೆ ಸಣ್ಣಸಣ್ಣ ರಂದ್ರಗಳಾಗುತ್ತವೆ.  ಗಿಡಗಳು ಹಳದಿ ಆಗುತ್ತವೆ.  ಜೋರಾಗಿ ಗಾಳಿ ಬೀಸಿದಾಗ ಗಿಡಗಳು ಮುರಿದು ಬೀಳುತ್ತವೆ.  ಇನ್ನೊಂದು ಹುಸಿ ಕಾಂಡ ಕೊರೆಯುವ ಹುಳು, ಈ ಹುಳುಗಳಲ್ಲಿ ಮರಿಹುಳುಗಳು ಕಾಂಡದ ಮೇಲೆ ಸಣ್ಣಸಣ್ಣ ರಂದ್ರಗಳನ್ನು ಮಾಡುತ್ತವೆ.
ನಿಯಂತ್ರಣ ಕ್ರಮಗಳು : ಬೆಳೆಯಲ್ಲಿ ಕೊರೆಯುವ ಹುಳುಗಳ ಬಾಧೆ ನಿಯಂತ್ರಣಕ್ಕೆ ರೈತರು ಕೈಗೊಳ್ಳಬೇಕಾದ ಕ್ರಮಗಳು ಇಂತಿವೆ.  ನಾಟಿಗಾಗಿ ಉಪಯೋಗಿಸುವ ಕಂದುಗಳು ಗಡ್ಡೆಕೊರೆಯುವ ಹುಳುವಿನಿಂದ ಮುಕ್ತವಾಗಿರಬೇಕು.  ಪ್ರತಿ ಗುಣಿಗೆ 10 ಗ್ರಾಂ ಕಾರ್ಬೊಪ್ಯುರಾನ್ 3ಜಿ ಹರಳುಗಳನ್ನು ನಾಟಿಗೆ ಮುಂಚೆ ಮಣ್ಣಿನಲ್ಲಿ ಬೆರೆಸಬೇಕು.  ಕಾಂಡಕೊರೆಯುವ ಹುಳುವಿನ ನಿಯಂತ್ರಣಕ್ಕಾಗಿ ನಾಟಿಮಾಡಿದ 5 ಅಥವಾ 7 ತಿಂಗಳುಗಳಲ್ಲಿ 5 ಮಿಲೀ. ಕ್ಲೊರೋಪೈರಿಫಾಸ್ ಅಥವಾ 5 ಮಿಲೀ ಡೈಮಿಥೊಯೇಟ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಕಾಂಡಕ್ಕೆ ಭೂಮಿಯಿಂದ 1 ಅಡಿ ಎತ್ತರಕ್ಕೆ ಚುಚ್ಚು ಮದ್ದಿನ ಮೂಲಕ ಕೊಡಬೇಕು (2-3 ಸೆಂ.ಮೀ. ಆಳ). 
    ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಶಿಫಾರಸ್ಸಿನ ಪ್ರಕಾರ ಗೊನೆ ಕಟಾವು ಮಾಡಿದ ಬಾಳೆ ಗಿಡದ ಕಾಂಡವನ್ನು ಒಂದು ಅಡಿ ಉದ್ದಕ್ಕೆ ಸೀಳಿ 4 ಭಾಗಗಳನ್ನಾಗಿ ಮಾಡಿ ಪ್ರತಿ ಎಕರೆ ಪ್ರದೇಶಕ್ಕೆ 100 ರಿಂದ 150 ತುಂಡುಗಳನ್ನು ಕತ್ತರಿಸಿದ ಭಾಗ ಭೂಮಿಗೆ ತಾಗುವಂತೆ ಹರಡಬೇಕು.  ಈ ತುಂಡುಗಳನ್ನು ಬೆವೇರಿಯಾ ಬ್ಯಾಸಿಯಾನ ಅಥವಾ ಮೆಟರೈಜಿಯ ಅನೈಸೋಪ್ಲಿಯ ಶಿಲೀಂದ್ರದಿಂದ ಉಪಚರಿಸಿದಾಗ ಆ ತುಂಡುಗಳಿಂದ ಬರುವ ಪ್ರಚೋದಕಗಳಿಗೆ ಮೂತಿ ಹುಳುಗಳು ಆಕರ್ಷಣೆಗೊಳ್ಳುತ್ತವೆ.  ಹೀಗೆ ಆಕರ್ಷಣೆಗೊಂಡ ಮೂತಿಹುಳುಗಳು ಶಿಲೀಂದ್ರ ಸೋಂಕು ಗೊಂಡು ಸಾಯುವುದಲ್ಲದೇ ಇತರ ಹುಳುಗಳಿಗೂ ಶಿಲೀಂದ್ರವನ್ನು ಹರಡುತ್ತವೆ. 
ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದದ ವಿಷಯ ತಜ್ಞರು (ಕೀಟಶಾಸ್ತ್ರ) ಬದರಿಪ್ರಸಾದ ಪಿ.ಆರ್. ಮೊ. 9900145705, ಡಾ. ಎಂ.ಬಿ. ಪಾಟೀಲ್ ಮೊ. 9480696319, ಪ್ರದೀಪ ಬಿರಾದಾರ ಮೊ. 9743064405,  ಇವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು

ಎಲ್ಲಾ ಲೇಖನಗಳು ಆಗಿದೆ ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2018/09/blog-post_20.html

Subscribe to receive free email updates:

0 Response to "ಬಾಳೆಯಲ್ಲಿ ಕೊರೆಯುವ ಹುಳುಗಳ ಬಾಧೆ : ನಿಯಂತ್ರಣಕ್ಕೆ ಸಲಹೆಗಳು"

ಕಾಮೆಂಟ್‌‌ ಪೋಸ್ಟ್‌ ಮಾಡಿ