News Date: 21-8-2018

News Date: 21-8-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News Date: 21-8-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News Date: 21-8-2018
ಲಿಂಕ್ : News Date: 21-8-2018

ಓದಿ


News Date: 21-8-2018

ಕಂದಾಯ ಸಚಿವರ ಪ್ರವಾಸ
*************************
ಕಲಬುರಗಿ,ಆ.21.(ಕ.ವಾ)-ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಆಗಸ್ಟ್ 23ರಂದು ವಿಜಯಪುರದಿಂದ ರಸ್ತೆ ಮೂಲಕ ಯಾದಗಿರಿಗೆ ಸಂಜೆ 5 ಗಂಟೆಗೆ ಆಗಮಿಸಿ ಯಾದಗಿರಿಯಲ್ಲಿ ಸಾರ್ವಜನಿಕ ಭೇಟಿ ಹಾಗೂ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತಂತೆ ಚರ್ಚಿಸಿ ಯಾದಗಿರಿಯಲ್ಲಿ ವಾಸ್ತವ್ಯ ಮಾಡುವರು.
ಆಗಸ್ಟ್ 24ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿಗೆ ಆಗಮಿಸಿ ಸಾರ್ವಜನಿಕ ಭೇಟಿ ಹಾಗೂ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವರು. ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಯಿಂದ ಹುಮನಾಬಾದ ಮಾರ್ಗವಾಗಿ ರಸ್ತೆ ಮೂಲಕ ಬೀದರಿಗೆ ಪ್ರಯಾಣಿಸುವರು.

ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಹಣವನ್ನು
***************************************************
ಸಾಲಕ್ಕೆ ತಿರುವಳಿ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ಸೂಚನೆ
****************************************************
ಕಲಬುರಗಿ,ಆ.21.(ಕ.ವಾ)-ಕಲಬುರಗಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳ ಖಾತೆಗೆ ಶೌಚಾಲಯ ನಿರ್ಮಾಣದ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದ್ದು, ಬ್ಯಾಂಕುಗಳು ಫಲಾನುಭವಿಗಳ ಖಾತೆಯಿಂದ ಇನ್ನಿತರ ಸಾಲದ ಮೊತ್ತವನ್ನು ಕಡಿತಗೊಳಿಸಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಶೌಚಾಲಯ ನಿರ್ಮಾಣಕ್ಕೆ ಅನುದಾನದ ಕೊರತೆ ಇರುವುದಿಲ್ಲ. ಈಗಾಗಲೇ ಕಳೆದ ವರ್ಷದಿಂದ ಸುಮಾರು 80,000 ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಅನುದಾನ ನೀಡಲಾಗಿದೆ. ಇನ್ನುಳಿದ ಸುಮಾರು 40,000 ಫಲಾನುಭವಿಗಳ ಖಾತೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ತಕ್ಷಣ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆಯಾ ಗ್ರಾಮಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಂಡ ಸ್ಥಳದ ಜಿ.ಪಿ.ಎಸ್. ಹಾಗೂ ವರದಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ ತಕ್ಷಣ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಶೌಚಾಲಯ ನಿರ್ಮಾಣದ ಗುರಿ ಪೂರ್ಣಗೊಳಿಸಿದ ಗ್ರಾಮ ಪಂಚಾಯಿತಿ ಪಿಡಿಓಗಳನ್ನು ಪಕ್ಕದ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯಗಳ ನಿರ್ಮಾಣದ ಪ್ರಗತಿ ಮೇಲ್ವಿಚಾರಣೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ಕೆ ನೇಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ. 83.96 ರಷ್ಟು ಶೌಚಾಲಯ ನಿರ್ಮಿಸಲಾಗಿದ್ದು, ಇನ್ನೂ 34388 ಶೌಚಾಲಯ ನಿರ್ಮಾಣ ಮಾತ್ರ ಬಾಕಿ ಇದೆ. ಇವುಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಕೋರಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ 15ರಂದು 128, ಆಗಸ್ಟ್ 16ರಂದು 1230, ಆಗಸ್ಟ್ 17ರಂದು 1159, ಆಗಸ್ಟ್ 18ರಂದು 1774, ಆಗಸ್ಟ್ 20ರಂದು 1119 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸೆಪ್ಟೆಂಬರ್ 15ರೊಳಗಾಗಿ ಶೌಚಾಲಯ ನಿರ್ಮಿಸುವ ಗುರಿ ಸಾಧಿಸಬೇಕಾದಲ್ಲಿ ಪ್ರತಿದಿನ 1376 ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಗ್ರಾಮ ಪಂಚಾಯಿತಿ ಪಿಡಿಓ ಗಳು ಮುತುವರ್ಜಿವಹಿಸಿ ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರ ಮನವೋಲಿಸುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದ್ದಾರೆ.


ಕೇಂದ್ರೀಯ ವಿದ್ಯಾಲಯದಲ್ಲಿ ಪಾಲಕರ-ಶಿಕ್ಷಕರ ಸಮಾಲೋಚನಾ ಸಭೆ
************************************************************
ಕಲಬುರಗಿ,ಆ.21.(ಕ.ವಾ)-ಕಲಬುರಗಿ ಕೇಂದ್ರೀಯ ವಿದ್ಯಾಲಯದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಪರೀಕ್ಷೆ ನಡೆಸುವ ಮೂಲಕ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವುದರ ಜೊತೆಗೆ ಅಂತಿಮ ಪರೀಕ್ಷೆಯನ್ನು ಎದುರಿಸುವ ಭಯವನ್ನು ಹೊಗಲಾಡಿಸಲಾಗುತ್ತಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಡಾ. ಅಮರನಾಥ ಕೊರುಕೊಂಡಾ ತಿಳಿಸಿದರು.
ಅವರು ಮಂಗಳವಾರ ಕೇಂದ್ರೀಯ ವಿದ್ಯಾಲಯದಲ್ಲಿ ಪಾಲಕರ ಮತ್ತು ಶಿಕ್ಷಕರ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಪ್ರತಿ ತಿಂಗಳು ಪರೀಕ್ಷೆ ಎದುರಿಸುವುದರಿಂದ ಅವರ ಕೈಬರಹ ಶುದ್ಧವಾಗಿ ನಿಗದಿತ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ವಿಶ್ವಾಸ ಬೆಳೆಯುತ್ತದೆ. ಇದು ವಾರ್ಷಿಕ ಪರೀಕ್ಷೆಯಲ್ಲಿ ಅನುಕೂಲವಾಗುವುದು ಎಂದರು.
ಕೇಂದ್ರೀಯ ವಿದ್ಯಾಲಯದಿಂದ ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ತರಗತಿಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಪಾಲಕರು ಸಹಕರಿಸಿ ಹೆಚ್ಚುವರಿ ತರಗತಿಗಳಿಗೆ ಮಕ್ಕಳನ್ನು ಕಳುಹಿಸಬೇಕು. ಮಕ್ಕಳು ಶೇ. 100ರಷ್ಟು ತರಗತಿಗಳಿಗೆ ಹಾಜರಾಗಿ ಶಾಲೆಯಲ್ಲಿ ನಡೆಸುವ ಯಾವುದೇ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳು ಮನೆಗೆ ಬಂದ ನಂತರ ಅವರ ಚಲನವಲನದ ಬಗ್ಗೆ ಪಾಲಕರು ನಿಗಾ ವಹಿಸಬೇಕೆಂದು ಪ್ರಾಂಶುಪಾಲರು ಮನವಿ ಮಾಡಿದರು.
ಮಕ್ಕಳು ಹೊಂದಿರುವ ಗುರಿಯನ್ನು ಸಾಧಿಸಲು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೆರಬಾರದು. ಈ ನಿಟ್ಟಿನಲ್ಲಿ ಮಕ್ಕಳ ಮತ್ತು ಪಾಲಕರ ಸಮಾಲೋಚನೆ ಕೈಗೊಳ್ಳಬೇಕಾಗಿದೆ. 10ನೇ ತರಗತಿಯಲ್ಲಿರುವ ಮಕ್ಕಳ ಜೊತೆಗೆ ಪಾಲಕರು ಕುಳಿತುಕೊಂಡು ಕಲಿಕೆಯಲ್ಲಿ ಮಕ್ಕಳಿಗಿರುವ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು. ಪಾಲಕರು ಮಕ್ಕಳ ಬೆಳವಣಿಗೆಯನ್ನು ಸದಾ ಗಮನಿಸಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ 6ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳ ಪಾಲಕರಿಗೆ ಮೊದಲನೇ ಅವಧಿಯ ಪರೀಕ್ಷೆಯ ಫಲಿತಾಂಶ ತಿಳಿಸಿದರು. ಸಭೆಯಲ್ಲಿ ಕೇಂದ್ರೀಯ ವಿದ್ಯಾಲಯದ ಸಂಸ್ಕøತ ಶಿಕ್ಷಕ ಡಾ. ಕೆ. ಕೃಷ್ಣಾ, ವಿಜ್ಞಾನ ಶಿಕ್ಷಕರಾದ ಪ್ರಿತಮ್ ಕುಮಾರ, ಗಣಪತಿ, ಹಿಂದಿ ಶಿಕ್ಷಕರಾದ ಗೌರಿಲಾಲ ಮೀನಾ, ಇಂಗ್ಲೀಷ ಶಿಕ್ಷಕಿ ಕಾವ್ಯ ಸೇರಿದಂತೆ ಎಲ್ಲ ವಿಷಯ ಹಾಗೂ ವರ್ಗಗಳ ಶಿಕ್ಷಕರು ಹಾಜರಿದ್ದರು.

ಕೊಡಗು ಜಿಲ್ಲೆಗೆ ದೇಣಿಗೆ ನೀಡುವ ಸಾಮಗ್ರಿಗಳ ವಿವರ
**********************************************
ಕಲಬುರಗಿ,ಆ.21.(ಕ.ವಾ)-ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಜಲ ಪ್ರವಾಹ ಉಂಟಾಗಿರುತ್ತದೆ. ಅಲ್ಲಿನ ಸಂತ್ರಸ್ಥರಿಗೆ ನೆರವು ನೀಡುವುದಕ್ಕಾಗಿ ಕಲಬುರಗಿ ಜಿಲ್ಲೆಯ ಸಾರ್ವಜನಿಕರು, ದಾನಿಗಳು, ಸಂಘ ಸಂಸ್ಥೆಯವರು, ಸ್ವಯಂ ಸೇವಕರು ದಿನನಿತ್ಯದ ಉಪಯೋಗಕ್ಕೆ ಬರುವ ಕೆಳಕಂಡ 21 ಸಾಮಗ್ರಿಗಳನ್ನು ದಾನದ ರೂಪದಲ್ಲಿ ನೀಡಬಹುದಾಗಿದೆ. ಇದಲ್ಲದೇ ನಗದು ರೂಪದಲ್ಲಿ ದಾನ ಮಾಡಲು ಇಚ್ಛಿಸುವವರು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಖಾತೆಗೆ ಹಣ ಜಮಾ ಮಾಡಬಹುದಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ದೇಣಿಗೆ ನೀಡುವ ಸಾಮಗ್ರಿಗಳ ವಿವರ: ಪ್ಲಾಸ್ಟಿಕ್ ಬಕೆಟ್ಸ್ ಮತ್ತು ಮಗ್ಸ್, ರೇನ್ ಕೋಟ್ಸ್, ಬೆಚ್ಚಗಿನ ಬಟ್ಟೆ ಮತ್ತು ದಿನನಿತ್ಯದ ಬಟ್ಟೆಗಳು, ಸ್ಲಿಪರ್ಸ್, ಗಂಬೂಟ್, ಗ್ಲೋವಸ್ ಮತ್ತು ಮಾಸ್ಕ್ಸ್, ಸ್ಯಾನಿಟರಿ ನ್ಯಾಪ್ಕಿನ್ಸ್ ಮತ್ತು ಡಾಯಪರ್ಸ್, ಪ್ಲಾಸ್ಟಿಕ್ ಚಾಪೆ, ಕೊಡೆ/ಛತ್ರಿ, ಬ್ಯಾಟರಿ, ಮಾಪ್ಸ್, ಸ್ಯಾನಿಟೈಜರ್ಸ್ ಮತ್ತು ಡೆಟಾಲ್, ಫಿನೈಲ್ ಕ್ಲೀನಿಂಗ್ ಲಿಕ್ವಿಡ್ಸ್, ಬ್ಲೀಚಿಂಗ್ ಪೌಡರ್ ಮತ್ತು ಇಂತಹ ಐಟಂಗಳು, ಸಾಬೂನು, ಶಾಂಪೂ ಮತ್ತು ಟೂತ್ ಪೇಸ್ಟ್, ಬ್ರಶ್, ಬಾಚಣಿಕೆ, ಅಡಿಗೆ ಪಾತ್ರೆಗಳು, ಮೇಣದ ಬತ್ತಿಗಳು ಮತ್ತು ಬೆಂಕಿ ಪೊಟ್ಟಣಗಳು, ಸ್ನಾನದ ಟಾವೆಲ್‍ಗಳು, ಮೇಲು ಹೊದಿಕೆ ಮತ್ತು ನೈಟಿಗಳು, ಅಂಟಿಸೆಫ್ಟೈಸ್ ಲೋಶನ್ ಮತ್ತು ಅಂಟಿ ಫಂಗಲ್ ಪೌಡರ್, ಅಡುಗೆ ಎಣ್ಣೆ, ಒಳ ಉಡುಪುಗಳು ಮತ್ತು ಸಾಮಾನು ಚೀಲಗಳು.
ಸಾಮಗ್ರಿಗಳನ್ನು ಪಡೆಯಲು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪರಿಣಿತರನ್ನು ಹಾಗೂ ನೋಡಲ್ ಅಧಿಕಾರಿಯಾಗಿ ನಿತ್ಯಾನಂದ ನಾರಾಯಣಸ್ವಾಮಿ ಅವರನ್ನು ನೇಮಿಸಲಾಗಿದೆ. ಇವರ ಮೊಬೈಲ್ ಸಂಖ್ಯೆ 9538543410 ಇದ್ದು, ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ಸಾರ್ವಜನಿಕರು, ದಾನಿಗಳು, ಸಂಘ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಯವರು ದಾನದ ರೂಪದಲ್ಲಿ ನೀಡುವಂತಹ ಸಾಮಗ್ರಿಗಳನ್ನು ಕಲಬುರಗಿ ಜಿಲ್ಲಾಧಿಕಾರಿಗಳ ಕೋಣೆ ಸಂಖ್ಯೆ 12ಕ್ಕೆ ತಂದು ಒಪ್ಪಿಸಿ ಸ್ವೀಕೃತಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ದೇಣಿಗೆ ಸಲ್ಲಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಕೆಳಕಂಡ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಬಹುದಾಗಿದೆ ಎಂದು ಸರ್ಕಾರ ಮನವಿ ಮಾಡಿದೆ. ಬ್ಯಾಂಕ್ ಖಾತೆಯ ವಿವರ ಇಂತಿದೆ. ಖಾತೆಯ ಹೆಸರು: ಅhieಜಿ ಒiಟಿisಣeಡಿ ಖeಟieಜಿ ಈuಟಿಜ ಓಚಿಣuಡಿಚಿಟ ಅಚಿಟಚಿmiಣಥಿ 2018, ಬ್ಯಾಂಕ್ ಹೆಸರು: S.ಃ.I ಃಚಿಟಿಞ (Sಣಚಿಣe ಃಚಿಟಿಞ oಜಿ Iಟಿಜiಚಿ). ಶಾಖೆ: ಗಿiಜhಚಿಟಿಚಿ Souಜhಚಿ ಃಡಿಚಿಟಿಛಿh, ಖಾತೆ ಸಂಖ್ಯೆ : 37887098605, ಐ.ಎಫ್.ಎಸ್.ಸಿ. ಕೋಡ್: SಃIಓ0040277 ಎಂ.ಐ.ಸಿ.ಆರ್. ಸಂಖ್ಯೆ : 560002419.

ಆಗಸ್ಟ್ 27ರಂದು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
****************************************************************
ಕಲಬುರಗಿ,ಆ.21.(ಕ.ವಾ)-ಕಲಬುರಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಹಯೋಗದಲ್ಲಿ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಾರಂಭವನ್ನು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೇ ಆಗಸ್ಟ್ 27ರಂದು ಸೋಮವಾರ ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸುವರು.
ಈ ಸಮಾರಂಭದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಮ್.ವಾಯ್. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ, ಸುಭಾಷ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಭೋದ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಕಲಬುರಗಿ ಆರ್ಯ ಈಡೀಗ ಸಮಾಜದ ಜಿಲ್ಲಾ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಮೇಶ ಪಿ. ಗುತ್ತೇದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಹಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಣಮಂತ ಬಿ. ಗುತ್ತೇದಾರ್ ವಿಶೇಷ ಉಪನ್ಯಾಸ ನೀಡುವರು.
ದಿನಾಚರಣೆಯ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆ ಜರುಗುವುದು.

ಎ.ಸಿ.ಬಿ. ಅಧಿಕಾರಿಗಳಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ
**********************************************************
ಕಲಬುರಗಿ,ಆ.21.(ಕ.ವಾ)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಅಫಜಲಪುರ ತಾಲೂಕುಗಳಿಗೆ ಈ ಕೆಳಕಂಡ ದಿನಾಂಕಗಳಂದು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅರಕ್ಷಕ ಉಪಾಧೀಕ್ಷಕರು ತಿಳಿಸಿದ್ದಾರೆ.
ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಡಿಎಸ್‍ಪಿ ಜೇಮ್ಸ್ ಮಿನೇಜಸ್ ಅವರು ಇದೇ ಆಗಸ್ಟ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಆಳಂದ ತಾಲೂಕಿಗೆ ಸಂಬಂಧಿಸಿದಂತೆ ಆಳಂದ ತಾಲೂಕು ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಅವರ ಮೊಬೈಲ್ ಸಂ. 9480806240 ಇರುತ್ತದೆ.
ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಹಾಂತೇಶ ಪಾಟೀಲ ಅವರು ಆಗಸ್ಟ್ 24ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಅಫಜಲಪುರ ತಾಲೂಕಿಗೆ ಸಂಬಂಧಿಸಿದಂತೆ ಅಫಜಲಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ಅವರ ಮೊಬೈಲ್ ಸಂಖ್ಯೆ 9480806309 ಇರುತ್ತದೆ.

ಸ್ಪೋಕನ್ ಇಂಗ್ಲೀಷ-ಕಂಪ್ಯೂಟರ್ ತರಬೇತಿ: ಅರ್ಜಿ ಆಹ್ವಾನ
*****************************************************
ಕಲಬುರಗಿ,ಆ.21.(ಕ.ವಾ)-ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ನುರಿತ ಉಪನ್ಯಾಸಕರಿಂದ ಸ್ಪೋಕನ್ ಇಂಗ್ಲೀಷ್ (ಸಾಫ್ಟ್ ಸ್ಕಿಲ್) ಕಂಪ್ಯೂಟರ್ ಉಚಿತ ತರಬೇತಿಯನ್ನು ಇದೇ ಆಗಸ್ಟ್ 24 ರಿಂದ 31ರವರೆಗೆ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ರಸ್ತೆಯ ಕೈಗಾರಿಕಾ ತರಬೇತಿ ಕೇಂದ್ರ ಆವರಣದಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ತರಬೇತಿಯನ್ನು ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ನೀಡಲಾಗುತ್ತಿದೆ. ಆಸಕ್ತ ಯುವಕ, ಯುವತಿಯರು ಈ ಉಚಿತ ತರಬೇತಿಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

ಆಗಸ್ಟ್ 23ರಂದು ಸ್ನಾತಕೋತ್ತರ ಪ್ರವೇಶಾತಿಯ ಅಂತಿಮ ಸುತ್ತಿನ ಪ್ರವೇಶಾತಿ
********************************************************************
ಕಲಬುರಗಿ,ಆ.21.(ಕ.ವಾ)-ಗುಲಬರ್ಗಾ ವಿಶ್ವವಿದ್ಯಾಲಯದ 2018-19 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪ್ರವೇಶಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಸುತ್ತನ ಪ್ರವೇಶಾತಿಯು ಇದೇ ಆಗಸ್ಟ್ 23ರಂದು ಸಂಬಂಧಪಟ್ಟ ಸ್ನಾತಕೋತ್ತರ ಅಧ್ಯಯನ ವಿಭಾಗ ಸ್ನಾತಕೋತ್ತರ ಕೇಂದ್ರ ರಾಯಚೂರ, ಬೀದರನಲ್ಲಿ ಹಾಗೂ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಜರುಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಖಾಲಿಯಿರುವ ಸೀಟುಗಳ ಕುರಿತು ಮಾಹಿತಿಯನ್ನು ಸಂಬಂಧಿಸಿದ ವಿಭಾಗದ ಮುಖ್ಯಸ್ಥರು ಹಾಗೂ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ತಿತಿತಿ.gug.ಚಿಛಿ.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.

ವಿವಿಧ ವೃತ್ತಿಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ
******************************************************
ಕಲಬುರಗಿ,ಆ.21.(ಕ.ವಾ)-ಕಲಬುರಗಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಡಿ.ಎಂ.ಎಫ್. ಅಡಿಯಲ್ಲಿ ಕೆಳಕಂಡ ವೃತ್ತಿಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ 18 ರಿಂದ 35 ವರ್ಷದೊಳಗಿನ ಕಲಬುರಗಿ ಜಿಲ್ಲೆಯ ಆಸಕ್ತಿಯುಳ್ಳ ಅರ್ಹ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಲೈಟ್ ಮೋಟಾರ ವಹಿಕಲ್ ಡ್ರೈವಿಂಗ್ ಟ್ರೈನಿಂಗ್‍ಗಾಗಿ 10ನೇ ತರಗತಿಯಲ್ಲಿ ಉತ್ತೀರ್ಣ/ಅನುತ್ತೀರ್ಣರಾಗಿರಬೇಕು. ಹೇವಿ ಮೋಟಾರ ಡ್ರೈವಿಂಗ್ ಟ್ರೇನಿಂಗ್‍ಗಾಗಿ ಲಘು ವಾಹನ ಚಾಲನಾ (ಎಲ್.ಎಂ.ವಿ.) ತರಬೇತಿ ಪಡೆದು ಕನಿಷ್ಠ ಒಂದು ವರ್ಷ ಆಗಿರಬೇಕು. ಸಿಎನ್‍ಸಿ ಟರ್ನಿಂಗ್, ಮಿಲ್ಲಿಂಗ್, ಟೂಲ್ ಡಿಸೈನಿಂಗ್ ತರಬೇತಿಗೆ ಡಿಪ್ಲೋಮಾ (ಮೆಕ್ಯಾನಿಕಲ್, ಆಟೋಮೋಬೈಲ್), ಐಟಿಐ (ಫಿಟ್ಟರ್, ಟರ್ನನ್, ಮಶಿನಿಷ್ಟ್) ವಿದ್ಯಾರ್ಹತೆ ಹೊಂದಿರಬೇಕು. ಅಡ್ವಾಸ್ಡ್ ವೆಲ್ಡಿಂಗ್ ಟೆಕ್ನಾಲಾಜಿಸ್ ತರಬೇತಿಗಾಗಿ 10 ತರಗತಿ, ಐಟಿಐ (ವೆಲ್ಡಿಂಗ್) ಪಾಸಾಗಿರಬೇಕು. ಮೋಟಾರ ಪಂಪ್ ಮೆಂಟೆನೆನ್ಸ್ ತರಬೇತಿಗೆ 10ನೇ ತರಗತಿ, ಐಟಿಐ, ಪಿಯುಸಿ ಪಾಸಾಗಿರಬೇಕು. ಇಂಜೆಕ್ಷನ್ ಮೋಡಲಿಂಗ್ ಮಶೀನ್ ಆಪರೇಟರ್ ಟ್ರೈನಿಂಗ್ ಪ್ರೊಗ್ರಾಮ್ ತರಬೇತಿಗಾಗಿ 10ನೇ ತರಗತಿ ಪಾಸಾಗಿರಬೇಕು.
ಹೈನುಗಾರಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ ತರಬೇತಿಗಳನ್ನು ಕಲಬುರಗಿಯ ಪಶು ವೈದ್ಯಕೀಯ ಪರಿವೀಕ್ಷಕರ ತರಬೇತಿ ಕೇಂದ್ರ/ ಕಿಟಸರ್ಡ್‍ದಲ್ಲಿ ತರಬೇತಿ ನೀಡಲಾಗುತ್ತದೆ. ಜೆಸಿಬಿ ವಹಿಕಲ್ ಡ್ರೈವಿಂಗ್ ಟ್ರೇನಿಂಗ್ ತರಬೇತಿಗಾಗಿ ಭಾರಿ ವಾಹನ ಚಾಲನಾ (ಹೆಚ್.ಎಂ.ವಿ.) ಪರವಾನಿಗೆ ಹೊಂದಿರಬೇಕು. ಬ್ಯೂಟಿ ಪಾರ್ಲರ್ ಮ್ಯಾನೇಜ್‍ಮೆಂಟ್ ತರಬೇತಿಗಾಗಿ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸೇಡಂ, ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಹ ನಿರುದ್ಯೋಗಿ ಯುವಕ, ಯುವತಿಯರು ನಿಗದಿತ ಅರ್ಜಿ ನಮೂನೆಗಳನ್ನು ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಎಂ.ಎಸ್.ಕೆ. ಮಿಲ್ ರಸ್ತೆ, ಜೇವರ್ಗಿ ಕ್ರಾಸ್, ಕಲಬುರಗಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ 2018ರ ಸೆಪ್ಟೆಂಬರ್ 5 ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ತರಬೇತಿ ನೀಡುವ ಸಂಸ್ಥೆ ಹೆಸರು, ತರಬೇತಿ ಅವಧಿ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-223988, 221637ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಕೃಷಿ ಸಂಸ್ಕರಣ ಘಟಕದಡಿ ತಾಡಪಾಲಿನ ವಿತರಣೆ: ಅರ್ಜಿ ಆಹ್ವಾನ
**********************************************************
ಕಲಬುರಗಿ,ಆ.21.(ಕ.ವಾ)-ಕೃಷಿ ಭಾಗ್ಯ ಯೋಜನೆಯ 2018-19ನೇ ಸಾಲಿನ ಕೃಷಿ ಸಂಸ್ಕರಣ ಘಟಕದಡಿ ತಾಡಪಾಲಿನ ವಿತರಣಾ ಕಾರ್ಯಕ್ರಮವಿರುತ್ತದೆ. ಇದಕ್ಕಾಗಿ ರೈತ ಬಾಂಧವರು ಇದೇ ಆಗಸ್ಟ್ 24 ರಿಂದ 31ರವರೆಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕೆಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೇವಣಗಿ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 3ರಂದು ಬೆಳಿಗ್ಗೆ 10.30 ಗಂಟೆಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರÀಗಳಲ್ಲಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆಮಾಡಿಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು News Date: 21-8-2018

ಎಲ್ಲಾ ಲೇಖನಗಳು ಆಗಿದೆ News Date: 21-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 21-8-2018 ಲಿಂಕ್ ವಿಳಾಸ https://dekalungi.blogspot.com/2018/08/news-date-21-8-2018.html

Subscribe to receive free email updates:

0 Response to "News Date: 21-8-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ