ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು

ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು
ಲಿಂಕ್ : ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು

ಓದಿ


ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು


ಕೊಪ್ಪಳ ಆ. 01 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅನೇಕ ಬಾಲ್ಯವಿವಾಹಗಳನ್ನು ತಡೆಗಟ್ಟುತ್ತಿದ್ದರೂ ಸಹ, ಕದ್ದು-ಮುಚ್ಚಿ ಹಳ್ಳಿ ಭಾಗಗಳಲ್ಲಿ ಬಾಲ್ಯವಿವಾಹ ನಡೆಸುವ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಆಫೀಸರ್ ಶಿವಲೀಲಾ ವನ್ನೂರ ಅವರು ಹೇಳಿದರು.
     "ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ತಾಲೂಕಿನ ವಣಬಳ್ಳಾರಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಾಲ್ಯವಿವಾಹ ನಿಷೇಧ ಕಾಯ್ದೆ – 2006ರ ಅನ್ವಯ 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ವಿವಾಹವನ್ನು ಬಾಲ್ಯವಿವಾಹವೆಂದು ಕರೆಯುತ್ತಾರೆ.  ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ.  ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಜಿಲ್ಲೆಯಲ್ಲಿ ಅನೇಕ ಬಾಲ್ಯವಿವಾಹಗಳನ್ನು ತಡೆಯುವ ಕಾರ್ಯ ಮಾಡುತ್ತಿದೆ.  ಆದಾಗ್ಯೂ ಸಹ ಕದ್ದು-ಮುಚ್ಚಿ ಹಳ್ಳಿ ಭಾಗಗಳಲ್ಲಿ ಬಾಲ್ಯವಿವಾಹಗಳು ಇನ್ನೂ ನಡೆಯುತ್ತಿವೆ.  ಇಂತಹ ಮೌಢ್ಯತೆ ದೂರವಾಗಿಲ್ಲದಿರುವುದು ವಿಷಾದಕರ.  ಬಾಲ್ಯ ವಿವಾಹ ಪದ್ಧತಿಯಿಂದಾಗಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತದೆ.  ಆದ್ದರಿಂದ ಬಾಲ್ಯವಿವಾಹ ನಿಷೇಧ ಕಾಯ್ದೆಯ ವಿರುದ್ಧವಾಗಿ ಯಾರೂ ಬಾಲ್ಯವಿವಾಹಗಳನ್ನು ಮಾಡಬೇಡಿ,  ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿಕೊಡಿ.  ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಎಲ್ಲಿಯಾದರೂ ಬಾಲ್ಯ ವಿವಾಹವಾಗುತ್ತಿದ್ದರೆ ಮಕ್ಕಳ ರಕ್ಷಣಾ ಘಟಕ, ಅಥವಾ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಆಫೀಸರ್ ಶಿವಲೀಲಾ ವನ್ನೂರ ಮನವಿ ಮಾಡಿದರು.
      ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯ ಹಿರೇಮಠ ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತು ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ವಯಸ್ಕರು ಲೈಂಗಿಕವಾಗಿ ದೌರ್ಜನ್ಯಕ್ಕೊಳಪಡಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ.  ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 (ಪಿ.ಓ.ಸಿ.ಎಸ್.ಓ-2012) ರ ಕಾಯ್ದೆಯಡಿಯಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯಗಳನ್ನು ಸಹ ತ್ರೀವ್ರತರ ಅಪರಾಧವೆಂದು ಪರಿಗಣಿಸಿ ಹೆಚ್ಚಿನ ಶಿಕ್ಷೆಯನ್ನು ವಿಧಿಸಲಾಗುತ್ತಿದೆ.  ಕ್ರಿಮಿನಲ್ ಅಮೆಂಡಮೆಂಟ ಲಾ-2018ರನ್ವಯ  12 ವರ್ಷದೊಳಗಿನ ಬಾಲಕಿಯ ಮೇಲಿನ ಲೈಂಗಿಕ ಹಲ್ಲೆ ಅಥವಾ ಸಾಮೂಹಿಕ ಹಲ್ಲೆಗೆ ಗರಿಷ್ಟ 20 ವರ್ಷದಿಂದ ಜೀವಾವಧಿ ಜೈಲು ಅಥವಾ ಮರಣದಂಡನೆಯನ್ನು ವಿಧಿಸಬಹುದಾಗಿದೆ.  16 ವರ್ಷದೊಳಗಿನ ಬಾಲಕಿಯ ಮೇಲಿನ ಲೈಂಗಿಕ ಹಲ್ಲೆಗೆ  ಕನಿಷ್ಠ 20 ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ 18 ವರ್ಷಕ್ಕೂ ಮೇಲ್ಪಟ್ಟದ ಮೇಲಿನ ಲೈಂಗಿಕ  ಹಲ್ಲೆಗೆ 20 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.  ಈ ಕಾಯ್ದೆಯನ್ನು ದಾಖಲಾದ ಪ್ರಕರಣಗಳ ವಿಚಾರಣೆಯನ್ನು 60 ದಿನದೊಳಗಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
     ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಯಮನಮ್ಮ ಮಾತನಾಡಿ, ಸಂಕಷ್ಠದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯನ್ನು ಆರಂಬಿಸಿದ್ದು ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ 1098 ಸಂಖ್ಯೆಗೆ ಕರೆಯನ್ನು ಮಾಡಿ ಮಾಹಿತಿಯನ್ನು ನೀಡಿ, ಅಂತಹ ಮಕ್ಕಳ ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಸಮಿತಿಯಿಂದ ಅಗತ್ಯ ಪುರ್ನವಸತಿಯನ್ನು ಕಲ್ಪಸಲಾಗುತ್ತದೆ ಎಂದರು. 
        ಕಾರ್ಯಕ್ರಮದಲ್ಲಿ ವನಬಳ್ಳಾರಿ ಗ್ರಾ.ಪಂ. ಸದಸ್ಯ ಗಿರಿಯಪ್ಪ, ಎ.ಪಿ.ಎಮ್.ಸಿ ಸದಸ್ಯೆ ಗೌರಮ್ಮ, ಮುನಿರಾಬಾದ ಪೊಲೀಸ್ ಠಾಣೆಯ ಬಾಳಪ್ಪ, ಶಾಲಾ ಮುಖ್ಯೋಪಾಧ್ಯಯರಾದ ಗವಿಸಿದ್ಧಪ್ಪ ಕೆ. ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಭಾಗವಹಿಸಿದ್ದರು.  ಪ್ರತಿಭಾ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.


ಹೀಗಾಗಿ ಲೇಖನಗಳು ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು

ಎಲ್ಲಾ ಲೇಖನಗಳು ಆಗಿದೆ ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು ಲಿಂಕ್ ವಿಳಾಸ https://dekalungi.blogspot.com/2018/08/blog-post_99.html

Subscribe to receive free email updates:

0 Response to "ಬಾಲ್ಯ ವಿವಾಹ ಮೌಢ್ಯತೆ ಇನ್ನೂ ದೂರವಾಗಿಲ್ಲದಿರುವುದು ವಿಷಾದಕರ : ಶಿವಲೀಲಾ ವನ್ನೂರು"

ಕಾಮೆಂಟ್‌‌ ಪೋಸ್ಟ್‌ ಮಾಡಿ