ಶೀರ್ಷಿಕೆ : ಯಾಕೆ ಅಲೆವೇ ನೀ ಮನವೇ ?
ಲಿಂಕ್ : ಯಾಕೆ ಅಲೆವೇ ನೀ ಮನವೇ ?
ಯಾಕೆ ಅಲೆವೇ ನೀ ಮನವೇ ?
ಪ್ರವೀಣಕುಮಾರ್ .ಗೋಣಿ
ಪ್ರೀತಿಯೊಂದೇ ಅವನ
ತಲುಪಲು ಇರುವ
ಹಾದಿಯಾಗಿರುವಾಗ ಯಾಕೇ
ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .
ನಿನ್ನೊಳಗೆ ಅವನೇ ಬಿತ್ತಿದ
ಪ್ರೀತಿಯ ಬೀಜ ಇರುವಾಗ
ಅದಕ್ಕೆ ನೀರೆರೆದು ಮರವಾಗಿ ಬೆಳೆಸೋ
ಅದ್ಯಾವ ವಿವರಣೆಯ ಗೋಜಿಲ್ಲದೆ
ಬಯಕೆಗಳ ಹಂಗಿಲ್ಲದೆ
ಅರಳಿ ಪರಿಮಳ ಬೀರುವ ಹೂವಂತೆ
ನಿನ್ನ ನೀ ಅರಳಿಸಿಕೊಂಡು ನಲಿಯೋ
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .
ನಮೂನೆಗಳೇ ಇಲ್ಲದ ಮೂಲ
ಗಂಗೆಯಂತಹುದದು ಪ್ರೀತಿ
ಸಕಲ ನದಿಗಳೆಲ್ಲ ಹರಿದು
ಸಾಗರದೊಳಗೆ ಬೆರೆತು ಒಂದಾಗುವಂತೆ
ನಿನ್ನ ತನುಮನದ ಕಣ ಕಣದೊಳಗೆ
ಸ್ಪುರಿಸುವ ಪ್ರೀತಿಯನ್ನ ಅವನ ಸಾಗರದೊಳಗೆ
ಅವಿಭಕ್ತಗೊಳಿಸಿ ಕೊಳ್ಳುವುದ ಮರೆತು
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .
ಹೀಗಾಗಿ ಲೇಖನಗಳು ಯಾಕೆ ಅಲೆವೇ ನೀ ಮನವೇ ?
ಎಲ್ಲಾ ಲೇಖನಗಳು ಆಗಿದೆ ಯಾಕೆ ಅಲೆವೇ ನೀ ಮನವೇ ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಯಾಕೆ ಅಲೆವೇ ನೀ ಮನವೇ ? ಲಿಂಕ್ ವಿಳಾಸ https://dekalungi.blogspot.com/2018/08/blog-post_91.html
0 Response to "ಯಾಕೆ ಅಲೆವೇ ನೀ ಮನವೇ ?"
ಕಾಮೆಂಟ್ ಪೋಸ್ಟ್ ಮಾಡಿ