ಶೀರ್ಷಿಕೆ : ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ
ಲಿಂಕ್ : ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ
ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ
ಕೊಪ್ಪಳ ಆ. 06 (ಕರ್ನಾಟಕ ವಾರ್ತೆ): ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ತಾಯಿಯ ಎದೆಹಾಲು ಅಮೃತವಾಗಿದೆ ಎಂದು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜಂಬಯ್ಯ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ಇವರ ಸಹಯೋಗದಲ್ಲಿ ಭಾಗ್ಯನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ “26ನೇ ಜಾಗತಿಕ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಆಗಷ್ಟ್ 1 ರಿಂದ 07 ರವರೆಗೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹಾಗೂ ಎದೆ ಹಾಲು ಉಣಿಸುವುದನ್ನು ಜನಪ್ರೀಯಗೊಳಿಸುವುದು ಈ ಸಪ್ತಾಹದ ಉದ್ದೇಶವಾಗಿದೆ. ಈ ವರ್ಷದ ಘೋಷಣೆ “ಜೀವನದ ಬುನಾದಿಯೇ ಸ್ತನ್ಯಪಾನ” ವಾಗಿದೆ. ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ವಾಗಿದ್ದು, ಮೊದಲ 06 ತಿಂಗಳ ಕಾಲ ಮಗುವಿಗೆ ಎದೆಹಾಲು ಬಿಟ್ಟು ಎನನ್ನೂ ನೀಡಬಾರದು. ಇದು ಜಗತ್ತಿನ ಎಲ್ಲ ವೈದ್ಯರ ತಾಯಿಂದಿರ ಹೇಳುವ ಮಾತು. ಇದರಿಂದ ತಾಯಿಯ ಎದೆಹಾಲಿನ ಮಹತ್ವ ಎಷ್ಟೇಂಬದು ಅರಿವುವಾಗುತ್ತದೆ. ಮಗು ಹುಟ್ಟಿದ ಅರ್ಧ ಗಂಟೆಯಿಂದ ಸುಮಾರು 2-3 ವರ್ಷಗಳ ಕಾಲ ಎದೆಹಾಲು ಉಣಿಸಬಹುದು. ಆದರೆ ಮೊದಲ 06 ತಿಂಗಳ ಕಾಲ ಎದೆಹಾಲು ಮಾತ್ರ ಕುಡಿಸಬೇಕು. ತಾಯಿಯ ಎದೆಹಾಲು ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಎದೆಹಾಲಿನಲ್ಲಿರುತ್ತದೆ. ಮಗುವಿಗೆ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರ ಇದಾಗಿದೆ. ಹೆರಿಗೆಯಾದ 2-3 ದಿನದಲ್ಲಿ ಮೊದಲ ಬರುವ ಗಿಣ್ಣದ ಹಾಲಿನಲ್ಲಿ “ಕೋಲೆಸ್ಟ್ರಾಂ” ಎಂಬ ರೋಗನಿರೋಧಕ ಶಕ್ತಿ ಹೆಚ್ಚಿದ್ದು ಮಗುವಿಗೆ ಮುಂದೆ ಬರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟತ್ತದೆ. ತಾಯಿಯ ಎದೆಹಾಲು ಕುಡಿಸುವುದರಿಂದ ತಾಯಿ ಮಗುವಿನ ಬಾಂಧವ್ಯ, ಪ್ರೀತಿ, ವಾತ್ಸಲ್ಯ ಹೆಚ್ಚಾಗುತ್ತದೆ. ಎದೆಹಾಲು ಕುಡಿಯುವ ಮಕ್ಕಳಲ್ಲಿ ಅಧಿಕ ಬೊಜ್ಜು ಬೆಳೆಯುವುದಿಲ್ಲ ಇದರಿಂದಾಗಿ ಅವರು ಮದು ಮೇಹ, ಅಸ್ತಮ ಹಾಗೂ ಇನ್ನೀತರ ಸೋಂಕುಗಳಿಂದ ರಕ್ಷಣೆ ಪಡೆಯುತ್ತಾರೆ. ಎಂದು ಜಿಲ್ಲಾ ಡಾ. ಜಂಬಯ ಅವರು ಹೇಳಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕಾನಂದ ಮಳಗಿ ಮಾತನಾಡಿ, ತಾಯಿಯ ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ತಾಯಿಯ ಎದೆಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಇರುತ್ತವೆ. ಎದೆಹಾಲು ಕುಡಿಸುವುದರಿಂದ ತಾಯಿಗೆ ಅಧಿಕ ಬೊಜ್ಜು ಕಡಿಮೆಯಾಗಿ ಹಾಗೂ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ಇದರಿಂದ ಎದೆ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಇತರೇ ಖಾಯಿಲೆಗಳು ತಡೆಗಟ್ಟಬಹುದು ತಾಯಿಯ ಎದೆಹಾಲು ಮಗುವಿನ ಉಷ್ಣತೆ ಕಾಪಾಡುತ್ತದೆ. ನವಜಾತ ಶಿಶುವಿನಲ್ಲಿ ಕಂಡುಬರಬಹುದಾದ ಕಾಮಲೆ, ಉಸಿರಾಟಾದ ತೊಂದರೆ, ಅಲರ್ಜಿ, ಉಬ್ಬಸ ಇವುಗಳಿಂದ ರಕ್ಷಿಸುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಅವರು "ಎದೆಹಾಲಿನ ಮಹತ್ವ" ಕುರಿತು ಜಾನಪದ ಗೀತೆ ಹಾಡಿ ಗರ್ಬಿಣಿ ಮತ್ತು ಬಾಣಂತಿಯರಿಗೆ ಜಾಗೃತಿ ಮೂಡಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ವೈದ್ಯಾಧಿಕಾರಿ ಡಾ. ಪ್ರಶಾಂತ, ಹಿರಿಯ ಆರೋಗ್ಯ ಸಹಾಯಕಿ ರೋಜಾ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ಗರ್ಭಿಣಿಯರು, ತಾಯಿಂದಿರು, ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ರಾಜಶೇಖರ ಸ್ವಾಗತಿಸಿದರು, ಉದಯಕುಮಾರ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ಹೀಗಾಗಿ ಲೇಖನಗಳು ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ
ಎಲ್ಲಾ ಲೇಖನಗಳು ಆಗಿದೆ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ ಲಿಂಕ್ ವಿಳಾಸ https://dekalungi.blogspot.com/2018/08/blog-post_71.html
0 Response to "ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತವಾಗಿದೆ : ಡಾ. ಜಂಬಯ್ಯ"
ಕಾಮೆಂಟ್ ಪೋಸ್ಟ್ ಮಾಡಿ