ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ

ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ
ಲಿಂಕ್ : ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ

ಓದಿ


ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ


ಕೊಪ್ಪಳ ಆ. 25 (ಕರ್ನಾಟಕ ವಾರ್ತೆ): ಉಳ್ಳಾಗಡ್ಡಿಯಲ್ಲಿ ಅಧಿಕ ಪ್ರಮಾಣದ ಇಳುವರಿ ಪಡೆದುಕೊಳ್ಳಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವತಿಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
     ಈರುಳ್ಳಿಯು ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ತರಕಾರಿಯಂತೆಯೂ, ಸಾಂಬಾರ ಪದಾರ್ಥದಂತೆಯೂ ಎಲ್ಲಾ ಹಂತಗಳಲ್ಲಿ ಉಪಯೋಗಿಸಲಾಗುವುದು.  ಉತ್ತರ ಕರ್ನಾಟಕದಲ್ಲಿ ಇದನ್ನು ಮುಖ್ಯ ಬೆಳೆಯಾಗಿಯೂ ಹಾಗೂ ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ.  ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದ್ದು, ಈ ಕುರಿತು ಕೆಲವು ಸಲಹೆಗಳನ್ನು ನೀಡಲಾಗಿದೆ.
ಸಸ್ಯ ಪ್ರಚೋದಕಗಳ ಬಳಕೆ : ಬೀಜ ಬಿತ್ತಿದ 50 ದಿನಗಳ ನಂತರ ಮಿರಾಕ್ಯುಲಾನ್ 2000 ಪಿ.ಪಿ.ಎಂ (ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ) ಸಸ್ಯ ಸಂವರ್ಧಕವನ್ನು ಸಿಂಪರಣೆ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ಈರುಳ್ಳಿ-ಹಿಂಗಾರಿ ಜೋಳ/ ಕಡಲೆ ಸರದಿ ಬೆಳೆ ಪದ್ದತಿ : ಮಳೆಯಾಶ್ರಯದಲ್ಲಿ ಈರುಳ್ಳಿಯನ್ನು ಮುಂಗಾರು ಹಂಗಾಮಿನಲ್ಲಿ 45 ಸೆ.ಮಿ ಅಂತರದಲ್ಲಿ ಕೂರಿಗೆಯಿಂದ ಬಿತ್ತನೆ ಮಾಡಿ ಬೆಳೆ ಮಾಗುವ ಹಂತದ ಮೊದಲು, ಸರದಿ ಬೆಳೆಯಾಗಿ ಹಿಂಗಾರಿ ಜೋಳ/ಕಡಲೆಯನ್ನು ಈರುಳ್ಳಿ ಸಾಲುಗಳ ಮಧ್ಯ ಬಿತ್ತನೆ ಮಾಡುವುದರಿಂದ ಹೆಚ್ಚು ಆದಾಯ ಪಡೆಯಬಹುದು.
ಸೂಕ್ತ ಸಸ್ಯ ಸಂರಕ್ಷಣೆ : ಥ್ರ್ರಿಪ್ಸ್ ನುಶಿ - ಫಿಪ್ರೊನಿಲ್ 5 ಎಸ್.ಸಿ. 1 ಮಿ.ಲೀ. ಅಥವಾ 0.2 ಗ್ರಾಂ ಅಸಿಟಮಿಪ್ರಿಡ್ ಅಥವಾ 1.7 ಮಿ.ಲೀ ಡೈಮಿಥೋಯೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಕತ್ತರಿಸುವ ಹುಳುಗಳು - ಈ ಕೀಟದ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ 0.15 ಮಿ.ಲೀ ಕ್ಲೊರಾಮಟ್ರಿನಿಲಿಪ್ರೊಲ್ 18.5 ಎಸ್.ಸಿ. ಅಥವಾ 0.12 ಮಿ.ಲೀ. ಸ್ಪೈನೋಸ್ಯಾಡ್ 45 ಎಸ್.ಸಿ. ಅಥವಾ 2 ಮಿ.ಲೀ. ಕ್ಲೋರ್ಪೈರಿಫಾಸ್ ಬೆರೆಸಿ ಗಿಡದ ಸುತ್ತಲೂ ತೋಯಿಸಬೇಕು. 
ನೇರಲೆ ಎಲೆ ಮಚ್ಚೆರೋಗ : ಪ್ರತಿ ಕಿ.ಗ್ರಾಂ ಬೀಜವನ್ನು 5 ಗ್ರಾಂ ಸುಡೋಮೋನಾಸ್ ಪ್ಲೂರೋಸೆನ್ಸ್ ನಿಂದ ಉಪಚರಿಸಬೇಕು.  ಬಿತ್ತಿದ ಮೂರು, 9 ಮತ್ತು 11 ವಾರಗಳ ನಂತರ 2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲ್ಯೂ.ಪಿ  ಅಥವಾ 1 ಮಿ.ಲಿ ಡೈಪೆನಕೊನಜೋಲ್ 25 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ರೋಗ ಕಂಡು ಬಂದಾಗ ಸಿಂಪಡಿಸಬೇಕು.  15 ದಿನಗಳ ನಂತರ 5 ಗ್ರಾಂ ಸುಡೋಮೋನಾಸ್ ಪ್ಲೂರೋಸೆನ್ಸ್ ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು.  ರೋಗ ಲಕ್ಷಣಗಳು ಮತ್ತೆ ಕಂಡು ಬಂದಲ್ಲಿ 1 ಮಿ.ಲಿ ಡೈಫೆನ್ ಕೊನಜೋಲ್ 25 ಇ.ಸಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. 
    ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪಿ.ಆರ್. ಬದರಿಪ್ರಸಾದ್ ಮೊ.ಸಂ. 9900145705 ಹಾಗೂ ಎಂ. ಬಿ. ಪಾಟೀಲ ಮೊ.ಸಂ. 9480696319, ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ

ಎಲ್ಲಾ ಲೇಖನಗಳು ಆಗಿದೆ ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2018/08/blog-post_56.html

Subscribe to receive free email updates:

0 Response to "ಉಳ್ಳಾಗಡ್ಡಿಯಲ್ಲಿ ಅಧಿಕ ಇಳುವರಿಗಾಗಿ ಆಧುನಿಕ ತಂತ್ರಜ್ಞಾನ ಸೂಕ್ತ : ರೈತರಿಗೆ ಸಲಹೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ