ಶೀರ್ಷಿಕೆ : ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ
ಲಿಂಕ್ : ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ
ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ

ಕೊಪ್ಪಳ ಆ. 14 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ಸೌಲಭ್ಯ ಪಡೆದು ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿರುವ, ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ರೈತ ಬಸವರಾಜ ಬೋಳಾಡೆಪ್ಪ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ನವಲಿ ಗ್ರಾಮದ, ಬಸವರಾಜ ಈರಪ್ಪ ಬೋಳಾಡೆಪ್ಪ ಅವರು ಕಳೆದ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಕೃಷಿ ಬೆಳೆಗಳಾದ ಶೇಂಗಾ, ಮೆಕ್ಕೆ ಜೋಳ ಬೆಳೆಯುತ್ತಾರಲ್ಲದೇ, ತೋಟಗಾರಿಕೆ ಬೆಳೆಗಳಾದ ತರಕಾರಿಗಳನ್ನು ಬೆಳೆಯುತ್ತಾ ಬಂದಿದ್ದಾರಾದರೂ ಹೆಚ್ಚಿನ ಲಾಭ ಗಳಿಸಿರಲಿಲ್ಲ. ತರಕಾರಿಗಳಿಂದ ಲಾಭ ಗಳಿಸಿದ್ದರೂ ಬೆಲೆ ಕುಸಿತ, ಮಾರುಕಟ್ಟೆಯ ಏರು ಪೇರಿನಿಂದಾಗಿ ಲಾಭದಾಯಕ ಆದಾಯ ಬಂದಿರಲಿಲ್ಲ. ತೋಟಗಾರಿಕೆ ಇಲಾಖೆ ಜೊತೆ ಸತತ ಸಂಪರ್ಕ ಇಟ್ಟುಕೊಂಡಿರುವ ರೈತ ಬಸವರಾಜ ರವರು ಹೊಸದೇನಾದರೂ ಬೆಳೆಯಿಂದ ಹೆಚ್ಚಿನ ಲಾಭ ಮಾಡಿಕೊಳ್ಳುವ ಬಗ್ಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ದುರ್ಗಾಪ್ರಸಾದ ರೊಡನೆ ಚರ್ಚೆ ಮಾಡಿದಾಗ ಬಿಡಿ ಹೂವಿನ ಬೆಳೆಗಳಿಗೆ ಇಲಾಖೆಯಲ್ಲಿ ಸಹಾಯಧನ ಇರುವುದನ್ನು ಅರಿತುಕೊಂಡು, ಪುಷ್ಪ ಕೃಷಿಗೆ ಕೈ ಹಾಕಿದರು.
ಕಡಿಮೆ ನಿರ್ವಹಣೆ, ಹೆಚ್ಚು ಲಾಭ ತರುವ ಬಹುವಾರ್ಷಿಕ ಪುಷ್ಪ ಬೆಳೆಯಾದ ಕಾಕಡ ಜಾತಿಯ ಮಲ್ಲಿಗೆ ಬೆಳೆಯನ್ನು ಬೆಳೆಯಲು ನಿರ್ಧರಿಸಿ, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ ಗಾಂಜಿ ಹಾಗೂ ತಾಂತ್ರಿಕ ಅಧಿಕಾರಿ ಅಜರುದ್ದೀನ ಅವರ ಸಲಹೆಯಂತೆ 6*4 ಅಡಿ ಅಂತರದಲ್ಲಿ ನಾಟಿ ಮಾಡಿ ಅದಕ್ಕೆ ಆಧುನಿಕ ಪದ್ಧತಿಯಾಗಿ ಹನಿ ನೀರಾವರಿ ಅಳವಡಿಸಿಕೊಂಡಿದ್ದು ವಿಶೇಷ. ಹೀಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಶೇ.90 ರಷ್ಟು ಸಹಾಯಧನ ಪಡೆದಿದ್ದಾರೆ. ಒಟ್ಟಾರೆಯಾಗಿ ತಮ್ಮ 1 ಎಕರೆ (35ಗುಂಟೆ ಮಾತ್ರ) ಜಮೀನಿನಲ್ಲಿ 2015-16 ನೇ ಸಾಲಿನಲ್ಲಿ ಸುಮಾರು 1000 ಕ್ಕೂ ಹೆಚ್ಚಿನ ಸಂಖೆಯಲ್ಲಿ ಕಾಕಡ ಮಲ್ಲಿಗೆ ಸಸಿಗಳನ್ನು ತಮಿಳುನಾಡಿನಿಂದ ಖರೀದಿಸಿ ನಾಟಿ ಮಾಡಿದ್ದಾರೆ. ಪ್ರತಿ ಕೆ.ಜಿ. ಗೆ ಸರಾಸರಿ ರೂ. 150 ರಂತೆ ದರ ದೊರೆತಿದೆ. ಈ ರೀತಿ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪುಷ್ಪ ಕೃಷಿ ಕೈಗೊಂಡ ಬಸವರಾಜರವರಿಗೆ 2017-18 ರಲ್ಲಿ ಒಟ್ಟು ಲಾಭ 3 ಲಕ್ಷ ರೂ. ಆದಾಯ ಬಂದಿದೆ.
"ಒಂದೇ ವರ್ಷದಲ್ಲಿ ಒಂದೇ ಬೆಳೆಯಿಂದ ಇಷ್ಟೊಂದು ಆದಾಯ ನಿರೀಕ್ಷಿಸಿರಲಿಲ್ಲ. ನನ್ನ ನಾಲ್ಕು ಎಕರೆ ಜಮೀನಿನಲ್ಲಿ ತರಕಾರಿ ಜೊತೆಗೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಇದೆಲ್ಲ ನನ್ನ ಖರ್ಚು ನೀಗಿಸುವುದಕ್ಕೆ ಮಾತ್ರವಾಗಿದೆ. ಕಾಕಡ ಮಲ್ಲಿಗೆಯಿಂದ ನನಗೆ ಉತ್ತಮ ಆದಾಯ ಬಂದಿದೆ. ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದ ಬಹುದಾಗಿದೆ" ಎನ್ನುತ್ತಾರೆ ರೈತ ಬಸವರಾಜ ಈರಪ್ಪ ಬೋಳಾಡೆಪ್ಪರವರು. ತೋಟಗಾರಿಕೆ ವಿಷಯ ತಜ್ಞರು ರೈತರ ತೋಟಕ್ಕೆ ಭೇಟಿ ನೀಡಿದಾಗ ಮೈಟ್‍ನುಸಿ ಕಾಣಿಸಿಕೊಂಡಿತ್ತು. ಇದರ ನಿಯಂತ್ರಣಕ್ಕೆ ಸಲಹೆ ನೀಡಿದ ವಾಮನಮೂರ್ತಿ ಅವರು ಇತರೇ ಪುಷ್ಪಗಳಾದ ಕನಕಾಂಬರ, ಸುಗಂಧರಾಜ ಬೆಳೆದು ಹೆಚ್ಚಿನ ಆದಾಯ ಪಡೆಯಲು ಸಲಹೆ ನೀಡಿದ್ದರು.
ಪುಷ್ಪ ಕೃಷಿಯಲ್ಲಿ ಸಾಧನೆ ಮಾಡಿ, ಇತರ ರೈತರಿಗೆ ಮಾದರಿಯಾಗಿದ್ದಾರೆ ರೈತ ಬಸವರಾಜರವರು. ಕಡಿಮೆ ನೀರಿದ್ದರೂ ಹನಿ ನೀರಾವರಿ ಅಳವಡಿಸಿಕೊಂಡು ಉತ್ತಮವಾದ ಆದಾಯ ಪಡೆದಿದ್ದಾರೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದುರ್ಗಾಪ್ರಸಾದ ಅವರು ರೈತ ಬಸವರಾಜರವರಿಗೆ ಶ್ಲಾಘಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಸವರಾಜ ಮೊ.ಸಂ. 9945376057, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ ಗಾಂಜಿ ಮೊ.ಸಂ. 8147397531, ವಿಷಯ ತಜ್ಞರಾದ ವಾಮನಮೂರ್ತಿ ಮೊ.ಸಂ. 9482672039, ಇವರನ್ನು ಸಂಪರ್ಕಿಸಬಹುದು.
ಹೀಗಾಗಿ ಲೇಖನಗಳು ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ
ಎಲ್ಲಾ ಲೇಖನಗಳು ಆಗಿದೆ ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ ಲಿಂಕ್ ವಿಳಾಸ https://dekalungi.blogspot.com/2018/08/blog-post_39.html
0 Response to "ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿದ ನವಲಿ ಗ್ರಾಮದ ರೈತ"
ಕಾಮೆಂಟ್ ಪೋಸ್ಟ್ ಮಾಡಿ