ಶೀರ್ಷಿಕೆ : ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ
ಲಿಂಕ್ : ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ
ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ
ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಇತ್ತೀಚೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ನಜೀರ ಅಹಮದ ಸೋಂಪೂರ, ವಾಮನಮೂರ್ತಿ, ವಿಷಯ ತಜ್ಞರು ಲಿಂಬೆ ತಾಕುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮೈಟ್ಸ್ ನುಸಿ, ರಂಗೋಲಿ ಕೀಟ ಅಲ್ಲದೆ ದುಂಡಾಣು ಕಜ್ಜಿರೋಗ ಕಂಡುಬಂದಿರುತ್ತದೆ. ಇದರ ಹತೋಟಿಗಾಗಿ ರೈತರು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
ಮುಂಜಾಗೃತ ಕ್ರಮಗಳು :
*********** ರೈತರು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳು ಇಂತಿವೆ. ಮೈಟ್ಸ್ ನುಸಿ ಹತೋಟಿಗಾಗಿ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕದ ಪುಡಿ ಅಥವಾ ಡೈಕೊಫಾಲ 18.5 ಇಸಿ ಯನ್ನು 2.5 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ದುಂಡಾಣು ರೋಗದ ಹತೋಟಿಗಾಗಿ ಸಿಓಸಿ 3 ಗ್ರಾಂ ಜೊತೆಗೆ 0.5 ಗ್ರಾಂ ಬ್ಯಾಕ್ಟೀರಿಯಾ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದಲ್ಲದೆ ಪೋಷಕಾಂಶಗಳ ನಿರ್ವಹಣೆಗಾಗಿ 3 ವರ್ಷದ ನಂತರ ಗಿಡಗಳ ವಯಸ್ಸಿಗೆ ತಕ್ಕಂತೆ ಪ್ರತಿ ಗಿಡಗಳಿಗೆ ಸಾರಜನಕ 300 ರಿಂದ 400 ಗ್ರಾಂ., ರಂಜಕ 180 ರಿಂದ 240 ಗ್ರಾಂ., ಪೊಟ್ಯಾಷ್ 300 ರಿಂದ 500 ಗ್ರಾಂ. ಇದರ ಜೊತೆಗೆ ಜಿಂಕ್ ಸಲ್ಫೇಟ್ 250 ಗ್ರಾಂ ಹಾಗೂ ಮೆಗ್ನೇಷಿಯಂ ಸಲ್ಫೇಟ್ 250 ಗ್ರಾಂ. ಇದಲ್ಲದೇ ಲಘಪೋಷಕಾಂಶಗಳ ನಿರ್ವಹಣೆಗಾಗಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಯವರು ಬಿಡುಗಡೆ ಮಾಡಿದ ಲಿಂಬೆ ಸ್ಪೆಷಲ್ ಅನ್ನು 1 ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ, ಸಸ್ಯ ರೋಗ ತಜ್ಞರು, ಬದರಿಪ್ರಸಾದ ಪಿ.ಆರ್. ವಿಷಯ ತಜ್ಞರು, ಕೀಟಶಾಸ್ತ್ರ (9900145705) ಮತ್ತು ಪ್ರದೀಪ ಬಿರಾದರ, ವಿಷಯ ತಜ್ಞರು, ತೋಟಗಾರಿಕೆ (9743064405) ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ
ಎಲ್ಲಾ ಲೇಖನಗಳು ಆಗಿದೆ ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2018/08/blog-post_34.html
0 Response to "ಲಿಂಬೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆ"
ಕಾಮೆಂಟ್ ಪೋಸ್ಟ್ ಮಾಡಿ