ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ

ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ
ಲಿಂಕ್ : ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ

ಓದಿ


ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ


ಕೊಪ್ಪಳ ಆ. 25 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆ. 27 ರಿಂದ ಐಇಸಿ ಚಟುವಟಿಕೆಯಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನದ ಮೂಲಕ ಕಾಮಗಾರಿಗಳ ಪ್ರಾರಂಭ ಆದೇಶ ಮತ್ತು ಇ-ಎನ್.ಎಂ.ಆರ್. ಹಂಚಿಕೆ ಮಾಡುವ ಕಾರ್ಯಕ್ರಮ ನಡೆಯಲಿದೆ ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
            ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿನ ನಿರ್ದೇಶನದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಕಾರ್ಯಕ್ರಮವನ್ನು ಕೈಗೊಂಡಿದೆ.  ಈಗಾಗಲೇ ಅನುಮೋದಿತ ಕಾಮಗಾರಿಗಳು ಇದ್ದಲ್ಲಿ ಅವುಗಳನ್ನು ಪ್ರಾರಂಭಿಸಬೇಕು.  ಒಂದು ವೇಳೆ ಬೇಡಿಕೆ ಬಂದ ಕಾಮಗಾರಿಗಳ ಹೆಸರುಗಳು ಕ್ರಿಯಾ ಯೋಜನೆಯಲ್ಲಿ ಇಲ್ಲದಿದ್ದರೆ ತಕ್ಷಣವೇ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಕೊಪ್ಪಳ ತಾ.ಪಂ. ಕಾರ್ಯಾಲಯಕ್ಕೆ ಸಲ್ಲಿಸಬೇಕು.  ಆದ್ದರಿಂದ ಆ. 27 ಸೆಪ್ಟೆಂಬರ್. 07 ರವರೆಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಏಕಕಾಲಕ್ಕೆ ವಿಶೇಷ ಅಭಿಯಾನದ ಮೂಲಕ ವೈಯಕ್ತಿಕ ಮತ್ತು ಸಾಮುದಾಯದ ಕಾಮಗಾರಿಗಳಿಗೆ ಕಾಮಗಾರಿ ಆದೇಶ ಮತ್ತು ಸ್ಥಳದಲ್ಲಿಯೆ ಇ-ಎನ್.ಎಂ.ಆರ್. ಗಳನ್ನು ಹಂಚಿಕೆ ಮಾಡುವ ಮೂಲಕ ಯೋಜನೆಯ ಪ್ರಗತಿಯನ್ನು ಹೆಚ್ಚಿಸುವುದು.  ಅಲ್ಲದೆ ವೈಯಕ್ತಿಕ ಕಾಮಗಾರಿಗಳ ನೀಡುವ ಮೂಲಕ ಬಡ ಜನರ ಆದಾಯವನ್ನು ಹೆಚ್ಚಿಸುವಲ್ಲಿ ಗ್ರಾಮೀಣ ಜನರ ಜೀವನ ಮಟ್ಟವನ್ನು ಬಲಪಡಿಸುವುದೇ ಆಧ್ಯ ಕರ್ತವ್ಯವಾಗಿರುತ್ತದೆ.  ಈ ಕುರಿತು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ತಾಂತ್ರಿಕ ಸಹಾಯಕರುಗಳು ಜಂಟಿಯಾಗಿ ವಿಶೇಷ ಅಭಿಯಾನವನ್ನು ತಮ್ಮ ಗ್ರಾಮ ಪಂಚಾಯತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಆದೇಶಿದ್ದು, ವಿಶೇಷ ಅಭಿಯಾನದಲ್ಲಿ ಕಡ್ಡಾಯವಾಗಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳಲು ನಿರ್ದೇಶನ ನೀಡಿದೆ.  
ವಿಶೇಷ ಅಭಿಯಾನದಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಮೊದಲು ಆಧ್ಯತೆಗಳನ್ನು ನೀಡಿ ಕಾಮಗಾರಿ ಆದೇಶ ಮತ್ತು ಇ-ಎನ್.ಎಂ.ಆರ್. ವಿತರಿಸುವುದಾಗಿದೆ.  ಅಭಿಯಾನದಲ್ಲಿ ನಡೆಯುವ ಕಾಮಗಾರಿಗಳ ವಿವರ ಇಂತಿದೆ.  
ವೈಯಕ್ತಿಕ ಕಾಮಗಾರಿಗಳು : ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ)) ಮಾವು, ಸಪೋಟ, ದಾಳಿಂಬೆ, ಪೆರಲ, ದ್ರಾಕ್ಷೀ, ತಾಳೆ, ದಾಲ್ಚಿನ್ನಿ, ಲವಂಗ, ಮೇಣಸು, ನಿಂಬೆ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ, ನೆಲ್ಲಿ ಇನ್ನೂ ಅನೇಕ ಬೆಳೆಗಳು).  ರೇಷ್ಮೆ ಇಲಾಖೆಯ ಕಾಮಗಾರಿಗಳು, ಅರಣ್ಯ & ಕೃಷಿಇಲಾಖೆಯ ಕಾಮಗಾರಿಗಳು, ಕೃಷಿ ಹೊಂಡ, ಕಾಂಪೋಸ್ಟ್ ಪಿಟ್, ಕೊಳವೆ ಭಾವಿ ಮರಪೂರಣ ಘಟಕ, ಭೂಅಭಿವೃದ್ಧಿ, ದನದದೊಡ್ಡಿ, ಜಮೀನು ಸುತ್ತಲು ತೋಟಗಾರಿಕಾ ಸಸಿಗಳನ್ನು ನೆಡುವುದು.  
ಸಮುದಾಯ ಕಾಮಗಾರಿಗಳು : ಕೆರೆ ಹೂಳೆತ್ತುವುದು, ಗೋಕಟ್ಟೆ ನಿರ್ಮಾಣ, ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿ, ಮಣ್ಣುಗಾಲುವೆ ನಿರ್ಮಾಣ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಎಸ್.ಎಚ್.ಜಿ ಭವನ, ಸರ್ಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ಧಿ, ಸರ್ಕಾರಿ ಶಾಲೆಗಳಿಗೆ ಕಂಪೌಡ್ ನಿರ್ಮಾಣ, ಜಾನುವಾರು ಕುಡಿಯುವ ನೀರಿನ ತೊಟ್ಟಿ, ಅಂಗನವಾಡಿ ಕಟ್ಟಡ, ರೈತರ ಒಕ್ಕಣಿ ಕಣ ನಿರ್ಮಾಣ ಇತ್ಯಾದಿ.  
ಪಂಚಾಯತಿ ಮಟ್ಟದಲ್ಲಿ ಅನುಸರಿಸಬೇಕಾದ ಕ್ರಮಗಳು : ಅಭಿಯಾನದಲ್ಲಿ ಪಂಚಾಯತಿ ಮಟ್ಟದಲ್ಲಿ ಅನುಸರಿಸಬೇಕಾದ ಕ್ರಮಗಳು ಇಂತಿವೆ.  ಆ. 27  ಸೆಪ್ಟೆಂಬರ್. 07 ರವರೆಗೆ ಎಂಜಿನರೇಗಾ ವಿಶೇಷ ಅಭಿಯಾನವನ್ನು ನಿಗದಿಯಾದ ದಿನಾಂಕದಂದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿಸಬೇಕು.  ವಿಶೇಷ ಅಭಿಯಾನವನ್ನು ಗ್ರಾ.ಪಂ. ಮುಂದೆ, ಸಮುದಾಯ ಭವನ ಅಥವಾ ಸಾರ್ವಜನಿಕರು ಸೇರುವ ಸ್ಥಳದಲ್ಲಿ ಕೈಗೊಳ್ಳುಬೇಕು.  ವಿಶೇಷ ಅಭಿಯಾನಕ್ಕೆ ಬ್ಯಾನರ್, ಕಂಪ್ಯೂಟರ್ ಮತ್ತು ಅಗತ್ಯ ವಸ್ತುಗಳನ್ನು ಸ್ಥಳದಲ್ಲಿರುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಕ್ರಮವಹಿಸಬೇಕು.  ಅಭಿಯಾನದಲ್ಲಿ ಸಂಬಂಧಿಸಿದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ, ತಾಂತ್ರಿಕ ಸಹಾಯಕರು, ಬೇರ್‍ಫೂಟ್ ಟೇಕ್ನಿಷಿಯನ್ಸ್, ಗಣಕಯಂತ್ರ ನಿರ್ವಾಹಕರು ಕಡ್ಡಾಯವಾಗಿ ಸ್ಥಳದಲ್ಲಿದ್ದು, ಸಾರ್ವಜನಿಕ ಸ್ಥಳದಲ್ಲಿ ಕೂಲಿಕಾರರಿಗೆ ಇ-ಎನ್.ಎಂ.ಆರ್. ವಿತರಿಸಬೇಕು.  ತಾಂತ್ರಿಕ ಸಹಾಯಕರು ಅಗತ್ಯ ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಸಿ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆದು ಸ್ಥಳದಲ್ಲಿಯೇ (ವೈಯಕ್ತಿಕ ಕಾಮಗಾರಿಗಳಿಗೆ ಮಾತ್ರ) ನೀಡಬೇಕು.  ಅಭಿಯಾನದಲ್ಲಿ ಹಂಚಿಕೆಯಾದ ಇ-ಎನ್.ಎಂ.ಆರ್. ಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಕಡ್ಡಾಯವಾಗಿ ಕೂಲಿ ವಿಳಂಬವಾಗದಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರು ಕ್ರಮವಹಿಸಬೇಕು.  ತಾಂತ್ರಿಕ ಸಹಾಯಕರು ತಮಗೆ ಹಂಚಿಕೆಯಾದ ಗ್ರಾ.ಪಂ. ಗಳಿಗೆ ನಿಗದಿಪಡಿಸಿದ ದಿನದಂದು ಭೇಟಿ ನೀಡಿ ಬೆಳಿಗ್ಗೆ 10 ರಿಂದ ಸಾಯಂಕಾಲ 5-30 ಗಂಟೆಯವರೆಗೆ ಗ್ರಾ.ಪಂ. ಕೇಂದ್ರಸ್ಥಾನದಲ್ಲಿದ್ದು, ಅಭಿವೃದ್ದಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಬೇಕು.  ಗ್ರಾ.ಪಂ. ನಲ್ಲಿರುವ ಕೂಲಿಕಾರರ ಸಂಘಗಳಿಗೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಡಂಗುರ, ಕರಪತ್ರ ಮೂಲಕ ಅಭಿಯಾನದ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು.  ಏಕ ಕಾಲಕ್ಕೆ ಎಲ್ಲಾ ಗ್ರಾ.ಪಂ. ಗಳಲ್ಲಿ ನಿಗದಿಪಡಿಸಿದ ದಿನಾಂಕದಂದು ಪ್ರಾರಂಭಿಸಲು ಅಗತ್ಯ ಕ್ರಮವನ್ನು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕ್ರಮವಹಿಸಬೇಕು.
ತಾಲೂಕ ಎಂಐಎಸ್ ಸಂಯೋಜಕರು ಗ್ರಾ.ಪಂ. ಗಣಕಯಂತ್ರ ನಿರ್ವಾಹಕರಿಗೆ ಎನ್.ಎಂ.ಆರ್. ಹಂಚಿಕೆ ಮತ್ತು ಸೂಕ್ತ ನಿರ್ದೇಶನ ನೀಡುವದು ಮತ್ತು ಕಾಮಗಾರಿಗಳ ಪ್ರಮುಖ ವಿಧ (ಮೇನ್ ಕೆಟಗೇರಿ) ಮತ್ತು ಉಪವಿಧ (ಸಬ್ ಕೆಟಗೇರಿ) ಎಂ.ಐ.ಎಸ್. ನಲ್ಲಿ ಕಾಮಗಾರಿ ವಿಧದಂತೆಯೇ ನಮೂದಿಸಲು ಮಾಹಿತಿ ನೀಡಬೇಕು.  ಕಾಮಗಾರಿಯ ಬೇರೆ ಇಲಾಖೆಯೊಂದಿಗೆ ಒಗ್ಗೂಡಿಸುವಿಕೆಯ ಅಡಿ ಅನುಷ್ಠಾನಗೊಳ್ಳುತ್ತಿದ್ದರೆ ಅಂತಹ ಕಾಮಗಾರಿಗಳನ್ನು ಎಂ.ಐ.ಎಸ್. ನಲ್ಲಿ ಕಡ್ಡಾಯವಾಗಿ "ಈಸ್ ಇಟ್ ಎ ಕನ್ವೆರ್‍ಜೆನ್ಸ್?" ಎಂಬ ಪ್ರಶ್ನೆಗೆ ಕಡ್ಡಾಯವಾಗಿ ಗಣಕಯಂತ್ರ ನಿರ್ವಾಹಕರು ಚೆಕ್ ಬಾಕ್ಸ್‍ನಲ್ಲಿ ನಮೂದಿಸಬೇಕು.  ಈ ಅಭಿಯಾನದ ಐ.ಇ.ಸಿ. ಕಾರ್ಯಕ್ರಮಗಳನ್ನು ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಡಿಜಿಟಲ್ ಕ್ಯಾಮರಾಗಳ ಮೂಲಕ ದಾಖಲಾತಿಕರಣ ಕೈಗೊಳ್ಳಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಣಕಯಂತ್ರ ನಿರ್ವಾಹಕರಿಗೆ ಸೂಚನೆ ನೀಡಬೇಕು.  ಫಲಾನುಭವಿಗಳಿಗೆ ಅಥವಾ ಕೂಲಿಕಾರರ ಬ್ಯಾಂಕ್ ಖಾತೆಯ ಕಡ್ಡಾಯವಾಗಿ ಜಂಟಿ ಇಲ್ಲದಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಪರಿಶೀಲನೆ ಕೈಗೊಂಡು ಕ್ರಮವಹಿಸಬೇಕು.  ಗ್ರಾ.ಪಂ. ಸಿಬ್ಬಂದಿಗಳನ್ನು ಗ್ರಾಮವಾರು ನಿಯೋಜಿಸಿ ಜವಾಬ್ದಾರಿಗಳನ್ನು ವಹಿಸಿ, ಅಭಿಯಾನದಲ್ಲಿ ಕಡ್ಡಾಯವಾಗಿ ಪಾಲ್ಗೋಳ್ಳುವಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.  ಈ ಎಲ್ಲ ಅಂಶಗಳ ಬಗ್ಗೆ ವೈಯಕ್ತಿಕ ಗಮನಹರಿಸಿ ಎಂ.ಜಿ. ನರೇಗಾ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕು.  ಅಭಿಯಾನದ ಬಗ್ಗೆ ನಿರ್ಲಕ್ಷ್ಯವಹಿಸಿದ್ದಲ್ಲಿ ಸಂಬಂಧಿಸಿದ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ತಾಂತ್ರಿಕ ಸಹಾಯಕರ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವದು ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಹೀಗಾಗಿ ಲೇಖನಗಳು ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ

ಎಲ್ಲಾ ಲೇಖನಗಳು ಆಗಿದೆ ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2018/08/27.html

Subscribe to receive free email updates:

0 Response to "ಆ. 27 ರಿಂದ ವಿಶೇಷ ಅಭಿಯಾನದ ಮೂಲಕ ಉದ್ಯೋಗಖಾತ್ರಿ ಕಾಮಗಾರಿಗಳ ಪ್ರಾರಂಭ"

ಕಾಮೆಂಟ್‌‌ ಪೋಸ್ಟ್‌ ಮಾಡಿ