ಶೀರ್ಷಿಕೆ : ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್
ಲಿಂಕ್ : ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್
ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್
ಕೊಪ್ಪಳ ಆ. 08 (ಕರ್ನಾಟಕ ವಾರ್ತೆ): ಹಸಿರು ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಹಸಿರು ಕರ್ನಾಟಕ’ ಕಾರ್ಯಕ್ರಮವನ್ನು ಆ. 15 ರಿಂದ 18 ರವರೆಗೆ ಜಿಲ್ಲೆಯಾದ್ಯಂತ ಕೈಗೊಳ್ಳಲಾಗುತ್ತಿದ್ದು, ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಸಿರು ಕರ್ನಾಟಕ ಕಾರ್ಯಕ್ರಮ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ಅತ್ಯುತ್ತಮ ದೂರದೃಷ್ಟಿ ಹೊಂದಿರುವ ಕಾರ್ಯಕ್ರಮವಾಗಿದೆ. ರಾಜ್ಯ ಅರಣ್ಯ ಸಚಿವರೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ, ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು. ಆ. 15 ರಂದು ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನ ಕಾಸನಕಂಡಿ ಬಳಿ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ- ‘ಟ್ರೀ ಪಾರ್ಕ್’ ಅನ್ನು ಉದ್ಘಾಟಿಸುವರು. ಜೊತೆಗೆ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಇದೇ ಪಾರ್ಕಿನಲ್ಲಿ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡುವರು. ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳು, ವಸತಿ ನಿಲಯಗಳು, ಗ್ರಾಮ ಪಂಚಾಯತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡಗಳು, ರಾಜೀವ್ ಗಾಂಧಿ ಸೇವಾ ಕೇಂದ್ರ, ಅಟಲ್‍ಜಿ ಜನಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ ಲಭ್ಯವಿರುವ ಸ್ಥಳಗಳಲ್ಲಿ ಗಿಡಗಳನ್ನು ನೆಡಬೇಕು. ಆಯಾ ಮಣ್ಣಿನ ಗುಣಕ್ಕೆ ಅನುಗುಣವಾಗಿ ಹೊಂದಾಣಿಕೆಯಾಗುವ ಗಿಡಗಳನ್ನು ಆಯ್ಕೆ ಮಾಡಬೇಕು. ಸಸಿಗಳನ್ನು ನೆಟ್ಟ ಪ್ರತಿಯೊಂದು ಸ್ಥಳದ ಜಿಯೋ ಟ್ಯಾಗಿಂಗ್ ಅನ್ನು ಫೋಟೋ ಸಹಿತ ಮಾಡಬೇಕು, ಅಲ್ಲದೆ ಗಿಡಗಳ ರಕ್ಷಣೆಗೂ ಆದ್ಯತೆ ನೀಡಬೇಕು. ಶಾಲೆ, ಕಾಲೇಜುಗಳಲ್ಲಿ, ವಿದ್ಯಾರ್ಥಿಗಳ ಹೆಸರಿನಲ್ಲಿ ಸಸಿಗಳನ್ನು ನೆಡಲು ವ್ಯವಸ್ಥೆ ಕೈಗೊಂಡಲ್ಲಿ, ವಿದ್ಯಾರ್ಥಿಗಳು ಗಿಡಗಳ ರಕ್ಷಣೆ ಹಾಗೂ ಪೋಷಣೆಗೆ ಉತ್ತೇಜನ ನೀಡಿದಂತಾಗುತ್ತದೆ, ಅಲ್ಲದೆ ಗಿಡಗಳ ಉಳಿಯುವಿಕೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಗಿಡಗಳನ್ನು ಗ್ರಾಮ ಪಂಚಾಯತಿ ಕಟ್ಟಡ, ರಾಜೀವ್‍ಗಾಂಧಿ ಸೇವಾ ಕೇಂದ್ರ, ಆರೋಗ್ಯ ಕೇಂದ್ರಗಳು, ಶಾಲೆ, ಕಾಲೇಜುಗಳು ಸೇರಿದಂತೆ ಸರ್ಕಾರಿ ಕಟ್ಟಡಗಳ ಆವರಣದಲ್ಲಿ ನೆಡುವಂತಾಗಬೇಕು. ಹೀಗಾದಲ್ಲಿ, ಗಿಡಗಳ ರಕ್ಷಣೆ ಹಾಗೂ ಪೋಷಣೆಗೆ ಸುಲಭವಾಗಲಿದೆ. ಅಲ್ಲದೆ, ಇವುಗಳ ರಕ್ಷಣೆಯ ಹೊಣೆಯನ್ನು ಆಯಾ ಕಚೇರಿಗಳ ಮುಖ್ಯಸ್ಥರಿಗೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತಿಗಳಿದ್ದು, ಎಲ್ಲ ಗ್ರಾಮ ಪಂಚಾಯತಿವಾರು ‘ಹಸಿರು ಕರ್ನಾಟಕ’ ಕಾರ್ಯಕ್ರಮದ ಯೋಜನೆಯನ್ನು ಸಿದ್ಧಪಡಿಸಿ ನೀಡುವಂತೆ ತಿಳಿಸಿದರು.
ಪ್ರಾದೇಶಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಅವರು ‘ಹಸಿರು ಕರ್ನಾಟಕ’ ಕಾರ್ಯಕ್ರಮದ ಸಮಗ್ರ ವಿವರವನ್ನು ಸಭೆಗೆ ತಿಳಿಸಿದರು. ಕೊಪ್ಪಳ ಜಿಲ್ಲೆಯನ್ನು ಹಸಿರು ಕರ್ನಾಟಕ ಕಾರ್ಯಕ್ರಮದಡಿ ಹಸಿರೀಕರಣಗೊಳಿಸಲು 3. 6 ಲಕ್ಷ ಗಿಡಗಳನ್ನು ಈಗಾಗಲೆ ಅರಣ್ಯ ಇಲಾಖೆ ವಿವಿಧ ಸಸ್ಯ ಕ್ಷೇತ್ರಗಳಲ್ಲಿ ಬೆಳೆಸಿ ಸಿದ್ಧವಾಗಿರಿಸಿಕೊಂಡಿದೆ. ಕಾರ್ಯಕ್ರಮವನ್ನು ಆಗಸ್ಟ್ 15 ರಿಂದ 18 ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಹಮ್ಮಿಕೊಂಡಿದ್ದು, ಗ್ರಾ.ಪಂ. ವಾರು ಯೋಜನೆ ತಯಾರಿಸಲಾಗಿದೆ. ಆ. 15 ರಂದು ಜಿಲ್ಲೆಯಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಇಲಾಖೆಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು. ಗಿಡಗಳನ್ನು ನೆಟ್ಟ ಬಳಿಕ ಪ್ರತಿಯೊಂದು ಸ್ಥಳದ ಜಿಯೋ ಟ್ಯಾಗ್ ಮಾಡಲಾಗುವುದು. ಸಸಿಗಳನ್ನು ಉಳಿಸಿಕೊಳ್ಳಲು ಕೂಡ ಆದ್ಯತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾಸನಕಂಡಿ ಬಳಿ ನಿರ್ಮಿಸಲಾಗಿರುವ ಟ್ರೀ-ಪಾರ್ಕ್ ಅನ್ನು ಆ. 15 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಅರಣ್ಯ ಸಚಿವರು ಉದ್ಘಾಟಿಸಲಿದ್ದು, ಬಳಿಕ ಪಾರ್ಕ್‍ನ ನಿರ್ವಹಣೆ ಹೊಣೆಯನ್ನು ಗ್ರಾಮ ಅರಣ್ಯ ಸಮಿತಿಗೆ ವಹಿಸಲಾಗುವುದು ಎಂದರು.
ಸಭೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಂಡುರಂಗಪ್ಪ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ಕೃಷಿ ಇಲಾಖೆ ಅಧಿಕಾರಿ ಬಸವರಾಜ್, ಸೇರಿದಂತೆ ಕೊಪ್ಪಳ, ಗಂಗಾವತಿ ಉಪವಿಭಾಗಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪಳ, ಮುನಿರಾಬಾದ್, ಗಂಗಾವತಿ ಮತ್ತು ಕುಷ್ಟಗಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್
ಎಲ್ಲಾ ಲೇಖನಗಳು ಆಗಿದೆ ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್ ಲಿಂಕ್ ವಿಳಾಸ https://dekalungi.blogspot.com/2018/08/15.html
0 Response to "ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹಸಿರೀಕರಣ : ಆ. 15 ರಿಂದ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡಲು ಸಿದ್ಧತೆ ಕೈಗೊಳ್ಳಿ- ಪಿ. ಸುನೀಲ್‍ಕುಮಾರ್"
ಕಾಮೆಂಟ್ ಪೋಸ್ಟ್ ಮಾಡಿ