News and photo Date: 26-7-2018

News and photo Date: 26-7-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 26-7-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 26-7-2018
ಲಿಂಕ್ : News and photo Date: 26-7-2018

ಓದಿ


News and photo Date: 26-7-2018

ಜುಲೈ 27ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
**************************************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಕಲಾ, ವಿಜ್ಞಾನ ಮಹಾವಿದ್ಯಾಲಯ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ “ಯುವ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ, ಸಂಚಾರಿ ನಿಯಮಗಳ ಮತ್ತು ಮೂಲಭೂತ ಕಾನೂನುಗಳ ಕುರಿತು” ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಇದೇ ಜುಲೈ 27ರಂದು ಬೆಳಿಗ್ಗೆ 9.15 ಗಂಟೆಗೆ ಕಲಬುರಗಿ ಸರ್ವಜ್ಞ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕಟ್ಟಿಮನಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಾಯಕ ಎಜ್ಯುಕೇಶನ್ ಟ್ರಸ್ಟಿನ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ ಸಾರಿಗೆ ಇಲಾಖೆಯ ಹಿರಿಯ ಉಪಸಾರಿಗೆ ಆಯುಕ್ತ ಪಿ. ಸುರೇಂದ್ರಪ್ಪ ಅವರು ಮೋಟಾರ ವಾಹನ ಕಾಯ್ದೆ ಕುರಿತು, ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಹಮೀದ ಪಟೇಲ್ ಅವರು ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮ ಕುರಿತು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಎಸ್. ಹಿರೇಮಠ ಅವರು ಪೊಲೀಸ್ ದೂರು ಪ್ರಾಧಿಕಾರದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುವರು.
ಅಂತರಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ
****************************************************************
ಕಲಬುರಗಿ,ಜು.26.(ಕ.ವಾ.)-ಕಲಬುರಗಿ ತಾಲೂಕಿನಲ್ಲಿ ಅಂತರಜಾತಿ ವಿವಾಹವಾದ ದಂಪತಿಗಳಾದ ಮಲ್ಲಿನಾಥ ಹಾಗೂ ಐಶ್ವರ್ಯ ಲಕ್ಷ್ಮೀ ಇವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಮಂಜೂರಾದ ಪ್ರೋತ್ಸಾಹಧನದ ಚೆಕ್‍ನ್ನು ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆನಂದ ಚವ್ಹಾಣ ಅವರು ಇತ್ತೀಚೆಗೆ ವಿತರಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಗೋಳಾ, ಅಧೀಕ್ಷಕ ಡಿ.ಡಿ. ಮುಗಳಿ, ಸಿಬ್ಬಂದಿಯಾದ ಸುರೇಖಾ ಅವರು ಉಪಸ್ಥಿತರಿದ್ದರು.
ಗಣಕಯಂತ್ರದ ಶಿಕ್ಷಣ ಪರೀಕ್ಷ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಕಲಬುರಗಿ,ಜು.26.(ಕ.ವಾ.)-ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ ಜುಲೈ 2018ರ ಮಾಹೆಯ ಗಣಕಯಂತ್ರ ಶಿಕ್ಷಣ ಪರೀಕ್ಷೆಯ ಲಿಖಿತ ಪರೀಕ್ಷೆಗಳು ಕಲಬುರಗಿ ನಗರದ ದರ್ಗಾ ರಸ್ತೆ (ಎಸ್.ಟಿ.ಬಿ.ಟಿ.) ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಹಾಗೂ ಆಫೀಸ್ ಆಟೋಮೇಶನ್/ ಗ್ರಾಫಿಕ್ ಡಿಸೈನರ್ ಪರೀಕ್ಷೆಗಳು ಕಲಬುರಗಿಯ ಖಾದ್ರಿ ರಸ್ತೆಯಲ್ಲಿರುವ (ಖಾದ್ರಿಚೌಕ್) ಸಕ್ಸಸ್ ಕಂಪ್ಯೂಟರ್ ಸೆಂಟರ್‍ನಲ್ಲಿ ಇದೇ ಜುಲೈ 30 ರಿಂದ ಆಗಸ್ಟ್ 4ರವರೆಗೆ ನಡೆಯಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲು ಇರುವ ಜಿರಾಕ್ಸ್/ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ಕಲಬುರಗಿ ತಹಶೀಲ್ದಾರ್ ಅಶೋಕ ಹಿರೋಳ್ಳೆ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಗಾತ್ರದ ಬ್ಲ್ಯೂಟೂತ್ ಉಪಕರಣ, ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.
ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು:
***************************************
ದಂಡ ಶುಲ್ಕವಿಲ್ಲದೇ ಪ್ರವೇಶ ಪಡೆಯಲು ಆಗಸ್ಟ್ 10 ಕೊನೆಯ ದಿನ
**********************************************************
ಕಲಬುರಗಿ,ಜು.26.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಐದು ವರ್ಷದ ಬಿ.ಎ.-ಎಲ್.ಎಲ್.ಬಿ. ಕಾನೂನು ಪದವಿಯ ಪ್ರವೇಶ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ದಂಡಶುಲ್ಕವಿಲ್ಲದೇ ಪ್ರವೇಶ ಪಡೆಯಲು 2018ರ ಆಗಸ್ಟ್ 10 ಕೊನೆಯ ದಿನವಾಗಿದೆ ಎಂದು ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಶಿವಾನಂದ ಎಚ್. ಲೇಂಗಟಿ ಅವರು ತಿಳಿಸಿದ್ದಾರೆ.
ಬಿ.ಎ. ಎಲ್.ಎಲ್.ಬಿ. ಕೋರ್ಸಿನ ಅವಧಿ 5 ವರ್ಷ ಇರುತ್ತದೆ. ಇದರಲ್ಲಿ ಮೊದಲ ಎರಡು ವರ್ಷ ಕಲಾ ವಿಷಯಗಳಿಗೆ ಸೀಮಿತವಾಗಿದ್ದು, ಕೊನೆಯ 3 ವರ್ಷಗಳು ಕಾನೂನು ವಿಷಯಗಳನ್ನೊಳಗೊಂಡಿದೆ.
ದ್ವಿತೀಯ ವರ್ಷದ ಪಿ.ಯು.ಸಿ. ಅಥವಾ ತತ್ಸಮಾನದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಒಟ್ಟು ಶೇ. 45ರಷ್ಟು ಅಂಕ ಪಡೆದಿರಬೇಕು (ಇತರೆ ಹಿಂದುಳಿದ ವರ್ಗದವರು ಶೇ. 42 ರಷ್ಟು ಮತ್ತು ಪ.ಜಾ., ಪ.ಪಂ. ಶೇ. 40 ರಷ್ಟು ಅಂಕ ಪಡೆದಿರಬೇಕು). ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ ಗರಿಷ್ಠ 20 ವರ್ಷ. (1998ರ ಮೇ 10ರಂದು ಅಥವಾ ನಂತರ ಜನಿಸಿರಬೇಕು) ಹಾಗೂ ಪ.ಜಾ./ ಪ.ಪಂ. ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 22 ವರ್ಷ (1996ರ ಮೇ 10ರಂದು ಅಥವಾ ನಂತರ ಜನಿಸಿರಬೇಕು) ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಚಾರ್ಯ ಡಾ. ಶಿವಾನಂದ ಹೆಚ್. ಲೇಂಗಟಿ ಮೊಬೈಲ್ ಸಂಖ್ಯೆ 9449122506, ಡಾ: ಚಿತ್ಕಳಾ ಜೆ. ಮಠಪತಿ ಮೊಬೈಲ್ ಸಂಖ್ಯೆ 9448569343, ಆಶಾ ಆಫ್ರಿನ್ ಮೊಬೈಲ್ ಸಂಖ್ಯೆ 7975365094, ಶೈಲಜಾ ಅವರ ಮೊಬೈಲ್ ಸಂಖ್ಯೆ 9886223349ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಎಲ್ಲ ವರ್ಗದ ಸಾಗುವಳಿ ರೈತರ ಮಾಹಿತಿ ದಾಖಲಿಸಲು
************************************************
ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ದಾಖಲೆ ಸಲ್ಲಿಸಲು ರೈತರಿಗೆ ಸೂಚನೆ
***************************************************************
ಕಲಬುರಗಿ,ಜು.26.(ಕ.ವಾ.)-ಪ್ರಸಕ್ತ 2018-19 ನೇ ಸಾಲಿನಿಂದ ಈಚಿಡಿmeಡಿ ಖegisಣಡಿಚಿಣioಟಿ ಚಿಟಿಜ Uಟಿiಜಿieಜ ಃeಟಿeಜಿiಛಿiಚಿಡಿಥಿ Iಟಿಜಿoಡಿmಚಿಣioಟಿ Sಥಿsಣem (ಈಖUIಖಿS) ವೆಬ್‍ಸೈಟ್‍ನಲ್ಲಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಎಲ್ಲಾ ವರ್ಗದ ಸಾಗುವಾಳಿ ರೈತರ ಮಾಹಿತಿಗಳನ್ನು ದಾಖಲಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ರೈತ ಬಾಂಧವರು ಕೆಳಕಂಡ ಅಗತ್ಯ ದಾಖಲಾತಿಗಳನ್ನು ಸಂಬಂಧಪಟ್ಟ ಹೋಬಳಿ ವ್ಯಾಪ್ತಿಯಲ್ಲಿ ಬರುವ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ ಕಡ್ಡಾಯವಾಗಿ ನೊಂದಾಯಸಿಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ರೈತ ಸಂಪರ್ಕ ಕೇಂದ್ರದ ವೆಬ್‍ಸೈಟ್‍ನಲ್ಲಿ ರೈತರ ನೋಂದಣಿಯು ದಾಖಲಾಗದೇ ಉಳಿದಲ್ಲಿ ರೈತ ಭಾಂದವರಿಗೆ ಇಲಾಖೆಯ ಯಾವುದೇ ಸೌಲಭ್ಯಗಳು ಲಭ್ಯವಾಗುವುದಿಲ್ಲ. ಜಿಲ್ಲೆಯ ಎಲ್ಲ ರೈತ ಬಾಂಧವರು ಪಹಣಿ, ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‍ಬುಕ್, ಮೊಬೈಲ್ ಸಂಖ್ಯೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿದ್ದಲ್ಲಿ ಜಾತಿ ಪ್ರಮಾಣ ಪತ್ರ (ಚಾಲ್ತಿ ಇರುವ ಪ್ರಮಾಣ ಪತ್ರ), ಅಲ್ಪ ಸಂಖ್ಯಾತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಅಂಗ ವಿಕಲರಾಗಿದ್ದಲ್ಲಿ ಅಂಗವಿಕಕಲ ಪ್ರಮಾಣ ಪತ್ರ ಜಿರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದಲ್ಲಿ ಕಡ್ಡಾಯವಾಗಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ಉಪ ಕೃಷಿ ನಿರ್ದೇಶಕರು-1, ಕಲಬುರಗಿ ಅಥವಾ ಉಪ ಕೃಷಿ ನಿರ್ದೇಶಕರು-2 ಸೇಡಂ ಅಥವಾ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು News and photo Date: 26-7-2018

ಎಲ್ಲಾ ಲೇಖನಗಳು ಆಗಿದೆ News and photo Date: 26-7-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 26-7-2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-date-26-7-2018.html

Subscribe to receive free email updates:

0 Response to "News and photo Date: 26-7-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ