ಶೀರ್ಷಿಕೆ : News and photo Date: 17--07--2018
ಲಿಂಕ್ : News and photo Date: 17--07--2018
News and photo Date: 17--07--2018
ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆ ಬಯಲು ಬಹಿರ್ದೆಸೆ
******************************************
ಮುಕ್ತಗೊಳಿಸಲು ಜನಪ್ರತಿನಿಧಿಗಳು ಕೈಜೋಡಿಸುವಂತೆ ಮನವಿ
*******************************************************
ಕಲಬುರಗಿ,ಜು.17.(ಕ.ವಾ.)-ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಗೂಡಿ ಸಾರ್ವಜನಿಕರಲ್ಲಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿ ಆಂದೋಲನದ ಮಾದರಿಯಲ್ಲಿ ಶೌಚಾಲಯ ನಿರ್ಮಿಸಿ ಇದೇ ಸೆಪ್ಟೆಂಬರ್ ಅಂತ್ಯದೊಳಗಾಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವಂತಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪ್ರತಿನಿಧಿಗಳು ಆಸಕ್ತಿ ತೋರಿದ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ತುಂಬಾ ಚನ್ನಾಗಿದೆ. ಸ್ವಚ್ಛ ಭಾರತ ಯೋಜನೆಯು ಜನರ ಬೇಡಿಕೆಯ ಯೋಜನೆ ಆಗಬೇಕಾಗಿತ್ತು. ಆದರೆ ಸಾರ್ವಜನಿಕರು ಶೌಚಾಲಯ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ತೋರದ ಕಾರಣ ಇದು ಇಲಾಖೆಯ ಕಾರ್ಯಕ್ರಮವಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈಗಾಗಲೇ 20 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದ ಜಿಲ್ಲೆಗಳು ಆದಷ್ಟು ಬೇಗ ಬಯಲು ಬಹಿರ್ದೆಸೆ ಮುಕ್ತಗೊಳ್ಳಲಿದ್ದು, ಕಲಬುರಗಿ ಜಿಲ್ಲೆಯು ಸಹ ಸೆಪ್ಟೆಂಬರ್ ಅಂತ್ಯದವರೆಗೆ ಪ್ರಗತಿ ಸಾಧಿಸಬೇಕು. ಕಲಬುರಗಿ ಜಿಲ್ಲೆಯ ಆಳಂದ ಮತ್ತು ಜೇವರ್ಗಿಯಲ್ಲಿ ಶೌಚಾಲಯ ನಿರ್ಮಾಣ ತುಂಬಾ ನಿಧಾನ ಗತಿಯಲ್ಲಿದ್ದು, ಈ ತಾಲೂಕುಗಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತ್‍ವಾರು ಹಾಗೂ ಪ್ರತಿದಿನ ನಿರ್ಮಿಸಬೇಕಾದ ಶೌಚಾಲಯಗಳ ಸರಾಸರಿ ಗುರಿ ನಿಗದಿಪಡಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಕಲಬುರಗಿ ಜಿಲ್ಲೆ ಶೌಚಾಲಯ ನಿರ್ಮಾಣದಲ್ಲಿ ಹಿಂದುಳಿದರೆ ಅದು ತಲೆ ತಗ್ಗಿಸುವ ಕೆಲಸವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 2012ರಿಂದ 2016ರವರೆಗೆ ಶೇ. 30ರಷ್ಟು ಶೌಚಾಲಯ ನಿರ್ಮಿಸಲಾಗಿದೆ. ಆದರೆ 2017-18ರಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡು ಶೇ. 38ರಷ್ಟು ಪ್ರಗತಿ ಸಾಧಿಸಲಾಗಿದೆ. ಆಳಂದ ತಾಲೂಕಿನಲ್ಲಿ 18,000 ಹಾಗೂ ಜೇವರ್ಗಿ ತಾಲೂಕಿನಲ್ಲಿ 13,000 ಶೌಚಾಲಯಗಳ ನಿರ್ಮಾಣ ಬಾಕಿ ಇದ್ದು, ಸೆಪ್ಟೆಂಬರ್ ಅಂತ್ಯದೊಳಗಾಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಉದ್ಯೋಗ ಖಾತ್ರಿ: ಬರಗಾಲದ ಸಮಯದಲ್ಲಿ ಬರ ನಿರ್ವಹಣೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ತುಂಬಾ ಸಹಕಾರಿಯಾಗಿದೆ. ಮಳೆಗಾಲದಲ್ಲಿ ಆಸ್ತಿ ಸೃಷ್ಠಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸರ್ಕಾರಿ ಸ್ವತ್ತುಗಳಾದ ಶಾಲೆ, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳ ಆವರಣ ಗೋಡೆ ಹಾಗೂ ಗಿಡ ಬೆಳೆಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಹೆಚ್ಚಿನ ಪ್ರಯೋಜನ ದೊರಕಿಸಬಹುದಾಗಿದ್ದು, ಸಣ್ಣ ರೈತರೊಂದಿಗೆ ಬಿ.ಪಿ.ಎಲ್. ರೈತರಿಗೂ ಸಹ ಯೋಜನೆಯ ಪ್ರಯೋಜನ ದೊರಕಿಸಬೇಕು. ಹಾಲು ಒಕ್ಕೂಟಕ್ಕೆ ಹಾಲು ನೀಡುವ ರೈತರ ಹಸುಗಳಿಗೆ ಪಶು ಸಂಗೋಪನಾ ಇಲಾಖೆಯಿಂದ ಕೊಟ್ಟಿಗೆ ನಿರ್ಮಿಸಿ ಕೊಡಬೇಕು. ಶಾಸಕರು ಪಿ.ಡಿ.ಓ.ಗಳ ಸಭೆ ಕರೆದು ಉದ್ಯೋಗ ಖಾತರಿ ಕಾಮಗಾರಿಗಳಿಗೆ ಬೇಡಿಕೆ ಸೃಷ್ಟಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, 2017-18ನೇ ಸಾಲಿಗಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 36 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಈಗಾಗಲೇ 4 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದು, ಅರಣ್ಯೀಕರಣ, ರಸ್ತೆ ಬದಿಗಳಲ್ಲಿ ಗಿಡ ನೆಡುವ
ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿವಾರ ಪಿಡಿಓಗಳ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. 6-7 ಗ್ರಾಮ ಪಂಚಾಯಿತಿಗೊಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯಡಿ 100 ಆವರಣ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವರ್ಷವೂ ಸಹ ಹೆಚ್ಚಾಗಿ ಆಸ್ತಿ ಸೃಷ್ಟಿಸುವ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು.
ಗ್ರಾಮ ವಿಕಾಸ: ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಜಿಲ್ಲೆಯ 38 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, 30 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ 25.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 38 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ 37 ಗ್ರಾಮ ಪಂಚಾಯಿತಿಗಳಿಗೆ ಅನುಮೋದನೆ ನೀಡಲಾಗಿದೆ. ಹಾಗೂ 13 ಕೋಟಿ ರೂ.ಗಳ ಅನುದಾನ ಸಹ ಒದಗಿಸಲಾಗಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿ ನಿಗಮಕ್ಕೆ ವಹಿಸಲಾಗುವ ಗ್ರಾಮ ವಿಕಾಸ ಕಾಮಗಾರಿಗಳು ಬಹಳ ನಿಧಾನ ಗತಿಯಲ್ಲಿ ಸಾಗುತ್ತಿವೆ. ಈ ನಿಗಮಕ್ಕೆ ಈಗಾಗಲೇ ಹೆಚ್ಚು ಕಾಮಗಾರಿಗಳು ವಹಿಸಿರುವುದರಿಂದ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಶಕ್ತರಾಗಿದ್ದಾರೆ. ಇನ್ನು ಮುಂದೆ ಅವಶ್ಯಕ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ಗೆ ವಹಿಸಬಾರದು. ಈ ವರ್ಷ ನೀಡಿರುವ ಕಾಮಗಾರಿಗಳಲ್ಲಿ ಕೆಲಸ ಪ್ರಾರಂಭಿಸದ ಕಾಮಗಾರಿಗಳನ್ನು ಹಾಗೂ ಅದಕ್ಕೆ ನಿಗದಿಪಡಿಸಿರುವ ಅನುದಾನವನ್ನು ಮರಳಿ ಪಡೆದು ಟೆಂಡರ್ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೆ.ಆರ್.ಐ.ಡಿ.ಎಲ್.ಗೆ ಜಿಲ್ಲೆಯಿಂದ ಸುಮಾರು 200 ಕೋಟಿ ರೂ. ಕಾಮಗಾರಿಗಳನ್ನು ನೀಡಲಾಗಿದೆ. ಆದರೆ ಕಾಮಗಾರಿಗಳಲ್ಲಿ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ. ಬೆಣ್ಣೆತೋರಾ ಯೋಜನೆಯಡಿಯಲ್ಲಿ ಸುಮಾರು 20 ಕೋಟಿ ರೂ. ಕಾಮಗಾರಿ ವಹಿಸಲಾಗಿದೆ. ಇದರಲ್ಲೂ ಸಹ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೆ.ಆರ್.ಐ.ಡಿ.ಎಲ್. ಕೂಲಂಕುಷ ಪ್ರಗತಿ ಪರಿಶೀಲನೆ ಕೈಗೊಂಡು ಪ್ರಾರಂಭಿಸದ ಕಾಮಗಾರಿಗಳನ್ನು ಬೇರೆ ಅನುಷ್ಠಾನ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು: ಗ್ರಾಮೀಣ ಕುಡಿಯುವ ನೀರು ಯೋಜನೆಗಾಗಿ ಈ ವರ್ಷ ಸುಮಾರು 61 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ತಿಂಗಳೊಳಗಾಗಿ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಸರ್ಕಾರದಿಂದ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ ಖರ್ಚು ಮಾಡದೇ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಮುಂದಿನ ವರ್ಷಕ್ಕೆ ಕೈಗೊಳ್ಳುತ್ತಿರುವುದು ಅಧಿಕಾರಿಗಳ ವೈಫಲ್ಯವಾಗಿದೆ. 2016-17ನೇ ಸಾಲಿನಲ್ಲಿ ಮಂಜುರಾಗಿರುವ ಕಾಮಗಾರಿಗಳನ್ನು ಅದೇ ವರ್ಷ ಪೂರ್ಣಗೊಳಿಸದೇ 2017-18ರವರೆಗೆ ಮುಂದುವರೆಸಿಕೊಂಡು ಬರಲಾಗುತ್ತಿದೆ. ಇದು ಮರುಕಳಿಸಬಾರದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಒಟ್ಟು 20 ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 18 ಪೂರ್ಣಗೊಂಡಿವೆ. ಪೂರ್ಣಗೊಂಡ ಕಾಮಗಾರಿಗಳ ಪೈಕಿ 4 ಕಾಮಗಾರಿಗಳು ಸ್ಥಗಿತಗೊಂಡಿವೆ. ಇವುಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸಿ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರು ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗಳಿಗೆ ವಹಿಸಿದ ನಂತರ ಅವುಗಳ ನಿರ್ವಹಣೆ ಗ್ರಾಮ ಪಂಚಾಯಿತಿಗಳೇ ಮಾಡಬೇಕು ಎಂದರು.
ಜಿಲ್ಲೆಯಲ್ಲಿ 545 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು, ಈ ಪೈಕಿ 280 ಕಾರ್ಯನಿರ್ವಹಿಸುತ್ತಿವೆ. 46 ಘಟಕಗಳು ಸ್ಥಗಿತಗೊಂಡಿವೆ ಎಂಬ ವರದಿಗಳಿವೆ. ಕೆಲವು ಘಟಕಗಳಿಂದ ನೀರು ಮಾರಾಟವಾಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳಿವೆ. ಅಂತಹವುಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು. ಉಳಿದವುಗಳನ್ನು ದುರಸ್ತಿಗೊಳಿಸಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಈ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕಗಳ ವಸ್ತುಸ್ಥಿತಿಯನ್ನು ಅರಿಯಲು ಜಂಟಿ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆ ಅಸಮರ್ಪಕವಾಗಿರುವುದರಿಂದ ಇದೇ ತಿಂಗಳ 21 ರಿಂದ 23ರವರೆಗೆ ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯರನ್ನೊಳಗೊಂಡು ಇನ್ನೊಂದು ಸುತ್ತು ಸಮೀಕ್ಷೆ ನಡೆಸಬೇಕು. ದುರಸ್ತಿಗೆ ಸಾಕಷ್ಟು ಅನುದಾನ ಲಭ್ಯವಿದ್ದು, ತಿಂಗಳೊಳಗಾಗಿ ದುರಸ್ತಿಗೊಳಿಸಬೇಕೆಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಬೇಡಿಕೆ ಇದ್ದು, ಎಲ್ಲ ಗ್ರಾಮಗಳಲ್ಲಿ ಗ್ರಂಥಾಲಯ ನಿರ್ಮಿಸಬೇಕು. ರಾಜೀವಗಾಂಧಿ ಯುವ ಚೈತನ್ಯ ಯೋಜನೆಯಡಿ ಕೌಶಲ್ಯ ತರಬೇತಿ ಪಡೆದವರಿಗೆ ಭತ್ಯೆ ಮಂಜೂರು ಮಾಡಬೇಕು. ಹಾಗೂ ಗ್ರಾಮ ಪಂಚಾಯತ್‍ಗಳಿಗೆ ಬಿ.ಎಸ್.ಎನ್.ಎಲ್. ಬ್ರಾಡ್‍ಬ್ಯಾಂಡ್ ಸಂಪರ್ಕ ಒದಗಿಸುವ ಯೋಜನೆ ಜಾರಿಗೊಳಿಸಲಾಗಿದ್ದು, ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕೆ.ಆರ್.ಐ.ಡಿ.ಎಲ್. ನವರು ಮರಳು ಗಣಿಗಾರಿಕೆ ಮಾಡುತ್ತಿದ್ದು, ಅದನ್ನು ನಿಯಂತ್ರಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಎಂ.ವೈ. ಪಾಟೀಲ, ಸುಭಾಷ ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಪಂಚಾಯತ್‍ರಾಜ್ ಇಲಾಖೆ ಆಯುಕ್ತ ಪ್ರಕಾಶ, ನಿರ್ದೇಶಕ ನಾಗರಾಜ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಸಚಿವರು ಕಲಬುರಗಿ ತಾಲೂಕಿನ ಐ.ಕೆ. ಬಬಲಾದ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ನಾಗೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಸ್ರೆಲ್ ಮಾದರಿ ಕೃಷಿ ನೀತಿ ಜಾರಿ
******************************
-ಎನ್.ಹೆಚ್.ಶಿವಶಂಕರರೆಡ್ಡಿ
***************************
ಕಲಬುರಗಿ,ಜು.17.(ಕ.ವಾ.)-ಮಾದರಿ ನೀರಾವರಿ ವ್ಯವಸ್ಥೆಯಿಂದ ರೈತರ ಬೆಳೆದ ಬೆಳೆಗಳನ್ನು ಕಾಪಾಡಿ ಅವರ ಜೀವನ ಹಸನು ಮಾಡಲು ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ನೀತಿ ಜಾರಿಗೆ ತರಲಾಗುವುದೆಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಹೇಳಿದರು.
ಮಂಗಳವಾರ ಅವರು ಕಲಬುರಗಿ ತಾಲೂಕಿನ ನಂದೂರ(ಬಿ) ಗ್ರಾಮದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ ಯಶಸ್ವಿ ಕೃಷಿ ಮಹಿಳೆ ಸೈಯದ ಫಿರದೋಸ್ ಬೇಗಂ ಸೈಯದ ಅಕ್ಬರ್ ಹುಸೇನಿ ಅವರ ಹೊಲದಲ್ಲಿನ ಕೃಷಿ ಹೊಂಡವನ್ನು ವೀಕ್ಷಿಸಿ ಮಾತನಾಡಿದರು.
ಕೃಷಿ ಭಾಗ್ಯ ಯೋಜನೆಯಡಿ ಕಳೆದ 5 ವರ್ಷದಲ್ಲಿ 2.25 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದ್ದು, ಇದಕ್ಕಾಗಿ 2 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 9000 ಕೃಷಿ ಹೊಂಡ ನಿರ್ಮಾಣ ಮಾಡಲಾಗಿದ್ದು, 3000 ಕೃಷಿ ಹೊಂಡ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದ ಅವರು ಕಳೆದ ಸರ್ಕಾರದ ಅವಧಿಯಲ್ಲಿ ಜಾರಿಯಾದ ಮಳೆಯಾಶ್ರಿತ ಪ್ರದೇಶಕ್ಕೆ ವರದಾನವಾಗಿರುವ ಕೃಷಿ ಭಾಗ್ಯ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಸಂಬಂಧ ರೈತರಿಂದ ಅಭಿಪ್ರಾಯ ಪಡೆಯಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯಡಿ ನೀಡಲಾಗುವ ಪ್ಲಾಸ್ಟಿಕ್ ಟಾರ್ಪಲಿನ್ ಬದಲಾಗಿ ಸಿಮೆಂಟ್ ಕಾಂಕ್ರಿಟ್ ಬೆಡ್ ನಿರ್ಮಿಸಬೇಕೆಂಬುದು ರೈತರ ಬೇಡಿಕೆಯಾಗಿದ್ದು, ಇದನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.
ಕಳೆದ ವರ್ಷ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾದ ಕಡಲೆ ಬೇಳೆ ಪಾವತಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ 550 ಕೋಟಿ ರೂ.ಗಳಲ್ಲಿ 250 ಕೋಟಿ. ರೂ. ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ ಹಣ ಕೇಂದ್ರದಿಂದ ಬರಬೇಕಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರವು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿಗೆ ಕಳೆದ ಬಾರಿ 5450 ರೂ. ಬೆಂಬಲೆ ಬೆಲೆ ನೀಡಿ ಖರೀದಿಸಿತ್ತು. ಈ ಬಾರಿ ಕಳೆದ ಮೊತ್ತಕ್ಕೆ 225 ರೂ. ಹೆಚ್ಚಿಸಿ 5675 ರೂ.ಗೆ ಖರೀದಿಸಲು ತೀರ್ಮಾನ ಕೈಗೊಂಡಿರುವುದು ನ್ಯಾಯಸಮ್ಮತ ಬೆಲೆ ಪರಿಷ್ಕರಣೆ ಇದಲ್ಲ ದೀರ್ಘಾವಧಿಯ ತೊಗರಿ ಬೆಳೆಗೆ ಇನ್ನು ಹೆಚ್ಚಿನ ಬೆಂಬಲ ಬೆಲೆ ಘೋಷಿಸಬೇಕು ಎಂಬುದು ಈ ಭಾಗದ ರೈತರ ಬೇಡಿಕೆ ಸಮಂಜಸವಾಗಿದ್ದು, ಈ ಸಂಬಂಧ ಶೀಘ್ರದಲ್ಲಿಯೆ ನವದೆಹಲಿಗೆ ತೆರಳಿ ಕೃಷಿ ಸಚಿವರನ್ನು ಭೇಟಿಯಾಗಿ ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಮತ್ತು ಬೆಂಬಲ ಬೆಲೆಯಲ್ಲಿ ಖರೀದಿಸಲಾದ ಕಡಲೆಯ ಬಾಕಿ ಮೊತ್ತ ಸಹ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ರೈತರು ಬೆಳೆದ ಬೆಳೆಗಳು ಸಂಸ್ಕರಣೆ ಮಾಡಿ ಭೂಮಿಯಿಂದ ಮಾರುಕಟ್ಟೆಗೆ ನೇರವಾಗಿ ಸಾಗಾಟ ಮಾಡಿ ಉತ್ತಮ ಬೆಲೆ ಪಡೆಯುವಂತಾಗಬೇಕು ಎಂದ ಸಚಿವರು ಸಮಗ್ರ ಕೃಷಿ ಸಂಸ್ಕರಣೆ ಬಗ್ಗೆ ವಿಚಾರ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಮಾತನಾಡಿ ತೊಗರಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು. ಮನೆಗೊಂದು ಹಸು, ಹೊಲಕ್ಕೊಂದು ಕೃಷಿ ಹೊಂಡ ಮತ್ತು ಬದುವಿನಲ್ಲಿ ಮರ ಬೆಳೆಸುವಂತೆ ಯೋಜನೆ ಜಾರಿಗೊಳಿಸಬೇಕು ಹಾಗೂ ರೈತರು ಕೃಷಿಯೊಂದಿಗೆ ತೋಟಗಾರಿಕೆಯನ್ನು ಮಾಡಲು ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಬೇಕು ಎಂದರು.
ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಕೃಷಿ ಹೊಂಡ ನಿರ್ಮಾಣಕ್ಕೆ ಪ್ರಸ್ತುತ ವೆಚ್ಚ 70 ಸಾವಿರ ರೂ. ಇದ್ದು ಇದು ಸಾಕಾಗುವುದಿಲ್ಲ ಇದನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು, ನೀರು ಹರಿದು ಬರುವ ಸ್ಥಳದಲ್ಲಿಯೆ ಕೃಷಿ ಹೊಂಡ ನಿರ್ಮಿಸಬೇಕು, ಟಾರ್ಪಲಿನ್ ಬದಲಾಗಿ ಕಾಂಕ್ರಿಟ್ ಬೆಡ್ ನಿರ್ಮಿಸಬೇಕು ಎಂದು ರೈತರು ಕೃಷಿ ಭಾಗ್ಯ ಯೋಜನೆ ಬಗ್ಗೆ ಸಚಿವರಿಗೆ ಸಲಹೆ ನೀಡಿದರು.
ಯಶಸ್ವಿ ರೈತ ಸೈಯದ ಅಕ್ಬರ್ ಹುಸೇನಿ ಮಾತನಾಡಿ ಕೃಷಿ ಇಲಾಖೆಯ ನೆರವಿನಿಂದ ಕೃಷಿ ಭಾಗ್ಯ ಯೋಜನೆಯಡಿ ಸುಮಾರು 1.60 ಲಕ್ಷ ರೂ. ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿ ನೀರು ಶೇಖರಣೆ ಮಾಡಿಕೊಂಡು ಬೇಸಿಗೆ ಸೇರಿದಂತೆ ವರ್ಷದಲ್ಲಿ ತೊಗರಿ, ಬಾಳೆ ಮತ್ತು ಕಡಲೆ ಮೂರು ಬೆಳೆಗಳನ್ನು ಬೆಳೆಯುತ್ತಿದ್ದೇನೆ ಇದರಿಂದ ವಾರ್ಷಿಕವಾಗಿ ಏಳೆಂಟು ಲಕ್ಷ ರೂ. ಲಾಭ ಪಡೆಯುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಚಿಂಚೊಳಿ ಶಾಸಕ ಡಾ.ಉಮೇಶ ಜಾಧವ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾ ಪಂಚಾಯತ ಸದಸ್ಯ ಅರವಿಂದ ಚವ್ಹಾಣ, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ, ಉಪನಿರ್ದೇಶಕ ಸಮದ ಪಟೇಲ, ಸಹಾಯಕ ನಿದೇಶಕ ಚಂದ್ರಕಾಂತ ಜೀವಣಗಿ ಸೇರಿದಂತೆ ಕೃಷಿ ಅಧಿಕಾರಿಗಳು, ರೈತ ಸಮುದಾಯದವರು ಉಪಸ್ಥಿತರಿದ್ದರು.

ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ
************************************************
ಕಲಬುರಗಿ,ಜು.17.(ಕ.ವಾ.)-ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯನ್ನು ಕೃಷಿಗೆ ಪೂರಕವಾದ ಭೂಮಿಯಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಲಬುರಗಿ ಜಿಲ್ಲೆಯ ಬಹುತೇಕ ಭೂಮಿ ಪ್ರದೇಶವು ಬೆಳೆ ಬೆಳೆಯಲು ಮಳೆಯನ್ನೆ ನೆಚ್ಚಿಕೊಳ್ಳುವ ಅನಿವಾರ್ಯತೆ ಇದ್ದು, ಇನ್ನು ಸಮರ್ಪಕ ಮಳೆಯಾಗದಿರುವುದು ಹಾಗೂ ಇನ್ನೀತರ ಕಾರಣದಿಂದ ಕೆಲವು ಭೂಮಿಗಳು ಬಂಜರಾಗಿ ಮಾರ್ಪಡುತ್ತವೆ. ಇಂತಹ ಬಂಜರು ಭೂಮಿಗಳ ಬಗ್ಗೆ ವಿಶೇಷ ಗಮನಹರಿಸುವ ಅವಶ್ಯಕತೆ ಇದೆ ಎಂದ ಅವರು ಜಿಲ್ಲೆಯ ಬರಡು ಭೂಮಿಯಲ್ಲಿ ವೈಜ್ಞಾನಿಕ ಆಧಾರಿತ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವಾದ “ಸುಜಲಾ” ಯೋಜನೆ ಜಾರಿಗೊಳಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ ಎಂದರು.
ರೈತ ಸಂಪರ್ಕ ಕೇಂದ್ರಗಳು ಕೃಷಿ ಸಂಬಂಧಿತ ಇಲಾಖೆಗಳ ನೋಡಲ್ ಕಚೇರಿಯಾಗಿ ಕಾರ್ಯನಿರ್ವಹಿಸಬೇಕು. ಇಲ್ಲಿ ರೈತರಿಗೆ ಸಮಗ್ರ ಮಾಹಿತಿ ದೊರೆಯುವಂತಾಗಬೇಕು. ಆರ್.ಎಸ್.ಕೆ. ಕೇಂದ್ರಗಳಿಗೆ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ವಾರಕ್ಕೊಮ್ಮೆ ಕಡ್ಡಾಯ ಭೇಟಿ ನೀಡುವಂತೆ ಶೀಘ್ರದಲ್ಲಿಯೆ ತೀರ್ಮಾನ ಕೈಗೊಳ್ಳಲಾಗುವುದು. ರೈತರಿಗೆ ಸಂಸ್ಕರಣ ಉಪಕರಣಗಳನ್ನು ಸಹ ನೀಡುವ ಚಿಂತನೆ ಸರ್ಕಾರದ ಮುಂದಿದ್ದು, ಈ ಬಗ್ಗೆ ಅಧ್ಯಯನ ಮಾಡುವಂತೆ ವಿಶ್ವವಿದ್ಯಾಲಯಕ್ಕೆ ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿನ ಕೃಷಿ ಪ್ರದೇಶ, ಕೃಷಿ ಹೊಂಡ, ಬೆಳೆ ವಿಮೆ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಮಗ್ರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಪ್ರಸಕ್ತ 2018-19ನೇ ಸಾಲಿನಲ್ಲಿ ಹಾಕಿಕೊಂಡಿರುವ ಕ್ರಿಯಾ ಯೋಜನೆಯನ್ವಯ ಕೃಷಿ ಹೊಂಡ ನಿರ್ಮಾಣ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸಿ. ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ, ಅಗತ್ಯವಿದ್ದೆಡೆ ವಾಟರ್ ಶೆಡ್ ನಿರ್ಮಿಸಿ. ಬೆಲೆಗೆ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಪ್ರರೇಪಿಸಿ ಎಂದ ಸಚಿವರು ಪ್ರತಿ ತಾಲೂಕಿನಲ್ಲಿ ಬೆಳೆ ವಿಮೆ ಕಚೇರಿ ಸ್ಥಾಪಿಸುವಂತೆ ವಿಮೆ ಕಂಪನಿಗೆ ಸೂಚಿಸಲಾಗುವುದು ಎಂದು ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಹೇಳಿದರು.
ಪ್ರಸ್ತುತ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕೃಷಿ ಯೋಜನೆಗಳ ಬಗ್ಗೆ ಮತ್ತು ಅದರಲ್ಲಿನ ಮಾರ್ಪಾಡು ಕುರಿತು ಶೀಘ್ರದಲ್ಲಿಯೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಕೃಷಿ ಅಧಿಕಾರಿಗಳು ಕೂಡಲೆ ಅದರ ಸಾಧಕ-ಬಧಕ ಸಲ್ಲಿಸಿ. ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ ಕೃಷಿ ಯಂತ್ರಧಾರೆ ಯೋಜನೆ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಪಡಿಸಲಾದ ಸಾಫ್ಟವೇರ್ ಆ್ಯಪ್ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವಿಲ್ಲ. ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಿ. ಭೂಮಿಗೆ ಅನುಗುಣವಾಗಿ ವೈಜ್ಞಾನಿಕ ಬೆಳೆ ಬೆಳೆಯಲು ಈ ಆ್ಯಪ್‍ಗಳು ರೈತರ ನೆರವಿಗೆ ಬರಲಿದ್ದು, ಇರುವ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ಮಾತನಾಡಿ ಕಳೆದ 2017-18ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4000 ಕೃಷಿ ಹೊಂಡಗಳ ನಿರ್ಮಿಸುವ ಗುರಿ ಹೊಂದಲಾಗಿ ಈ ಪೈಕಿ 3609 ಹೊಂಡಗಳನ್ನು ನಿರ್ಮಿಸಿದ್ದು, ಇದಕ್ಕಾಗಿ 1268 ಲಕ್ಷ ರೂ. ವ್ಯಯಿಸಲಾಗಿದೆ. ಪ್ರಸಕ್ತ 2018-19ನೇ ಸಾಲಿನಲ್ಲಿ 3352 ಕೃಷಿ ಹೊಂಡಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿದ್ದು, 1761 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕೃಷಿ ಯಂತ್ರಧಾರೆ ಯೋಜನೆಯಡಿ ಹೋಬಳಿಗೆ ಒಂದರಂತೆ 26 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ತಾಪಿಸಲಾಗಿದ್ದು, ಇದೂವರೆಗೆ 10380 ರೈತರು ಕಡಿಮೆ ದರದಲ್ಲಿ ಕೃಷಿ ಯಂತ್ರಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ಫಸಲ್ ಬೀಮಾ ಯೋಜನೆಯಡಿ 13325 ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಬೆಂಬಲೆ ಬೆಲೆ ಯೋಜನೆಯಡಿ ಖರೀದಿಸಲಾದ ಕಡಲೆ ಬೇಳೆಗೆ ಕೇಂದ್ರ ಸರ್ಕಾರದಿಂದ ಬರಬೇಕಾದ 55 ಕೋಟಿ ರೂ. ಅನುದಾನದಲ್ಲಿ 25 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, ಅದನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 59 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 57 ಪ್ರಕರಣಗಳನ್ನು ಸಮಿತಿ ಮುಂದೆ ಇಟ್ಟು ಅಗತ್ಯವಿದ್ದ ಪ್ರಕರಣಗಳಲ್ಲಿ ಪರಿಹಾರ ಧನ ಮಂಜೂರು ಮಾಡಿ ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಶಾಸಕರಾದ ಡಾ.ಉಮೇಶ ಜಾಧವ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ವೈ.ಪಾಟೀಲ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಕೃಷಿ ಉಪನಿರ್ದೇಶಕ ಸಮದ ಪಟೇಲ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಾಹಿತಿ ಹಕ್ಕು: ನಿಗದಿತ ಅವಧಿಯೊಳಗೆ ಮಾಹಿತಿ ನೀಡಲು ಸೂಚನೆ
***********************************************************
ಕಲಬುರಗಿ,ಜು.17.(ಕ.ವಾ.)-ಮಾಹಿತಿ ಹಕ್ಕಿನಡಿ ಅರ್ಜಿಗಳನ್ನು ಕಚೇರಿಗೆ ಸ್ವೀಕರಿಸಿದ ನಂತರ ತುರ್ತಾಗಿ ಕಡತ ಮಂಡಿಸಿ ನಿಗದಿತ ಅವಧಿಯೊಳಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಲು ವಿಳಂಬವಾಗುತ್ತಿದ್ದರೆ ಮಾಹಿತಿಗೆ ಸಂಬಂಧಿಸಿದಂತೆ ಹಿಂಬರಹ ಪತ್ರ ಬರೆಯಬೇಕೆಂದು ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ವಿವಿಧ ಇಲಾಖೆಯ ಅಧಿಕಾರಿಗಳಿÀಗೆ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಜೊತೆಗೆ ಮಾಹಿತಿ ಹಕ್ಕು ಅಧಿನಿಯಮ-2005ರ ಬಗ್ಗೆ ಸಂವಾದ ನಡೆಸಿ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯನ್ನು ಅಧಿಕಾರಿಗಳು ಗಂಭೀರ ರೀತಿಯಲ್ಲಿ ಪರಿಗಣಿಸಿ ಮಾಹಿತಿ ನೀಡುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ನಿಗದಿತ ಸಮಯದಲ್ಲಿ ಮಾಹಿತಿ ನೀಡುವ ಮೂಲಕ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿಗಳು ಬರದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ವೈಯಕ್ತಿಕವಾದಂತಹ ಶೈಕ್ಷಣಿಕ ಅರ್ಹತೆ, ಜಾತಿ, ಸೇವಾ ಪುಸ್ತಕ ಮಾಹಿತಿಯನ್ನು ಒದಗಿಸಬಾರದು. ಮಾಹಿತಿ ಹಕ್ಕಿನಡಿ ಒದಗಿಸುವ ಮಾಹಿತಿಯನ್ನು ಬೇರೆ ಸ್ಥಳಗಳಿಗೆ ರವಾನಿಸಬೇಕಾದಲ್ಲಿ ಅವುಗಳನ್ನು ಕಡ್ಡಾಯವಾಗಿ ನೋಂದಾಯಿತ ಅಂಚೆ ಮೂಲಕ ರವಾನಿಸಿ ದಾಖಲೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಯಾವುದೇ ರೀತಿಯ ತನಿಖೆಗೆ ಸಂಬಂಧಿಸಿದ ಕಡತಗಳ ಮಾಹಿತಿ ಕುರಿತು ತನಿಖೆಗೆ ಸಂಬಂಧಿಸಿದ ವ್ಯಕ್ತಿಯು ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಲ್ಲಿ ಮಾಹಿತಿ ನೀಡಬಹುದು ವಿನಹ ಮೂರನೇ ವ್ಯಕ್ತಿಗೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತಿಲ್ಲ. ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಮಾಹಿತಿಗೆ ಸಂಬಂಧಿಸಿದ ಎಷ್ಟು ಪುಟಗಳ ಮಾಹಿತಿ ಇದೆ ಒಂದು ಪುಟಕ್ಕೆ ಎಷ್ಟು ಮೊತ್ತ ತಗಲುವುದು ಎಂಬುದರ ಬಗ್ಗೆ ಹಾಗೂ ಎಷ್ಟು ದಿನದೊಳಗೆ ಮಾಹಿತಿ ನೀಡಲಾಗುವುದು ಎಂಬ ಬಗ್ಗೆ ಹಿಂಬರಹ ಪತ್ರ ಬರೆಯಬೇಕು. ತಮ್ಮ ತಮ್ಮ ಇಲಾಖೆಯಲ್ಲಿ ತಾತ್ಕಾಲಿಕ ಕಡತ ಖಾಯಂ ಕಡತಗಳ ಬಗ್ಗೆ 4(1)ಎ 4(1) ಬಿ ಪ್ರತಿ ವರ್ಷ ಸಿದ್ದಪಡಿಸಿದ್ದಲ್ಲಿ ತಮಗೆ ಮಾಹಿತಿ ನೀಡುವಲ್ಲಿ ಅನುಕೂಲವಾಗುತ್ತದೆ ಎಂದರು.
ಪೊಲೀಸ ಇಲಾಖೆಯಲ್ಲಿ ಸುಮಾರು ಅರ್ಜಿಗಳು ಬರುತ್ತಿದ್ದು ಅರ್ಜಿಯಲ್ಲಿ ಚಾರ್ಜ ಶೀಟ್, ಕೇಸ್ ಕಡತ, ದಾಖಲಾತಿಗಳ ಬಗ್ಗೆ ಮಾಹಿತಿ ಕೇಳುತ್ತಾರೆ. ಸದರಿ ದಾಖಲಾತಿಗಳು ತುಂಬ ಇರುವದರಿಂದ ಮಾಹಿತಿ ನೀಡುವಲ್ಲಿ ವಿಳಂಬವಾಗುತ್ತಿದೆ. ಒಂದು ಬಾರಿ ಕೇಳಿರುವ ಮಾಹಿತಿಗೆ ಇನ್ನೊಂದು ಬಾರಿ ಮಾಹಿತಿ ಕೇಳಿದಾಗ ನೀಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಲ್ಲಿ ಪದೆ ಪದೆ ಅದೇ ವಿಷಯಕ್ಕೆ ಸಂಬಂಧಿದ ನೂರಾರು ಅರ್ಜಿಗಳು ಬರುತ್ತವೆ ಹಾಗೂ ಪೊಲೀಸ ಇಲಾಖೆಯಲ್ಲಿ ಬಡ್ತಿ ವಿಚಾರದಲ್ಲಿ ಅಸಾಮದಾನ ಇರುವದರಿಂದ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ ಮಾಹಿತಿ ಕೇಳುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆ ದಿನ
*****************************************
ಕಲಬುರಗಿ,ಜು.17.(ಕ.ವಾ.)-ಪ್ರಸಕ್ತ 2018-19ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಅಡಿಯಲ್ಲಿ ಕಲಬುರಗಿ ತಾಲೂಕಿನ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು 2018ರ ಜುಲೈ 31 ಕೊನೆಯ ದಿನವಾಗಿದೆ ಎಂದು ತಾಲೂಕಿನ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈ ಯೋಜನೆಯಡಿ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಹಾಗೂ ಇತರೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಟಾನಗೊಳಿಸಲು ಅಧಿಸೂಚಿಸಲಾಗಿದೆ. ತಾಲೂಕಿನ ಹೋಬಳಿವಾರು ಬೆಳೆಗಳ ವಿವರ ಇಂತಿದೆ.
ಅವರಾದ ಹೋಬಳಿ ಮಟ್ಟ: ಉದ್ದು, ಎಳ್ಳು, ಸಜ್ಜೆ, ಸೂರ್ಯಕಾಂತಿ, ಸೋಯಾ ಅವರೆ ಮತ್ತು ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ, ಕಲಬುರಗಿ ಹೋಬಳಿ ಮಟ್ಟ: ಎಳ್ಳು, ಸಜ್ಜೆ, ಸೂರ್ಯಕಾಂತಿ, ಸೋಯಾ ಅವರೆ, ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ, ಪಟ್ಟಣ ಹೋಬಳಿ ಮಟ್ಟ: ಉದ್ದು, ಎಳ್ಳು, ಸಜ್ಜೆ, ಸೂರ್ಯಕಾಂತಿ, ಹೆಸರು(ಮಳೆಯಾಶ್ರಿತ) ಬೆಳೆಗಳಿಗೆ, ಫರಹತಾಬಾದ ಹೋಬಳಿ ಮಟ್ಟ: ಉದ್ದು, ಎಳ್ಳು, ಸಜ್ಜೆ, ಸೂರ್ಯಕಾಂತಿ, ಹತ್ತಿ, ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ, ಕಮಲಾಪುರ ಹೋಬಳಿ ಮಟ್ಟ: ಉದ್ದು, ಎಳ್ಳು, ಜೋಳ, ಸಜ್ಜೆ, ಸೂರ್ಯಕಾಂತಿ, ಸೋಯಾ ಅವರೆ, ಹೆಸರು (ಮಳೆಯಾಶ್ರಿತ), ಮಹಾಗಾಂವ ಹೋಬಳಿ ಮಟ್ಟ: ಉದ್ದು, ಜೋಳ, ಸೂರ್ಯಕಾಂತಿ, ಸೋಯಾ ಅವರೆ (ಮಳೆಯಾಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ.
ಕಲಬುರಗಿ ತಾಲೂಕಿನ ಎಲ್ಲ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಮತ್ತು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಅರ್ಹತಾ ಯಾದಿ ಪ್ರಕಟ
***********************************
ಕಲಬುರಗಿ,ಜು.17.(ಕ.ವಾ.)-ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಂದ 2017-18ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಸಹಾಯಧನ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿಗಾಗಿ ಸ್ವೀಕೃತವಾದ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನಾ ಸಮಿತಿಯು ಪರಿಶೀಲಿಸಿ ಅರ್ಹತಾ ಯಾದಿಯನ್ನು ತಯಾರಿಸಿದೆ. ಈ ಅರ್ಹತಾ ಯಾದಿಯನ್ನು ಅಭ್ಯರ್ಥಿಗಳ ಗಮನಕ್ಕಾಗಿ ಜುಲೈ 13 ರಂದು ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸೂಚನಾ ಫÀಲಕದಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಈ ಅರ್ಹತಾ ಯಾದಿಯನ್ನು ಪರಿಶೀಲಿಸಬಹುದಾಗಿದೆ. ಈ ಅರ್ಹತಾ ಪಟ್ಟಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ತಮ್ಮ ಅಧಿಕೃತ ದಾಖಲೆಗಳೊಂದಿಗೆ ಅಥವಾ ಮೂಲ ದಾಖಲೆಗಳೊಂದಿಗೆ ತಮ್ಮ ಅಹವಾಲುಗಳನ್ನು ಕಲಬುರಗಿ ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಲಿಖಿತ ರೂಪದಲ್ಲಿ 2018ರ ಆಗಸ್ಟ್ 11 ರೊಳಗಾಗಿ ಸಲ್ಲಿಸಬೇಕೆಂದು ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
************************************************
ಕಲಬುರಗಿ,ಜು.17.(ಕ.ವಾ.)-ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ, ಸರಸಂಬಾ ಹಾಗೂ ಜೇವರ್ಗಿ ತಾಲೂಕಿನ ಮಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 19 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ಡಿ. ಕಲಬುರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಜುಲೈ 21ರೊಳಗಾಗಿ ಸಲ್ಲಿಸಬೇಕು. ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು ಸ್ವೀಕರಿಸಿದ ಅರ್ಜಿಗಳನ್ನು ಕಲಬುರಗಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಜುಲೈ 23ರೊಳಗಾಗಿ ಸಲ್ಲಿಸಬೇಕು. ಅತಿಥಿ ಉಪನ್ಯಾಸಕರ ನೇಮಕಾತಿಯು ಸರ್ಕಾರದ ಆದೇಶದ ಷರತ್ತುಗಳಿಗೊಳಪಟ್ಟಿರುತ್ತದೆ. ವಿಷಯವಾರು ಉಪನ್ಯಾಸಕರ ಹುದ್ದೆಗಳ ವಿವರ ಹಾಗೂ ಮತ್ತಿತರ ಮಾಹಿತಿಗಾಗಿ ಜಿಲ್ಲಾ ಉಪನಿರ್ದೇಶಕರ ಕಚೇರಿ, ಪದವಿಪೂರ್ವ ಶಿಕ್ಷಣ ಇಲಾಖೆ, ಮಿನಿ ವಿಧಾನ ಸೌಧ ಆವರಣ ಕಲಬುರಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-233830ನ್ನು ಸಂಪರ್ಕಿಸಲು ಕೋರಲಾಗಿದೆ.
2018ರ ಜುಲೈ 2ರ ಸರ್ಕಾರದ ಆದೇಶದನ್ವಯ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರುಗಳು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗುವವರೆಗೆ ಅಥವಾ ಮಾರ್ಚ್ 2019ರ ವರೆಗೆ ಇದರಲ್ಲಿ ಯಾವುದೂ ಮೊದಲೋ ಅಲ್ಲಿಯವರೆಗೆ ಅತಿಥಿ ಉಪನ್ಯಾಸಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳ ಆಹ್ವಾನ
***********************************************
ಕಲಬುರಗಿ,ಜು.17.(ಕ.ವಾ.)-ಕರ್ನಾಟಕ ಜಾನಪದ ಅಕಾಡೆಮಿಯಿಂದ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿ 2016-17 ಮತ್ತು 2017-18ನೇ ಸಾಲಿಗೆ ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2016ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಹಾಗೂ 2017ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳ ಮಿತಿಯಲ್ಲಿರುವ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ ಮತ್ತು ಜನಪದ ಸಂಕೀರ್ಣ ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಸಲ್ಲಿಸಬಹುದಾಗಿದೆ.
ಲೇಖಕರು, ಪ್ರಕಾಶಕರು, ಸಂಪಾದಕರು 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 ಇವರಿಗೆ 2018ರ ಆಗಸ್ಟ್ 10 ರೊಳಗಾಗಿ ಖುದ್ದಾಗಿ, ಕೋರಿಯರ್ ಅಥವಾ ಅಂಚೆ ಮೂಲಕ ಕಳುಹಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
********************************************************
ಕಲಬುರಗಿ,ಜು.17.(ಕ.ವಾ.)-ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರಸಕ್ತ 2018-19ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ ಮತ್ತು ಪಾರ್ಸಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರ್ಕಾರದ ಪ್ರಾಯೋಜಿತ ಈ ಕೆಳಕಂಡ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಯೋಜನೆ, ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ, ಶ್ರಮಶಕ್ತಿ ಸಾಲದ ಯೋಜನೆ, ಕಿರು (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕೃಷಿ ಭೂಮಿ ಖರೀದಿ ಯೋಜನೆ, ಕ್ರೈಸ್ತ ಸಮುದಾಯದವರಿಗಾಗಿ ನಿವೇಶನ ಖರೀದಿ/ಗೃಹ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ ಹಾಗೂ ಕ್ರೈಸ್ತ ಸಮುದಾಯ ವಿಶೇಷ ಅಭಿವೃದ್ಧಿ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅದೇ ರೀತಿ 2017-18ನೇ ಸಾಲಿನಿಂದ ಪ್ರಾರಂಭಿಸಿದ ಹೊಸ ಯೋಜನೆಗಳ ವಿವರ ಇಂತಿದೆ. ಹಸು, ಕುರಿ, ಮೇಕೆ ಮುಂತಾದ ಸಾಕು ಪ್ರಾಣಿಗಳನ್ನು ಖರೀದಿಸಲು ಮತ್ತು ಕೋಳಿ ಸಾಕಾಣಿಕೆಗಾಗಿ ಅಲ್ಪಸಂಖ್ಯಾತ ಗ್ರಾಮೀಣ ಮಹಿಳೆಯರಿಗೆ ಸಾಲ ಸೌಲಭ್ಯ ಮತ್ತು ಸಹಾಯಧನ, ಟ್ಯಾಕ್ಸಿ/ಸರಕು ಸಾಗಣೆ ವಾಹನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ನಿಗಮದಿಂದ ಸಹಾಯಧನ ಸೌಲಭ್ಯ. ಕೊಲ್ಲಿ ರಾಷ್ಟ್ರಗಳಿಂದ ಉದ್ಯೋಗಾವಕಾಶ ವಂಚಿತವಾಗಿ ಮತ್ತು ಅಂತಿಮವಾಗಿ ಹಿಂದಿರುಗಿದ ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿಗಳಿಗೆ ಸ್ವಯಂ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ. ಅಲ್ಪಸಂಖ್ಯಾತ ರೈತರ ಆಧುನಿಕ ಕೃಷಿ ಉಪಕರಣಗಳಾದ ಟಿಲ್ಲರ್, ಉಕ್ಕಿನ ನೇಗಿಲು, ಡ್ರಿಲ್ಸ್, ಕಳೆ ತೆಗೆಯುವ ಯಂತ್ರ, ಪಂಪ್‍ಸೆಟ್, ಟ್ರ್ಯಾಕ್ಟರ್ ಖರೀದಿಸಲು ಸಾಲ ಸೌಲಭ್ಯ ಮತ್ತು ಸಹಾಯಧನವನ್ನು ನೀಡಲಾಗುತ್ತದೆ.
‘ಮನೆ ಮಾಳಿಗೆ’ ಯೋಜನೆಯಡಿ ಕೋಮು ಗಲಭೆ/ಕೋಮು ಹಿಂಸಾಚಾರ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪದಿಂದಾಗಿ ಮನೆ, ವ್ಯಾಪಾರ ಸ್ಥಳ ಕಳೆದುಕೊಂಡ ಅಲ್ಪಸಂಖ್ಯಾತರಿಗೆ, ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ಖೈದಿಗಳಿಗೆ, ಭೂಯೋತ್ಪಾದಕ ವಿರೋಧಿ ಚಟುವಟಿಕೆ, ಗೂಂಡಾ ಕಾಯ್ದೆಯಡಿ ಬಂಧಿತರಾಗಿ ಪ್ರಕರಣಗಳು ಸಾಭೀತಾಗದೆ ನ್ಯಾಯಾಲಯದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ನಿರಪರಾಧಿಗಳಿಗೆ ಹಾಗೂ ವಿವಿಧ ಸುರಕ್ಷಿತ ಕಾಯ್ದೆಯಡಿ ಬಂಧಿತರಾಗಿ ಹಲವಾರು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಗೊಂಡ ಅಲ್ಪಸಂಖ್ಯಾತ ನಿರಪರಾಧಿಗಳಿಗೆ ಪುನರ್ವಸತಿಗಾಗಿ ಸಾಲ ಸೌಲಭ್ಯ ಮತ್ತು ಸಹಾಯಧನ ಹಾಗೂ ಅಟೋಮೊಬೈಲ್ ಉದ್ಯಮಕ್ಕಾಗಿ ನಿಗಮದಿಂದ ಸಹಾಯಧನ ನೀಡಲಾಗುತ್ತದೆ.
ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕಲ್ಲದೇ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ವರಮಾನವು ನಗರ ಪ್ರದೇಶದವರಿಗೆ 1,03,000 ರೂ.ಗಳ ಮತ್ತು ಗ್ರಾಮೀಣ ಪ್ರದೇಶದವರಿಗೆ 81,000 ರೂ.ಗಳನ್ನು ಮೀರಿರಬಾರದು. ಅರಿವು ಯೋಜನೆಯಡಿ ಸಾಲ ಪಡೆಯಲು ವಾರ್ಷಿಕ ವರಮಾನ 6 ಲಕ್ಷ ರೂ.ಗಳನ್ನು ಮೀರಿರಬಾರದು. ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು. 2017-18ನೇ ಸಾಲಿನಿಂದ ಅನುಷ್ಠಾನಗೊಳ್ಳುತ್ತಿರುವ ಹೊಸ ಯೋಜನೆಗಳಡಿ ಅರ್ಜಿ ಸಲ್ಲಿಸುವ ಅರ್ಜಿದಾರರ ವಯೋಮಿತಿ 18 ರಿಂದ 45 ವರ್ಷಗಳದೊಳಗಿರಬೇಕು. ಅರ್ಜಿದಾರರು ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರರು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರಬೇಕು.
ನಿಗಮದ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅಭ್ಯರ್ಥಿಗಳು ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆನ್‍ಲೈನ್ ಮೂಲಕ ‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆಗಾಗಿ hಣಣಠಿs://ಞmಜಛಿ.ಞಚಿಡಿ.ಟಿiಛಿ.iಟಿ/ಚಿಡಿivu2 ವೆಬ್‍ಸೈಟ್‍ನ್ನು ಹಾಗೂ ಇತರೆ ಎಲ್ಲಾ ಯೋಜನೆಗಳಿಗೆ hಣಣಠಿs://ಞmಜಛಿ.ಞಚಿಡಿ.ಟಿiಛಿ.iಟಿ/ಟoಚಿಟಿ/ಟogiಟಿ.ಚಿsಠಿx ವೆಬ್‍ಸೈಟ್‍ನಲ್ಲಿ 2018ರ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಎಸ್.ಆರ್. ರೆಸಿಡೆನ್ಸಿ, ಪ್ಲಾಟ್ ನಂ. 1881, ಮೊದಲನೇ ಮಹಡಿ, ಎಲ್.ಎಸ್. ರಾಠಿ ಆಸ್ಪತ್ರೆ ಎದುರುಗಡೆ, ಹಳೆ ಜೇವರ್ಗಿ ರಸ್ತೆ ಕಲಬುರಗಿ-585103 ಕಚೇರಿ ವಿಳಾಸಕ್ಕೆ ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-232425ನ್ನು ಸಂಪರ್ಕಿಸಲು ಕೋರಲಾಗಿದೆ.

ಹೀಗಾಗಿ ಲೇಖನಗಳು News and photo Date: 17--07--2018
ಎಲ್ಲಾ ಲೇಖನಗಳು ಆಗಿದೆ News and photo Date: 17--07--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 17--07--2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-date-17-07-2018.html
0 Response to "News and photo Date: 17--07--2018"
ಕಾಮೆಂಟ್ ಪೋಸ್ಟ್ ಮಾಡಿ