ಶೀರ್ಷಿಕೆ : News and photo Date: 15-07-2018
ಲಿಂಕ್ : News and photo Date: 15-07-2018
News and photo Date: 15-07-2018
ಅಕ್ಟೋಬರ್‍ನಲ್ಲಿ ವಿಮಾನ ಹಾರಾಟ ಪ್ರಾರಂಭ
***************************************
ಕಲಬುರಗಿ,ಜು.14.(ಕ.ವಾ.)-ಕಲಬುರಗಿ ವಿಮಾನ ನಿಲ್ದಾಣದ ಸಂಪೂರ್ಣ ಕಾಮಗಾರಿಯನ್ನು ಇದೇ ಅಕ್ಟೋಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಿ ವಿಮಾನ ಹಾರಾಟ ಪ್ರಾರಂಭಗೊಳಿಸಲಾಗುವುದು ಎಂದು ಅಧಿಕಾರಿಗಳು ವಾಗ್ದಾನ ಮಾಡಿದ್ದಾರೆ. ಅದರಂತೆ ನಡೆದುಕೊಳ್ಳುಬೇಕು ಎಂದು ಲೋಕಸಭಾ ಸದಸ್ಯ ಡಾ|| ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ಶನಿವಾರ ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಯನ್ನು ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿ, ವಿಮಾನ ನಿಲ್ದಾಣದ ಎಲ್ಲ ಕಟ್ಟಡ ಕಾಮಗಾರಿಗಳು ಹಾಗೂ ರನ್ ವೇ ನಿರ್ಮಾಣ ಪೂರ್ಣಗೊಂಡಿದೆ. ಕೇವಲ ವಿದ್ಯುತ್ ಕಾಮಗಾರಿ ಮಾತ್ರ ಬಾಕಿ ಇದೆ. ಈಗಾಗಲೇ ಒಟ್ಟು 96.90 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸಧ್ಯ ವಿಮಾನ ನಿಲ್ದಾಣದಲ್ಲಿರುವ ಸವಲತ್ತುಗಳಿಂದ ಹಗಲು ಹೊತ್ತು ವಿಮಾನ ಸಂಚಾರ ಪ್ರಾರಂಭಿಸಬಹುದಾಗಿದೆ. ರಾತ್ರಿ ಹೊತ್ತು ವಿಮಾನ ಸೇವೆ ಪ್ರಾರಂಭಿಸಲು ವಿದ್ಯುತ್ ವ್ಯವಸ್ಥೆ ಕಡ್ಡಾಯವಾಗಿ ಅವಶ್ಯಕವಿರುವ ಕಾರಣ ವಿದ್ಯುತ್ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ವಿಮಾನ ಸಂಚಾರ ಪ್ರಾರಂಭಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟ ಅವರು ವಿದ್ಯುತ್ ಕಾಮಗಾರಿ ಸೇರಿದಂತೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಒಟ್ಟು 78 ಕೋಟಿ ರೂ.ಗಳ ಅವಶ್ಯಕತೆಯಿದ್ದು, ಈ ಬಾರಿಯ ಆಯವ್ಯಯದಲ್ಲಿ 65 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಹೆಚ್ಚಿನ ಹಣ ಬೇಕಾದಲ್ಲಿ ಹೆಚ್.ಕೆ.ಆರ್.ಡಿ.ಬಿ.ಯಿಂದ ನೀಡಲಾಗುವುದು. ಈಗಾಗಲೇ ವಿದ್ಯುತ್ ಗುತ್ತಿಗೆದಾರರು ವಿದ್ಯುತ್ ಉಪಕರಣಗಳನ್ನು ಖರೀದಿಸಲು ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ವಿಮಾನ ನಿಲ್ದಾಣ ಪೂರ್ಣಗೊಳಿಸಲು ಅನುದಾನದ ಕೊರತೆ ಇರುವುದಿಲ್ಲ. ವಿಮಾನ ನಿಲ್ದಾಣ ಕಾಮಗಾರಿಗೆ ಅವಶ್ಯಕವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ನಿನ್ನೆ 7.5 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಪ್ರಾಯೋಗಿಕವಾಗಿ ವಿಮಾನ ಹಾರಾಟಕ್ಕೆ ವಿಮಾನ ನಿಲ್ದಾಣ ಸಿದ್ದವಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ದಿನಾಂಕ ಪಡೆದು ಪ್ರಾಯೋಗಿಕ ವಿಮಾನ ಹಾರಾಟ ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿ ಹಾಗೂ ಮುಖ್ಯ ಇಂಜನೀಯರ ಅವರು ಪದೇ ಪದೇ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಹಾಗೆ ನೋಡಿಕೊಳ್ಳಬೇಕು. ಹೈದ್ರಾಬಾದ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ ಯೋಜನೆಯಡಿ ಒಳಪಡಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ವಿಮಾನ ಪ್ರಯಾಣ ದುಬಾರಿಯಾಗದೇ ಎಲ್ಲರಿಗೂ ಅನುಕೂಲವಾಗುವುದು ಎಂದರು.
ರೈಲ್ವೇ ಯೋಜನೆ: ಕಲಬುರಗಿ ವಿಭಾಗದಲ್ಲಿ ಅನುಮೋದನೆಯಾಗಿರುವ ಓವರ್ ಬಿಡ್ಜ್, ಅಂಡರ ಬಿಡ್ಜ್, ರೈಲು ಮಾರ್ಗ ವಿದ್ಯುದ್ದೀಕರಣ, ದ್ವೀಪಥ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇವುಗಳನ್ನು ಪೂರ್ಣಗೊಳಿಸಲು ಒತ್ತು ನೀಡುವಂತೆ ರೈಲ್ವೇ ಸಚಿವರೊಂದಿಗೆ ಸ್ವತಃ ಚರ್ಚಿಸಲಾಗಿದೆ. ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಥಮಾಧ್ಯತೆ ನೀಡಲಾಗುತ್ತಿದೆ. ಕಲಬುರಗಿ ರೈಲ್ವೇ ವಿಭಾಗ ಸೇರಿದಂತೆ ದೇಶದಲ್ಲಿ ಅಸ್ಸಾಂ ಹಾಗೂ ಜಮ್ಮು ಮತ್ತು ಕಾಶ್ಮೀರಗಳನ್ನು ರೈಲ್ವೇ ವಿಭಾಗಗಳನ್ನಾಗಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದೆ. ಇದಕ್ಕೆ ವಿಶೇಷ ಕಾಳಜಿ ವಹಿಸಬೇಕೆಂದು ಕೇಂದ್ರ ರೈಲ್ವೇ ಸಚಿವರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಯಾದಗಿರಿ ರೈಲು ಬೋಗಿ ತಯಾರಿಕಾ ಘಟಕ: ಯಾದಗಿರಿ ಜಿಲ್ಲೆಯಲ್ಲಿ ರೈಲು ಬೋಗಿ ತಯಾರಿಕಾ ಘಟಕ ಪ್ರಾರಂಭಿಸಲಾಗಿದೆ. ಈ ಘಟಕವನ್ನು ವಿಸ್ತರಿಸಲು ಈ ಘಟಕ್ಕಕೆ ಹೆಚ್ಚು ರೈಲು ಬೋಗಿಗಳನ್ನು ನಿರ್ಮಿಸಲು ಆದೇಶ ನೀಡಿದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಶೃಷ್ಠಿಯಾಗುತ್ತವೆ. ದೇಶದಲ್ಲಿ ರೈಲ್ವೇ ಇಲಾಖೆಗೆ ರೈಲು ಬೋಗಿಗಳ ಹೆಚ್ಚಿನ ಬೇಡಿಕೆ ಇದ್ದಲ್ಲಿ ಯಾದಗಿರಿ ಘಟಕಕ್ಕೆ ಅವಕಾಶ ನೀಡುವಂತೆ ತಿಳಿಸಲಾಗಿದೆ. ಆದರೆ ಕೇಂದ್ರ ಸರ್ಕಾರವು ನೂತನ ರೈಲು ಬೋಗಿ ಘಟಕ ಪ್ರಾರಂಭಿಸುವ ಉದ್ದೇಶದಿಂದ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈ ಕುರಿತು ಪಾರ್ಲಿಮೆಂಟ್‍ನಲ್ಲಿ ಪ್ರಶ್ನೆ ಕೇಳಲಾಗಿದೆ ಹಾಗೂ ಕನ್ಸಲ್ಟನ್ಸಿ ಕಮಿಟಿ ಮುಂದೆ ಈ ವಿಷಯ ಮಂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ|| ಶರಣಪ್ರಕಾಶ ಪಾಟೀಲ, ಮಹಾನಗರ ಪಾಲಿಕೆ ಮೇಯರ ಶರಣಕುಮಾರ ಮೋದಿ, ಗಣ್ಯರಾದ ಜಗದೇವ ಗುತ್ತೇದಾರ, ಭಾಗಣ್ಣಗೌಡ ಸಂಕನೂರ, ತಿಪ್ಪಣ್ಣಪ್ಪ, ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜನೀಯರ ಎನ್.ಎಸ್.ರಮೇಶ, ಅಧೀಕ್ಷಕ ಇಂಜನೀಯರ ಪ್ರಕಾಶ ಶ್ರೀಹರಿ, ಕಾರ್ಯನಿರ್ವಾಹಕ ಇಂಜನೀಯರ ಅಮೀನ ಮುಕ್ತಾರ ಮತ್ತಿತರರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಜನತಾ ನ್ಯಾಯಾಲಯ
******************************
108 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1.34 ಕೋಟಿ ರೂ.ಗಳ ಪರಿಹಾರ ವಸೂಲಿ
***********************************************************************
ಕಲಬುರಗಿ,ಜು.15.(ಕ.ವಾ.)-ಶನಿವಾರ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಒಟ್ಟು 108 ಪ್ರಕಣಗಳನ್ನು ಇತ್ಯರ್ಥಗೊಳಿಸಿ 1.34 ಕೋಟಿ ರೂ.ಗಳ ಪರಿಹಾರ ವಸೂಲಿ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ 34 ಮೋಟಾರ ವಾಹನ ಮೊಕದ್ದಮೆಗಳನ್ನು ಇತ್ಯರ್ಥಗೊಳಿಸಿ 1.19 ಕೋಟಿ ರೂ.ಗಳ ಪರಿಹಾರವನ್ನು ಕಕ್ಷಿದಾರರಿಗೆ ದೊರಕಿಸಲಾಗಿದೆ. 8 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ 5.57 ಲಕ್ಷ ರೂ..ಗಳ ವಸೂಲಾತಿಗೆ ಆದೇಶಿಸಲಾಗಿದೆ. 15 ಚೆಕ್ ಬೌನ್ಸ್ ಪ್ರಕರಣಗಳನ್ನು ತೀರ್ಮಾನಿಸಿ 5.50 ಲಕ್ಷ ರೂ.ಗಳ ಪಾವತಿಗೆ ಆದೇಶಿಸಲಾಗಿದೆ. 7 ಕ್ರಿಮಿನಲ್ ಮತ್ತು 44 ಜೆಸ್ಕಾಂ ಪ್ರಕರಣಗಳನ್ನು ತೀರ್ಮಾನಿಸಿ 33.83 ಲಕ್ಷ ರೂ.ಗಳ ವಸೂಲಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರ ಪ್ರವಾಸ
********************************************************
ಕಲಬುರಗಿ,ಜು.15.(ಕ.ವಾ.)- ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಜಗದೀಶ ಹಿರೇಮನಿ ಅವರು ಜುಲೈ 16ರಂದು ಸಂಜೆ 5 ಗಂಟೆಗೆ ಕಲಬುರಗಿಗೆ ಆಗಮಿಸಿ, ಸಂಜೆ 7 ರಿಂದ ಕಲಬುರಗಿ ನಗರದ ಆರ್ಯನಗರ ಕಾಲೋನಿಯಲ್ಲಿ ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳನ್ನು ಆಲಿಸಿ ಪೌರಕಾರ್ಮಿಕರಾದ ವಿಮಲಾಬಾಯಿ ಗಂಡ ನಾಗರಾಜ ದುಲಾರೆ ಅವರ ಮನೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಪೌರ ಕಾರ್ಮಿಕರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಲಿದ್ದಾರೆ.

ಜುಲೈ 17ರಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಸಮನ್ವಯ ಸಮಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅರೋಗ್ಯ, ಸಮಾಜ ಕಲ್ಯಾಣ, ಸಫಾಯಿ ಕರ್ಮಚಾರಿ ಮುಖಂಡರೊಂದಿಗೆ ಸಭೆ ಸೇರಿ ಸಫಾಯಿ ಕರ್ಮಚಾರಿಗಳ ಹಾಗೂ ಗ್ರೂಪ್ ಡಿ ನೌಕರರ ಸಮಸ್ಯೆಗಳನ್ನು ಚರ್ಚಿಸುವರು. ಈ ಸಂದರ್ಭದಲ್ಲಿ ಮಾನ್ಯುವೆಲ್ ಸ್ಕ್ಯಾವೆಂಜರ್ ಮತ್ತು ಅವರ ಪುನರ್ವಸತಿ ಕುರಿತು ಪರಿಶೀಲನೆ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಅಧಿಕಾರಿಗಳೊಂದಿಗೆ ಸಫಾಯಿ ಕರ್ಮಚಾರಿಗಳ ಕುರಿತು ಸಭೆ ನಡೆಸುವರು ಹಾಗೂ ಜಿಲ್ಲಾ ಆಸ್ಪತ್ರೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಗುಲಬರ್ಗಾದಿಂದ ರಾಯಚೂರಿಗೆ ಪ್ರಯಾಣಿಸುವರು.
ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಪ್ರವಾಸ
**************************************
ಕಲಬುರಗಿ,ಜು.15.(ಕ.ವಾ.)-ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ರೈಲಿನ ಮೂಲಕ ಇದೇ ಜುಲೈ 16 ರಂದು ಬೆಳಿಗ್ಗೆ 6 ಗಂಟೆಗೆ ಕಲಬುರಗಿಗೆ ಆಗಮಿಸುವರು. ಅಂದು ಬೆಳಿಗ್ಗೆ 11 ಗಂಟೆಗೆ ಹಾಗೂ ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜುಲೈ 17ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಜೊತೆ ಮಾಹಿತಿ ಹಕ್ಕು ಅಧಿನಿಯಮ-2005ರ ಬಗ್ಗೆ ಸಂವಾದ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಕಲಬುರಗಿಯಿಂದ ಬೀದರಕ್ಕೆ ಪ್ರಯಾಣ ಬೆಳೆಸುವರು. ಜುಲೈ 18ರಂದು ಬೀದರದಿಂದ ಮರಳಿ ಕಲಬುರಗಿಗೆ ಆಗಮಿಸಿ, ಸಂಜೆ 6.40 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಕೃಷಿ ಸಚಿವರ ಪ್ರವಾಸ
**********************
ಕಲಬುರಗಿ,ಜು.15.(ಕ.ವಾ.)-ಕೃಷಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ಅವರು ಬೀದರದಿಂದ ರಸ್ತೆ ಮಾರ್ಗವಾಗಿ ಇದೇ ಜುಲೈ 16ರಂದು ಕಲಬುರಗಿ ತಾಲೂಕಿನ ಡೊಂಗುರಗಾಂವಕ್ಕೆ ಆಗಮಿಸಿ, ಅಂದು ಸಂಜೆ 6.15 ಗಂಟೆಯಿಂದ ಸಂಜೆ 6.45 ಗಂಟೆಯವರೆಗೆ ತೊಗರಿ, ಹೆಸರು ಬೆಳೆಗಳ ಯಾಂತ್ರೀಕೃತ ಬಿತ್ತನೆ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ಹಾಗೂ ರೈತರೊಂದಿಗೆ ಚರ್ಚೆ ನಡೆಸುವರು. ನಂತರ ರಾತ್ರಿ 7.30 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.

ಪ್ರವಾಸಿ ಟ್ಯಾಕ್ಸಿ ಖರೀದಿಗೆ ಸಹಾಯಧನ: ಅರ್ಜಿ ಆಹ್ವಾನ
************************************************
ಕಲಬುರಗಿ,ಜು.15.(ಕ.ವಾ.)-ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಪ್ರವಾಸೋದ್ಯಮ ಇಲಾಖೆಯ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ ಒಟ್ಟು 41 ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳು ಪ್ರವಾಸಿ ಟ್ಯಾಕ್ಸಿ ಖರೀದಿಯ ಸಹಾಯಧನ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದರ ಪೈಕಿ ಎಸ್.ಸಿ.-21, ಎಸ್.ಟಿ.-06 ಹಾಗೂ ಓ.ಬಿ.ಸಿ.-14 ಅಭ್ಯರ್ಥಿಗಳು ಸೇರಿದಂತೆ ಒಟ್ಟು 41 ಅಭ್ಯರ್ಥಿಗಳಿಗೆ ಪ್ರತಿ ಪ್ರವಾಸಿ ಟ್ಯಾಕ್ಸಿಗೆ 3 ಲಕ್ಷ ರೂ.ಗಳ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ಒದಗಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಲಘು ವಾಹನ ಚಾಲನಾ ಪರವಾನಗಿ (ಲೈಸೆನ್ಸ್) ಹಾಗೂ ಎಲ್.ಎಂ.ವಿ. ಬ್ಯಾಡ್ಜ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ/ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳು ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿ ಹೊಂದಿರಬೇಕು. ಲಘು ಮೋಟಾರ ವಾಹನ ಚಾಲನಾ ಪರವಾನಿಗೆ ಪಡೆದು ಕನಿಷ್ಠ ಒಂದು ವರ್ಷ ಅವಧಿಯಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಷರತ್ತು ನಿಬಂಧನೆಗಳ ಪ್ರತಿಯನ್ನು ಉಪನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸಾರ್ವಜನಿಕ ಉದ್ಯಾನವನ ಕಲಬುರಗಿ ಕಚೇರಿಯಿಂದ ಜುಲೈ 16 ರಿಂದ ರಜಾದಿನಗಳನ್ನು ಹೊರತುಪಡಿಸಿ ಪಡೆದು ಭರ್ತಿ ಮಾಡಿ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಅಗತ್ಯವಾದ ಎಲ್ಲ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ದ್ವಿಪ್ರತಿಯಲ್ಲಿ ಲಕೋಟೆಯನ್ನು 2018ರ ಆಗಸ್ಟ್ 14ರ ಸಂಜೆ 4 ಗಂಟೆಯೊಳಗಾಗಿ ಸದರಿ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯ ದೂರವಾಣಿ ಸಂಖ್ಯೆ 08472-277848ನ್ನು ಸಂಪರ್ಕಿಸಲು ಕೋರಲಾಗಿದೆ.

ಹೀಗಾಗಿ ಲೇಖನಗಳು News and photo Date: 15-07-2018
ಎಲ್ಲಾ ಲೇಖನಗಳು ಆಗಿದೆ News and photo Date: 15-07-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 15-07-2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-date-15-07-2018.html

0 Response to "News and photo Date: 15-07-2018"
ಕಾಮೆಂಟ್ ಪೋಸ್ಟ್ ಮಾಡಿ