News and photo Date: 11-7-2018

News and photo Date: 11-7-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 11-7-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 11-7-2018
ಲಿಂಕ್ : News and photo Date: 11-7-2018

ಓದಿ


News and photo Date: 11-7-2018

ಕೃಷಿ ಸಚಿವರ ಪ್ರವಾಸ
*********************
ಕಲಬುರಗಿ,ಜು.11.(ಕ.ವಾ.)-ಕೃಷಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ಅವರು ಬೀದರದಿಂದ ರಸ್ತೆ ಮಾರ್ಗವಾಗಿ ಇದೇ ಜುಲೈ 16ರಂದು ಕಲಬುರಗಿ ತಾಲೂಕಿನ ಡೊಂಗುರಗಾಂವಕ್ಕೆ ಆಗಮಿಸಿ, ಅಂದು ಸಂಜೆ 6.15 ಗಂಟೆಯಿಂದ ಸಂಜೆ 6.45 ಗಂಟೆಯವರೆಗೆ ತೊಗರಿ, ಹೆಸರು ಬೆಳೆಗಳ ಯಾಂತ್ರೀಕೃತ ಬಿತ್ತನೆ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ಹಾಗೂ ರೈತರೊಂದಿಗೆ ಚರ್ಚೆ ನಡೆಸುವರು. ನಂತರ ರಾತ್ರಿ 7.30 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಸಚಿವರು ಜುಲೈ 17ರಂದು ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು. ಬೆಳಿಗ್ಗೆ 9 ರಿಂದ 9.45 ಗಂಟೆಯವರೆಗೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಹಾಗೂ ನಂದೂರ ಗ್ರಾಮದ ಕೃಷಿ ಹೊಂಡಕ್ಕೆ ಭೇಟಿ ಮಾಡುವರು. ಬೆಳಿಗ್ಗೆ 10 ರಿಂದ ಬೆಳಿಗ್ಗೆ 11.30 ಗಂಟೆಯವರೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.
ಅಂದು ಮಧ್ಯಾಹ್ನ 12.15 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚಿಂಚೋಳಿ ತಾಲೂಕಿನ ದೊಟಿಕೋಳ ಗ್ರಾಮದಲ್ಲಿ ಸುಜಲಾ ಯೋಜನೆ ಕ್ಷೇತ್ರಕ್ಕೆ ಭೇಟಿ, ರೈತ ಫಲಾನುಭವಿಗಳೊಂದಿಗೆ ಇಲಾಖೆಯ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ 2.15 ಗಂಟೆಗೆ ಚಿಂಚೋಳಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಲೋಕಸಭಾ ಸದಸ್ಯರ ಪ್ರವಾಸ
****************************
ಕಲಬುರಗಿ,ಜು.11.(ಕ.ವಾ.)-ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಜುಲೈ 12ರಂದು ಕಲಬುರಗಿಗೆ ಆಗಮಿಸುವರು. ಅಂದು ಮಧ್ಯಾಹ್ನ 12.30 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದೈಹಿಕ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸುವರು.
ಅಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಪಾಲ್ಗೊಳ್ಳುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜುಲೈ 13ರಂದು ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಅಂದು ಬೆಳಿಗ್ಗೆ 10.30 ಗಂಟೆಗೆ ಯಾದಗಿರಿಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಪಾಲ್ಗೊಳ್ಳುವರು. ನಂತರ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜುಲೈ 14ರಂದು ಬೆಳಿಗ್ಗೆ 10.30 ಗಂಟೆಗೆ ಗುಲಬರ್ಗಾ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸುವರು. ಮಧ್ಯಾಹ್ನ 3 ಗಂಟೆಗೆ ಕಲಬುರಗಿಯಿಂದ ಹೈದ್ರಾಬಾದಿಗೆ ಪ್ರಯಾಣ ಬೆಳೆಸುವರು.
ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೊತ್ಸವ
*************************************
ಐದು ಜನರಿಗೆ ಗೌರವ ಡಾಕ್ಟರೇಟ ಪ್ರದಾನ
************************************
ಕಲಬುರಗಿ,ಜು.11.(ಕ.ವಾ.)-ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ ಜುಲೈ 13ರಂದು ಮೂರನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಾರಿ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ 5 ಜನ ಗಣ್ಯರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಮ್.ಮಹೇಶ್ವರಯ್ಯ ತಿಳಿಸಿದರು.
ಅವರು ಬುಧವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೊಷ್ಟಿಯನ್ನುದ್ದೇಶಿಸಿ ಮಾತನಾಡಿ, ಘಟಿಕೋತ್ಸವದಲ್ಲಿ ಖ್ಯಾತ ಕಲಾವಿದ ಡಾ: ಜಗದೇವಪ್ಪಾ ಶಂಕ್ರೆಪ್ಪಾ ಖಂಡೇರಾವ್, ಖ್ಯಾತ ಕನ್ನಡದ ಸಂಶೋಧಕ ಡಾ: ಎಮ್. ಚಿದಾನಂದ ಮೂರ್ತಿ, ದಲಿತ ಸಂವೇದನೆಯ ಕವಿ ಹಾಗೂ ನಾಟಕಕಾರ ಡಾ: ಸಿದ್ಧಲಿಂಗಯ್ಯ, ಭಾರತದ ಕ್ಷೀಪಣಿ ಮಹಿಳೆಯೆಂದೆ ಖ್ಯಾತಿವೆತ್ತ ವಿಜ್ಞಾನಿ ಟೇಸ್ಸಿ ಥಾಮಸ್ ಮತ್ತು ಗುರುತ್ವಾಕರ್ಷಣಾ ಕುರಿತು ಅಗಾಧ ಸಂಶೋಧನೆ ಮಾಡಿರುವ ವಿಜ್ಞಾನಿ ಡಾ: ಬಾಲಸುಬ್ರಮಣಿಯನ್ ಆರ್ ಅಯ್ಯರ್. ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು.
ಘಟಿಕೋತ್ಸವದಲ್ಲಿ ಒಟ್ಟು 910 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 43 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ ಹಾಗೂ 24 ವಿಧ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯುವರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುದ್ದೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಹೊಸದಾಗಿ ಪ್ರಾರಂಭವಾದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿಯೇ ಅತ್ಯಂತ ವೇಗಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವವಿದ್ಯಾಲಯವಾಗಿದೆ. ಸದ್ಯ 21 ವಿಭಾಗಗಳಿದ್ದು ಹೊಸದಾಗಿ ಇನ್ನು 10 ವಿಭಾಗಗಳನ್ನು ತೆರೆಯಲು ಪ್ರಸ್ತಾವನೆಯನ್ನು ಯು.ಜಿ.ಸಿ.ಗೆ ಸಲ್ಲಿಸಲಾಗಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗುಣಾತ್ಮಕ ಶಿಕ್ಷಣ ನೀಡಲು ಕಟಿಬದ್ಧವಾಗಿದ್ದು ಅದಕ್ಕಾಗಿ ಒಳ್ಳೆಯ ಗುಣಮಟ್ಟದ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಎಂದರು.
ಇತ್ತೀಚೆಗೆ 103 ಶಿಕ್ಷಕ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದರಲ್ಲಿ 13 ಜನ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಿಸಲಾತಿ ಕುರಿತು ಅಲಹಬಾದ್ ಹೈ ಕೋರ್ಟ್ ನಿರ್ದೇಶನ ಹಾಗೂ ಈ ವಿಷಯ ಸರ್ವೋಚ್ಛ ನ್ಯಾಯಾಲಯದ ಮುಂದೆ ಇರುವದರಿಂದ ಉಳಿದ 90 ಹುದ್ಧೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ. ಇತ್ತೀಚೆಗೆ ವಿಶ್ವವಿದ್ಯಾಲಯವು ಐ.ಐ.ಟಿ ಹೈದ್ರಾಬಾದ್‍ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇದರ ಅಂಗವಾಗಿ ಐ.ಐ.ಟಿ ಹೈದ್ರಾಬಾದಿನ ಪ್ರಾಧ್ಯಾಪಕರು ನಮ್ಮ ವಿಶ್ವವಿದ್ಯಾಲಯದ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಇದರೊಂದಿಗೆ ನಮ್ಮ ವಿದ್ಯಾರ್ಥಿಗಳು ಐ.ಐ.ಟಿ ಹೈದ್ರಾಬಾದ್‍ನ ಲ್ಯಾಬ್ ಮತ್ತು ಮೂಲ ಸೌಕಯ್ರ್ಯಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮ ಕುಲಪತಿ ಪ್ರೊ. ಜಿ. ಆರ್. ನಾಯಕ್, ಕುಲಸಚಿವ ಚಂದ್ರಕಾಂತ ಎಮ್. ಯಾತನೂರ, ಮೌಲ್ಯಮಾಪನ ಕುಲಸಚಿವ ಪ್ರೊ. ಎಮ್.ಎ. ಅಸ್ಲಾಮ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ: ಗಣಪತಿ ಬಿ. ಸಿನ್ನೂರ್, ಡಾ: ಮೊಹಮದ್ ಜೋಹೆರ್, ಡಾ: ಸುಶ್ಮಾ ಎಚ್, ಶ್ರೀಮತಿ. ನಶೀಮಾ ಬಾನು ಉಪಸ್ಥಿತರಿದ್ದರು.
ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಜಿಲ್ಲೆ ದ್ವಿತೀಯ ಸ್ಥಾನ
************************************************
ಕಲಬುರಗಿ,ಜು.10.(ಕ.ವಾ.)-ಜನಸಂಖ್ಯಾ ನಿಯಂತ್ರಣದಲ್ಲಿ ಪ್ರಮುಖ ಕಾರ್ಯಕ್ರಮವಾಗಿರುವ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರ ನಾಗಲೀಕರ ತಿಳಿಸಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಇವುಗಳ ಸಂಯುಕ್ತಾಶ್ರಯದಲಿ ಹಳೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ವಿಭಾಗಕ್ಕೆ ಕಳೆದ ವರ್ಷ 21,000 ಸಂತಾನಹರಣ ಶಸ್ತ್ರ ಚಿಕಿತ್ಸೆ ಗುರಿ ನಿಗದಿಪಡಿಸಲಾಗಿತ್ತು. ಈ ಪೈಕಿ 19500 ಸಂತಾನಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷವೂ ಸಹ 21000 ಗುರಿ ನೀಡಲಾಗಿದ್ದು, ಈಗಾಗಲೇ ಮೂರು ತಿಂಗಳುಗಳಲ್ಲಿ ಶೇ. 85ರಷ್ಟು ಸಾಧನೆ ಮಾಡಲಾಗಿದೆ. ನವ ದಂಪತಿಗಳಿಗೆ ತಾತ್ಕಾಲಿಕ ಗರ್ಭ ನಿರೋಧಕ ಕ್ರಮಗಳನ್ನು ಅನುಸರಿಸಿ ಮಕ್ಕಳ ನಡುವೆ ಅಂತರ ಹೆಚ್ಚಿಸುವ ಬಗ್ಗೆ ಹಾಗೂ ಮಿತ ಸಂತಾನದ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಈ ಕುರಿತು ತರಬೇತಿಗಳನ್ನು ನೀಡಲಾಗಿದೆ ಎಂದರು.
ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಸಿಸ್ಟಂಟ್ ಪ್ರೊಫೇಸರ್ ಡಾ|| ಗುರುರಾಜ ಉಪನ್ಯಾಸ ನೀಡಿ, ವಿಶ್ವದ ಜನಸಂಖ್ಯೆಯ ಶೇ. 60ರಷ್ಟು ಜನಸಂಖ್ಯೆ ಏಶಿಯಾ ಖಂಡದಲ್ಲಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತ ಕ್ರಮವಾಗಿ ಶೇ. 20 ಮತ್ತು ಶೇ. 17ರಷ್ಟು ಜನಸಂಖ್ಯೆಯನ್ನು ಹೊಂದಿವೆ. ಸಧ್ಯದ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಮುಂದುವರೆದರೆ 2050ರ ಹೊತ್ತಿಗೆ ವಿಶ್ವದಲ್ಲಿ 900 ಕೋಟಿ ಜನಸಂಖ್ಯೆ ಆಗುವ ಅಂದಾಜುಗಳಿವೆ. ಆಗ ಭಾರತ ದೇಶ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದುವ ರಾಷ್ಟ್ರವಾಗುತ್ತದೆ. ದೇಶದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ 1.58 ಕೋಟಿ ಹೆಚ್ಚುತ್ತಿದೆ. ದೇಶದಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯವಾಗಿದೆ ಎಂದು ವಿವರಿಸಿದರು.
ಜನಸಂಖ್ಯೆ ಹೆಚ್ಚಳಕ್ಕೆ ಅನಕ್ಷರತೆ, ಬಡತನ, ಸಂತಾನ ನಿರೋಧ ವಿಧಾನಗಳ ಬಳಕೆ ಮಾಡದಿರುವುದು ಮುಖ್ಯ ಕಾರಣವಾಗಿವೆ. ಜನಸಂಖ್ಯೆ ಹೆಚ್ಚಳದಿಂದಾಗಿ ಎಲ್ಲರಿಗೂ ಮೂಲಭೂತ ಸೌಲಭ್ಯಗಳು ದೊರೆಯುವುದಿಲ್ಲ. ಇಂದು ಜನಸಂಖ್ಯೆ ಹೆಚ್ಚಳವಾದಂತೆ ಅವರಿಗೆ ಆಹಾರ ಮತ್ತು ಇತರೆ ಸೌಲಭ್ಯ ಪೂರೈಸಲು ತಂತ್ರಜ್ಞಾನ, ಕೃಷಿ ಅಧುನೀಕರಣ ಆಗುತ್ತಿದ್ದಂತೆ ಪರಿಸರ ಹಾಳಾಗುತ್ತಿದೆ. ಇದರಿಂದ ಮಾನವ ಸಂಕುಲಕ್ಕೆ ಅಪಾಯ ಕಾದಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಹಲವಾರು ಉಪಾಯಗಳನ್ನು ಸದ್ಬಳಕೆ ಮಾಡಿಕೊಂಡು ಜನಸಂಖ್ಯೆ ನಿಯಂತ್ರಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ|| ಶಾಂತಕ್ಕಾ ಮಾತನಾಡಿ, ಮಕ್ಕಳನ್ನು ಹೆಚ್ಚಾಗಿ ಹೆರುವುದರಿಂದ ತಾಯಿಯ ಮೇಲೆ ದುಷ್ಪರಿಣಾಮ ಉಂಟಾಗಿ ಕುಟುಂಬದ ಮೇಲೆ ವ್ಯತರಿಕ್ತ ಪರಿಣಾಮಗಳು ಉಂಟಾಗುತ್ತವೆ. ತಾಯಿಯ ಆರೋಗ್ಯ ಕಾಪಾಡಲು ಮಕ್ಕಳ ನಡುವೆ ಅಂತರ ಕಾಪಾಡಬೇಕು. ಇದಕ್ಕಾಗಿ ಗರ್ಭ ನಿರೋಧಕ ವಿಧಾನಗಳನ್ನು ಅನುಸರಿಸಬೇಕು. ಸರ್ಕಾರ ವಿನೂತನ ತಂತ್ರಜ್ಞಾನದ ಮಾತ್ರೆ ಮತ್ತು ಇಂಜಕ್ಷನ್‍ಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಉಚಿತವಾಗಿ ನೀಡುತ್ತಿದೆ. ಇದರ ಪ್ರಯೋಜನ ಪಡೆಯಬೇಕೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞ ಹಾಗೂ ಅಧೀಕ್ಷಕ ಡಾ. ಬಿ.ಎನ್. ಜೋಶಿ, ಆರ್.ಸಿ.ಹೆಚ್. ಅಧಿಕಾರಿ ಡಾ|| ಅಂಬಾರಾಯ ರುದ್ರವಾಡಿ, ಕಲಬುರಗಿ (ಕು.ಕ.) ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ|| ರಂಗನಾಥ ಕಟ್ಟಿ, ಕಾಲರಾ ಅಧಿಕಾರಿ ಡಾ|| ಗಣಜಲಖೇಡ ಮತ್ತಿತರರು ಪಾಲ್ಗೊಂಡಿದ್ದರು.
ವಿಶ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ.ಕೆ. ಪಾಟೀಲ ಅವರು ಚಾಲನೆ ನೀಡಿದರು. ಈ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಆರಂಭಗೊಂಡು ಜಗತ ವೃತ್ತದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಕೊನೆಗೊಂಡಿತು.
ಜುಲೈ 25 ರಿಂದ ಪ್ರಾದೇಶಿಕ ಸಾರಿಗೆ
**********************************
ಕಚೇರಿಗಳಲ್ಲಿ ವಾಹನ-4 ಸಾಫ್ಟ್‍ವೇರ್ ಅನುಷ್ಠಾನ
**********************************************
ಕಲಬುರಗಿ,ಜು.11.(ಕ.ವಾ.)-ಸಾರಿಗೆ ಇಲಾಖೆಯು ಹಂತ ಹಂತವಾಗಿ ಗಣಕೀಕರಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೇಂದ್ರೀಕೃತ ಹಾಗೂ ವೆಬ್‍ಆಧಾರಿತ ವಾಹನ-4 ಸಾಫ್ಟವೇರ್‍ನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2018ರ ಜುಲೈ 24ರಿಂದ ಸಂಪೂರ್ಣವಾಗಿ ವಾಹನ-1ರ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡು ಜುಲೈ 25ರಂದು ವಾಹನ-4ರ ಸಾಫ್ಟವೇರಲ್ಲಿಯೇ ಎಲ್ಲಾ ಸೇವೆಗಳು ಆರಂಭಗೊಳ್ಳಲಿದೆ. ಈ ಸಾಪ್ಟವೇರ್ ಅನುಷ್ಠಾನದಿಂದ ಕೆಲವು ತಾಂತ್ರಿಕ ದೋಷಗಳು ಮತ್ತು ನ್ಯೂನ್ಯತೆಗಳು ಉಂಟಾಗುವ ಸಂಭವವಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಿ. ಸುರೇಂದ್ರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 25 ರಿಂದ ವಾಹನ-4ರಲ್ಲಿ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳು ಹಂತ ಹಂತವಾಗಿ ಚಾಲನೆಗೊಳ್ಳಲಿದೆ. ವಾಹನ-1 ಸಾಫ್ಟವೇರ್‍ನಿಂದ ವಾಹನ-4 ಸಾಫ್ಟವೇರ್‍ಗೆ ಉನ್ನತೀಕರಣಗೊಳ್ಳುತ್ತಿದೆ. ಈ ಸಂಬಂಧವಾಗಿ ಈ ಹಿಂದೆ ಸಾರ್ವಜನಿಕರು ಏನಾದರೂ ಶುಲ್ಕ ಮತ್ತು ತೆರಿಗೆ ಭರಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಜುಲೈ 20 ರ ನಂತರ ಈ ರಸೀದಿಗಳು ತಂತಾನೆ ನಿಷ್ಕ್ರೀಯಗೊಳ್ಳಲಿರುವ ಹಿನ್ನೆಲೆಯಲ್ಲಿ ಜುಲೈ 20ರೊಳಗಾಗಿ ಕೆಲಸ ಮಾಡಿಸಿಕೊಳ್ಳಬೇಕು. ಜುಲೈ 20ರಿಂದ ಈಗ ಆಸ್ತಿತ್ವದಲ್ಲಿರುವ ವಾಹನ-1ರ ಆನ್‍ಲೈನ್ ಮೂಲಕ ವಾಹನ ನೋಂದಣಿಗೆ ಅರ್ಜಿ ಸಲ್ಲಿಸುವ ಗಿಔW Iಆ ಮತ್ತು ಇ-ಪಾವತಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಈಗಾಗಲೇ ಫ್ಯಾನ್ಸಿ ನಂಬರಿಗೆ ಶುಲ್ಕ ಭರಿಸಿಕೊಂಡಿದ್ದಲ್ಲಿ ತಕ್ಷಣವೇ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಂಡು ಫ್ಯಾನ್ಸಿ ನಂಬರ ಪಡೆಯಬೇಕು.
ಈಗಾಗಲೆ ವಾಹನದ ಯಾವುದೇ ಕಾರ್ಯಕ್ಕೆ ಅರ್ಜಿ ಸಲ್ಲಿಸಿದ್ದು, ಯಾವುದಾದರೂ ನ್ಯೂನ್ಯತೆಗಳಿಗೆ ಕಡತ ಬಾಕಿ ಇದ್ದಲ್ಲಿ ಜುಲೈ 20 ರವರೆಗೆ ಮಾತ್ರ ಸಂಬಂಧಪಟ್ಟ ಸಾರ್ವಜನಿಕರು ಗಮನಿಸಿ ತಮ್ಮ ಅರ್ಜಿಗಳು ಬಾಕಿ ಇದ್ದರೆ ಕೂಡಲೇ ಆರ್‍ಟಿಓ ಕಚೇರಿಯ ಸಂಬಂಧಪಟ್ಟ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಬೇಕು. ಈ ಸಂಬಂಧ ಈ ಮೊದಲು ಭರಿಸಿದ ಶುಲ್ಕ ಮತ್ತು ತೆರಿಗೆ ಈಗ ಅನುಷ್ಠಾನಗೊಳ್ಳುತ್ತಿರುವ ವಾಹನ-4ರಲ್ಲಿ ನಿಷ್ಕ್ರೀಯಗೊಂಡು ಕೆಲಸ ಮಾಡುವುದಿಲ್ಲ.
ಜುಲೈ 23 ರಂದು ಸಾರಿಗೆ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಡಾಟಾಬೇಸ್‍ನ ಪೋರ್ಟಿಂಗ್‍ಗೆ ಈಗಿರುವ ಎಲ್ಲಾ ಡೇಟಾಗಳನ್ನು ಪೋರ್ಟಿಂಗ ಕಾರ್ಯ ಹಾಗೂ ಜುಲೈ 24 ರಂದು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ನವದೆಹಲಿಯಲ್ಲಿ ವಾಹನ-1ರ ಡಾಟಾವನ್ನು ವಾಹನ-4ಕ್ಕೆ ಡಾಟಾ ಫೋರ್ಟಿಂಗ್ ಕಾರ್ಯ ನಡೆಯಲಿದೆ.
ಈಗಾಗಲೇ ಆರ್‍ಟಿಓ ಕಚೇರಿಯಲ್ಲಿ ತಮ್ಮ ವಾಹನಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ ಜುಲೈ 20ರೊಳಗಾಗಿ (ಹೊಸದಾಗಿ ಯಾವುದೇ ಅರ್ಜಿ ಸ್ವೀಕರಿಸುವುದಾಗಲಿ, ಶುಲ್ಕ ಭರಿಸಿಕೊಳ್ಳುವುದಾಗಲಿ ಅವಕಾಶವಿರುವುದಿಲ್ಲ) ಕಚೇರಿಯ ಸಮಯದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಕೆಲಸವನ್ನು ಮಾಡಿಸಿಕೊಳ್ಳಬೇಕು. ಒಂದು ವೇಳೆ ವಿಳಂಬವಾಗಿ ಕಚೇರಿಗೆ ಸಂಪರ್ಕಿಸಿದ್ದಲ್ಲಿ ವಾಹನ-1ರ ಯಾವುದೇ ಕಾರ್ಯ ಆಗದಿರುವುದಕ್ಕೆ ಸಹಕಾರ ನೀಡಬೇಕು. ಹೊಸದಾಗಿ ವಾಹನ-4ರಲ್ಲಿ ತೆರಿಗೆ ಮತ್ತು ಶುಲ್ಕ ಭರಿಸಬೇಕಾಗುತ್ತದೆ. ವಾಹನ-4ರ ಸಾಫ್ಟ್‍ವೇರ್‍ನಲ್ಲಿ ಕೆಲ ತಿದ್ದುಪಡಿಗೆ ಯಾವುದೇ ಅವಕಾಶಗಳಿರುವುದಿಲ್ಲವಾದ್ದರಿಂದ ಡೇಟಾ ಅಪ್‍ಲೋಡ ಮಾಡುವಾಗ ಜಾಗರೂಕತೆಯಿಂದ ಗಮನಿಸಿ ಅಪ್‍ಲೋಡ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮ:
********************************
ಪ್ರೋತ್ಸಾಹಧನದಲ್ಲಿ ಸಾಲ ಕಡಿತಗೊಳಿಸದಂತೆ ಸೂಚನೆ
************************************************
ಕಲಬುರಗಿ,ಜು.11.(ಕ.ವಾ.)-ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಬಳಸುತ್ತಿರುವ ಫಲಾನುಭವಿಗಳಿಗೆ ಸರ್ಕಾರವು ಪ್ರೋತ್ಸಾಹಧನ ನೀಡುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಪ್ರೋತ್ಸಾಹಧನ ಹಣವನ್ನು ಅವರ ವೈಯಕ್ತಿಕ ಸಾಲ ಮರುಪಾವತಿಗೆ ಕಡಿತಗೊಳಿಸದಂತೆ ಎಲ್ಲ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಸಾಮಾನ್ಯ ಫಲಾನುಭವಿಗಳಿಗೆ 12,000 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ 15,000 ರೂ.ಗಳವರೆಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಫಲಾನುಭವಿಗಳು ಬ್ಯಾಂಕಿನಿಂದ ಪಡೆದ ಬೆಳೆ ಸಾಲ ಅಥವಾ ಇತರೆ ಯಾವುದೇ ಸಾಲ, ಫಲಾನುಭವಿಯ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಿಸದ ಕಾರಣ ದಂಡದ ರೂಪದಲ್ಲಿರುವ ಮೊತ್ತವನ್ನು ಫಲಾನುಭವಿಯ ಖಾತೆಗೆ ಜಮಾ ಆಗಿರುವ ಪ್ರೋತ್ಸಾಹ ಧನದಿಂದ ಕಡಿತಗೊಳಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ದೂರುಗಳು ಮರುಕಳಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಕೃಷಿ ಪ್ರಶಸ್ತಿ ಸ್ಪರ್ಧೆಗಾಗಿ ಅರ್ಜಿ ಆಹ್ವಾನ
**********************************
ಕಲಬುರಗಿ,ಜು.11.(ಕ.ವಾ.)-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ಯೋಜನೆಯಡಿ ರೈತರಿಗೆ ಉತ್ಪಾದನೆ ಬಹುಮಾನಗಳನ್ನು ನೀಡುವ ಮೂಲಕ ಕೃಷಿ ವಲಯದ ಉತ್ಪಾದನೆ ಹೆಚ್ಚಿಸಲು ಹಾಗೂ ರೈತರಿಗೆ ಸ್ಪರ್ಧಾ ಮನೋಭಾವ ಬೆಳೆಸಲು 2018-19ನೇ ಸಾಲಿನ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಂಗಾರು ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಭತ್ತ-(ನೀರಾವರಿ). ರಾಗಿ, ಜೋಳ, ತೊಗರಿ, ಸೋಯಾ ಅವರೆÉ, ಶೇಂಗಾ (ಮಳೆಯಾಶ್ರಿತ ಪ್ರದೇಶ) ಮತ್ತು ಸೂರ್ಯಕಾಂತಿ-ಮುಂಗಾರು/ಹಿಂಗಾರು (ಮಳೆಯಾಶ್ರಿತ) ಬೆಳೆಗಳನ್ನು ನಿಗದಿಪಡಿಸಿದ್ದು, 50,000 ರೂ. ಪ್ರಥಮ, 40,000 ರೂ. ದ್ವಿತೀಯ ಮತ್ತು 35000 ರೂ. ತೃತೀಯ ಬಹುಮಾನ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಮಳೆಯಾಶ್ರಿತ ತೊಗರಿ ಬೆಳೆಯನ್ನು ನಿಗದಿಪಡಿಸಿದ್ದು, 30,000 ರೂ. ಪ್ರಥಮ, 25,000 ರೂ. ದ್ವಿತೀಯ ಮತ್ತು 20,000 ರೂ. ತೃತೀಯ ಬಹುಮಾನ ನೀಡಲಾಗುತ್ತದೆ. ಅದೇ ರೀತಿ ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳ ಮಳೆಯಾಶ್ರಿತ ತೊಗರಿ ಬೆಳೆಯನ್ನು ನಿಗದಿಪಡಿಸಿದ್ದು, 15,000 ರೂ. ಪ್ರಥಮ, 10,000 ರೂ. ದ್ವಿತೀಯ ಮತ್ತು 5,000 ರೂ.ಗಳ ತೃತೀಯ ಬಹುಮಾನ ನೀಡಲಾಗುತ್ತದೆ.
ಈ ಮೂರೂ ಹಂತದ ಬೆಳೆಗಳ ಸ್ಫರ್ಧೆಗಳಲ್ಲಿ ಭಾಗವಹಿಸುವ ಆಸಕ್ತ ಸಾಮಾನ್ಯ ರೈತರು 100 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರು 25 ರೂ. 2018ರ ಅಗಸ್ಟ್ 31ರೊಳಗಾಗಿ ಹಣ ಪಾವತಿ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಅಥವಾ ಕಲಬುರಗಿ ಮತ್ತು ಸೇಡಂ ಉಪ ಕೃಷಿ ನಿರ್ದೇಶಕರ ಅಥವಾ ಕಲಬುರಗಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 13ರಂದು ಯುವ ರೆಡ್‍ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಕಾರ್ಯಾಗಾರ
*********************************************************************
ಕಲಬುರಗಿ,ಜು.11.(ಕ.ವಾ.)-ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಯುವ ರೆಡ್‍ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಇದೇ ಜುಲೈ 13ರಂದು ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ನಿರಂಜನ್ ಕಾರ್ಯಾಗಾರವನ್ನು ಉದ್ಘಾಟಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ದಯಾನಂದ ಅಗಸರ, ಹಣಕಾಸು ಅಧಿಕಾರಿ ರಾಜನಾಳ್ಕರ್ ಲಕ್ಷ್ಮಣ, ಬೆಂಗಳೂರಿನ ಯುವ ರೆಡ್‍ಕ್ರಾಸ್ ಸಲಹೆಗಾರ ಎಚ್.ಎಸ್. ಸುರೇಶ, ಕಲಬುರಗಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೆಶಕ ಪ್ರೊ. ಸಿ.ಪಿ. ಬಹ್ಮನಪಾಡ ಅತಿಥಿಗಳಾಗಿ ಹಾಗೂ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸುವರು.
ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ
*************************************************************************
ಕಲಬುರಗಿ,ಜು.11.(ಕ.ವಾ.)-ಪೊಲೀಸ್ ಇಲಾಖೆಯ ವಿಶೇಷ ಘಟಕಗಳ ವಿವಿಧ ಸಬ್-ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.)ಯನ್ನು 2018ರ ಜುಲೈ 16 ರಿಂದ 20ರವರೆಗೆ ಒಟ್ಟು 5 ದಿನಗಳ ಕಾಲ ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯಲಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಎಸ್. ಮುರುಗನ್ ತಿಳಿಸಿದ್ದಾರೆ.
ಬೆಂಗಳೂರಿನ ನೇಮಕಾತಿ ಮತ್ತು ತರಬೇತಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಹಾಜರಾತಿ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಈಗಾಗಲೇ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ರವಾನಿಸಲಾಗಿದೆ. ಅಭ್ಯರ್ಥಿಗಳು ತಮಗೆ ಹಾಜರಾತಿ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.) ಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಉದ್ಯೋಗ ಚೀಟಿ ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಆಹ್ವಾನ
************************************************************
ಕಲಬುರಗಿ,ಜು.11.(ಕ.ವಾ.)-ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರ ಕುಟುಂಬಗಳಿಗೆ ಹೊಸ ಮಾದರಿಯ ಉದ್ಯೋಗ ಚೀಟಿಯನ್ನು ಮುದ್ರಿಸಿ ಸರಬರಾಜು ಮಾಡಲು ಅಲ್ಪಾವಧಿ ಇ-ಪ್ರೊಕ್ಯೂರ್‍ಮೆಂಟ್ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದ್ದಾರೆ.
ಎ-5 ಅಳತೆಯ ವಿನ್ಯಾಸ, ಮುಖಪುಟ ಹೊರತಾಗಿ ಕನಿಷ್ಠ 25 ಪುಟಗಳನ್ನು ಒಳಗೊಂಡಿರಬೇಕು. 95,000 ಸಾಮಾನ್ಯ ಜಾಬ್ ಕಾರ್ಡ ಹಾಗೂ 5000 ವಿಶೇಷ ಜಾಬ ಕಾರ್ಡ ಸೇರಿದಂತೆ ಒಟ್ಟು 1,00,000 ಗಳನ್ನು (ಒಂದಕ್ಕೆ 5 ರೂ.ಗಳಂತೆ) ಜಾಬ ಕಾರ್ಡ್ ಮುದ್ರಿಸಿ ಕೊಡಬೇಕು. ಟೆಂಡರ ಫಾರ್ಮ ಪಡೆಯಲು ಜುಲೈ 27ರಂದು ಕೊನೆಯ ದಿನವಾಗಿದೆ. ಟೆಂಡರ್ ಫಾರ್ಮನ್ನು ಜುಲೈ 28ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು.
ಟೆಂಡರ್ (ತಾಂತ್ರಿಕ) ಜುಲೈ 30ರಂದು ಬೆಳಿಗ್ಗೆ 11 ಗಂಟೆಯ ನಂತರ ತೆರೆಯಲಾಗುವುದು. ಟೆಂಡರ್ (ಆರ್ಥಿಕÀ) ಜುಲೈ 31ರಂದು ಬೆಳಿಗ್ಗೆ 11 ಗಂಟೆಯ ನಂತರ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳನ್ನು ಅಥವಾ ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.













ಹೀಗಾಗಿ ಲೇಖನಗಳು News and photo Date: 11-7-2018

ಎಲ್ಲಾ ಲೇಖನಗಳು ಆಗಿದೆ News and photo Date: 11-7-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 11-7-2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-date-11-7-2018.html

Subscribe to receive free email updates:

0 Response to "News and photo Date: 11-7-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ