news and photo 05-07-2018

news and photo 05-07-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo 05-07-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo 05-07-2018
ಲಿಂಕ್ : news and photo 05-07-2018

ಓದಿ


news and photo 05-07-2018

ಸಸ್ಯ ಸಂತೆಗೆ ಜಿಲ್ಲಾಧಿಕಾರಿಗಳಿಂದ ಚಾಲನೆ
***************************************
ಕಲಬುರಗಿ,ಜು.05.(ಕ.ವಾ.)-ಕಲಬುರಗಿ ತೋಟಗಾರಿಕೆ ಇಲಾಖೆಯ ಸಸ್ಯಗಾರದಲ್ಲಿ ಅಭಿವೃದ್ಧಿಪಡಿಸಿದ ವಿವಿಧ ಕಸಿ/ಸಸಿಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಸಂತೆಗೆ ಗುರುವಾರ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಚಾಲನೆ ನೀಡಿದರು.
ಐವಾನ್-ಎ-ಶಾಹಿ ಪ್ರದೇಶದಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಲಾದ ಸಸ್ಯ ಸಂತೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು ಜುಲೈ 5 ರಿಂದ 14ರ ವರೆಗೆ ಅತ್ಯಂತ ಕಡಿಮೆ ದರದಲ್ಲಿ ವಿವಿಧ ಕಸಿ/ ಸಸಿಗಳು ಮಾರಾಟಕ್ಕೆ ಇಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಮ್ಮದ ಅಲಿ ಮಾತನಾಡಿ ಸುಮಾರು ಹತ್ತು ದಿನಗಳ ಕಾಲ ನಡೆಯುವ ಈ ಸಂತೆಯಲ್ಲಿ ರೈತರ ಬೇಡಿಕೆ ಅನುಗುಣವಾಗಿ ಜಿಲ್ಲೆಯ ಮಾಲಗತ್ತಿ, ಕೆಸರಟಗಿ, ಹಳ್ಳಿಸಗರ, ಚಿತ್ತಾಪುರ, ಚಂದ್ರಂಪಳ್ಳಿ, ಸೇಡಂ ಮತ್ತು ಕಲಬುರಗಿ ನಗರದ ಬಡೇಪುರ ಹಾಗೂ ಐವಾನ್-ಎ-ಶಾಹಿ ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಬಗೆ/ ತಳಿಯ 2.90 ಲಕ್ಷ ಸಸಿ/ಕಸಿಗಳು ಮಾರಾಟಕ್ಕೆ ಲಭ್ಯವಿದೆ ಎಂದು ಮಾಹಿತಿ ನೀಡಿದ ಅವರು ಕಳೆದ ವರ್ಷ ಈ ರೀತಿಯ ಸಂತೆ ಆಯೋಜಿಸಿದಾಗ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಸಸ್ಯಗಳ ಮಾರಾಟ ಸಂತೆ ಆಯೋಜಿಸಲಾಗಿದೆ ಎಂದರು.
ಕಲಬುರಗಿ ವಿಭಾಗೀಯ ಜಂಟಿ ತೋಟಗಾರಿಕೆ ನಿರ್ದೇಶಕ ಎಸ್.ಬಿ.ದಿಡ್ಡಿಮನಿ ಮಾತನಾಡಿ ಇಲ್ಲಿ ವಿತರಿಸಲಾಗುವ ಸಸಿಗಳ ಬಗ್ಗೆ ಏನಾದರು ಸಮಸ್ಯೆಗಳಿದ್ದಲ್ಲಿ ರೈತರು ಹಾರ್ಟಿಕ್ಲೀನಿಕ್ ಅಥವಾ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು. ನಗರ ಪ್ರದೇಶದಲ್ಲಿ ತೋಟಗಾರಿಕೆ ಉತ್ತೇಜನಕ್ಕಾಗಿ ಟೆರಸ್ ಮೇಲೆ ಇಲಾಖೆಯಿಂದ ತಾರಸಿ ತೋಟ ಕೈಗೊಳ್ಳುವ ಮತ್ತು ಇಲ್ಲಿನ ಪ್ರಮುಖ ಬೆಳೆ ತೊಗರಿಗೆ ಪರ್ಯಾಯವಾಗಿ ಅಧಿಕ ಲಾಭ ನೀಡುವ ತೋಟಗಾರಿಕೆ ಬೆಳೆಗಳನ್ನು ಪಿ.ಪಿ.ಪಿ ಯೋಜನೆಯಡಿ ಬೆಳೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಜಿಲ್ಲಾ ಕೇಂದ್ರಸ್ಥಾನಿಕ ಸಹಾಯಕ ರಾಘವೇಂದ್ರ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು, ರೈತರು ಮತ್ತೀತರು ಉಪಸ್ಥಿತರಿದ್ದರು.
ಸಸ್ಯ ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಸಸಿಗಳ ಹೆಸರು, ದರ ಮತ್ತು ಸಂಖ್ಯೆಯ ವಿವರ: 10ರೂ. ದರದ ದುರಂತ-5000, 10ರೂ. ದರದ ಕರಿಬೇವು-42998, 200ರೂ. ದರದ ಅಲಂಕಾರಿಕ ಸಸಿಗಳು-26664, 12ರೂ. ದರದ ನಿಂಬೆ-92500, 10ರೂ. ದರದ ನುಗ್ಗೆ-19000, 32ರೂ. ದರದ ಮಾವು-90000, 28ರೂ. ದರದ ಸಿತಾಫಲ-5000, 35ರೂ. ದರದ ಸೀಬೆ-13000 ಮತ್ತು 50ರೂ. ದರದ ತೆಂಗು-600.
ಜುಲೈ 13ಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವ
*************************************************************
ಕಲಬುರಗಿ,ಜು.05.(ಕ.ವಾ.)-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಕಾರ್ಯಕ್ರಮವು ಇದೇ ಜುಲೈ 13 ರಂದು ಬೆಳಿಗ್ಗೆ 10 ಗಂಟೆಗೆ ಆಳಂದ ರಸ್ತೆಯಲ್ಲಿರುವ ವಿಶ್ವವಿದ್ಯಾಲಯ ಆವರಣದ ಅಕಾಡೆಮಿಕ್ ಬ್ಲಾಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಮುಖ್ಯಸ್ಥ ಪ್ರೋ.ಅನೀಲ ಡಿ.ಸಹಸ್ರಬುಡೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೋ.ಎನ್.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಹೆಚ್.ಎಂ.ಮಹೇಶ್ವರಯ್ಯ, ಸಮ ಕುಲಪತಿ ಪ್ರೋ.ಜಿ.ಆರ್.ನಾಯಕ, ರಿಜಿಸ್ಟ್ರಾರ್ ಪ್ರೋ.ಚಂದ್ರಕಾಂತ ಎಂ.ಯಾತನೂರ ಸೇರಿದಂತೆ ವಿವಿಧ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಭಾಗವಹಿಸಲಿದ್ದಾರೆ.
ಜುಲೈ 6ರಂದು ಅಂತರರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆ
********************************************************
ಕಲಬುರಗಿ,ಜು.05.(ಕ.ವಾ.)-ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಗೃಹ ಕಾರ್ಮಿಕ ಒಕ್ಕೂಟ ಹಾಗೂ ಡಾನ್ ಬೋಸ್ಕೋ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯನ್ನು ಜುಲೈ 6ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ಅಧ್ಯಕ್ಷತೆ ವಹಿಸುವರು. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಸೇಡಂ ಸಹಾಯಕ ಆಯುಕ್ತೆ ಡಾ. ಸುಶೀಲಾ, ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸವಿತಾ ಹೂಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ್ ಎಂ.ಎನ್., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟದ ಕಲಬುರಗಿ ಅಧ್ಯಕ್ಷೆ ಮಹಾದೇವಿ ರಾಮಚಂದ್ರ ಅಪ್ಚಂದ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರಗೌಡ ಕಟ್ಟಿ ಸಂಗಾವಿ ವಿಶೇಷ ಆಹ್ವಾನಿತರಾಗಿ ಮತ್ತು ಸ್ತ್ರೀಶಕ್ತಿ ಜಾಗೃತಿ ಸಮಿತಿ ಕಾರ್ಯದರ್ಶಿ ಹಾಗೂ ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ಸಹಾಯಕರಾದ ಗೀತಾ ಮೆನನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.
ಜೂನ್ 19 ರಿಂದ ಮ್ಯಾನುವಲ್ ಸ್ಕ್ಯಾವೆಂಜರುಗಳ ಸಮೀಕ್ಷೆ ಕಾರ್ಯ
**********************************************************
ಕಲಬುರಗಿ,ಜು.05.(ಕ.ವಾ.)-ಭಾರತ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕಲಬುರಗಿ ಮಹಾನಗರಪಾಲಿಕೆ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳವಾರು ಮ್ಯಾನ್ಯುವೆಲ್ ಸ್ಕ್ಯಾವೆಂಜರ್‍ಗಳ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಗಾಗಿ ಕೆಳಕಂಡಂತೆ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ತೆರೆದ ಗುಂಡಿಯಲ್ಲಿ ಸಂಗ್ರಹವಾಗಿರುವ ಅನಾರೋಗ್ಯಕರ ಶೌಚಾಲಯಗಳ ಮಾನವ ಮಲವನ್ನು ಶುಚಿಗೊಳಿಸುವುದು ಹಾಗೂ ಒಂದು ಗುಂಡಿಯ ಶೌಚಾಲಯವನ್ನು ದೈಹಿಕ ಶ್ರಮದಿಂದ ಸ್ವಚ್ಛಗೊಳಿಸುವ ವೃತ್ತಿಗಳಲ್ಲಿ 2013ಕ್ಕಿಂತ ಮೊದಲು ಹಾಗೂ ತದನಂತರ ಈ ವೃತ್ತಿಯಲ್ಲಿ ತೊಡಗಿರುವವರು ಸಮೀಕ್ಷೆಯಲ್ಲಿ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬೇಕು.
ಪಾಸ್‍ಪೋರ್ಟ ಅಳತೆಯ ಒಂದು ಭಾವಚಿತ್ರ, ಬ್ಯಾಂಕ್ ಪಾಸ್‍ಬುಕ್ಕಿನ ಮತ್ತು ಆಧಾರ ಕಾರ್ಡಿನ ಜಿರಾಕ್ಸ್ ಪ್ರತಿ (ಮೂಲ ದಾಖಲೆಯನ್ನು ತರಬೇಕು), ಇತರೆ ನಾಗರಿಕ ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಬಿಪಿಎಲ್ ಪಡಿತರ ಕಾರ್ಡ ಪ್ರತಿ, ಸವಲತ್ತುಗಳನ್ನು ಪಡೆದುಕೊಳ್ಳಲು ಮ್ಯಾನುವಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವೈಯಕ್ತಿಕ ವಿವರಗಳನ್ನು ಸಾಬೀತುಪಡಿಸುವ ದಾಖಲಾತಿಗಳು ಹಾಜರುಪಡಿಸಬೇಕು. ಮ್ಯಾನುವಲ್ ಸ್ಕ್ಯಾವೆಂಜರ್‍ನಲ್ಲಿ ತೊಡಗಿಸಿಕೊಂಡಿರುವ ಕುರಿತು ಯಾವುದೇ ದಾಖಲೆಗಳು ಮತ್ತು ಪ್ರಮಾಣಪತ್ರದ ಪ್ರತಿ ಇತರೆ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.
ಸಮೀಕ್ಷೆ ನಡೆಸುವ ದಿನಾಂಕ ಮತ್ತು ಸ್ಥಳದ ವಿವರ ಇಂತಿದೆ. ಜುಲೈ 19ರಂದು ಕಲಬುರಗಿ ಮಹಾನಗರ ಪಾಲಿಕೆ, ಜುಲೈ 17ರಂದು ಶಹಬಾದ ನಗರಸಭೆ, ಜುಲೈ 10ರಂದು ಅಫಜಲಪುರ ಪುರಸಭೆ, ಜುಲೈ 13ರಂದು ಆಳಂದ ಪುರಸಭೆ, ಜುಲೈ 9ರಂದು ಚಿಂಚೋಳಿ ಪುರಸಭೆ, ಜುಲೈ 7ರಂದು ಚಿತ್ತಾಪುರ ಪುರಸಭೆ, ಜುಲೈ 16ರಂದು ಜೇವರ್ಗಿ ಪುರಸಭೆ, ಜುಲೈ 12ರಂದು ಸೇಡಂ ಪುರಸಭೆ, ಜುಲೈ 18ರಂದು ವಾಡಿ ಪುರಸಭೆ ಹಾಗೂ ಜುಲೈ 17ರಂದು ಎನ್.ಎ.ಸಿ. ಶಹಬಾದ.
ಜುಲೈ 10ರಂದು ಎರಡನೇ ಸುತ್ತಿನ ಕೌನ್ಸಿಲಿಂಗ್
*****************************************
ಕಲಬುರಗಿ,ಜು.05.(ಕ.ವಾ.)-ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ/ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ ಹಾಗೂ ಡಾ|| ಬಿ.ಆರ್.ಅಂಬೇಡ್ಕರ ವಸತಿ ಶಾಲೆಗಳಲ್ಲಿ 2018-19ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಎರಡನೇ ಸುತ್ತಿನ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಇದೇ ಜುಲೈ 10 ಕಲಬುರಗಿ (ದರಿಯಾಪುರ ಬಡಾವಣೆ) ಮೊರಾರ್ಜಿ ದೇಸಾಯಿ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಕೌನ್ಸಿಲಿಂಗ್‍ಗೆ ಹಾಜರಾಗುವ ಕುರಿತು ಅರ್ಹ ಅಭ್ಯರ್ಥಿಗಳಿಗೆ ತಿಳುವಳಿಕೆ ಪತ್ರ ಕಳುಹಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅಫಜಲಪುರ: ಜುಲೈ 10ರಂದು ಮ್ಯಾನುವಲ್ ಸ್ಕ್ಯಾವೆಂಜರ್‍ಗಳ ನೋಂದಣಿ
ಕಲಬುರಗಿ,ಜು.05.(ಕ.ವಾ.)-ಅಫಜಲಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವ 20 ವಾರ್ಡಗಳಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್‍ಗಳ ಕಾರ್ಯನಿರ್ವಹಿಸುತ್ತಿರುವ ಕುಟುಂಬಗಳು ಜುಲೈ 10ರಂದು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಪುರಸಭೆ ಕಾರ್ಯಾಲಯದಲ್ಲಿ ಕೆಳಕಂಡ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕೆಂದು ಅಫಜಲಪುರ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ನೋಂದಣಿಗಾಗಿ ಪಾಸ್‍ಪೋರ್ಟ ಸೈಜ್ ಒಂದು ಭಾವಚಿತ್ರ, ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾರ್ಡ ಜಿರಾಕ್ಸ್ ಪ್ರತಿ ಹಾಗೂ ಮ್ಯಾನುವಲ್ ಸ್ಕ್ಯಾವೆಂಜರ ಎಂದು ಗುರುತಿಸಲು ಯಾವುದಾದರೂ ಪ್ರಮಾಣಪತ್ರ ಇದ್ದಲ್ಲಿ ತರಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೌಲ್ಯಮಾಪನ ಕೇಂದ್ರ ಬದಲಾವಣೆ
********************************
ಕಲಬುರಗಿ,ಜು.05.(ಕ.ವಾ.)-2018ರ ಜೂನ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಇದೇ ಜುಲೈ 8ರಿಂದ ಕಲಬುರಗಿ ನಗರದ 6 ಮೌಲ್ಯಮಾಪನ ಕೇಂದ್ರಗಳಲ್ಲಿ ಒಂದು ವಾರಗಳ ಕಾಲ ನಡೆಯಲಿದೆ.
ಈ ಮೊದಲು ನಿಗದಿಪಡಿಸಿದ ಸಮಾಜ ವಿಜ್ಞಾನ ವಿಷಯದ ಕಲಬುರಗಿ ದರಿಯಾಪುರ ಕೋಟನೂರ ಬಡಾವಣೆಯ ಕಾಯಕ ಫೌಂಡೇಶನ್ ಪ್ರೌಢಶಾಲೆಯಲ್ಲಿನ ಮೌಲ್ಯಮಾಪನ ಕೇಂದ್ರದ ಬದಲಾಗಿ ಕಲಬುರಗಿಯ ಹುಮನಾಬಾದ ರಿಂಗ್ ರಸ್ತೆಯ ರಾಮನಗರ ಟಿವಿ ಸ್ಟೇಶನ್ ಹಿಂದುಗಡೆಯಿರುವ ಶ್ರೀ ಗುರು ಸಂಗಮೇಶ್ವರ ಕಾನ್ವೆಂಟ್ (ಎಸ್‍ಜಿಎಸ್ ಕಾನ್ವೆಂಟ್) ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
****************************************************
ಕಲಬುರಗಿ,ಜು.05.(ಕ.ವಾ.)-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉಪ್ಪಾರ ಮತ್ತು ಅಂಬಿಗ ಅದರ ಉಪಜಾತಿಯವರು ಸೇರಿದಂತೆ ಎಲ್ಲ ಹಿಂದುಳಿದ ವರ್ಗಗಳ ಜನರು (ವಿಶ್ವಕರ್ಮ ಅದರ ಉಪ ಜಾತಿಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಆರ್ಥಿಕ ಅಭಿವೃದ್ಧಿಗಾಗಿ 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಕೆಳಕಂಡ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಚೈತನ್ಯ ಸಹಾಯಧನ ಯೋಜನೆ, ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಕಿರುಸಾಲ ಯೋಜನೆಯಲ್ಲಿ ಸೌಲಭ್ಯ, ಸಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಯ ವೈಯಕ್ತಿಕ ಕೊಳವೆಬಾವಿ ಯೋಜನೆ ಹಾಗೂ ಸಾಮೂಹಿಕ ನೀರಾವರಿ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಮತ್ತು ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಚೇರಿ ಹಾಗೂ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿ ವೆಬ್‍ಸೈಟಿನಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, 3ನೇ ಮಹಡಿ, ಕೋಣೆ ಸಂಖ್ಯೆ-22 ವಿಕಾಸ ಭವನ, ಮಿನಿ ವಿಧಾನಸೌಧ ಕಲಬುರಗಿ-585102 ಕಚೇರಿಯಲ್ಲಿ ಆಗಸ್ಟ್ 18ರೊಳಗೆ ಸಲ್ಲಿಸಬೇಕು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಅದರ ಉಪ ಜಾತಿ ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ). ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 40,000 ರೂ.ಗಳು ಹಾಗೂ ಪಟ್ಟಣ ಪ್ರದೇಶದವರಿಗೆ 55,000 ರೂ.ಗಳ ಒಳಗಿರಬೇಕು. ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು. ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿ/ ಪ್ಯಾನ್ ಕಾರ್ಡ ದಾಖಲಾತಿಗಳನ್ನು ಕಡ್ಡಾಯವಾಗಿ ಅರ್ಜಿದಾರರು ಸಲ್ಲಿಸಬೇಕು. ಅರ್ಜಿದಾರರು ಐ.ಎಫ್.ಎಸ್.ಸಿ. ಕೋರ್ಡ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕಗಳಲ್ಲಿ ಖಾತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಹಾಗೂ ವೆಬ್‍ಸೈಟ್‍ನ್ನು ಹಾಗೂ ದೂರವಾಣಿ ಸಂಖ್ಯೆ 08472-278635ನ್ನು ಸಂಪರ್ಕಿಸಲು ಕೋರಿದೆ.
ಜುಲೈ 8ರಿಂದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಮೌಲ್ಯಮಾಪನ
**************************************************************
ಕಲಬುರಗಿ,ಜು.05.(ಕ.ವಾ.)-2018ರ ಜೂನ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಇದೇ ಜುಲೈ 8ರಿಂದ ಕಲಬುರಗಿ ನಗರದ 6 ಮೌಲ್ಯಮಾಪನ ಕೇಂದ್ರಗಳಲ್ಲಿ ಒಂದು ವಾರಗಳ ಕಾಲ ನಡೆಯಲಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಥಮ ಬಾರಿಯಾಗಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಮೌಲ್ಯಮಾಪನ ಕೇಂದ್ರಗಳಿಂದಲೇ ಆನ್‍ಲೈನ್ ಎಂಟ್ರಿ ಮೂಲಕ ನೇರವಾಗಿ ಪರೀಕ್ಷಾ ಮಂಡಳಿಗೆ ರವಾನೆಯಾಗಲಿದೆ. ಮೌಲ್ಯಮಾಪಕರು ಕಡ್ಡಾಯವಾಗಿ ಲಾಗಿನ್ ಮಾಡಬೇಕಾಗಿದ್ದು, ಮೌಲ್ಯಮಾಪನಕ್ಕಾಗಿ ಕಡ್ಡಾಯವಾಗಿ ಎಲ್ಲ ಮೌಲ್ಯಮಾಪಕರು ತಮ್ಮ ಈ-ಮೇಲ್ ಐಡಿ, ಪಾಸ್‍ವರ್ಡ, ಬ್ಯಾಂಕ್ ಪಾಸ್‍ಬುಕ್‍ನ್ನು ತರಬೇಕೆಂದು ಅವರು ತಿಳಿಸಿದ್ದಾರೆ.
ಮೌಲ್ಯಮಾಪನ ಕೇಂದ್ರಗಳ ವಿವರ ಇಂತಿದೆ. ನೂತನ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬ್ರಹ್ಮಪುರ ಕಲಬುರಗಿ. ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ದರ್ಗಾ ರಸ್ತೆ ಕಲಬುರಗಿ, ಶಕೈನ್ಹ ಬ್ಯಾಪಿಸ್ಟ್ ಆಂಗ್ಲ ಮಾಧ್ಯಮ ಶಾಲೆ ನವಜೀವನ ನಗರ, ಪಿ ಆಂಡ್ ಟಿ ಕಾಲೋನಿ ಹಳೆ ಜೇವರ್ಗಿ ರಸ್ತೆ ಕಲಬುರಗಿ, ಸೇಂಟ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆನಂದ ಹೊಟೇಲ್ ಹತ್ತಿರ ಕಲಬುರಗಿ, ಎಸ್.ಆರ್.ಎನ್. ಮೆಹ್ತಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಜಿಲ್ಲಾ ಕೋರ್ಟ ಹತ್ತಿರ ಕಲಬುರಗಿ ಹಾಗೂ ಶ್ರೀ ಗುರು ಸಂಗಮೇಶ್ವರ ಕಾನ್ವೆಂಟ್ (ಎಸ್‍ಜಿಎಸ್ ಕಾನ್ವೆಂಟ್) ಟಿ.ವಿ. ಸೆಂಟರ್ ಹಿಂದುಗಡೆ ರಾಮನಗರ, ಹುಮನಾಬಾದ ರಿಂಗ್ ರಸ್ತೆ ಕಲಬುರಗಿ.
ಬಾಲಕಿಯ ಪಾಲಕರ ಪತ್ತೆಗೆ ಮನವಿ
*******************************
ಕಲಬುರಗಿ,ಜು.05.(ಕ.ವಾ.)-ರೈಲ್ವೆ ನಿಲ್ದಾಣದಲ್ಲಿ 2018ರ ಜೂನ್ 12ರಂದು ಚೈಲ್ಡ್‍ಲೈನ್ ಮೂಲಕ ಪತ್ತೆಯಾದ ಸುಮಾರು 16ವರ್ಷದ ಬುದ್ಧಿಮಾಂದ್ಯ ಬಾಲಕಿಯನ್ನು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಸರ್ಕಾರಿ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರದಲ್ಲಿ ದಾಖಲಿಸಲಾಗಿದೆ ಎಂದು ಸರ್ಕಾರಿ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾಲಕಿಯ ಹೆಸರು ಬುಲ್ ಬುಲಿ ಇದ್ದು,. ಕಪು ಬಣ್ಣ ಹೊಂದಿರುವ ಈ ಬಾಲಕಿ ಸಾಧಾರಣ ಬುದ್ಧಿಮಾಂದ್ಯಳಾಗಿದ್ದಾಳೆ ಮತ್ತು ಓಡಿಸ್ಸಾ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಳುತ್ತಾಳೆ. ಈ ಬಾಲಕಿಯ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ರೇಷನ್ ಕಾರ್ಡ್, ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಮುಂತಾದ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಸರ್ಕಾರಿ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರ ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರದ ಅಧೀಕ್ಷಕರ ಕಚೇರಿ ದೂರವಾಣಿ ಸಂ.08472-230053ನ್ನು ಸಂಪರ್ಕಿಸಲು ಕೋರಿದೆÉ.
ಸಹಾಯಾನುದಾನ ಹಿಂತೆಗೆತ: ಶಾಲೆಗೆ ಪ್ರವೇಶ ಪಡೆಯದಿರಲು ಸೂಚನೆ
***************************************************************
ಕಲಬುರಗಿ,ಜು.05.(ಕ.ವಾ.)-ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಶಾಲಾ ಮಾನ್ಯತೆಯ ಅಗತ್ಯ ದಾಖಲೆಗಳು ಇಲ್ಲದ ಹಾಗೂ ಎನ್.ಸಿ.ಟಿ.ಇ. ಮಾರ್ಗಸೂಚಿ ಪಾಲಿಸದಿರುವ ಕಾರಣ ಕಲಬುರಗಿ ಉತ್ತರ ವಲಯ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಾಲ್ಕು ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ ಸಹಾಯಾನುದಾನವನ್ನು ಸರ್ಕಾರ ಹಿಂಪಡೆದಿದೆ ಎಂದು ಕಲಬುರಗಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಹಾಜಿ ಮಹ್ಮದ್ ಹುಸೇನ್ ಖಾದ್ರಿ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟಿನ ದಾರೈನ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಯಾದುಲ್ಲಾ ಕಾಲೋನಿ ಕಲಬುರಗಿ, ದಾರೈನ್ ಉರ್ದು ಹಿರಿಯ ಪ್ರಾಥಮಿಕ ಶಾಲೆ ಅಜಾದಪುರ ರಸ್ತೆ ಕಲಬುರಗಿ ಮತ್ತು ದಾರೈನ್ ಉರ್ದು ಹಿರಿಯ ಪ್ರಾಥಮಿಕ ಶಾಲೆ ಜಂಜಂ ಕಾಲೋನಿ ಕಲಬುರಗಿ ಶಾಲೆಗೆ ನೀಡಲಾಗುತ್ತಿದ್ದ ಸಹಾಯಾನುದಾನವನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್-53(1) ಮತ್ತು 53(2)ರನ್ವಯ ಹಿಂಪಡೆದು ಸರ್ಕಾರ ಆದೇಶ ಹೊರಡಿಸಿದೆ.
ಅದೇ ರೀತಿ ಶಾಲಾ ಮಾನ್ಯತೆಯ ಅಗತ್ಯ ದಾಖಲೆಗಳು ಸಮರ್ಪಕವಾಗಿಲ್ಲದ ಹಾಗೂ ಎನ್.ಸಿ.ಟಿ.ಇ. ಮಾರ್ಗಸೂಚಿ ಪಾಲಿಸದಿರುವ ಕಾರಣ ಕಲಬುರಗಿಯ ಶ್ರೀ ಗುರುದೇವ ಶಿಕ್ಷಣ ಸಂಸ್ಥೆ(ರಿ)ಯಿಂದ ನಡೆಯುತ್ತಿರುವ ಬಸಮ್ಮಾ ಸ್ಮಾರಕ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಳಂದ ರಿಂಗ್ ರಸ್ತೆ ಕಲಬುರಗಿ ಶಾಲೆಗೆ ನೀಡಲಾಗುತ್ತಿದ್ದ ಸಹಾಯಾನುದಾನವನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್-53(1)ರನ್ವಯ ಹಿಂಪಡೆದು ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳ ಸಹಾಯನುದಾನವನ್ನು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಆದೇಶಿಸಿರುವ ಹಿನ್ನೆಲೆಯಲ್ಲಿ ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಅಕ್ಕಪಕ್ಕದ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಅಲ್ಲದೇ 2018-19ನೇ ಸಾಲಿಗೆ ಸದರಿ ಸಾಲೆಯಲ್ಲಿ ಹೊಸದಾಗಿ ಪ್ರವೆಶ ಪಡೆಯಬಾರದೆಂದು ವಿದ್ಯಾರ್ಥಿಗಳ ಪಾಲಕ/ಪೋಷಕರಲ್ಲಿ ವಿನಂತಿಸಲಾಗಿದೆ. ಒಂದು ವೇಳೆ ಈ ಶಾಲೆಯಲ್ಲಿ ಪ್ರವೇಶ ಪಡೆದಲ್ಲಿ ಇಲಾಖೆಯು ಇದಕ್ಕೆ ಜವಾಬ್ದಾರರಾಗುವುದಿಲ್ಲ, ಇದಕ್ಕೆ ವಿದ್ಯಾರ್ಥಿಗಳ ಪಾಲಕ/ಪೋಷಕರು ನೇರವಾಗಿ ಜವಾಬ್ದಾರಾಗುತ್ತಾರೆ ಎಂದು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಂಗ ಆಡಳಿತ ತರಬೇತಿಗಾಗಿ ಅರ್ಜಿ ಆಹ್ವಾನ
*********************************************
ಕಲಬುರಗಿ,ಜು.05.(ಕ.ವಾ.)-ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನ್ಯಾಯಾಂಗ ಆಡಳಿತದಲ್ಲಿ ತರಬೇತಿಗಾಗಿ ಖಾಲಿಯಿರುವ 18 ಸ್ಥಾನಗಳಿಗೆ 2018-19 ನೇ ಸಾಲಿನಲ್ಲಿ ಭರ್ತಿ ಮಾಡಲು ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ), 3(ಬಿ) ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ 2.50 ಲಕ್ಷ ರೂ. ಮತ್ತು ಪ್ರವರ್ಗ-1ರ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ 3.50 ಲಕ್ಷ ರೂ ವಾರ್ಷಿಕ ಆದಾಯ ನಿಗದಿಪಡಿಸಲಾಗಿದೆ. ತರಬೇತಿ ಅವಧಿಯು ನಾಲ್ಕು ವರ್ಷಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ ಮಹೆಯಾನ 4000 ರೂ. ತರಬೇತಿ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದಂದು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಯಸ್ಸು 38 ವರ್ಷಗಳಿಗೆ ಮೀರಿರಬಾರದು. ಪ್ರವರ್ಗ-1 ರಡಿ ಬರುವ ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ 3 ವರ್ಷದೊಳಗೆ ಅಭ್ಯರ್ಥಿಗಳು ವಕೀಲ ವೃತ್ತಿ ಕೈಗೊಳ್ಳಲು ನಿಗದಿಪಡಿಸಿದ ಕಾನೂನು ಪದವಿ ಪಡೆದಿರಬೇಕು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278623ನ್ನು ಸಂಪರ್ಕಿಸಲು ಕೊರಿದೆ.






ಹೀಗಾಗಿ ಲೇಖನಗಳು news and photo 05-07-2018

ಎಲ್ಲಾ ಲೇಖನಗಳು ಆಗಿದೆ news and photo 05-07-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo 05-07-2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-05-07-2018.html

Subscribe to receive free email updates:

0 Response to "news and photo 05-07-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ