ಶೀರ್ಷಿಕೆ : ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್
ಲಿಂಕ್ : ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್
ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್
ಕೊಪ್ಪಳ ಜು. 30 (ಕರ್ನಾಟಕ ವಾರ್ತೆ): ರಕ್ಷಣಾ ಇಲಾಖೆಯ ಪಿಂಚಣಿದಾರರ ಅಹವಾಲುಗಳ ಆಲಿಕೆಗಾಗಿ ಪ್ರತಿ ತಿಂಗಳ ಕೊನೆಯ ದಿನಾಂಕದಂದು ಬೆಂಗಳೂರಿನಲ್ಲಿ "ಮಿನಿ ಪಿಂಚಣಿ ಅದಾಲತ್" ನಡೆಯಲಿದೆ ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೆಶಕರು ತಿಳಿಸಿದ್ದಾರೆ.
ಡಿಫೆನ್ಸ ಪೆನ್ಷನ್ ಡಿಸ್ಬರ್ಸಿಂಗ್ ಆಫೀಸ್, ಬೆಂಗಳುರು ಇವರು ರಕ್ಷಣಾ ಇಲಾಖೆಯಿಂದ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರ ಹಾಗೂ ಕುಂಟುಂಬ ಪಿಂಚಣಿದಾರರ ಪಿಂಚಣಿಯ ಬಗ್ಗೆ ಅಹವಾಲುಗಳನ್ನು ಆಲಿಸಿ ನಿವಾರಿಸುವ ಸಲುವಾಗಿ ಪ್ರತಿ ತಿಂಗಳ ಕೊನೆಯ ದಿನಾಂಕದಂದು "ಮಿನಿ ಪಿಂಚಣಿ ಅದಾಲತ್" ಅನ್ನು ಡಿಫೆನ್ಸ ಪೆನ್ಷನ್ ಡಿಸ್ಬರ್ಸಿಂಗ್ ಆಫೀಸ್ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾಗುತ್ತದೆ. ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರು ಹಾಗೂ ಅವರ ಅವಲಂಭಿತರು ತಮ್ಮ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ ಪಿಂಚಣಿ ದಾಖಲೆಗಳನ್ನು ಡಿಪಿಡಿಓ ಬೆಂಗಳೂರು ಇವರಿಗೆ ಸಲ್ಲಿಸಿ ಪರಿಹಾರವನ್ನು ಪಡೆಯಬಹುದಾಗಿದೆ.
ಪ್ರಾರಂಭಿಕ "ಮಿನಿ ಪಿಂಚಣಿ ಅದಾಲತ್" ಜು. 31 ರಂದು ಡಿಪಿಡಿಓ ಬೆಂಗಳೂರು ರವರ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25544383 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್
ಎಲ್ಲಾ ಲೇಖನಗಳು ಆಗಿದೆ ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್ ಲಿಂಕ್ ವಿಳಾಸ https://dekalungi.blogspot.com/2018/07/blog-post_96.html
0 Response to "ರಕ್ಷಣಾ ಇಲಾಖೆ ಪಿಂಚಣಿದಾರರಿಗೆ ಮಿನಿ ಪಿಂಚಣಿ ಅದಾಲತ್"
ಕಾಮೆಂಟ್ ಪೋಸ್ಟ್ ಮಾಡಿ