ಪಕ್ಷಿ ಪ್ರಪಂಚ: ಕಾಡು ಮೈನಾ.

ಪಕ್ಷಿ ಪ್ರಪಂಚ: ಕಾಡು ಮೈನಾ. - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಪಕ್ಷಿ ಪ್ರಪಂಚ: ಕಾಡು ಮೈನಾ., ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಪಕ್ಷಿ ಪ್ರಪಂಚ: ಕಾಡು ಮೈನಾ.
ಲಿಂಕ್ : ಪಕ್ಷಿ ಪ್ರಪಂಚ: ಕಾಡು ಮೈನಾ.

ಓದಿ


ಪಕ್ಷಿ ಪ್ರಪಂಚ: ಕಾಡು ಮೈನಾ.

ಚಿತ್ರ 1: ಕಾಡು ಮೈನಾ 

ಡಾ. ಅಶೋಕ್. ಕೆ. ಆರ್ 
ನಾಡಿಗೆ ಹೊಂದಿಕೊಳ್ಳುತ್ತಿರುವ ಮತ್ತೊಂದು ಕಾಡು ಪಕ್ಷಿಯಿದು. ಕಾಡು ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿ 'ಮೈನಾ' ಪಕ್ಷಿಯನ್ನೇ ಹೋಲುತ್ತದೆ, ಕೆಲವೊಂದು ವ್ಯತ್ಯಾಸಗಳಿವೆ ಅಷ್ಟೇ.


ಆಂಗ್ಲ ಹೆಸರು: - Jungle myna
ವೈಜ್ಞಾನಿಕ ಹೆಸರು: - Acridotheres fuscus


ಇನ್ನೂ ಹೆಚ್ಚಿನ ಪಕ್ಷಿಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಬೂದು - ಕಂದು ಮಿಶ್ರಿತ ಬಣ್ಣದ ದೇಹದ ಪಕ್ಷಿಯಿದು. ಎದೆಯಿಂದ ತಲೆಯ ಕಡೆಗೆ ಸಾಗಿದಂತೆ ಬಣ್ಣಗಳು ಗಾಢವಾಗುತ್ತಾ ಸಾಗಿ ತಲೆ ಪೂರ ಕಪ್ಪು ಬಣ್ಣವಾಗಿ ಕಾಣಿಸುತ್ತದೆ. ನೀಟಾಗಿ ಕ್ರಾಪು ತೆಗೆದಂತೆ ಪುಟ್ಟ ಕಪ್ಪು ಕಿರೀಟವಿದೆ. ಕೊಕ್ಕಿನ ಮುಂದರ್ಧ ಹಳದಿ ಬಣ್ಣವಿದ್ದರೆ ಹಿಂದಿನ ಭಾಗ ಕಪ್ಪು ಬಣ್ಣವನ್ನೊಂದಿದೆ. ತೆಳು ನೀಲಿ ಬಣ್ಣದ ಕಣ್ಣು ಆಕರ್ಷಣೀಯ. ಹಳದಿ ಬಣ್ಣದ ಕಾಲುಗಳನ್ನೊಂದಿದೆ. ರೆಕ್ಕೆಗಳಲ್ಲಿ ಕಂದು - ಬೂದು ಬಣ್ಣದ ಜೊತೆಗೆ ಬಿಳಿ ಪಟ್ಟಿಗಳೂ ಇವೆ. ಆದರಿವು ಕಾಣಿಸುವುದು ಕಾಡು ಮೈನಾ ಹಾರಾಟದಲ್ಲಿದ್ದಾಗ ಮಾತ್ರ. ಬಾಲದ ತುದಿಯೂ ಬೆಳ್ಳಗಿದೆ.

ಹೆಣ್ಣುಗಂಡಿನ ನಡುವೆ ವ್ಯತ್ಯಾಸಗಳಿಲ್ಲ.

(ಸಾಮಾನ್ಯ ಮೈನಾದ ವಿಶೇಷತೆಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ
ಸಾಮಾನ್ಯವಾಗಿ ಭತ್ತದ ಗದ್ದೆಗಳ ಸಮೀಪ, ತೋಟ, ನೀರಿನ ಸೆಲೆಗಳ ಹತ್ತಿರ ಗೂಡು ಕಟ್ಟಿಕೊಳ್ಳುತ್ತವೆ. ಕಟ್ಟಿಕೊಳ್ಳುತ್ತವೆ ಎನ್ನುವುದಕ್ಕಿಂತ ಲಭ್ಯವಿರುವ ಸುರಕ್ಷಿತವೆನ್ನಿಸುವ ಪೊಟರೆಗಳನ್ನು ತಮ್ಮ ವಾಸಸ್ಥಾನವನ್ನಾಗಿಸಿಕೊಳ್ಳುತ್ತವೆ. ಹಳೆಯ ತೆಂಗಿನ ಮರದ ಪೊಟರೆ ಇವುಗಳಿಗೆ ಅಚ್ಚುಮೆಚ್ಚು.
ಚಿತ್ರ 2: ಮಿಡತೆಗಳನ್ನು ಕಚ್ಚಿನಿಂತಿರುವ ಕಾಡು ಮೈನಾ 
ಮಿಶ್ರಾಹಾರಿ ಪಕ್ಷಿಗಳಾದ ಕಾಡು ಮೈನಾಗಳು ಕಾಳು - ಧಾನ್ಯ, ಚಿಕ್ಕ ಪುಟ್ಟ ಹುಳಗಳನ್ನು ತಿನ್ನುತ್ತವೆ. ಒಂದೇ ಬಾರಿಗೆ ಹತ್ತಾರು ಮಿಡತೆಗಳನ್ನು ಬಾಯಲ್ಲಿ ಕಚ್ಚಿಕೊಂಡಿದ್ದಾವೆಂದರೆ ಪೊಟರೆಯಲ್ಲಿ ಆಹಾರಕ್ಕೆ ಕಾಯುತ್ತಿರುವ ಮರಿಗಳಿದ್ದಾವೆ ಎಂದೇ ಅರ್ಥ.

ಗುಂಪಿನಲ್ಲಿ ಅಥವಾ ಜೋಡಿಯಾಗೇ ಕಾಣಿಸಿಕೊಳ್ಳುವ ಈ ಪಕ್ಷಿಗಳು ನಿಧಾನಕ್ಕೆ ನಗರ ಪ್ರದೇಶಕ್ಕೂ ಹೊಂದಿಕೊಳ್ಳಲಾರಂಭಿಸಿವೆ. ಹಾಗಿದ್ದರೂ ಕೂಡ, ಇವುಗಳ ಸಂಖೈ ಕಡಿಮೆಯಾಗುತ್ತಿದೆ ಎನ್ನುವ ವರದಿಗಳೂ ಇವೆ. ಇವುಗಳ ಹೊಂದಾಣಿಕೆಯ ಮಟ್ಟ ಎಷ್ಟಿದೆಯೆಂದು ಇನ್ನೊಂದಷ್ಟು ವರುಷಗಳ ನಂತರ ಅರಿವಾಗಬಹುದು.


ಚಿತ್ರ ನೆನಪು - 

ಚಿತ್ರ 1: ಕುಣಿಗಲ್ ಬೈಪಾಸಿನ ಸರ್ವೀಸು ರಸ್ತೆಯಲ್ಲಿ ತೆಗೆದ ಪಟವಿದು. ದೂರದಿಂದ ಕಂಡಾಗ ತೀರ ಸಾಧಾರಣ ಪಕ್ಷಿಯಂತೆಯೇ ಕಾಣುವ ಕಾಡು ಮೈನಾಗಳನ್ನು ಹತ್ತಿರದಿಂದ ಸೂರ್ಯನ ಹೊಂಬೆಳಕಿನಲ್ಲಿ ನೋಡಿದಾಗ ಆಕರ್ಷಣೀಯವಾಗಿ ಕಾಣಿಸುತ್ತವೆ. ಅದರಲ್ಲೂ ಆ ಕಪ್ಪು ಕಿರೀಟವಂತೂ ಎಣ್ಣೆ ಹಾಕಿ ತೀಡಿ ನಿಲ್ಲಿಸಿದ ಕೂದಲಿನಂತೆಯೇ ಕಾಣಿಸುತ್ತದೆ ಅಲ್ಲವೇ?

ಚಿತ್ರ 2: ಮಂಡ್ಯದ ಸೂಳೆಕೆರೆಯಲ್ಲಿ ತೆಗೆದ ಪಟವಿದು. ನೀರು ಕಡಿಮೆಯಿದ್ದ ಸಮಯ. ನೀರ ಮಧ್ಯದಲ್ಲಿನ ಮಣ್ಣಿನ ಗುಡ್ಡೆಯ ಮೇಲೆ ಬೆಳೆದುಕೊಂಡಿದ್ದ ಕೆಲವು ಹುಲ್ಲು ಗಿಡಗಳ ಬಳಿಗೆ ಬಂದ ಕಾಡು ಮೈನಾ ಒಂದು ಮಿಡತೆಯನ್ನು ಬಾಯಲ್ಲಿ ಕಚ್ಚಿಕೊಂಡಿತು. ಹಾರೋಗುತ್ತೆ ಎಂದುಕೊಂಡೆ. ಉಹ್ಞೂ, ಮತ್ತಷ್ಟು ಮಿಡತೆಗಳನ್ನು ಕಚ್ಚಿ ಹಿಡಿಯಿತು. ಪುಟ್ಟ ಕೊಕ್ಕಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹುಳಗಳನ್ನು ಕಚ್ಚಿ ಹಿಡಿದು ಮರಿಯ ಪೋಷಣೆಗೆ ಹಾರಿ ಹೋಯಿತು.


ಹೀಗಾಗಿ ಲೇಖನಗಳು ಪಕ್ಷಿ ಪ್ರಪಂಚ: ಕಾಡು ಮೈನಾ.

ಎಲ್ಲಾ ಲೇಖನಗಳು ಆಗಿದೆ ಪಕ್ಷಿ ಪ್ರಪಂಚ: ಕಾಡು ಮೈನಾ. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಕ್ಷಿ ಪ್ರಪಂಚ: ಕಾಡು ಮೈನಾ. ಲಿಂಕ್ ವಿಳಾಸ https://dekalungi.blogspot.com/2018/07/blog-post_82.html

Subscribe to receive free email updates:

0 Response to "ಪಕ್ಷಿ ಪ್ರಪಂಚ: ಕಾಡು ಮೈನಾ."

ಕಾಮೆಂಟ್‌‌ ಪೋಸ್ಟ್‌ ಮಾಡಿ