ಶೀರ್ಷಿಕೆ : ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ
ಲಿಂಕ್ : ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ
ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ

ಕೊಪ್ಪಳ ಜು. 02 (ಕರ್ನಾಟಕ ವಾರ್ತೆ): ಕಾನೂನಿನ ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತವಾಗಬಹುದು ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಟಿ. ಶ್ರೀನಿವಾಸ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಜಿಲ್ಲಾ ವಕೀಲರ ಸಂಘ, ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ "ಪೊಲೀಸ್ ದೂರು ಪ್ರಾಧಿಕಾರ, ಬಾಧಿತರ ಪರಿಹಾರ ಯೋಜನೆ" ಕುರಿತು ಕಾಳಿದಾಸ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ. ಹಾಗೇಯೆ ಕಾನೂನು ಪಾಲನೆಯು ಸಹ ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಚಲಿತ ಇರುವ ಕಾನೂನುಗಳನ್ನು ಅಳವಡಿಸಿಕೊಂಡು ಕಾನೂನಿನ ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತವಾಗಿ ಶಾಂತಿಯುತ ಜೀವನ ನಡೆಸಬಹುದು ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಟಿ. ಶ್ರೀನಿವಾಸ ಅವರು ಹೇಳಿದರು.
ಕೊಪ್ಪಳ ಉಪವಿಭಾಗದ ಡಿ.ವೈ.ಎಸ್.ಪಿ. ಎಸ್.ಎಮ್. ಸಂದಿಗವಾಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಳಿದಾಸ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್. ಗುರುವಿನ್, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮಹಾಂತೇಶ ಮಲ್ಲನಗೌಡರ, ಕಾಳಿದಾಸ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಾಗನಗೌಡ ಆರ್. ಸೇರಿದಂತೆ ಶಾಲಾ ಕಾಲೇಜಿನ ಸರ್ವ ಶಿಕ್ಷಕರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ವಕೀಲರಾದ ರವಿಕುಮಾರ ಬೆಟಗೇರಿ ಅವರು "ಪೊಲೀಸ್ ದೂರು ಪ್ರಾಧಿಕಾರ, ಬಾಧಿತರ ಪರಿಹಾರ ಯೋಜನೆ" ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹೀಗಾಗಿ ಲೇಖನಗಳು ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ
ಎಲ್ಲಾ ಲೇಖನಗಳು ಆಗಿದೆ ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ ಲಿಂಕ್ ವಿಳಾಸ https://dekalungi.blogspot.com/2018/07/blog-post_81.html
0 Response to "ಕಾನೂನು ಅನುಗುಣವಾಗಿ ಜೀವನ ನಡೆಸಿದರೆ ಅಪರಾಧಗಳಿಂದ ಮುಕ್ತ : ಟಿ. ಶ್ರೀನಿವಾಸ"
ಕಾಮೆಂಟ್ ಪೋಸ್ಟ್ ಮಾಡಿ