ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ

ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ
ಲಿಂಕ್ : ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ

ಓದಿ


ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ


ಕೊಪ್ಪಳ ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಭೋದಕ ಆಸ್ಪತ್ರೆಯಲ್ಲಿ "ಆರೋಗ್ಯ ಕರ್ನಾಟಕ ಭಾಗ್ಯ" ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇದರಡಿ ಯಶಸ್ವಿನಿ, ರಾಷ್ಟ್ರಿಯ ಬಾಲ್ಯಸ್ವಾಸ್ಥ್ಯ, ಮುಖ್ಯಮಂತ್ರಿ ಸಾಂತ್ವನ  ಹಾಗೂ ಇತರೆ ಆರೋಗ್ಯ ಯೋಜನೆಗಳ ಪ್ರಯೋಜನೆ ಪಡೆಯಬಹುದಾಗಿದೆ ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
    ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಗೂ ಆಡಳಿತ ವರ್ಗದವರಿಗೆ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ ಸಭೆಯಲ್ಲಿ ಅವರು ಮಾತನಾಡಿದರು. 
ಸರ್ಕಾರವು ರಾಜ್ಯದ ಬಡ ಜನ ಹಾಗೂ ಮದ್ಯಮ ವರ್ಗದವರಿಗೆ ಹಣವಿಲ್ಲದೇ ಉಚಿತವಾಗಿ ಚಿಕಿತ್ಸೆ ಕಲ್ಪಿಸಲು ವಿವಿದ ಆರೋಗ್ಯ ಭಾಗ್ಯಗಳನ್ನು ಕಲ್ಪಿಸಿದ್ದು, ಯಶಸ್ವಿನಿ, ರಾಷ್ಟ್ರಿಯ ಬಾಲ್ಯಸ್ವಾಸ್ಥ್ಯ, ಮುಖ್ಯಮಂತ್ರಿ ಸಾಂತ್ವನ ಹಾಗೂ ಇತರೆ ಎಲ್ಲಾ ಆರೋಗ್ಯ ಯೋಜನೆಗಳನ್ನು ಇನ್ನು ಮುಂದೆ ‘ಕರ್ನಾಟಕ ಆರೋಗ್ಯ ಭಾಗ್ಯ’ ಯೋಜನೆಯಡಿಯಲ್ಲೇ ಪಡೆಯಬಹುದು.  ಬಹುತೇಕ ಹೆಚ್ಚಿನ ಚಿಕಿತ್ಸೆಗಳನ್ನು ಭೋದಕ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆಯಬಹುದು.  ಅತಿ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ಹೋಗಲು ಜಿಲ್ಲಾ ಆಸ್ಪತ್ರೆಯಿಂದ ಪತ್ರ ಪಡೆಯುವುದು ಕಡ್ಡಾಯ.  ಈ ಕುರಿತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಎಲ್ಲಾ ವೈದ್ಯರುಗಳಿಗೆ ಹಾಗೂ ಶುಶ್ರೊಷಕ ಸಿಬ್ಬಂದಿಗಳಿಗೆ ಮಾಹಿತಿ ನೀಡುವ ಸಲುವಾಗಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.  ಇದುವರೆಗೆ ಶಸ್ತ್ರ ಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆ, ಅತಿ ದಕ್ಷ ವಿಭಾದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.  ಇನ್ನು ಮುಂದೆ ಬಡತನ ರೇಖೆಯ ಮೇಲಿರುವ ಸಾರ್ವಜನಿಕರಿಗೆ ಹಾಗೂ ಆರೋಗ್ಯ ಕರ್ನಾಟಕದಲ್ಲಿ ನೊಂದಾಯಿಸದೇ ಇರುವವರ ಚಿಕಿತ್ಸೆಗಾಗಿ ನಿಗದಿಪಡಿಸಿದ ಹಣ ನೀಡಬೇಕಾಗುತ್ತದೆ.  ಬಡತನ ರೇಖೆಗಿಂತ ಮೇಲಿರುವ ಜನರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು ಕೆಲವು ವರ್ಗದ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲು ಎಚ್.ಐ.ವಿ. ಕ್ಷಯರೋಗ, ವೈದ್ಯಕೀಯ ನ್ಯಾಯ ಶಾಸ್ತ್ರ ಇವುಗಳಿಗೆ ಸಂಬಂದಿಸಿದಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನ ಇತ್ಯಾದಿಗಳಿಗೆ ಉಚಿತ ಚಿಕಿತ್ಸೆ  ಆಧರಿಸಬಹುದಾದ ದರಗಳನ್ನು ಪರಿಶೀಲಿಸಿ ಸಮಿತಿಯು ಸಹಮತ ವ್ಯಕ್ತಪಡಿಸಬೇಕು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.  
ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಆಡಳಿತ ಸಮಿತಿ ಸದಸ್ಯರಾದ ಇಂದ್ರಮ್ಮ, ಪಾಶಾ, ಮತ್ತು ಆರೋಗ್ಯ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸೂಚನೆಯಂತೆ ವಿವಿದ ಚಿಕಿತ್ಸೆಗಳಿಗೆ ಪಾವತಿಸಬೇಕಾದ ಹಣದ ಕುರಿತು ಚರ್ಚಿಸಲಾಯಿತು.  ಕೆಲ ವರ್ಗದ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲು ಎಚ್.ಐ.ವಿ. ಕ್ಷಯರೋಗ, ವೈದ್ಯಕೀಯ ನ್ಯಾಯ ಶಾಸ್ತ್ರಕ್ಕೆ ಸಂಬಂದಿಸಿದ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನ ಇತ್ಯಾದಿಗಳಿಗೆ ಉಚಿತ ಚಿಕಿತ್ಸೆ  ಆಧರಿಸಬಹುದಾದ ದರಗಳನ್ನು ಪರಿಶೀಲಿಸಿ ಸಮಿತಿಯ ಸದಸ್ಯರು ಸಹಮತ ವ್ಯಕ್ತಪಡಿಸಿದರು.  
ಸಮಿತಿ ಸದಸ್ಯರು ಆಸ್ಪತ್ರೆಯ ವೀಕ್ಷಣೆ ನಡೆಸಿ ಕಟ್ಟಡದ ಕೊರತೆ ಇರುವುದನ್ನು ಗಮನಿಸಿದರು.  ಈ ಆಸ್ಪತ್ರೆಯ ಭಾಗಶಃ 3ನೇ ಮತ್ತು 4ನೇ ಮಹಡಿ ಕಟ್ಟಡಕ್ಕೆ ಸರಕಾರದಿಂದ ಅಂದಾಜು 27 ಕೊಟಿ ರೂಪಾಯಿಗಳ ವೆಚ್ಚದಲ್ಲಿ ಕಕ್ಷೆಗಳನ್ನು ನಿರ್ಮಿಸಲು ಅನುಮೋದನೆ ದೊರೆತಿದೆ ಹಾಗೂ ಅಗಸ್ಟ್, ಸೆಪ್ಟೆಂಬರ್ ನಲ್ಲಿ ಎಮ್.ಸಿ.ಐ. ತಪಾಸಣೆ ನಡೆಸಲಿದ್ದು ಕಟ್ಟಡದ ಕೊರತೆಯನ್ನು ಶೀಘ್ರವಾಗಿ ನೀಗಿಸಲು ಈ ಕಾಮಗಾರಿ ಅವಶ್ಯವಾಗಿದೆ ಎಂದು ಕೊಪ್ಪಳ ವೈದ್ಯಕೀಯ ಕಾಲೇಜಿನ ನಿರ್ದೇಶಕರು ತಿಳಿಸಿದರು.


ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ ಲಿಂಕ್ ವಿಳಾಸ https://dekalungi.blogspot.com/2018/07/blog-post_80.html

Subscribe to receive free email updates:

0 Response to "ಕೊಪ್ಪಳದಲ್ಲಿ ಆರೋಗ್ಯ ಕರ್ನಾಟಕ ಭಾಗ್ಯ ಯೋಜನೆ ಅನುಷ್ಠಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ